Amarnath Flash Flood: ಮೇಘಸ್ಫೋಟದಿಂದ ಸಂಭವಿಸಿಲ್ಲ ಅಮರನಾಥ ದುರಂತ, ಬಯಲಾಯ್ತು ಅಸಲಿ ಕಾರಣ!

8 ಜುಲೈ 2022 ರಂದು ಪವಿತ್ರ ಅಮರನಾಥ ಗುಹೆಯಲ್ಲಿ ಉಂಟಾದ ಪ್ರವಾಹದಲ್ಲಿ 40 ಜನರು ನಾಪತ್ತೆಯಾಗಿದ್ದರು. 16 ಮಂದಿ ಸಾವನ್ನಪ್ಪಿದ್ದರು. 15 ಸಾವಿರ ಜನರನ್ನು ಈ ವೇಳೆ ರಕ್ಷಿಸಲಾಗಿತ್ತುದೆ. ಮೇಘಸ್ಫೋಟದಿಂದಾಗಿ ಅಮರನಾಥದಲ್ಲಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಆದರೆ ಇದು ನಿಜಾನಾ? ಅಲ್ಲ ಅಂತಿದ್ದಾರೆ ಹಿಮಾಲಯದ ತಜ್ಞರು, ಅಲ್ಲದೇ ಈ ದುರಂತದ ಹಿಂದಿನ ಅಸಲಿ ಕಾರಣವನ್ನೂ ತಿಳಿಸಿದ್ದಾರೆ. ಹಾಗಾದ್ರೆ ಅಮರನಾಥ ಗುಹೆಯಲ್ಲಿ ಆತಂಕದ ಮೋಡಗಳು ಆವರಿಸಿದ್ದೇಕೆ? ಭಾರೀ ಮಳೆ ಸುರಿದಿದ್ದೇಕೆ? ಇಲ್ಲಿದೆ ವಿವರ

ಅಮರನಾಥ ಯಾತ್ರೆ ವೇಳೆ ಸಂಭವಿಸಿದ ದುರಂತ

ಅಮರನಾಥ ಯಾತ್ರೆ ವೇಳೆ ಸಂಭವಿಸಿದ ದುರಂತ

  • Share this:
ಡೆಹ್ರಾಡೂನ್(ಆ.11): ಸುಮಾರು ಒಂದು ತಿಂಗಳ ಹಿಂದೆ ಪವಿತ್ರ ಅಮರನಾಥ ಗುಹೆಯಲ್ಲಿ  (Amarnath Holy Cave) ಪ್ರವಾಹ (Flash Flood) ಉಂಟಾಗಿತ್ತು. ಇದರಲ್ಲಿ ಸುಮಾರು ಒಂದೂವರೆ ಡಜನ್ ಜನರು ಮೃತಪಟ್ಟಿದ್ದರು. ಸುಮಾರು 40 ಮಂದಿ ನಾಪತ್ತೆಯಾಗಿದ್ದಾರೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸಿಆರ್‌ಪಿಎಫ್ ಮತ್ತು ಭಾರತೀಯ ಸೇನಾ ಸಿಬ್ಬಂದಿಯೊಂದಿಗೆ ಸುಮಾರು 15 ಸಾವಿರ ಜನರನ್ನು ಈ ಪ್ರವಾಹದ ವೇಳೆ ಅಪಾಯಕಾರಿ ಪ್ರದೇಶದಿಂದ ಸ್ಥಳಾಂತರಿಸಿದ್ದರು. ಹೀಗಿರುವಾಗ ಈ ದುರಂತಕ್ಕೇನು ಕಾರಣ ಎಂದು ತಿಳಿಯುವ ಮುನ್ನ ಇದರ ಹಿಂದೆ ಕೇವಲ ಒಂದೇ ಕಾರಣದಿಂದ ಇದೆಲ್ಲಾ ಸಂಭವಿಸಿತಾ ಅಥವಾ ಅನೇಕ ಪರಿಸ್ಥಿತಿಗಳಿಂದ್ ಇದು ಉಂಟಾಯಿತಾ ಎಂದು ತಿಳಿಯುವುದು ಮುಖ್ಯ.

ಕಳೆದ ಕೆಲವು ದಶಕಗಳಲ್ಲಿ, ಪ್ರಪಂಚದಾದ್ಯಂತ ತಾಪಮಾನ ಹೆಚ್ಚಾಗಿದೆ. ಹವಾಮಾನ ಬದಲಾವಣೆಯ ಕುರಿತಾಗಿ ಇಂಟರ್ ಗವರ್ನಮೆಂಟಲ್ ಪ್ಯಾನಲ್ (IPCC) ವರದಿಯಿಂದಲೂ ಇದನ್ನು ದೃಢಪಡಿಸಲಾಗಿದೆ. 1950 ರ ನಂತರ ಹೆಚ್ಚುತ್ತಿರುವ ಶಾಖ ಮತ್ತು ಭಾರೀ ಮಳೆಗೆ ಕಾರಣ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ. ಭಾರತದಲ್ಲಿ ಹಠಾತ್ ಮತ್ತು ಅತಿವೃಷ್ಟಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಐದು ದಶಕಗಳಲ್ಲಿ ಮಳೆ ಸಂಬಂಧಿತ ಅನಾಹುತಗಳ ಪ್ರಮಾಣ ಶೇ.50ರಷ್ಟು ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಹಿಮಾಲಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಹಠಾತ್ ಪ್ರವಾಹದ ಪ್ರಮಾಣ ಹೆಚ್ಚಾಗಿದೆ. ಪ್ರಸ್ತುತ ಅಧ್ಯಯನವನ್ನು ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ (WIHG) ಮುಖ್ಯಸ್ಥ ಡಾ. ಕಲಾಚಂದ್ ಸೈನ್, ಡಾ. ಮನೀಶ್ ಮೆಹ್ತಾ ಮತ್ತು ವಿನೀತ್ ಕುಮಾರ್ ವಹಿಸಿದ್ದರು.

ಇದನ್ನೂ ಓದಿ:  Amarnath Yatra: ಅಮರನಾಥ ಪ್ರಯಾಣಿಕರಿಗೆ ಹೆಲಿಕಾಪ್ಟರ್ ಬುಕ್ಕಿಂಗ್ ಸೇವೆ ಆರಂಭ; ಇಷ್ಟು ರೂಪಾಯಿ ಖರ್ಚಾಗುತ್ತೆ

ಈಗ 8 ಜುಲೈ 2022 ರಂದು ಅಮರನಾಥ ಗುಹೆಯಲ್ಲಿ ಸಂಭವಿಸಿದ ದುರಂತವನ್ನು ನೋಡುವುದಾದರೆ, ಸಂಜೆ 5.30ರ ಸುಮಾರಿಗೆ ಸುರಿದ ಭಾರಿ ಮಳೆಗೆ ದಿಢೀರ್‌ ಪ್ರವಾಹ ಉಂಟಾಯಿತು. ಇದರಿಂದಾಗಿ ಅಮರನಾಥದ ಕ್ಯಾಂಪ್ ಪ್ರದೇಶದಲ್ಲಿ ಭಾರಿ ವಿನಾಶ ಸಂಭವಿಸಿದೆ. ಅಮರನಾಥ ಗುಹೆಯು ಸಮುದ್ರ ಮಟ್ಟದಿಂದ 12,795 ಅಡಿ ಎತ್ತರದಲ್ಲಿದೆ. ಅಮರಾವತಿ ನಾಲಾ ಗುಹೆಯ ಸಮೀಪದಲ್ಲಿದೆ. ಅಮರನಾಥನ ಮೇಲೆ ಅಂತಹ ಅಪಘಾತ ಸಂಭವಿಸುವುದು ಸಾಮಮಾನ್ಯವಲ್ಲ ಎರಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಅರೆ-ಶುಷ್ಕ ಟ್ರಾನ್ಸ್ ಹಿಮಾಲಯನ್ (Semi-Arid Trans Himalayan) ಪ್ರದೇಶದಲ್ಲಿದೆ.

Amarnath Cloudburst army continues rescue operation see photos

ಸುತ್ತಲೂ ಹಿಮಾಲಯದ ದೊಡ್ಡ ಶ್ರೇಣಿ

ಅಮರನಾಥ ಗುಹೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ ನಿಂದ ಅಕ್ಟೋಬರ್ ವರೆಗೆ 300 ಮಿ.ಮೀ ಗಿಂತ ಕಡಿಮೆ ಮಳೆಯಾಗುತ್ತದೆ. ಅಮರನಾಥದ ಪ್ರದೇಶವು ಉತ್ತರ ಗೋಳಾರ್ಧದಲ್ಲಿ ಬರುತ್ತದೆ. ಇದು ಉತ್ತರದಲ್ಲಿ ಕಾರಕೋರಂ ಶ್ರೇಣಿ, ದಕ್ಷಿಣ ಮತ್ತು ಪಶ್ಚಿಮದಲ್ಲಿ ಪಿರ್ ಪಂಜಾಲ್ ಶ್ರೇಣಿ ಮತ್ತು ಪೂರ್ವದಲ್ಲಿ ಝನ್ಸ್ಕರ್ ಶ್ರೇಣಿಯಿಂದ ಸುತ್ತುವರಿದಿದೆ. ಈ ಪ್ರದೇಶವು ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಮಧ್ಯಮದಿಂದ ಭಾರೀ ಹಿಮಪಾತವನ್ನು ಪಡೆಯುತ್ತದೆ. ಇಡೀ ಪೀರ್ ಪಂಜಾಲ್ ಶ್ರೇಣಿಯಲ್ಲಿ, ದಕ್ಷಿಣ ಏಷ್ಯಾದ ಮಾನ್ಸೂನ್ ಕಾರಣದಿಂದ ಇಲ್ಲಿ ಮಳೆಯುಂಟಾಗುವ ಸಾಧ್ಯತೆ ಇಲ್ಲ. ಯಾಕೆಂದರೆ ಅದರ ಪರಿಣಾಮ ಕಡಿಮೆ ಇರುತ್ತದೆ.

ಎಷ್ಟು ಗಂಟೆಯಲ್ಲಿ ಎಷ್ಟು ಮಳೆ ಸುರಿದಿದೆ?

ಪಿರ್ ಪಂಜಾಲ್ ಶ್ರೇಣಿಯ ಪರ್ವತಗಳು ಅರಬ್ಬೀ ಸಮುದ್ರಕ್ಕೆ ಸಮೀಪದಲ್ಲಿವೆ. ಆದ್ದರಿಂದ, ಇಲ್ಲಿ ನೈಋತ್ಯ ದಿಕ್ಕಿನಿಂದ ಮೋಡಗಳ ಸಂಗ್ರಹವಾಗುತ್ತದೆ. ಇದರಿಂದಾಗಿ ಬೇಸಿಗೆಯಲ್ಲೂ ಇಲ್ಲಿ ಉತ್ತಮ ಮಳೆಯಾಗಿದೆ. ಅಮರನಾಥ ಗುಹೆಯ ಅಡಿಯಲ್ಲಿರುವ ಸ್ವಯಂಚಾಲಿತ ಹವಾಮಾನ ಕೇಂದ್ರ (AWS) ಜುಲೈ 8, 2022 ರಂದು ಮಳೆಯ ಡೇಟಾವನ್ನು ದಾಖಲಿಸಿದೆ - ಸಂಜೆ 4.30 ರಿಂದ 5.30 ರ ನಡುವೆ 31 ಮಿಮೀ ಮಳೆ ಬಿದ್ದಿದೆ. 5.30ರಿಂದ 6.30ರ ನಡುವೆ 25 ಮಿ.ಮೀ ಮಳೆಯಾಗಿದೆ. 6.30ರಿಂದ 7.30ರ ನಡುವೆ 19 ಮಿ.ಮೀ ಮಳೆಯಾಗಿದೆ. ಅಂದರೆ, ಮೂರು ಗಂಟೆಗಳಲ್ಲಿ ಒಟ್ಟು 75 ಮಿ.ಮೀ ಮಳೆ ಸುರಿದಿದೆ. ಇದು ಕ್ಲೌಡ್‌ಬರ್ಸ್ಟ್‌ನ ನಿರ್ದಿಷ್ಟ ವರ್ಗಕ್ಕಿಂತ ಕಡಿಮೆಯಾಗಿದೆ.

ಇದನ್ನೂ ಓದಿ:  Amarnath Cloudburst: ಮೇಘಸ್ಫೋಟ, ಅಮರನಾಥ ಗುಹೆಯಿಂದ ಹರಿದುಬಂದ ನೀರು

ಇದು ಕ್ಲೌಡ್‌ಬರ್ಸ್ಟ್‌ನ ವ್ಯಾಖ್ಯಾನ ಮತ್ತು ಮಾನದಂಡವಾಗಿದೆ

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಒಂದು ಗಂಟೆಯಲ್ಲಿ 100 ಮಿಮೀ ಅಥವಾ ಅದಕ್ಕಿಂತ ಹೆಚ್ಚು ಮಳೆಯಾದಾಗ ಅದನ್ನು ಮೇಘಸ್ಫೋಟ ಎಂದು ಕರೆಯಲಾಗುತ್ತದೆ. ಆದರೆ ಅಮರನಾಥ ಗುಹೆಯಲ್ಲಿ ಮೂರು ಗಂಟೆಯಲ್ಲಿ 75 ಮಿ.ಮೀ ಮಳೆಯಾಗಿದೆ. ಅಮರನಾಥ ಗುಹೆಯ ಸುತ್ತಮುತ್ತಲೂ ಸ್ಥಳೀಯ ಮಟ್ಟದಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜುಲೈ 8 ರಂದು ಅಮರನಾಥದ ಮೇಲೆ ತೀವ್ರವಾದ ಸಂವಹನ ಮೋಡದ ಕ್ಲಸ್ಟರ್ ರಚನೆಯಾದ ಕಾರಣ ಇದು ಸಂಭವಿಸಿದೆ. ಅಂದರೆ, ಸರಳ ಭಾಷೆಯಲ್ಲಿ, ಬೃಹತ್ ಪ್ರಮಾಣದ ಮೋಡಗಳು ಸಂಗ್ರಹಗೊಂಡವು. ಹವಾಮಾನ ಇಲಾಖೆ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದ್ದು, ಹಾಗೇ ನಡೆದಿದೆ.ಹಿಮ ಕರಗುವಿಕೆ, ಮಳೆ ಮತ್ತು ಮಣ್ಣಿನ ಹರಿವು

ನೀವು ಅಮರನಾಥ ಗುಹೆ ಮತ್ತು ಅದರ ಸುತ್ತಮುತ್ತಲಿನ ಭೂರೂಪಶಾಸ್ತ್ರವನ್ನು ನೋಡಿದರೆ, ಇಲ್ಲಿ ಸಾಕಷ್ಟು ಹಿಮನದಿ ಚಟುವಟಿಕೆಗಳು ನಡೆದಿವೆ ಎಂದು ತಿಳಿದುಬಂದಿದೆ. ಕಳೆದ ಕೆಲವು ವರ್ಷಗಳಲ್ಲಿ, ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಮಪಾತಗಳು ಸಹ ಬದಲಾವಣೆಗಳನ್ನು ಮಾಡಿದೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ ಹಿಮನದಿಗಳು ಕರಗುತ್ತಿವೆ. ಹಾಗಾಗಿ ಯು ಆಕಾರದ ಕಣಿವೆಯ ಮೇಲ್ಮೈಯಿಂದ 100 ಮೀಟರ್ ಎತ್ತರದಲ್ಲಿರುವ ಅಮರಾವತಿ ನಾಲಾದಲ್ಲಿ ಕಸ ಸಂಗ್ರಹವಾಗುತ್ತಿದೆ. ಚಳಿಗಾಲದಲ್ಲಿ ಸಂಗ್ರಹವಾಗುವ ಹಿಮವು ಬೇಸಿಗೆಯಲ್ಲಿ ಕರಗಲು ಪ್ರಾರಂಭಿಸುತ್ತದೆ. ಇದು ಅನೇಕ ಮಳೆ ಮಾರ್ಗಗಳನ್ನು ತುಂಬುತ್ತದೆ. ಇವೆಲ್ಲ ಬಂದು ಅಮರಾವತಿ ನಾಲಾದಲ್ಲಿ ಬೆರೆತು ಹೋಗುತ್ತವೆ. ಇದರಿಂದಾಗಿ ಆ ನಾಲೆ ಮೇಲೆ ಒತ್ತಡ ಉಂಟಾಗುತ್ತದೆ.

2021ರಲ್ಲೂ ಇಂತಹ ಅವಘಡ ಸಂಭವಿಸಿತ್ತು

ಭಾರೀ ಮಳೆಯಿಂದಾಗಿ ಅಮರಾವತಿ ನಾಲಾ ಮೇಲ್ಭಾಗದಿಂದ ಸಾಕಷ್ಟು ಮಣ್ಣು, ಕಲ್ಲುಗಳು ಹರಿಯುತ್ತವೆ. ನಾಲೆ ಸಾಮರ್ಥ್ಯವು ಖಾಲಿಯಾದಾಗ, ಅದು ಸಿಡಿಯುತ್ತದೆ. ಜುಲೈ 8, 2022 ರಂದು ಸಂಭವಿಸಿದ್ದು ಕೂಡಾ ಇದೇ. ಚರಂಡಿಯ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ನಿರಂತರ ಸವೆತವಾಗುತ್ತಿರುತ್ತದೆ. ಮಣ್ಣು ದುರ್ಬಲವಾಗಿ, ಕಲ್ಲುಗಳು ಸಡಿಲವಾಗುತ್ತವೆ. ಮಳೆಯಿಂದಾಗಿ ಅವು ಒಡೆಯುತ್ತವೆ. ಅದೇ ಮಣ್ಣು, ಕಲ್ಲುಗಳು ಭಾರೀ ಮಳೆಗೆ ಕೊಚ್ಚಿಹೋಗಿ ಅಮರಾವತಿ ನಾಲೆಗೆ ಬಂದಿವೆ. ನಂತರ ಅಲ್ಲಿಂದ ಕೆಳಗೆ ಹರಿದಿವೆ. ಈ ಹಿಂದೆ, 28 ಜುಲೈ 2021 ರಂದು ಕೂಡ ಇದೇ ರೀತಿಯ ಘಟನೆ ಸಂಭವಿಸಿದೆ. ಅದು ಕೂಡಾ ಇದೇ ನಾಲೆಯಲ್ಲಿ ಸಂಭವಿಸಿತ್ತು.
Published by:Precilla Olivia Dias
First published: