Explained: ಗುಜರಾತ್ ಭೂಪೇಂದ್ರ ಪಟೇಲ್ ಮಂತ್ರಿಮಂಡಲದ ಸಚಿವರ ವಿವರ, ಎದುರಿಸುತ್ತಿರುವ ಕ್ರಿಮಿನಲ್ ಪ್ರಕರಣಗಳು?

ಹಳಬರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಸೂತ್ರವನ್ನು ಬಿಜೆಪಿ ಅನುಸರಿಸಿದೆ. ಇದರಿಂದ ಸಹಜವಾಗಿಯೇ ಹಳಬರು ಅಸಮಾಧಾನಗೊಂಡಿದ್ದಾರೆ. ಇದೀಗ ಅವರನ್ನು ಸಮಾಧಾನಪಡಿಸಿ ಸರ್ಕಾರ ಮುನ್ನಡೆಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ನೂತನ ಸಿಎಂ ಭೂಪೇಂದ್ರ ಪಟೇಲ್ ಮೇಲಿದೆ.

ಭೂಪೇಂದ್ರ ಪಟೇಲ್

ಭೂಪೇಂದ್ರ ಪಟೇಲ್

 • Share this:
  ಗುಜರಾತ್ ನೂತನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸರ್ಕಾರದಲ್ಲಿ (Gujarat New CM Bhupendra Patel) 24 ಸಚಿವರು ಇಂದು ಪ್ರಮಾಣವಚನ ಸ್ವೀಕರಿಸುವ ಮೂಲಕ ಸಚಿವ ಸಂಪುಟ ಸೇರ್ಪಡೆಯಾದರು (Gujarat Cabinet Ministers Swearing). ಇಂದು ಬೆಳಗ್ಗೆ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಜೇಂದ್ರ ತ್ರಿವೇದಿ ಹಾಗೂ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಜಿತು ವಾಘನಿ ಅವರು ಸಹ ಸಚಿವರಾಗಿ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

  ರಾಜ್ಯಪಾಲ ಆಚಾರ್ಯ ದೇವರಾತ್ ಅವರು ಇಂದು ರಾಜಭವನದಲ್ಲಿ 10 ಸಚಿವ ಸಂಪುಟ ದರ್ಜೆಯ ಹಾಗೂ ಐದು ಸ್ವತಂತ್ರ ಖಾತೆ ಸೇರಿದಂತೆ 14 ರಾಜ್ಯ ಖಾತೆ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಭೂಪೇಂದ್ರ ಪಟೇಲ್ ಅವರು ಕಳೆದ ಸೋಮವಾರ ಗುಜರಾತ್ ರಾಜ್ಯದ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ರಾಜ್ಯದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದ ವಿಜಯ್ ರೂಪಾನಿ ಅವರು ಶನಿವಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿಂದೆ ವಿಜಯ್ ರೂಪಾನಿ ಅವರ ಸಚಿವ ಸಂಪುಟದಲ್ಲಿ ಇದ್ದ ಎಲ್ಲ 23 ಸದಸ್ಯರನ್ನು ಈ ಬಾರಿಯ ಸಂಪುಟದಿಂದ ಕೈಬಿಟ್ಟು ಯುವಕರಿಗೆ ಆದ್ಯತೆ ನೀಡಿಲಾಗಿದೆ. ಹಳಬರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಸೂತ್ರವನ್ನು ಬಿಜೆಪಿ ಅನುಸರಿಸಿದೆ. ಇದರಿಂದ ಸಹಜವಾಗಿಯೇ ಹಳಬರು ಅಸಮಾಧಾನಗೊಂಡಿದ್ದಾರೆ. ಇದೀಗ ಅವರನ್ನು ಸಮಾಧಾನಪಡಿಸಿ ಸರ್ಕಾರ ಮುನ್ನಡೆಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ನೂತನ ಸಿಎಂ ಭೂಪೇಂದ್ರ ಪಟೇಲ್ ಮೇಲಿದೆ.

  ರಾಜೇಂದ್ರ ತ್ರಿವೇದಿ, ಜಿತು ವಾಘಾನಿ, ಹೃಷಿಕೇಷ್ ಪಟೇಲ್, ಪೂರ್ಣೇಶ್ ಮೋದಿ, ರಾಘವಾಜಿ ಪಟೇಲ್, ಕನುಭಾಯಿ ದೇಸಾಯಿ, ಕಿರಿತಸಿನ್ಹಾ ರಾಣಾ, ನರೇಶ್ ಪಟೇಲ್, ಪ್ರದೀಪ್ ಪಾರ್ಮರ್ ಹಾಗೂ ಅರ್ಜುನಸಿನ್ಹಾ ಚೌವ್ಹಾಣ್, ಪ್ರದೀಪ್ ಪಾರ್ಮರ್, ಹರ್ಷ ಸಾಂಘ್ವಿ, ಜಗದೀಶ್ ಪಾಂಚಾಲ್, ಬ್ರಿಜೇಶ್ ಮಿರ್ಜಾ, ರಿಜು ಚೌಧರಿ, ಮನೀಶ್ ವಾಕಿಲ್ ಅವರು ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರ ಕ್ಷೇತ್ರ, ವಿವರ ಮಾಹಿತಿಯನ್ನು ನ್ಯೂಸ್ 18 ನಿಮ್ಮ ಮುಂದಿಟ್ಟಿದೆ.

  ಇದನ್ನು ಓದಿ: Gujarat Cabinet Ministers Swearing: ಪ್ರಮಾಣವಚನ ಸ್ವೀಕರಿಸಿದ ಗುಜರಾತ್ ನೂತನ ಸರ್ಕಾರದ ಸಚಿವರು!; 4.30ಕ್ಕೆ ಮೊದಲ ಸಚಿವ ಸಂಪುಟ ಸಭೆ

  ನರೇಶ್ ಪಟೇಲ್, ಗಾಂದೇವಿ: 51 ವರ್ಷದ ಇವರು 10 ನೇ ತರಗತಿ ಉತ್ತೀರ್ಣರಾಗಿದ್ದಾರೆ. 2017 ರಲ್ಲಿ ಗುಜರಾತ್‌ನ ಗಾಂಧೇವಿಯಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ಇವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳ ದಾಖಲೆಗಳಿಲ್ಲ.

  ಕನುಭಾಯಿ ದೇಸಾಯಿ, ಪರಡಿ: 61 ವರ್ಷದ ದೇಸಾಯಿ ಅವರು ಬಿ.ಕಾಂ ಪದವೀಧರರಾಗಿದ್ದಾರೆ. ಇವರ ವಿರುದ್ಧವೂ ಕ್ರಿಮಿನಲ್ ಪ್ರಕರಣಗಳಿಲ್ಲ.

  ಹೃಷಿಕೇಶ್ ಪಟೇಲ್, ವಿಸ್ನಗರ್: 56 ವರ್ಷದ ಹೃಷಿಕೇಷ್ ಅವರು ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ವ್ಯಾಪಾರ ಮತ್ತು ಕೃಷಿ ಹಿನ್ನೆಲೆಯಿಂದ ಬಂದವರಾಗಿದ್ದಾರೆ.

  ಜೆವಿ ಕಾಕಡಿಯಾ, ಧಾರಿ: ಪದವೀಧರರಾಗಿರುವ 56 ವರ್ಷದ ಕಾರಡಿಯಾ ಅವರು ಧಾರಿ ಕ್ಷೇತ್ರದ ಶಾಸಕರು. ಇವರ ವಿರುದ್ಧವೂ ಸಹ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ.

  ಜಿತು ಚೌಧರಿ, ಕಪ್ರದಾ: 48 ವರ್ಷದ ಜಿತು ಮೂಲತಃ ರೈತರು. ಮತ್ತು ಇವರ ವಿರುದ್ಧ ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ ಆರೋಪಗಳು ಇವೆ.

  ಜಗದೀಶ್ ಪಾಂಚಾಲ್, ನಿಕೋಲ್: 66 ವರ್ಷದ ಪಾಂಚಾಲ್ ಅವರು ವೃತ್ತಿಯಲ್ಲಿ ಉದ್ಯಮಿ ಆಗಿದ್ದಾರೆ. 14 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

  ಅರವಿಂದ್ ರೈಯಾನಿ, ರಾಜಕೋಟ್ ಶಾಸಕರಾಗಿರುವ ಇವರು 9ನೇ ತರಗತಿವರೆಗೆ ಓದಿದ್ದಾರೆ. ಮತ್ತು ಶಾಂತಿ ಭಂಗ ಹಾಗೂ ಹಿಂಸಾಚಾರಕ್ಕೆ ಪ್ರಚೋದಿಸಿದ ಆಪಾದನೆ ಸಂಬಂಧ ಶಿಕ್ಷೆಗೆ ಗುರಿಯಾಗಿದ್ದಾರೆ.

  ಹರ್ಷ ಸಾಂಘ್ವಿ, ಮಜುರಾ: 34 ವರ್ಷದ ಸಾಂಘ್ವಿ ಮೂರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಮತ್ತು 6,72,052 ರೂಪಾಯಿಗಳ ಆರ್ಥಿಕ ಹೊಣೆಗಾರಿಕೆ ಹೊಂದಿದ್ದಾರೆ.

  ರಾಘವಜಿ ಪಟೇಲ್, ಜಾಮ್‌ನಗರ: 58 ವರ್ಷದ ಅವರು ಎರಡು ಪ್ರಕರಣಗಳು ಮತ್ತು 4 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

  ಮುಖೇಶ್ ಪಟೇಲ್, ಓಲ್ಪಾಡ್: ರೈತ ಮತ್ತು ಗುತ್ತಿಗೆದಾರರಾಗಿರುವ 42 ವರ್ಷದ ಮುಖೇಶ್ ಪಟೇಲ್ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ.

  ನಿಮಿಷಾ ಸುತಾರ್, ಮೊರ್ವಾ ಹದಾಫ್: 29 ವರ್ಷದ ಸುತಾರ್ ಎಲೆಕ್ಟ್ರಿಕ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಕಮ್ ಪ್ರೋಗ್ರಾಂ ಸಹಾಯಕ ಡಿಪ್ಲೊಮಾ ಮಾಡಿದ್ದಾರೆ.

  ದುಷ್ಯಂತ್ ಪಟೇಲ್, ಭರೂಚ್: 47 ವರ್ಷದ ಇವರು 3 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಮತ್ತು ಇವರ ವಿರುದ್ಧ ಯಾವುದೇ ಪ್ರಕರಣಗಳಿಲ್ಲ.

  ಗಜೇಂದ್ರ ಪರ್ಮಾರ್, ಪ್ರಾಂತಿಜ್: 39 ವರ್ಷದ ಪರ್ಮಾರ್ ಬಿಎ (ಹಿಂದಿ) ಪದವಿ ಪಡೆದಿದ್ದು ಯಾವುದೇ ಅಪರಾಧ ಪ್ರಕರಣಗಳಿಲ್ಲ.

  ಬ್ರಿಜೇಶ್ ಮೆರ್ಜಾ, ಮೊರ್ಬಿ: 62 ವರ್ಷದ ಮೆರ್ಜಾ ಸೌರಾಷ್ಟ್ರ ವಿಶ್ವವಿದ್ಯಾಲಯದಿಂದ ಬಿ.ಕಾಂ. ಪದವಿ ಪಡೆದಿದ್ದಾರೆ.

  ಪ್ರದೀಪ್ ಪರ್ಮಾರ್, ಅಸರ್ವ: 10 ನೇ ತರಗತಿ ಪಾಸಾಗಿರುವ, ಪಾರ್ಮರ್ 23 ಲಕ್ಷ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇವರ ವಿರುದ್ಧವೂ ಯಾವುದೇ ಪ್ರಕರಣಗಳಿಲ್ಲ.

  ದೇವ ಮಾಲಂ, ಕೇಶೋದ್: ಮಾಲಂ ಅವರು 5 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

  ಕಿರಿಟ್ಸಿನ್ ರಾಣಾ, ಲಿಂಬಿಡಿ: ರಾಣಾ 10 ನೇ ತರಗತಿ ತೇರ್ಗಡೆಯಾಗಿದ್ದು, 1 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಮತ್ತು ಯಾವುದೇ ಪ್ರಕರಣಗಳಿಲ್ಲ.

  ಅರ್ಜುನ್ ಸಿನ್ಹ್ ಚೌಹಾಣ್, ಮಹೇಮದವಾಡ್: 41 ವರ್ಷದ ಚೌಹಾಣ್ 12 ಲಕ್ಷ ಮೌಲ್ಯದ ಆಸ್ತಿ ಹೊಂದಿದ್ದು ಯಾವುದೇ ಘೋಷಿತ ಕ್ರಿಮಿನಲ್ ಪ್ರಕರಣಗಳಿಲ್ಲ.

  ಕುಬೇರ್ ದಿಂಡೋರ್, ಸಂತ್ರಂಪುರ: ಪ್ರಾಧ್ಯಾಪಕರಾದ ದಿಂಡೋರ್ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದಿದ್ದಾರೆ. ಮತ್ತು ಅಹಮದಾಬಾದ್ ಎಲ್​ಡಿ ಕಲಾ ಕಾಲೇಜಿನಿಂದ ಎಂಎ ಪದವಿ ಪಡೆದಿದ್ದಾರೆ.

  ಆರ್ಸಿ ಮಕ್ವಾನಾ, ಮಹುವ: 47 ವರ್ಷದ ಮಕ್ವಾನ 10 ನೇ ತರಗತಿ ಪಾಸಾಗಿದ್ದು, ಇವರ ಪತ್ನಿ ಕೂಡ ರಾಜಕಾರಣಿ.
  Published by:HR Ramesh
  First published: