• Home
  • »
  • News
  • »
  • explained
  • »
  • Explained: ಉತ್ತರ, ದಕ್ಷಿಣ, ಪೂರ್ವ ಅಥವಾ ಪಶ್ಚಿಮ! ಯಾವ ದಿಕ್ಕಿನಲ್ಲಿ ಮಲಗಿದರೆ ಸರಿಯಾಗಿ ನಿದ್ರೆ ಬರುತ್ತದೆ? ಇಲ್ಲಿದೆ ವಿವರ

Explained: ಉತ್ತರ, ದಕ್ಷಿಣ, ಪೂರ್ವ ಅಥವಾ ಪಶ್ಚಿಮ! ಯಾವ ದಿಕ್ಕಿನಲ್ಲಿ ಮಲಗಿದರೆ ಸರಿಯಾಗಿ ನಿದ್ರೆ ಬರುತ್ತದೆ? ಇಲ್ಲಿದೆ ವಿವರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಾಸ್ತು ಶಾಸ್ತ್ರದ ಪ್ರಾಚೀನ ವ್ಯವಸ್ಥೆಯು ನಿದ್ರೆಗೆ ಉತ್ತಮ ದಿಕ್ಕಿನಲ್ಲಿ ಕೆಲವು ನಿಯಮಗಳನ್ನು ಶಿಫಾರಸು ಮಾಡುತ್ತದೆ. ಇದು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

  • Share this:

ಹಳೆಯ ಕಾಲವಾಗಿರಲಿ ಅಥವಾ ಆಧುನಿಕ ವಿಜ್ಞಾನವಾಗಲಿ, ನಮ್ಮ ಮನಸ್ಸು ಮತ್ತು ದೇಹದ ಆರೋಗ್ಯಕರ (Health) ಕಾರ್ಯನಿರ್ವಹಣೆಗಾಗಿ ಉತ್ತಮ ರಾತ್ರಿಯ ನಿದ್ರೆಯ ಅಗತ್ಯವನ್ನು ತಜ್ಞರು ಹೇಳುತ್ತಾರೆ. ಏಕೆಂದರೆ ನಿದ್ರೆಯ (Sleep) ಕೊರತೆಯು ನಿಮ್ಮ ಯೋಗಕ್ಷೇಮದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಹೃದಯ ರಕ್ತನಾಳದ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಮಾನಸಿಕ ಆರೋಗ್ಯ (Mental Health) ಸಮಸ್ಯೆಗಳಂತಹ ಗಂಭೀರ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಉಂಟುಮಾಡುತ್ತದೆ. ಸಾಕಷ್ಟು ನಿದ್ರೆ ಮಾನವ ದೇಹಕ್ಕೆ ಅಗತ್ಯವಿದೆ. ವೈದ್ಯರು ಸಾಮಾನ್ಯ ವ್ಯಕ್ತಿಗೆ 6 ರಿಂದ 8 ಗಂಟೆಗಳ ನಿದ್ರೆಯನ್ನು ಪಡೆಯಲು ಶಿಫಾರಸು ಮಾಡುತ್ತಾರೆ. ಸಾಕಷ್ಟು ನಿದ್ರೆ ಪಡೆಯುವುದು ದೇಹದ ಗಡಿಯಾರವನ್ನು ಸರಿಯಾಗಿರಿಸುತ್ತದೆ. ನಮ್ಮ ಇಡೀ ಜೀವನಶೈಲಿಯ (Lifestyle) ಮೇಲೆ ಭಾರಿ ಪರಿಣಾಮ ಬೀರುತ್ತದೆ.


ಮಲಗುವ ದಿಕ್ಕಿನಿಂದ ಬಗ್ಗೆ ಆಯುರ್ವೇದ ತಜ್ಞರು ಏನು ಹೇಳುತ್ತಾರೆ
ಮತ್ತೊಂದೆಡೆ, ನೀವು ರಾತ್ರಿಯಲ್ಲಿ ಉತ್ತಮ ನಿದ್ರೆ ಪಡೆಯದಿದ್ದರೆ, ಅದು ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ನೀವು ಸಾಕಷ್ಟು ಗಂಟೆಗಳ ಕಾಲ ನಿದ್ರೆ ಮಾಡುತ್ತಿದ್ದೀರಿ ಎಂದರೆ ಅದರ ಜೊತೆಗೆ ನೀವು ಮಲಗುವ ದಿಕ್ಕಿನ ಬಗ್ಗೆಯೂ ವಿಶೇಷ ಗಮನ ನೀಡಬೇಕು ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.


“ರೈತರು ತಮ್ಮ ಹೊಲಗಳನ್ನು ಹೆಚ್ಚಾಗಿ ಪಾಳು ಬಿಡುತ್ತಾರೆ. ಏಕೆಂದರೆ ಇದರಿಂದಾಗಿ ಮಣ್ಣು ಪುನರುತ್ಪಾದಿಸಲು ಮತ್ತು ಕಳೆದುಹೋದ ಫಲವತ್ತತೆಯನ್ನು ಮರಳಿ ಪಡೆಯಲು ಅನುವು ಮಾಡಿಕೊಡುತ್ತದೆ. ಹಾಗೆಯೇ ನಿದ್ರೆಯು ಇದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಹೊಸ ಆರಂಭ ಮತ್ತು ಉತ್ಪಾದಕ ದಿನಕ್ಕಾಗಿ ನಾವು ನಮ್ಮ ಇಂದ್ರಿಯಗಳನ್ನು ನವೀಕರಿಸುವ ಮತ್ತು ಪುನರುಜ್ಜೀವನಗೊಳಿಸುವುದಕ್ಕೆ ನಿದ್ರೆ ಅತಿ ಅಗತ್ಯ. ಆಯುರ್ವೇದದಲ್ಲಿ ನಿದ್ರೆ ಅತ್ಯಂತ ಪ್ರಮುಖವಾದ ಅಂಶವಾಗಿದೆ” ಎಂದು ಕೇರಳದ ಆಯುರ್ವೇದದ ಹಿರಿಯ ವೈದ್ಯಾಧಿಕಾರಿ ಡಾ.ಅರುಣ್ ಗೋಪಿನಾಥ್ ಅವರು ಹೇಳಿದರು.


ವಾಸ್ತು ಶಾಸ್ತ್ರದ ಪ್ರಾಚೀನ ವ್ಯವಸ್ಥೆಯು ನಿದ್ರೆಗೆ ಉತ್ತಮ ದಿಕ್ಕಿನಲ್ಲಿ ಕೆಲವು ನಿಯಮಗಳನ್ನು ಶಿಫಾರಸು ಮಾಡುತ್ತದೆ. ಇದು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.


ಆಯುರ್ವೇದದಲ್ಲಿ ಚರಕ ಮಹರ್ಷಿ ಏನ್‌ ಹೇಳಿದ್ದಾರೆ?
ಆಚಾರ್ಯ ಚರಕನು ಪ್ರಾಚೀನ ಆಯುರ್ವೇದ ವ್ಯವಸ್ಥೆಗೆ ಪ್ರಮುಖ ಕೊಡುಗೆದಾರರಲ್ಲಿ ಇವರು ಒಬ್ಬರಾಗಿದ್ದಾರೆ. ಅವರು ನಿದ್ರೆಯನ್ನು 'ಭೂತಧಾತ್ರಿ' ಎಂದು ಶ್ಲಾಘಿಸಿದರು. "ಶಾಂತಿಯುತ ನಿದ್ರೆಯು ನಮ್ಮ ದೇಹವನ್ನು ತಾಯಿಯಂತೆ ಪೋಷಿಸುತ್ತದೆ” ಎಂದು ಚರಕ ಸಂಹಿತೆಯಲ್ಲಿ ಈ ವಾಕ್ಯದ ಉಲ್ಲೇಖವಿದೆ.


ಆದಾಗ್ಯೂ, ಅದರ ಅನೇಕ ಪ್ರಯೋಜನಗಳ ಹೊರತಾಗಿಯೂ, ಅನೇಕ ಜನರು ಉತ್ತಮವಾಗಿ ನಿದ್ರೆ ಮಾಡುವುದಕ್ಕೆ ತುಂಬಾ ಕಷ್ಟಪಡುತ್ತಾರೆ. ಆದರೆ ನಾವು ಮಲಗುವ ದಿಕ್ಕು ಕೂಡ ಉತ್ತಮ ನಿದ್ರೆಗೆ ಕಾರಣವಾಗುತ್ತದೆ ಎಂಬುದು ನಿಮಗೆ ಗೊತ್ತೆ. ಹೌದು ನಾವು ಮಲಗುವ ದಿಕ್ಕು ಕೂಡ ನಮ್ಮ ನಿದ್ದೆಯ ಮೇಲೆ ಪ್ರಭಾವವನ್ನು ಬೀರುತ್ತಿದೆ. ಇದು ನಮ್ಮ ನಿದ್ರೆಯ ಗುಣಮಟ್ಟ ಮತ್ತು ನಮ್ಮ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.


ಇದನ್ನೂ ಓದಿ:  Explained: ನಿದ್ದೆ ಮಾಡುವಾಗ ಉಸಿರಾಟದ ತೊಂದರೆಯೇ? ಕ್ಯಾನ್ಸರ್ ಇರಬಹುದು ಹುಷಾರ್!


"ಆಸಕ್ತಿದಾಯಕವಾಗಿ, ಆಯುರ್ವೇದ ಗ್ರಂಥವಾದ ಆನಂದಕಂದವು ಆಳವಾದ, ಶಾಂತವಾದ ನಿದ್ರೆಯನ್ನು ಪಡೆಯಲು ಯಾವ ದಿಕ್ಕುಗಳಲ್ಲಿ ಮಲಗಬೇಕು ಎಂಬುದನ್ನು ಉಲ್ಲೇಖಿಸುತ್ತದೆ" ಎಂದು ಡಾ. ಗೋಪಿನಾಥ್ ಹೇಳಿದರು.


ನಿದ್ರೆ ಮಾಡಲು ಉತ್ತಮ ದಿಕ್ಕು ಯಾವುದು?
ನಿಮ್ಮ ತಲೆಯನ್ನು ದಕ್ಷಿಣದ ಕಡೆಗೆ ಮತ್ತು ಪಾದಗಳನ್ನು ಉತ್ತರದ ಕಡೆಗೆ ತೋರಿಸಿ ಮಲಗುವುದು ವಾಸ್ತುದಲ್ಲಿ ಹೆಚ್ಚು ಶಿಫಾರಸು ಮಾಡಲಾಗಿದೆ. ಇದು ವಿಶ್ರಾಂತಿ ನಿದ್ರೆಯನ್ನು ಉತ್ತೇಜಿಸುತ್ತದೆ ಮತ್ತು ಅಪಾರ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. “ತಮ್ಮ ತಲೆಯನ್ನು ದಕ್ಷಿಣಕ್ಕೆ ಮುಖ ಮಾಡಿ ಮಲಗಬೇಕು ಏಕೆಂದರೆ ಇದು ಆಳವಾದ ನಿದ್ರೆಯ ದಿಕ್ಕು ಎಂದು ಪರಿಗಣಿಸಲಾಗಿದೆ” ಎಂದು ಆಯುರ್ವೇದ ತಜ್ಞೆ ಡಾ. ದೀಕ್ಷಾ ಭಾವಸರ್ ಸವಲಿಯಾ ಅವರು ಹೇಳಿದರು.


ಇದು ಒಬ್ಬರ ರಕ್ತದೊತ್ತಡವನ್ನು ಕಡಿಮೆ ಮಾಡುವುದು ಮತ್ತು ನಿದ್ರಾಹೀನತೆ ಮತ್ತು ಆತಂಕದ ಸಮಸ್ಯೆಗಳನ್ನು ನಿವಾರಿಸುವುದು ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸಲು ಇದು ನಿದ್ರೆಗೆ ಅತ್ಯುತ್ತಮ ನಿರ್ದೇಶನವಾಗಿದೆ.


“ದಕ್ಷಿಣವು ಋಣಾತ್ಮಕ ಆಗಿರುವುದರಿಂದ ಮತ್ತು ನಮ್ಮ ಬುದ್ದಿಯು ಧನಾತ್ಮಕ ಆಗಿರುವುದರಿಂದ, ನಮ್ಮ ತಲೆ ಮತ್ತು ದಿಕ್ಕಿನ ನಡುವೆ ಸಾಮರಸ್ಯದ ಆಕರ್ಷಣೆ ಇರುತ್ತದೆ. ಉತ್ತರಕ್ಕೆ ತಲೆಯಿಟ್ಟು ಮಲಗಿದರೆ ಶಕ್ತಿಯ ಜೊತೆಗೆ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ಶಕ್ತಿಯ ನಿಮ್ಮದಾಗುತ್ತದೆ. ಅಂದರೆ ದಕ್ಷಿಣ ದಿಕ್ಕಿಗೆ ತಲೆ ಇಟ್ಟು ನೆಮ್ಮದಿಯಿಂದ ಮಲಗಬೇಕು” ಎಂದು ಕಟ್ಟಿಗೆಯಂತೆ ಮಲಗಬೇಕು” ಎಂದು ದೀಕ್ಷಾ ಭಾವಸರ್ ಸವಲಿಯಾ ಅವರು ವಿವರಿಸಿದಳು.


"ಪುರಾಣಗಳಲ್ಲಿ, ಇದು ಭಗವಾನ್ ಯಮನ ದಿಕ್ಕು ಎಂದು ನಂಬಲಾಗಿದೆ. ಅಂದರೆ ನೀವು ಈ ದಿಕ್ಕಿನಲ್ಲಿ ನಿರಂತರ ನಿದ್ರೆ ಮತ್ತು ದೀರ್ಘಾಯುಷ್ಯ ಅಥವಾ ದೀರ್ಘಾಯುವನ್ನು ಪಡೆಯುವಿರಿ" ಎಂದು ಹೇಳುತ್ತಾ ದೀಕ್ಷಾ ಅವರು ಮಾತನ್ನು ಹೌದು ಎನ್ನುತ್ತಾರೆ ಡಾ. ಗೋಪಿನಾಥ್‌. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 12 ವಾರಗಳ ಕಾಲ ದಕ್ಷಿಣ ದಿಕ್ಕಿನಲ್ಲಿ ತಲೆಯಿಟ್ಟು ಮಲಗಲು ಸೂಚಿಸಲಾದ ವ್ಯಕಿಗೆ ಕಡಿಮೆ ರಕ್ತದೊತ್ತಡ, ಡಯಾಸ್ಟೊಲಿಕ್ ರಕ್ತದೊತ್ತಡ, ಹೃದಯ ಬಡಿತ ಮತ್ತು ಸೀರಮ್ ಕಾರ್ಟಿಸೋಲ್ ಎಲ್ಲವೂ ಕಡಿಮೆ ಆಗಿರುವುದು ಸಾಬೀತು ಆಗಿದೆ.


ಉತ್ತರ ದಿಕ್ಕು ನಿದ್ರೆಗೆ ಸೂಕ್ತವೇ?
ಮೊದಲನೆಯದಾಗಿ, ನಮ್ಮ ಆರೋಗ್ಯದ ಮೇಲೆ ಕಾಂತೀಯ ಕ್ಷೇತ್ರಗಳು ಮತ್ತು ವಿದ್ಯುತ್ಕಾಂತೀಯ ಶಕ್ತಿಗಳ ಪರಿಣಾಮವನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಭೂಮಿ ಮತ್ತು ಮಾನವ ದೇಹ ಎರಡೂ ಕಾಂತೀಯ ಧ್ರುವಗಳನ್ನು ಹೊಂದಿವೆ.


ದಕ್ಷಿಣ ದಿಕ್ಕನ್ನು ಮಲಗಲು ಉತ್ತಮ ದಿಕ್ಕು ಎಂದು ಪರಿಗಣಿಸಿದಂತೆ, ಆಯುರ್ವೇದ ತಜ್ಞರು ಮಲಗುವಾಗ ಉತ್ತರಕ್ಕೆ ಮುಖ ಮಾಡಿ ಮಲಗುವುದು ಸೂಕ್ತವಲ್ಲ. ಏಕೆಂದರೆ “ಉತ್ತರ ದಿಕ್ಕಿಗೆ ಮಲಗುವುದರಿಂದ ಭೂಮಿಯ ಧನಾತ್ಮಕ ಧ್ರುವವು ನಮ್ಮ ದೇಹದ ಧನಾತ್ಮಕ ಧ್ರುವದೊಂದಿಗೆ ಹೊಂದಿಕೆಯಾಗುತ್ತದೆ. , ಹೀಗಾಗಿ, ನಿದ್ರೆ ಮಾಡುವಾಗ ಕೆಟ್ಟ ಕನಸು ಬೀಳಬಹುದು. ಇದರಿಂದ ಉತ್ತಮ ನಿದ್ರೆಗೆ ತೊಂದರೆಯಾಗುತ್ತದೆ” ಎಂದು ಡಾ. ಗೋಪಿನಾಥ್ ವಿವರಿಸಿದರು.


ಇದನ್ನೂ ಓದಿ:  Prostate Cancer: ಏನಿದು ಪ್ರಾಸ್ಟೇಟ್ ಕ್ಯಾನ್ಸರ್? ಕಾಲುಗಳಿಗೂ ಹರಡುತ್ತೆ ಎಚ್ಚರ, ಈ ಲಕ್ಷಣ ಕಡೆಗಣಿಸ್ಬೇಡಿ!


ಡಾ.ದಿಕ್ಸಾ ಅವರು, “ಈ ದಿಕ್ಕಿನಲ್ಲಿ ನೀವು ಮಲಗಿದರೆ, ಉತ್ತಮ ನಿದ್ರೆ ನಿಮ್ಮದಾಗುವುದಿಲ್ಲ. ಈ ರೀತಿಯ ನಿದ್ರೆಯಿಂದ ರಕ್ತ ಪರಿಚಲನೆ, ಒತ್ತಡ ಹೀಗೆ ನಾನಾ ಪರಿಣಾಮಗಳು ನಮ್ಮ ದೇಹದ ಮೇಲೆ ಆಗುತ್ತದೆ. ಇದರಿಂದ ಮನಸ್ಸಿನ ಅಸ್ವಸ್ಥತೆ ಉಂಟಾಗುತ್ತದೆ” ಎಂದು ಅವರು ಹೇಳಿದರು.


ಪೂರ್ವ ಮತ್ತು ಪಶ್ಚಿಮ ದಿಕ್ಕುಗಳು ನಿದ್ರೆಗೆ ಒಳ್ಳೆಯದೇ ?
ಈಗ ಉಳಿದ ಎರಡು ದಿಕ್ಕುಗಳಾದ ಪೂರ್ವ ಮತ್ತು ಪಶ್ಚಿಮ ಇವು ನಿದ್ರೆ ಮತ್ತು ಅವುಗಳಿಂದ ಆರೋಗ್ಯದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ಪರಿಶೀಲಿಸೋಣ ಬನ್ನಿ. ಪೂರ್ವವು ಉದಯಿಸುತ್ತಿರುವ ಸೂರ್ಯನ ದಿಕ್ಕಿನಲ್ಲಿದೆ ಮತ್ತು ಧ್ಯಾನ ಮತ್ತು ಇತರ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಒಳ್ಳೆಯದು ಎಂದು ನಂಬಲಾಗಿದೆ. ಒಬ್ಬರ ತಲೆಯನ್ನು ಪೂರ್ವಕ್ಕೆ ಮತ್ತು ಪಾದಗಳನ್ನು ಪಶ್ಚಿಮಕ್ಕೆ ಇರಿಸಿ ಮಲಗುವುದು ಉತ್ತಮ ನಿದ್ರೆಯು ನಿಮ್ಮದಾಗುತ್ತದೆ.


ಇದು ಮೆಮೊರಿ ಮತ್ತು ಏಕಾಗ್ರತೆಯ ಮಟ್ಟವನ್ನು ಸುಧಾರಿಸುವುದರಿಂದ ನಿದ್ರೆಗೆ ಅತ್ಯುತ್ತಮ ದಿಕ್ಕಾಗಿದೆ. ಹೀಗಾಗಿ ಇದನ್ನು ವಿದ್ಯಾರ್ಥಿಗಳಿಗೂ ಶಿಫಾರಸು ಮಾಡಲಾಗಿದೆ. ಅವರ ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸಲು ಮಕ್ಕಳ ಕೋಣೆಯಲ್ಲಿ ಹಾಸಿಗೆಯನ್ನು ಪೂರ್ವ ದಿಕ್ಕಿಗೆ ಅಭಿಮುಖವಾಗಿ ಜೋಡಿಸುವುದು ಸಹ ಮುಖ್ಯವಾಗಿದೆ.


"ಸೂರ್ಯನು ಪೂರ್ವದಲ್ಲಿ ಉದಯಿಸುತ್ತಿದ್ದಂತೆ, ಈ ದಿಕ್ಕು ಪುನರ್ಯೌವನಗೊಳಿಸುವಿಕೆ ಮತ್ತು ಬುದ್ಧಿಶಕ್ತಿ ಮತ್ತು ಸೃಜನಶೀಲತೆಯಿಂದ ನಿರೂಪಿಸಲ್ಪಟ್ಟ ಸಕಾರಾತ್ಮಕ ಶಕ್ತಿಯನ್ನು ಈ ಪೂರ್ವ ದಿಕ್ಕು ಸೂಚಿಸುತ್ತದೆ" ಎಂದು ಡಾ. ಗೋಪಿನಾಥ್ ಹೇಳಿದರು. “ಗ್ರಹವು ಪಶ್ಚಿಮದಿಂದ ಪೂರ್ವಕ್ಕೆ ತಿರುಗುತ್ತದೆ. ಈ ದಿಕ್ಕಿನಲ್ಲಿ ಹರಿಯುವ ಅಲೆಗಳು ಧನಾತ್ಮಕವಾಗಿರುತ್ತವೆ ಮತ್ತು ದೇಹಕ್ಕೆ ಧನಾತ್ಮಕ ಶಕ್ತಿಯನ್ನು ನೀಡುತ್ತವೆ. ಇದು ಆಯುರ್ವೇದದಲ್ಲಿ ಹೇಳಿರುವ ಮೂರು ದೋಷಗಳಾದ ಬಟ, ಪಿತ್ತ ಮತ್ತು ಕಫವನ್ನು ಕೂಡ ಸಮತೋಲನಗೊಳಿಸುತ್ತದೆ” ಎಂದು ಹೇಳಿದರು.


ಇದನ್ನೂ ಓದಿ: Cancer from Mobile: ಕುಂತ್ರೂ, ನಿಂತ್ರೂ ಮಲಗಿದ್ರೂ ಮೊಬೈಲ್ ನೋಡ್ತೀರಾ? ಹಾಗಿದ್ರೆ ಕ್ಯಾನ್ಸರ್‌ ಬರಬಹುದು ಹುಷಾರ್!


“ಈ ದಿಕ್ಕು ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಧ್ಯಾನಸ್ಥ ನಿದ್ರೆ ಮತ್ತು ಉತ್ತಮ ಆರೋಗ್ಯವನ್ನು ಉತ್ತೇಜಿಸುತ್ತದೆ” ಎಂದು ಡಾ. ಡಿಕ್ಸಾ ಹೇಳಿದರು. ಪಶ್ಚಿಮಕ್ಕೆ ಮಲಗುವುದು, ಮತ್ತೊಂದೆಡೆ, ಅಸ್ಥಿರವಾದ ರಾತ್ರಿಯ ನಿದ್ರೆಗೆ ಸಂಬಂಧಿಸಿದೆ. "ವಾಸ್ತು ಶಾಸ್ತ್ರವು ಹೇಳುವಂತೆ ಇದು ಪ್ರಯತ್ನದ ದಿಕ್ಕು, ಇದು ನಿಮಗೆ ಅಸ್ಥಿರವಾದ ಕನಸುಗಳನ್ನು ಬೀಳುವ ಹಾಗೆ ನೋಡಿಕೊಳ್ಳತ್ತದೆ. ಈ ದಿಕ್ಕಿನಲ್ಲಿ ಮಲಗಿದರೆ ನೀವು ನಿದ್ರೆಯನ್ನೆ ಮಾಡುವುದಿಲ್ಲ” ಎಂದು ಅವರು ವಿವರಿಸಿದರು.


ವೈಜ್ಞಾನಿಕವಾಗಿ ನಿದ್ರಿಸಲು ಉತ್ತಮ ವಿಧಾನ ಯಾವುದು?
ನಮ್ಮ ದೇಹದ ಮೇಲೆ ಭೂಮಿಯ ಕಾಂತಕ್ಷೇತ್ರಗಳ ಪರಿಣಾಮವನ್ನು ಒಮ್ಮೆ ಗಮನಿಸಿದರೆ, ಪೂರ್ವ ಮತ್ತು ದಕ್ಷಿಣಗಳು ನಿದ್ರೆಗೆ ಉತ್ತಮ ದಿಕ್ಕುಗಳಾಗಿವೆ ಎಂದು ವೈಜ್ಞಾನಿಕವಾಗಿಯೂ ಸಹ ಸಾಬೀತಾಗಿದೆ.

Published by:Ashwini Prabhu
First published: