• ಹೋಂ
  • »
  • ನ್ಯೂಸ್
  • »
  • Explained
  • »
  • Rupees 2000: ಹಿಂಪಡೆದಿದ್ದೇಕೆ 2000 ರೂಪಾಯಿ ನೋಟ್? ಪಿಂಕ್ ಕರೆನ್ಸಿ ಇನ್ಮುಂದೆ ಬಳಸುವಂತೆ ಇಲ್ವಾ?

Rupees 2000: ಹಿಂಪಡೆದಿದ್ದೇಕೆ 2000 ರೂಪಾಯಿ ನೋಟ್? ಪಿಂಕ್ ಕರೆನ್ಸಿ ಇನ್ಮುಂದೆ ಬಳಸುವಂತೆ ಇಲ್ವಾ?

2000 ಸಾವಿರ ರೂಪಾಯಿ ನೋಟು

2000 ಸಾವಿರ ರೂಪಾಯಿ ನೋಟು

ಪಿಂಕ್ ನೋಟ್ ಬದಲಿಸಲು ಇದೇ ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಹಾಗಾದರೆ ಆರ್ಬಿಐನ ಈ ನಿರ್ಧಾರಕ್ಕೆ ಕಾರಣವೇನು? ನೋಟ್ ಬದಲಿಸಿಕೊಳ್ಳುವುದು ಹೇಗೆ? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…

  • Share this:

2016ರಲ್ಲಿ ಇಡೀ ದೇಶದಲ್ಲೇ ನೋಟ್ ಬ್ಯಾನ್ (note ban) ಮಾಡಿರೋ ವಿಚಾರ ನಿಮ್ಮೆಲ್ಲರಿಗೂ ಗೊತ್ತು. 2016ಕ್ಕೂ ಮೊದಲು ಜಾರಿಯಲ್ಲಿದ್ದ ಅಂದಿನ 500 ಮತ್ತು 1000 ರೂಪಾಯಿಗಳ ನೋಟುಗಳನ್ನು ಅಮಾನ್ಯೀಕರಣ (demonetised) ಮಾಡಲಾಗಿತ್ತು. ಆಗ ನೋಟ್ ಬದಲಿಸಿಕೊಳ್ಳಲು (Note Exchange) ಜನಸಾಮಾನ್ಯರು ಸಾಕಷ್ಟು ಕಷ್ಟ ಪಟ್ಟಿದ್ದು ಎಲ್ಲರಿಗೂ ತಿಳಿದೇ ಇದೆ. ಇದೀಗ ಮತ್ತೊಮ್ಮೆ ನೋಟ್‌ ಬ್ಯಾನ್‌ನ ಸೂಚನೆ ನೀಡಿದೆ ಆರ್‌ಬಿಐ! 2000 ರೂಪಾಯಿಗಳ (2000 Rupees Notes) ಪಿಂಕ್ ನೋಟನ್ನು ಹಿಂತೆಗೆದುಕೊಳ್ಳುವುದಾಗಿ ಆರ್‌ಬಿಐ (RBI) ಘೋಷಿಸಿದೆ. ಇದೇ ಮೇ 23ರಿಂದ ಬ್ಯಾಂಕ್‌ಗಳಲ್ಲಿ ಪಿಂಕ್ ನೋಟ್ ಬದಲಿಸಿಕೊಳ್ಳುವಂತೆ ಹೇಳಿದೆ. ಪಿಂಕ್ ನೋಟ್ ಬದಲಿಸಲು ಇದೇ ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಹಾಗಾದರೆ ಆರ್‌ಬಿಐನ ಈ ನಿರ್ಧಾರಕ್ಕೆ ಕಾರಣವೇನು? ನೋಟ್ ಬದಲಿಸಿಕೊಳ್ಳುವುದು ಹೇಗೆ? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…


2000 ರೂಪಾಯಿ ನೋಟ್‌ ಹಿಂಪಡೆದ ಆರ್‌ಬಿಐ


ಆರ್‌ಬಿಐ ಇದೀಗ ಮಹತ್ವದ ನಿರ್ಧಾರ ಘೋಷಿಸಿದೆ. ಈ ತಕ್ಷಣದಿಂದ ಜಾರಿ ಬರುವಂತೆ 2000 ಮುಖಬೆಲೆಯ ನೋಟುಗಳ ವಿನಿಮಯವನ್ನು ನಿಲ್ಲಿಸುವಂತೆ ಎಲ್ಲಾ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿದೆ. ಇದೇ ಮೇ 23, 2023 ರಿಂದ ಪ್ರಾರಂಭವಾಗುವ ಯಾವುದೇ ಬ್ಯಾಂಕ್‌ನಲ್ಲಿ 2000 ರೂಪಾಯಿ ನೋಟುಗಳನ್ನು ಇತರ ಮುಖಬೆಲೆಯ ನೋಟುಗಳಾಗಿ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ಇದೇ ವೇಳೆ ಸ್ಪಷ್ಟಪಡಿಸಿದೆ.


ಮೇ 23ರಿಂದ ಸೆಪ್ಟೆಂಬರ್ 30ರೊಳಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಿ


2000 ರೂಪಾಯಿ ಮುಖಬೆಲೆಯ ಪಿಂಕ್ ನೋಟುಗಳನ್ನು ಆರ್‌ಬಿಐನ ಶಾಖೆಗಳು ಅಥವಾ ಯಾವುದೇ ಬ್ಯಾಂಕ್‌ಗಳಲ್ಲಿ ಬದಲಾಯಿಸಿಕೊಳ್ಳಬಹುದು. ಇದೇ 2023 ಮೇ 23, ಮಂಗಳವಾರದಿಂದ 2023, ಸೆಪ್ಟೆಂಬರ್ 30 ಶನಿವಾರದವರೆಗೆ ವಿನಿಮಯ ಮಾಡಿಕೊಳ್ಳಬಹುದು.


ಇದನ್ನೂ ಓದಿ: RBI Withdraws 2000 Rs Notes: 2 ಸಾವಿರ ರೂಪಾಯಿ ನೋಟುಗಳನ್ನು ಹಿಂಪಡೆದ ಆರ್​ಬಿಐ! ಪಿಂಕ್ ಕರೆನ್ಸಿ ಬದಲಿಸಿಕೊಳ್ಳಲು ಸೆಪ್ಟೆಂಬರ್​ 30 ಲಾಸ್ಟ್​ಡೇಟ್​


ನೋಟು ವಿನಿಮಯಕ್ಕೆ ಏನಿದೆ ನಿಯಮ?


2000 ರೂಪಾಯಿ ನೋಟ್ ವಿನಿಮಯಕ್ಕೆ ಆರ್‌ಬಿಐ ಕೆಲವೊಂದು ನಿಯಮಗಳನ್ನು ರೂಪಿಸಿದೆ. ಅದರಂತೆ ಬ್ಯಾಂಕ್‌ಗಳು 2 ಸಾವಿರ ರೂಪಾಯಿ ನೋಟು ಪಡೆದುಕೊಳ್ಳಬಹುದು. ಆದರೆ ಗ್ರಾಹಕರಿಗೆ 2 ಸಾವಿರ ರೂಪಾಯಿ ನೋಟ್ ಕೊಡುವಂತಿಲ್ಲ. ಇನ್ನು ಗ್ರಾಹಕರು 2000 ರೂಪಾಯಿ ನೋಟ್ ಕೊಟ್ಟು 500,100ರ ನೋಟ್‌ಗಳನ್ನು ಪಡೆಯಬಹುದು. ಆದರೆ ಒಬ್ಬ ಗ್ರಾಹಕ ಒಂದು ದಿನಕ್ಕೆ 20 ಸಾವಿರ ರೂಪಾಯಿಗಳಷ್ಟು ಮಾತ್ರ ಹಣ ವಿನಿಮಯ ಮಾಡಿಕೊಳ್ಳಬೇಕು.


2016ರಲ್ಲಿ 2 ಸಾವಿರ ರೂಪಾಯಿ ನೋಟ್ ಪರಿಚಯ


2000 ಮುಖಬೆಲೆಯ ಪಿಂಕ್ ನೋಟನ್ನು ನವೆಂಬರ್ 2016 ರಲ್ಲಿ ಪರಿಚಯಿಸಲಾಯ್ತು. RBI ಕಾಯಿದೆ, 1934 ರ ಸೆಕ್ಷನ್ 24 (1)ರ ಅಡಿಯಲ್ಲಿ ಪರಿಚಯಿಸಲಾಯಿತು.  ಪ್ರಾಥಮಿಕವಾಗಿ ಎಲ್ಲಾ  500 ರೂಪಾಯಿ ಮತ್ತು 1000 ರೂಪಾಯಿ ಬ್ಯಾಂಕ್‌ನೋಟುಗಳ ಕಾನೂನು ಟೆಂಡರ್ ಸ್ಥಿತಿಯನ್ನು ಹಿಂಪಡೆದ ನಂತರ ಆರ್ಥಿಕತೆಯ ಕರೆನ್ಸಿ ಅಗತ್ಯವನ್ನು ತ್ವರಿತವಾಗಿ ಪೂರೈಸಲು ಆ ಸಮಯದಲ್ಲಿ ಚಲಾವಣೆಯಲ್ಲಿತ್ತು.


2018ರಲ್ಲಿಯೇ 2000 ರೂಪಾಯಿ ಮುದ್ರಣ ಸ್ಥಗಿತ!


ಅಂದಹಾಗೆ 2018-19ರಲ್ಲಿಯೇ  2000 ರೂಪಾಯಿ ಮುಖಬೆಲೆಯ ನೋಟ್‌ಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು. 2000 ರೂಪಾಯಿ ಮುಖಬೆಲೆಯ ಬ್ಯಾಂಕ್‌ನೋಟುಗಳಲ್ಲಿ ಸುಮಾರು 89% ಅನ್ನು ಮಾರ್ಚ್ 2017 ಕ್ಕಿಂತ ಮೊದಲು ನೀಡಲಾಯಿತು ಮತ್ತು ಅವುಗಳ ಅಂದಾಜು ಜೀವಿತಾವಧಿ 4-5 ವರ್ಷಗಳ ಅಂತ್ಯದಲ್ಲಿದೆ.


ಪಿಂಕ್ ನೋಟ್‌ಗಳ ಬಳಕೆ ಕುಸಿತ


ಚಲಾವಣೆಯಲ್ಲಿರುವ ಈ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಒಟ್ಟು ಮೌಲ್ಯವು ಮಾರ್ಚ್ 31, 2018 ರ ಗರಿಷ್ಠ 6.73 ಲಕ್ಷ ಕೋಟಿಗಳಿಂದ (ಚಲಾವಣೆಯಲ್ಲಿರುವ ನೋಟುಗಳ ಶೇಕಡಾ 37.3) 3.62 ಲಕ್ಷ ಕೋಟಿಗೆ ಇಳಿದಿದೆ, ಇದು ಮಾರ್ಚ್ 31, 2023 ರಂದು ಚಲಾವಣೆಯಲ್ಲಿರುವ ನೋಟುಗಳ ಶೇಕಡಾ 10.8 ರಷ್ಟಿದೆ.




ಇದೀಗ ನೋಟ್ ಹಿಂಪಡೆಯಲು ಕಾರಣವೇನು?


  • 2 ಸಾವಿರ ರೂಪಾಯಿ ಮುಖಬೆಲೆಯ ನೋಟ್‌ಗಳನ್ನು ಹಿಂಪಡೆಯಲು ಆರ್‌ಬಿಐ ಹಲವು ಕಾರಣಗಳನ್ನು ನೀಡಿದೆ.

  • ಆರ್‌ಬಿಐನ "ಕ್ಲೀನ್ ನೋಟ್ ನೀತಿ"ಗೆ ಅನುಗುಣವಾಗಿ ಈ ಬದಲಾವಣೆಯನ್ನು ತರಲಾಗಿದೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

  • ಈಗ ಚಲಾವಣೆಯಲ್ಲಿರುವ 2,000ರೂ ಮುಖಬೆಲೆಯ ನೋಟುಗಳಲ್ಲಿ ಶೇ.89ರಷ್ಟು ನೋಟುಗಳನ್ನು 2017ರ ಮಾರ್ಚ್​ಗೂ ಮುನ್ನವೇ ಮುದ್ರಣ ಮಾಡಿ ಬಿಡುಗಡೆಗೊಳಿಸಿದಂತಹವುಗಳಾಗಿವೆ.

  • ಇವುಗಳ ಕಾಲಾವಧಿ 4-5 ವರ್ಷ ಮಾತ್ರ ಇದ್ದವು.

  • ಇದರಿಂದ ಈ ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ ಅಂತ ಆರ್‌ಬಿಐ ಹೇಳಿದೆ.

  • 2,000 ರೂಪಾಯಿ ಮುಖ ಬೆಲೆಯ ನೋಟುಗಳ ಚಲಾವಣೆ ಪ್ರಮಾಣ ಕಡಿಮೆ ತೀರಾ ಆಗಿದೆ ಅಂತ ಹೇಳಲಾಗಿದೆ.

  • ಜನರ ಹಣಕಾಸಿನ ವಹಿವಾಟಿಗೆ ಬೇರೆ ನೋಟುಗಳನ್ನು ಸಾಕಷ್ಟು ಬಳಕೆ ಮಾಡುತ್ತಿರುವುದರಿಂದ ಈ 2,000 ರೂ. ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ.


 ಇದನ್ನೂ ಓದಿ: How to Exchange 2000 Notes: ನಿಮ್ಮ ಬಳಿ 2000 ನೋಟಿವೆಯಾ? ಅದನ್ನು ಬದಲಿಸಿಕೊಳ್ಳಲು ಏನು ಮಾಡಬೇಕು? ಇಲ್ಲಿವೆ ಸಂಪೂರ್ಣ ಮಾಹಿತಿ


ಗ್ರಾಹಕರೇ ಆತಂಕ ಬೇಡ


ಇನ್ನು ಗ್ರಾಹಕರು ಆತಂಕಗೊಳ್ಳದಂತೆ ಆರ್‌ಬಿಐ ಹೇಳಿದೆ. ಎಲ್ಲಾ ಬ್ಯಾಂಕುಗಳು ಸೆಪ್ಟೆಂಬರ್ 30, 2023 ರವರೆಗೆ 2000 ರೂಪಾಯಿ ಮುಖಬೆಲೆಯ ನೋಟುಗಳಿಗೆ ಬ್ಯಾಂಕ್​ಗಳು ತಮ್ಮ ಶಾಖೆಗಳಲ್ಲಿ ಠೇವಣಿ ಮತ್ತು ಅಥವಾ ವಿನಿಮಯ ಸೌಲಭ್ಯವನ್ನು ಒದಗಿಸುತ್ತವೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್​ ಘೋಷಿಸಿದೆ. ಯಾರೂ ಕೂಡ ಭಯ ಹಾಗೂ ಆತಂಕಕ್ಕೆ​ ಒಳಗಾಗಬಾರದು. ಈ ನೋಟುಗಳ ವಿನಿಮಯಕ್ಕೆ ನಾಲ್ಕು ತಿಂಗಳವರೆಗೆ ಕಾಲಾವಕಾಶ ನೀಡಲಾಗಿದೆ. ಈ ಅವಕಾಶ ಉಪಯೋಗಿಸಿಕೊಂಡು ನೋಟ್ ಬದಲಾಯಿಸಿಕೊಳ್ಳಿ ಎಂದು ಆರ್‌ಬಿಐ ಮನವಿ ಮಾಡಿದೆ.

top videos
    First published: