• ಹೋಂ
 • »
 • ನ್ಯೂಸ್
 • »
 • Explained
 • »
 • Explainer: ನಿರಾಶ್ರಿತರ ಒಲಿಂಪಿಕ್ ತಂಡ ಎಂದರೇನು? ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದದ್ದು ಹೇಗೆ?

Explainer: ನಿರಾಶ್ರಿತರ ಒಲಿಂಪಿಕ್ ತಂಡ ಎಂದರೇನು? ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದದ್ದು ಹೇಗೆ?

ಟೋಕಿಯೋ ಒಲಂಪಿಕ್ಸ್​

ಟೋಕಿಯೋ ಒಲಂಪಿಕ್ಸ್​

ಐಒಸಿ ಅಧ್ಯಕ್ಷರಾದ ಥಾಮಸ್ ಬಾಚ್ ನಿರಾಶ್ರಿತರ ತಂಡದ ನೇತೃತ್ವ ವಹಿಸಿರುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿರುವುದಾಗಿ ಹೇಳಿದರು. ಟೋಕಿಯೋದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟುಗಳನ್ನು ಶ್ಲಾಘಿಸಿದರು. ಸಮಾರಂಭದಲ್ಲಿ ಒಲಿಂಪಿಕ್ ಧ್ವಜವನ್ನು ಹಿಡಿದುಕೊಳ್ಲುವ ಆರು ಜನರಲ್ಲಿ ಒಬ್ಬರಾಗಿ ಕ್ಯಾಮರೂನ್ ಮೂಲದ ವೇಟ್‌ಲಿಫ್ಟರ್ ಸಿರಿಲ್ ಟ್ಚಾಟ್ಚೆಟ್ ಆಯ್ಕೆಯಾಗಿದ್ದರು.

ಮುಂದೆ ಓದಿ ...
 • Share this:

  ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು 2016ರ ಒಲಿಂಪಿಕ್ಸ್‌ಕ್ರೀಡಾಕೂಟಕ್ಕೆಂದೆ ನಿರಾಶ್ರಿತರ ತಂಡವನ್ನು ರಚಿಸಿತು, ತಮ್ಮ ತಾಯ್ನಾಡಿನಿಂದ ಹೊರಹಾಕಲಾದ ಅಥವಾ ಹೊರಬಂದ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗಿಯಾಗಲು ಈ ಮೂಲಕ ಅನುವು ಮಾಡಿಕೊಡಲಾಗುತ್ತದೆ. ರಿಯೋ ಡಿ ಜನೈರೊ ಕ್ರೀಡಾಕೂಟದಲ್ಲಿ 10 ಕ್ರೀಡಾಪಟುಗಳು ಇದ್ದರು. ಈ ಬಾರಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 29 ಕ್ರೀಡಾಳುಗಳು ಈ ಬಳಗ ಸೇರಿದ್ದಾರೆ.


  ನಿರಾಶ್ರಿತರ ಒಲಿಂಪಿಕ್ ತಂಡ:ಈ ತಂಡದಲ್ಲಿ ಇರುವವರು ಯಾರು


  ತಮ್ಮ ತಾಯ್ನಾಡಿನಿಂದ ಪಲಾಯನ ಮಾಡಿದ ಅಥವಾ ಹೊರ ನೂಕಲ್ಪಟ್ಟ ಹಾಗೂ ಇತರೇ ದೇಶದಲ್ಲಿ ತರಬೇತಿ ಪಡೆಯಲು ಸ್ಕಾಲರ್‌ಶಿಪ್ ಪಡೆದ 55 ಕ್ರೀಡಾಪಟುಗಳನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಆಯ್ಕೆಮಾಡುತ್ತದೆ, ಅರ್ಹತೆ ಪಡೆದವರು ಒಲಂಪಿಕ್ಸ್​ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ಒಟ್ಟು 29 ಕ್ರೀಡಾಪಟುಗಳು ಪ್ರಸ್ತುತ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಈ ಕ್ರೀಡಾಳುಗಳು ಮೂಲತಃ ಅಫ್ಘಾನಿಸ್ತಾನ, ಕ್ಯಾಮರೂನ್, ಕಾಂಗೋ, ರಿಪಬ್ಲಿಕ್ ಆಫ್ ಕಾಂಗೋ, ಎರಿಟ್ರಿಯಾ, ಇರಾಕ್, ದಕ್ಷಿಣ ಸುಡಾನ್, ಸುಡಾನ್, ಸಿರಿಯಾ, ವೆನೆಜುವೆಲಾ ದೇಶದವರು. ಈ ಕ್ರೀಡಾಳುಗಳು ಈಜು, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಕ್ಯಾನೋಯಿಂಗ್, ಸೈಕ್ಲಿಂಗ್, ಜೂಡೋ, ಕರಾಟೆ, ಶೂಟಿಂಗ್, ಟೇಕ್ವಾಂಡೋ, ವೇಟ್‌ಲಿಫ್ಟಿಂಗ್ ಮತ್ತು ಕುಸ್ತಿಯಲ್ಲಿ ಪ್ರದರ್ಶನ ತೋರಲಿದ್ದಾರೆ.


  ಇರಾನ್ ಪರವಾಗಿ ಟೇಕ್ವಾಂಡೋದಲ್ಲಿ ಕಂಚಿನ ಪದಕ ಗಳಿಸಿದ್ದ ಕಿಮಿಯಾ ಅಲಿಜಾಡೆ ಕಳೆದ ವರ್ಷ ಜರ್ಮನಿಗೆ ತೆರಳಿದ್ದರು. ಅಲ್ಲಿನ ಅಧಿಕಾರಿಗಳಿಂದ ಲೈಂಗಿಕ ಶೋಷಣೆಗೆ ಒಳಗಾದ ಕಾರಣ ನಾನು ದೇಶ ತೊರೆದೆ ಎಂದು ಇರಾನ್ ದೇಶವನ್ನು ತೊರೆದ ಕಾರಣವನ್ನು ಕಿಮಿಯಾ ತಿಳಿಸಿದ್ದರು. ಹಾಗೂ ಈ ದೇಶದಲ್ಲಿ ತಲೆಗೆ ಸ್ಕಾರ್ಫ್ ಧರಿಸುವುದು ಕಡ್ಡಾಯವಾಗಿತ್ತು. ಈಗ ನಿರಾಶ್ರಿತೆಯಂತೆ ಸ್ಪರ್ಧಿಸುತ್ತಿರುವ ಕಿಮಿಯಾ ಹಲವಾರು ಕಷ್ಟಗಳ ನಂತರ ತಮ್ಮ ವೃತ್ತಿರಂಗವನ್ನು ಪುನರ್‌ನಿರ್ಮಿಸಿಕೊಂಡಿದ್ದಾರೆ. ಹಾಗೂ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಕಿಮಿಯಾ ಆರಂಭಿಕ ಪಂದ್ಯದಲ್ಲಿ ಇರಾನ್‌ ಸ್ಪರ್ಧಿಯನ್ನು ಸೋಲಿಸಿದ್ದಾರೆ.


  ನಿರಾಶ್ರಿತರ ತಂಡವನ್ನು ಮುನ್ನಡೆಸುತ್ತಿರುವವರು ಯಾರು?


  ಈ ನಿರಾಶ್ರಿತರ ತಂಡವನ್ನು ಐಒಸಿ (IOC) ತಂಡ ಹಾಗೂ ಅಮೆರಿಕಾದ ಜಿನೀವಾ ಮೂಲದ ನಿರಾಶ್ರಿತರ ಸಂಸ್ಥೆ ಯುಎನ್‌ಹೆಚ್‌ಸಿಆರ್ (UNHCR) ತಂಡದ ಅಧಿಕಾರಿಗಳು ನೇತೃತ್ವ ವಹಿಸಿದ್ದಾರೆ. ಪ್ಯಾರಾ ಒಲಿಂಪಿಕ್ಸ್‌ನಲ್ಲಿ ನಿರಾಶ್ರಿತರ ತಂಡವೂ ಇದೆ. ಮಾರ್ಚ್ 2016ರಲ್ಲಿ ಐಒಸಿ ನಿರಾಶ್ರಿತರ ತಂಡವನ್ನು ಘೋಷಿಸಿದ ಹೊತ್ತಿನಲ್ಲಿ ಸಿರಿಯಾದಲ್ಲಿ ಯುದ್ಧದಿಂದಾಗಿ ಲಕ್ಷಾಂತರ ಜನರು ದೇಶ ತೊರೆದು ಹೋಗುತ್ತಿದ್ದರು. ವಿಶ್ವದಾದ್ಯಂತ ಸ್ಥಳಾಂತರಗೊಂಡ ಕ್ರೀಡಾಪಟುಗಳನ್ನು ಒಂದೇ ವೇದಿಕೆಯಡಿ ತರಲು ಐಒಸಿ ರಾಷ್ಟ್ರೀಯ ಒಲಿಂಪಿಕ್ ಅಧಿಕಾರಿಗಳನ್ನು ಪ್ರೋತ್ಸಾಹಿಸಿತು ಹಾಗೂ ರಿಯೋಗೆ 43 ಅಭ್ಯರ್ಥಿಗಳ ಪೈಕಿ  10 ಕ್ರೀಡಾಪಟುಗಳನ್ನು ಆಯ್ಕೆ ಮಾಡಿತು.


  ಐಒಸಿ ಅಧ್ಯಕ್ಷರಾದ ಥಾಮಸ್ ಬಾಚ್ ನಿರಾಶ್ರಿತರ ತಂಡದ ನೇತೃತ್ವ ವಹಿಸಿರುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿರುವುದಾಗಿ ಹೇಳಿದರು. ಟೋಕಿಯೋದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟುಗಳನ್ನು ಶ್ಲಾಘಿಸಿದರು. ಸಮಾರಂಭದಲ್ಲಿ ಒಲಿಂಪಿಕ್ ಧ್ವಜವನ್ನು ಹಿಡಿದುಕೊಳ್ಲುವ ಆರು ಜನರಲ್ಲಿ ಒಬ್ಬರಾಗಿ ಕ್ಯಾಮರೂನ್ ಮೂಲದ ವೇಟ್‌ಲಿಫ್ಟರ್ ಸಿರಿಲ್ ಟ್ಚಾಟ್ಚೆಟ್ ಆಯ್ಕೆಯಾಗಿದ್ದರು. ಅವರು 2014 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ನಂತರ ಬ್ರಿಟನ್‌ನಲ್ಲಿದ್ದರು ಮತ್ತು ಮಾನಸಿಕ ಆರೋಗ್ಯ ಶುಶ್ರೂಷಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.


  ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟುಗಳಿಗೆ ಶುಭಕೋರಿದ ಐಒಸಿ ಅಧ್ಯಕ್ಷರಾದ ಥಾಮಸ್ ಬಾಚ್, ನಿರಾಶ್ರಿತರು ತಮ್ಮ ದೇಶವನ್ನು ಯಾವ ಕಾರಣಕ್ಕಾಗಿ ತೊರೆದು ಹೊರಗೆ ಬರಬೇಕಾಯಿತು ಎಂಬುದನ್ನು ತಿಳಿಸಿದರು. ನಿಮ್ಮ ಪ್ರತಿಭೆ ಹಾಗೂ ಆತ್ಮಬಲದಿಂದ ಸಮಾಜಕ್ಕೆ ನೀವು ಏನು ಎಂಬುದನ್ನು ತೋರಿಸುತ್ತಿದ್ದೀರಿ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಿಮ್ಮನ್ನು ನಾವು ಹಾರ್ದಿಕವಾಗಿ ಸ್ವಾಗತಿಸುತ್ತಿದ್ದೇವೆ ಹಾಗೂ ನಿಮಗೆ ಶಾಂತಿ ಸೌಹಾರ್ದಯುತವಾದ ವಾಸಸ್ಥಾನವನ್ನು ಕಲ್ಪಿಸುತ್ತೇವೆ. ಎಂದು ಥಾಮಸ್ ಕ್ರೀಡಾಳುಗಳಿಗೆ ಸ್ಫೂರ್ತಿ ತುಂಬಿದರು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು