• Home
  • »
  • News
  • »
  • explained
  • »
  • Universities: ವಿದ್ಯಾಸಂಸ್ಥೆಗಳಿಗೆ ಸ್ಥಳೀಯ ನಾಯಕರ, ವೀರರ ಹೆಸರು: ಈ ಎಲ್ಲಾ ವಿಶ್ವವಿದ್ಯಾಲಯಗಳ ಮರುನಾಮಕರಣ

Universities: ವಿದ್ಯಾಸಂಸ್ಥೆಗಳಿಗೆ ಸ್ಥಳೀಯ ನಾಯಕರ, ವೀರರ ಹೆಸರು: ಈ ಎಲ್ಲಾ ವಿಶ್ವವಿದ್ಯಾಲಯಗಳ ಮರುನಾಮಕರಣ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕಳೆದ ಎಂಟು ವರ್ಷಗಳಲ್ಲಿ ರಸ್ತೆಗಳು, ಸ್ಟೇಡಿಯಂಗಳು ಮತ್ತು ನಗರಗಳು ಮಾತ್ರವಲ್ಲದೇ ಶಿಕ್ಷಣ ಸಂಸ್ಥೆಗೂ ಸಹ ಮರುನಾಮಕರಣ ಮಾಡಲಾಗಿದೆ. ಇತ್ತೀಚೆಗೆ ಬಿಜೆಪಿಯ ಆಡಳಿತವಿರುವ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿರದ ಮತ್ತು ಸ್ಥಳೀಯ ವೀರರ ಹೆಸರನ್ನು ವಿಶ್ವವಿದ್ಯಾಲಯಗಳಿಗೆ ಮರುನಾಮಕರಣ ಮಾಡಲಾಗಿದೆ.

ಮುಂದೆ ಓದಿ ...
  • Share this:

ಹೊಸದಿಲ್ಲಿ: ಮೋದಿ ಸರ್ಕಾರದಲ್ಲಿ (Modi Government)  ಹಲವಾರು ಜನಪ್ರಿಯ ಸ್ಥಳಗಳಿಗೆ ಹೆಸರುಗಳನ್ನು ಮರುನಾಮಕಾರಣ ಮಾಡಿರುವ ವಿಚಾರದ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇದಕ್ಕೆ ಇತ್ತೀಚಿನ ನಿದರ್ಶನವೆಂದರೆ ದಿಲ್ಲಿಯ ಐಕಾನಿಕ್ ರಾಜಪಥವನ್ನು ಕರ್ತವ್ಯ ಪಥ್ ಎಂದು ಮರುನಾಮಕರಣ (Renaming) ಮಾಡಿದ್ದು. ಈಗಾಗಲೇ ಆಗಿರುವ ಗಣನೀಯವಾದ ಹೆಸರು ಬದಲಾವಣೆಗಳ ಪಟ್ಟಿಗೆ ಇದು ಹೊಸ ಸೇರ್ಪಡೆಯಾಗಿದೆ. ಕಳೆದ ಎಂಟು ವರ್ಷಗಳಲ್ಲಿ ರಸ್ತೆಗಳು, ಸ್ಟೇಡಿಯಂಗಳು ಮತ್ತು ನಗರಗಳು ಮಾತ್ರವಲ್ಲದೇ ಶಿಕ್ಷಣ ಸಂಸ್ಥೆಗೂ (Educational Institution) ಸಹ ಮರುನಾಮಕರಣ ಮಾಡಲಾಗಿದೆ. ಇತ್ತೀಚೆಗೆ ಬಿಜೆಪಿಯ ಆಡಳಿತವಿರುವ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿರದ ಮತ್ತು ಸ್ಥಳೀಯ ವೀರರ ಹೆಸರನ್ನು ವಿಶ್ವವಿದ್ಯಾಲಯಗಳಿಗೆ ಮರುನಾಮಕರಣ ಮಾಡಲಾಗಿದೆ.


ಹೌದು, ಉತ್ತರ ಮಹಾರಾಷ್ಟ್ರ ವಿಶ್ವವಿದ್ಯಾಲಯವನ್ನು ಈಗ ಕವಯಿತ್ರಿ ಬಹಿನಾಬಾಯಿ ಚೌಧರಿ ವಿಶ್ವವಿದ್ಯಾಲಯ ಎಂದು, ಛಿಂದ್ವಾರಾ ವಿಶ್ವವಿದ್ಯಾಲಯವನ್ನು ರಾಜಾ ಶಂಕರ್ ಷಾ ಎಂದು ಮತ್ತು ಅಲಹಾಬಾದ್ ಸ್ಟೇಟ್ ಯೂನಿವರ್ಸಿಟಿಯನ್ನು ಪ್ರೊ. ರಾಜೇಂದ್ರ ಸಿಂಗ್ (ರಜ್ಜು ಭಯ್ಯಾ) ವಿಶ್ವವಿದ್ಯಾಲಯ ಎಂದು ಮರು ಹೆಸರಿಸಲಾಗಿದೆ.


ಗಾಂಧಿ ಮತ್ತು ನೆಹರೂ ಹೆಸರಿಡುವ ಹಳೇ ಸಂಪ್ರದಾಯ ಮರೆಯಾಗುತ್ತಿದೆಯೇ?
ಮೋದಿ ಆಡಳಿತದ ಈ ಎಲ್ಲಾ ಪ್ರವೃತ್ತಿ ಗಾಂಧಿ ಮತ್ತು ನೆಹರೂ ಅವರಂತಹ ವ್ಯಕ್ತಿಗಳ ಹೆಸರನ್ನು ಇಡುವ ಅದೇ ಹಳೆಯ ಸಂಪ್ರದಾಯದಿಂದ ದೂರ ಸರಿಯುತ್ತಿರುವುದನ್ನು ಎತ್ತಿ ತೋರಿಸುತ್ತಿದೆ. ಪ್ರಸಿದ್ಧ ಸ್ಥಳಗಳು, ಶಿಕ್ಷಣ ಸಂಸ್ಥೆಗಳು, ನಗರಗಳು, ಏರಿಯಾಗಳು ಕೇವಲ ಗಾಂಧಿ ಮತ್ತು ನೆಹರು ಸೇರಿ ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ಈ ಹಿಂದೆ ಇದ್ದದ್ದನ್ನು ನಾವು ನೋಡಿದ್ದೇವೆ. ಈ ರೀತಿಯಾದ ಪ್ರವೃತ್ತಿ ಸ್ಥಳೀಯ ಸಾಧಕರನ್ನು ಅಲ್ಲಿನ ಜನತೆಯಿಂದ ದೂರವಾಗಿಸುತ್ತಿದೆ ಎನ್ನಬಹುದು. ಅದಕ್ಕಾಗಿಯೇ ಮೋದಿ ಆಡಳಿತದಲ್ಲಿ ಸ್ಥಳೀಯ ನಾಯಕರನ್ನು ಗುರುತಿಸುವ ಮತ್ತು ಜನರಿಗೆ ಪರಿಚಯಿಸುವ ದೃಷ್ಟಿಯಿಂದ ಇಂಥದ್ದೊಂದು ಮಹತ್ತರ ಗುರಿಯತ್ತ ಹೆಜ್ಜೆ ಹಾಕಿದೆ.


ಇದನ್ನೂ ಓದಿ:  Explained: ನಿಮ್ಮ ಖಾಸಗಿ ಫೋಟೋ, ವಿಡಿಯೋ ವೈರಲ್ ಆಗಿದ್ರೆ ಹೀಗೆ ಮಾಡಿ; ತಕ್ಷಣ ಪರಿಹಾರ ಸಿಗುತ್ತೆ


“ಮೋದಿ ಸರ್ಕಾರದ ಮರುನಾಮಕರಣವು ಎಲ್ಲದಕ್ಕೂ ಗಾಂಧಿ ಮತ್ತು ನೆಹರು ಹೆಸರನ್ನು ಇಡುವುದಕ್ಕೆ ಪ್ರತಿಕ್ರಿಯೆಯಾಗಿದೆ. ಇದೊಂದು ರಾಜಕೀಯ ನಡೆ" ಎಂದು ಆರ್‌ಎಸ್‌ಎಸ್‌ನ ಆಂಗ್ಲ ಮುಖವಾಣಿ ಆರ್ಗನೈಸರ್‌ನ ಮಾಜಿ ಸಂಪಾದಕ ಶೇಷಾದ್ರಿ ಚಾರಿ ತಿಳಿಸಿದ್ದಾರೆ. "ದೀನ್ ದಯಾಳ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ನಂತರ ಎಲ್ಲವನ್ನೂ ಮರುಹೆಸರಿಸಲು ಸಾಧ್ಯವಿಲ್ಲ, ಅದಕ್ಕಾಗಿಯೇ ಸಂಸ್ಥೆಗಳಿಗೆ ಸ್ಥಳೀಯ ವೀರರ ಹೆಸರನ್ನು ಮರುನಾಮಕರಣ ಮಾಡುವುದು ಹೆಚ್ಚು ಸಮಂಜಸವಾಗಿದೆ." ಎಂದು ಅಭಿಪ್ರಾಯ ಪಟ್ಟಿದ್ದಾರೆ.


"ಮರುನಾಮಕರಣ ಪ್ರಕ್ರಿಯೆ ಎಚ್ಚರಿಕೆಯಿಂದ ನಡೆಯಬೇಕು"
ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಮಾಜಿ ಅಧ್ಯಕ್ಷ ಸುಖದೇವ್ ಥೋರಟ್, ಮರುನಾಮಕರಣವನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು ಮತ್ತು ಸಮಾಜಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳ ಹೆಸರಿಗೆ ಮಾತ್ರ ಆದ್ಯತೆ ನೀಡಬೇಕು ಎಂದು ಹೇಳುತ್ತಾರೆ.


“ನೀವು ಒಂದು ಸಂಸ್ಥೆಯನ್ನು ಮರುಹೆಸರಿಸುವಾಗ, ಅದಕ್ಕೆ ಲಗತ್ತಿಸಲಾದ ಮೌಲ್ಯವನ್ನು ಯೋಚಿಸಬೇಕು. ಮತ್ತು, ಆದ್ದರಿಂದ, ಸಂಸ್ಥೆಯನ್ನು ಮರುಹೆಸರಿಸುವ ವ್ಯಕ್ತಿತ್ವವನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. ವಿದ್ಯಾರ್ಥಿಗಳು ಹೆಸರಿನಿಂದ ಪ್ರೇರಿತರಾಗಬೇಕು. ಆದರೆ ದುರದೃಷ್ಟವಶಾತ್ ಹೆಚ್ಚಿನ ಸಂದರ್ಭಗಳಲ್ಲಿ ಇದು ‌ಸಾಧ್ಯವಾಗುತ್ತಿಲ್ಲ ”ಎಂದು ಥೋರಟ್ ಹೇಳಿದರು.


ಯಾವೆಲ್ಲಾ ವಿದ್ಯಾಸಂಸ್ಥೆಗಳಿಗೆ ಸ್ಥಳೀಯ ಸಾಧಕರ ಹೆಸರನ್ನು ಮರುನಾಮಕಾರಣ ಮಾಡಲಾಗಿದೆ?
1) ಛಿಂದ್ವಾರಾ ವಿಶ್ವವಿದ್ಯಾಲಯ ಟು ರಾಜಾ ಶಂಕರ್ ಶಾ ವಿಶ್ವವಿದ್ಯಾಲಯ
ಇತ್ತೀಚೆಗೆ ಹಲವು ವಿಶ್ವವಿದ್ಯಾಲಯಗಳ ಹೆಸರು ಮರುನಾಮಕಾರಣಗೊಂಡಿವೆ. ಕೆಲ ದಿನಗಳ ಹಿಂದಷ್ಟೇ ಬದಲಾದ ವಿಶ್ವವಿದ್ಯಾಲಯಗಳನ್ನು ನೋಡುವುದಾದರೆ, ಜನವರಿಯಲ್ಲಿ, ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರವು ಛಿಂದ್ವಾರಾ ವಿಶ್ವವಿದ್ಯಾಲಯವನ್ನು ರಾಜಾ ಶಂಕರ್ ಶಾ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಿದೆ.


ಇಂದಿನ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢವನ್ನು ಒಳಗೊಂಡಿರುವ ಗೊಂಡ್ವಾನಾ ಪ್ರದೇಶದ ಹಿಂದಿನ ಆಡಳಿತಗಾರ ರಾಜಾ ಶಂಕರ್ ಷಾ, 1857 ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು ಮತ್ತು ಈ ಪ್ರದೇಶದ ಆದಿವಾಸಿ ವೀರ ಎಂದು ಸಹ ಹೆಸರು ಮಾಡಿದ್ದಾರೆ. ಹೀಗಾಗಿ ಈ ಸ್ಥಳೀಯ ವೀರನ ಹೆಸರನ್ನು ಯುನಿವರ್ಸಿಟಿಗೆ ಮರುನಾಮಕರಣ ಮಾಡಲಾಗಿದೆ. 2019 ರಲ್ಲಿ ಕಮಲ್ ನಾಥ್ ಸರ್ಕಾರದ ಅಡಿಯಲ್ಲಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗಿತ್ತು. ಛಿಂದ್ವಾರಾ, ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಭದ್ರಕೋಟೆಯಾಗಿತ್ತು.


2) ಪ್ರೊ. ರಾಜೇಂದ್ರ ಸಿಂಗ್ ಎಂದು ಬದಲಾದ ಅಲಹಾಬಾದ್ ವಿಶ್ವವಿದ್ಯಾಲಯ
ಮಾರ್ಚ್ 2019 ರಲ್ಲಿ, ಉತ್ತರ ಪ್ರದೇಶ ಸರ್ಕಾರವು ಅಧಿಕೃತವಾಗಿ ಅಲಹಾಬಾದ್ ರಾಜ್ಯ ವಿಶ್ವವಿದ್ಯಾಲಯವನ್ನು ಪ್ರೊ. ರಾಜೇಂದ್ರ ಸಿಂಗ್ (ರಜ್ಜು ಭಯ್ಯಾ) ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಿದೆ. ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ರಜ್ಜು ಭಯ್ಯಾ ಅವರು ಭೌತಶಾಸ್ತ್ರಜ್ಞರಾಗಿದ್ದರು ಮತ್ತು ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.


ಇದನ್ನೂ ಓದಿ:  108 Ambulance: ಆ್ಯಂಬುಲೆನ್ಸ್ ನಿರ್ವಹಣೆಯಲ್ಲೇ 108 ತೊಂದರೆ! 'ಇಂಜೆಕ್ಷನ್' ಕೊಡೋರ್ಯಾರು ಈ ಸಮಸ್ಯೆಗೆ?


3) ಕವಯಿತ್ರಿ ಬಹಿನಾಬಾಯಿ ಚೌಧರಿ ಎಂದು ಮರುನಾಮಕರಣ
ಆಗಸ್ಟ್ 2018 ರಲ್ಲಿ, ಜಲಗಾಂವ್‌ನಲ್ಲಿರುವ ಉತ್ತರ ಮಹಾರಾಷ್ಟ್ರ ವಿಶ್ವವಿದ್ಯಾಲಯವನ್ನು ಕವಯಿತ್ರಿ ಬಹಿನಾಬಾಯಿ ಚೌಧರಿ ಉತ್ತರ ಮಹಾರಾಷ್ಟ್ರ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಯಿತು. ಬಹಿನಾಬಾಯಿ ಖಂಡೇಸಿ ಮತ್ತು ವರ್ಹಾದಿ ಎಂಬ ಎರಡು ಉಪಭಾಷೆಗಳ ಮಿಶ್ರಣದಲ್ಲಿ ಕವನಗಳನ್ನು ರಚಿಸಿದ್ದಾರೆ. 19 ನೇ ಶತಮಾನದ ಮರಾಠಿ ಕವಯಿತ್ರಿ ಕೃಷಿ ಮತ್ತು ಕೃಷಿ ಜೀವನದಿಂದ ಸ್ಫೂರ್ತಿ ಪಡೆದಿರುವ ಸ್ಥಳೀಯ ಪ್ರಸಿದ್ಧ ಕವಯಿತ್ರಿ ಎಂದೆನಿಸಿಕೊಂಡಿದ್ದಾರೆ.


ಇತರ ಉದಾಹರಣೆಗಳಲ್ಲಿ ಛತ್ತೀಸ್‌ಗಢದ ಬಿಲಾಸ್‌ಪುರ್ ವಿಶ್ವವಿದ್ಯಾಲಯದ ಹೆಸರನ್ನು ಸೆಪ್ಟೆಂಬರ್ 2018 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ವಿಶ್ವವಿದ್ಯಾಲಯ ಎಂದು ಬದಲಾಯಿಸಲಾಯಿತು ಮತ್ತು ಗ್ಯಾಂಗ್‌ಟಾಕ್‌ನಲ್ಲಿರುವ ಸಿಕ್ಕಿಂ ವಿಶ್ವವಿದ್ಯಾಲಯವನ್ನು ಡಿಸೆಂಬರ್ 2021 ರಲ್ಲಿ ಖಾಂಗ್‌ಚೆಂಡ್‌ಜೋಂಗಾ ರಾಜ್ಯ ವಿಶ್ವವಿದ್ಯಾಲಯ ಎಂದು ಬದಲಾಯಿಸಲಾಯಿತು.


ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಮರುನಾಮಕರಣ ವಿದ್ಯಮಾನ
ಹೀಗೆ ಹೆಸರು ಬದಲಾವಣೆ ಶಿಕ್ಷಣ ಸಂಸ್ಥೆಗಳಿಗೆ ಹೊಸ ವಿದ್ಯಮಾನವೇನೂ ಅಲ್ಲ, ಬಿಜೆಪಿ ಸರಕಾರಗಳಿಗೆ ಮಾತ್ರ ಸೀಮಿತವೂ ಅಲ್ಲ. ಈ ವಿದ್ಯಾಮಾನ 90 ರ ದಶಕದಿಂದಲೂ ನಡೆದುಕೊಂಡು ಬಂದಿದೆ.


1) ಮೀರತ್ ವಿಶ್ವವಿದ್ಯಾನಿಲಯವನ್ನು ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯ ಎಂದು ಇದೇ ಸಂದರ್ಭದಲ್ಲಿ ಮರುನಾಮಕರಣ ಮಾಡಲಾಯಿತು.


2) 2014 ರಲ್ಲಿ, ಪೃಥ್ವಿರಾಜ್ ಚವಾಣ್ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಸಾಮಾಜಿಕ ಸುಧಾರಣಾವಾದಿ ಸಾವಿತ್ರಿಬಾಯಿ ಫುಲೆ ಅವರ ಗೌರವಾರ್ಥವಾಗಿ ಪುಣೆ ವಿಶ್ವವಿದ್ಯಾಲಯದ ಹೆಸರನ್ನು ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ ಎಂದು ಬದಲಾಯಿಸಿತು.


3) ವಿಜಯವಾಡದಲ್ಲಿರುವ ಆಂಧ್ರಪ್ರದೇಶದ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಇದನ್ನು ಡಾ. ಎನ್.ಟಿ.ಆರ್ ಎಂದು ಮರುನಾಮಕರಣ ಮಾಡಲಾಯಿತು.


4) ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ್ ವಿಶ್ವವಿದ್ಯಾಲಯವನ್ನು ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಯಿತು.


5) 2014 ರಲ್ಲಿ, ರಾಜಸ್ಥಾನದ ಸಿಕರ್‌ನಲ್ಲಿರುವ ಶೇಖಾವತಿ ವಿಶ್ವವಿದ್ಯಾಲಯವನ್ನು ಪಂಡಿತ್ ದೀನದಯಾಳ್ ಉಪಾಧ್ಯಾಯ ಶೇಖಾವತಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಯಿತು.


6) 2015 ರಲ್ಲಿ, ಲಕ್ನೋದ ಉತ್ತರ ಪ್ರದೇಶ ತಾಂತ್ರಿಕ ವಿಶ್ವವಿದ್ಯಾಲಯವನ್ನು ಡಾ. ಎ.ಪಿ.ಜೆ ಎಂದು ಮರುನಾಮಕರಣ ಮಾಡಲಾಯಿತು.


7) ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ, ಮತ್ತು ಪಂಜಾಬ್ ತಾಂತ್ರಿಕ ವಿಶ್ವವಿದ್ಯಾಲಯವನ್ನು I.K ಗುಜ್ರಾಲ್ ಪಂಜಾಬ್ ತಾಂತ್ರಿಕ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಯಿತು.


ಹೆಸರು ಬದಲಾವಣೆಯ ಮುಖ್ಯ ಉದ್ದೇಶವೇನು?
ಈ ಮೇಲಿನ ನಿದರ್ಶನದ ಮುಖ್ಯ ಬದಲಾವಣೆಯನ್ನು ಗಮನಿಸಿ ನೋಡುವುದಾದರೆ, ಜನಸಾಮಾನ್ಯರಿಗೆ ಸಾಮಾನ್ಯವಾಗಿ ಗೊತ್ತಿರುವ ವ್ಯಕ್ತಿಗಳಿಂದ, ಕಡಿಮೆ ಪ್ರಸಿದ್ಧ ವ್ಯಕ್ತಿಗಳ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ಸ್ಥಳೀಯ ವ್ಯಕ್ತಿಗಳ ಸಾಧನೆಯನ್ನು ಈ ರೀತಿಯಾಗಿ ಹೆಸರನ್ನು ಇಡುವ ಮೂಲಕ ಇಲ್ಲಿನ ಸ್ಥಳೀಯರಿಗೆ ಇದೊಂದು ಗೌರವಾರ್ಥಕ ಮತ್ತು ಸ್ಪೂರ್ತಿಯಾಗಲಿದೆ ಎಂಬುವುದು ಕೇಂದ್ರದ ಉದ್ದೇಶ.


ಇದನ್ನೂ ಓದಿ: Explained: ಏನಿದು PFI ಸಂಘಟನೆ? ಇದರ ಹಿಂದೆ ಇರೋದಾದರೂ ಯಾರು?


ವಿಶ್ವವಿದ್ಯಾಲಯಕ್ಕೆ ಬಂದಾಗ ಹೆಸರು ಬದಲಾವಣೆ ಕೆಟ್ಟ ಆಲೋಚನೆಯಲ್ಲ. ಪ್ರಪಂಚದಾದ್ಯಂತ ಮತ್ತು ಭಾರತದಲ್ಲಿನ ಹೆಚ್ಚಿನ ವಿಶ್ವವಿದ್ಯಾನಿಲಯಗಳು ಅವು ಇರುವ ನಗರಗಳ ಹೆಸರಿನಿಂದ ಕರೆಯಲ್ಪಡುತ್ತವೆ ಮತ್ತು ಇದು ನಗರಕ್ಕೆ ಒಂದು ನಿರ್ದಿಷ್ಟ ಖ್ಯಾತಿಯನ್ನು ತರುತ್ತದೆ.


ಕೆಲವರ ಕೆಲಸಗಳು ಅವಿಸ್ಮರಣೀಯವಾಗಿದ್ದರೂ, ಆ ವ್ಯಕ್ತಿಗಳ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ತಿಳಿದಿರುವುದಿಲ್ಲ. ಕೊನೆಯ ಪಕ್ಷ ಅವರ ಹೆಸರನ್ನು ಮುನ್ನೆಲೆಗೆ ತರುವ ಮೂಲಕ ಅವರ ಬಗ್ಗೆ ತಿಳಿಸಬಹುದು ಮತ್ತು ಅವರ ಕೆಲಸಕ್ಕೆ ಮನ್ನಣೆ ನೀಡಿದಂತಾಗುತ್ತದೆ ಎಂಬುವುದು ಈ ಮರುನಾಮಕರಣದ ಪ್ರಬಲ ಉದ್ದೇಶ ಎನ್ನಬಹುದು. ಇದೇ ನಿಟ್ಟಿನಲ್ಲಿಯೇ ಕೇಂದ್ರ ಕೂಡ ಮರುನಾಮಕರಣದ ಕೆಲಸ ಮಾಡುತ್ತಿದೆ.

Published by:Ashwini Prabhu
First published: