ಜನವರಿ 21 ರಂದು ನರ್ವಾಲ್ ಸ್ಫೋಟದ ಆರೋಪಿ ಆರಿಫ್‌ನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು (Jammu And Kashmir Police) ಬಂಧಿಸಿದಾಗ, ಅವನ ಬಳಿ ವಿಶೇಷ ಮಾದರಿಯ ಬಾಂಬ್ ಸಹ ಪತ್ತೆಯಾಗಿತ್ತು. ಪೊಲೀಸರು ಇದನ್ನು ಪರ್ಫ್ಯೂಮ್ ಬಾಂಬ್ (Perfume Bomb) ಎಂದೂ ಕರೆಯುತ್ತಾರೆ. ಈ ರೀತಿಯ ಬಾಂಬ್ ಅನ್ನು ನಾವು ಮೊದಲ ಬಾರಿಗೆ ವಶಪಡಿಸಿಕೊಂಡಿದ್ದೇವೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಇದರ ಪ್ರಕಾರ, ಪರ್ಫ್ಯೂಮ್ ಐಇಡಿ (Perfume IED) ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಾದ್ಯಂತ ಮೊದಲ ಬಾರಿಗೆ ಪತ್ತೆಯಾಗಿದೆ. ಜನವರಿ 20 ರಂದು ನರ್ವಾಲ್‌ನಲ್ಲಿ ಲಷ್ಕರ್-ಎ-ತೊಯ್ಬಾ (Lashkar-e-Taiba) ಭಯೋತ್ಪಾದಕರು ಬಾಂಬ್‌ಗಳನ್ನು (Terrorists) ತಯಾರಿಸಿದ್ದರು ಎಂದು ಅವರು ಹೇಳಿದರು. ಜನವರಿ 21 ರಂದು 20 ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟಗಳು (Explosions)ಸಂಭವಿಸಿದ್ದವು. ಮೊದಲ ಸ್ಫೋಟದಲ್ಲಿ 9 ಮಂದಿ ಗಾಯಗೊಂಡಿದ್ದರು.
ಈ ಹಿಂದೆ ಹಲವು ಬಾರಿ ಪರ್ಫ್ಯೂಮ್ ಬಾಂಬ್ ಚರ್ಚೆಗೆ ಬಂದಿತ್ತು, ಆದರೆ ಅದು ಪತ್ತೆಯಾಗಿರಲಿಲ್ಲ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಖಾಲಿ ಸುಗಂಧ ದ್ರವ್ಯದ ಬಾಟಲಿಗಳು ಮತ್ತು ಸುಧಾರಿತ ಸ್ಫೋಟಕ ಸಾಧನಗಳ ಸಹಾಯದಿಂದ ಈ ಬಾಂಬ್ ಅನ್ನು ತಯಾರಿಸಲಾಗುತ್ತದೆ ಎಂದು ಅವರು ಹೇಳಿದರು. ಅದಕ್ಕಾಗಿಯೇ ಇದನ್ನು ಪರ್ಫ್ಯೂಮ್ ಎಂದು ಕರೆಯಲಾಗುತ್ತದೆ. ಯಾರಾದರೂ ಅದರ ಮುಚ್ಚಳವನ್ನು ಒತ್ತಿದರೆ ಅಥವಾ ತೆರೆದ ತಕ್ಷಣ ಸ್ಫೋಟ ಸಂಭವಿಸುತ್ತದೆ ಎಂದು ಅವರು ಹೇಳುತ್ತಾರೆ. ನಮ್ಮ ವಿಶೇಷ ತಂಡ ಐಇಡಿ ಪರ್ಫ್ಯೂಮ್ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Explained: ಹಸುಗಳು ಮತ್ತು ಕುರಿಗಳು ಹವಾಮಾನ ಬದಲಾವಣೆಗೆ ಹೇಗೆ ಕೊಡುಗೆ ನೀಡುತ್ತವೆ?
11 ದಿನಗಳ ಪರಿಶ್ರಮದಿಂದ ಬಂಧನ
ಜಮ್ಮುವಿನಲ್ಲಿ ಬ್ಲಾಸ್ಟ್ ನಡೆದ 11 ದಿನಗಳ ನಂತರ ಜಮ್ಮು ಪೊಲೀಸರ ಸತತ ಪರಿಶ್ರಮದಿಂದಾಗಿ ರಿಯಾಸಿ ಜಿಲ್ಲೆಯ ನಿವಾಸಿಯಾಗಿರುವ ಆರಿಫ್ ಅಹ್ಮದ್ನನ್ನು ಬಂಧಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಡಿಜಿಪಿ ದಿಲ್ಬಾಗ್ ಸಿಂಗ್ ಮಾಹಿತಿ ನೀಡಿದ್ದಾರೆ. ಗಣರಾಜ್ಯೋತ್ಸವ ಆಚರಣೆಗೆ ಐದು ದಿನ ಬಾಕಿಯಿರುವಾಗ ಜನವರಿ 21ರಂದು ಜಮ್ಮುವಿನ ನರ್ವಾಲ್ ಕೈಗಾರಿಕಾ ಪ್ರದೇಶದಲ್ಲಿ ಎರಡು ಐಇಡಿ ಸ್ಫೋಟಿಸಲಾಗಿತ್ತು. ಮೊದಲ ಸ್ಟೋಟದಲ್ಲಿ ಐವರು ಮತ್ತು ಎರಡನೇ ಸ್ಫೋಟದಲ್ಲಿ ನಾಲ್ವರು ಸೇರಿ ಒಟ್ಟು ಒಂಬತ್ತು ಮಂದಿ ಗಾಯಗೊಂಡಿದ್ದರು.
ಆರಿಫ್ ಸರ್ಕಾರಿ ನೌಕರನಾಗಿದ್ದು, ಲಷ್ಕರ್-ಎ-ತೊಯ್ಬಾ ಸಂಘಟನೆಯ ಸಕ್ರಿಯ ಉಗ್ರ. ಅವನು ಪಾಕಿಸ್ತಾನ ಮೂಲ ಖಾಸಿಮ್ ಮತ್ತು ಅವರ ಚಿಕ್ಕಪ್ಪ ಕಮರ್ದಿನ್ ಅವರ ಆಜ್ಞೆಯ ಮೇರೆಗೆ ಈ ಕೆಲಸ ಮಾಡುತ್ತಿದ್ದ. ಕಮರ್ದಿನ್ ಲಷ್ಕರ್-ಎ-ತೊಯ್ಬಾದ ಸಂಘಟನೆಯಲ್ಲಿದ್ದಾನೆ. ಬಂಧಿತನಾಗಿರುವ ಆರಿಫ್ ಮೂರು ಐಇಡಿ ಸ್ಫೋಟದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. 2010ರಲ್ಲಿ ಸರ್ಕಾರಿ ಶಿಕ್ಷಕನಾಗಿದ್ದ ಸೇರಿದ್ದ ನಂತರ 2016ರಲ್ಲಿ ಶಿಕ್ಷಕ ಹುದ್ದೆಯನ್ನು ಖಾಯಂಗೊಳಿಸಲಾಗಿತ್ತು. ಶಾಸ್ತ್ರಿ ನಗರ, ಕತ್ರಾ ಮತ್ತು ಜನವರಿ 21 ರಂದು ಜಮ್ಮುವಿನ ನರ್ವಾಲ್ ನಡೆದ ಸ್ಫೋಟಗಳಲ್ಲಿ ಈತ ಭಾಗಿಯಾಗಿದ್ದ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ಮಾಹಿತಿ ನೀಡಿದರು.
ಇದನ್ನೂ ಓದಿ: Explained: ಭಾರತಕ್ಕೆ ಚಿಂತೆ ತಂದೊಡ್ಡಿದೆ ಹದಗೆಟ್ಟಿರುವ ಪಾಕಿಸ್ತಾನದ ಆರ್ಥಿಕತೆ!
ಹೇಗೆ ತಯಾರಾಗುತ್ತೆ ಪರ್ಫ್ಯೂಮ್ ಬಾಂಬ್?
ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ, ನರ್ವಾಲ್ ಸ್ಫೋಟದಲ್ಲಿ ಪರ್ಫ್ಯೂಮ್ ಬಾಂಬ್ ಬಳಸಲಾಗಿದೆ. ಆರಿಫ್ ಈ ಹಿಂದೆ ಶಾಸ್ತ್ರಿ ನಗರ ಮತ್ತು ಕತ್ರಾದಲ್ಲಿ ಬಸ್ ಸ್ಫೋಟಗಳನ್ನು ನಡೆಸಿದ್ದರು. ಅವರು 3 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಹ್ಯಾಂಡ್ಲರ್ ಆಗಿದ್ದಾರೆ. ಪರ್ಫ್ಯೂಮ್ ಸುಧಾರಿತ ಸ್ಫೋಟಕ ಸಾಧನವನ್ನು ಸಿದ್ಧಪಡಿಸಲು, ಭಯೋತ್ಪಾದಕರು ಪರ್ಫ್ಯೂಮ್ ಖಾಲಿ ಬಾಟಲಿಯನ್ನು ತೆಗೆದುಕೊಂಡು ಅದರಲ್ಲಿ ಸ್ಫೋಟಕ ಸಾಧನವನ್ನು ಹಾಕುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಾಂಬ್ ಬಗ್ಗೆ ಜನರಿಗೆ ಹೆಚ್ಚು ತಿಳಿದಿಲ್ಲ. ಆದ್ದರಿಂದಲೇ ಭಯೋತ್ಪಾದಕರು ಅದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಿ ಇಡುವುದು ತುಂಬಾ ಸುಲಭ ಎನ್ನಲಾಗಿದೆ.
ಪರ್ಫ್ಯೂಮ್ IED ಎಷ್ಟು ಮಾರಕ?
ಪರ್ಫ್ಯೂಮ್ನ ಮುಚ್ಚಳವನ್ನು ಒತ್ತಿದಾಗ ಅಥವಾ ತೆರೆದಾಗ IED ಸಕ್ರಿಯಗೊಳ್ಳುತ್ತದೆ. ಇದರ ನಂತರ ಸ್ಫೋಟ ಸಂಭವಿಸಿದೆ. ಪೊಲೀಸರ ಪ್ರಕಾರ ಇದರ ಪರಿಣಾಮ ವ್ಯಾಪಕವಾಗಿದೆ. ಇದು ಎಷ್ಟು ಮಾರಣಾಂತಿಕವಾಗಿದೆ ಎಂದರೆ ಅದರ ಬಳಿ ಇರುವವರ ದೇಹ ಚೂರು ಚೂರಾಗುತ್ತದೆ ಎನ್ನಲಾಗಿದೆ. ಪರ್ಫ್ಯೂಮ್ ಬಾಂಬ್ ಸಾಮಾನ್ಯವಾದ ಸುಗಂಧ ದ್ರವ್ಯದ ಬಾಟಿಲಿಯಂತಿರುತ್ತದೆ. ಹೀಗಾಗೇ ತಮ್ಮ ಬಳಿ ಇರುವ ಬಾಟಲ್ ಪರ್ಫ್ಯೂಮ್ ಬಾಂಬ್ ಆಗಿರಬಹುದೆಂದು ಊಹಿಸುವುದೂ ಅಸಾಧ್ಯವಾಗಿದೆ. ಈ ಹಿಂದೆಯೂ ಹಲವು ಬಾರಿ ಪರ್ಫ್ಯೂಮ್ ಬಾಂಬ್ ಚರ್ಚೆಗೆ ಬಂದಿದೆ.
.
ಸುಗಂಧ ಬಾಂಬ್ ಮೊದಲ ಬಾರಿಗೆ ಬೆಳಕಿಗೆ ಬಂದದ್ದು ಯಾವಾಗ?
2011 ರಲ್ಲಿ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಪರ್ಫ್ಯೂಮ್ ಬಾಂಬ್ ಬಗ್ಗೆ ಕೊನೆಯ ಎಚ್ಚರಿಕೆಯನ್ನು ನೀಡಿತ್ತು. ಇದರ ನಂತರ, ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರತಿಯೊಬ್ಬ ಪ್ರಯಾಣಿಕರೂ ತಮ್ಮ ಬಳಿ ಲಭ್ಯವಿರುವ ಪರ್ಫ್ಯೂಮ್ ಬಳಸಿದ ನಂತರವೇ ಮುಂದುವರಿಯಲು ಅನುಮತಿ ನೀಡಲಾಗುತ್ತಿತ್ತು. ಅದೇ ವರ್ಷದಲ್ಲಿ, ಕೋಲ್ಕತ್ತಾದ ಪೊಲೀಸರು ನಗರದ ಎಲ್ಲೆಡೆಯಿಂದ ಸುಗಂಧ ದ್ರವ್ಯದ ಬಾಟಲಿಗಳನ್ನು ಸಂಗ್ರಹಿಸಿದ್ದರು. ಇದರೊಂದಿಗೆ ಕೋಲ್ಕತ್ತಾ ವಿಮಾನ ನಿಲ್ದಾಣ ಮತ್ತು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ