• ಹೋಂ
  • »
  • ನ್ಯೂಸ್
  • »
  • Explained
  • »
  • Rapido: ಯುವತಿ ಮೇಲೆ ರ‍್ಯಾಪಿಡೋ ಬೈಕ್ ಚಾಲಕನಿಂದ ಅತ್ಯಾಚಾರ ಪ್ರಕರಣ, ರ‍್ಯಾಪಿಡೋಸಂಸ್ಥೆ ಹೇಳಿದ್ದೇನು ಗೊತ್ತಾ?

Rapido: ಯುವತಿ ಮೇಲೆ ರ‍್ಯಾಪಿಡೋ ಬೈಕ್ ಚಾಲಕನಿಂದ ಅತ್ಯಾಚಾರ ಪ್ರಕರಣ, ರ‍್ಯಾಪಿಡೋಸಂಸ್ಥೆ ಹೇಳಿದ್ದೇನು ಗೊತ್ತಾ?

ರ‍್ಯಾಪಿಡೋ

ರ‍್ಯಾಪಿಡೋ

ಎಲ್ಲಾ ಸವಲತ್ತು, ಸೌಲಭ್ಯ ನಮಗೆ ಇದ್ದರೂ ನಮ್ಮ ಜಾಗರೂಕತೆಯಲ್ಲಿ ನಾವಿರುವುದು ಮುಖ್ಯವಾಗಿರುತ್ತದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಲ್ಲಿ ಬುಕ್ಕಿಂಗ್‌ ಮಾಡಿ ನಾವು ತಲುಪಬೇಕಾದ ಸ್ಥಳಕ್ಕೆ ಸುಲಭವಾಗಿ ಹೋಗಬಹುದು. ಅದರೆ ಎಚ್ಚರ ತಪ್ಪಿದ್ರೆ ಏನು ಆಗುತ್ತೆ ಅನ್ನುವುದಕ್ಕೆ ಈ ಪ್ರಕರಣ ಉತ್ತರ ನೀಡುತ್ತೆ ನೋಡಿ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • New Delhi, India
  • Share this:

    ಎಲ್ಲಾ ಸವಲತ್ತು, ಸೌಲಭ್ಯ ನಮಗೆ ಇದ್ದರೂ ನಮ್ಮ ಜಾಗರೂಕತೆಯಲ್ಲಿ ನಾವಿರುವುದು ಮುಖ್ಯವಾಗಿರುತ್ತದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಆ್ಯಪ್ (App) ಆಧಾರಿತ ಟ್ಯಾಕ್ಸಿ (Taxi) ಸೇವೆಗಳಲ್ಲಿ (Service) ಬುಕ್ಕಿಂಗ್‌ (Booking) ಮಾಡಿ ನಾವು ತಲುಪಬೇಕಾದ ಸ್ಥಳಕ್ಕೆ ಸುಲಭವಾಗಿ ಹೋಗಬಹುದು. ಈ ಸೇವೆಗಳು ನಿಜಕ್ಕೂ ಜನರಿಗೆ ಅನುಕೂಲವಾದರೂ ಚಾಲಕರ (Drivers) ಮನಸ್ಥಿತಿಗಳು ಒಮ್ಮೊಮ್ಮೆ ಪ್ರಯಾಣಿಕರಿಗೆ (Travelers) ಸಂಚಕಾರ ನೀಡುತ್ತವೆ ಎನ್ನೋದಕ್ಕೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆ ಸಾಕ್ಷಿಯಾಗಿದೆ.


    ಕೇರಳ ಮೂಲದ ಯುವತಿ ಮೇಲೆ ರ‍್ಯಾಪಿಡೋ ಚಾಲಕನಿಂದ ಅತ್ಯಾಚಾರ


    ಕೇರಳ ಮೂಲದ 23 ವರ್ಷದ ಯುವತಿ ಮೇಲೆ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ರ‍್ಯಾಪಿಡೋ ಚಾಲಕ ಮತ್ತು ಆತನ ಇಬ್ಬರು ಸ್ನೇಹಿತ ಸೇರಿಕೊಂಡು ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಈಗಾಗ್ಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


    ಕೇರಳದ ಫ್ರೀಲಾನ್ಸ್ ಉದ್ಯೋಗಿಯಾಗಿರುವ ಸಂತ್ರಸ್ತೆ ಕೆಲಸದ ಸಲುವಾಗಿ ಬೆಂಗಳೂರಿಗೆ ಬಂದಿದ್ದರು. ಎಲೆಕ್ಟ್ರಾನಿಕ್ಸ್ ಸಿಟಿಯ ನಿಲಾದ್ರಿ ನಗರದಲ್ಲಿರುವ ತನ್ನ ಸ್ನೇಹಿತೆಯ ಮನೆಗೆ ತೆರಳಲು ಕಳೆದ ಶುಕ್ರವಾರ ರಾತ್ರಿ ಕೇರಳ ಮೂಲದ ಯುವತಿ ಬೈಕ್​ ಟ್ಯಾಕ್ಸಿ ಬುಕ್​ ಮಾಡಿದ್ದಳು.


    ಈ ಸಮಯದಲ್ಲಿ ಯುವತಿ ಕುಡಿದಿದ್ದಳು ಎನ್ನಲಾಗಿದೆ. ಇದೇ ಅವಕಾಶವನ್ನು ಬಳಸಿಕೊಂಡ ಬೈಕ್ ಚಾಲಕ‌ ತನ್ನ ಸ್ನೇಹಿತ ಹಾಗೂ ಸ್ನೇಹಿತೆಯ ಸಹಾಯದಿಂದ ರೂಮ್‌ ಒಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಯುವತಿಗೆ ಪ್ರಜ್ಞೆ ಬಂದ ಮೇಲೆ ಈ ವಿಚಾರ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ.


    ಆರೋಪಿಗಳ ಬಂಧನ


    ನಂತರ ಸಂತ್ರಸ್ಥೆ ಪೊಲೀಸರಿಗೆ ದೂರು ನೀಡಿದ್ದು, ಖಾಕಿ ಪಡೆ ಬುಕ್ಕಿಂಗ್‌ ಮಾಹಿತಿ ಆಧಾರದ ಮೇಲೆ ಪಾಪಿಗಳನ್ನು ಬಂಧಿಸಿದ್ದಾರೆ.


    ಕಂಪನಿಗಳ ನಿರ್ಲಕ್ಷ್ಯವೇ ಅನಾಹುತಗಳಿಗೆ ಕಾರಣಾನಾ?


    ಇಂತಹ ಪ್ರಕರಣಗಳನ್ನು ನೋಡಿದರೆ ಈ ರೀತಿಯ ಸೌಲಭ್ಯಗಳು ಎಷ್ಟು ಸೇಫ್‌ ಎಂಬ ಅಂಶ ಎಲ್ಲರನ್ನೂ ಕಾಡುವುದು ಸಹಜ. ಹಾಗೆಯೇ ಕಂಪನಿಗಳ ನಿರ್ಲಕ್ಷ್ಯವೂ ಒಮೊಮ್ಮೆ ಇಂತಹ ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆಯೇ ಎಂಬ ಅನುಮಾನ ಸಹ ಮೂಡುತ್ತದೆ. ಚಾಲಕರ ನೇಮಕಾತಿ ಬಗ್ಗೆ ಈ ರೀತಿಯ ಕಂಪನಿಗಳು ಸಾಕಷ್ಟು ಮುತುವರ್ಜಿ ವಹಿಸಬೇಕಾಗುತ್ತದೆ.


    ಹೀಗೆ ರ‍್ಯಾಪಿಡೋ ಕೂಡ ಇಂತಹ ಎಡವಟ್ಟುಗಳನ್ನು ಮಾಡುತ್ತಿದ್ದು, ಹಿಂದಿನ ಕ್ರಿಮಿನಲ್ ದಾಖಲೆ ಹೊಂದಿರುವ ಚಾಲಕನನ್ನು ನೇಮಿಸಿಕೊಳ್ಳುವ ಕುರಿತು ಬೆಂಗಳೂರು ಪೊಲೀಸರು ರ‍್ಯಾಪಿಡೋಗೆ ನೋಟಿಸ್ ನೀಡಿದ್ದಾರೆ.


    ರ‍್ಯಾಪಿಡೋದ ಕಾರ್ಯಾಚರಣೆಗಳು, ಅದರ ನೇಮಕಾತಿ ಪ್ರಕ್ರಿಯೆ ಮತ್ತು ಅದರಲ್ಲಿ ಪೊಲೀಸರು ಕಂಡುಕೊಂಡ ಲೋಪಗಳ ಬಗ್ಗೆ ಒಂದು ವರದಿ ಇಲ್ಲಿದೆ.


    Rapido bike drivers miss behave case on a young woman Rapido s organization said
    ರ‍್ಯಾಪಿಡೋ


    ಘಟನೆ ಬಗ್ಗೆ ರ‍್ಯಾಪಿಡೋ ಹೇಳಿದ್ದೇನು?


    ರ‍್ಯಾಪಿಡೋ ವಕ್ತಾರರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾಲಕನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದ್ದಾರೆ. "ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಲಾದ ಚಾಲಕನ ಕ್ರಮವನ್ನು ರಾಪಿಡೋ ಬಲವಾಗಿ ಖಂಡಿಸುತ್ತದೆ, ಸಂತ್ರಸ್ತೆಯ ಬಳಿಯೂ ಕ್ಷಮೆಯಾಚಿಸುತ್ತೇವೆ" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.


    “ನಾವು ವಿಚಾರಣೆಯ ಸಲುವಾಗಿ ಪೊಲೀಸರಿಗೆ ಎಲ್ಲಾ ಸಹಾಯವನ್ನು ನೀಡಿದ್ದೇವೆ ಮತ್ತು ಆರೋಪಿಯನ್ನು ಬಂಧಿಸುವಲ್ಲಿ ಸಹಾಯ ಮಾಡಿದ್ದೇವೆ. ರಾಪಿಡೋ ಪೊಲೀಸರಿಗೆ ತನ್ನ ಸಂಪೂರ್ಣ ಸಹಕಾರವನ್ನು ನೀಡುತ್ತದೆ.


    ರ‍್ಯಾಪಿಡೋ ಧ್ಯೇಯ ಕೂಡ ಗ್ರಾಹಕರ ಸುರಕ್ಷತೆ, ಭದ್ರತೆಯಾಗಿದ್ದು, ಅದರ ಸಂಬಂಧ ಯಾವುದೇ ರೀತಿಯ ಕ್ರಮವನ್ನು ರಾಪಿಡೋ ತೆಗೆದುಕೊಳ್ಳುತ್ತದೆ" ಎಂದು ವಕ್ತಾರರು ತಿಳಿಸಿದ್ದಾರೆ.


    ರ‍್ಯಾಪಿಡೋ ಆನ್‌ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಲೋಪಗಳಿವೆಯೇ?


    ಆರೋಪಿ ಬಿಹಾರ ಮೂಲದವನಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಯು ಕೆಲವು ಕ್ರಿಮಿನಲ್‌ ಸಂಬಂಧಿತ ಕೆಲಸಗಳನ್ನು ಈ ಹಿಂದೆಯೂ ಎಸಗಿದ್ದು, ಕ್ರಿಮಿನಲ್ ದಾಖಲೆ ಹೊಂದಿರುವವನಾಗಿದ್ದರಿಂದ ಚಾಲಕನ ನೇಮಕಾತಿಯ ಬಗ್ಗೆ ಕಂಪನಿಯ ಮೇಲೆ ಅನುಮಾನ ಹುಟ್ಟಿಕೊಳ್ಳುವಂತಾಗಿದೆ.


    ಆರೋಪಿಯು "2019 ರಿಂದ ರಾಪಿಡೋ ಜೊತೆ ಕೆಲಸ ಮಾಡುತ್ತಿದ್ದಾನೆ" ಮತ್ತು ಈ ವರ್ಷ ಜನವರಿಯಲ್ಲಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದರಲ್ಲಿ ಆತನನ್ನು ಬಂಧಿಸಲಾಗಿತ್ತು. ಆದರೆ ಆರೋಪಿ ಒಂದು ತಿಂಗಳೊಳಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನೆಂದು ಅಧಿಕಾರಿಗಳು ಹೇಳಿದರು.


    ನೇಮಕಾತಿ ವಿಧಾನದಲ್ಲಿ ರ‍್ಯಾಪಿಡೋ ಎಡವಟ್ಟು


    ಚಾಲಕರ ನೇಮಕಾತಿ ಪ್ರಕ್ರಿಯೆಯಲ್ಲಿ ಸುರಕ್ಷಿತ ನೇಮಕಾತಿ ಮಾಡಿಕೊಳ್ಳವ ವಿಷಯದಲ್ಲಿ ಸರಿಯಾದ ವಿಧಾನವನ್ನು ಅನುಸರಿಸಲು ರಾಪಿಡೋ ವಿಫಲವಾಗಿದೆ ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.


    " ಈ ಆರೋಪಿ ಮೂರು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದಾನೆ, ಈ ವರ್ಷ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ಬಂಧಿಸಿದ್ದರು. ಇದಾದ ನಂತರ ಕಂಪನಿಗಳು ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯದೇ, ಮಾನದಂಡವನ್ನು ನಿರ್ಲಕ್ಷಿಸಿಸಿ ಆತನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ನಾವು ರಾಪಿಡೋಗೆ ನೋಟಿಸ್ ನೀಡುತ್ತಿದ್ದೇವೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.


    ಈ ಎಲ್ಲಾ ವಿಚಾರಗಳನ್ನು ಗಮನಿಸಿ ರಾಪಿಡೋ ಆನ್‌ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಲೋಪಗಳಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.


    ರ‍್ಯಾಪಿಡೋದಲ್ಲಿ ಡ್ರೈವರ್‌ಗಳು ಹೇಗೆ ಸೈನ್ ಅಪ್ ಮಾಡುತ್ತಾರೆ?


    ರ‍್ಯಾಪಿಡೋ ಕಂಪನಿಯು 100 ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ ಮತ್ತು ಇಲ್ಲಿ 10 ಲಕ್ಷಕ್ಕೂ ಹೆಚ್ಚು ಚಾಲಕರು ಕೆಲಸ ಮಾಡುತ್ತಿದ್ದಾರೆ.


    ಡ್ರೈವರ್‌ಗಳು ಆಂಡ್ರಾಯ್ಡ್‌ ಅಪ್ಲಿಕೇಶನ್ ಮೂಲಕ ರಾಪಿಡೋ ಪ್ಲಾಟ್‌ಫಾರ್ಮ್‌ಗೆ ಸೈನ್ ಅಪ್ ಮಾಡಬಹುದು, ಅಲ್ಲಿ ಅವರು ಹೆಸರು, ಅವರ ಮುಖದ ಚಿತ್ರ, ಅವರ ಚಾಲಕನ ಪರವಾನಗಿ, ವಾಹನ ನೋಂದಣಿ ಪ್ರಮಾಣಪತ್ರ ಮತ್ತು ಅವರ PAN ಕಾರ್ಡ್‌ನಂತಹ ವೈಯಕ್ತಿಕ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.


    ಈ ದಾಖಲೆಗಳ ಪರಿಶೀಲನೆಯು ಸಾಮಾನ್ಯವಾಗಿ 24-48 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

    Rapido bike drivers miss behave case on a young woman Rapido s organization said
    ರ‍್ಯಾಪಿಡೋ


    ಈ ಚಾಲಕರು ಪ್ಲಾಟ್‌ಫಾರ್ಮ್‌ನಲ್ಲಿ "ಥರ್ಡ್-ಪಾರ್ಟಿ ವೆಹಿಕಲ್ ಆಪರೇಟರ್‌ಗಳು" ಎಂದು ಸೈನ್ ಅಪ್ ಮಾಡುತ್ತಾರೆ ಮತ್ತು Rapido ನ ನಿಯಮಗಳು ಮತ್ತು ಷರತ್ತುಗಳ ವೆಬ್‌ಸೈಟ್ ಪ್ರಕಾರ ಅವರನ್ನು ಸ್ವತಂತ್ರ ಗುತ್ತಿಗೆದಾರರು ಎಂದು ಪರಿಗಣಿಸಲಾಗುತ್ತದೆ.


    ಓಲಾ ಮತ್ತು ಉಬರ್ ನಂತಹ ದ್ವಿಮುಖ ಮಾರುಕಟ್ಟೆ ರೈಡ್ ಹೈಲಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇದು ಸಾಮಾನ್ಯ ಮಾದರಿಯಾಗಿದೆ. ‌


    ಚಾಲಕರ ಹಿನ್ನೆಲೆ ಪರಿಶೀಲನೆ ಮಾಡುತ್ತದೆಯೇ ಕಂಪನಿ?


    ರ‍್ಯಾಪಿಡೋ ಸಂಸ್ಥೆ ಚಾಲಕರ ಹಿನ್ನೆಲೆ ಪರಿಶೀಲನೆ ಮಾಡುತ್ತದೆಯೇ ಇಲ್ಲವೇ ಎಂಬ ಪ್ರಶ್ನೆಗೆ ಮೌನ ತಾಳಿದೆ. ಕಂಪನಿಯ ಈ ನಿರ್ಲಕ್ಷ್ಯವೇ ಪ್ರಯಾಣಿಕರ ಆಪತ್ತಿಗೆ ಕಾರಣವಾಗುವಂತದ್ದು.


    ಗೊತ್ತು ಗುರಿ ಇಲ್ಲದ ಚಾಲಕರನ್ನು ನಂಬಿ ಪ್ರಯಾಣಿಕರು ಅವರ ವಾಹನ ಏರುವಾಗ ಕಂಪನಿ ಈ ಬಗ್ಗೆ ಗಮನ ಹರಿಸಬೇಕು. ಚಾಲಕನ ಸಂಪೂರ್ಣ ಪೂರ್ವ ಇತಿಹಾಸವನ್ನು ತಿಳಿದುಕೊಂಡು ಆತನನ್ನು ನೇಮಿಸಿಕೊಳ್ಳುವುದು ಮುಖ್ಯವಾಗುತ್ತದೆ.


    ರ‍್ಯಾಪಿಡೋ ತನ್ನ ಚಾಲಕರು ಮತ್ತು ಪ್ರಯಾಣಿಕರ ಜೊತೆ ಹೇಗೆ ವ್ಯವಹರಿಸುತ್ತದೆ?


    ಪ್ರಯಾಣಿಕರು ಮತ್ತು ಸವಾರರಿಬ್ಬರಿಗೂ ತನ್ನ ಸೇವಾ ನಿಯಮಗಳಲ್ಲಿ, Rapido ಇದು ಕೇವಲ ಎರಡು ಪಕ್ಷಗಳನ್ನು ಸಂಪರ್ಕಿಸುವ ವೇದಿಕೆಯಾಗಿದೆ ಮತ್ತು ಅವರ ನಡವಳಿಕೆ ಮತ್ತು ಕ್ರಿಯೆಗಳಿಗೆ ಜವಾಬ್ದಾರನಾಗಿರುವುದಿಲ್ಲ ಎಂದು ಹೇಳುತ್ತದೆ.


    "ವಾಹನಗಳ ಚಾಲಕರು, ಪ್ರಯಾಣಿಕರು ಅಥವಾ ನೀವು ಬಳಸಬಹುದಾದ ವಾಹನದ ಗುಣಮಟ್ಟ, ನಡವಳಿಕೆ, ಕ್ರಮಗಳು ಅಥವಾ ನಿಷ್ಕ್ರಿಯತೆಗಳಿಗೆ ಕಂಪನಿಯು ಜವಾಬ್ದಾರನಾಗಿರುವುದಿಲ್ಲ.


    ಸೇವೆಗಳಿಗಾಗಿ ವಾಹನವನ್ನು ಒದಗಿಸುವ ಯಾವುದೇ ಒಪ್ಪಂದವು ನಿಮ್ಮ ಮತ್ತು ಚಾಲಕರ ನಡುವೆ ಪ್ರತ್ಯೇಕವಾಗಿ ಇರುತ್ತದೆ ಮತ್ತು ಕಂಪನಿಯು ಒಂದೇ ಪಕ್ಷವಾಗಿರುವುದಿಲ್ಲ, ”ಎಂದು ಪ್ರಯಾಣಿಕರಿಗೆ ಅದರ ಸೇವಾ ನಿಯಮಗಳು ಹೇಳುತ್ತವೆ.


    ರ‍್ಯಾಪಿಡೋನಲ್ಲಿ ಹೂಡಿಕೆದಾರರು ಯಾರು?


    ರ‍್ಯಾಪಿಡೋ ಸದ್ಯ ಮಹಾನಗರಗಳಲ್ಲಿ ಹೆಚ್ಚು ಬೇಡಿಕೆ ಇರುವ ಆಪ್‌ ಆಧಾರಿತ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಸೇವೆಯಾಗಿದೆ. ಕಡಿಮೆ ಹಣದಲ್ಲಿ ಹೋಗಬಹುದಾದ ಸೇವೆಗೆ ಗ್ರಾಹಕರು ಮನಸೋತಿದ್ದಾರೆ.


    ರ‍್ಯಾಪಿಡೋ ಪ್ರಸ್ತುತ $800 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯವನ್ನು ಹೊಂದಿದೆ. ಆಹಾರ ವಿತರಣಾ ದೈತ್ಯ ಸ್ವಿಗ್ಗಿ, ಟಿವಿಎಸ್ ಮೋಟಾರ್ ಕಂಪನಿ, ಮತ್ತು ಶೆಲ್ ವೆಂಚರ್ಸ್ ಮುಂತಾದವುಗಳಿಂದ ಇದು ಕೊನೆಯದಾಗಿ ಏಪ್ರಿಲ್‌ನಲ್ಲಿ $180 ಮಿಲಿಯನ್ ಸಂಗ್ರಹಿಸಿತ್ತು.


    ಕ್ರೆಡ್ ಸಂಸ್ಥಾಪಕ ಕುನಾಲ್ ಷಾ ಮತ್ತು ಯಮಹಾ ಕೂಡ ಈ ಹಿಂದೆ ಸ್ಟಾರ್ಟ್‌ಅಪ್‌ನಲ್ಲಿ ಹೂಡಿಕೆ ಮಾಡಿದ್ದಾರೆ.


    ಇದನ್ನೂ ಓದಿ: Police Atrocity: ಪೊಲೀಸ್ ದರ್ಪಕ್ಕೆ ಬಡ ವ್ಯಾಪಾರಿಯ ಎರಡೂ ಕಾಲು ಕಟ್, ಇವ್ರೇನು ಮನುಷ್ಯರಾ ಸ್ವಾಮಿ?


    ಒಟ್ಟಾರೆ ಯಾವುದೇ ಸಾರಿಗೆಯನ್ನು, ವಿಶೇಷವಾಗಿ ತಡರಾತ್ರಿಯಲ್ಲಿ ಬೈಕ್ ಟ್ಯಾಕ್ಸಿಗಳನ್ನು ಬುಕ್ ಮಾಡುವಾಗ ಪ್ರತಿಯೊಬ್ಬರೂ ಅದರಲ್ಲೂ ಮಹಿಳೆಯರು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯ.


    ವಾಹನವನ್ನು ಹತ್ತುತ್ತಿದ್ದಂತೆ ಕುಟುಂಬದವರಿಗೆ ಎಲ್ಲಿಗೆ ಹೋಗುತ್ತಿದ್ದೇನೆ, ಪ್ರಯಾಣದ ವಿವರಗಳು, ಲೈವ್‌ ಲೋಕೆಷನ್‌ ಹೀಗೆ ಇವುಗಳನ್ನೆಲ್ಲಾ ಹಂಚಿಕೊಳ್ಳುವುದು ಅನಾಹುತಗಳನ್ನು ತಡೆಯಲು ಸಹಾಯ ಮಾಡುತ್ತದೆ.


    ಈ ಎಲ್ಲಾ ಸೇವೆಗಳು ನಮ್ಮ ಅನುಕೂಲಕ್ಕೆ ಇದ್ದರೂ ಸಹ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ಕಂಪನಿಗಳು ಸಹ ಗ್ರಾಹಕರ ಭದ್ರತೆ, ಸುರಕ್ಷತೆಯನ್ನು ನಿರ್ಲಕ್ಷ್ಯಿಸದೇ ಚಾಲಕರ, ಸಿಬ್ಬಂದಿಗಳ ನೇಮಕಾತಿಯಲ್ಲಿ ಎಚ್ಚರವಹಿಸಬೇಕು.

    Published by:Gowtham K
    First published: