Explained: 2 ಡೋಸ್ ಲಸಿಕೆ ಪಡೆದವರು ಈ ಕೋವಿಡ್‌ ನಿಯಮಗಳನ್ನು ಪಾಲಿಸಬೇಕೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ನಿಮ್ಮ ಬಳಿ ವೈದ್ಯಕೀಯ ಮಾಸ್ಕ್ ಇಲ್ಲದಿದ್ದರೆ ಬಟ್ಟೆಯ ಮಾಸ್ಕ್‌ನ ಮೇಲೆ ಸರ್ಜಿಕಲ್ ಮಾಸ್ಕ್ ಅನ್ನು ನೀವು ಬಳಸಬಹುದಾಗಿದೆ. ನೀವು ತರಕಾರಿ ಅಂಗಡಿ, ಇಲ್ಲವೇ ಗುಂಪುಗೂಡಿರುವ ಪ್ರದೇಶಗಳಿಗೆ ಹೋಗುತ್ತಿದ್ದಲ್ಲಿ ಹೆಚ್ಚಿನ ಸುರಕ್ಷತೆಯ ವೈದ್ಯಕೀಯ ಮಾಸ್ಕ್‌ಗಳನ್ನು ಧರಿಸುವುದು ಉತ್ತಮವಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:

  ಲಸಿಕೆ ತೆಗೆದುಕೊಂಡವರಿಗೆ ಕೋವಿಡ್ ಸೋಂಕು ಏನೂ ಮಾಡುವುದಿಲ್ಲ, ನಾವಿನ್ನು ನಿರ್ಭೀತಿಯಿಂದ ಮೊದಲಿನಂತೆ ಇರಬಹುದು ಎಂದು ಭಾವಿಸಿದ್ದರೆ ಎಲ್ಲಾ ಯೋಜನೆಗಳನ್ನು ಪ್ರಸ್ತುತ ಡೆಲ್ಟಾ ರೂಪಾಂತರ ತಲೆಕೆಳಗು ಮಾಡಿದೆ. ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ ನಂತರವೂ ಮಾಸ್ಕ್ ಧರಿಸಬೇಕು, ಕೈಗಳನ್ನು ಆಗಾಗ್ಗೆ ತೊಳೆಯಬೇಕು ಹಾಗೂ ಸಾಮಾಜಿಕ ಅಂತರ ಪಾಲಿಸಬೇಕು ಎಂಬ ನಿಯಮಾವಳಿಗಳು ಜನರನ್ನು ಚಿಂತಿತರಾಗುವಂತೆ ಮಾಡಿದೆ. ಆದರೆ, ಇತ್ತೀಚಿನ ಸಂಶೋಧನೆಗಳಿಂದ ತಿಳಿದು ಬಂದಿರುವ ಅಂಶವೇನೆಂದರೆ ಲಸಿಕೆ ತೆಗೆದುಕೊಳ್ಳದವರಿಗೆ ಹೋಲಿಸಿದಾಗ ಕೋವಿಡ್ ಲಸಿಕೆ ತೆಗೆದುಕೊಂಡವರನ್ನು ವೈರಾಣು ಅಷ್ಟೊಂದು ತೊಂದರೆಗೆ ಒಳಪಡಿಸುತ್ತಿಲ್ಲ ಎಂಬುದಾಗಿದೆ.


  ನೀವು ಲಸಿಕೆ ಪಡೆದುಕೊಂಡವರಾಗಿದ್ದರೆ ನಿಮ್ಮ ಕುಟುಂಬ ಹಾಗೂ ಸಾಮಾಜಿಕ ಪರಿವಾರಕ್ಕಾಗಿ ನೀವು ಮಹತ್ತರ ಕಾರ್ಯ ಮಾಡಿದಂತೆಯೇ ಎಂಬುದು ಪಬ್ಲಿಕ್ ಹೆಲ್ತ್‌ನ ಸಾಂಕ್ರಾಮಿಕ ರೋಗಶಾಸ್ತ್ರ ಪ್ರಾಧ್ಯಾಪಕ ಗ್ರೇಗ್ ಗೊನ್ಸಾಲ್ವಿಸ್ ಅಭಿಪ್ರಾಯವಾಗಿದೆ. ಒಟ್ಟಿನಲ್ಲಿ ಲಸಿಕೆ ಪಡೆದವರಿಗೆ ಸಂಪೂರ್ಣ ಸ್ವಾತಂತ್ರ್ಯ ಎಂಬುದಂತೂ ಸತ್ಯದ ಮಾತಾಗಿದೆ. ಆದರೆ ಇತ್ತೀಚಿನ ಡೆಲ್ಟಾ ರೂಪಾಂತರದ ತೀವ್ರ ಏರಿಕೆ ಪರಿಗಣಿಸಿದಾಗ ಲಸಿಕೆ ಪಡೆದವರೂ ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ ಎಂಬುದು ಗ್ರೇಗ್ ಸಂದೇಶವಾಗಿದೆ.


  ಹೆಚ್ಚಿನ ಜನರು ಲಸಿಕೆಯ ಡೋಸ್‌ಗಳನ್ನು ಪೂರ್ಣಗೊಳಿಸದೇ ಇರುವುದರಿಂದ ಲಸಿಕೆ ಪಡೆದವರೂ ಡೆಲ್ಟಾ ದಾಳಿಗೆ ತುತ್ತಾಗುವ ಸಂಭವ ಇರುತ್ತದೆ. ಇನ್ನು 12 ವರ್ಷದೊಳಗಿನ ಮಕ್ಕಳು ಲಸಿಕೆಯನ್ನು ಪಡೆಯಲು ಅರ್ಹರಲ್ಲವಾದ್ದರಿಂದ ಪೋಷಕರಿಗೆ ಈ ಚಿಂತೆಯೂ ಕಾಡಿದೆ. ಲಸಿಕೆ ಪಡೆದವರೂ ಯಾವ ರೀತಿಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಲಾಗಿದೆ.


  ನಾನು ಲಸಿಕೆ ಪಡೆದಿದ್ದರೂ ಡೆಲ್ಟಾದ ಕುರಿತು ಏಕೆ ಚಿಂತಿಸಬೇಕು?


  ಲಸಿಕೆಯು 100% ಸಂರಕ್ಷಣೆಯನ್ನು ನೀಡುತ್ತದೆ ಎಂಬುದು ಖಚಿತವಾಗಿಲ್ಲ. ಲಸಿಕೆ ಪಡೆದಾಗ ರೋಗದ ತೀವ್ರತೆಯಿಂದ ನಿಮಗೆ 90% ಸುರಕ್ಷತೆ ಲಭ್ಯವಾದರೂ 10% ಅಪಾಯ ಇದ್ದೇ ಇರುತ್ತದೆ. ಲಸಿಕೆ ಪಡೆಯದವರಿಗಿಂತ ಲಸಿಕೆ ಪಡೆದವರಲ್ಲಿ ಪ್ರತಿಕಾಯಗಳು ಸೃಷ್ಟಿಯಾಗುವುದರಿಂದ ಕೋವಿಡ್‌ನಿಂದ ತೀವ್ರ ಹಾನಿಗೊಳಗಾಗುವುದಿಲ್ಲ ಎಂಬ ಖಾತ್ರಿ ಮಾತ್ರ ದೊರೆಯಲಿದೆ. ಇನ್ನುಳಿದಂತೆ ಸಂರಕ್ಷಣೆಯನ್ನು ನೀವೇ ಸ್ವತಃ ಮಾಡಬೇಕಾಗುತ್ತದೆ ಎಂಬುದು ಗ್ರೇಗ್ ಸಲಹೆಯಾಗಿದೆ. ಲಸಿಕೆಯು ನಿಮ್ಮನ್ನು ತೀವ್ರ ರೋಗದ ಬಾಧೆ, ಆಸ್ಪತ್ರೆಗೆ ದಾಖಲಾಗುವಿಕೆ ಹಾಗೂ ಮರಣ ಪ್ರಮಾಣದಿಂದ ಸಂರಕ್ಷಣೆಯನ್ನು ನೀಡುತ್ತದೆ.


  ಇದನ್ನೂ ಓದಿ: Diabetics Food: ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಿಸಲು ಮಧುಮೇಹಿಗಳು ಈ ಆಹಾರ ನಿಯಮ ಪಾಲಿಸಿದರೆ ಉತ್ತಮ

  ಕೋವಿಡ್ – 19 ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದವರ ಮೇಲೆ ರೋಗದ ತೀವ್ರತೆ ಹೇಗಿದೆ?


  ಅಧ್ಯಯನದ ಪ್ರಕಾರ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದವರಲ್ಲಿ ತೀವ್ರ ರೋಗ ಲಕ್ಷಣ, ಆಸ್ಪತ್ರೆಗೆ ದಾಖಲಾಗುವುದು, ಮರಣ ಪ್ರಮಾಣ ಹೀಗೆ ಪ್ರತಿಯೊಂದರಲ್ಲೂ ಇಳಿಕೆಯನ್ನು ಕಾಣಲಾಗಿದೆ. ಇನ್ನು ಲಸಿಕೆ ಪಡೆದುಕೊಂಡವರಲ್ಲಿ ಕೋವಿಡ್‌ನ ಸೌಮ್ಯ ಲಕ್ಷಣಗಳು ಕಂಡುಬಂದಿವೆ.


  ನಾನು ಮಾಸ್ಕ್ ಯಾವಾಗ ಧರಿಸಬೇಕು?


  ಹೊರದೇಶದಲ್ಲಿ ನೀಲಿ, ಹಳದಿ, ಕಿತ್ತಳೆ ಹಾಗೂ ಕೆಂಪು ವಲಯಗಳನ್ನು ಕೋವಿಡ್‌ನ ಏರಿಳಿತಕ್ಕೆ ಅನುಗುಣವಾಗಿ ವರ್ಗೀಕರಿಸಲಾಗಿದ್ದು ನೀಲಿ ಹಾಗೂ ಹಳದಿಯು ರೋಗದಿಂದ ಕಡಿಮೆ ತೀವ್ರತೆಯನ್ನು ವ್ಯಕ್ತಪಡಿಸಿದೆ. ಇನ್ನು ಕಿತ್ತಳೆ ಹಾಗೂ ಕೆಂಪು ವಲಯವು 50 ರಿಂದ 10,000 ಪ್ರಕರಣಗಳನ್ನು ದಾಖಲಿಸಿದೆ. ಕಿತ್ತಳೆ ಹಾಗೂ ಕೆಂಪು ವಲಯದಲ್ಲಿದ್ದವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಅಲ್ಲಿನ ಆಡಳಿತ ಮಂಡಳಿ ಸೂಚಿಸಿದೆ. ಇನ್ನು ನೀವು ಹೊರಗಡೆ ಇದ್ದಾಗಲೂ ಗುಂಪಿನಿಂದ ದೂರವಿದ್ದೀರಿ ಹಾಗೂ ಸಾಮಾಜಿಕ ಅಂತರ ಪಾಲಿಸಿದ್ದೀರಿ ಎಂದಾದಲ್ಲಿ ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


  ಉತ್ತಮ ಗುಣಮಟ್ಟದ ಮಾಸ್ಕ್ ಧರಿಸಬೇಕೆ?


  ಹೆಚ್ಚು ಗುಣಮಟ್ಟದ ವೈದ್ಯಕೀಯ ಮಾಸ್ಕ್‌ಗಳಾದ ಎನ್95 ಹಾಗೂ ಕೆಎನ್95 ನಿಂದ ಹೆಚ್ಚಿನ ಸುರಕ್ಷತೆಯನ್ನು ಪಡೆಯುತ್ತೀರಿ. ಕೆಎಫ್94 ಹೆಚ್ಚಿನ ಗುಣಮಟ್ಟದ ವೈದ್ಯಕೀಯ ಮಾಸ್ಕ್ ಆಗಿದ್ದು ಕೊರಿಯಾದಲ್ಲಿ ತಯಾರಿಸಲಾಗಿದೆ. ನಿಮ್ಮ ಬಳಿ ವೈದ್ಯಕೀಯ ಮಾಸ್ಕ್ ಇಲ್ಲದಿದ್ದರೆ ಬಟ್ಟೆಯ ಮಾಸ್ಕ್‌ನ ಮೇಲೆ ಸರ್ಜಿಕಲ್ ಮಾಸ್ಕ್ ಅನ್ನು ನೀವು ಬಳಸಬಹುದಾಗಿದೆ. ನೀವು ತರಕಾರಿ ಅಂಗಡಿ, ಇಲ್ಲವೇ ಗುಂಪುಗೂಡಿರುವ ಪ್ರದೇಶಗಳಿಗೆ ಹೋಗುತ್ತಿದ್ದಲ್ಲಿ ಹೆಚ್ಚಿನ ಸುರಕ್ಷತೆಯ ವೈದ್ಯಕೀಯ ಮಾಸ್ಕ್‌ಗಳನ್ನು ಧರಿಸುವುದು ಉತ್ತಮವಾಗಿದೆ.




  ರೆಸ್ಟೋರೆಂಟ್‌ಗಳಲ್ಲಿ ತಿನಿಸುಗಳನ್ನು ಸೇವಿಸಬಹುದೇ?


  ಆದಷ್ಟು ಆಹಾರ ಪದಾರ್ಥಗಳನ್ನು ಮನೆಗೆ ತಂದು ಸೇವಿಸುವುದು ಉತ್ತಮವಾಗಿದೆ. ಏಕೆಂದರೆ ಲಸಿಕಾ ಅಭಿಯಾನವನ್ನು ದೇಶಾದ್ಯಂತ ಸಂಪೂರ್ಣವಾಗಿ ನಡೆಸದೇ ಇರುವುದರಿಂದ ಹೊರಗಡೆ ಇದ್ದಾಗಲೂ ಗುಂಪಿನಿಂದ ಅಂತರ ಕಾಪಾಡಿಕೊಳ್ಳುವುದು ಪ್ರಮುಖವಾಗಿದೆ.


  ಪ್ರಯಾಣ ಸುರಕ್ಷಿತವೇ?


  ಸಾರಿಗೆ ಸಂಸ್ಥೆಗಳು ಸಂಪೂರ್ಣ ಸ್ಯಾನಿಟೈಸ್ ಆಗಿದ್ದರೂ ನಮ್ಮ ವೈಯಕ್ತಿಕ ಜಾಗರೂಕತೆಗಳನ್ನು ನಾವು ಮಾಡಬೇಕಾಗುತ್ತದೆ. ಅಗತ್ಯವಿದ್ದಾಗ ಮಾತ್ರವೇ ಪ್ರಯಾಣಿಸಿ ಹಾಗೂ ಪ್ರಯಾಣ ಸಮಯದಲ್ಲಿಯೂ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅತ್ಯುತ್ತಮವಾಗಿದೆ. ವೈದ್ಯಕೀಯ ಮಾಸ್ಕ್‌ಗಳ ಬಳಕೆ, ಕೈಗವಸುಗಳ ಬಳಕೆ ಮಾಡುವುದು ಉತ್ತಮ ವಿಧಾನವಾಗಿದೆ.

  First published: