Explained: 71 ಸಾವಿರ ದೀಪಗಳು, 14 ಕೋಟಿ ಪಡಿತರ ಕಿಟ್ ವಿತರಣೆ.. ಹೇಗಿರಲಿದೆ ನಾಳೆ ಪ್ರಧಾನಿ ಮೋದಿ ಜನ್ಮ ದಿನ ಸಂಭ್ರಮಾಚರಣೆ?

PM Narendra Modi Birthday Celebration: 20 ದಿನಗಳ ಮೆಗಾ ಅಭಿಯಾನ 'ಸೇವಾ ಔರ್ ಸಮರ್ಪನ್ ಅಭಿಯಾನ' ನಾಳೆ (17 ಸೆಪ್ಟೆಂಬರ್) ಆರಂಭವಾಗಲಿದ್ದು, ಅಕ್ಟೋಬರ್ 7 ರಂದು ಮುಕ್ತಾಯಗೊಳ್ಳಲಿದೆ. ಏತನ್ಮಧ್ಯೆ, ಅಭಿಯಾನದ ಭಾಗವಾಗಿ ಉತ್ತರ ಪ್ರದೇಶದಲ್ಲಿಯೇ 27,000 ಬೂತ್‌ಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುವುದು.

ನರೇಂದ್ರ ಮೋದಿ

ನರೇಂದ್ರ ಮೋದಿ

 • Share this:
  ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಳೆ ಜನ್ಮ ದಿನದ ಸಂಭ್ರಮ (PM Narendra Modi Birthday Celebration). ನಾಳೆಗೆ ಅವರು 71ನೇ ವಸಂತಕ್ಕೆ ಕಾಲಿರಿಸಲಿದ್ದಾರೆ. ಮೂರು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ಎರಡನೇ ಬಾರಿಗೆ ಭಾರತದ ಪ್ರಧಾನಿ ಸ್ಥಾನ ಅಲಂಕರಿಸಿರುವ ಮೋದಿ ಅವರ ಜನ್ಮದಿನ ಸಂಭ್ರಮಾಚರಣೆಗೆ ಬಿಜೆಪಿ (BJP) ಹಾಗೂ ಮೋದಿ ಅಭಿಮಾನಿಗಳು (Modi Fans) ತುದಿಗಾಲಲ್ಲಿ ನಿಂತಿದ್ದಾರೆ. ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರ 71 ನೇ ಹುಟ್ಟುಹಬ್ಬವನ್ನು ಈ ಬಾರಿ ಬಿಜೆಪಿ ವಿಶೇಷವಾಗಿ ಆಚರಿಸಲು ಯೋಜನೆ ರೂಪಿಸಿದೆ. ಈ ವಿಶೇಷ ಸಂದರ್ಭವನ್ನು ಮತ್ತಷ್ಟು ವಿಶಿಷ್ಟಗೊಳಿಸುವ ಸಲುವಾಗಿ ಕಾಶಿಯಲ್ಲಿರುವ ವಾರಣಾಸಿಯ ಭಾರತ ಮಾತಾ ದೇವಸ್ಥಾನದಲ್ಲಿ 71,000 ದಿಯಾಗಳನ್ನು (ಮಣ್ಣಿನ ದೀಪಗಳನ್ನು) ಬೆಳಗಿಸಲಾಗುತ್ತದೆ. ದೀಪಗಳನ್ನು ಬೆಳಗಿಸುವುದರ ಜೊತೆಗೆ, ಭಾರತೀಯ ಜನತಾ ಪಕ್ಷವು (ಬಿಜೆಪಿ) 14 ಕೋಟಿ ಪಡಿತರ ಕಿಟ್​ಗಳನ್ನು ವಿತರಿಸಲು ಯೋಜಿಸಿದೆ.

  ಅಲ್ಲದೆ, ಪ್ರಧಾನಿ ಮೋದಿ ಅವರ ಫೋಟೋ ಇರುವ 5 ಕೋಟಿ ಪೋಸ್ಟ್‌ಕಾರ್ಡ್‌ಗಳನ್ನು ದೇಶಾದ್ಯಂತ ಅಂಚೆ ಕಚೇರಿಗಳಿಂದ ಮೇಲ್ ಮಾಡಲಾಗುತ್ತದೆ. ಈ ಬಾರಿ, ಬಿಜೆಪಿ ರಕ್ತದಾನ ಅಭಿಯಾನ, ನದಿಗಳ ಸ್ವಚ್ಛತಾ ಅಭಿಯಾನ, ಪಡಿತರ ಚೀಟಿಗಳ ವಿತರಣೆ ಮತ್ತು ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ಒಳಗೊಂಡಂತೆ ಮೋದಿ ಅವರ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಲು ಬಿಜೆಪಿ ಯೋಜನೆ ರೂಪಿಸಿದೆ.

  20 ದಿನಗಳ ಮೆಗಾ ಅಭಿಯಾನ 'ಸೇವಾ ಔರ್ ಸಮರ್ಪನ್ ಅಭಿಯಾನ' ನಾಳೆ (17 ಸೆಪ್ಟೆಂಬರ್) ಆರಂಭವಾಗಲಿದ್ದು, ಅಕ್ಟೋಬರ್ 7 ರಂದು ಮುಕ್ತಾಯಗೊಳ್ಳಲಿದೆ. ಏತನ್ಮಧ್ಯೆ, ಅಭಿಯಾನದ ಭಾಗವಾಗಿ ಉತ್ತರ ಪ್ರದೇಶದಲ್ಲಿಯೇ 27,000 ಬೂತ್‌ಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುವುದು.

  ಸಾರ್ವಜನಿಕವಾಗಿ ಮುಕ್ತವಾಗಿ ಮಾತನಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿರುವ ಮೋದಿಯವರು ತಮ್ಮ ಶಕ್ತಿಯುತ ಮತ್ತು ಆಶಾವಾದದ ಭಾಷಣಗಳಿಂದ ಯುವ ಪೀಳಿಗೆಗೆ ಯಾವಾಗಲೂ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಅವರ ಭಾಷಣವು ಸಾಮಾನ್ಯ ಜನರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸುತ್ತದೆ ಮತ್ತು ಅದು ಅವರ ಗುರಿಗಳನ್ನು ಸಾಧಿಸಲು ಪ್ರೇರೇಪಿಸುತ್ತದೆ. ಆದ್ದರಿಂದ, ಅವರ ಜನ್ಮದಿನದಂದು, ಅವರ ಕೆಲವು ಪ್ರೇರಕ ಮತ್ತು ಸ್ಪೂರ್ತಿದಾಯಕ ಮಾತುಗಳನ್ನು ಇಲ್ಲಿ ನೀಡಲಾಗಿದೆ.

  ಇದನ್ನು ಓದಿ: Explained: ಗುಜರಾತ್ ಭೂಪೇಂದ್ರ ಪಟೇಲ್ ಮಂತ್ರಿಮಂಡಲದ ಸಚಿವರ ವಿವರ, ಎದುರಿಸುತ್ತಿರುವ ಕ್ರಿಮಿನಲ್ ಪ್ರಕರಣಗಳು?

  ಪ್ರಧಾನಿ ಮೋದಿ ಅವರ ಸ್ಫೂರ್ತಿದಾಯಕ ಮಾತುಗಳು

  ಗಣಿತದ ಚಿಂತನೆಯು ಮಕ್ಕಳ ಗಣಿತದ ಪ್ರಶ್ನೆಗಳನ್ನು ಪರಿಹರಿಸುತ್ತದೆ ಎಂದು ಅರ್ಥವಲ್ಲ, ಆದರೆ ಇದು ಯೋಚಿಸುವ ವಿಧಾನವೂ ಆಗಿದೆ.

  ಪೋಷಕರು ತಮ್ಮ ಮಗುವಿನ ಸಾಧನೆಗಳನ್ನು ಸಾಮಾಜಿಕ ಪ್ರತಿಷ್ಠೆಯ ವಿಷಯವಾಗಿಸದಂತೆ ನಾನು ವಿನಂತಿಸುತ್ತೇನೆ. ಪ್ರತಿಯೊಂದು ಮಗುವೂ ವಿಶಿಷ್ಟ ಪ್ರತಿಭೆಗಳಿಂದ ಆಶೀರ್ವದಿಸಲ್ಪಟ್ಟಿರುತ್ತದೆ.

  ಕಠಿಣ ಪರಿಶ್ರಮ ಎಂದಿಗೂ ಆಯಾಸವನ್ನು ತರುವುದಿಲ್ಲ. ಇದು ತೃಪ್ತಿಯನ್ನು ತರುತ್ತದೆ.

  ನೀವು ಪ್ರಕೃತಿಯೊಂದಿಗೆ ಎಂದಿಗೂ ಭಯ ಪಡಬಾರದು. ಏಕೆಂದರೆ ನಾವು ಪ್ರಕೃತಿಯೊಂದಿಗೆ ಸಂಘರ್ಷದಲ್ಲಿದ್ದೇವೆ ಎಂದು ನಾವು ಭಾವಿಸಿದಾಗ ಸಮಸ್ಯೆ ಆರಂಭವಾಗುತ್ತದೆ.

  ಮಹಾತ್ಮಾ ಗಾಂಧಿ ಎಂದಿಗೂ ಸ್ವಚ್ಛತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ಅವರು ನಮಗೆ ಸ್ವಾತಂತ್ರ್ಯವನ್ನು ಕೊಟ್ಟರು. ನಾವು ಅವರಿಗೆ ಸ್ವಚ್ಛ ಭಾರತವನ್ನು ನೀಡಬೇಕು.

  ಒಬ್ಬ ಬಡವನ ಮಗ ಇಂದು ನಿಮ್ಮ ಮುಂದೆ ನಿಂತಿದ್ದಾನೆ. ಇದು ಪ್ರಜಾಪ್ರಭುತ್ವದ ಶಕ್ತಿ.

  125 ಕೋಟಿ ಜನರು ಒಟ್ಟಾಗಿ ಕೆಲಸ ಮಾಡಿದರೆ; ಭಾರತ 125 ಕೋಟಿ ಹೆಜ್ಜೆ ಮುಂದೆ ಹೋಗುತ್ತದೆ.

  ನೀವು ಯಾವುದೇ ವೃತ್ತಿಯಲ್ಲಿದ್ದರೂ, ನಿಮ್ಮ ವೃತ್ತಿಯಲ್ಲಿ ದಕ್ಷತೆಯನ್ನು ತರಬೇಕಾದರೆ ಮಾನಸಿಕ ಮತ್ತು ದೈಹಿಕ ಸದೃಢತೆ ಮುಖ್ಯ. ಫಿಟ್ ಆಗಿರುವವರು ಆಕಾಶವನ್ನು ಮುಟ್ಟುತ್ತಾರೆ. ದೇಹ ಫಿಟ್ ಆಗಿರದಿದ್ದರೆ, ಮನಸ್ಸಿಗೆ ಹೊಡೆತ ಬೀಳುತ್ತದೆ.

  ಭಾರತದ ಯುವಕರು ಕೇವಲ ಹೊಸ ಯುಗದ ಮತದಾರರಲ್ಲ, ಆದರೆ ಹೊಸ ಯುಗದ ಶಕ್ತಿ!
  Published by:HR Ramesh
  First published: