Ponniyin Selvan: ಈ ಜನಪ್ರಿಯ ಕಾದಂಬರಿಯೇ ಮಣಿರತ್ನಂ ಸಿನಿಮಾಕ್ಕೆ ಸ್ಫೂರ್ತಿ, ಅಷ್ಟಕ್ಕೂ ‘ಪೊನ್ನಿಯನ್‌ ಸೆಲ್ವನ್‌ʼನಲ್ಲಿ ಏನಿದೆ?

ಪೊನ್ನಿಯನ್‌ ಸೆಲ್ವನ್‌ ಸಿನಿಮಾದ ವಿಶೇಷವೆಂದರೆ ಇದೊಂದು ತಮಿಳಿನ ಜನಪ್ರಿಯ ಕಾದಂಬರಿಯನ್ನು ಆಧರಿಸಿದ ಕಥೆಯಾಗಿದೆ. ಈ ಬಗ್ಗೆ ಸಿನಿಪ್ರೇಮಿಗಳಿಗೆ ಈಗಾಗ್ಲೇ ತಿಳಿದಿದೆ. ಹಾಗಾಗಿ 'ಪೊನ್ನಿಯಿನ್ ಸೆಲ್ವನ್' ಸಿನಿಮಾದ ಮೇಲೂ ಕೂಡ ಬೆಟ್ಟದಷ್ಟು ನಿರೀಕ್ಷೆ ಬೆಳೆದಿದೆ. ಈ ಸಿನೆಮಾದ ಇನ್ನಷ್ಟು ಮಾಹಿತಿ ಇಲ್ಲಿದೆ ತಿಳ್ಕೊಳ್ಳಿ ..

ಪೊನ್ನಿಯನ್‌ ಸೆಲ್ವನ್‌ ಕಾದಂಬರಿ

ಪೊನ್ನಿಯನ್‌ ಸೆಲ್ವನ್‌ ಕಾದಂಬರಿ

  • Share this:
ಭಾರತೀಯ ಚಿತ್ರರಂಗದಲ್ಲಿ ಬಹು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಪ್ಯಾನ್‌ ಇಂಡಿಯಾ ಸಿನಿಮಾದ (Pan India Movie) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಹೌದು ಅದು ಬೇರೆ ಯಾವ ಸಿನಿಮಾ ಅಲ್ಲ ನಿರ್ದೇಶಕ ಮಣಿರತ್ನಂ (Mani Ratnam) ಅವರ 'ಪೊನ್ನಿಯಿನ್ ಸೆಲ್ವನ್' (Ponniyan Selvan). ಹೌದು ಈ ಸಿನಿಮಾ ಕಳೆದ ಕೆಲ ವರ್ಷಗಳಿಂದ ಒಂದಲ್ಲ ಒಂದು ಸುದ್ದಿಯಿಂದ ಸಾಕಷ್ಟು ಟ್ರೆಂಡಿಂಗ್‌ ನಲ್ಲಿದೆ ಎನ್ನಬಹುದು. ದೊಡ್ಡ ಬಜೆಟ್‌, ದೊಡ್ಡ ತಾರಾಗಣ ಹೊಂದಿರುವ ಈ ಸಿನಿಮಾದ ವಿಶೇಷವೆಂದರೆ ಇದೊಂದು ತಮಿಳಿನ ಜನಪ್ರಿಯ ಕಾದಂಬರಿಯನ್ನು (Novel) ಆಧರಿಸಿದ ಕಥೆಯಾಗಿದೆ. ಈ ಬಗ್ಗೆ ಸಿನಿಪ್ರೇಮಿಗಳಿಗೆ ಈಗಾಗ್ಲೇ ತಿಳಿದಿದೆ. ಹಾಗಾಗಿ 'ಪೊನ್ನಿಯಿನ್ ಸೆಲ್ವನ್' ಸಿನಿಮಾದ ಮೇಲೂ ಕೂಡ ಬೆಟ್ಟದಷ್ಟು ನಿರೀಕ್ಷೆ ಬೆಳೆದಿದೆ.

ಬೆಳ್ಳಿತೆರೆ ಮೇಲೆ ಜನಪ್ರಿಯ ಕಾದಂಬರಿ
ತಮಿಳಿನಲ್ಲಿ ಹೆಚ್ಚು ಮಾರಾಟವಾದ ಈ ಕಾದಂಬರಿ ಸಿನಿಮಾ ರೂಪದಲ್ಲಿ ಬೆಳ್ಳಿ ತೆರೆಗೆ ಬರುತ್ತಿದೆ ಎಂದರೆ ಪುಸ್ತಕ ಪ್ರೇಮಿಗಳಿಗೆ ಸಖತ್‌ ಖುಷಿ ನೀಡಿದೆ. ಪುಸ್ತಕ ಓದಿದ ಹಲವರು ದೊಡ್ಡ ಪರದೆಯಲ್ಲಿ ಸಿನಿಮಾ ಹೇಗೆ ಮೂಡಿ ಬರುತ್ತಿದೆ ಎಂದು ನೋಡಲು ಕಾತುರರಾಗಿದ್ದಾರೆ.

ʼಪೊನ್ನಿಯಿನ್ ಸೆಲ್ವನ್ʼ ಸಿನಿಮಾ


ಅಷ್ಟಕ್ಕೂ ಈ ಸಿನಿಮಾ ಮೂಡಿಬರುತ್ತಿರುವುದು ಸ್ಟಾರ್‌ ನಿರ್ದೇಶಕ ಮಣಿರತ್ನಂ ಅವರ ಸಾರಥ್ಯದಲ್ಲಿ, ಹೀಗಾಗಿ ಸಹಜವಾಗಿಯೇ ʼಪೊನ್ನಿಯಿನ್ ಸೆಲ್ವನ್ʼ ಹಿಟ್‌ ಆಗಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: Krithi Shetty: ಸೈಮಾ ಅವಾರ್ಡ್ಸ್​​ಗೆ ಮನೀಶ್ ಮಲ್ಹೋತ್ರಾ ಡಿಸೈನರ್ ಸೀರೆಯುಟ್ಟ ಬಂದ ಕೃತಿ!

ಪೊನ್ನಿಯನ್ ಸೆಲ್ವನ್ ಚಿತ್ರ ಯಾರು ಮಾಡಿದ್ದಾರೆ, ಯಾರೆಲ್ಲಾ ನಟಿಸ್ತಿದ್ದಾರೆ, ಕಥೆ ಏನು ಹೀಗೆ ಹತ್ತಾರು ವಿಚಾರಗಳು ಪ್ರೇಕ್ಷಕರನ್ನು ಈಗಾಗಲೇ ತಲುಪಿವೆ. ಆದರೆ ಕಾದಂಬರಿ, ಅದರ ಲೇಖಕ ಬಗ್ಗೆ ಸಾಕಷ್ಟು ಮಂದಿಗೆ ತಿಳಿದಿಲ್ಲ. ಹಾಗಾದರೆ ನಾವಿಲ್ಲಿ ತಮಿಳಿನ ಪ್ರಸಿದ್ಧ ಕಾದಂಬರಿ, ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಪುಸ್ತಕ ʼಪೊನ್ನಿಯನ್ ಸೆಲ್ವನ್ʼ ಬಗ್ಗೆ ಕೆಲವು ವಿಚಾರಗಳನ್ನು ತಿಳಿಯೋಣ.

ʼಪೊನ್ನಿಯನ್ ಸೆಲ್ವನ್ʼ ಕಾದಂಬರಿ
ಪೊನ್ನಿಯನ್ ಸೆಲ್ವನ್ ಎಂದರೆ ಪೊನ್ನಿಯ ಮಗ (ಕಾವೇರಿ ನದಿ). ಈ 20ನೇ ಶತಮಾನದ 2400 ಪುಟದ ತಮಿಳು ಐತಿಹಾಸಿಕ ಕಾದಂಬರಿಯನ್ನು ಲೇಖಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕಲ್ಕಿ ಕೃಷ್ಣಮೂರ್ತಿ ಬರೆದಿದ್ದಾರೆ.

ಈ ಕಾದಂಬರಿ 1950-54 ರಿಂದ ತಮಿಳು ನಿಯತಕಾಲಿಕೆ ‘ಕಲ್ಕಿ’ಯಲ್ಲಿ ವಾರಕ್ಕೊಮ್ಮೆ ಧಾರಾವಾಹಿಯಾಗಿ ಪ್ರಕಟವಾಗುತಿತ್ತು. ಇದನ್ನು ನಂತರ 1955 ರಲ್ಲಿ ಪುಸ್ತಕದ ರೂಪದಲ್ಲಿ ಪ್ರಕಟಿಸಲಾಯಿತು. ಕಾದಂಬರಿಯ ನಿರಂತರ ಜನಪ್ರಿಯತೆಯು ಚೋಳ ಆಳ್ವಿಕೆಯ ಸುತ್ತ ಹೆಣೆಯಲಾದ ನಿರೂಪಣೆಯ ಮೂಲಕ ತಮಿಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯೊಂದಿಗಿ ಸಂಬಂಧಿಸಿದೆ.

ಚೋಳರ ಬಗ್ಗೆ ಹೇಳುವ ಕಾದಂಬರಿ
ಕೃಷ್ಣಮೂರ್ತಿ ಅವರು ಬರೆದ ಈ ಕಾದಂಬರಿ ಚೋಳರ ಸುತ್ತ ಸುತ್ತುತ್ತದೆ ಮತ್ತು ಮುಖ್ಯವಾಗಿ ಲೇಖನ ಅರುಣ್ ಮೋಳಿ ವರ್ಮನ್ ಕಥೆಯಾಗಿದೆ. ಇತ ತಮಿಳು ಇತಿಹಾಸದಲ್ಲಿ ಒಬ್ಬ ಶ್ರೇಷ್ಠ ರಾಜರುಗಳಲ್ಲಿ ಒಬ್ಬನಾಗಿ ಕ್ರಿ.ಶ. 10ನೇ -11ನೇ ಶತಮಾನದಲ್ಲಿ ರಾಜ್ಯವಾಳಿದ್ದನು. ತಮಿಳಿನಲ್ಲಿ ಪ್ರಕಟವಾದ ಇದುವರೆಗಿನ ಕಾದಂಬರಿಗಳಲ್ಲಿ ಪೊನ್ನಿಯನ್ ಸೆಲ್ವನ್ ಒಂದು ಅತ್ಯುತ್ತಮ ಕಾದಂಬರಿ ಎಂದು ಪರಿಗಣಿಸಲಾಗಿದೆ, ಅಷ್ಟರ ಮಟ್ಟಿಗೆ ಕಾದಂಬರಿ ಜನಪ್ರಿಯತೆಯನ್ನು ಹೊಂದಿದೆ.

ವಿಶ್ವ ಇತಿಹಾಸದಲ್ಲಿ, ಒಂಬತ್ತನೇ ಮತ್ತು ಹತ್ತನೇ ಶತಮಾನಗಳಲ್ಲಿ ಚೋಳರ ಆಳ್ವಿಕೆಯು ಉತ್ತುಂಗದಲ್ಲಿತ್ತು. ಈ ಅವಧಿಯಲ್ಲಿ, ತುಂಗಭದ್ರಾ ನದಿಯ ದಕ್ಷಿಣದ ಸಂಪೂರ್ಣ ಪ್ರದೇಶವನ್ನು ಚೋಳರ ಅಡಿಯಲ್ಲಿ ಒಂದೇ ಘಟಕವಾಗಿ ಸೇರಿಸಲಾಯಿತು. ಆರ್ಕಿಯೊಮೆಟಲರ್ಜಿಸ್ಟ್ ಶಾರದಾ ಶ್ರೀನಿವಾಸನ್ ಈ ಹಿಂದೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ "ಕಲೆ ಮತ್ತು ವಾಸ್ತುಶಿಲ್ಪದಲ್ಲಿನ ಸಾಧನೆಗಳ ಪ್ರಮಾಣ ಮತ್ತು ಬರವಣಿಗೆಯ ಸಂಪತ್ತು ಮತ್ತು ಶಿಲಾಶಾಸನದ ದಾಖಲೆಗಳ ವಿಷಯದಲ್ಲಿ, ಚೋಳರು ದಕ್ಷಿಣ ಭಾರತದ ಇತಿಹಾಸದಲ್ಲಿ ಶ್ರೀಮಂತ ರಾಜವಂಶಗಳಲ್ಲಿ ಒಂದಾಗುತ್ತಾರೆ" ಎಂದು ಹೇಳಿದ್ದರು.

ಕಾದಂಬರಿಯು ಕಾಲ್ಪನಿಕ ಕೃತಿಯಾಗಿದ್ದರೂ, ಇದು ಘಟನೆಗಳ ಮೇಲೆ ಹೆಚ್ಚು ಕೇಂದ್ರಿಕೃತವಾಗಿದೆ ಮತ್ತು ಚೋಳ ರಾಜವಂಶದ ಪಾತ್ರಗಳನ್ನು ಒಳಗೊಂಡಿದೆ. ಸುಮಾರು ಒಂದು ದಶಕದ ಹಿಂದೆ ಕಾವೇರಿ ಮೈಂಥನ್ ಎಂಬ ಶೀರ್ಷಿಕೆಯ ಪೊನ್ನಿಯನ್ ಸೆಲ್ವನ್‌ನ ಉತ್ತರ ಭಾಗವನ್ನು ಬರೆದ ಲೇಖಕ ವೆಂಕಟೇಶ್ ರಾಮಕೃಷ್ಣನ್ ಹೇಳುವ ಪ್ರಕಾರ, “ತಮಿನಾಡಿನ ಇತಿಹಾಸದ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಅತ್ಯುತ್ತಮ ಪುಸ್ತಕ ಮತ್ತು ಪುಸ್ತಕವನ್ನು ಈಗಲೂ ಓದಲು ಪ್ರಯತ್ನಿಸುತ್ತಾರೆ ಎಂಬ ಅಂಶವನ್ನು ಯಾರೂ ಅಲ್ಲಗಳೆಯುವಂತಿಲ್ಲ. ನಮ್ಮ ರಾಜ್ಯದ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಓದಲು ಕಾದಂಬರಿಯನ್ನು ತೆಗೆದುಕೊಳ್ಳುತ್ತಾರೆ" ಎಂದಿದ್ದಾರೆ.

ಇದನ್ನೂ ಓದಿ:  Ranu Mondal Biopic: ಬರ್ತಿದೆ ರಾನು ಮೊಂಡಲ್ ಜೀವನಾಧಾರಿತ ಸಿನಿಮಾ! ಫಸ್ಟ್​ ಲುಕ್ ರಿಲೀಸ್

ಆದಾಗ್ಯೂ, 10 ನೇ ಶತಮಾನದ ಚೋಳರ ಆಳ್ವಿಕೆಯಲ್ಲಿನ ಕೆಲವು ದುಷ್ಕೃತ್ಯಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಕಾದಂಬರಿಯು ಸಾಕಷ್ಟು ಟೀಕೆಗಳನ್ನು ಸಹ ಎದುರಿಸಿದೆ ಎಂದು ಅವರು ತಿಳಿಸಿದರು. ಕಥಾಹಂದರದಿಂದ ಓದುಗರನ್ನು ಹಿಡಿದಿಟ್ಟುಕೊಳ್ಳುವ ಕಾದಂಬರಿ ಎಂದು ಕರೆದ ಅವರು, ಇದು ತಮಿಳಿನಲ್ಲಿ ಬಹಳ ವರ್ಷಗಳ ನಂತರ ಇಂದಿಗೂ ಹೆಚ್ಚು ಮಾರಾಟವಾದ ಕಾದಂಬರಿಯಾಗಿದೆ ಎಂದು ಹೇಳಿದರು. ತಂಜಾವೂರಿನ ತಮಿಳು ವಿಶ್ವವಿದ್ಯಾನಿಲಯದ ಶಿಲ್ಪಕಲೆಯ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಪ್ರೊಫೆಸರ್ ಕಂದನ್, ಮಾತನಾಡಿ “ಈ ಪುಸ್ತಕವು ದಕ್ಷಿಣ ಭಾರತದಲ್ಲಿ ಚೋಳರ ಆಳ್ವಿಕೆಯಲ್ಲಿ ಏನಾಯಿತು ಎಂಬುದರ ಬಗ್ಗೆ ಹೇಳುತ್ತದೆ. ಕಲ್ಕಿ ಕೃಷ್ಣಮೂರ್ತಿ ಅವರ ಪೊನ್ನಿಯನ್ ಸೆಲ್ವನ್ ಪುಸ್ತಕ ಇಂದಿಗೂ ಚೋಳರ ಪುಸ್ತಕ ಲೇಖಕರು ಮತ್ತು ಸಂಶೋಧಕರಿಗೆ ಬೈಬಲ್‌ ಇದ್ದಂತೆ" ಎಂದಿದ್ದಾರೆ.

ಲೇಖಕ ಆರ್. ಕೃಷ್ಣಮೂರ್ತಿ ಪರಿಚಯ
1899 ರಲ್ಲಿ ಜನಿಸಿದ ಆರ್. ಕೃಷ್ಣಮೂರ್ತಿ ಅವರು ಬರಹಗಾರ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು ಹಲವಾರು ಸಣ್ಣ ಕಥೆಗಳು, ಕಾದಂಬರಿಗಳು, ಪ್ರಬಂಧಗಳು, ಪ್ರವಾಸ ಕಥನಗಳು ಮತ್ತು ಜೀವನಚರಿತ್ರೆಗಳನ್ನು ಬರೆದಿದ್ದಾರೆ. ಕೃಷ್ಣಮೂರ್ತಿಯವರ ಕಾವ್ಯನಾಮ ಕಲ್ಕಿಯಾಗಿತ್ತು, ಮತ್ತು ಅದೇ ಶೀರ್ಷಿಕೆಯಡಿಯಲ್ಲಿ ವಾರಪತ್ರಿಕೆ ತಮಿಳು ನಿಯತಕಾಲಿಕವನ್ನು ನಡೆಸುತ್ತಿದ್ದರು.

ಕಲ್ಕಿಯವರ ಹೆಚ್ಚಿನ ಕಾದಂಬರಿಗಳು ಅವರ ಕಥೆ ಹೇಳುವ ಕೌಶಲ್ಯ ಮತ್ತು ಅವರ ಬರಹಗಳಲ್ಲಿನ ಹಾಸ್ಯಕ್ಕಾಗಿ ಜನಪ್ರಿಯತೆ ಪಡೆದಿದ್ದವು. ಅವರ ಹೆಚ್ಚಿನ ಬರಹಗಳು ಭಾರತದ, ವಿಶೇಷವಾಗಿ ತಮಿಳುನಾಡಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಂಶಗಳ ಮೇಲೆಯೇ ಇವೆ. ಪ್ರಸ್ತುತ ಕೃಷ್ಣಮೂರ್ತಿಯವರ ಬಹುಬೇಡಿಕೆಯ, ಅತ್ಯದ್ಭುತ ಕಾದರಂಬರಿಗಳಲ್ಲಿ ಒಂದಾದ ಪೊನ್ನಿಯನ್ ಸೆಲ್ವನ್ ಈಗ ಅದೇ ಹೆಸರಿನಿಂದ ಸಿನಿಮಾವಾಗಿದ್ದು, ಸೆಪ್ಟೆಂಬರ್ 30 ರಂದು ಬಿಡುಗಡೆಗೂ ಕೂಡ ಸಜ್ಜಾಗಿದೆ.

ಕಲ್ಕಿ ಕೃಷ್ಣಮೂರ್ತಿಯವರ ಇತರೆ ಬರಹಗಳು
ಪೊನ್ನಿಯನ್ ಸೆಲ್ವನ್ ಹೊರತುಪಡಿಸಿ ಕಲ್ಕಿಯವರ ಕೆಲವು ಪ್ರಸಿದ್ಧ ಕಾದಂಬರಿಗಳು ಹೀಗಿವೆ. ತಿಯಾಗ ಬೂಮಿ (1937), ಸೋಲೈಮಲೈ ಇಳವರಸಿ (1947), ಮಗದಪತಿ (1942), ಅಪಲೈಯಿನ್ ಕಣ್ಣೀರ್ (1947) ಅಲೈ ಓಸೈ (1948), ದೇವಕಿಯಿನ್ ಕನವನ್ (1950), ಪೊಯಿಮಾನ್ ಕರಡು (1950), ), ಪುನ್ನೈವನತ್ತುಪುಲಿ (1952), ಪಾರ್ತಿಬನ್ ಕಣವು (1941-42) ಸೇರಿ ಹಲವು ಬರಹಗಳನ್ನು ಓದಬಹುದಾಗಿದೆ.

1954 ರಲ್ಲಿ ಕೃಷ್ಣಮೂರ್ತಿ ನಿಧನ
1950ರಲ್ಲಿ ಈ ಕಾದಂಬರಿಯು ಮೊದಲು ತಮಿಳು ವಾರಪತ್ರಿಕೆ ಕಲ್ಕಿಯಲ್ಲಿ ಸುಮಾರು 3.5 ವರ್ಷಗಳಷ್ಟು ಕಾಲ ಪ್ರಕಟಗೊಂಡಿತು. ಪುಸ್ತಕದ ಭಾರೀ ಪ್ರಖ್ಯಾತಿಯನ್ನು ಪರಿಗಣಿಸಿ, ಇದರ ಲೇಖಕನನ್ನು ತಮಿಳುನಾಡಿನ ಸರ್ಕಾರವು ರಾಷ್ಟ್ರೀಕರಿಸಿದೆ ಮತ್ತು ಇದನ್ನು ಯಾರು ಬೇಕಾದರೂ ಪ್ರಕಟಗೊಳಿಸಲು ಮುಕ್ತ ಸ್ಥಾನವನ್ನು ಕಲ್ಪಿಸಲಾಗಿದೆ. ಇಷ್ಟೆಲ್ಲಾ ಖ್ಯಾತಿ ಪಡೆದಿರುವ ಈ ಕಾದಂಬರಿಯ ಲೇಖಕರಾದ ಕಲ್ಕಿ ಕೃಷ್ಣಮೂರ್ತಿಯವರು 1954 ರಲ್ಲಿ ಕ್ಷಯರೋಗದಿಂದ ನಿಧನರಾದರು.

ಮುಂದುವರಿದ ಜನಪ್ರಿಯತೆ
ಮೇಲೆ ಹೇಳಿದಂತೆ ಪೊನ್ನಿಯನ್ ಸೆಲ್ವನ್ ತಮಿಳಿನಲ್ಲಿ ಹೆಚ್ಚು ಮಾರಾಟವಾದ ಕಾದಂಬರಿಗಳಲ್ಲಿ ಒಂದಾಗಿದೆ ಮತ್ತು ಇದು ಪ್ರಕಟವಾದ 72 ವರ್ಷಗಳ ನಂತರವೂ ಮಾರಾಟವಾಗುತ್ತಲೇ ಇದೆ. ಕೆಲವು ಅಂದಾಜಿನ ಪ್ರಕಾರ, ಅದರ ವಾರ್ಷಿಕ ಮಾರಾಟವು ಈಗಲೂ ಸುಮಾರು 1,00,000 ಪ್ರತಿಗಳಷ್ಟಿದೆ ಎನ್ನಲಾಗಿದೆ. ಇದು ಹೊಸ ಓದುಗರನ್ನು ಗಳಿಸುತ್ತಲೇ ಇದ್ದು, ತಮಿಳು ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಜನರ ಆಸಕ್ತಿಯನ್ನು ಹುಟ್ಟುಹಾಕುವಲ್ಲಿ ಸಹ ಕಾದಂಬರಿಯದ್ದು ದೊಡ್ಡ ಕೊಡುಗೆಯಾಗಿದೆ.

ಇದನ್ನೂ ಓದಿ:  Vendhu Thanindhathu Kaadu Movie Review: ಗ್ಯಾಂಗ್‌ಸ್ಟರ್ ಆದ ಸಿಂಬು, ಇತರ ಮಾಸ್ ಚಿತ್ರಗಳಿಗಿಂತ ಹೇಗೆ ಭಿನ್ನವಾಗಿದೆ?

ಇತ್ತೀಚೆಗೆ ಪುಸ್ತಕವನ್ನು ಓದಿದ ಚೆನ್ನೈ ಮೂಲದ ಐಟಿ ಉದ್ಯೋಗಿ ಪುಷ್ಪಲತಾ ಮಾತನಾಡಿ, “ಲೇಖಕ ಕಲ್ಕಿ ಕೃಷ್ಣಮೂರ್ತಿ ಅವರು ಇತಿಹಾಸದಿಂದ ಆಯ್ದ ಭಾಗಗಳನ್ನು ತೆಗೆದುಕೊಂಡಿದ್ದಾರೆ, ಚೋಳರು ಆಳಿದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ ಮತ್ತು ತಮ್ಮದೇ ಆದ ಕಲ್ಪನೆಯಿಂದ ಕಥೆಯನ್ನು ತಿರುಗಿಸಿದ್ದಾರೆ" ಎಂದು ಪುಸ್ತಕದ ಓದಿದ ಇವರು ಅಭಿಪ್ರಾಯ ಪಟ್ಟಿದ್ದಾರೆ.

ಸೆಪ್ಟೆಂಬರ್‌ 30ಕ್ಕೆ ಸಿನಿಮಾ ಬಿಡುಗಡೆ
ಈ ಬಹುನಿರೀಕ್ಷಿತ ಸಿನಿಮಾದಲ್ಲಿ ತಮಿಳು ಮತ್ತು ಹಿಂದಿ ಚಿತ್ರರಂಗದ ಅನೇಕ ಸ್ಟಾರ್​ ಕಲಾವಿದರು ನಟಿಸಿದ್ದಾರೆ. ‘ಪೊನ್ನಿಯಿನ್​ ಸೆಲ್ವನ್’ ಕಾದಂಬರಿ ಆಧರಿಸಿ ಈ ಸಿನಿಮಾ ಇದೇ ಸೆ.30ರಂದು ರಿಲೀಸ್​ ಆಗಲಿದೆ. ಖ್ಯಾತ ನಟ ವಿಕ್ರಂ, ಐಶ್ವರ್ಯ ರೈ ಬಚ್ಚನ್, ತ್ರಿಷಾ, ಜಯಂ ರವಿ, ಪ್ರಕಾಶ್ ರೈ ಹೀಗೆ ಬಹುತಾರಾಗಣವೇ ಇದರಲ್ಲಿದೆ. ಚೋಳರ ಕಾಲದ ಕತೆಯನ್ನು ಹೊಂದಿರುವ ಈ ಸಿನಿಮಾವನ್ನು ಲೈಕಾ ಪ್ರೊಡಕ್ಷನ್‌ನವರು ಭಾರಿ ಅದ್ಧೂರಿಯಾಗಿ ನಿರ್ಮಿಸಿದ್ದಾರೆ.
Published by:Ashwini Prabhu
First published: