ಕಚ್ಚಾ ತೈಲ ಬೆಲೆ ಏರುವ ಸಾಧ್ಯತೆ: ಪೆಟ್ರೋಲ್​ ಬೆಲೆ 150, ಡೀಸೆಲ್​ ಬೆಲೆ 140 ಆದರೂ ಅಚ್ಚರಿಯಿಲ್ಲ

Petrol Diesel Prices to further increase: ಪ್ರತಿ ಬ್ಯಾರೆಲ್‌ಗೆ 80 ಡಾಲರ್‌ ದಾಟಿದ್ದು ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ

Fuel Price

Fuel Price

 • Share this:
  ಜಾಗತಿಕ ದಾಸ್ತಾನುಗಳು ಕಡಿಮೆ ಮಟ್ಟದಲ್ಲಿರುವುದರಿಂದ ಹಾಗೂ ನವೆಂಬರ್ 2014ರಂದು ಕೊನೆಯ ಹಂತ ತಲುಪಿದ್ದ ಯುಎಸ್ ಪ್ರಮಾಣಿತ ತೈಲವು (US Verified Crude Oil) ಅಕ್ಟೋಬರ್ 8ರಂದು ಪ್ರತಿ ಬ್ಯಾರೆಲ್‌ಗೆ 80 ಡಾಲರ್‌ ದಾಟಿದ್ದು ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸಂಭಾವ್ಯ ಇಂಧನ ಬಿಕ್ಕಟ್ಟನ್ನು ಎದುರಿಸುವ ಸಲುವಾಗಿ ಕೇಂದ್ರ ಸರಕಾರವು ಈ ದಿಸೆಯಲ್ಲಿ ಅಲ್ಪಾವಧಿಯ ಹಾಗೂ ಮಧ್ಯಮ ಅವಧಿಯ ಯೋಜನೆಗಳನ್ನು ರೂಪಿಸಬೇಕಾಗಿದೆ. ಇಲ್ಲದಿದ್ದಲ್ಲಿ, ಈಗಾಗಲೇ ಪೆಟ್ರೋಲ್​ ಮತ್ತು ಡೀಸೆಲ್​ (Petrol and Diesel Prices may touch Rs 150) ಬೆಲೆಯಿಂದ ತತ್ತರಿಸುತ್ತಿರುವ ಸಾಮಾನ್ಯ ಜನ ಪ್ರತಿ ಲೀಟರ್​ ಪೆಟ್ರೋಲ್​ಗೆ ರೂ 150 ಮತ್ತು ಡೀಸೆಲ್​ಗೆ ರೂ 140 ಕೊಡಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.  

  ಈಗಾಗಲೇ ಶಕ್ತಿ ಸಮೃದ್ಧ ರಾಷ್ಟ್ರ ಅಮೆರಿಕ (Power rich America) ಸೇರಿದಂತೆ ವಿಶ್ವವೇ ಜಾಗತಿಕ ಇಂಧನ ಬಿಕ್ಕಟ್ಟನ್ನು (Global Fuel Crisis) ಎದುರಿಸುತ್ತಿದೆ. ಬಿಕ್ಕಟ್ಟಿನ ತೀವ್ರತೆಯು ದೇಶಗಳು ಹಾಗೂ ಪ್ರಾಂತ್ಯಗಳನ್ನು ಅವಲಂಬಿಸಿವೆ. ಆದರೆ ಭಾರತದಲ್ಲಿ ಸರಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ಅಥವಾ ಈ ಕುರಿತು ಯೋಜನೆಗಳನ್ನು ರೂಪಿಸದೇ ಇದ್ದರೆ ಸಾರ್ವಜನಿಕರಿಗೆ ಇದರ ಬಗ್ಗೆ ತಿಳಿಯುವ ಸಾಧ್ಯತೆ ಇರುವುದಿಲ್ಲ ಎಂಬುದು ಗಮನಾರ್ಹ ಅಂಶವಾಗಿದೆ.

  ಉದಾಹರಣೆಗೆ ವಿದ್ಯುತ್ ಬೇಡಿಕೆಯನ್ನು (Power need) ಪೂರೈಸಲು ಸಾಕಷ್ಟು ಪ್ರಮಾಣದಲ್ಲಿ ಕಲ್ಲಿದ್ದಲಿನ ದಾಸ್ತಾನುಗಳನ್ನು (Charcoal Stock Crisis) ಹೊಂದಿದ್ದೇವೆ ಎಂಬ ಮಾಹಿತಿಯ ಬೆನ್ನಲ್ಲೇ ಕಲ್ಲಿದ್ದಲಿನ ದಾಸ್ತಾನುಗಳು ಸಾಕಷ್ಟು ಪ್ರಮಾಣದಲ್ಲಿಲ್ಲ ಎಂಬ ಮಾಹಿತಿಯನ್ನೂ ತಿಳಿದುಕೊಳ್ಳುತ್ತೇವೆ. ಹೀಗೆ ಗೊಂದಲಮಯವಾಗಿರುವ ವಿವರಗಳಿಂದ ಜನರು ಸಂಪನ್ಮೂಲಗಳ ಕೊರತೆಯ ಕುರಿತು ಮಾಹಿತಿ ತಿಳಿದುಕೊಂಡಿರುವುದಿಲ್ಲ.

  ಇಂಧನ ಬಿಕ್ಕಟ್ಟಿನ ಪ್ರಮುಖ ಸಮಸ್ಯೆ ಇದಾಗಿದ್ದರೆ ಆಮದು ಮಾಡಿಕೊಂಡ LNG (Liquified Natural Gas) ಹಾಗೂ ಕಚ್ಚಾ ತೈಲ ಬೆಲೆಗಳ ಅನಿರೀಕ್ಷಿತ ಬೆಲೆ ಏರಿಕೆ ಇನ್ನೊಂದು ಸಮಸ್ಯೆಯಾಗಿದೆ. ಇದೀಗ ತಾನೇ ಕೊರೋನಾ ಸಾಂಕ್ರಾಮಿಕದ ಹೊಡೆತಗಳಿಂದ ಚೇತರಿಸಿಕೊಳ್ಳುತ್ತಿದ್ದು ಈ ಬೃಹತ್ ಬೆಲೆ ಏರಿಕೆ ಸಮಸ್ಯೆಗಳನ್ನು ನಿಭಾಯಿಸುವುದು ಅಷ್ಟೊಂದು ಸುಲಭದ ಮಾತಲ್ಲ.

  ಇಂಧನ ಬಿಕ್ಕಟ್ಟನ್ನು ಎದುರಿಸಲು ದೇಶಗಳು ವಿಫಲವಾಗಿವೆಯೇ..?

  ಕೆಲವೊಂದು ದೇಶಗಳು ಈ ದಿಸೆಯಲ್ಲಿ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದ್ದು ಆರ್ಥಿಕತೆ ಪುನರುಜ್ಜೀವನಗೊಳಿಸಲು ಶಕ್ತಿಯ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಹೊಸ ಹೊಸ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದರೆ ಇನ್ನು ಕೆಲವೊಂದು ದೇಶಗಳು ಮೂರನೇ ಅಥವಾ ನಾಲ್ಕನೇ ಕೋವಿಡ್ ಅಲೆಯ ಸಮಯದಲ್ಲಿ ತೈಲ ಬೇಡಿಕೆಗಳು ಕಡಿಮೆಯಾಗಬಹುದೆಂಬ ಆಶಾವಾದದಲ್ಲಿದ್ದಾರೆ.

  ಒಟ್ಟಾರೆ ವಿದ್ಯುತ್ ಸರಬರಾಜಿನ ಬಿಕ್ಕಟ್ಟಾಗಿರಬಹುದು. ಇಲ್ಲವೇ ಇಂಧನ ಬಿಕ್ಕಟ್ಟಿನಂತಹ ಪ್ರಮುಖ ಸಮಸ್ಯೆಗಳನ್ನು ನಿರ್ವಹಿಸಲು ಅಗತ್ಯವಿರುವ ಪೂರ್ವ ಯೋಜನೆಗಳನ್ನು ಸಿದ್ಧಪಡಿಸುವಲ್ಲಿ ಪ್ರತಿಯೊಂದು ದೇಶಗಳೂ ವಿಫಲವಾಗಿವೆ ಎಂಬುದು ಮೇಲ್ಮುಖವಾಗಿ ಮನದಟ್ಟಾಗುತ್ತಿದೆ.

  ತೈಲ ಬೆಲೆಗಳು ಏರಿಕೆಯಾಗಲಿವೆಯೇ?

  ಇಂಗ್ಲೆಂಡ್‌ನಲ್ಲಿ ವಿದ್ಯುತ್ ಪೂರೈಕೆಗಾಗಿ ಬೀಗ ಜಡಿದಿದ್ದ ಕಲ್ಲಿದ್ದಲು ವಿದ್ಯುತ್ ಸ್ಥಾವರ ಪುನಃ ಆರಂಭಿಸಲಾಗಿದ್ದು ಕೆಲವೊಂದು ದೇಶಗಳು ಕಲ್ಲಿದ್ದಲಿನ ಕೊರತೆ ಮತ್ತು ಹೆಚ್ಚಿನ ನೈಸರ್ಗಿಕ ಅನಿಲದ ಬೆಲೆಯಿಂದಾಗಿ ತೈಲ ವಿದ್ಯುತ್ ಸ್ಥಾವರಗಳನ್ನು ಪ್ರಾರಂಭಿಸಿವೆ. ಈ ವರ್ಷದ ಫೆಬ್ರವರಿಯಲ್ಲಿ ರಾಯಿಟರ್ಸ್‌ನ 50 ತಜ್ಞರ ಮಾಸಿಕ ಸಮೀಕ್ಷೆಯು 2021ರಲ್ಲಿ ಬ್ರೆಂಟ್ ಬೆಲೆ (ಕಚ್ಚಾ ತೈಲಗಳ ಪ್ರಮುಖ ಜಾಗತಿಕ ಬೆಲೆ ಮಾನದಂಡ) ಸರಾಸರಿ $54.47/b ಎಂದು ಊಹಿಸಿದ್ದು ಇದು $75/b ಗೆ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ತೈಲ ಬೆಲೆಗಳು ವರ್ಷಾಂತ್ಯದ ಮೊದಲು $90/b ತಲುಪುತ್ತದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ ಊಹಿಸುತ್ತಿದೆ.

  ತೈಲ ಬೆಲೆಗಳು ಏರಿಕೆಯಾದಂತೆ ಯುಎಸ್ ಶೇಲ್ ಉತ್ಪಾದಕರಿಗೆ ಉತ್ಪಾದನೆ ಹೆಚ್ಚಿಸಲು ಆರ್ಥಿಕ ಉತ್ತೇಜನ ನೀಡಲಾಗುತ್ತದೆ ಎಂದು ಊಹಿಸಿದ್ದರು. ಹಲವಾರು ಕಾರಣಗಳಿಂದ ಇದು ಕಾರ್ಯರೂಪಕ್ಕೆ ಬರಲಿಲ್ಲ. ಹಣ ಕಳೆದುಕೊಳ್ಳುವ ಭೀತಿಯಿಂದ ಬ್ಯಾಂಕ್‌ಗಳು ಶೇಲ್ ಉತ್ಪಾದಕರಿಗೆ ಆರ್ಥಿಕ ನೆರವನ್ನು ನೀಡಿಲ್ಲ ಎಂಬುದು ಒಂದು ಕಾರಣವಾದರೆ ಏರಿಕೆಯಾದ ತೈಲ ಬೆಲೆಗಳು ಎಷ್ಟು ಕಾಲ ಹೀಗೆಯೇ ಇರುತ್ತದೆ ಎಂಬುದನ್ನು ತಿಳಿಯದೇ ತೈಲ ಉತ್ಪಾದಕರು ಹಾಗೂ ಹೂಡಕೆದಾರರು ಹೂಡಿಕೆ ಮಾಡಲು ಉತ್ಸುಕರಾಗಿಲ್ಲದೇ ಇರುವುದಾಗಿದೆ.

  ಸಾಮರ್ಥ್ಯದ ಕೊರತೆ:

  OPEC-ಪ್ಲಸ್‌ (ಕಚ್ಚಾ ತೈಲವನ್ನು ರಫ್ತು ಮಾಡುವ ದೇಶಗಳು) ಸಾಮರ್ಥ್ಯವನ್ನು ಅಂದಾಜಿಸುವುದು ಅಜ್ಞಾತ ಅಂಶವಾಗಿತ್ತು. IEA (ಅಂತಾರಾಷ್ಟ್ರೀಯ ಶಕ್ತಿ ಏಜೆನ್ಸಿ) ಯ ಪ್ರಕಾರ 2021ರ ಆರಂಭದಲ್ಲಿ ಪ್ರತಿ ದಿನಕ್ಕೆ 9 ಮಿಲಿಯನ್ ಬ್ಯಾರೆಲ್‌ಗಳು ಎಂದಾಗಿತ್ತು ಇನ್ನು ಕೆಲವರು 6 mmbd ಅನ್ನು ಉತ್ಪಾದಿಸಬಹುದು ಎಂದು ಅಂದಾಜಿಸಿದ್ದರು. ಪೂರೈಕೆಯನ್ನು ಮೀರಿದ ಬೇಡಿಕೆ ಹಾಗೂ ಹೆಚ್ಚುವರಿ ತೈಲ ದಾಸ್ತಾನಿನ ಕುಸಿತದ ಹೊರತಾಗಿಯೂ ಉತ್ಪಾದನೆ ಹೆಚ್ಚಿಸಲಿಲ್ಲ.

  OPEC ಹಾಗೂ ಮುಖ್ಯವಾಗಿ ಸೌದಿ ಅರೇಬಿಯಾಗೆ ಪೂರೈಕೆ ಹೆಚ್ಚಿಸಲು ಯುಎಸ್ ಅಧ್ಯಕ್ಷರ ಒತ್ತಡ/ವಿನಂತಿಯ ಹೊರತಾಗಿಯೂ ರಾಜಕೀಯ ಒತ್ತಡಕ್ಕೆ ಒಳಗಾಗುವ ತೈಲಬೆಲೆಗಳು ಏರಿಕೆಯ ಹಾದಿಯನ್ನು ಹಿಡಿದಿವೆ. ಇದರಿಂದಾಗಿ ಕೂಡ ಪೂರೈಕೆ ನಿರ್ಬಂಧಗಳು ಸೃಷ್ಟಿಯಾಗುತ್ತಿವೆ ಎಂಬುದು ಇನ್ನೊಂದು ಸೂಚನೆಯಾಗಿದೆ.

  ಇದನ್ನೂ ಓದಿ: Explained: Databricks ಸ್ಟಾರ್ಟಪ್ ಗೂಗಲ್, ಅಮೆಜಾನ್ ಹಾಗೂ ಮೈಕ್ರೋಸಾಫ್ಟ್‌ಗೆ ಪೈಪೋಟಿ ನೀಡುವಂತೆ ಬೆಳೆದದ್ದು ಹೇಗೆ?

  ತೈಲ ಉತ್ಪಾದನೆಯು ಪ್ರತಿ ವರ್ಷ 3-5%ರಷ್ಟು ಕುಸಿಯುತ್ತಿರುವುದರಿಂದ ಶೇಲ್ ತೈಲಕ್ಕೆ ಹೆಚ್ಚು ಹೆಚ್ಚು ಬೇಡಿಕೆ ಉಂಟಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ಅಂಶವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮತ್ತು ವಿಶೇಷವಾಗಿ ಸಾಂಕ್ರಾಮಿಕ ರೋಗದಿಂದ ತೈಲ ಮತ್ತು ಅನಿಲದಲ್ಲಿನ ಹೂಡಿಕೆಯು ಕಡಿಮೆಯಾಗುತ್ತಿರುವುದರಿಂದ IEA ಈ ನೈಸರ್ಗಿಕ ವಿದ್ಯಮಾನದ ಬಗ್ಗೆ ಎಚ್ಚರಿಕೆ ನೀಡುತ್ತಿದೆ. ಕಳೆದ 6 ವರ್ಷಗಳಲ್ಲಿ ತೈಲ ಉದ್ಯಮದಲ್ಲಿನ ಹೂಡಿಕೆಯು ಗಣನೀಯವಾಗಿ ಕುಸಿದಿರುವುದರಿಂದ OPEC+ ಮತ್ತು ಇತರ ದೇಶಗಳಲ್ಲಿ ಉತ್ಪಾದನಾ ಸಾಮರ್ಥ್ಯದ ಕುಸಿತಕ್ಕೆ ಇದು ಮತ್ತೊಂದು ಅಂಶವಾಗಿದೆ.

  ಇದನ್ನೂ ಓದಿ: Explained: ಕರ್ನಾಟಕ ಸರಕಾರ ಚರ್ಚ್‌ಗಳ ಸಮೀಕ್ಷೆಯನ್ನು ಏಕೆ ನಡೆಸುತ್ತಿದೆ? ಕ್ರಿಶ್ಚಿಯನ್ ಸಮುದಾಯ ಏಕೆ ವಿರೋಧಿಸುತ್ತಿದೆ?

  ಭಾರತ ಈ ಸಮಸ್ಯೆಯನ್ನು ಹೇಗೆ ನಿರ್ವಹಿಸಬಹುದು?

  ಭಾರತದಲ್ಲಿ ಶಕ್ತಿಯ ಪರಿವರ್ತನೆಯು ಇನ್ನೂ ಆರಂಭ ಹಂತದಲ್ಲಿದೆ. ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ತಲೆದೋರುವ ಇಂಧನ ಬಿಕ್ಕಟ್ಟುಗಳನ್ನು ಸಮಗ್ರವಾಗಿ ನಿರ್ವಹಿಸಲು ಉತ್ತಮ ತಜ್ಞರನ್ನು ಹೊಂದುವ ಅಗತ್ಯತೆ ಇದೆ. ಸೌರ ಹಾಗೂ ಗಾಳಿಯ ಪ್ರಸ್ತುತ ಪಾತ್ರವು ಸಾಕಷ್ಟು ಚಿಕ್ಕದಾಗಿರುವುದರಿಂದ ಸ್ಥಳೀಯ ಕಲ್ಲಿದ್ದಲು ದಾಸ್ತಾನಿನಲ್ಲಿ ಭಾರತ ಇಂಧನ ಬಿಕ್ಕಟ್ಟನ್ನು ಎದುರಿಸುವುದಿಲ್ಲವೆಂದು ಹೇಳಬಹುದು. ಆದರೂ, ಪೆಟ್ರೋಲಿಯಂ, ಕಲ್ಲಿದ್ದಲು, ನವೀಕರಿಸಬಹುದಾದ ಮತ್ತು ಶಕ್ತಿಯಂತಹ ಎಲ್ಲಾ ಇಂಧನ-ಸಂಬಂಧಿತ ಸಚಿವಾಲಯಗಳನ್ನು ವಿಲೀನಗೊಳಿಸಿ ಕೇವಲ ಒಂದು ಇಂಧನ ಸಚಿವಾಲಯ ಹೊಂದಲು ಸರಕಾರವು ಗಂಭೀರವಾಗಿ ಪರಿಗಣಿಸಬೇಕು.
  Published by:Sharath Sharma Kalagaru
  First published: