HOME » NEWS » Explained » PLAGUE AUSTRALIANS WARNED OF DEADLY SPIDER PLAGUE AUSTRALIA MOUSE PLAGUE 2021 SYMPTOMS SCT STG

Explainer: ಆಸ್ಟ್ರೇಲಿಯದಲ್ಲಿ ಇಲಿಗಳ ಹಾವಳಿ; ಜನರಲ್ಲಿ ಹೆಚ್ಚಿದ ಪ್ಲೇಗ್ ಭೀತಿ!

ನ್ಯೂ ಸೌತ್ ವೇಲ್ಸ್ ಮತ್ತು ಕ್ವೀನ್ಸ್‌ಲ್ಯಾಂಡ್‌ನಂತಹ ನಗರಗಳಲ್ಲಿ ಲಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಇಲಿಗಳು ಕಂಡುಬರುತ್ತಿವೆ. ಮನೆ, ಕಿರಾಣಿ-ದಿನಸಿ ಅಂಗಡಿ, ಆಸ್ಪತ್ರೆ, ವಾಹನಗಳಲ್ಲೂ ಇಲಿಗಳು ಕಂಡುಬರುತ್ತಿವೆ.

news18-kannada
Updated:March 26, 2021, 3:08 PM IST
Explainer: ಆಸ್ಟ್ರೇಲಿಯದಲ್ಲಿ ಇಲಿಗಳ ಹಾವಳಿ; ಜನರಲ್ಲಿ ಹೆಚ್ಚಿದ ಪ್ಲೇಗ್ ಭೀತಿ!
ಪ್ಲೇಗ್
  • Share this:
ನವದೆಹಲಿ (ಮಾ. 26): ಆಸ್ಟ್ರೇಲಿಯದ ಪೂರ್ವ ರಾಜ್ಯಗಳಲ್ಲಿ ರೈತರು ಕೃಷಿ ಕಾರ್ಯಗಳನ್ನು ಮಾಡುತ್ತಿಲ್ಲ. ಹೋಟೆಲ್‌ಗಳು ಬಾಗಿಲುಗಳನ್ನು ಮುಚ್ಚಿವೆ. ಕಿರಾಣಿ ಮತ್ತು ದಿನಸಿ ಅಂಗಡಿಗಳು ಬಾಗಿಲು ತೆರೆಯುತ್ತಿಲ್ಲ. ಆಸ್ಟ್ರೇಲಿಯದಲ್ಲಿ ಈ ಪರಿಸ್ಥಿತಿಗೆ ಕಾರಣವಾಗಿರುವುದು ಒಂದು ಪುಟ್ಟ ಪ್ರಾಣಿ. ಹೌದು! ಇಲಿಗಳಿಂದ ಸ್ಥಳೀಯ ರೈತರು, ಹೊಟೇಲ್ ವ್ಯಾಪಾರಿಗಳಿಗೆ ಮತ್ತು ದಿನಸಿ ವ್ಯಾಪಾರಿಗಳಿಗೆ ಜೀವನ ನಡೆಸುವುದು ಕಷ್ಟವಾಗಿದೆ. ರೈತರು ಬೆಳೆದ ಫಸಲನ್ನು ಇಲಿಗಳು ನಾಶಪಡಿಸುತ್ತಿವೆ. ಅಷ್ಟೇ ಅಲ್ಲದೇ ಸುತ್ತಮುಲಿನ ಹೋಟೆಲ್‌ ವ್ಯಾಪಾರಿಗಳಿಗೆ ಇಲಿಗಳಿಂದ ತಮ್ಮ ಆಹಾರವು ನಾಶವಾಗುತ್ತಿದ್ದು ಅಂಗಡಿಯನ್ನು ಮುಚ್ಚುವಂತಾಗಿದೆ. ಕಿರಾಣಿ ಮತ್ತು ದಿನಸಿ ಅಂಗಡಿಗಳಿಗೆ ದಾಳಿಯಿಡುವ ಇಲಿಗಳು ಅಂಗಡಿಯಲ್ಲಿನ ವಸ್ತುಗಳನ್ನ ಹದಗೆಡಿಸುತ್ತಿವೆ.

ಕಳೆದ ವರ್ಷದಿಂದ ಆಸ್ಟ್ರೇಲಿಯದಲ್ಲಿ ಒಂದಲ್ಲ ಒಂದು ತೊಂದರೆಗೆ ಒಳಗಾಗುತ್ತಿದೆ.  ಕಾಡ್ಗಿಚ್ಚು, ಕೊರೋನಾ ಆರ್ಭಟದಂತಹ ದುರ್ಘಟನೆಗಳಿಗೆ ಸವಾಲೊಡ್ಡಿದ ಆಸ್ಟ್ರೇಲಿಯನ್ನರು ಈಗ ಮೂಷಿಕನ ವಿರುದ್ಧ ಸವಾಲೊಡ್ಡಬೇಕಾದ ಪ್ರಸಂಗ ಬಂದಿದೆ. ಸದ್ಯ ಆಸ್ಟ್ರೇಲಿಯದ ಪೂರ್ವ ಭಾಗಗಳಲ್ಲಿ ಇಲಿಗಳ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗಿದ್ದು ಅಲ್ಲಿನ ಜನರಿಗೆ ಜೀವನ ನಡೆಸುವುದು ದುಸ್ತರವಾಗಿದೆ.

ಎಲ್ಲಿ ನೋಡಿದರೂ ಇಲಿ!
ನ್ಯೂ ಸೌತ್ ವೇಲ್ಸ್ ಮತ್ತು ಕ್ವೀನ್ಸ್‌ಲ್ಯಾಂಡ್‌ನಂತಹ ನಗರಗಳಲ್ಲಿ ಲಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಇಲಿಗಳು ಕಂಡುಬರುತ್ತಿವೆ. ಮನೆ, ಕಿರಾಣಿ-ದಿನಸಿ ಅಂಗಡಿ, ಆಸ್ಪತ್ರೆ, ವಾಹನಗಳಲ್ಲೂ ಇಲಿಗಳು ಕಂಡುಬರುತ್ತಿವೆ. ಮೂಷಿಕನ ಹಾವಳಿ ಎಷ್ಟರ ಮಟ್ಟಿಗೆ ಇದೆಯೆಂದರೆ ತಮ್ಮ ಮನೆಯಲ್ಲಿ ಯಾವ ಜಾಗದಲ್ಲಿ ಇಲಿಗಳು ವಾಸಿಸುತ್ತಿವೆ ಎಂಬುದರ ಬಗ್ಗೆ ಜನರು ಸೋಶಿಯಲ್ ಮಿಡಿಯಾದಲ್ಲಿ ಪೊಸ್ಟ್ ಹಾಕುತ್ತಿದ್ದಾರೆ. ಜನರು ತಮ್ಮೆಲ್ಲ ಕೆಲಸಗಳನ್ನು ಬಿಟ್ಟು ಇಲಿಗಳನ್ನು ಹಿಡಿಯುವುದರಲ್ಲೇ ಮಗ್ನರಾಗಿದ್ದಾರೆ.

ಇಲಿಗಳ ಸಂತತಿ ಇಲ್ಲದ ದೇಶವಾಗಿತ್ತು!
ಹೌದು! ಆಸ್ಟ್ರೇಲಿಯದ ಇತಿಹಾಸ ಮೆಲುಕು ಹಾಕಿದರೆ ಹಲವು ದಶಕಗಳ ಹಿಂದೆ ಇಲಿಗಳು ಇಲ್ಲದ ದೇಶವಾಗಿತ್ತು. ಮೊಟ್ಟ ಮೊದಲ ಬಾರಿಗೆ 1787ರಲ್ಲಿ ಇಲಿಗಳು ಕಾಣಿಸಿಕೊಂಡವು. ಬ್ರಿಟನ್‌ನೊಂದಿಗಿನ ವ್ಯಾಪಾರದ ಸಮಯದಲ್ಲಿ ಹಡಗಿನ ಮೂಲಕ ಆಸ್ಟ್ರೇಲಿಯವನ್ನು ತಲುಪಿದ ಇಲಿಗಳು ನಿಧಾನವಾಗಿ ತಮ್ಮ ಸಂತತಿಯನ್ನು ಹೆಚ್ಚಿಸಿಕೊಂಡವು.

ಇಲಿಗಳು ಚೀನಾದ ಉಡುಗೊರೆ!ವಿಶ್ವದ ಹಲವು ರಾಷ್ಟ್ರಗಳಲ್ಲಿ ಇಲಿಗಳು ಚೀನಾದಿಂದಲೇ ಹರಡುತ್ತಿರುವುದು ಎಂದು ನಂಬಲಾಗಿದೆ. ಇತಿಹಾಸಕಾರರ ಪ್ರಕಾರ ಚೀನಾದೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದ ಹಲವು ರಾಷ್ಟಗಳು ಹಡಗುಗಳ ಮೂಲಕ ಉತ್ಪನ್ನಗಳನ್ನು ಆಮದು ಮತ್ತು ರಪ್ತು ಮಾಡುತ್ತಿದ್ದವು. ಚೀನಾದಲ್ಲಿ ಪ್ಲೇಗ್‌ ರೋಗ ಆವರಿಸಿಕೊಂಡಿದ್ದ ಸಮಯದಲ್ಲಿ ಚೀನಾದ ಇಲಿಗಳು ಹಡಗಿನಲ್ಲಿದ್ದ ಸಾಮಾಗ್ರಿಗಳ ಜೊತೆಗೆ ಹಲವು ದೇಶಗಳಿಗೆ ಹರಡಿಕೊಂಡವು. ಇದು ಕ್ರಮೇಣ ಆಯಾ ದೇಶಗಳಲ್ಲಿ ಮೂಷಿಕನ ಸಂತತಿ ಬೆಳೆಯುತ್ತಾ ಹೋಯಿತು. 1347 ರಲ್ಲಿ ಚೀನಾದಿಂದ ಇಟಲಿಗೆ 12 ಹಡಗುಗಳು ಬಂದಾಗ, ಹಡಗಿನಲ್ಲಿದ್ದ ಚೀನಾದ ಇಲಿಗಳು, ಇಟಲಿಯಲ್ಲಿ ತಮ್ಮ ಸಂತತಿಯನ್ನು ಹೆಚ್ಚಿಸಿಕೊಂಡ ನಂತರ ಇಡೀ ಇಟಲಿಯು ಪ್ಲೇಗ್‌ನಿಂದ ನರಳುವಂತೆ ಮಾಡಿತ್ತೆಂದು ಹಾಗೂ ಈ ಚೀನಾದ ಇಲಿಗಳಿಂದ ಇಟಲಿಯ 20 ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾದರು ಎಂದು ಇತಿಹಾಸಕಾರರಿಂದ ತಿಳಿದು ಬಂದಿದೆ.

1993ರಲ್ಲಿ ಕೃಷಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ನೀಡಿದ್ದ ಮೂಷಿಕ!
1787 ರಲ್ಲಿ ಇಂಗ್ಲೆಂಡ್ ನಿಂದ ಬಂದ ವ್ಯಾಪಾರಿ ಹಡುಗಿನಲ್ಲಿದ್ದ ಇಲಿಗಳು ಆಸ್ಟ್ರೇಲಿಯಾದಲ್ಲಿ ತಮ್ಮ ನೆಚ್ಚಿನ ವಾಸಸ್ಥಾನವನ್ನಾಗಿ ಮಾಡಿಕೊಂಡವು. ಅಂದಿನಿಂದ ಸುಮಾರು ನಾಲ್ಕು ವರ್ಷಗಳಿಗೊಮ್ಮೆ, ಬೆಳೆಗಳ ಕಟಾವು ಆಗಿ ಸಂಗ್ರಹವಾಗುವ ಸಮಯದಲ್ಲಿ ಇಲಿಗಳು ತಮ್ಮ ಸಂತತಿಯನ್ನು ತೀವ್ರವಾಗಿ ಹೆಚ್ಚಿಸಿಕೊಳ್ಳುತ್ತವೆ. 1993 ರಲ್ಲಿ, ಆಸ್ಟ್ರೇಲಿಯಾದ ವಿವಿಧ ಪ್ರಾಂತ್ಯಗಳಲ್ಲಿ 96 ಮಿಲಿಯನ್ ಆಸ್ಟ್ರೇಲಿಯದ ಡಾಲರ್ ಮೊತ್ತದ ಧಾನ್ಯಗಳು ಇಲಿಗಳಿಂದ ಹಾಳಾಗಿದೆ.

ಕಾರ್ಖಾನೆ ಮತ್ತು ಪ್ರಾಣಿಗಳ ಮೇಲೂ ದಾಳಿ ಮಾಡುವ ಇಲಿ!
ಕೇವಲ ಆಹಾರ ಮಾತ್ರವಲ್ಲದೇ, ಕೋಳಿ ಮತ್ತು ಹಸು-ಎಮ್ಮೆಗಳ ಮೇಲೆ ದಾಳಿ ಮಾಡಿ ಪ್ರಾಣಿಗಳನ್ನು ರೋಗದಿಂದ ನರಳುವಂತೆ ಮಾಡುತ್ತವೆ. ಇದರ ಪರಿಣಾಮವೆಂದರೆ ಇಲಿಗಳಿಂದ ಸೋಂಕು ಹರಡಬಹುದೆಂಬ ಭಯದಿಂದ ಪ್ರಾಣಿಗಳನ್ನು ಕೊಲ್ಲಬೇಕಾದ ಪರಿಸ್ಥಿತಿ ಬಂದೊದಗುತ್ತದೆ. 1993 ರಲ್ಲಿ ಇಲಿಯ ಹಿಂಡುಗಳು ರಬ್ಬರ್ ಮತ್ತು ವಿದ್ಯುತ್ ಕಾರ್ಖಾನೆಗಳು ಮತ್ತು ಮಳಿಗೆಗಳ ಮೇಲೆ ದಾಳಿ ಮಾಡಿ ಸಾಕಷ್ಟು ಹಾನಿಗೊಳಗಾದ ಪರಿಣಾಮ ಇಲಿಗಳು ಬಹಳಷ್ಟು ನಾಶವಾಗಿದ್ದವು. ಆ ವರ್ಷದಲ್ಲಿ ಇಲಿಗಳಿಂದಾಗಿ ಕಾರುಗಳು ಮತ್ತು ಕಟ್ಟಡಗಳು ಸಹ ಭಾಗಶಃ ಹಾನಿಗೊಳಗಾಗಿದ್ದವು. ಇಲ್ಲಿಯವರೆಗೆ, ಆಸ್ಟ್ರೇಲಿಯ ಸರ್ಕಾರಕ್ಕೆ ಇಲಿಗಳಿಂದ ದಾಳಿಯ ಕಾರಣವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.

2020 ರ ಹೊತ್ತಿಗೆ ಇಲಿಗಳ ಸಂತತಿ ದ್ವಿಗುಣ!
ಕಳೆದ ವರ್ಷದಿಂದ ಆಸ್ಟ್ರೇಲಿಯಾದಲ್ಲಿ ಇಲಿಗಳ ಸಂತತಿ ಹೆಚ್ಚಾಗತೊಡಗಿತು. ಆ ಸಮಯದಲ್ಲೇ ರೈತರು ತಮ್ಮ ಬೆಳೆಗಳ ಕಟಾವು ಮಾಡುವ ಸಮಯವಾಗಿತ್ತು. ಪ್ರತಿ ಬಾರಿಯಂತೆ, ಇಲಿಗಳನ್ನು ಬಲೆಗೆ ಬೀಳಿಸಲು ಪ್ರಯತ್ನಿಸಲಾಗಿತ್ತು. ಆದರೆ ಈ ವರ್ಷ ಇಲಿಗಳ ದಾಳಿಯನ್ನು ತಡೆಯುವ ಪ್ರಯತ್ನ ವಿಫಲವಾಗಿದ್ದರಿಂದ 2020ರಲ್ಲಿ ಇಲಿಗಳು ತಮ್ಮ ಸಂತತಿ ಹೆಚ್ಚಿಸಿಕೊಂಡ ಪರಿಣಾಮ ಆಸ್ಟ್ರೇಲಿಯಾದ ಪೂರ್ವ ರಾಜ್ಯಗಳಲ್ಲಿ ಲಕ್ಷಗಟ್ಟಲೇ ಇಲಿಗಳು ವಾಸಿಸುವಂತಾಗಿದೆ.

ಸಾಂಕ್ರಾಮಿಕ ರೋಗದ ಭೀತಿ!
ಇಲಿಗಳಿಂದ ಧಾನ್ಯಗಳು ಹಾನಿಗೊಳಗಾಗುತ್ತಿದೆ. ಇದನ್ನು ಜನರು ಸೇವಿಸಿದರೆ ಪ್ಲೇಗ್‌ ರೋಗಕ್ಕೆ ಒಳಗಾಗುವ ಭೀತಿ ಹೆಚ್ಚಾಗಿದೆ. ಶರತ್ಕಾಲದ ಸಮಯದಲ್ಲಿ ಸಂತಾನೋತ್ಪತ್ತಿ ಮಾಡುವ ಇಲಿಗಳು ಇನ್ನೂ ಹೆಚ್ಚಿನ ಆಹಾರ ಸೇವಿಸುತ್ತವೆ. ಪರಿಣಾಮ ಹೊಲಗಳಿಗೆ ದಾಳಿಯಿಡುತ್ತಿರುವ ಇಲಿಗಳು ಬೆಳೆಗಳ ಮೇಲೆ ಆಕ್ರಮಣ ಮಾಡುತ್ತಿವೆ. ನೀರಿನ ಹೊಂಡ, ಟ್ಯಾಂಕ್ ಗಳಲ್ಲಿ ಇಲಿಗಳ ಶವ ತೇಲಾಡುತ್ತಿದ್ದು ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ವಿಶ್ವದ ಅತ್ಯಂತ ಹಳೆಯ ಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿರುವ ಪ್ಲೇಗ್, ಇಲಿಗಳಿಂದ ಹರಡುವ ರೋಗ ಇದಾಗಿದೆ. ಅನಾರೋಗ್ಯದ ಇಲಿಗಳು ತನ್ನ ಬಾಯಿಯಿಂದ ಸ್ಪರ್ಶಿಸಿದ ಆಹಾರ ಅಥವಾ ವಸ್ತುವನ್ನು ಮಾನವನು ಮುಟ್ಟಿದರೆ ಪ್ಲೇಗ್ ರೋಗ ಹರಡಬಹುದು. ಅಷ್ಟೇ ಅಲ್ಲದೇ ಪಾಶ್ಚುರೆಲ್ಲಾ ಪೆಸ್ಟಿಸ್ ಎಂಬ ಈ ಬ್ಯಾಕ್ಟೀರಿಯಾ ರೋಗವು ಇಲಿಗಳಿಂದ ವೇಗವಾಗಿ ಹರಡುತ್ತದೆ ಮತ್ತು ಮಾರಕವಾಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತದೆ. ಪೂರ್ವ ಆಸ್ಟ್ರೇಲಿಯಾದ ನಾಗರಿಕರ ಜೀವನಕ್ಕೆ ಕುತ್ತು ತಂದಿರುವ ಪುಟ್ಟ ಇಲಿಗಳು, ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಭೀತಿಯನ್ನು ಆವರಿಸಿದೆ.
Published by: Sushma Chakre
First published: March 26, 2021, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories