• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಏನಿದು 'ಮ್ಯಾಜಿಕ್ ಮಶ್ರೂಮ್'? ಔಷಧಿಗಿಂತ ಹೆಚ್ಚು ಪವರ್​ಫುಲ್, ಅಧ್ಯಯನದಲ್ಲೂ ಅಚ್ಚರಿಯ ವಿಚಾರ ಬಯಲು!

Explained: ಏನಿದು 'ಮ್ಯಾಜಿಕ್ ಮಶ್ರೂಮ್'? ಔಷಧಿಗಿಂತ ಹೆಚ್ಚು ಪವರ್​ಫುಲ್, ಅಧ್ಯಯನದಲ್ಲೂ ಅಚ್ಚರಿಯ ವಿಚಾರ ಬಯಲು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸೈಲೋಸಿಬಿನ್ ಎಂಬ ಅಣಬೆ ಇದೆ. ಈ ಸೈಲೋಸಿಬಿನ್ ಅಣಬೆಯನ್ನು ಮ್ಯಾಜಿಕ್ ಮಶ್ರೂಮ್ ಎಂದೂ ಕರೆಯಲಾಗುತ್ತದೆ. ಈ ಅಣಬೆಯಿಂದ ಅನೇಕ ರೋಗಗಳನ್ನು ನಿರ್ಮೂಲನೆ ಮಾಡಬಹುದು. ವಿಶೇಷವಾಗಿ ಮಾನಸಿಕ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಮಶ್ರೂಮ್ (Mushroom) ಒಂದು ರೀತಿಯ ಶಿಲೀಂಧ್ರವಾಗಿದೆ. ಅಣಬೆಯನ್ನು ಕುಕುರ್ಮುತ್ತ ಎಂದೂ ಕರೆಯುತ್ತಾರೆ. ಆದರೆ ಹೆಚ್ಚಿನ ಅಣಬೆಗಳು ತಿನ್ನಲು ಯೋಗ್ಯವಾಗಿರುವುದಿಲ್ಲ, ವಿಷಕಾರಿಯಾಗಿರುತ್ತವೆ. ಕೆಲವು ಮಾತ್ರ ತಿನ್ನಲು ಸೂಕ್ತವಾಗಿರುತ್ತವೆ. ಮಶ್ರೂಮ್ ತುಂಬಾ ಶಕ್ತಿಯುತವಾದ ಆಹಾರ (Food) ಪದಾರ್ಥವಾಗಿದೆ. ಇದನ್ನು ಪೋಷಕಾಂಶಗಳ ಖಜಾನೆ ಎಂದರೂ ತಪ್ಪಿಲ್ಲ. ಮಶ್ರೂಮ್ ಅನ್ನು ಸಸ್ಯಾಹಾರಿಗಳ (Vegetarians) ಪಾಲಿನ ಮಟನ್ ಎಂದೂ ಕರೆಯುತ್ತಾರೆ. ಅನೇಕ ಬಗೆಯ ಅಣಬೆಗಳು ಪ್ರಯೋಜನಕಾರಿಯಾಗಿವೆಯಾದರೂ, ಸೈಲೋಸಿಬಿನ್ ಮಶ್ರೂಮ್ (Psilocybin Mushroom) ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಈ ಅಣಬೆಯನ್ನು ಅನೇಕ ರೋಗಗಳಿಗೆ ಔಷಧಿಯಾಗಿ (Medicine) ಬಳಸಲಾಗುತ್ತಿದೆ, ಆದ್ದರಿಂದ ಇದನ್ನು ಮ್ಯಾಜಿಕ್ ಮಶ್ರೂಮ್ ಎಂದೂ ಕರೆಯಲಾಗುತ್ತದೆ.


ಸಂಶೋಧನೆಯ ಪ್ರಕಾರ, ಸೈಲೋಸಿಬಿನ್ ಮಶ್ರೂಮ್ ಅನ್ನು ಅನೇಕ ರೀತಿಯ ಮಾನಸಿಕ ಕಾಯಿಲೆಗಳು, ಆತಂಕ, ಖಿನ್ನತೆ ಇತ್ಯಾದಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಈ ಅಣಬೆಯ ಸೇವನೆಯಿಂದ ಸಿಗರೇಟ್ ಮತ್ತು ಮದ್ಯದ ಚಟದಿಂದ ಮುಕ್ತಿ ಪಡೆಯಬಹುದು. ಹಾಗಾದರೆ ಈ ಮಶ್ರೂಮ್ ನ ಪ್ರಯೋಜನಗಳೇನು? ಮುಂದಿದೆ ವಿವರ


ಇದನ್ನೂ ಓದಿ: Mushroom: ಅಣಬೆ ಆರೋಗ್ಯಕ್ಕೆ ಉತ್ತಮ ಮಾತ್ರವಲ್ಲ ಸೈಡ್ ಎಫೆಕ್ಟ್ಸ್ ಕೂಡ ಇದೆಯಂತೆ


ಮೆದುಳಿನಿಂದ ನರಕೋಶದ ಸಂವಹನವನ್ನು ವೇಗಗೊಳಿಸುತ್ತದೆ


ಹಿಂದಿನ ಅಧ್ಯಯನಗಳು ಅಣಬೆ ಸೇವನೆಯು ಸ್ಕಿಜೋಫ್ರೇನಿಯಾದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದೆ. ಇದಲ್ಲದೆ, ಬೈಪೋಲಾರ್ ಡಿಸಾರ್ಡರ್ ಮತ್ತು ಖಿನ್ನತೆಯ ಅಪಾಯವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ. ಹೆಚ್ಚುವರಿ ಪೊಟ್ಯಾಸಿಯಮ್ ಬಿಳಿ ಅಣಬೆಗಳಲ್ಲಿ ಕಂಡುಬರುತ್ತದೆ, ಇದು ಆತಂಕವನ್ನು ತೆಗೆದುಹಾಕುತ್ತದೆ. ಖಿನ್ನತೆಯನ್ನು ತಪ್ಪಿಸಲು ಯಾವ ರೀತಿಯ ಅಣಬೆಯನ್ನು ತಿನ್ನಬೇಕು ಎಂದು ಸಂಶೋಧಕರು ಹೇಳದಿದ್ದರೂ. ಒಂದು ಅಧ್ಯಯನದ ಪ್ರಕಾರ ಅಣಬೆಗಳು ಸೈಲೋಸಿಬಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತವೆ, ಇದು ಮೆದುಳಿನಲ್ಲಿನ ನ್ಯೂರಾನ್ ಸಂಪರ್ಕಗಳ ಸಕ್ರಿಯಗೊಳಿಸುವಿಕೆಯನ್ನು 10 ಪ್ರತಿಶತದಷ್ಟು ಹೆಚ್ಚಿಸುತ್ತದೆ.


ಸೈಲೋಸಿಬಿನ್ ಅಣಬೆಗಳ ಪ್ರಯೋಜನಗಳು


ಖಿನ್ನತೆ ನಿವಾರಣೆ- ಹೆಲ್ತ್‌ಲೈನ್‌ನ ಸುದ್ದಿ ಪ್ರಕಾರ, ಸೈಲೋಸಿಬಿನ್ ಮಶ್ರೂಮ್ ತಿನ್ನುವುದರಿಂದ ಖಿನ್ನತೆಯ ಸಮಸ್ಯೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ಸೈಲೋಸಿಬಿನ್ ಚಿಕಿತ್ಸೆಯನ್ನು ಸಹ ನೀಡಲಾಗುತ್ತದೆ. ಸೈಲೋಸಿಬಿನ್ ಮಶ್ರೂಮ್ ಮೂಲಕ ಅಮೆರಿಕ-ಯುರೋಪ್ ನಲ್ಲಿ ಆತಂಕ, ಖಿನ್ನತೆ ಇತ್ಯಾದಿ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.




ಸಿಗರೇಟ್-ಆಲ್ಕೋಹಾಲ್ ಚಟವನ್ನು ನಿವಾರಿಸುತ್ತದೆ


ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಸೈಲೋಸಿಬಿನ್ ಥೆರಪಿ ಸಹಾಯದಿಂದ, ಸಿಗರೇಟ್, ಆಲ್ಕೋಹಾಲ್, ಕೊಕೇನ್‌ನಂತಹ ಕೆಟ್ಟ ಚಟಗಳನ್ನು ನಿವಾರಿಸಬಹುದು. ಮದ್ಯದ ಕೆಟ್ಟ ಅಭ್ಯಾಸವಿರುವವರು ಸೈಲೋಸಿಬಿನ್ ಮಶ್ರೂಮ್ ಅನ್ನು ಸೇವಿಸಿದಾಗ, ಕೆಲವೇ ತಿಂಗಳುಗಳಲ್ಲಿ ಅವರು ಮದ್ಯದ ಬಗ್ಗೆ ನಿರಾಸಕ್ತಿ ಹೊಂದಲು ಪ್ರಾರಂಭಿಸಿದರು ಎಂದು ಅಧ್ಯಯನದಲ್ಲಿ ಕಂಡುಬಂದಿದೆ.


ಇದನ್ನೂ ಓದಿ: Mushroom Pickle: ಸಖತ್ ಟೇಸ್ಟಿ ಈ ಅಣಬೆ ಉಪ್ಪಿನಕಾಯಿ, ನೀವೂ ಸವಿದು ನೋಡಿ


ಕ್ಯಾನ್ಸರ್​ಗೆ ಸಂಬಂಧಿಸಿದ ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ


ಯಾರಿಗಾದರೂ ಕ್ಯಾನ್ಸರ್ ಬಂದಾಗ, ಅವರು ಈ ಕಾಯಿಲೆಗಿಂತ ಹೆಚ್ಚು ಮಾನಸಿಕ ಆತಂಕದಿಂದ ಬಳಲುತ್ತಾರೆ. ಇದರಿಂದ ದೇಹದ ಹಾರ್ಮೋನ್ ಗಳು ತೊಂದರೆಗೀಡಾಗಿ ರೋಗಕ್ಕಿಂತ ಇಂತಹ ಇತರ ಸಮಸ್ಯೆ ಹೆಚ್ಚುತ್ತದೆ. ಇಂತಹ ರೋಗ ಇರುವವರು ಸಾವಿನ ಬಗ್ಗೆ ಚಿಂತಿಸಲು ಪ್ರಾರಂಭಿಸುತ್ತಾರೆ. ಆದರೆ ಸೈಲೋಸಿಬಿನ್ ಮಶ್ರೂಮ್ ಈ ಚಿಂತೆಯನ್ನು ದೂರ ಮಾಡುತ್ತದೆ.




ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ


ಸೈಲೋಸಿಬಿನ್ ಮಶ್ರೂಮ್ ಮೆದುಳಿನ ಆರೋಗ್ಯಕ್ಕೆ ಉತ್ತಮ ಆಹಾರ ಎಂದರೆ ತಪ್ಪಾಗುವುದಿಲ್ಲ. ಅಧ್ಯಯನದ ಪ್ರಕಾರ, ಸೈಲೋಸಿಬಿನ್ ಮಶ್ರೂಮ್ ಮೆದುಳಿನ ಕಾರ್ಯವನ್ನು ಸರಿಪಡಿಸುತ್ತದೆ, ಇದರಿಂದಾಗಿ ಮೆದುಳಿನಲ್ಲಿ ಸೃಜನಶೀಲ, ಕಲ್ಪನೆಯನ್ನು ಅಭಿವೃದ್ಧಿಪಡಿಸಲು ಸಹಾಯವಾಗುತ್ತದೆ ಎನ್ನಲಾಗಿದೆ.

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು