Explained: ಮಕ್ಕಳನ್ನು ದತ್ತು ಪಡೆಯಲು ಜಿಲ್ಲಾ ಮ್ಯಾಜಿಸ್ಟ್ರೇಟ್​ ಅನುಮೋದನೆ ಸಾಲುತ್ತೆಯೇ? ಹೊಸಾ ನಿಯಮದಲ್ಲಿ ಏನಿದೆ?

ದತ್ತು ಸ್ವೀಕಾರ ಪ್ರಕ್ರಿಯೆಯಲ್ಲಿ ಕೈಗೊಂಡ ಬದಲಾವಣೆಗಳಿಂದ ಸಮಯಕ್ಕೆ ಸರಿಯಾಗಿ ದತ್ತು ಸ್ವೀಕಾರ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ಸ್ಮೃತಿ ಇರಾನಿ ಸಂಸತ್ತಿನಲ್ಲಿ ತಿಳಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:

  2015ರ ಕಾಯ್ದೆ ವ್ಯಾಪ್ತಿಯಲ್ಲಿ ಮಕ್ಕಳ ಸಂರಕ್ಷಣೆಯನ್ನು ಬಲಪಡಿಸಲು ರಾಜ್ಯ ಸಭೆಯು ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಿದೆ. ಮಕ್ಕಳ ದತ್ತು ಸ್ವೀಕಾರ ಆದೇಶಗಳಿಗೆ ಸಹಿ ಹಾಕಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡಿದ್ದು ದತ್ತು ಸ್ವೀಕಾರ ಕ್ರಮವನ್ನು ವೇಗವಾಗಿ ನಡೆಸಲು ಹಾಗೂ ಕಾನೂನು ನಿಯಮಗಳಿಗೆ ಹೆಚ್ಚು ಬದ್ಧವಾಗಿರುವ ಪ್ರಯತ್ನ ಇದಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.ದೇಶಾದ್ಯಂತ ಮಕ್ಕಳ ಆಶ್ರಯ ತಾಣಗಳ ಸಮೀಕ್ಷೆ ನಡೆಸಿದ್ದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (NCPCR) ಸುಮಾರು 7,600 ಕ್ಕೂ ಹೆಚ್ಚಿನ ಮಕ್ಕಳು ಶೋಚನೀಯ ಪರಿಸ್ಥಿತಿಯಲ್ಲಿರುವುದನ್ನು ಗಮನಿಸಿ ಈ ಕಾಯ್ದೆಯಲ್ಲಿ ತಿದ್ದುಪಡಿ ಮಾಡುವ ತೀರ್ಮಾನ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


  ನಾವು ಆಶ್ರಯ ತಾಣಗಳ ನಿರ್ವಾಹಕರಿಗೆ ಪತ್ರ ಬರೆದಿದ್ದು ಕೇವಲ 2000 ತಾಣಗಳು ಪ್ರತಿಕ್ರಿಯೆ ನೀಡಿವೆ. ಹೆಚ್ಚಿನ ತಾಣಗಳು ಮೂಲಭೂತ ಅವಶ್ಯಕತೆಗಳಾದ ಆಹಾರ ಹಾಗೂ ನೀರಿನ ಸೌಕರ್ಯವನ್ನು ಹೊಂದಿಲ್ಲ. ಮಕ್ಕಳ ದತ್ತು ಸ್ವೀಕಾರ ಪ್ರಕ್ರಿಯೆಯು ಹೆಚ್ಚು ಕಾಲಾವಕಾಶ ತೆಗೆದುಕೊಳ್ಳುವುದರಿಂದ ಹೆಚ್ಚಿನ ಮಕ್ಕಳು ಆಶ್ರಯ ತಾಣಗಳಲ್ಲಿ ವಿಧಿಯಿಲ್ಲದೆ ವಾಸಿಸುತ್ತಿದ್ದಾರೆ. ಅಂತಿಮ ಆದೇಶಗಳು ನ್ಯಾಯಾಧೀಶರ ಕಡೆಯಿಂದ ಬರಬೇಕು.


  ಆದರೂ ನಾವು ದತ್ತು ಸ್ವೀಕಾರ ಪ್ರಕ್ರಿಯೆಯು ಕಡಿಮೆ ಸಮಯದಲ್ಲಿ ನಡೆಯುವುದಕ್ಕೆ ಅಗತ್ಯವಾಗಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದು ಇದು ಹೆಚ್ಚು ಕಾನೂನು ಪಾಲನೆಯ ಹಾಗೂ ಮಕ್ಕಳ ಸ್ನೇಹಿಯಾಗಿರುತ್ತದೆ ಎಂದು NCPCR ಅಧ್ಯಕ್ಷರಾದ ಪ್ರಿಯಾಂಕ್ ಕನೂಂಗ್ ಎಕನಾಮಿಕ್ ಟೈಮ್ಸ್‌ಗೆ ತಿಳಿಸಿದ್ದಾರೆ.


  ಇದನ್ನೂ ಓದಿ: Explained: ಕೊರೊನಾ ಕಡಿಮೆಯಾಗಿದೆ, ಶಾಲೆ ತೆರೆಯಿರಿ ಎನ್ನುತ್ತಿದ್ದಾರೆ... ನಿಜಕ್ಕೂ ಮಕ್ಕಳು ಸೇಫ್ ಆಗಿ ಇರ್ತಾರಾ?

  ದತ್ತು ಸ್ವೀಕಾರ ಪ್ರಕ್ರಿಯೆಯಲ್ಲಿ ಕೈಗೊಂಡ ಬದಲಾವಣೆಗಳಿಂದ ಸಮಯಕ್ಕೆ ಸರಿಯಾಗಿ ದತ್ತು ಸ್ವೀಕಾರ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ಸ್ಮೃತಿ ಇರಾನಿ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಕಾಯ್ದೆಯ ತಿದ್ದುಪಡಿಯ ನಿಬಂಧನೆಗಳಿಗೆ ಅನುಸಾರವಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು, ಮಕ್ಕಳ ಕಲ್ಯಾಣ ಸಮಿತಿಗಳು, ಬಾಲಾಪರಾಧಿ ನ್ಯಾಯ ಮಂಡಳಿಗಳು, ವಿಶೇಷ ಬಾಲಾಪರಾಧಿ ಪೊಲೀಸ್ ಘಟಕಗಳ ಕಾರ್ಯವೈಖರಿಯನ್ನು ಸ್ವತಂತ್ರವಾಗಿ ಮೌಲ್ಯಮಾಪನ ಮಾಡುವ ಜಿಲ್ಲಾಧಿಕಾರಿಗಳ ಶಿಫಾರಸುಗಳನ್ನು ಪರಿಗಣಿಸಿದ ನಂತರ ಮಕ್ಕಳ ಆರೈಕೆ ಸಂಸ್ಥೆಗಳನ್ನು ನೋಂದಾಯಿಸಲಾಗುತ್ತದೆ.


  ಮಕ್ಕಳ ಆರೈಕೆ ಕೇಂದ್ರದ ನೋಂದಣಿಗಾಗಿ ಸರಕಾರಕ್ಕೆ ಶಿಫಾರಸು ಮಾಡುವ ಮೊದಲು ಜಿಲ್ಲಾಧಿಕಾರಿಯು ಸಂಸ್ಥೆಯ ಹಿನ್ನಲೆ ಹಾಗೂ ಸಾಮರ್ಥ್ಯವನ್ನು ಕುರಿತು ಪರಿಶೀಲನೆ ನಡೆಸಬೇಕಾಗುತ್ತದೆ. ಈ ಮಸೂದೆಯು ಜಿಲ್ಲಾಧಿಕಾರಿಗಳಿಗೆ ಮಕ್ಕಳ ಕಲ್ಯಾಣ ಸಮಿತಿಯ ಕುಂದು ಕೊರತೆ ಪರಿಹಾರ ಪ್ರಾಧಿಕಾರದ ಅಧಿಕಾರವನ್ನು ನೀಡುತ್ತದೆ. ಮಗುವಿನೊಂದಿಗೆ ಸಂಪರ್ಕ ಹೊಂದಿದ ಯಾರಾದರೂ ಅಧಿಕಾರಿಯ ಮುಂದೆ ಅರ್ಜಿ ಸಲ್ಲಿಸಬಹುದು.


  ಇದನ್ನೂ ಓದಿ: Explained: ಮತ್ತೆ ಭುಗಿಲೆದ್ದ ಅಸ್ಸಾಂ-ಮಿಜೋರಾಂ ಗಡಿ ವಿವಾದ: ಈಗ ನಡೆಯುತ್ತಿರೋ ಎಲ್ಲಾ ಗಲಾಟೆಗೆ ಬ್ರಿಟಿಷರೇ ಕಾರಣವಾ?

  ಮಕ್ಕಳ ಕ್ಷೇಮ ಸಮಿತಿಯಲ್ಲಿ ಸದಸ್ಯರಾಗಿ ಇರುವವರು ಕನಿಷ್ಠ 7 ವರ್ಷಗಳವರೆಗೆ ಮಕ್ಕಳಿಗೆ ಸಂಬಂಧಿಸಿದ ಆರೋಗ್ಯ, ಶಿಕ್ಷಣ ಅಥವಾ ಮಕ್ಕಳ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರಬೇಕು. ಇಲ್ಲವೇ ಮಕ್ಕಳ ಮನೋವಿಜ್ಞಾನ, ಮನೋವೈದ್ಯಶಾಸ್ತ್ರ ಅಥವಾ ಕಾನೂನು ಅಥವಾ ಸಾಮಾಜಿಕ ಕಾರ್ಯ ಅಥವಾ ಸಮಾಜಶಾಸ್ತ್ರ ಅಥವಾ ಮಾನವ ಅಭಿವೃದ್ಧಿಯಲ್ಲಿ ಪದವಿ ಪಡೆದ ವೃತ್ತಿಪರರಾಗಿರಬೇಕು, ಈ ಮೇಲಿನ ಅರ್ಹತೆಗಳನ್ನು ಹೊಂದಿರದ ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಿಸಿಕೊಳ್ಳಲಾಗುವುದಿಲ್ಲ ಎಂದು ಮಸೂದೆ ಸ್ಪಷ್ಟಪಡಿಸಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
  Published by:Soumya KN
  First published: