PM Cares: ಮಕ್ಕಳಿಗಾಗಿ ಪಿಎಂ ಕೇರ್ಸ್‌ನಲ್ಲಿ ಹೊಸ ಯೋಜನೆಗಳು; ಇದರಿಂದ ಯಾರಿಗೆಲ್ಲ ಲಾಭ ಅಂತ ತಿಳಿದುಕೊಳ್ಳಿ

ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕೇರ್ಸ್ ಅಡಿ ಇಂದು ವಿಶೇಷವಾಗಿ ಮಕ್ಕಳಿಗಾಗಿಯೇ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಹಾಗಿದ್ರೆ ಏನಿದು ಪಿಎಂ ಕೇರ್ಸ್? ಇದರಲ್ಲಿ ಮಕ್ಕಳಿಗಾಗಿ ಯಾವೆಲ್ಲ ಯೋಜನೆಗಳಿವೆ? ಯಾರು ಇದರ ಪ್ರಯೋಜನ ಪಡೆಯಬಹುದು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ

ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ

  • Share this:
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು ಪಿಎಂ ಕೇರ್ಸ್ ಯೋಜನೆಯನ್ನು (PM Cares Project) ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ವಿಶೇಷವಾಗಿ ಮಕ್ಕಳಿಗಾಗಿಯೇ (Children) ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ (Video Conference)  ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ನರೇಂದ್ರ ಮೋದಿ ಅವರು, ದೇಶದ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಅಂತ ಕರೆ ಕೊಟ್ಟರು. ಶಾಲೆಗೆ (School) ಹೋಗುವ ಮಕ್ಕಳಿಗೆ ಪ್ರಧಾನ ಮಂತ್ರಿ ಮೋದಿ ವಿದ್ಯಾರ್ಥಿ ವೇತನವನ್ನು (Scholarship) ವರ್ಗಾಯಿಸಿದರು. ಮಕ್ಕಳಿಗಾಗಿ ಪಿಎಂ ಕೇರ್ಸ್‌ನ ಪಾಸ್‌ಬುಕ್ (Passbook) ಮತ್ತು ಆಯುಷ್ಮಾನ್ ಭಾರತ್ (Ayushman Bharat) - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಆರೋಗ್ಯ ಕಾರ್ಡ್ ನ್ನು (Health Card) ಕಾರ್ಯಕ್ರಮದ ಸಮಯದಲ್ಲಿ ಮಕ್ಕಳಿಗೆ ಹಸ್ತಾಂತರಿಸಲಾಯಿತು. ಹಾಗಿದ್ರೆ ಏನಿದು ಪಿಎಂ ಕೇರ್ಸ್? ಇದರಲ್ಲಿ ಮಕ್ಕಳಿಗಾಗಿ ಯಾವೆಲ್ಲ ಯೋಜನೆಗಳಿವೆ? ಯಾರು ಇದರ ಪ್ರಯೋಜನ ಪಡೆಯಬಹುದು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಿಎಂ ಕೇರ್ಸ್ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

ಇಂದು ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಅಂತ ಕರೆ ಕೊಟ್ಟರು. ಈ ಯೋಜನೆಯಡಿ ಯಾರಾದರೂ ವೃತ್ತಿಪರ ಕೋರ್ಸ್‌ಗಳಿಗೆ, ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಾಲದ ಅಗತ್ಯವಿದ್ದರೆ, ಪಿಎಂ ಕೇರ್ಸ್‌ ಸಹಾಯ ಮಾಡುತ್ತದೆ. ಮಕ್ಕಳಿಗೆ ಪ್ರತಿ ತಿಂಗಳು 4 ಸಾವಿರ ರೂಪಾಯಿ ನೀಡಲಾಗುತ್ತದೆ. ಇದು ಅವರ ದೈನಂದಿನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದರು.

ಏನಿದು ಪಿಎಂ ಕೇರ್ಸ್ ಫಂಡ್?

ಪಿಎಂ ಕೇರ್ಸ್ ನಿಧಿಯು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಆಸ್ಪತ್ರೆಗಳನ್ನು ಸಿದ್ದಗೊಳಿಸಲು, ವೆಂಟಿಲೇಟರ್‌ಗಳನ್ನು ಖರೀದಿಸಲು ಮತ್ತು ಆಮ್ಲಜನಕ ಘಟಕಗಳನ್ನು ಸ್ಥಾಪಿಸಲು ಸಾಕಷ್ಟು ಸಹಾಯ ಮಾಡುತ್ತದೆ. ಇದರಿಂದಾಗಿ ಅನೇಕ ಜೀವಗಳನ್ನು ಉಳಿಸಲಾಗಿದೆ. ನಮ್ಮನ್ನು ಅಕಾಲಿಕವಾಗಿ ತೊರೆದವರ ಅಂದರೆ ಕೋವಿಡ್ ಸಂದರ್ಭದಲ್ಲಿ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗಾಗಿ ಈ ನಿಧಿಯನ್ನು ಬಳಸಲಾಗುತ್ತಿದೆ.

ಇದನ್ನೂ ಓದಿ: Explained: ವಿದ್ಯಾರ್ಥಿಗಳೇ, ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕೆಂದು ಹೇಗೆ ನಿರ್ಧರಿಸಬೇಕು?

ಅನಾಥ ಮಕ್ಕಳಿಗಾಗಿ ರೂಪಿಸಲ್ಪಟ್ಟ ಯೋಜನೆ

ಮಾರ್ಚ್ 11, 2020ರಿಂದ ಕಳೆದ 2022ರ ಫೆಬ್ರವರಿ 28ರ ನಡುವಿನ ಅವಧಿಯಲ್ಲಿ COVID-19 ಸಾಂಕ್ರಾಮಿಕ ರೋಗದಿಂದ ತಮ್ಮ ಪೋಷಕರು, ಕಾನೂನುಬದ್ಧ ಪಾಲಕರು ಅಥವಾ ದತ್ತು ಪಡೆದ ಪೋಷಕರು ಅಥವಾ ಬದುಕುಳಿದಿರುವ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಅಧ್ಯಯನ, ಜೀವನಕ್ಕಾಗಿ ಪ್ರಧಾನ ಮಂತ್ರಿಯವರು ಮೇ 29, 2021 ರಂದು ಮಕ್ಕಳಿಗಾಗಿ PM ಕೇರ್ಸ್ ಯೋಜನೆಯನ್ನು ಪ್ರಾರಂಭಿಸಿದರು.

ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಕೊಡುಗೆ

ಪಿಎಂ ಕೇರ್ ಯೋಜನೆಯಡಿ ಅನಾಥ ಮಕ್ಕಳು ಈ ಪ್ರಯೋಜನವನ್ನು ಪಡೆಯುತ್ತಾರೆ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಅನಾಥರಾದ ಮಕ್ಕಳಿಗೆ 18 ವರ್ಷ ವಯಸ್ಸಿನವರೆಗೆ ಪ್ರತಿ ತಿಂಗಳು 4,000 ರೂ., ಮಗುವಿಗೆ 23 ವರ್ಷ ತುಂಬಿದ ನಂತರ ಸರ್ಕಾರದಿಂದ 10 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು.

ಮಕ್ಕಳಿಗೆ ಸಿಗಲಿದೆ ಉಚಿತ ಶಿಕ್ಷಣ

11 ರಿಂದ 15 ವರ್ಷ ವಯಸ್ಸಿನವರೆಗೆ ನವೋದಯ ವಿದ್ಯಾಲಯ ಅಥವಾ ಯಾವುದೇ ವಸತಿ ಶಾಲೆಗೆ ಮಕ್ಕಳನ್ನು ಸೇರಿಸಲಾಗುತ್ತದೆ. ಮಕ್ಕಳ ಉನ್ನತ ಶಿಕ್ಷಣಕ್ಕೆ ಸಾಲದ ನೆರವು ನೀಡಲಾಗುವುದು. ಸಾಲದ ಮೇಲಿನ ಬಡ್ಡಿಯನ್ನು ಪಿಎಂ ಕೇರ್ ಫಂಡ್‌ನಿಂದ ನೀಡಲಾಗುವುದು.

ಖಾಸಗಿ ಶಾಲೆಯ ಶುಲ್ಕವನ್ನೂ ಭರಿಸಲಾಗುತ್ತದೆ

ಮತ್ತೊಂದೆಡೆ, ಮಗುವಿನ ಪ್ರವೇಶವನ್ನು ಖಾಸಗಿ ಶಾಲೆಯಲ್ಲಿ ಮಾಡಿದರೆ, ಅವನ ಶುಲ್ಕವನ್ನು PM ಕೇರ್ಸ್ ನಿಧಿಯಿಂದ ನೀಡಲಾಗುತ್ತದೆ. ಮಕ್ಕಳ ಶುಲ್ಕದ ಹೊರತಾಗಿ ಶಾಲಾ ಸಮವಸ್ತ್ರದ ವೆಚ್ಚವನ್ನು ಪ್ರಧಾನ ಮಂತ್ರಿ ನಿಧಿಯಿಂದ ನೀಡಲಾಗುವುದು.

ಆಯುಷ್ಮಾನ್ ಭಾರತ್ ಯೋಜನೆಯಡಿ ಹೆಲ್ತ್ ಕಾರ್ಡ್ ವಿತರಣೆ

ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಡಿ, ಅಂತಹ ಮಕ್ಕಳಿಗೆ 18 ವರ್ಷ ವಯಸ್ಸಿನವರೆಗೆ 5 ಲಕ್ಷ ರೂ.ಗಳ ಆರೋಗ್ಯ ಕಾರ್ಡ್ ನೀಡಲಾಗುತ್ತದೆ.

ಇದನ್ನೂ ಓದಿ: Modi@8: ಈ 8 ವರ್ಷಗಳಲ್ಲಿ ಜಾರಿಯಾದ ಮೋದಿ ಸರ್ಕಾರದ ಪ್ರಮುಖ 8 ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿದೆ

ಯಾರಿಗೆ ಸಿಗಲಿದೆ ಇದರ ಲಾಭ?

ಈ ಯೋಜನೆಗೆ ಅರ್ಹ ಮಕ್ಕಳನ್ನು ನೋಂದಾಯಿಸಲು ಸರ್ಕಾರವು ಆನ್‌ಲೈನ್ ಪೋರ್ಟಲ್ ನ್ನು ಪ್ರಾರಂಭಿಸಿದೆ. ಪೋರ್ಟಲ್ ಏಕ-ಗವಾಕ್ಷಿ ವ್ಯವಸ್ಥೆಯಾಗಿದ್ದು, ಇದು ಮಕ್ಕಳ ಅನುಮೋದನೆ ಪ್ರಕ್ರಿಯೆ ಮತ್ತು ಎಲ್ಲಾ ಇತರ ಸಹಾಯವನ್ನು ಸುಗಮಗೊಳಿಸುತ್ತದೆ.
Published by:Annappa Achari
First published: