• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಪಂಜಾಬ್ ಮತ್ತು ಚಂಡೀಗಢ ವಿಶ್ವವಿದ್ಯಾಲಯ ಒಂದೇ ಅಲ್ಲ; ವಿಡಿಯೋ ಸೋರಿಕೆಯಿಂದ ಮತ್ತೆ ಮರುಕಳಿಸಿತು ಹಳೆ ವಿವಾದ

Explained: ಪಂಜಾಬ್ ಮತ್ತು ಚಂಡೀಗಢ ವಿಶ್ವವಿದ್ಯಾಲಯ ಒಂದೇ ಅಲ್ಲ; ವಿಡಿಯೋ ಸೋರಿಕೆಯಿಂದ ಮತ್ತೆ ಮರುಕಳಿಸಿತು ಹಳೆ ವಿವಾದ

ಚಂಡೀಗಢ ವಿಶ್ವವಿದ್ಯಾಲಯ

ಚಂಡೀಗಢ ವಿಶ್ವವಿದ್ಯಾಲಯ

ಚಂಡೀಘಡ ವಿಶ್ವವಿದ್ಯಾನಿಲಯ ಬಾಲಕಿಯರ ವಸತಿ ನಿಲಯಗಳಲ್ಲಿ ಇರುವ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋಗಳನ್ನು ಸಹಪಾಠಿಯೊಬ್ಬಳು ಆನ್ ಲೈನ್ ನಲ್ಲಿ ಸೋರಿಕೆ ಮಾಡಿರುವ ಘಟನೆಗೆ ಪಂಜಾಬ್ ಸೇರಿದಂತೆ, ದೇಶದ ಇತರ ರಾಜ್ಯಗಳಲ್ಲೂ ಭಾರೀ ವಿರೋಧ ವ್ಯಕ್ತವಾಗಿದೆ. ಪಂಜಾಬ್‌ನ ಖಾಸಗಿ ವಿಶ್ವವಿದ್ಯಾನಿಲಯವಾದ ಚಂಡೀಗಢ ವಿಶ್ವವಿದ್ಯಾನಿಲಯದಿಂದ ಆಗಿರುವ ಈ ವಿಡಿಯೋ ಸೋರಿಕೆ ಪ್ರಕರಣವು ಮತ್ತೊಂದು ಸಂದಿಗ್ಧತೆಯನ್ನು ತಂದಿದೆ.

ಮುಂದೆ ಓದಿ ...
  • Share this:

ಪಂಜಾಬ್ ನ (Panjab) ಮೊಹಾಲಿಯಲ್ಲಿರುವ ಚಂಡೀಘಡ ವಿಶ್ವವಿದ್ಯಾನಿಲಯ (Chandigarh University) ಬಾಲಕಿಯರ ವಸತಿ ನಿಲಯಗಳಲ್ಲಿ ಇರುವ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋಗಳನ್ನು ಸಹಪಾಠಿಯೊಬ್ಬಳು ಆನ್ ಲೈನ್ ನಲ್ಲಿ ಸೋರಿಕೆ ಮಾಡಿರುವ ಘಟನೆಗೆ ಪಂಜಾಬ್ ಸೇರಿದಂತೆ, ದೇಶದ ಇತರ ರಾಜ್ಯಗಳಲ್ಲೂ ಭಾರೀ ವಿರೋಧ ವ್ಯಕ್ತವಾಗಿದೆ. ಪಂಜಾಬ್‌ನ ಖಾಸಗಿ ವಿಶ್ವವಿದ್ಯಾನಿಲಯವಾದ (Private University of Punjab) ಚಂಡೀಗಢ ವಿಶ್ವವಿದ್ಯಾನಿಲಯದಿಂದ ಆಗಿರುವ ಈ ವಿಡಿಯೋ ಸೋರಿಕೆ ಪ್ರಕರಣವು ಮತ್ತೊಂದು ಸಂದಿಗ್ಧತೆಯನ್ನು ತಂದಿದೆ. ಈಗ ಚಂಡೀಗಢದ ಕೇಂದ್ರಾಡಳಿತ ಪ್ರದೇಶದಲ್ಲಿ (UT) ಯಲ್ಲಿನ ಸರ್ಕಾರಿ ಪಂಜಾಬ್ ವಿಶ್ವವಿದ್ಯಾಲಯದ (ಪಿಯು) ವಿದ್ಯಾರ್ಥಿಗಳು (Students) ಮತ್ತು ಅಧ್ಯಾಪಕರುಗಳ ಹೆಸರುಗಳ ಬಗ್ಗೆ ಗೊಂದಲ ಉಂಟಾಗಿದೆ. ಈ ವಿಶ್ವವಿದ್ಯಾನಿಲಯದ ಹೆಸರನ್ನು ಚಂಡೀಗಢದ ವಿಶ್ವವಿದ್ಯಾಲಯದ ಹೆಸರೆಂದು ಹಲವರು ಗೊಂದಲಕ್ಕೆ ಒಳಗಾಗಿದ್ದಾರೆ.


ಚಂಡೀಗಢ ಬಿಜೆಪಿ ಸಂಸದ ಕಿರಣ್ ಖೇರ್ ಅವರು ಸೋಮವಾರದಂದು ಟ್ವಿಟರ್‌ನಲ್ಲಿ “ಚಂಡೀಗಢ ವಿಶ್ವವಿದ್ಯಾಲಯವು ಚಂಡೀಗಢದಲ್ಲಿ ಇಲ್ಲ. ಅದು ಇರುವುದು ಪಂಜಾಬ್‌ನಲ್ಲಿ” ಎಂದು ಸ್ಪಷ್ಟೀಕರಣವನ್ನು ನೀಡಿದ್ದಾರೆ. ಅದಕ್ಕೂ ಮುಂಚಿತವಾಗಿಯೇ ಈ ಕೇಂದ್ರಾಡಳಿತ ಪ್ರದೇಶದಲ್ಲಿರುವ ಸರ್ಕಾರಿ ಪಂಜಾಬ್‌ ವಿಶ್ವವಿದ್ಯಾಲಯವು ತನ್ನ ವೆಬ್‌ಸೈಟ್‌ನಲ್ಲಿ ಚಂಡೀಗಢ ವಿಶ್ವವಿದ್ಯಾಲಯಕ್ಕೂ, ನಮ್ಮ ವಿಶ್ವವಿದ್ಯಾಲಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟೀಕರಣವನ್ನು ನೀಡಬೇಕಾಗಿತ್ತು.


ಆದರೆ ವಿಶ್ವವಿದ್ಯಾಲಯ ಆ ಕೆಲಸ ಮಾಡದೇ ಇರುವುದಕ್ಕೆ ಇಂದು ಅಲ್ಲಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಗಳ ಹೆಸರು, ವಿಡಿಯೋ ಸೋರಿಕೆ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ. ಈ ವ್ಯತ್ಯಾಸದಿಂದ ಮಾಧ್ಯಮವೊಂದು ಎರಡೂ ವಿಶ್ವವಿದ್ಯಾಲಯಗಳ ಬಗ್ಗೆ ತುಲನಾತ್ಮಕವಾಗಿ ಹೇಗೆ ಭಿನ್ನವಾಗಿವೆ ಎಂಬುದನ್ನು ವಿವರಿಸುತ್ತದೆ.


ಪಂಜಾಬ್ ವಿಶ್ವವಿದ್ಯಾಲಯ (PU), ಚಂಡೀಗಢ
ಪಂಜಾಬ್ ಮತ್ತು ಹರಿಯಾಣದ ಹಂಚಿಕೆಯ ರಾಜಧಾನಿಯಾದ ಚಂಡೀಗಢದ ಕೇಂದ್ರಾಡಳಿತ ಪ್ರದೇಶದಲ್ಲಿ (UT) ನೆಲೆಗೊಂಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನಿತ ವಿಶ್ವವಿದ್ಯಾಲಯವಾಗಿದೆ.


1882 ರಲ್ಲಿ ಲಾಹೋರ್‌ನಲ್ಲಿ (ಈಗ ಪಾಕಿಸ್ತಾನದಲ್ಲಿದೆ) ಪಂಜಾಬ್ ವಿಶ್ವವಿದ್ಯಾನಿಲಯವಾಗಿ ಸ್ಥಾಪಿತವಾಗಿದೆ. ಲೆ ಕಾರ್ಬ್ಯೂಸಿಯರ್ ಅವರ ಮಾರ್ಗದರ್ಶನದಲ್ಲಿ ಮತ್ತು 1958-1960 ರಲ್ಲಿ ಅದರ ಪ್ರಸ್ತುತ ಸ್ಥಳಕ್ಕೆ ಅಂದರೆ ಚಂಢೀಗಡಕ್ಕೆ ಸ್ಥಳಾಂತರಗೊಂಡಿತು. ಇದು ಚಂಡೀಗಢದಲ್ಲಿ ವಿಭಜನೆಯ ನಂತರ ಹೊಸ ಕ್ಯಾಂಪಸ್ ಆಗಿದೆ. 1966 ರಲ್ಲಿ ಪಂಜಾಬ್‌ನ ಮರುಸಂಘಟನೆಯ ಸಮಯದಲ್ಲಿ, ಸಂಸತ್ತು ಜಾರಿಗೊಳಿಸಿದ ಪಂಜಾಬ್ ಮರುಸಂಘಟನೆ ಕಾಯಿದೆ, 1966 ರ ಸೆಕ್ಷನ್ 72(1) ಅಡಿಯಲ್ಲಿ ಪಂಜಾಬ್ ಯುನಿವರ್ಸಿಟಿಯನ್ನು "ಇಂಟರ್ ಸ್ಟೇಟ್ ಬಾಡಿ ಕಾರ್ಪೊರೇಟ್" ಎಂದು ಘೋಷಿಸಲಾಯಿತು.


ಇದನ್ನೂ ಓದಿ:  Anti-Ragging Regulations: ಕಾಲೇಜುಗಳಲ್ಲಿ ರ‍್ಯಾಗಿಂಗ್ ತಡೆಯಲು ನಿಯಮಾವಳಿ ಮರು-ರೂಪಿಸಿದ ಯುಜಿಸಿ


ಹರಿಯಾಣ ಮತ್ತು ಹಿಮಾಚಲ ಪ್ರದೇಶವು ನಿಧಿ ಹಂಚಿಕೆ ಒಪ್ಪಂದದಿಂದ ಹಿಂತೆಗೆದುಕೊಂಡ ನಂತರ, 1976 ರಿಂದ, ಪಂಜಾಬ್ ಮತ್ತು ಚಂಡೀಗಢ ಆಡಳಿತಗಳು ಕೇಂದ್ರದ ಜೊತೆಗೆ ವಿಶ್ವವಿದ್ಯಾಲಯಕ್ಕೆ ಧನಸಹಾಯ ನೀಡುತ್ತಿವೆ.


ಚಂಡೀಗಢ ವಿಶ್ವವಿದ್ಯಾನಿಲಯ (CU)
ಮತ್ತೊಂದೆಡೆ, ಚಂಡೀಗಢ ವಿಶ್ವವಿದ್ಯಾನಿಲಯ (CU), 2012 ರಲ್ಲಿ ಸ್ಥಾಪಿಸಲಾದ ಒಂದು ದಶಕದ-ಹಳೆಯ ಖಾಸಗಿ ವಿಶ್ವವಿದ್ಯಾನಿಲಯವಾಗಿದೆ. ಅದರ ಕ್ಯಾಂಪಸ್ ಪಂಜಾಬ್‌ನ ಮೊಹಾಲಿ ಜಿಲ್ಲೆಯ ಖರಾರ್ ತೆಹ್ಸಿಲ್‌ನಲ್ಲಿರುವ ಘರುವಾನ್‌ನಲ್ಲಿದೆ. 2001 ರಲ್ಲಿ ಮೊಹಾಲಿಯ ಲ್ಯಾಂಡ್ರಾನ್‌ನಲ್ಲಿ ಚಂಡೀಗಢ ಗ್ರೂಪ್ ಆಫ್ ಕಾಲೇಜ್‌ಗಳನ್ನು (CGC) ಮೊದಲು ಪ್ರಾರಂಭಿಸಿದ ಸಿಖ್ ಉದ್ಯಮಿ-ಕಮ್-ಪರೋಪಕಾರಿ ಸತ್ನಾಮ್ ಸಿಂಗ್ ಸಂಧು ಇದನ್ನು ಸ್ಥಾಪಿಸಿದರು.


ವಿಶ್ವವಿದ್ಯಾಲಯದ ವೆಬ್‌ಸೈಟ್‌ನ ಪ್ರಕಾರ, “ವಿಶ್ವವಿದ್ಯಾಲಯದ ಹೆಸರು ದಿ ಸಿಟಿಯಿಂದ ಪ್ರೇರಿತವಾಗಿದೆ. ಸುಂದರ ಚಂಡೀಗಢವನ್ನು ಸಾಂಸ್ಕೃತಿಕ ಪರಂಪರೆ ಮತ್ತು ನಗರೀಕರಣದ ಸಾರಾಂಶ ಎಂದು ಕರೆಯಲಾಗುತ್ತದೆ” ಎಂದು ಹೇಳಿದೆ.


ಹಾಗಾಗಿ ಪಂಜಾಬ್ ವಿಶ್ವವಿದ್ಯಾಲಯ (PU), ಚಂಡೀಗಢದಲ್ಲಿದ್ದರೆ, ಚಂಡೀಗಢ ವಿಶ್ವವಿದ್ಯಾನಿಲಯ (CU) ಪಂಜಾಬ್‌ನಲ್ಲಿದೆ.


ಚಂಡೀಗಢ ವಿಶ್ವವಿದ್ಯಾಲಯದ ಹೆಸರಿನ ಮೇಲಿರುವ ವಿವಾದ:
ಒಂದು ಶತಮಾನಕ್ಕಿಂತಲೂ ಹಳೆಯದಾದ ಪ್ರತಿಷ್ಠಿತ ಸರ್ಕಾರಿ ಸಂಸ್ಥೆಯಾದ ಪಂಜಾಬ್ ವಿಶ್ವವಿದ್ಯಾಲಯ (PU)ಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಈ ಹೆಸರಿನಿಂದ ಗೊಂದಲ ಉಂಟಾಗಲು ಆರಂಭವಾಯಿತು. ಆಗಿನಿಂದಲೇ ಈ ಸಮಸ್ಯೆ ಪ್ರಾರಂಭವಾಯಿತು. ಪಂಜಾಬ್‌ನ ಖಾಸಗಿ ವಿಶ್ವವಿದ್ಯಾನಿಲಯವು ತನ್ನ ಹೆಸರಿನಲ್ಲಿ "ಚಂಡೀಗಢ" ಅನ್ನು ಬಳಸುತ್ತಿದೆ ಎಂದು ಈ ಸರ್ಕಾರಿ ಸಂಸ್ಥೆಯು ಅರಿತುಕೊಂಡಿತು.


ಈ ವಿಷಯವನ್ನು ಪರಿಶೀಲಿಸಲು ಪಿಯು ಸಮಿತಿಯನ್ನು ರಚಿಸಿತು. ಆದರೆ ಅಂತಿಮವಾಗಿ ವಿಷಯವು ತಾರ್ಕಿಕ ತೀರ್ಮಾನವನ್ನು ತಲುಪಲಿಲ್ಲ. ಸಮಿತಿಯ ಸದಸ್ಯರು, 2019 ರಲ್ಲಿ ನಡೆದ ಸಭೆಯ ನಂತರ, ಯಾವುದೇ ಸಲಹೆಗಳೊಂದಿಗೆ ಪಂಜಾಬ್ ಸರ್ಕಾರ ಮತ್ತು ಯುಟಿ ಆಡಳಿತಕ್ಕೆ ಪತ್ರ ಬರೆಯುವ ಮೊದಲು ಈ ವಿಷಯದ ಬಗ್ಗೆ ಕಾನೂನು ಅಭಿಪ್ರಾಯವನ್ನು ಪಡೆಯಬೇಕು ಎಂದು ನಿರ್ಧರಿಸಿದ್ದರು. ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದ ಪಿಯು ಇತಿಹಾಸ ವಿಭಾಗದ ಪ್ರಾಧ್ಯಾಪಕ ಎಂ.ರಾಜೀವ್ ಲೋಚನ್ ಅವರು “ಲಾಂಛನಗಳು ಮತ್ತು ಹೆಸರುಗಳ ಅಸಮರ್ಪಕ ಬಳಕೆ ತಡೆಗಟ್ಟುವಿಕೆ ಕಾಯಿದೆ, 1950, ರ ಪ್ರಕಾರ ನಾವು ರಾಜ್ಯಗಳು/ಯುಟಿಗಳ ಹೆಸರನ್ನು ಖಾಸಗಿಯಾಗಿ ಬಳಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ” ಎಂದು ಹೇಳಿದರು.


ಇದನ್ನೂ ಓದಿ:  ‌IGNOU: ವಿಶ್ವವಿದ್ಯಾಲಯದ ಪ್ರವೇಶಾತಿ ಮತ್ತು ಮರು ನೋಂದಣಿ ಗಡುವು ಸೆಪ್ಟೆಂಬರ್‌ 25ರವರೆಗೆ ವಿಸ್ತರಣೆ


ಅಧಿಕಾರಿಗಳ ಅನುಮತಿಯಿಲ್ಲದೆ ಒಂದು ವಿಶ್ವವಿದ್ಯಾಲಯದ ಹೆಸರನ್ನು ಬಳಕೆ ಮಾಡಿದೆ ಎಂದು ಪಿಯು ವಿಶ್ವವಿದ್ಯಾಲಯವು ಚಂಡೀಗಢ ವಿಶ್ವವಿದ್ಯಾಲಯದ ಮೇಲೆ ಆರೋಪ ಮಾಡಿದೆ. ಅಲ್ಲದೆ, ಚಂಡೀಗಢ ವಿಶ್ವವಿದ್ಯಾನಿಲಯದ ನಾಮಕರಣವು ಅನೇಕ ಹಂತಗಳಲ್ಲಿ, ವಿಶೇಷವಾಗಿ ಪ್ರವೇಶದ ಸಮಯದಲ್ಲಿ ಪಿಯುನ ಬ್ರ್ಯಾಂಡ್ ಇಮೇಜ್‌ ಮೇಲೆ ಹಾನಿ ಮಾಡುತ್ತಿರುವ ಕಾರಣ ನಾವು ಈ ಸಮಸ್ಯೆಯನ್ನು ಮುನ್ನೆಲೆಯ ಚರ್ಚೆಗೆ ತಂದಿದಿರುವುದಾಗಿ ಪಂಜಾಬ್ ವಿವಿ ಹೇಳಿದೆ. ವಿದ್ಯಾರ್ಥಿಗಳು ಚಂಡೀಗಢ್ ವಿವಿಯ ಪ್ರವೇಶ ನಮೂನೆಗಳನ್ನು ಭರ್ತಿ ಮಾಡಿ ಪಿಯುಗೆ ಬರುತ್ತಿದ್ದಾರೆ. ಇಲ್ಲಿ ಬಂದು ನೋಡಿದರೆ ಅವರ ಪ್ರವೇಶಾತಿ ಅರ್ಜಿಗಳು ಪಟ್ಟಿಯಲ್ಲಿ ಇರುವುದಿಲ್ಲ. ಹಾಗಾಗಿ ಇಷ್ಟೆಲ್ಲ ಸಮಸ್ಯೆಗಳು ಎದುರಾಗುತ್ತಿವೆ ಎಂದು ಪಂಜಾಬ್ ವಿವಿ ಹೇಳಿದೆ.


ಪಂಜಾಬ್ ವಿಶ್ವವಿದ್ಯಾಲಯ (PU)ದ ಸ್ಪಷ್ಟೀಕರಣ
ಎರಡೂ ವಿಶ್ವವಿದ್ಯಾನಿಲಯಗಳ ನಡುವಿನ ಹೆಸರುಗಳ ಗೊಂದಲವಿರುವ ಕಾರಣ ಪಿಯು ತನ್ನ ವೆಬ್‌ಸೈಟ್‌ನಲ್ಲಿ “ಯಾವುದೇ ರೀತಿಯಲ್ಲಿ ಚಂಡೀಗಢ್ ವಿವಿಯೂ ಪಂಜಾಬ್‌ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿಲ್ಲ ಎಂದು ಸ್ಪಷ್ಟೀಕರಣವನ್ನು ನೀಡಲೇಬೇಕಾಗಿದೆ” ಎಂದು ಪಂಜಾಬ್ ವಿವಿ ಹೇಳಿದೆ. ಈ ಮಧ್ಯೆ, "ಪಂಜಾಬ್ ವಿಶ್ವವಿದ್ಯಾನಿಲಯ ಅಥವಾ ಪ್ರವೇಶಾತಿಯ ಯಾವುದೇ ಅಧಿಕಾರಿಯು ನಿರೀಕ್ಷಿತ ಅಭ್ಯರ್ಥಿಗೆ ಪಂಜಾಬ್‌ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯಲು ಅಥವಾ ಪ್ರವೇಶ ಶುಲ್ಕ ಇತ್ಯಾದಿಗಳನ್ನು ಸಲ್ಲಿಸಲು ಯಾವುದೇ ರೀತಿಯ ಸಂಪರ್ಕ ಮಾಡುತ್ತಿಲ್ಲ” ಎಂದು ಪಿಯು ವೆಬ್‌ಸೈಟ್‌ನಲ್ಲಿ ಸ್ಪಷ್ಟೀಕರಣವನ್ನು ನೀಡುತ್ತಿದೆ.


ವಿಡಿಯೋ ಸೋರಿಕೆ ಪ್ರಕರಣ ವಿವಾದ
ಚಂಡೀಗಢ ವಿಶ್ವವಿದ್ಯಾನಿಲಯದ ಬದಲಿಗೆ ಪಂಜಾಬ್‌ ವಿಶ್ವವಿದ್ಯಾಲಯದಲ್ಲಿ ಇತ್ತೀಚಿನ ವೀಡಿಯೊ ಸೋರಿಕೆ ಘಟನೆ ನಡೆದಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ಕಮೆಂಟ್‌ ಮಾಡಿದ ನಂತರ ಈ ಸಮಸ್ಯೆ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಚಂಡೀಗಢ ವಿಶ್ವವಿದ್ಯಾನಿಲಯವು ಅದರ ಹೆಸರಿನಲ್ಲಿ "ಚಂಡೀಗಢ್" ಅನ್ನು ಹೊಂದಿರುವುದರಿಂದ ಅದು ಸರ್ಕಾರದಿಂದ ನಡೆಸಲ್ಪಡುವ ಸಂಸ್ಥೆಯಾಗಿದೆ ಎಂದು ಊಹಿಸಿದ್ದಾರೆ.


ಚಂಡೀಗಢ ಬಿಜೆಪಿ ಸಂಸದ ಕಿರಣ್ ಖೇರ್ ಸೋಮವಾರದಂದು “ಚಂಡೀಗಢ ವಿಶ್ವವಿದ್ಯಾಲಯದಲ್ಲಿ ನಡೆದ ವಿಡಿಯೋ ಸೋರಿಕೆಯಂತಹ ಘೋರ ಘಟನೆಯಿಂದ ನಾನು ನೈತಿಕವಾಗಿ ಆಘಾತಕ್ಕೊಳಗಾಗಿದ್ದೇನೆ. ಈ ಸಂಸ್ಥೆಯಿಂದ ನನ್ನ ನಗರದ ಹೆಸರು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಈ ಪ್ರಕರಣ ನಡೆದ ಚಂಡೀಗಢ ವಿಶ್ವವಿದ್ಯಾಲಯವು ಪಂಜಾಬ್‌ನ ಖರಾರ್‌ನಲ್ಲಿ ಇದೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ಟ್ವೀಟರ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ.


ಪಿಯು ಶಿಕ್ಷಕರ ಸಂಘದ ಅಧ್ಯಕ್ಷ ಮೃತುಂಜಯ್ ಕುಮಾರ್ ಮಾತನಾಡಿ, ಪಂಜಾಬ್‌ನಲ್ಲಿ ಖಾಸಗಿ ವಿಶ್ವವಿದ್ಯಾನಿಲಯವು ಚಂಡೀಗಢದ ಹೆಸರನ್ನು ಹೇಗೆ ಬಳಸುತ್ತಿದೆ ಎಂಬುದನ್ನು ಪರಿಶೀಲಿಸುವುದು ಯುಟಿ ಆಡಳಿತದ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ. ಈ ಸಮಸ್ಯೆಯು ಸಾರ್ವಜನಿಕ ಅಭಿಪ್ರಾಯ, ಪಂಜಾಬ್‌ ವಿಶ್ವವಿದ್ಯಾಲಯಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಪಿಯು ಬಗ್ಗೆ ನಕಾರಾತ್ಮಕ ವಿಚಾರಗಳು ಬರುವಂತೆ ಮಾಡಿದೆ. ಇದರ ಜೊತೆಗೆ ಈ ವಿಡಿಯೋ ಸೋರಿಕೆ ಪ್ರಕರಣ ನಡೆದ ದಿನದಿಂದ ಮತ್ತಷ್ಟು ಗೊಂದಲವನ್ನು ಸೃಷ್ಟಿಸಿದೆ.


ಈ ಹಿಂದೆ ಹೆಸರಿನ ಸಮಸ್ಯೆಯನ್ನು ಪರಿಶೀಲಿಸಲು ಪಿಯು ಸಮಿತಿಯನ್ನು ರಚಿಸಿತ್ತು, ಆದರೆ ಫಲಿತಾಂಶವನ್ನು ಎಂದಿಗೂ ಸಾರ್ವಜನಿಕಗೊಳಿಸಲಾಗಿಲ್ಲ. ಇತ್ತೀಚಿಗೆ ನಡೆದ ವಿಡಿಯೋ ಸೋರಿಕೆ ಪ್ರಕರಣದ ನಂತರ, ಹೆಚ್ಚಿನ ಜನರು ಇದು ಪಿಯುನಲ್ಲಿ ನಡೆದಿದೆ ಎಂದು ಊಹಿಸುತ್ತಿದ್ದಾರೆ.


ಅಧಿಕಾರಿಗಳು ಏನ್‌ ಹೇಳ್ತಾರೆ?
"ಚಂಡೀಗಢ ವಿಶ್ವವಿದ್ಯಾನಿಲಯದ ಹೆಸರು ಮಾತ್ರ ಗೊಂದಲಕ್ಕೆ ಕಾರಣವಾಗುತ್ತಿಲ್ಲ. ಈ ಹೆಸರಿನಿಂದ ಪಿಯು ನ ಅಭಿಮಾನ ಮತ್ತು ಖ್ಯಾತಿಯ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ. ಈ ವಿಡಿಯೋ ಸೋರಿಕೆ ಪ್ರಕರಣ ನಡೆದ ಮೇಲಂತೂ ನಮ್ಮ ಪಿಯು ನಲ್ಲಿಯೇ ಈ ಘಟನೆ ನಡೆದಿದೆ ಎಂದು ಅನೇಕರು ತಿಳಿದಿದ್ದಾರೆ. ಇದು ತಪ್ಪು ಕಲ್ಪನೆ” ಎಂದು ಪಿಯು ಚಂಡೀಗಢದ ರಿಜಿಸ್ಟ್ರಾರ್ ಯಜ್ವೇಂದರ್ ಪಾಲ್ ವರ್ಮಾ ಹೇಳಿದ್ದಾರೆ.


ಇದನ್ನೂ ಓದಿ:  Real Hero: ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಸರೆಯಾದ ಸ್ಕಾಲರ್‌ಶಿಪ್ ಮಾಸ್ಟರ್! ನಿವೃತ್ತ ಶಿಕ್ಷಕರ ಸಾಧನೆ ಕಥೆ ಇಲ್ಲಿದೆ ಓದಿ


"ನಾನು ಇತ್ತೀಚೆಗಷ್ಟೇ ರಿಜಿಸ್ಟ್ರಾರ್ ಆಗಿ ಸೇರ್ಪಡೆಗೊಂಡಿದ್ದರಿಂದ ಸಮಿತಿಯ ಫಲಿತಾಂಶಗಳ ಸ್ಥಿತಿಯನ್ನು ನಾನು ಪರಿಶೀಲಿಸಬೇಕಾಗಿದೆ, ಆದರೆ CU ನಿಂದ ಬಳಸಲಾಗುತ್ತಿರುವ ಇಲಾಖೆಗಳು ಮತ್ತು ಇತರ ಪರಿಭಾಷೆಗಳು ಸಹ ಬಹಳಷ್ಟು ಗೊಂದಲವನ್ನು ಉಂಟುಮಾಡುತ್ತಿವೆ. ಸಿಯುನಲ್ಲಿ ನಡೆದ ಇತ್ತೀಚಿನ ವಿಡಿಯೋ ಸೋರಿಕೆ ಘಟನೆಯ ನಂತರ, ಇದು ನಮಗೆ ಮತ್ತೆ ಸಮಸ್ಯೆಯಾಗಿದೆ ”ಎಂದು ರಿಜಿಸ್ಟ್ರಾರ್ ಹೇಳಿದರು. “ಆದರೆ ಪಂಜಾಬ್ ಶಾಸಕಾಂಗವು ಈ ಹೆಸರಿಗೆ ಅನುಮೋದನೆ ನೀಡಿರುವುದರಿಂದ, ಇದನ್ನು ವಿರೋಧಿಸಲು ಪಿಯು ಕಾನೂನುಬದ್ಧವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ. ಸಮಿತಿಯ ಸದಸ್ಯರು ಕಾಳಜಿ ತೋರಿದ್ದರೂ ಪ್ರಾಯೋಗಿಕ ನಿರ್ದೇಶನಗಳನ್ನು ನೀಡಿಲ್ಲ.


ನಂತರ ಖಾಸಗಿ ವಿಶ್ವವಿದ್ಯಾನಿಲಯಗಳು ರಾಜಕೀಯ ಪಕ್ಷಗಳಿಂದ ದೊಡ್ಡ ಪ್ರೋತ್ಸಾಹವನ್ನು ಪಡೆದಿವೆ. ಪ್ರಗತಿಪರವಾಗಿ ದುರ್ಬಲಗೊಂಡ ಪಿಯು ವ್ಯವಸ್ಥೆಯಿಂದ ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಪ್ರಶ್ನಿಸಲಾಗುವುದಿಲ್ಲ. ಪಂಜಾಬ್‌ನ ಚಂಡೀಗಢ ವಿಶ್ವವಿದ್ಯಾನಿಲಯವು ಚಂಡೀಗಢದ ಪಂಜಾಬ್ ವಿಶ್ವವಿದ್ಯಾನಿಲಯದೊಂದಿಗೆ ಗೊಂದಲಕ್ಕೊಳಗಾಗುತ್ತದೆ ಎಂಬ ಭಾವನೆಯನ್ನು CU ಸೃಷ್ಟಿಸುತ್ತದೆ.


ಪಂಜಾಬ್ ವಿಶ್ವವಿದ್ಯಾಲಯವು ಚಂಡೀಗಢದಲ್ಲಿ ಇರಬಹುದಾದರೆ, ಪಂಜಾಬ್‌ನಲ್ಲಿ ಚಂಡೀಗಢ ವಿಶ್ವವಿದ್ಯಾಲಯ ಇರಲು ಏಕೆ ಸಾಧ್ಯವಿಲ್ಲ?
"ರಾಷ್ಟ್ರೀಯವಾಗಿ ಮಹತ್ವದ ಸಂಸ್ಥೆಯಾಗಿರುವ ಪಿಯು ಹಿತಾಸಕ್ತಿಗಳು, ಸಿಯು ಖ್ಯಾತಿಯನ್ನು ನಿರ್ಮಿಸುವಾಗ ರಾಜಿಯಾಗದಂತೆ ನೋಡಿಕೊಳ್ಳಬೇಕಾದ ಸಿಯು ನಿರ್ವಹಣೆಯ ನೈತಿಕತೆಯ ಬಗ್ಗೆಯೂ ಪ್ರಶ್ನೆ ಇದೆ” ಎಂದು ಪಿಯು ಮಾಜಿ ಉಪಕುಲಪತಿ ಅರುಣ್ ಗ್ರೋವರ್ ತಮ್ಮ ಅಧಿಕಾರವಧಿಯಲ್ಲಿ ಈ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು.


ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿದ ನಂತರ ತಮ್ಮ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಎಂದು ಚಂಡೀಗಢ ವಿಶ್ವವಿದ್ಯಾಲಯದ ಪ್ರೊ-ಚಾನ್ಸಲರ್ ಆರ್‌ಎಸ್ ಬಾವಾ ಹೇಳಿದ್ದಾರೆ.


ಇದನ್ನೂ ಓದಿ:   Explained: ಅಮೆರಿಕಾದಲ್ಲಿ ಕ್ರಿಶ್ಚಿಯನ್ನರ ಜನಸಂಖ್ಯೆ 50% ಕ್ಕಿಂತ ಕಡಿಮೆಯಾಗಲಿದೆಯಂತೆ!


“ಚಂಡೀಗಢ ವಿಶ್ವವಿದ್ಯಾಲಯ ಕಾಯಿದೆ, 2012 ಅನ್ನು ಪಂಜಾಬ್ ಸರ್ಕಾರವು ಸೂಕ್ತವಾಗಿ ಜಾರಿಗೊಳಿಸಿದೆ. ಪಂಜಾಬ್ ವಿಶ್ವವಿದ್ಯಾಲಯವು ಚಂಡೀಗಢದಲ್ಲಿ ಇರಬಹುದಾದರೆ, ಪಂಜಾಬ್‌ನಲ್ಲಿ ಚಂಡೀಗಢ ವಿಶ್ವವಿದ್ಯಾಲಯ ಇರಲು ಏಕೆ ಸಾಧ್ಯವಿಲ್ಲ?” ಎಂದು ಪ್ರೋ-ಚಾನ್ಸಲರ್‌ ಪ್ರಶ್ನಿಸಿದ್ದಾರೆ.

Published by:Ashwini Prabhu
First published: