HOME » NEWS » Explained » OVERALL C02 EMISSIONS OF CYCLISTS ARE 84 PERCENT LOWER THAN THOSE OF PEOPLE WHO NEVER USE A BICYCLE STG HG

ಕಾರು, ಬೈಕು ಬಿಟ್ಟು ಸೈಕಲ್ ಬಳಸಿದರೆ ಶೇ. 84 ರಷ್ಟು ಕಡಿಮೆ CO2 ಹೊರಸೂಸುವಿಕೆಗೆ ಕಾರಣರಾಗುತ್ತೀರಾ!

ದೈನಂದಿನ CO2 ಹೊರಸೂಸುವಿಕೆಯು ಪ್ರತಿ ವ್ಯಕ್ತಿಗೆ ಸರಾಸರಿ 3.2 ಕೆಜಿ CO2 ಎಂದು ಫಲಿತಾಂಶಗಳು ತೋರಿಸುತ್ತವೆ.

news18-kannada
Updated:April 8, 2021, 3:12 PM IST
ಕಾರು, ಬೈಕು ಬಿಟ್ಟು ಸೈಕಲ್ ಬಳಸಿದರೆ ಶೇ. 84 ರಷ್ಟು ಕಡಿಮೆ CO2 ಹೊರಸೂಸುವಿಕೆಗೆ ಕಾರಣರಾಗುತ್ತೀರಾ!
ದೈನಂದಿನ CO2 ಹೊರಸೂಸುವಿಕೆಯು ಪ್ರತಿ ವ್ಯಕ್ತಿಗೆ ಸರಾಸರಿ 3.2 ಕೆಜಿ CO2 ಎಂದು ಫಲಿತಾಂಶಗಳು ತೋರಿಸುತ್ತವೆ.
  • Share this:
ಸೈಕಲ್ ಬಳಕೆದಾರರು ಇಂಧನ ವಾಹನಗಳ ಬಳಕೆದಾರರಿಗಿಂತ ಕಡಿಮೆ ಪ್ರಮಾಣದ ಇಂಗಾಲವನ್ನು ಹೊರಸೂಸುತ್ತಾರೆ ಎಂದು ವೈಜ್ಞಾನಿಕ ಅಧ್ಯಯನದಿಂದ ತಿಳಿದು ಬಂದಿದೆ. ಕಾರು ಅಥವಾ ಸಾರ್ವಜನಿಕ ಸಾರಿಗೆ ಬಳಕೆದಾರರಿಗಿಂತ ಸೈಕಲ್ ಬಳಕೆದಾರರು ಸರಾಸರಿ ಶೇ. 84 ರಷ್ಟು ಕಡಿಮೆ CO2 ಅನ್ನು ಹೊರಸೂಸುತ್ತಾರೆ. ಸೈಕಲ್ ಅನ್ನು ಎಂದಿಗೂ ಬಳಸದ ಜನರಿಗಿಂತ, ಸೈಕಲ್ ಬಳಕೆದಾರರು ಒಟ್ಟಾರೆ C02 ಹೊರಸೂಸುವಿಕೆಯಲ್ಲಿ 84% ಕಡಿಮೆ ಪ್ರಮಾಣ ಹೊಂದಿದ್ದು, ಈ ಫಲಿತಾಂಶವನ್ನು ಕಂಡುಕೊಳ್ಳಲು ಲಂಡನ್, ರೋಮ್ ಮತ್ತು ಬಾರ್ಸಿಲೋನಾ ಸೇರಿದಂತೆ ಏಳು ಯುರೋಪಿಯನ್ ನಗರಗಳಲ್ಲಿ ದೈನಂದಿನ ಪ್ರಯಾಣ ಚಟುವಟಿಕೆಗಳ ಡೇಟಾವನ್ನು ಸಂಗ್ರಹಿಸಲಾಗಿದೆ ಎಂದು ವೈಜ್ಞಾನಿಕ ಅಧ್ಯಯನವೊಂದು ಹೇಳುತ್ತದೆ.

ದೈನಂದಿನ CO2 ಹೊರಸೂಸುವಿಕೆಯು ಪ್ರತಿ ವ್ಯಕ್ತಿಗೆ ಸರಾಸರಿ 3.2 ಕೆಜಿ CO2 ಎಂದು ಫಲಿತಾಂಶಗಳು ತೋರಿಸುತ್ತವೆ. ಅದರಲ್ಲಿ ಶೇ. 70 ರಷ್ಟು ಕಾರು ಪ್ರಯಾಣದಿಂದಲೇ ಬರುತ್ತದೆ. ಹೆಚ್ಚು ಸೈಕಲ್ ಬಳಕೆ ಮಾಡುವುದರಿಂದ, ಈ ಸರಾಸರಿ ಹೆಚ್ಚು ತೀವ್ರವಾಗಿ ಕುಸಿಯುತ್ತದೆ. ಇದರ ಪರಿಣಾಮವಾಗಿ ಆರೋಗ್ಯಕರ ಗಾಳಿಯು ಉಸಿರಾಡಲು ಕಾರಣವಾಗುತ್ತದೆ ಮತ್ತು ನಗರಗಳಲ್ಲಿ ಉತ್ತಮ ಗುಣಮಟ್ಟದ ಜೀವನ ಮಾಡಲು ಸಾಧ್ಯವಾಗಲಿದೆ.

ಈ ಅಧ್ಯಯನಕ್ಕಾಗಿ ಏಳು ಪ್ರಮುಖ ಯುರೋಪಿಯನ್ ನಗರಗಳಲ್ಲಿ (ಲಂಡನ್, ರೋಮ್, ಬಾರ್ಸಿಲೋನಾ, ಆಂಟ್ವೆರ್ಪ್, ವಿಯೆನ್ನಾ, ಜುರಿಚ್ ಮತ್ತು ಓರೆಬ್ರೊ) ಒಟ್ಟು 10,722 ಜನರು ಭಾಗವಹಿಸಿದ್ದರು.

ಈ ಮಧ್ಯೆ, ಇರ್ವಿನ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳ ನೇತೃತ್ವದಲ್ಲಿ ನಡೆದ ಸಂಶೋಧನೆಯಲ್ಲಿ ಬಿಸಿ ಹವಾಮಾನ ಏರಿಕೆಯಾಗುತ್ತಿದ್ದಂತೆಯೇ, ಕಾಡ್ಗಿಚ್ಚುಗಳಂತಹ ಪರಿಸರ ಹಾನಿಯನ್ನು ಸಂಭವ ಹೆಚ್ಚಾಗುತ್ತದೆ ಮತ್ತು ಆರ್ಕ್ಟಿಕ್ ನಂತಹ ಮಂಜುಗಡ್ಡೆ ಪ್ರದೇಶದಲ್ಲಿ ಬೆಚ್ಚಗಿನ ವಾತವರಣ ಸೂಚಿಸುತ್ತದೆ. 2019 ರಲ್ಲಿ, ಉತ್ತರ ಧ್ರುವದಲ್ಲಿ ಮೊಟ್ಟಮೊದಲ ಬಾರಿಗೆ ಸಿಡಿಲು ಬಡಿದಿರುವುದಾಗಿ "ನ್ಯಾಷನಲ್ ವೇದರ್ ಸರ್ವಿಸ್" ವರದಿ ಮಾಡಿದೆ. ಇದು ಆರ್ಕ್ಟಿಕ್ ಕೇಂದ್ರ ಪ್ರದೇಶದಲ್ಲಿ ಅಪರೂಪದ ಪ್ರಕರಣವಾಗಿದೆ. ಆದರೂ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯವು ಪ್ರಕಟಿಸಿದ ಹೊಸ ವರದಿಯಲ್ಲಿ, ಹವಾಮಾನವು ಬೆಚ್ಚಗಾಗುತ್ತಿರುವುದರಿಂದ ಶತಮಾನದ ಅಂತ್ಯದ ವೇಳೆಗೆ ಆರ್ಕ್ಟಿಕ್ ವೃತ್ತದ ಮೇಲೆ ಸಿಡಿಲು ಹೊಡೆತವು ಶೇಕಡಾ 100 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸಂಶೋಧನೆಯಿಂದ ಕಂಡುಕೊಂಡಿದ್ದಾರೆ.

ಭೂಮಿಯು ಬಿಸಿಯಾಗುತ್ತಿರುವುದರಿಂದ ಆರ್ಕ್ಟಿಕ್‌ ಪ್ರದೇಶದಲ್ಲಿ ಹವಾಮಾನವು ಹೇಗೆ ಬದಲಾಗುತ್ತದೆ ಎಂಬುದನ್ನು ಅಧ್ಯಯನವು ಬಹಿರಂಗಗೊಂಡಿದೆ. ಆರ್ಕ್ಟಿಕ್‌ನಿಂದ ಭವಿಷ್ಯದ ಹವಾಮಾನ ವರದಿಗಳು, ದಕ್ಷಿಣದಿಂದ ಬರುವ ಮಿಂಚು ಸಿಡಿಲುಗಳಿಂದ ಕೂಡಿದ ಬಿರುಗಾಳಿಗಳು ಸಂಭವ ಹೆಚ್ಚಾಗುವುದು ಎಂದು ಸಂಶೋಧನೆಯು ತಿಳಿಸುತ್ತದೆ.

ನಗರೀಕರಣದಿಂದಾಗಿ ವಾಹನ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ ಆರ್ಕ್ಟಿಕ್ ಪ್ರದೇಶದ ಓಝೋನ್ ಪದರಿನಲ್ಲಿ ರಂಧ್ರ ಕಂಡು ಬಂದಿರುವುದಾಗಿ ಸಂಶೋಧಕರಿಂದ ತಿಳಿದು ಬಂದಿದೆ. ಇಂಗಾಲದ ಪ್ರಮಾಣ ಹೆಚ್ಚಾದರೆ ಪರಿಸರದಲ್ಲಿ ಹವಮಾನ ವೈಪರೀತವಾಗಲಿದೆ. ಅಕಾಲಿಕ ಮಳೆ, ಅತಿವೃಷ್ಠಿ, ಚಂಡಮಾರುತಗಳಂತಹ ಪ್ರಕೃತಿ ವಿಕೋಪದ ಸನ್ನಿವೇಶಗಳು ಸಾಮಾನ್ಯವಾಗುತ್ತವೆ.
Youtube Video
ಜನರು ಇನ್ನಾದರೂ ಎಚ್ಚೆತ್ತುಕೊಂಡು ಇಂಧನ ವಾಹನದ ಬದಲಾಗಿ ಸೈಕಲ್ ಬಳಕೆ ಮಾಡಿದರೆ ಪ್ರಕೃತಿಗೆ ಇಂಗಾಲದ ಹೆಚ್ಚಳವನ್ನು ಕಡಿಮೆ ಮಾಡಬಹುದಾಗಿದೆ. ಅಷ್ಟೇ ಅಲ್ಲದೇ ಸೈಕಲ್ ಬಳಕೆದಾರರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದ್ದು, ಅನೇಕ ಆರೋಗ್ಯಕರ ಪ್ರಯೋಜನ ಪಡೆಯಬಹುದು. ಇಲ್ಲವಾದಲ್ಲಿ ದಿನನಿತ್ಯ ಇಂಧನ ಚಾಲಿತ ವಾಹನಗಳನ್ನು ಮೀತಿ ಮೀರಿ ಬಳಸುತ್ತಾ ಹೋದರೆ ಮುಂಬರುವ ದಿನಗಳಲ್ಲಿ ಗಂಡಾತರ ತಪ್ಪಿದಲ್ಲ.
First published: April 8, 2021, 3:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories