• ಹೋಂ
 • »
 • ನ್ಯೂಸ್
 • »
 • Explained
 • »
 • Explained: ಕೊರೋನಾದಿಂದ ಗುಣಮುಖರಾದ ಬಳಿಕ ಕಾಡುವ ಆರೋಗ್ಯ ಸಮಸ್ಯೆಗಳಿಂದ ಬಚಾವ್ ಆಗಲು ಇದೆ ಮಾರ್ಗ

Explained: ಕೊರೋನಾದಿಂದ ಗುಣಮುಖರಾದ ಬಳಿಕ ಕಾಡುವ ಆರೋಗ್ಯ ಸಮಸ್ಯೆಗಳಿಂದ ಬಚಾವ್ ಆಗಲು ಇದೆ ಮಾರ್ಗ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೊರೋನಾದಿಂದ ಗುಣಮುಖರಾದ ಬಳಿಕ ಕಾಣಿಸಿಕೊಳ್ಳುವ ಆಲಸ್ಯ, ಸುಸ್ತು ಸೇರಿದಂತೆ ಆರೋಗ್ಯ ಸಮಸ್ಯೆಗಳಿಗೆ ಏನು ಮಾಡಬೇಕು? ಯಾವ ರೀತಿಯ ಜೀವನಶೈಲಿ, ಆಹಾರ ಪದ್ಧತಿ ಪಾಲಿಸಬೇಕು? ಯಾವೆಲ್ಲಾ ಮುನ್ನೆಚ್ಚರಿಗಳನ್ನು ವಹಿಸಬೇಕು?

 • Share this:

ಬೆಂಗಳೂರು: ಕೊರೋನಾ 2ನೇ ಅಲೆಯ ಬಲೆಗೆ ಕೋಟ್ಯಂತರ ಭಾರತೀಯರ ಬೀಳಬೇಕಾಯಿತು. ಸದ್ಯ ದೇಶದಲ್ಲಿ ಸೇರಿದಂತೆ ರಾಜ್ಯದಲ್ಲಿ ಕೊರೋನಾ ಪಾಸಿಟಿವ್​ ಪ್ರಕರಣಗಳ ಸಂಖ್ಯೆ ತಗ್ಗುತ್ತಿದೆ. ಆದರೆ ಸೋಂಕಿನ ಮರಣ ಪ್ರಮಾಣ ಆಶಾದಾಯಕವಾಗಿಲ್ಲ. ಸಮಾಧಾನಕರ ಸಂಗತಿ ಎಂದರೆ ನಿತ್ಯ ದಾಖಲಾಗುತ್ತಿರುವ ಪಾಸಿಟಿವ್​ ಪ್ರಕರಣಗಳಿಗಿಂತ ಹೆಚ್ಚಾಗಿ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಸೋಂಕಿಗೆ ಒಳಗಾಗುತ್ತಿರುವ ಸಂಖ್ಯೆಗಿಂತ ಗುಣಮುಖರಾಗುತ್ತಿರುವ ಸಂಖ್ಯೆ ದೊಡ್ಡದಾಗುತ್ತಿದೆ. ನಿತ್ಯ ಲಕ್ಷಾಂತರ ಮಂದಿ ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ. ಕೋವಿಡ್​ ರಿಪೋರ್ಡ್​​ ನೆಗೆಟಿವ್​ ಬಂದಾಕ್ಷಣಕ್ಕೆ ಆರೋಗ್ಯವಂತರು ಎಂದು ಹೇಳುವುದು ಕಷ್ಟ.


ಸೋಂಕಿನಿಂದ ಗುಣಮುಖರಾದ ಬಳಿಕವೂ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಸೋಂಕು ಮುಕ್ತರಾದವರು ಹೇಗೆ ತಮ್ಮ ಮುಂದಿನ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ ಎಂಬುವುದು ಸಾಕಷ್ಟ  ಮುಖ್ಯವಾಗುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರ, ಕೋವಿಡ್​​ ಕೇರ್​ ಸೆಂಟರ್​ನಲ್ಲಿದ್ದವರ, ಹೋಂ ಐಸೋಲೇಷನ್​ಗೆ ಒಳಗಾದವರ ಕೋವಿಡ್​​ ವರದಿ ನೆಗೆಟಿವ್​ ಬಂದ ಬಳಿಕ ಎಚ್ಚರದಿಂದ ಇರಬೇಕು ಎನ್ನುತ್ತಾರೆ ತಜ್ಞ ವೈದ್ಯರು. ಜೊತೆಗೆ ಕೆಲವೊಂದಿಷ್ಟು ಆರೋಗ್ಯ ಸಲಹೆಗಳನ್ನು ನೀಡಿದ್ದಾರೆ.


 1. ಮನೆಯಲ್ಲಿಯೇ ಐಸೋಲೇಷನ್​ಗೆ ಒಳಗಾದವರು ರೋಗಲಕ್ಷಣಗಳು ಕಾಣಿಸಿಕೊಂಡ 10 ದಿನಗಳ ನಂತರ ಅಥವಾ ಜ್ವರ ಶಮನವಾದ 3 ದಿನಗಳ ಬಳಿಕ ಐಸೋಲೇಷನನ್ನು ಮುಕ್ತಾಯಗೊಳಿಸಬಹುದು. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸೋಂಕಿತರು ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದಿದ್ದರೆ 10 ದಿನಗಳ ಬಳಿಕ ಡಿಸ್ಚಾರ್ಜ್​​​ ಆಗಬಹುದು. ಮತ್ತೆ ಕೋವಿಡ್​​ ಟೆಸ್ಟ್​​​ಗೆ ಒಳಗಾಗುವ ಅಗತ್ಯವಿರುವುದಿಲ್ಲ.

 2. ಸೋಂಕಿನಿಂದ ಗುಣಮುಖರಾದ ಬಳಿಕವೂ ಪಲ್ಸ್​​​ ಆಕ್ಸಿಮೀಟರ್​​ (pulse oximeter) ಮೂಲಕ ಆಕ್ಸಿಜನ್​​​ ಲೆವಲ್​ ಅನ್ನು ಸ್ವಯಂ ಪರೀಕ್ಷಿಸಿಕೊಳ್ಳಬೇಕು. ಆಮ್ಲಜನಕದ ಮಟ್ಟ 94% ಇರುವಂತೆ ನೋಡಿಕೊಳ್ಳಬೇಕು.

 3. ಕಫ ಹೆಚ್ಚಾದರೆ, ಉಸಿರಾಡಲು ತೊಂದರೆಯಾಗುತ್ತಿದ್ದರೆ ಎಚ್ಚೆತ್ತುಕೊಳ್ಳಬೇಕು.

 4. ದಿನನಿತ್ಯ ದೇಹದ ಉಷ್ಣಾಂಶವನ್ನು ಪರೀಕ್ಷಿಸಿಕೊಳ್ಳಬೇಕು. ತೀವ್ರತರನಾದ ಏರಿಳಿತ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಬೇಕು.

 5. ದೇಹಾಲಸ್ಯ, ಮಂಪರು ಮಂಪರು ಅನುಭವ, ಸಂವೇದನಶೀಲನೆಯಲ್ಲಿ ಬದಲಾವಣೆಯನ್ನು ಗಮನಿಸಬೇಕು.

 6. ಮಧುಮೇಹಿಗಳು ದಿನನಿತ್ಯ ಬೆಳಗ್ಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಬೇಕು. ಸೋಂಕಿಗೆ ಒಳಗಾದ ಬಳಿಕ ಮಧುಮೇಹಿಗಳು ಯಾವುದಾದರೂ ಇನ್​​​ಫೆಕ್ಷನ್ಸ್​​ಗೆ ಒಳಗಾಗಿದ್ದಾರಾ ಎಂಬುದನ್ನು ಪರೀಕ್ಷಿಸಬೇಕು. ರಕ್ತದ ಸಕ್ಕರೆ ಪ್ರಮಾಣದಲ್ಲಿ ಅತಿಯಾದ ವ್ಯತ್ಯಾಸಗಳು ಕಂಡು ಬಂದರೆ ವೈದ್ಯರನ್ನು ಕೂಡಲೇ ಸಂಪರ್ಕಿಸಬೇಕು.

 7. ರಕ್ತದೊತ್ತಡವನ್ನು ಗಮನಿಸುತ್ತಿರಬೇಕು. ಅತಿಯಾದ ರಕ್ತದೊತ್ತಡದಿಂದ ದೂರವಿರಬೇಕು.

 8. ಒಮ್ಮೆ ಸೋಂಕಿನಿಂದ ಗುಣಮುಖರಾದ ಬಳಿಕ ವಿಶ್ರಾಂತಿ ಪಡೆಯುವುದು ತುಂಬಾನೇ ಮುಖ್ಯ. ದೇಹಕ್ಕೆ ವಿಶ್ರಾಂತಿಯಿಂದ ಸೂಕ್ತ ಆಮ್ಲಜನಕ ಸಿಗಬೇಕಾಗುತ್ತದೆ. ಅತಿಯಾದ ಕೆಲಸ ಮಾಡಿ ದೇಹವನ್ನು ದಣಿಸಬಾರದು.

 9. ಸೋಂಕಿನಿಂದ ಗುಣಮುಖರಾದ ಬಳಿಕ ಸಾಕಷ್ಟು ನೀರಿನಂಶದ ಆಹಾರಗಳನ್ನು ಸೇವಿಸಬೇಕು. ಕುದಿಸಿ ಆರಿಸಿದ ನೀರು, ಎಳನೀರು, ಜ್ಯೂಸ್​​, ನೀರಿನಂಶ ಹೆಚ್ಚಾಗಿ ಹಣ್ಣುಗಳನ್ನು (ಕಲ್ಲಂಗಡಿ, ಕರಬೂಜಾ) ಸೇವಿಸಬೇಕು. ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ನೀರು ದೊರೆತಲ್ಲಿ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ. ದೇಹದಲ್ಲಿ ನಿರ್ಲಜಲೀಕರಣ ಉಂಟಾದರೆ ಆರೋಗ್ಯ ಬೇಗನೆ ಹದಗೆಡುತ್ತದೆ.

 10. ಪ್ರೊಟೀನ್​ ಅಂಶ ಹೆಚ್ಚಾಗಿರುವ ಆಹಾರಗಳಾದ ಹಾಲು, ಪನ್ನೀರ್​​, ಕಡ್ಲೆಬೀಜ, ಕಾಳುಗಳು, ಮೊಟ್ಟೆ, ಮಾಂಸವನ್ನು ಸೇವಿಸಬೇಕು.

 11. ಉಸಿರಾಟದ ವ್ಯಾಯಾಮಗಳಾದ ಪ್ರಾಣಾಯಾಮ, ಯೋಗ ಹಾಗೂ ಧ್ಯಾನ ಮಾಡುವುದರಿಂದ ಮನಸ್ಸು, ದೇಹ ಎರಡನ್ನು ಸಮತೋಲನದಲ್ಲಿ ಇರಿಸಿಕೊಳ್ಳಬಹುದು.

 12. ದೇಹವನ್ನು ಆಲಸ್ಯಗೊಳಿಸುವ ಕೆಲಸಗಳು, ಮನಸನ್ನು ಆಲಸ್ಯಗೊಳಿಸುವ ವಿಷಯಗಳಿಂದ ದೂರವಿದ್ದು, ಅಗತ್ಯ ಪ್ರಮಾಣದಲ್ಲಿ ವಿಶ್ರಾಂತಿ ಪಡೆಯಬೇಕು. ದೇಶದಲ್ಲಿ ಆಮ್ಲಜನಕ ಕೊರತೆಯಾಗುವಂತೆ ಮಾಡಬಾರದು.

 13. ಕೋವಿಡ್​ನಿಂದ ಗುಣಮುಖರಾದ 7 ದಿನಗಳಲ್ಲಿ ಮತ್ತೆ ಜ್ವರ, ಕಫ, ಉಸಿರಾಟದಲ್ಲಿ ಸಮಸ್ಯೆ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

 14. ಸೋಂಕಿನಿಂದ ಗುಣಮುಖರಾದ 3 ತಿಂಗಳುಗಳ ಬಳಿಕ ಸಿಟಿ ಸ್ಕ್ಯಾನ್​​ ಮಾಡಿಸಿಕೊಳ್ಳುವುದು ಉತ್ತಮ. ಸೋಂಕಿನಿಂದ ಹಾನಿಗೊಳಗಾಗಿದ್ದ ಶ್ವಾಸಕೋಶ ಚೇತರಿಕೆ ಕಂಡಿದೆಯೇ ಎಂದು ತಿಳಿಯಬೇಕು. ಇಲ್ಲವಾದಲ್ಲಿ ತಜ್ಞರನ್ನು ಸಂಪರ್ಕಿಬೇಕು.

top videos
  First published: