Mohenjo-daro: ನಶಿಸಿಹೋಗುತ್ತಿದೆ ಮೊಹೆಂಜೋದಾರೋ ಕುರುಹು! ಕಳಚಿ ಹೋಗುತ್ತಾ ಐತಿಹಾಸಿಕ ಕೊಂಡಿ?

ನಾವು ಚಿಕ್ಕ ವಯಸ್ಸಿನವರಾಗಿದ್ದಾಗಿನಿಂದ ಈ ಹರಪ್ಪ ಮತ್ತು ಮೊಹೆಂಜೊದಾರೋ ಐತಿಹಾಸಿಕ ಸ್ಥಳಗಳನ್ನು ಇತಿಹಾಸದ ಪಠ್ಯದಲ್ಲಿ ಓದುತ್ತಲೇ ಬಂದಿದ್ದೇವೆ. ಅಂತಹ ಐತಿಹಾಸಿಕ ಕುರುಹುಗಳಲ್ಲಿ ಪ್ರಮಖ ಕುರುಹುವಾದ ಈ ಮೊಹೆಂಜೊದಾರೋ ಈಗ ವಿನಾಶದತ್ತ ಸಾಗುತ್ತಿದೆ ಎಂಬುದು ನಿಜಕ್ಕೂ ವಿಷಾದನೀಯ ಸಂಗತಿ.

ಪ್ರಾಚೀನ ತಾಣ ಮೊಹೆಂಜೊದಾರೊ

ಪ್ರಾಚೀನ ತಾಣ ಮೊಹೆಂಜೊದಾರೊ

  • Share this:
ನವ ದೆಹಲಿ: ಮೊಹೆಂಜೋದಾರೋ (Mohenjo-daro) ಎಂದ ತಕ್ಷಣ ಮೊದಲಿಗೆ ನೆನಪಾಗುವುದು ಪ್ರಾಚೀನ ಇತಿಹಾಸ. ಹೌದು ತಾನೇ. ನಾವು ಚಿಕ್ಕ ವಯಸ್ಸಿನವರಾಗಿದ್ದಾಗಿನಿಂದ ಈ ಹರಪ್ಪ ಮತ್ತು ಮೊಹೆಂಜೋದಾರೋ ಐತಿಹಾಸಿಕ ಸ್ಥಳಗಳನ್ನು ಇತಿಹಾಸದ (History) ಪಠ್ಯದಲ್ಲಿ ಓದುತ್ತಲೇ ಬಂದಿದ್ದೇವೆ. ಅಂತಹ ಐತಿಹಾಸಿಕ ಕುರುಹುಗಳಲ್ಲಿ ಪ್ರಮಖ ಕುರುಹುವಾದ ಈ ಮೊಹೆಂಜೊದಾರೋ ಈಗ ನಾಶದತ್ತ ಸಾಗುತ್ತಿದೆ ಎಂಬುದು ನಿಜಕ್ಕೂ ವಿಷಾದನೀಯ ಸಂಗತಿ. ಈ ಮೊಹೆಂಜೊದಾರೊ ಸತ್ತವರ ದಿಬ್ಬದ ಮೇಲೆ ಹೊಳೆಯುವ ನೀಲಿ ಬಣ್ಣದ ಟಾರ್ಪಾಲಿನ್‌ಗಳು ಪಾಕಿಸ್ತಾನದ (Pakistan) ದಕ್ಷಿಣ ಸಿಂಧ್ ಪ್ರಾಂತ್ಯದ ಪ್ರಾಚೀನ ನಗರದ ಭೂತಕಾಲದ ಭವ್ಯವನ್ನು ನಿರಂತರವಾಗಿ ನೆನಪಿಸುತ್ತವೆ. 4,000 ವರ್ಷಗಳಷ್ಟು ಹಳೆಯದಾದ ಈ ಮೊಹೆಂಜೊದಾರೋ ಗೋಡೆಗಳು ಕುಸಿದಿವೆ.

ಅಲ್ಲಿನ ಇತರ ಪ್ಯಾರಿಸ್ ಮೆಟ್ಟಿಲುಗಳು, ಸ್ತೂಪ, ಗ್ರೇಟ್ ಬಾತ್ ಮತ್ತು ಇತರ ಅವಶೇಷಗಳು ಹೆಚ್ಚಿನ ಹಾನಿಗೊಳಗಾಗುತ್ತಿವೆ. ಇವುಗಳ ರಕ್ಷಣೆಗೆ ಯಾರು ಮುಂದಾಗುತ್ತಿಲ್ಲ ಎನ್ನುವುದು ಮತ್ತೊಂದು ಶೋಚನೀಯ ಸಂಗತಿ ಆಗಿದೆ.

ವಿನಾಶದತ್ತ ಸಾಗುತ್ತಿದೆ ಐತಿಹಾಸಿಕ ಮೊಹೆಂಜೋದಾರೋ!
ಪ್ರಪಂಚದಾದ್ಯಂತ ಇತಿಹಾಸಕಾರರು, ತಿಹಾಸವನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ದುರಂತವನ್ನು ನೋಡುತ್ತಾ, ಸುಮ್ಮನೆ ಇರುವುದು ಮೊಹೆಂಜೋದಾರೋ ಪ್ರಾಚೀನ ದಂತಕತೆಗೆ ನಶಿಸಿ ಹೋಗುವುದಷ್ಟೆ ಈಗ ಉಳಿದಿರುವ ದಾರಿ ಎಂಬಂತಾಗಿದೆ. ಆದರೂ ಸಹ ಕೆಲವು ಇತಿಹಾಸಕಾರರು ತುರ್ತು ಕ್ರಮಕ್ಕೆ ಕರೆ ನೀಡುವ ಕೆಲಸವನ್ನು ಮಾಡುತ್ತಲೇ ಇದ್ದಾರೆ ಎಂಬುದೇ ಸಮಾಧಾನದ ವಿಷಯ ಆಗಿದೆ.

ಇದರ ಕುರಿತು "ಇಲ್ಲಿ ಘಟಿಸಿದ ವಿನಾಶದ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಹಾನಿಯಾದ ಜಾಗವನ್ನು ಸರಿಯಾಗಿ ಮೌಲ್ಯಮಾಪನವನ್ನು ಮಾಡಬೇಕಾಗಿದೆ. ಹಾನಿಯ ಸಂಪೂರ್ಣ ಪ್ರಮಾಣವು ಇನ್ನು ತಿಳಿದಿಲ್ಲ. ಹಾಗಾಗಿ ಇನ್ನೂ ಎಷ್ಟು ರಿಪೇರಿ ಮಾಡಬಹುದು ಎಂದು ನಿರ್ಣಯಿಸುವುದು ಕಷ್ಟ ”ಎಂದು ದೆಹಲಿ ವಿಶ್ವವಿದ್ಯಾಲಯದ (ಡಿಯು) ರಾಮಜಾಸ್ ಕಾಲೇಜಿನ ಪ್ರಾಚೀನ ಭಾರತೀಯ ಇತಿಹಾಸದ ಪ್ರಾಧ್ಯಾಪಕಿ ಪೂಜಾ ಠಾಕೂರ್ ಹೇಳಿದರು.

ಯುನೆಸ್ಕೊ ಪಟ್ಟಿಯಿಂದ ಸ್ಥಾನ ಕಳೆದುಕೊಳ್ಳುತ್ತಾ ಈ ಐತಿಹಾಸಿಕ ಸ್ಥಳ!
ಪಾಕಿಸ್ತಾನದ ಪುರಾತತ್ವ ಇಲಾಖೆಯು ಈ ಸ್ಥಳವನ್ನು ಸಮಯಕ್ಕೆ ಸರಿಯಾಗಿ ಮರುಸ್ಥಾಪಿಸದಿದ್ದರೆ ಮೊಹೆಂಜೊ-ದಾರೊ ಯುನೆಸ್ಕೊ ವಿಶ್ವ ಪರಂಪರೆಯಲ್ಲಿನ ಸ್ಥಾನಮಾನವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಿರಲಿಲ್ಲ. ಇದು ಸಂಪೂರ್ಣವಾಗಿ ನಶಿಸಿ ಹೋದರೆ ಪಾಕಿಸ್ತಾನಕ್ಕೆ ಇದು ಭಾರೀ ನಷ್ಟ ಎಂದೇ ಹೇಳಬಹುದು.

ಇದನ್ನೂ ಓದಿ: Cheapest Countries: ಅಮೆರಿಕನ್ನರು ದೇಶ ತೊರೆದರೆ ಬೇರೆ ಎಲ್ಲಿಗೆ ಹೋಗಬಹುದು? ಇಲ್ಲಿದೆ ರಿಪೋರ್ಟ್

“ಇಂತಹ ನಶಿಸಿ ಹೋಗುವ ಸ್ಥಳಿಗಳಿಗೆ ರೀಪೇರಿ ಮಾಡಲು ಯುನೆಸ್ಕೋ ಇಂತಹ ಸೈಟ್‌ಗಳಿಗೆ ರಕ್ಷಣೆ, ಧನಸಹಾಯವನ್ನು ನೀಡುತ್ತದೆ ಮತ್ತು ಅವುಗಳನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಈ ಸ್ಥಿತಿಯೊಳಗೆ, ಪ್ರವಾಸೋದ್ಯಮದಂತಹ ವಿವಿಧ ಅಂಶಗಳನ್ನು ನಿಯಂತ್ರಿಸುವುದು, ಈ ಸೈಟ್‌ಗಳಿಗೆ ಹಾನಿಯನ್ನುಂಟುಮಾಡುವ ಯಾವುದನ್ನಾದರೂ ರಕ್ಷಿಸಲು ಪರಿಸರ ನೀತಿಗಳನ್ನು ರಚಿಸುವುದು ಆ ಸೈಟ್‌ಗಳು ಇರುವ ರಾಜ್ಯದ ಜವಾಬ್ದಾರಿಯಾಗಿದೆ. ಮೊಹೆಂಜೊದಾರೊ ತನ್ನ ಸ್ಥಾನವನ್ನು ಯುನೆಸ್ಕೊ ಪಟ್ಟಿಯಿಂದ ಕಳೆದುಕೊಳ್ಳಲು ಇದು ನೇರ ಕಾರಣವಾಗಬಹುದು ಎಂದು ನಾನು ನಂಬುತ್ತೇನೆ" ಎಂದು ಠಾಕೂರ್ ಹೇಳಿದರು.

ಪ್ರವಾಹವು ಮೊಹೆಂಜೊದಾರೋ ಹಾನಿಗೆ ನೇರ ಕಾರಣ
ಸಿಂಧೂ ಕಣಿವೆಯ ನಾಗರೀಕತೆಯ ಮುಂದುವರಿದ ಒಳಚರಂಡಿ ವ್ಯವಸ್ಥೆಯು ಮೊಹೆಂಜೊದಾರೋದಲ್ಲಿನ ಸೈಟ್‌ಗಳ ವಿಶಿಷ್ಟ ಲಕ್ಷಣವಾಗಿದೆ. ಈ ಹಿಂದೆ, ಪ್ರವಾಹದ ಘಟನೆಗಳು ನಡೆದ್ದಿದ್ದರಿಂದ ಪ್ರವಾಹವನ್ನು ತಡೆಗಟ್ಟುವಲ್ಲಿ ಹಲವು ನಿರ್ಣಾಯಕಗಳನ್ನು ತೆಗೆದುಕೊಂಡು ಅವುಗಳನ್ನು ರಕ್ಷಣೆ ಮಾಡಲಾಗಿತ್ತು. ಆದರೆ ಈ ಬಾರಿ ಯಾವ ರಕ್ಷಣೆಯು ಸಹ ಈ ಮೊಹೆಂಜೊದಾರೋವನ್ನು ಕಾಪಾಡಿಲ್ಲ.

ಕೆಲವು ಭಾಗಗಳನ್ನು ಮಾತ್ರ ಪುನಃಸ್ಥಾಪಿಸಲಾಗಿದ್ಯಂತೆ
"ಈ ಒಳಚರಂಡಿ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಅಗೆದು ಹಾಕಿಲ್ಲ ಅದರ ಕಾರಣವಾಗಿ ಭಾರೀ ಗಾಥ್ರದ ಪ್ರವಾಹಗಳ ಬಂದಾಗ ಮಳೆನೀರು ನಿಂತು ಆ ವ್ಯವಸ್ಥೆಗಳು ನಶಿಸಿ ಹೋಗುವ ಸಂಭವ ಹೆಚ್ಚು. ಹಾಗೆಯೇ ಸಂಪೂರ್ಣವಾಗಿ ಅಗೆದಿಲ್ಲವಾದ್ದರಿಂದ ಅವು ಪ್ರವಾಹಗಳಿಂದ ಹರಿದು ಬರುವ ನೀರು ಅಲ್ಲಿ ನಿಂತುಕೊಂಡು ನೀರಿನಿಂದ ಆ ಸ್ಥಳಗಳು ತುಂಬಿ ಹೋಗುತ್ತವೆ. ಮೊಹೆಂಜೊದಾರೋದ ಕೆಲವು ಭಾಗಗಳು ಮತ್ತು ತುಣುಕುಗಳನ್ನು ಮಾತ್ರ ಇದೀಗ ಪುನಃಸ್ಥಾಪಿಸಲಾಗಿದೆ” ಎಂದು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (AMU) ಮಧ್ಯಕಾಲೀನ ಭಾರತೀಯ ಇತಿಹಾಸ ಮತ್ತು ಮಧ್ಯಕಾಲೀನ ಪುರಾತತ್ತ್ವ ಶಾಸ್ತ್ರದ ಪ್ರಾಧ್ಯಾಪಕ ಸೈಯದ್ ಅಲಿ ನದೀಮ್ ರೆಜಾವಿ ಹೇಳಿದರು.

ಈ ಬಗ್ಗೆ ರಾಮಜಾಸ್ ಕಾಲೇಜಿನ ಪ್ರೊಫೆಸರ್ ಠಾಕೂರ್ ಏನು ಹೇಳಿದ್ದಾರೆ 
ಮೊಹೆಂಜೊದಾರೋ ಭಾಗವಾಗಿದ್ದ ಸಿಂಧೂ ಕಣಿವೆ ನಾಗರಿಕತೆಯ ಪತನದ ಕುರಿತಾದ ಚರ್ಚೆಗಳಿಗೆ ಇತ್ತೀಚಿನ ಘಟನೆಗಳು ಹೊಸ ರೂಪವನ್ನೆ ಪಡೆಯುತ್ತಿವೆ. ರಾಮಜಾಸ್ ಕಾಲೇಜಿನ ಪ್ರೊಫೆಸರ್ ಠಾಕೂರ್ ಪ್ರಕಾರ, ಸಿಂಧೂ ನದಿಯ ದಡದ ಮೇಲೆ ಈ ಐತಿಹಾಸಿಕ ಕುರುಹುಗಳು ಇರುವುದು ಹಾನಿಯಾಗುತ್ತಿರುವುದಕ್ಕೆ ನೇರವಾದ ಕಾರಣವಾಗಿವೆ ಎಂದು ಅನೇಕ ಚರ್ಚೆಗಳು ಪ್ರವಾಹವೇ ಮೊಹೆಂಜೊದಾರೋ ಹಾನಿಗೆ ಒಂದು ಕಾರಣವೆಂದು ಸೂಚಿಸಿವೆ ಎಂದು ಹೇಳಿದರು.

5,000 ವರ್ಷಗಳ ಹಿಂದೆ ನಿರ್ಮಿಸಲಾದ  ಗೋಡೆ ಕುಸಿತ 
“ಆಗಸ್ಟ್ 16 ಮತ್ತು 26 ರ ನಡುವೆ, ಮೊಹೆಂಜೊದಾರೊದ ಪುರಾತತ್ವ ಅವಶೇಷಗಳು 779.5 ಮಿಮೀ ಮಳೆಯನ್ನು ಪಡೆದಿವೆ. ಇದು ಸ್ತೂಪ ಗುಮ್ಮಟದ ರಕ್ಷಣಾ ಗೋಡೆ ಸೇರಿದಂತೆ ಹಲವಾರು ಗೋಡೆಗಳ ಕುಸಿತಕ್ಕೆ ಕಾರಣವಾಯಿತು. ಮಾನ್ಸೂನ್ ಮಳೆಯಿಂದಾಗಿ ಸುಮಾರು 5,000 ವರ್ಷಗಳ ಹಿಂದೆ ನಿರ್ಮಿಸಲಾದ ಹಲವಾರು ದೊಡ್ಡ ಗೋಡೆಗಳು ಕುಸಿದಿವೆ” ಎಂದು ಅಬ್ಬಾಸಿ ದಿ ಗಾರ್ಡಿಯನ್‌ಗೆ ತಿಳಿಸಿದರು.

ಇದನ್ನೂ ಓದಿ:  Explained: ಚೀನಾದ ಆರ್ಥಿಕ ಬಿಕ್ಕಟ್ಟು ವಿಶ್ವದಾದ್ಯಂತ ಹೇಗೆ ಪರಿಣಾಮ ಬೀರಲಿದೆ? ಇದ್ರಿಂದ ಭಾರತಕ್ಕೆ ಆತಂಕವೋ, ಅನುಕೂಲವೋ?

ಪಾರಂಪರಿಕ ತಾಣಗಳ ರಕ್ಷಣೆಗೆ ತಮ್ಮ ಎಲ್ಲ ಸಂಪನ್ಮೂಲಗಳನ್ನು ಬಳಸಿದ್ದೇವೆ ಎಂದು ಅವರು ಆಗಸ್ಟ್ 29 ರಂದು ಸಂಸ್ಕೃತಿ, ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯ ನಿರ್ದೇಶಕರಿಗೆ ಪತ್ರ ಕಳುಹಿಸಿದ್ದರು. ಅದರ ಜೊತೆಗೆ, ನೀರಾವರಿ, ರಸ್ತೆಗಳು, ಹೆದ್ದಾರಿಗಳು ಮತ್ತು ಅರಣ್ಯ ಇಲಾಖೆಗಳಿಂದ ಉಂಟಾದ ನಿರ್ಲಕ್ಷ್ಯವು ಐತಿಹಾಸಿಕ ಸ್ಥಳದಿಂದ ನೀರನ್ನು ತೆಗೆಯುವಲ್ಲಿ ವಿಳಂಬಕ್ಕೆ ಕಾರಣವಾಯಿತು.

ಪಾಕಿಸ್ತಾನದಲ್ಲಿನ ಇತರ ಪಾರಂಪರಿಕ ತಾಣಗಳಿಗೂ ಹಾನಿ 
ಪಾಕಿಸ್ತಾನದಲ್ಲಿನ ಇತರ ಪಾರಂಪರಿಕ ತಾಣಗಳು ನಿರಂತರ ಪ್ರವಾಹದಿಂದಾಗಿ ಹಾನಿಗೊಳಗಾಗಿವೆ. ಲರ್ಕಾನಾದ ಶಾ ಬಹರೋ ಮತ್ತು ತಜ್ಜರ್ ಕಟ್ಟಡಗಳು, ಮೋರೋದ ಮಿಯಾನ್ ನೂರ್ ಮೊಹಮ್ಮದ್ ಕಲ್ಹೋರೋ ಸ್ಮಶಾನದಲ್ಲಿರುವ ಸಮಾಧಿಗಳು, ತುಲ್ ಮಿರ್ ರುಕಾನ್‌ನಲ್ಲಿರುವ ಬೌದ್ಧ ಸ್ತೂಪದ ಡ್ರಮ್ ಮತ್ತು ಥಟ್ಟಾ ಮತ್ತು ಭಂಬೋರ್‌ನಲ್ಲಿರುವ ಮಕ್ಲಿ ಸ್ಮಾರಕಗಳು ಒಳಚರಂಡಿ ಮಾರ್ಗಗಳಿಂದ ಹರಿಯುವ ನೀರಿನಿಂದಾಗಿ ಹಾಳಾಗಿವೆ.

“ನಾವು ಪುನಃಸ್ಥಾಪಿಸಿದ ಕಟ್ಟಡಗಳು ,ಸ್ಮಾರಕಗಳು, ಪ್ರಾಚೀನ ತಾಣಗಳೆಲ್ಲವೂ ಮತ್ತೆ ಮತ್ತೆ ಹಾನಿಗೊಳಗಾಗುತ್ತಿವೆ. ಸಿಂಧ್‌ನಲ್ಲಿ ಪರಂಪರೆಯು ಅಖಂಡವಾಗಿ ಉಳಿದಿರುವ ಒಂದೇ ಒಂದು ಸ್ಥಳವೂ ಉಳಿದಿಲ್ಲ ಎಂಬುದು ನಿಜಕ್ಕೂ ವಿಷಾದನೀಯ ಸಂಗತಿ. ಅದು ಕೋಟ್ ಡಿಜಿ, ರಾಣಿಕೋಟ್, ಶಾಹಿ ಮಹಲ್, ವೈಟ್ ಪ್ಯಾಲೇಸ್, ಫೈಜ್ ಮಹಲ್, ಐತಿಹಾಸಿಕ ಇಮಾಮ್ ಬರ್ಗಾಗಳು, ಬಂಗಲೆಗಳು ಅಥವಾ ಸಾರ್ವಜನಿಕ ಔಷಧಾಲಯಗಳು”ಎಂದು ಸಿಂಧ್ ಪರಂಪರೆಯ ಸಂರಕ್ಷಣೆಗಾಗಿ ಎಂಡೋಮೆಂಟ್ ಫಂಡ್ ಟ್ರಸ್ಟ್ (ಇಎಫ್‌ಟಿ) ಕಾರ್ಯದರ್ಶಿ ಹಮೀದ್ ಅಖುಂಡ್ ಹೇಳಿದರು.

ಹವಾಮಾನ ಬದಲಾವಣೆಯಿಂದ ಪ್ರಾಚೀನ ತಾಣಗಳಿಗೆ ರಕ್ಷಣೆ ಸಿಗುತ್ತಾ?
ಪ್ರಪಂಚದಾದ್ಯಂತ ಹವಾಮಾನ ಬದಲಾವಣೆ-ಸಂಬಂಧಿತ ನೈಸರ್ಗಿಕ ವಿಪತ್ತುಗಳಿಂದ ಈ ಪರಂಪರೆಯ ತಾಣಗಳ ಇತಿಹಾಸವು ಶಾಶ್ವತವಾಗಿ ಕಳೆದುಹೋಗುವ ಮೊದಲು ಅವುಗಳನ್ನು ರಕ್ಷಿಸುವುದು ಅನಿವಾರ್ಯದ ಜೊತೆ ನಿರ್ಣಾಯಕ ಘಟ್ಟವಾಗಿದೆ.

“ಪಾಕಿಸ್ತಾನಿ ಮತ್ತು ಭಾರತೀಯ ಪುರಾತತ್ವ ಸಂಸ್ಥೆಗಳು ಮತ್ತು ವಿಶ್ವ ಸಂಸ್ಥೆಗಳು ಈ ತಾಣಗಳನ್ನು ರಕ್ಷಿಸಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಉಪಖಂಡದ ಸಾಂಸ್ಕೃತಿಕ ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಇಂತಹ ತಾಣಗಳು ಬಹಳ ಮುಖ್ಯ ಮತ್ತು ಆದ್ದರಿಂದ ಅವುಗಳ ರಕ್ಷಣೆ ನಮ್ಮ ಹೊಣೆ ” ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (AMU) ಮಧ್ಯಕಾಲೀನ ಭಾರತೀಯ ಇತಿಹಾಸ ಮತ್ತು ಮಧ್ಯಕಾಲೀನ ಪುರಾತತ್ತ್ವ ಶಾಸ್ತ್ರದ ಪ್ರಾಧ್ಯಾಪಕ ಸೈಯದ್ ಅಲಿ ನದೀಮ್ ರೆಜಾವಿ ಹೇಳಿದರು.

ಇದನ್ನೂ ಓದಿ: Explained: ಸೂರ್ಯನ ಆಯಸ್ಸಿನ ಅರ್ಧಭಾಗ ಕಂಪ್ಲೀಟ್! ನಿಗಿನಿಗಿ ಕೆಂಡದಂತಹ ನಕ್ಷತ್ರ ಎಷ್ಟು ವರ್ಷ ಬದುಕಲಿದೆ?

ಯುನೆಸ್ಕೋದಂತಹ ಸಂಸ್ಥೆಗಳು ಯುದ್ಧ ಮತ್ತು ವಿಪತ್ತಿನ ಸಮಯದಲ್ಲಿ ಅಂತಹ ಐತಿಹಾಸಿಕ ಸ್ಥಳಗಳನ್ನು ಹೇಗೆ ಸಂರಕ್ಷಿಸುವುದು ಮತ್ತು ರಕ್ಷಿಸುವುದು ಎಂಬುದರ ಕುರಿತು ಮಾರ್ಗಸೂಚಿಗಳನ್ನು ಹೊಂದಿದ್ದರೂ, ಈ ಮಾರ್ಗಸೂಚಿಗಳನ್ನು ಸಮಯಕ್ಕೆ ಸರಿಯಾಗಿ ಬಳಸಿಲ್ಲ ಎಂಬುದೇ ನಿಜಕ್ಕೂ ವಿಷಾದನೀಯ ಸಂಗತಿ. ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ಅವರು ಸೆಪ್ಟೆಂಬರ್ 9 ರಂದು ಪ್ರವಾಹ ಪೀಡಿತ ಪಾಕಿಸ್ತಾನಕ್ಕೆ ಪ್ರಯಾಣಿಸಲಿದ್ದಾರೆ ಮತ್ತು ಅವಶೇಷಗಳನ್ನು ಪರೀಶಿಲನೆ ನಡೆಸಲು ಸೆಪ್ಟೆಂಬರ್ 11 ರಂದು ಮೊಹೆಂಜೊದಾರೊಗೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Published by:Ashwini Prabhu
First published: