• ಹೋಂ
  • »
  • ನ್ಯೂಸ್
  • »
  • Explained
  • »
  • NTA NEET 2021 : ಸಿಲಬಸ್ ಏನು, ಅತ್ಯುತ್ತಮ ಪಠ್ಯಪುಸ್ತಕಗಳು ಮತ್ತು ಪರೀಕ್ಷೆಗೆ ಟಿಪ್ಸ್ ಇಲ್ಲಿದೆ...

NTA NEET 2021 : ಸಿಲಬಸ್ ಏನು, ಅತ್ಯುತ್ತಮ ಪಠ್ಯಪುಸ್ತಕಗಳು ಮತ್ತು ಪರೀಕ್ಷೆಗೆ ಟಿಪ್ಸ್ ಇಲ್ಲಿದೆ...

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

NTA NEET 2021: ಪರೀಕ್ಷೆಗೆ ಕುಳಿತುಕೊಳ್ಳುವವರು ಮೊದಲು ಸಿಲಬಸ್ ನಲ್ಲಿ ಇರುವ ಪಠ್ಯಗಳ ಬಗ್ಗೆ, ಅದಕ್ಕೆ ಬೇಕಾದ ಪುಸ್ತಕಗಳ ಬಗ್ಗೆ ಮಾಹಿತಿ ಪಡೆದು ರೆಡಿಯಾಗಬೇಕು. ಆಗ ಪರೀಕ್ಷೆಯ ತಯಾರಿ ಸುಲಭವಾಗುತ್ತದೆ. ಈ ಬಗ್ಗೆ ಎಲ್ಲಾ ಮಾಹಿತಿ ಇಲ್ಲಿದೆ.

  • Share this:

NTA NEET 2021: ಪ್ರತೀ ವರ್ಷ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ವೃತ್ತಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಇಚ್ಚೆಯಿರುವ ಸಾವಿರಾರು ಆಕಾಂಕ್ಷಿಗಳು ಭಾರತದ ಅನುಮೋದಿತ ಮತ್ತು ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜು / ಸಂಸ್ಥೆಗಳಲ್ಲಿ ಎಂಬಿಬಿಎಸ್, ಬಿಡಿಎಸ್ ಮತ್ತು ಆಯುಷ್ ಕೋರ್ಸ್‍ಗಳ ಪದವಿ ಪೂರ್ವ ವೈದ್ಯಕೀಯ ಕೋರ್ಸ್‍ಗಳಲ್ಲಿ ಪ್ರವೇಶ ಪಡೆಯಲು, ನೀಟ್ ಪರೀಕ್ಷೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.ಈ ಲೇಖನದಲ್ಲಿ 2021 ನೀಟ್ ಪರೀಕ್ಷೆಯ ಸಿಲಬಸ್‍ಗೆ ಸಂಬಂಧಿಸಿದ ಹೊಸ ಮಾಹಿತಿಗಳನ್ನು ಮತ್ತು ನೀಟ್ –ಯೂಜಿ ಪಠ್ಯಕ್ರಮಕ್ಕೆ ಸಂಬಂಧಿಸಿದ ಅತ್ಯುತ್ತಮ ಪುಸ್ತಕಗಳ ಬಗ್ಗೆ ತಿಳಿಯಬಹುದು.


ನೀಟ್ ಪರೀಕ್ಷಾ ಪಠ್ಯಕ್ರಮ
ವಿದ್ಯಾರ್ಥಿಗಳು 11 ಮತ್ತು 12 ನೇ ತರಗತಿಯಲ್ಲಿ ಕಲಿತಿದ್ದ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರದ ವಿಷಯಗಳನ್ನು ನೀಟ್ ಪಠ್ಯಕ್ರಮ ಒಳಗೊಂಡಿದೆ. ಎಲ್ಲಾ ಪ್ರಶ್ನೆಗಳು ಈ ತರಗತಿಗಳಲ್ಲಿ ಓದಿದ ವಿಷಯದ ಬಗ್ಗೆಯೇ ಇರುತ್ತವೆ.ನೀಟ್ 2021 ಪಠ್ಯಕ್ರಮವು ಹಿಂದಿನ ವರ್ಷದ ಪಠ್ಯಕ್ರಮದಂತೆಯೇ ಇರುತ್ತದೆ ಎಂದು ಎನ್‍ಟಿಎ ಘೋಷಿಸಿದೆ. ಹಾಗಾಗಿ ವಿದ್ಯಾರ್ಥಿಗಳು ಕಳೆದ ವರ್ಷದ ಪಠ್ಯಕ್ರಮದಲ್ಲಿ ಯಾವುದೇ ಬದಲಾವಣೆ ಅಥವಾ ನವೀಕರಣದ ಬಗ್ಗೆ ಚಿಂತಿಸಬೇಕಿಲ್ಲ.


ಇದನ್ನೂ ಓದಿ: Spot the Animal: ಈ ಚಿತ್ರದಲ್ಲಿ ಹಿಮ ಚಿರತೆ ಇದೆ.. ಎಲ್ಲಿದೆ ಹುಡುಕಿ ನೋಡೋಣ ! ಕಣ್ಣಿಗೊಂದು ಕಸರತ್ತು

ನೀಟ್ 2021 ಜೀವಶಾಸ್ತ್ರದ ಪಠ್ಯಕ್ರಮ
ನೀಟ್ ಪರೀಕ್ಷೆಗಳಲ್ಲಿ ಜೀವಶಾಸ್ತ್ರದ ಗರಿಷ್ಠ ಪ್ರಶ್ನೆಗಳು ಇರುತ್ತವೆ. ಅದು ನೀಟ್ ಪರೀಕ್ಷೆಯ ಒಂದು ಪ್ರಮುಖ ಭಾಗ. ಇಲ್ಲಿ ಜೀವಶಾಸ್ತ್ರದ ವಿಷಯಗಳ ಬಗ್ಗೆ ಮಾಹಿತಿ ಇದೆ. ಇದು ಸಸ್ಯಶಾಸ್ತ್ರ ಮತ್ತು ಜೀವಶಾಸ್ತ್ರವನ್ನು ಒಳಗೊಂಡಿದೆ.


11 ನೇ ತರಗತಿಯ ಜೀವಶಾಸ್ತ್ರದ 2021 ನೀಟ್ ಪಠ್ಯಕ್ರಮ
• ಪ್ಲ್ಯಾಂಟ್‌ ಫಿಸಿಯಾಲಜಿ
• ಹ್ಯೂಮನ್ ಫಿಸಿಯಾಲಜಿ
• ಸೆಲ್ ಸ್ಟ್ರಕ್ಚರ್ ಅಂಡ್ ಫಕ್ಷನ್ಸ್
• ಡೈವರ್ಸಿಟಿ ಇನ್ ಲಿವಿಂಗ್ ವರ್ಲ್ಡ್‌
• ಸ್ಟ್ರಕ್ಚರಲ್ ಆರ್ಗನೈಸೇಶನ್ ಇನ್ ಅನಿಮಲ್ಸ್ ಅಂಡ್ ಪ್ಲ್ಯಾಂಟ್ಸ್‌


12 ನೇ ತರಗತಿಯ ಜೀವಶಾಸ್ತ್ರದ 2021 ನೀಟ್ ಪಠ್ಯಕ್ರಮ
• ಇಕಾಲಜಿ ಅಂಡ್ ಎನ್ವಿರಾನ್ಮೆಂಟ್‌
• ಬಯೋ ಟೆಕ್ನಾಲಜಿ ಅಂಡ್ ಇಟ್ಸ್ ಅಪ್ಲಿಕೇಶನ್ಸ್
• ಬಯೋಲಜಿ ಅಂಡ್ ಹ್ಯೂಮನ್ ವೆಲ್‍ಫೇರ್
• ಜೆನೆಟಿಕ್ಸ್ ಅಂಡ್ ಇವೊಲ್ಯೂಶನ್
• ರೀಪ್ರೊಡಕ್ಷನ್


ಇದನ್ನೂ ಓದಿ: Whatsapp: ಫೋನ್ ಇಲ್ಲದಿದ್ರೂ ವಾಟ್ಸಪ್ ಮೆಸೇಜ್ ಕಳಿಸಬಹುದು, ಹೇಗೆ ? ಇಲ್ಲಿದೆ ಫುಲ್ ಡೀಟೆಲ್ಸ್

ನೀಟ್ ಜೀವಶಾಸ್ತ್ರ ವಿಷಯಕ್ಕೆ ಅತ್ಯುತ್ತಮ ಪುಸ್ತಕಗಳು
• ಆಬ್ಜೆಕ್ಟಿವ್ ಬಯಾಲಜಿ (ಭಾಗ1 ಮತ್ತು 2) – ಜಿ ಆರ್ ಬಾತ್ಲಾ
• ಆಬ್ಜೆಕ್ಟಿವ್ ಬಯಾಲಜಿ (ಭಾಗ1 ಮತ್ತಿ 2) - ಟ್ರೂಮೆನ್ ಪಬ್ಲಿಕೇಶನ್ಸ್
• ಆಬ್ಜೆಕ್ಟಿವ್ ಬಯಾಲಜಿ, ಪ್ರಾಕ್ಟಿಸ್ ಪೇಪರ್‌ಗಳ ಜೊತೆ (ಭಾಗ 1, 2 ಮತ್ತು 3) - ದಿನೇಶ್ ಪಬ್ಲಿಕೇಶನ್ಸ್
• ಬಯಾಲಜಿ ಕ್ಲಾಸ್ 11 ಮತ್ತು 12 (ಭಾಗ 1 ಮತ್ತು 2) ಪ್ರದೀಪ್ ಪಬ್ಲಿಕೇಶನ್ಸ್


ನೀಟ್ 2021 ಭೌತಶಾಸ್ತ್ರದ ಪಠ್ಯಕ್ರಮ
ಭೌತಶಾಸ್ತ್ರ ಕಷ್ಟದ ವಿಷಯ ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಇದು ಹೆಚ್ಚು ಅಂಕಗಳಿಸಲು ಸಾಧ್ಯವಿರುವ ವಿಷಯ ಕೂಡ. ನೀವು ಒಂದು ಪರಿಕಲ್ಪನೆ ಕಲಿತು ಮತ್ತು ಅರ್ಥ ಮಾಡಿಕೊಂಡಾಗ ಅದು ಆ ಪರಿಕಲ್ಪನೆಯ ಮೇಲೆ ಮುಮದುವರಿಯುತ್ತದೆ. ಅದನ್ನು ನೀವು ವಾಸ್ತವದಲ್ಲಿ ಅಂದರೆ ನಿಜ ಜೀವನದಲ್ಲಿ ಅಳವಡಿಸಬೇಕು. ಒಬ್ಬರು ಭೌತ ಶಾಸ್ತ್ರದ ಮೂಲ ಪರಿಕಲ್ಪನೆಯನ್ನು ಕರಗತ ಮಾಡಿಕೊಳ್ಳಲು ಪ್ರಯತ್ನಿಸಬೇಕು.


ಎಲ್ಲಾ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು 2 ಮೂಲಭೂತ ನಿಯಮಗಳನ್ನು ಅನುಸರಿಸಿ. ಅವು ನಿಮಗೆ ಪರೀಕ್ಷೆಯಲ್ಲಿ ಮಾತ್ರವಲ್ಲ, ಬದುಕಿನ ಪ್ರತೀ ಹಂತದಲ್ಲೂ ಸಹಾಯ ಮಾಡುತ್ತವೆ.


1) ನೀವು ಪ್ರಯತ್ನಿಸದೇ ಇದ್ದರೇ ನಿಮಗದು ತಿಳಿಯುವುದೇ ಇಲ್ಲ


2) ನಿಮ್ಮಿಂದ ಸಾಧ್ಯವಾಗುವಷ್ಟು ಪ್ರಯತ್ನ ಪಟ್ಟಿದ್ದರೆ, ಚಿಂತಿಸುವುದರಿಂದ ಅದು ಉತ್ತಮವಾಗುವುದಿಲ್ಲ.


11 ನೇ ತರಗತಿಯ ಭೌತಶಾಸ್ತ್ರದ 2021 ನೀಟ್ ಪಠ್ಯಕ್ರಮ


• ಫಿಸಿಕಲ್ ವರ್ಲ್ಡ್‌ ಅಂಡ್ ಮೆಶರ್‍ಮೆಂಟ್
• ಕೈನಮ್ಯಾಟಿಕ್ಸ್
• ಲಾ ಆಫ್ ಮೋಶನ್
• ವರ್ಕ್ , ಎನರ್ಜಿ ಅಂಡ್ ಪವರ್
• ಗ್ರಾವಿಟೇಶನ್
• ಪ್ರಾಪರ್ಟಿಸ್ ಆಫ್ ಬಲ್ಕ್ ಮ್ಯಾಟರ್
• ಥರ್ಮೋಡೈನಮಿಕ್ಸ್
• ಮೋಶನ್ ಆಫ್ ಸಿಸ್ಟಮ್ ಆಫ್ ಪಾರ್ಟಿಕಲ್ಸ್ ಅಂಡ್ ರಿಜಿಡ್ ಬಾಡಿ
• ಬಿಹೇವಿಯರ್ ಆಫ್ ಪರ್ಫೆಕ್ಟ್ ಗ್ಯಾಸ್ ಅಂಡ್ ಕೈನೆಟಿಕ್ ಎನೆರ್ಜಿ
• ಆಸಿಲೇಶನ್ಸ್ ಅಂಡ್ ವೇವ್ಸ್


12 ನೇ ತರಗತಿಯ ಭೌತಶಾಸ್ತ್ರದ 2021 ನೀಟ್ ಪಠ್ಯಕ್ರಮ


• ಎಲೆಕ್ಟ್ರೋಸ್ಟ್ಯಾಟಿಕ್ಸ್
• ಕರೆಂಟ್ ಎಲೆಕ್ಟ್ರಿಸಿಟಿ
• ಮ್ಯಾಗ್ನೆಟಿಕ್ ಎಫೆಕ್ಟ್ ಆಫ್ ಕರೆಂಟ್ ಅಂಡ್ ಮ್ಯಾಗ್ನೆಟಿಸಮ್
• ಎಲೆಕ್ಟ್ರೋಮ್ಯಾಗ್ನೆಟಿಕ್ ಇಂಡಕ್ಷನ್ ಅಂಡ್ ಆಲ್ಟರ್‍ನೇಟಿಂಗ್ ಕರೆಂಟ್ಸ್
• ಎಲೆಕ್ಟ್ರೋಮ್ಯಾಗ್ನೆಟಿಕ್ ವೇವ್ಸ್
• ಆಪ್ಟಿಕ್ಸ್
• ಡುವೆಲ್ ನೇಚರ್ ಆಫ್ ಮ್ಯಾಟರ್ ಅಂಡ್ ರೇಡಿಯೇಶನ್
• ಆಟಮ್ಸ್ ಅಂಡ್ ನ್ಯೂಕ್ಲಿಐ
• ಎಲೆಕ್ಟ್ರಾನಿಕ್ ಡಿವೈಸಸ್


ನೀಟ್ ಭೌತಶಾಸ್ತ್ರ ವಿಷಯಕ್ಕೆ ಅತ್ಯುತ್ತಮ ಪುಸ್ತಕಗಳು
• ಫಿಸಿಕ್ಸ್ ಎಂಸಿಕ್ಯೂ –ಡಿ ಮುಖರ್ಜಿ
• ಆಬ್ಜೆಕ್ಟಿವ್ ಫಿಸಿಕ್ಸ್ ಫಾರ್ ಮೆಡಿಕಲ್ ಎಂಟ್ರೆನ್ಸ್ ಎಕ್ಸಾಮಿನೇಶನ್ (ಭಾಗ 1 ಮತ್ತು 2 )- ಡಿ ಸಿ ಪಾಂಡೆ
• ಫಂಡಮೆಂಟಲ್ಸ್ ಆಫ್ ಫಿಸಿಕ್ಸ್ - ಹ್ಯಾಲಿಡೆ, ರೆಸ್ನಿಕ್ ಮತ್ತು ವಾಕರ್
• ಕಾನ್ಸೆಪ್ಟ್ ಆಫ್ ಫಿಸಿಕ್ಸ್ ( ಭಾಗ 1 ಮತ್ತು 2 ) – ಎಚ್ ಸಿ ವರ್ಮಾ


11 ನೇ ತರಗತಿಯ ರಸಾಯನ ಶಾಸ್ತ್ರದ 2021 ನೀಟ್ ಪಠ್ಯಕ್ರಮ




  • ಸಮ್ ಬೇಸಿಕ್ ಕಾನ್ಸೆಪ್ಟ್ ಆಫ್ ಕೆಮೆಸ್ಟ್ರಿ
    • ಸ್ಟ್ರಕ್ಚರ್ ಆಫ್ ಆಟಮ್ಸ್
    • ಕ್ಲಾಸಿಫಿಕೇಶನ್ ಆಫ್ ಎಲಿಮೆಂಟ್ಸ್ ಅಂಡ್ ಪೀರಿಯಾಡಿಸಿಟಿ ಇನ್ ಪ್ರಾಪರ್ಟೀಸ್
    • ಕೆಮಿಕಲ್ ಬಾಂಡಿಂಗ್ ಅಂಡ್ ಮಾಲಿಕ್ಯೂಲರ್ ಸ್ಟ್ರಕ್ಚರ್
    • ಸ್ಟೆಟ್ಸ್ ಆಫ್ ಮ್ಯಾಟರ್ : ಗ್ಯಾಸಸ್ ಅಂಡ್ ಲಿಕ್ವಿಡ್ಸ್
    • ಥರ್ಮೋ ಡೈನಮಿಕ್ಸ್
    • ಈಕ್ವಿಲಿಬ್ರಿಯಂ
    • ರೆಡಕ್ಸ್ ರಿಯಾಕ್ಷನ್ಸ್
    • ಹೈಡ್ರೋಜನ್
    • ಎಸ್-ಬ್ಲಾಕ್ ಎಲಿಮೆಂಟ್ (ಅಲ್‍ಕಲಿ ಅಂಡ್ ಅಲ್ಕಲೈನ್ ಅರ್ಥ್ ಮೆಟಲ್ಸ್)
    • ಸಮ್ ಪಿ-ಬ್ಲಾಕ್ ಎಲಿಮೆಂಟ್ಸ್
    • ಆರ್ಗಾನಿಕ್ ಕೆಮೆಸ್ಟ್ರಿ-ಸಮ್ ಬೇಸಿಕ್ ಪ್ರಿನ್ಸಿಪಲ್ಸ್ ಅಂಡ್ ಟೆಕ್ನಿಕ್ಸ್
    • ಹೈಡ್ರೋ ಕಾರ್ಬನ್ಸ್
    • ಎನ್‍ವಿರಾನ್‍ಮೆಂಟಲ್ ಕೆಮೆಸ್ಟ್ರಿ


12ನೇ ತರಗತಿಯ ರಸಾಯನ ಶಾಸ್ತ್ರದ 2021 ನೀಟ್ ಪಠ್ಯಕ್ರಮ


• ಸಾಲಿಡ್ ಸ್ಟೇಟ್
• ಸೊಲ್ಯೂಶನ್
• ಎಲೆಕ್ಟ್ರೋಕೆಮೆಸ್ಟ್ರಿ
• ಕೆಮಿಕಲ್ ಕೈನೆಟಿಕ್ಸ್
• ಸರ್ಫೇಸ್‌ ಕೆಮೆಸ್ಟ್ರಿ
• ಜನರಲ್ ಪ್ರಿನ್ಸಿಪಲ್ಸ್ ಅಂಡ್ ಪ್ರೋಸೆಸ್‌ ಆಫ್ ಐಸೋಲೇಶನ್ ಆಫ್ ಎಲಿಮೆಂಟ್ಸ್
• ಪಿ-ಬ್ಲಾಕ್ ಎಲಿಮೆಂಟ್ಸ್
• ಡಿ ಅಂಡ್ ಎಫ್ ಬ್ಲಾಕ್ ಎಲಿಮೆಂಟ್ಸ್
• ಕೋಆರ್ಡಿನೇಶನ್ ಅಂಡ್ ಕಾಂಪೌಂಡ್ಸ್
• ಹಾಲೋಕೇನ್ಸ್ ಅಂಡ್ ಹಾಲೋರೆನ್ಸ್
• ಆಲ್ಕೋಹಾಲ್ಸ್, ಫಿನಾಲ್ ಅಂಡ್ ಈಥರ್ಸ್
• ಆಲ್ಡಿಹೈಡ್ಸ್, ಕೀಟೋನ್ಸ್ ಅಂಡ್ ಕಾರ್ಬೋಕ್ಸಿಲಿಕ್ ಆ್ಯಸಿಡ್ಸ್


ನೀಟ್ ರಸಾಯನಶಾಸ್ತ್ರ ವಿಷಯಕ್ಕೆ ಅತ್ಯುತ್ತಮ ಪುಸ್ತಕಗಳು
• ಫಿಸಿಕಲ್ ಕೆಮೆಸ್ಟ್ರಿ – ಓ ಪಿ ಟಂಡನ್
• ಆಕ್ಸ್‌ಫರ್ಡ್ಸ್ ಆರ್ಗ್ಯಾನಿಕ್‌ ಕೆಮೆಸ್ಟ್ರಿ- ಜೊನಾತನ್ ಕ್ಲೈಡೆನ್ ಅಂಡ್ ನಿಕ್ ಗ್ರೀವ್ಸ್
• ಆರ್ಗಾನಿಕ್ ಕೆಮೆಸ್ಟ್ರಿ - ಹಿಮಾಂಶು ಪಾಂಡೆ
• ಆಬ್ಜೆಕ್ಟಿವ್ ಕೆಮೆಸ್ಟ್ರಿ – ಆರ್ ಕೆ ಗುಪ್ತಾ
• ಅಭ್ಯಾಸ ಪುಸ್ತಕಗಳು- ಆರ್ಗಾನಿಕ್ ಕೆಮೆಸ್ಟ್ರಿ- ಎಂ ಎಸ್ ಚೌಹಾನ್, ಫಿಸಿಕಲ್ ಕೆಮೆಸ್ಟ್ರಿ –ಎನ್ ಅವಸ್ತಿ, ಇನ್ ಆರ್ಗ್ಯಾನಿಕ್ ಕೆಮೆಸ್ಟ್ರಿ- ವಿ ಕೆ ಜೈಸ್ವಾಲ್


top videos



    ನೀಟ್ ಪೂರ್ವ ಸಿದ್ಧತೆಗೆ ಕೆಲವು ಸಲಹೆಗಳು


    ಕಷ್ಟದ ಮಟ್ಟವನ್ನು ಆಧರಿಸಿ ಪಠ್ಯಕ್ರಮವನ್ನು ಸುಲಭ, ಮಧ್ಯಮ ಮತ್ತು ಕಠಿಣ ಎಂದು ಮೂರು ಭಾಗ ಮಾಡಿಕೊಳ್ಳಿ.
    ಕಷ್ಟದ ಮಟ್ಟವನ್ನು ಆಧರಿಸಿ ಸಮಯ ನಿಗದಿ ಮಾಡಿಕೊಳ್ಳಿ- ಸುಲಭದ್ದಕ್ಕೆ ಕಡಿಮೆ ಸಮಯ ಮತ್ತು ಕಷ್ಟದ್ದಕ್ಕೆ ಅಧಿಕ ಸಮಯ.
    ಮೊದಲು ಸುಲಭದ ವಿಷಯಗಳನ್ನು ಓದಿಕೊಳ್ಳಿ, ಬಳಿಕ ಕಠಿಣ ವಿಷಯಗಳ ಬಗ್ಗೆ ಗಮನ ಕೊಡಿ, ಅದು ಬೇಗನೆ ಪಠ್ಯಕ್ರಮ ಮುಗಿಸಲು ಸಹಾಯ ಮಾಡುತ್ತದೆ.
    ಪ್ರತೀ ಪಾಠ ಓದಿದ ನಂತರ, ಪರೀಕ್ಷೆ ತೆಗೆದುಕೊಳ್ಳಿ, ಅಂಕಗಳನ್ನು ಬರೆದಿಟ್ಟುಕೊಳ್ಳಿ, ಎರಡು ವಾರಗಳ ನಂತರ ಪರೀಕ್ಷೆಯನ್ನು ಮತ್ತೆ ತೆಗೆದುಕೊಳ್ಳಿ.
    ಇಡೀ ಪಠ್ಯಕ್ರಮ ಮುಗಿಸಿದ ನಂತರ ಅಭ್ಯಾಸ ಪರೀಕ್ಷೆ ಪರಿಹರಿಸಲು ಕಾಯಬೇಡಿ, ಮೊದಲ ತಿಂಗಳಿಂದಲೇ ಆರಂಭಿಸಿ.
    ಪರೀಕ್ಷಾ ಫಲಿತಾಂಶಗಳನ್ನು ವಿಮರ್ಶಿಸಿ, ನಿಮ್ಮಲ್ಲಿ ಕೊರತೆ ಇರುವ ವಿಷಯಗಳಿಗೆ ಮತ್ತೆ ತಯಾರಿ ನಡೆಸಿ.

    First published: