• Home
 • »
 • News
 • »
 • explained
 • »
 • Explained: ದೀಪಾವಳಿ ಬಳಿಕ ಇದ್ಯಾ ಕೋವಿಡ್ ಮಾರಿ ಅಬ್ಬರ? ಭಾರತಕ್ಕೂ ಕಾಲಿಟ್ಟಿದೆ ಡೇಂಜರಸ್ ಓಮಿಕ್ರಾನ್‌ ರೂಪಾಂತರಿ ವೈರಸ್!

Explained: ದೀಪಾವಳಿ ಬಳಿಕ ಇದ್ಯಾ ಕೋವಿಡ್ ಮಾರಿ ಅಬ್ಬರ? ಭಾರತಕ್ಕೂ ಕಾಲಿಟ್ಟಿದೆ ಡೇಂಜರಸ್ ಓಮಿಕ್ರಾನ್‌ ರೂಪಾಂತರಿ ವೈರಸ್!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚಿನ ವರದಿಗಳ ಪ್ರಕಾರ, “ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ ಪತ್ತೆಹಚ್ಚಿದಂತೆ BF.7 ನ ಮೊದಲ ಪ್ರಕರಣವು ಭಾರತದಲ್ಲಿ ಈಗಾಗಲೇ ಕಂಡುಬಂದಿದೆ. ಈ ವೈರಸ್‌ ಬಹಳಷ್ಟು ಆಕ್ರಮಣಕಾರಿ ವೈರಸ್‌ ಆಗಿರುವುದರಿಂದ ಈ ಹಿಂದಿನ ಲಸಿಕೆಗಳು ಕೆಲಸ ಮಾಡದೇ ಇರಬಹುದು" ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಮುಂದೆ ಓದಿ ...
 • News18 Kannada
 • Last Updated :
 • New Delhi, India
 • Share this:

ಸತತ ಎರಡು ವರ್ಷಗಳಿಂದ ಕೊರೋನಾ (Corona) ಜಗತ್ತನ್ನು ತಲ್ಲಣಗೊಳಿಸಿದೆ. ಎರಡು ವರ್ಷದಲ್ಲಿ ಕೋವಿಡ್‌ನಿಂದಾನೇ ಲಕ್ಷಾಂತರ ಮಂದಿ ಮೃತಪಟ್ಟರು. ಸಾಕಷ್ಟು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದರು. ಇಷ್ಟಾದರೂ ಕೊರೋನಾ ಕಾಟ ಮುಗಿದಿಲ್ಲ. ವೈರಸ್‌ನ ಹೊಸ ಹೊಸ ರೂಪಾಂತರಗಳು ಪತ್ತೆಯಾಗುತ್ತಲೇ ಇವೆ. ಸದ್ಯ ಚೀನಾದಲ್ಲಿ (China) ಪತ್ತೆಯಾಗಿರುವ ಓಮಿಕ್ರಾನ್ (Omicron) ರೂಪಾಂತರ BF.7 ಮತ್ತು BA.5.1.7 ಜನರನ್ನು ಕಂಗೆಡಿಸಿದೆ. ಈ ಹೊಸ ರೂಪಾಂತರ ವೈರಸ್‌ ಈಗ ಜಗತ್ತಿನ ಎಲ್ಲೆಡೆ ವೇಗವಾಗಿ ಹರಡುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, “ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ ಪತ್ತೆಹಚ್ಚಿದಂತೆ BF.7 ನ ಮೊದಲ ಪ್ರಕರಣವು ಭಾರತದಲ್ಲಿ (India) ಈಗಾಗಲೇ ಕಂಡುಬಂದಿದೆ.


ವೈರಸ್ ಬಗ್ಗೆ ತಜ್ಞರು ಏನು ಹೇಳಿದ್ದಾರೆ?
ಈ ವೈರಸ್‌ ಬಹಳಷ್ಟು ಆಕ್ರಮಣಕಾರಿ ವೈರಸ್‌ ಆಗಿರುವುದರಿಂದ ಈ ಹಿಂದಿನ ಲಸಿಕೆಗಳು ಕೆಲಸ ಮಾಡದೇ ಇರಬಹುದು" ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಭಾರತದಲ್ಲಿ ಕಂಡು ಬಂದಿರುವ ಈ ವೈರಸ್‌ನಿಂದ ಮುಂದೆ ಅನೇಕ ಆರೋಗ್ಯ ಅಪಾಯಗಳು ಭಾರತಕ್ಕೆ ಕಾದಿವೆ ಎಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. ಇದರ ಜೊತೆಗೆ ಈಗ ಭಾರತದಲ್ಲಿ ಸಾಲು-ಸಾಲು ಹಬ್ಬಗಳು ಇರುವುದರಿಂದ ಲಾಕ್‌ಡೌನ್‌ ಮತ್ತು ನಿರ್ಬಂಧಗಳು ಎಂಬ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತಿ ಮುಖ್ಯವಾಗಿದೆ.


ಭಾರತದಲ್ಲಿನ ಜನರು ಅತ್ಯಂತ ಉತ್ಸಾಹದಿಂದ ದೇಶದ ಅತಿದೊಡ್ಡ ಹಬ್ಬಗಳಲ್ಲಿ ಒಂದಾದ ದೀಪಾವಳಿಯನ್ನು ಆಚರಿಸಲು ಎದುರು ನೋಡುತ್ತಿದ್ದಾರೆ. ದೀಪಾವಳಿ ಮತ್ತಿತ್ತರ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಎರಡೂ ವರ್ಷಗಳೇ ಆಗಿವೆ ಎಂಬುದು ಜನರ ಅಭಿಪ್ರಾಯವಾಗಿದೆ. ಆದರೆ ಈ ಸಲವೂ ಕೂಡ ದೀಪಾವಳಿ ಹಬ್ಬದ ಸಮಯದಲ್ಲಿಯೇ ಈ ಓಮಿಕ್ರಾನ್‌ ಹೊಸ ರೂಪಾಂತರ ವೈರಸ್‌ ಕಾಣಿಸಿಕೊಂಡು ಅಪಾಯದ ಎಚ್ಚರಿಕೆ ಗಂಟೆಯನ್ನು ಬಾರಿಸುತ್ತಿದೆ.


ಇದನ್ನೂ ಓದಿ: Corona Virus: ಕೋವಿಡ್‌, ಓಮಿಕ್ರಾನ್‌ನಂತೆ ಬರಲಿದೆ ಭಯಾನಕ ವೈರಸ್! 80% ಮರಣ ಪ್ರಮಾಣ ಹೊಂದಿದೆಯಂತೆ ಈ ತಳಿ!


ಇದರ ಜೊತೆಗೆ ಪ್ರತಿಯೊಬ್ಬರು ತಮ್ಮ ಆರೋಗ್ಯ ದೃಷ್ಟಿಯಿಂದ ಮಾಸ್ಕ್‌ ಧರಿಸಿಕೊಳ್ಳಬೇಕು ಮತ್ತು ಕೊರೋನಾದ ರೋಗಲಕ್ಷಣಗಳು ಕಾಣಿಸಿದರೆ ಕೂಡಲೇ ಆರೋಗ್ಯ ಚಿಕಿತ್ಸೆಯನ್ನು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳಬೇಕು, ಇದು ಪ್ರತಿಯೊಬ್ಬರ ಜವಬ್ದಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಮಕ್ಕಳು, ವೃದ್ಧರು, ಕ್ಯಾನ್ಸರ್‌ನಿಂದ ಬಳಲಿದವರು, ಕ್ಯಾನ್ಸರ್ ರೋಗಿಗಳು, ಕಸಿ ರೋಗಿಗಳು ಇಂತಹವರಿಗೆ ಈ ವೈರಸ್‌ ಬೇಗ ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಇವರ ರಕ್ಷಣೆಯನ್ನು ಮನೆಯ ಸದಸ್ಯರು ನೋಡಿಕೊಳ್ಳುವುದು ಸೂಕ್ತ.


ಓಮಿಕ್ರಾನ್‌ ಸ್ಪಾನ್‌
ಓಮಿಕ್ರಾನ್‌ ಹೊಸ ರೂಪಾಂತರಗಳಾದ BA.5.1.7 ಮತ್ತು BF.7 ಅನ್ನು ಓಮಿಕ್ರಾನ್‌ ಸ್ಪಾನ್ ಎಂದು ಸಹ ಕರೆಯುತ್ತಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಪ್ರಪಂಚದೆಲ್ಲೆಡೆ ಕೋವಿಡ್ -19 ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯಲ್ಲಿ ಕ್ರಮೇಣ ಇಳಿಮುಖವಾಗುತ್ತಿದ್ದರೂ ಈ ವೈರಸ್ ನಿರಂತರವಾಗಿ ಹೊಸ ಹಾಗೂ ಹೆಚ್ಚು ರೂಪಾಂತರಗಳಾಗಿ ವಿಕಸನಗೊಳ್ಳುತ್ತಿರುವುದೇ ಈಗ ಆರೋಗ್ಯ ತಜ್ಞರ ಆತಂಕವನ್ನು ಹೆಚ್ಚಿಸಿದೆ.


ಚೀನಾದಲ್ಲಿ ಹರಡುತ್ತಿರುವ ಓಮಿಕ್ರಾನ್‌ ಸ್ಪಾನ್‌
ಅಕ್ಟೋಬರ್ 11 ರಂದು, 'ಓಮಿಕ್ರಾನ್ ಸ್ಪಾನ್' ಎಂಬ ಓಮಿಕ್ರಾನ್‌ ಹೊಸ ರೂಪಾಂತರ, BA.5.1.7 ಮತ್ತು BF 7 ಗಳು ಚೀನಾದ ಮಂಗೋಲಿಯಾದ ಪ್ರದೇಶದಲ್ಲಿ ಕಂಡುಬಂದಿದೆ. ಇದೀಗ ಚೀನಾದ ಹಲವು ಜಿಲ್ಲೆಗಳಿಗೂ ವೇಗವಾಗಿ ಹರಡುತ್ತಿದೆ.


"ಕಳೆದ ಎರಡು ವಾರಗಳಲ್ಲಿ ಈ ರೂಪಾಂತರದ ಹರಡುವಿಕೆಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ (0.8 ರಿಂದ 1.7% ವರೆಗೆ) ದ್ವಿಗುಣಗೊಂಡಿದೆ ಎಂದು ವರದಿಯಾಗಿದೆ. ಯುಕೆ, ಜರ್ಮನಿ ಮತ್ತು ಫ್ರಾನ್ಸ್‌ನಂತಹ ಯುರೋಪಿಯನ್ ದೇಶಗಳಲ್ಲಿ ಸುಮಾರು 15-25% ರಷ್ಟು ಇದರ ಪ್ರಕರಣಗಳು ದಾಖಲಾಗಿವೆ” ಎಂದು ಫರಿದಾಬಾದ್‌ನ ಏಷ್ಯನ್ ಆಸ್ಪತ್ರೆಯ ಅಮೆರಿ ಹೆಲ್ತ್‌ನ ಮುಖ್ಯಸ್ಥ, ಸಲಹೆಗಾರ ವೈದ್ಯ ಮತ್ತು ಸಾಂಕ್ರಾಮಿಕ ರೋಗ ತಜ್ಞ ಡಾ.ಚಾರು ದತ್ ಅರೋರಾ ಎಚ್‌ಟಿ ಡಿಜಿಟಲ್‌ ಮಾಧ್ಯಮಕ್ಕೆ ತಿಳಿಸಿದರು.


ಓಮಿಕ್ರಾನ್‌ನ ಹೊಸ ರೂಪಾಂತರ BF7 ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಅದು ಹೇಗೆಂದರೆ ಈ ಹಿಂದೆ ಹಾಕಿಸಿಕೊಂಡ ವ್ಯಾಕ್ಸಿನೇಷನ್‌ಗಳಿಂದಾಗಿ ದೇಹದಲ್ಲಿನ ಪ್ರತಿಕಾಯಗಳು ವೈರಸ್‌ ಅನ್ನು ಎದುರಿಸುತ್ತವೆ. ಯಾವುದೇ ಆತಂಕ ಬೇಡ” ಎಂದು ಡಾ ಅರೋರಾ ಹೇಳುತ್ತಾರೆ.


BA.5.1.7 ಮತ್ತು BF.7 ನಂತಹ ಹೊಸ ರೂಪಾಂತರ ವೈರಸ್‌ಗಳು ಇತರ ವೈರಸ್‌ಗಳಿಗಿಂತ ವೇಗವಾಗಿ ಹರಡಲು ಕಾರಣವೇನು?
ಈ ಹೊಸ ರೂಪಾಂತರಗಳು ಲಸಿಕೆ ಪಡೆದ ವ್ಯಕ್ತಿಗಳಲ್ಲಿಯೂ ಸಹ ಹಿಂದಿನ ಸೋಂಕುಗಳ ಆಧಾರದ ಮೇಲೆ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ಕೆಲಸವನ್ನು ಮಾಡುತ್ತವೆ. ಈ ವೈರಸ್‌ ಬೇಗನೇ ಹರಡುವ ಆಕ್ರಮಣಕಾರಿ ಸಾಮರ್ಥ್ಯವನ್ನು ಹೊಂದಿದೆ. ಈ ವೈರಸ್‌ನ ಕೆಲವು ವೈರಲ್‌ ಕಣಗಳು ಸೋಂಕನ್ನು ಉಂಟುಮಾಡುತ್ತವೆ.


BA.5.1.7 ಮತ್ತು BF.76 ರೂಪಾಂತರಗಳ ಲಕ್ಷಣಗಳು
ಈ ಎರಡು ವೈರಸ್‌ಗಳು ಹೆಚ್ಚು ಕಡಿಮೆ ಒಂದೇ ಆಗಿರುತ್ತವೆ. ಆದರೆ ಸಮಯ ಹೆಚ್ಚಾದಂತೆ ವೇಗವಾಗಿ ಹರಡುತ್ತವೆ ಎಂದು ತಜ್ಞರು ಹೇಳುತ್ತಾರೆ. "ಈ ರೂಪಾಂತರದ ರೋಗಲಕ್ಷಣಗಳು ಸಾಮಾನ್ಯವಾಗಿ ಮೊದಲಿನಂತೆಯೇ ಇರುತ್ತವೆ, ದೇಹದ ನೋವು ಇಲ್ಲಿ ಪ್ರಮುಖ ಲಕ್ಷಣವಾಗಿರುತ್ತದೆ. ಈ ರೂಪಾಂತರದ ವೈರಸ್‌ ಅನ್ನು ಹೊಂದಿರುವ ರೋಗಿಗಳಿಂದ ಈ ರೋಗವು ವೇಗವಾಗಿ ಹರಡಬಹುದು. ಹಾಗೆಯೇ ಕೆಲವು ಸಂದರ್ಭದಲ್ಲಿ ರೋಗಲಕ್ಷಣಗಳೇ ಇರುವುದಿಲ್ಲ” ಎಂದು ಡಾ ಅರೋರಾ ಹೇಳುತ್ತಾರೆ.


"ನಮಗೆ ನಿಜವಾಗಿಯೂ ರೋಗಲಕ್ಷಣಗಳ ಬಗ್ಗೆ ತಿಳಿದಿಲ್ಲ, ಏಕೆಂದರೆ ಇದೀಗ ಎಲ್ಲ ದೇಶಗಳು ಈ ವೈರಸ್‌ನ ಡೇಟಾವನ್ನು ಸರಿಯಾಗಿ ದಾಖಲು ಮಾಡಿಲ್ಲ. ಆದ್ದರಿಂದ ನಾವು ರೋಗದ ತೀವ್ರತೆಯನ್ನು ದೊಡ್ಡ ಪ್ರಮಾಣದ ಜೊತೆ ಈ ಹೊಸ ರೂಪಾಂತರ ವೈರಸ್‌ ಅನ್ನು ಪರಸ್ಪರ ಹೋಲಿಸಲು ಸಾದ್ಯವೇ ಇಲ್ಲ. ಆದ್ದರಿಂದ, ನಾವು ಇನ್ನು ಸರಿಯಾದ ಡೇಟಾಕ್ಕಾಗಿ ಕಾದು ನೋಡಬೇಕಾಗಿದೆ.


ಇದನ್ನೂ ಓದಿ:  Baby Care: ನಿಮ್ಮ ಮಗು ಚೆನ್ನಾಗಿ ಊಟ ಮಾಡುತ್ತಿಲ್ಲವೇ? ಇಲ್ಲಿದೆ ಸಲಹೆ


ಈ ವೈರಸ್‌ ಹೆಚ್ಚಿನ ಮಟ್ಟದ ಸೋಂಕನ್ನು ಉಂಟುಮಾಡುತ್ತದೆ ಎಂದು ಹೇಳುವ ಡೇಟಾದ ಖಚಿತತೆಯ ಬಗ್ಗೆ, ನಮಗೆ ಇನ್ನೂ ಯಾವ ಮಾಹಿತಿಯೂ ಸಹತಿಳಿದಿಲ್ಲ. ನಾನು ಹೇಳಿದಂತೆ ರೂಪಾಂತರದ ಅನುಕ್ರಮದೊಂದಿಗೆ ಸೋಂಕಿನ ತೀವ್ರತೆಯನ್ನು ನೇರವಾಗಿ ಗುರುತಿಸುವ ಹೆಚ್ಚಿನ ಮಾಹಿತಿಯ ಡೇಟಾವೂ ನಮ್ಮ ಹತ್ತಿರ ಇಲ್ಲ. ಇದರಿಂದ ರೋಗಲಕ್ಷಣಗಳ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ನಮಗೆ ಸಿಕ್ಕಿಲ್ಲ” ಎಂದು ಎಂದು ಡಾ ವೆಂಕಟಗೋಪಾಲನ್ ಹೇಳುತ್ತಾರೆ.


ದೀಪಾವಳಿಯು ಕೋವಿಡ್ ಸೋಂಕಿನ ಹೊಸ ಅಲೆಯನ್ನು ಹೆಚ್ಚಿಸುತ್ತದೆಯೇ?
ದೀಪಾವಳಿಯ ಸಮಯದಲ್ಲಿ ಬಹಳಷ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿ ಜೊತೆಯಾಗಿ ಸೇರುವುದರಿಂದ ಈ ಹೊಸ ರೂಪಾಂತರಗಳಿಂದ ಹೊಸ ಅಲೆಯು ಹುಟ್ಟುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ. "ಭಾರತದಲ್ಲಿಯೂ ಈ ರೂಪಾಂತರದಿಂದಾಗಿ ಕೋವಿಡ್ -19 ನ ಮತ್ತೊಂದು ಅಲೆಯ ಸಾಧ್ಯತೆಗಳಿವೆ. ಈ ಸಮಯವು ಹಬ್ಬದ ಸೀಸನ್ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪು ಸೇರುತ್ತಿದ್ದಾರೆ ಮತ್ತು ಪ್ರಯಾಣದ ನಿರ್ಬಂಧಗಳು ಸಹ ಈಗ ಇಲ್ಲ.


ಅದ್ದರಿಂದ ಈ ಹೊಸ ರೂಪಾಂತರ ವೈರಸ್‌ ಗಣನೀಯವಾಗಿ ಹರಡುವ ಸಾಧ್ಯತೆ ಹೆಚ್ಚಿದೆ. ಭಾರತದಲ್ಲಿ ಮುಂದಿನ 3-4 ವಾರಗಳಲ್ಲಿ ಫ್ಲೂ ಸೀಸನ್ ಮತ್ತು ಚಳಿಗಾಲವೂ ಸಮೀಪಿಸುತ್ತಿರುವುದರಿಂದ, ಗಂಟಲು ನೋವು, ನೆಗಡಿ, ಜ್ವರ ಮುಂತಾದ ಸಾಮಾನ್ಯ ರೋಗಗಳ ಪ್ರಕರಣಗಳು ಹೆಚ್ಚಾಗುವ ನಿರೀಕ್ಷೆಯಿದೆ” ಎಂದು ಡಾ ಅರೋರಾ ಹೇಳುತ್ತಾರೆ. "ಹೌದು, ಈ ಸಾಂಕ್ರಾಮಿಕ ಓಮಿಕ್ರಾನ್ ರೂಪಾಂತರದ ಬಗ್ಗೆ ಅನೇಕ ವದಂತಿಗಳು ವೇಗವಾಗಿ ಹಬ್ಬುತ್ತಿವೆ. ಆದರೆ ಈ ಹೊಸ ರೂಪಾಂತರದ ಬಗ್ಗೆ ಭಾರತೀಯರಿಗೆ ಎಳ್ಳಷ್ಟು ಮಾಹಿತಿಯೂ ಇಲ್ಲ. ಈ ತೂಪಾಂತರದ ತೀವ್ರತೆಯ ವಿಷಯದಲ್ಲಿ ಅದು ಹೇಗೆ ವರ್ತಿಸುತ್ತದೆ ಎಂಬುದನ್ನು ತಿಳಿಯಲು ನಾವು ಕಾಯಬೇಕಾಗಿದೆ.


ಆದ್ದರಿಂದ ಆರೋಗ್ಯದ ವಿಷಯದಲ್ಲಿ ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ” ಎಂದು ಸರ್. ಎಚ್‌.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ಸಹ ನಿರ್ದೇಶಕ ಡಾ.ವಸಂತ್ ನಾಗ್ವೇಕರ್ ಅವರು ಹೇಳುತ್ತಾರೆ.


ದೀಪಾವಳಿಯ ಸಮಯದಲ್ಲಿ ಹರಡುತ್ತಿರುವ ಹೊಸ ರೂಪಾಂತರದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು


“ಜನರು ಈ ಕೋವಿಡ್ ರೂಪಾಂತರದ ಬಗ್ಗೆ ಭಯಪಡಬಾರದು. ಆದರೆ ಅದರ ರೋಗಲಕ್ಷಣಗಳಾದ ನೆಗಡಿ, ಜ್ವರ, ಗಂಟಲು ನೋವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಆರೋಗ್ಯ ಮುನ್ನೆಚ್ಚರಿಕೆಗಳ ಬಗ್ಗೆ ಜಾಗರೂಕರಾಗಿರಬೇಕು” ಎಂದು ಡಾ. ಅರೋರಾ ಹೇಳುತ್ತಾರೆ.


ಇದನ್ನೂ ಓದಿ:  Explained: ತಾಯಿಯ ಗರ್ಭದಲ್ಲಿರುವಾಗಲೇ ರುಚಿ, ವಾಸನೆ ಗ್ರಹಿಸುತ್ತೆ ಶಿಶು: ಹೇಗೆ ಅಂತೀರಾ ಇಲ್ಲಿದೆ ವಿವರ


 • ಸಾಧ್ಯವಾದಷ್ಟು ಕನಿಷ್ಠ ಜನರನ್ನು ಭೇಟಿ ಮಾಡಲು ಪ್ರಯತ್ನಿಸಿ. ಹಬ್ಬದಲ್ಲಿ ನಡೆಸುವ ಕೂಟಗಳನ್ನು ಮನೆಯೊಳಗೆ ನಡೆಸಬೇಡಿ.

 • ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆಯುವ ಮೂಲಕ ನೆಗಡಿ ಮತ್ತು ಕೆಮ್ಮನ್ನು ತಡೆಗಟ್ಟಿ. ಇದರ ಜೊತೆಗೆ ದೇಹ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.

 • ಬಾಯಿ ಮತ್ತು ಮೂಗನ್ನು ಮುಚ್ಚುವ ಮಾಸ್ಕ್‌ ಅನ್ನು ಧರಿಸಿ.


ಕೊನೆಯ ಮಾತು: ಆರೋಗ್ಯವೇ ಭಾಗ್ಯ ಎಂಬುದು ಸುಳ್ಳಾದ ಮಾತಲ್ಲ. ಆರೋಗ್ಯವೊಂದಿದ್ದರೆ, ನಾವು ಏನನ್ನಾದರೂ ಸಾಧಿಸಬಹುದು. ಆದ್ದರಿಂದ ಆರೋಗ್ಯ ಬಗ್ಗೆ ಗಮನವಿರಲಿ.

Published by:Ashwini Prabhu
First published: