• Home
 • »
 • News
 • »
 • explained
 • »
 • Elephant: ಏನಿದು ಪಿಟಿ-7 ಆನೆ? ಕಾಡಾನೆಗಳಿಗೆ ಏಕೆ ಕೋಡ್ ನೇಮ್ ಕೊಡುತ್ತಾರೆ?

Elephant: ಏನಿದು ಪಿಟಿ-7 ಆನೆ? ಕಾಡಾನೆಗಳಿಗೆ ಏಕೆ ಕೋಡ್ ನೇಮ್ ಕೊಡುತ್ತಾರೆ?

ಸೆರೆಸಿಕ್ಕ ಪಿಟಿ-7 ಆನೆ

ಸೆರೆಸಿಕ್ಕ ಪಿಟಿ-7 ಆನೆ

ಆನೆಗಳ (Elephant) ಹೆಸರುಗಳನ್ನು ಸಹ ಆಯಾ ಪ್ರದೇಶಗಳ ಹೆಸರಿನೊಂದಿಗೆ ಸಂಖ್ಯೆಯೊಂದನ್ನು ಸೇರಿಸಿ ಇರಿಸಿರುತ್ತಾರೆ. ಉದಾಹರಣೆಗೆ ಕೇರಳದ (Kerala) ಪಾಲಕ್ಕಾಡ್ (Palakkad) ಪ್ರದೇಶದಲ್ಲಿರುವ ಆನೆ ಆಗಿತ್ತು ಎಂದರೆ ಅದನ್ನು ಪಿಟಿ ಅಂತ ಅದರ ಮುಂದೆ ಒಂದು ಸಂಖ್ಯೆಯನ್ನು ಸೇರಿಸಿರುತ್ತಾರೆ.

ಮುಂದೆ ಓದಿ ...
 • Trending Desk
 • Last Updated :
 • Kerala, India
 • Share this:

  ಸಾಮಾನ್ಯವಾಗಿ ಈ ಅರಣ್ಯ ಪ್ರದೇಶದಲ್ಲಿರುವ (Forest Area) ಕಾಡಾನೆಗಳನ್ನು ಮತ್ತು ಇತರೆ ಕಾಡು ಪ್ರಾಣಿಗಳನ್ನು (Wild Animals) ಹಿಡಿಯಲು ಅರಣ್ಯ ಇಲಾಖೆಯವರು ಅವುಗಳ ಹೆಸರುಗಳನ್ನು ಸ್ವಲ್ಪ ವಿಭಿನ್ನವಾಗಿ ಇರಿಸಿರುತ್ತಾರೆ ಅಂತ ಬಹುತೇಕರಿಗೆ ಗೊತ್ತಿರುವುದಿಲ್ಲ. ಹೌದು, ಆನೆಗಳ (Elephant) ಹೆಸರುಗಳನ್ನು ಸಹ ಆಯಾ ಪ್ರದೇಶಗಳ ಹೆಸರಿನೊಂದಿಗೆ ಸಂಖ್ಯೆಯೊಂದನ್ನು ಸೇರಿಸಿ ಇರಿಸಿರುತ್ತಾರೆ. ಉದಾಹರಣೆಗೆ ಕೇರಳದ (Kerala) ಪಾಲಕ್ಕಾಡ್ (Palakkad) ಪ್ರದೇಶದಲ್ಲಿರುವ ಆನೆ ಆಗಿತ್ತು ಎಂದರೆ ಅದನ್ನು ಪಿಟಿ ಅಂತ ಅದರ ಮುಂದೆ ಒಂದು ಸಂಖ್ಯೆಯನ್ನು ಸೇರಿಸಿರುತ್ತಾರೆ. ಈ ಆನೆಗಳ ಬಗ್ಗೆ ಇಷ್ಟೆಲ್ಲಾ ಮಾಹಿತಿ ಏಕೆ ಕೊಡುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು. ವಿಷಯ ಏನು ಅಂದ್ರೆ ಈ ಆನೆಗಳ ಮತ್ತು ಮನುಷ್ಯರ ನಡುವಿನ ಸಂಘರ್ಷ ನಿನ್ನೆ ಮೊನ್ನೆಯದಲ್ಲ ಬಿಡಿ. ತುಂಬಾ ಹಿಂದೆಯಿಂದಲೂ ಸಹ ಆನೆಗಳು ನಾಡಿಗೆ ನುಗ್ಗಿ ಜನರ ಜೀವನವನ್ನು ಹಾನಿ ಮಾಡಿರುವುದರ ಅನೇಕ ಉದಾಹರಣೆಗಳಿವೆ. ಕಳೆದ ಎರಡು ವರ್ಷಗಳಿಂದ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ತುಂಬಾನೇ ವಿನಾಶವನ್ನು ಉಂಟು ಮಾಡುತ್ತಿದ್ದ ಒಂದು ಕಾಡಾನೆಯ ಬಗ್ಗೆ ನೀವೆಲ್ಲಾ ಕೇಳಿರುತ್ತೀರಿ, ಅದನ್ನು ಭಾನುವಾರ ಎಂದರೆ ಜನವರಿ 22 ರಂದು ಬೆಳಿಗ್ಗೆ ಅರಣ್ಯ ಇಲಾಖೆಯವರು ಶಾಂತಗೊಳಿಸಿದ್ದಾರೆ.


  ಏನಿದು ಪಿಟಿ 7 ಅಂದ್ರೆ?


  ಪಾಲಕ್ಕಾಡ್ ಟಸ್ಕರ್ -7 (ಪಿಟಿ 7) ಎಂಬ ಕೋಡ್ ಹೆಸರಿನ ಆನೆ ಧೋನಿ ಮತ್ತು ಜಿಲ್ಲೆಗಳ ನೆರೆಯ ಹಳ್ಳಿಗಳ ಸುತ್ತಮುತ್ತಲಿರುವ ಕಾಡಿನೊಳಗೆ ತಿರುಗಾಡುತ್ತಿತ್ತು. ಶನಿವಾರ ಬೆಳಿಗ್ಗೆ, 26 ಅರಣ್ಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಂಪೂರ್ಣ ಸುಸಜ್ಜಿತ ತಂಡವು ಪಾಲಕ್ಕಾಡ್ ಬಳಿಯ ಕಾಡಿಗೆ ಪ್ರವೇಶಿಸಿ ಈ ರಾಕ್ಷಸ ಆನೆಯನ್ನು ತಟಸ್ಥಗೊಳಿಸಿದರು. ಮುಖ್ಯ ಪಶುವೈದ್ಯಾಧಿಕಾರಿ ಅರುಣ್ ಝಕಾರಿಯಾ ನೇತೃತ್ವದ ತಂಡವು ಅದನ್ನು ವಯನಾಡ್ ಆನೆ ಶಿಬಿರಕ್ಕೆ ಸ್ಥಳಾಂತರಿಸಬೇಕಾಗಿತ್ತು.


  ಆತಂಕದ ಮೂಡಿಸಿದ್ದ ಆನೆ


  ಕಳೆದ ಎರಡು ವರ್ಷಗಳಿಂದ, ಪಿಟಿ 7 ಕೇರಳದ ಜನರಲ್ಲಿ ತುಂಬಾನೇ ಆತಂಕ ಮೂಡಿಸಿತ್ತು ಅಂತ ಹೇಳಬಹುದು. ಅದರಲ್ಲೂ ಮಧ್ಯ ಕೇರಳದಾದ್ಯಂತ, ವಿಶೇಷವಾಗಿ ಪಾಲಕ್ಕಾಡ್ ಮತ್ತು ಇಡುಕ್ಕಿ ಜಿಲ್ಲೆಗಳಾದ್ಯಂತ ಕೃಷಿಭೂಮಿ ಮತ್ತು ವಸತಿ ಪ್ರದೇಶಗಳ ಮೇಲೆ ಆಗಾಗ್ಗೆ ದಾಳಿ ನಡೆಸಿದ ಘಟನೆಗಳೂ ಇವೆ. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈ ಪ್ರದೇಶದಲ್ಲಿ ಸುಮಾರು 90 ಪ್ರತಿಶತದಷ್ಟು ಆನೆ ಸಂಘರ್ಷಕ್ಕೆ ಇದು ಕಾರಣವಾಗಿದೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.


  ಇದನ್ನೂ ಓದಿ: Brain Mapping Test: ಬೆಂಗಳೂರಿಗೆ ಬಂತು ಬ್ರೇನ್ ಮ್ಯಾಪಿಂಗ್ ಟೆಸ್ಟ್! ಅಪರಾಧಿಗಳಿಗೆ ಸಿಂಹಸ್ವಪ್ನವೇ ಈ ಹೊಸ ತಂತ್ರಜ್ಞಾನ?


  ಅರಣ್ಯ ಅಧಿಕಾರಿಗಳು ಕುಮ್ಕಿ ಆನೆ ಅಂದರೆ ತಮ್ಮ ಕಾಡು ಸಹವರ್ತಿಗಳನ್ನು ಬಲೆಗೆ ಬೀಳಿಸಲು ಮತ್ತು ತರಬೇತಿ ನೀಡಲು ಬಳಸುವ ಆನೆಗಳನ್ನು ಕರೆತಂದು ರಾಕ್ಷಸ ಜಂಬೋವನ್ನು ಜಿಲ್ಲೆಯ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಟ್ರಕ್ ಹತ್ತಿಸುವಲ್ಲಿ ಯಶಸ್ವಿಯಾದರು ಅಂತ ಹೇಳಬಹುದು.


  ಆನೆ ಸ್ಥಳಾಂತರದ ಬಗ್ಗೆ ಅರಣ್ಯ ಸಚಿವರು ಹೇಳಿದ್ದೇನು?


  ಮುಂದೆ ಈ ಆನೆಯನ್ನು ಬೋನಿಗೆ ಸ್ಥಳಾಂತರಿಸಲಾಗುವುದು ಎಂದು ಕೇರಳ ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.


  ಧೋನಿ ಬಳಿ ಸ್ಥಾಪಿಸಲಾದ ಬೋನಿನಲ್ಲಿ ಅರಣ್ಯ ಇಲಾಖೆ, ಆನೆಯ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅದರ ಪುನರ್ವಸತಿಗೆ ಸಂಬಂಧಿಸಿದಂತೆ ಮುಂದಿನ ಕ್ರಮ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. "ಆನೆಯನ್ನು ಪಳಗಿಸಲು ಕನಿಷ್ಠ ಆರು ತಿಂಗಳು ಬೇಕಾಗಬಹುದು. ನಾವು ಪ್ರಾಣಿಗಳಿಗೆ ಸರಿಯಾದ ಆಹಾರವನ್ನು ಸಿದ್ಧಪಡಿಸಬೇಕು ಮತ್ತು ಅದಕ್ಕೆ ತರಬೇತಿ ನೀಡಬೇಕು" ಎಂದು ಶಶೀಂದ್ರನ್ ಹೇಳಿದರು.


  ಪಿಟಿ 7 ಆನೆ ಮಾಡಿದ ಅವಾಂತರಗಳು ಒಂದೆರಡಲ್ಲ..


  ಕಳೆದ ಎರಡು ವರ್ಷಗಳಿಂದ ಪಿಟಿ 7 ಆನೆ ಕೇರಳದ ಜನರನ್ನು ತುಂಬಾನೇ ಭಯಭೀತಗೊಳಿಸಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಸ್ಥಳೀಯ ವರದಿಗಳು, ಈ ವಯಸ್ಕ ಗಂಡು ಆನೆ 500 ಕ್ಕೂ ಹೆಚ್ಚು ಘಟನೆಗಳಿಗೆ ಕಾರಣವಾಗಿದೆ ಎಂದು ಹೇಳಿದರೆ, 2022 ರಲ್ಲಿ ಅರಣ್ಯ ಇಲಾಖೆಯ ಅಧಿಕೃತ ವರದಿಯು ಈ ಆನೆ 176 ಬೆಳೆ ದಾಳಿಗಳು ಮತ್ತು 13 ಆಸ್ತಿ ಹಾನಿಯ ಘಟನೆಗಳಲ್ಲಿ ಭಾಗಿಯಾಗಿದೆ ಎಂದು ಹೇಳಿದೆ. ಕಾಡಿನ ಹೊರಗೆ, ಜನನಿಬಿಡ ಮಾನವ ವಸಾಹತುಗಳ ಬಳಿ ಗಮನಾರ್ಹ ಸಮಯವನ್ನು ಕಳೆಯುವ ಪಿಟಿ 7 ಆಗಾಗ್ಗೆ ಮಾನವರೊಂದಿಗೆ ಸಂಪರ್ಕಕ್ಕೆ ಬಂದಿದ್ದು, ಇದು ಅವರ ಜೀವಕ್ಕೂ ಸಹ ತುಂಬಾನೇ ಗಂಭೀರ ಬೆದರಿಕೆಯನ್ನು ಸಹ ಒಡ್ಡಿದೆ.


  ಮನುಷ್ಯರ ಮೇಲೆ ವಿಪರೀತ ಕೋಪ!


  ಕಳೆದ ಕೆಲವು ತಿಂಗಳುಗಳಲ್ಲಿ, ಆನೆ ಹೆಚ್ಚು ಹಿಂಸಾತ್ಮಕವಾಗಿದೆ, ಆಗಾಗ್ಗೆ ಮನುಷ್ಯರು ಮತ್ತು ಅವರ ಕಾರುಗಳನ್ನು ಬೆನ್ನಟ್ಟುವುದು ಮತ್ತು ಅವರ ಮೇಲೆ ದಾಳಿ ಮಾಡಿರುವ ಘಟನೆಗಳು ಸಹ ನಡೆದಿವೆ ಅಂತ ಹೇಳಬಹುದು. ಅರಣ್ಯ ಇಲಾಖೆಯ ಪ್ರಕಾರ, ಕಳೆದ ಎರಡು ತಿಂಗಳುಗಳಲ್ಲಿ ಆನೆಯ ಹೆಚ್ಚಿದ ಆಕ್ರಮಣಶೀಲತೆಗೆ ಆನೆಯು ಮಶ್ ನ ಚಿಹ್ನೆಗಳನ್ನು ತೋರಿಸುವುದು ಕಾರಣವಾಗಿರಬಹುದು. ಆಗಾಗ್ಗೆ ಮಿಲನದ ಋತುವಿನಲ್ಲಿ ಗೂಳಿ ಆನೆಗಳು ಆಕ್ರಮಣಕಾರಿಯಾಗುವ ಆವರ್ತಕ ಸ್ಥಿತಿ ಇದಾಗಿದೆ.


  ನವೆಂಬರ್ 24, 2022 ರಂದು ಪಾಲಕ್ಕಾಡ್ ನ ಧೋನಿಯ ರಬ್ಬರ್ ಟ್ಯಾಪರ್ ನಲ್ಲಿ ಆನೆ ಮಾಡಿದ ಅವಾಂತರ ನೋಡಿ ಅದನ್ನು ಹಿಡಿದು ನಂತರ ಮುಖ್ಯ ವನ್ಯಜೀವಿ ವಾರ್ಡನ್ ಗಂಗಾ ಸಿಂಗ್ ಪಿಟಿ 7 ಅನ್ನು ಸ್ಥಳಾಂತರಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ಆನ್ಲೈನ್ ನಲ್ಲಿ ವರದಿ ಮಾಡಿದೆ. ಆ ಘಟನೆಯಲ್ಲಿ ವ್ಯಕ್ತಿಯೊಬ್ಬ ಆನೆಯ ಭಯಕ್ಕೆ ಓಡಿ ಹೋಗುವಾಗ ಕಾಲು ಜಾರಿ ಕೆಳಕ್ಕೆ ಬಿದ್ದನು, ಈ ಘಟನೆಯಲ್ಲಿ ಅವನ ಕೈ ಮುರಿಯಿತು. ಈ ಘಟನೆಯು ಜಿಲ್ಲೆಯಲ್ಲಿ ಸಾರ್ವಜನಿಕ ಪ್ರತಿಭಟನೆಗೆ ಕಾರಣವಾಯಿತು. ಜುಲೈನಲ್ಲಿ, ಇದೇ ಗ್ರಾಮದಲ್ಲಿ, ಪಿಟಿ 7 ಆನೆ 60 ವರ್ಷದ ಒಬ್ಬನನ್ನು ಬೆಳಿಗ್ಗೆ ವಾಕಿಂಗ್ ಮಾಡುವಾಗ ತುಳಿದು ಕೊಂದಿದೆ ಎಂದು ಆರೋಪಿಸಲಾಗಿದೆ. ಆದಾಗ್ಯೂ, ಇದಕ್ಕೆ ಕಾರಣವಾದ ಆನೆಯನ್ನು ಗುರುತಿಸಲು ಅರಣ್ಯ ಇಲಾಖೆ ವಿಫಲವಾಗಿತ್ತು.
  ಈ ಆನೆಯನ್ನು ಸೆರೆಹಿಡಿಯುವುದು ಮತ್ತು ಸಾಗಿಸುವುದು ಸುಲಭವಲ್ಲ


  ಸಂಪೂರ್ಣವಾಗಿ ಬೆಳೆದ ವಯಸ್ಕ ಆನೆಯನ್ನು ಸೆರೆಹಿಡಿಯುವುದು ಮತ್ತು ಸಾಗಿಸುವುದು ಅಷ್ಟೊಂದು ಸುಲಭವಾದ ಕೆಲಸವಲ್ಲ. ನವೆಂಬರ್ ಅಂತ್ಯದಿಂದ, ಪಿಟಿ 7 ಅನ್ನು ಶಾಂತಗೊಳಿಸಿ ವಯನಾಡ್ ನ ಆನೆ ಶಿಬಿರಕ್ಕೆ ಸಾಗಿಸುವ ಕಾರ್ಯಾಚರಣೆಯನ್ನು ಅಧಿಕಾರಿಗಳು ನಿಖರವಾಗಿ ಯೋಜಿಸಿದ್ದಾರೆ. ತಂಡವು ಕ್ಷಿಪ್ರ ಪ್ರತಿಕ್ರಿಯೆ ತಂಡದ 26 ಸದಸ್ಯರ ಸಕ್ರಿಯ ಪಾತ್ರ ಒಳಗೊಂಡಿದೆ ಮತ್ತು ಮೂರು ತರಬೇತಿ ಪಡೆದ ಕುಮ್ಕಿ ಆನೆಗಳು ಸಹ ಸಹಾಯ ಮಾಡುತ್ತಿವೆ. 50 ಅರಣ್ಯ ರಕ್ಷಕರು ಈ ಪ್ರದೇಶವನ್ನು ಭದ್ರಪಡಿಸುವ ಜವಾಬ್ದಾರಿಯನ್ನು ಹೊಂದಿದ್ದರು.


  ಇದನ್ನೂ ಓದಿ: Assembly Election-2022: ಚುನಾವಣೆ ಹೊಸ್ತಿಲಲ್ಲಿ ಮತ್ತದೇ ಹಳೆ ವರಸೆ, ಮತದಾರರಿಗೆ 'ಉಚಿತ ಭಾಗ್ಯ'ಗಳ ಭರವಸೆ!


  ಹೆಚ್ಚುತ್ತಿದೆಯಂತೆ ಮಾನವ ಮತ್ತು ಆನೆ ನಡುವಿನ ಸಂಘರ್ಷ


  ಪಿಟಿ 7 ಆನೆಯ ಕಥೆ ಕೇರಳದಲ್ಲಿ ಬಲವಾದ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಅದರ ವಿನಾಶಕಾರಿ ಉಪಸ್ಥಿತಿ ಅನೇಕರಿಗೆ ಭಯ ಹುಟ್ಟಿಸಿತ್ತು ಅಂತ ಹೇಳಬಹುದು. ಹೆಚ್ಚಿದ ನಗರೀಕರಣ ಮತ್ತು ಪ್ರಧಾನ ಆನೆ ಪ್ರದೇಶಕ್ಕೆ ಮಾನವ ಅತಿಕ್ರಮಣವು ಆನೆಗಳ ಕೋಪದ ಇಂತಹ ಪ್ರಕರಣಗಳಿಗೆ ಒಂದು ಕಾರಣವಾಗಿದೆ. ಆವಾಸಸ್ಥಾನದ ನಷ್ಟ ಮತ್ತು ವಿಘಟನೆಯ ಪರಿಣಾಮವಾಗಿ, ಆನೆಗಳು ಆಹಾರಕ್ಕಾಗಿ ಮೇಯುವಾಗ ಅಥವಾ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುವಾಗ ಹೆಚ್ಚಾಗಿ ಮಾನವರೊಂದಿಗೆ ಸಂಪರ್ಕಕ್ಕೆ ಬರುತ್ತವೆ ಎಂದು ವಿಶ್ವ ವನ್ಯಜೀವಿ ನಿಧಿಯ ವರದಿ ತಿಳಿಸಿದೆ. ಮಾನವ-ಆನೆ ಸಂಘರ್ಷವು 2018-2020ರ ನಡುವೆ ಭಾರತದಲ್ಲಿ 1,401 ಮಾನವ ಮತ್ತು 301 ಆನೆಗಳ ಸಾವಿಗೆ ಕಾರಣವಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವ ಭೂಪೇಂದ್ರ ಯಾದವ್ 2021 ರ ಆಗಸ್ಟ್ 2 ರಂದು ರಾಜ್ಯಸಭೆಗೆ ತಿಳಿಸಿದ್ದರು.

  Published by:Annappa Achari
  First published: