• Home
  • »
  • News
  • »
  • explained
  • »
  • Richest City: ರಾಜ್ಯ ರಾಜಧಾನಿಗೆ ಮತ್ತೊಂದು ಕಿರೀಟ, ದೇಶದ 3ನೇ ಶ್ರೀಮಂತ ನಗರಿಯಾದ ನಮ್ಮ ಬೆಂಗಳೂರು!

Richest City: ರಾಜ್ಯ ರಾಜಧಾನಿಗೆ ಮತ್ತೊಂದು ಕಿರೀಟ, ದೇಶದ 3ನೇ ಶ್ರೀಮಂತ ನಗರಿಯಾದ ನಮ್ಮ ಬೆಂಗಳೂರು!

ಸಾಂದರ್ಭಿಕ ಚಿತ್ರ (ಕೃಪೆ: Internet)

ಸಾಂದರ್ಭಿಕ ಚಿತ್ರ (ಕೃಪೆ: Internet)

ಎಲ್ಲರನ್ನು ಬಾಚಿ ತಬ್ಬಿಕೊಳ್ಳುವ ಬೆಂಗಳೂರು ಅವರಿಗೊಂದು ಕೆಲಸ, ಆಶ್ರಯ, ತಿನ್ನೋದಕ್ಕೆ ಮೂರು ಹೊತ್ತಿನ ಊಟ ಕೊಡುತ್ತಿದೆ. ಇಲ್ಲಿ ಕೂಲಿ ಮಾಡುವ ಕಾರ್ಮಿಕರೂ (labor) ಇದ್ದಾರೆ, ದುಡಿದು ತಿನ್ನುವ ಶ್ರಮ ಜೀವಿಗಳೂ ಇದ್ದಾರೆ. ಅದೆಷ್ಟೋ ಉದ್ಯಮಿಗಳು, ಬಂಡವಾಳಶಾಹಿಗಳೂ (Entrepreneurs, capitalists) ಇದ್ದಾರೆ. ಇದೀಗ ನಮ್ಮ ಬೆಂಗಳೂರು (Namma Bengaluru) ಭಾರತದ ಮೂರನೇ ಅತ್ಯಂತ ಶ್ರೀಮಂತ ನಗರಿ (Richest City) ಎಂಬ ಖ್ಯಾತಿ ಪಡೆದಿದೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ನಮ್ಮ ಬೆಂಗಳೂರು (Namma Bengaluru) ಅಂದರೆ ಅದೆಷ್ಟೋ ಮಂದಿಗೆ ಕರ್ಮಭೂಮಿ. ಬೆಂದಕಾಳೂರಾಗಿದ್ದ (Bendakaluru) ಬೆಂಗಳೂರು, ಬೆಂದು ಬಂದ ಅದೆಷ್ಟೋ ಮಂದಿಗೆ ಬದುಕು (life) ಕಟ್ಟಿಕೊಟ್ಟಿದೆ. ಅಕ್ಷರಬಾರದ ನಿರಕ್ಷರರಿಂದ (Uneducated) ಹಿಡಿದು, ಅತೀ ಹೆಚ್ಚು ಓದಿದ ವ್ಯಕ್ತಿಗಳವರೆಗೆ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನು ಬಾಚಿ ತಬ್ಬಿಕೊಳ್ಳುವ ಬೆಂಗಳೂರು ಅವರಿಗೊಂದು ಕೆಲಸ, ಆಶ್ರಯ, ತಿನ್ನೋದಕ್ಕೆ ಮೂರು ಹೊತ್ತಿನ ಊಟ ಕೊಡುತ್ತಿದೆ. ಇಲ್ಲಿ ಕೂಲಿ ಮಾಡುವ ಕಾರ್ಮಿಕರೂ (labor) ಇದ್ದಾರೆ, ದುಡಿದು ತಿನ್ನುವ ಶ್ರಮ ಜೀವಿಗಳೂ ಇದ್ದಾರೆ. ಅದೆಷ್ಟೋ ಉದ್ಯಮಿಗಳು, ಬಂಡವಾಳಶಾಹಿಗಳೂ (Entrepreneurs, capitalists) ಇದ್ದಾರೆ. ಇದೀಗ ನಮ್ಮ ಬೆಂಗಳೂರು (Namma Bengaluru) ಭಾರತದ ಮೂರನೇ ಅತ್ಯಂತ ಶ್ರೀಮಂತ ನಗರಿ (Richest City) ಎಂಬ ಖ್ಯಾತಿ ಪಡೆದಿದೆ.


 ಹುರುನ್ ಇಂಡಿಯಾ ಸಂಸ್ಥೆಯ ವರದಿ


ಖ್ಯಾತ ಆರ್ಥಿಕ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ ಹುರುನ್ ಇಂಡಿಯಾ ಸಂಸ್ಥೆಯು ಹೊಸದೊಂದು ವರದಿ ರಿಲೀಸ್ ಮಾಡಿದೆ. ಇದು ದೇಶದ ಅಂತ್ಯಂತ ಹೆಚ್ಚು ಶ್ರೀಮಂತರ ಇರುವ ನಗರಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಪಟ್ಟಿಯಲ್ಲಿ ನಮ್ಮ ಬೆಂಗಳೂರು ಸ್ಥಾನ ಪಡೆದಿದೆ.


ಮೊದಲ ಸ್ಥಾನ ಮುಂಬೈ, 2ನೇ ಸ್ಥಾನ ದೆಹಲಿ


ಈ ಪಟ್ಟಿಯಲ್ಲಿ ದೇಶದ ಪ್ರಮುಖ ನಗರಗಳು ಸ್ಥಾನ ಪಡೆದಿವೆ. ಈ ಪೈಕಿ ವಾಣಿಜ್ಯ ನಗರಿ ಮುಂಬೈ ದೇಶದ ಅತ್ಯಂತ ಹೆಚ್ಚು ಶ್ರೀಮಂತರಿರುವ ನಗರವಾಗಿದೆ. ಮುಂಬೈನಲ್ಲಿ ಭಾರತದ 288 ಅತಿ ಸಿರಿವಂತ ಉದ್ಯಮಿಗಳು ವಾಸಿಸುತ್ತಿದ್ದಾರೆ. 2ನೇ ಸ್ಥಾನದಲ್ಲಿರುವ ಹೊಸದಿಲ್ಲಿಯಲ್ಲಿ ಭಾರತದ 185 ಕುಬೇರರು ನೆಲೆಸಿದ್ದಾರೆ.  2022ರ ಪಟ್ಟಿಯ ಪ್ರಕಾರ, ಮುಂಬೈನಲ್ಲಿರುವ 283 ಕುಬೇರರಲ್ಲಿ ಅತಿ ಶ್ರೀಮಂತರೆಂದರೆ ಅದು ಮುಕೇಶ್ ಅಂಬಾನಿ ಹಾಗೂ ಕುಟುಂಬ ಎಂದು ಹುರುನ್ ವರದಿ ತಿಳಿಸಿದೆ. ಹೊಸದಿಲ್ಲಿಯಲ್ಲಿನ ಕುಬೇರರಲ್ಲೇ ಅತಿ ಶ್ರೀಮಂತರೆಂದರೆ ಎಚ್ ಸಿಎಲ್ ಸಾಫ್ಟ್ ವೇರ್ ಕಂಪನಿಯ ಮಾಲೀಕತ್ವ ಹೊಂದಿರುವ ಶಿವ ನಾದರ್ ಹಾಗೂ ಕುಟುಂಬ ಎಂದು ಹೇಳಲಾಗಿದೆ.


ಇದನ್ನೂ ಓದಿ: Bengaluru Lakes: ಕಾಣದಂತೆ ಮಾಯವಾಯ್ತಣ್ಣ ಬೆಂಗಳೂರು ಕೆರೆಗಳು! ಜೀವಸೆಲೆಯ ನೆಲೆ ಮೇಲೆ ತಲೆ ಎತ್ತಿದ ಲೇಔಟ್‌ಗಳು!


ಹಿಂದಿನ ವರದಿಯಲ್ಲಿ ಏನಿತ್ತು?


2018ರಲ್ಲಿ ಇದೇ ರೀತಿಯ ಸಮೀಕ್ಷೆ ನಡೆಸಿದ್ದಾಗ, ಮುಂಬೈನಲ್ಲಿ 233 ಕುಬೇರರು ನೆಲೆಸಿರುವುದು ತಿಳಿದುಬಂದಿತ್ತು. ಆಗಲೂ ಮುಂಬೈ ನಗರಿಯೇ ಅತಿ ಹೆಚ್ಚು ಕುಬೇರರನ್ನು ಹೊಂದಿರುವ ನಗರಿ ಎಂದು ಪರಿಗಣಿಸಲ್ಪಟ್ಟಿತ್ತು. ಆನಂತರದ ಸ್ಥಾನಗಳಲ್ಲಿ ಕ್ರಮವಾಗಿ ನವದೆಹಲಿ, ಬೆಂಗಳೂರು ಇದ್ದವು. ಆಗ, ಹೊಸದಿಲ್ಲಿಯಲ್ಲಿ 163 ಸಿರಿವಂತರಿದ್ದರೆ, ಬೆಂಗಳೂರಿನಲ್ಲಿ 70 ಕುಬೇರರಿದ್ದರು.


ಪಟ್ಟಿಯಲ್ಲಿ ನಮ್ಮ ಬೆಂಗಳೂರಿಗೆ ಮೂರನೇ ಸ್ಥಾನ


ಈ ಪಟ್ಟಿಯಲ್ಲಿ ರಾಜ್ಯ ರಾಜಧಾನಿ ನಮ್ಮ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ. ಬೆಂಗಳೂರಿನಲ್ಲಿ 89 ಅತ್ಯಂತ ಶ್ರೀಮಂತ ವ್ಯಕ್ತಿಗಳಿದ್ದಾರೆ. ಬೆಂಗಳೂರಿನಲ್ಲಿರುವ ಕುಬೇರರ ಪೈಕಿ ಬೈಜು ರವೀಂದ್ರನ್ ಹಾಗೂ ಕುಟುಂಬವೇ ಅತ್ಯಂತ ಶ್ರೀಮಂತ ಉದ್ಯಮ ಕುಟುಂಬ ಎಂದು ಉಲ್ಲೇಖಿಸಲಾಗಿದೆ.


ಇದನ್ನೂ ಓದಿ: Explained: ಬೆಂಗಳೂರಿನಲ್ಲಿ ಬದುಕು ಜಟಕಾ 'ಗುಂಡಿ’! ರಾಜಧಾನಿ ರಸ್ತೆಯಲ್ಲಿರೋದು 10,282 ಹೊಂಡ!


ಪಟ್ಟಿಯಲ್ಲಿ ಇರುವ ಇತರರು ಯಾರು?


ಹುರುನ್ ಇಂಡಿಯಾ ಬಿಡುಗಡೆ ಮಾಡಿರುವ ಭಾರತದ ಟಾಪ್ 10 ಕುಬೇರರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಎಚ್ ಸಿಎಲ್ ಸಾಫ್ಟ್ ವೇರ್ ಕಂಪನಿ ಮಾಲೀಕರಾದ ಶಿವ ನಾದಾರ್ ಹಾಗೂ ಅವರ ಕುಟುಂಬ ಇದೆ. ಇನ್ನು ಅವೆನ್ಯೂ ಸೂಪರ್ ಮಾರ್ಕೆಟ್ಸ್ ಕಂಪನಿಯ ಮಾಲೀಕರಾದ ರಾಧಾಕೃಷ್ಣನ್ ಧಮಾನಿ ಹಾಗೂ ಕುಟುಂಬವು 5ನೇ ಸ್ಥಾನದಲ್ಲಿದೆ. ಇನ್ನು, ಅದಾನಿ ಗ್ರೂಪ್ ನ ಮಾಲೀಕರಾದ ವಿನೋದ್ ಶಾಂತಿಲಾಲ್ ಅದಾನಿ ಮತ್ತು ಅವರ ಕುಟುಂಬ 6ನೇ ಸ್ಥಾನದಲ್ಲಿದೆ.

Published by:Annappa Achari
First published: