• Home
 • »
 • News
 • »
 • explained
 • »
 • Air Pollution: ಪೈರಿನ ಅವಶೇಷಕ್ಕೆ ಬೆಂಕಿ, ಪರಿಸರಕ್ಕೆ ಭಾರೀ ಹಾನಿ: ಗಾಳಿ ವಿಷವಾಗುತ್ತಿದ್ದರೂ ಸುಮ್ಮನಿರೋದೇಕೆ ಅನ್ನದಾತ?

Air Pollution: ಪೈರಿನ ಅವಶೇಷಕ್ಕೆ ಬೆಂಕಿ, ಪರಿಸರಕ್ಕೆ ಭಾರೀ ಹಾನಿ: ಗಾಳಿ ವಿಷವಾಗುತ್ತಿದ್ದರೂ ಸುಮ್ಮನಿರೋದೇಕೆ ಅನ್ನದಾತ?

ಪೈರಿನ ಅವಶೇಷ ಸುಡುತ್ತಿರುವ ರೈತ

ಪೈರಿನ ಅವಶೇಷ ಸುಡುತ್ತಿರುವ ರೈತ

ಭತ್ತದ ಪೈರಿನ ಅವಶೇಷಗಳನ್ನು ಸುಡುತ್ತಿದ್ದು ಹೀಗೆ ಸುಡುವುದು ಹಾನಿಕಾರಕ ಎಂದು ತಿಳಿದಿದ್ದರೂ ವಿಧಿಯಿಲ್ಲದೆ ಹೀಗೆ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ನಮಗೆ ಬೇರೆ ವಿಧಿಯಿಲ್ಲದೆ ನಾವು ಹೀಗೆ ಮಾಡುತ್ತಿದ್ದು ನಮ್ಮಲ್ಲಿ ಯಾವುದೇ ಸಂಪನ್ಮೂಲಗಳಿಲ್ಲ

 • Trending Desk
 • Last Updated :
 • Delhi, India
 • Share this:

  ಚಡೀಗಢ(ನ.23): ಪಂಜಾಬ್‌ನ (Punjab) ಸಂಗ್ರೂರ್ ಜಿಲ್ಲೆಯ ಗೋಬಿಂದಪುರ ಗ್ರಾಮದ ರೈತರು (Farmers)ಭತ್ತದ ಪೈರಿನ ಅವಶೇಷಗಳನ್ನು ಸುಡುತ್ತಿದ್ದು ಹೀಗೆ ಸುಡುವುದು ಹಾನಿಕಾರಕ (Air Pollution) ಎಂದು ತಿಳಿದಿದ್ದರೂ ವಿಧಿಯಿಲ್ಲದೆ ಹೀಗೆ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ನಮಗೆ ಬೇರೆ ವಿಧಿಯಿಲ್ಲದೆ ನಾವು ಹೀಗೆ ಮಾಡುತ್ತಿದ್ದು ನಮ್ಮಲ್ಲಿ ಯಾವುದೇ ಸಂಪನ್ಮೂಲಗಳಿಲ್ಲ. ಸರಕಾರ (Govt) ಭರವಸೆ ನೀಡುವುದು ಮಾತ್ರ ಆದರೆ ಸಹಾಯ ಮಾಡುವುದಿಲ್ಲ ಎಂಬುದು ಇಲ್ಲಿನ ರೈತರ ಅಳಲಾಗಿದೆ. ಉಪಗ್ರಹ ಚಿತ್ರಗಳ ಪ್ರಕಾರ, ಸಂಗ್ರೂರ್​ನಲ್ಲಿ ಈ ಋತುವಿನಲ್ಲಿ ಅತಿ ಹೆಚ್ಚು ಭತ್ತದ ಪೈರಿನ ಕಡ್ಡಿಗಳನ್ನು ಸುಟ್ಟಿದ್ದು ಇದು ಪ್ರತ್ಯೇಕ ಪ್ರಕರಣವಾಗಿ ದಾಖಲಾಗಿದೆ.


  ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿಯಾಣದಿಂದ ಪಂಜಾಬ್‌ಗೆ ಪ್ರವೇಶಿಸುತ್ತಿದ್ದಂತೆ, ಮುಖ್ಯಮಂತ್ರಿ ಭಗವಂತ್ ಮಾನ್ ಅವರ ತವರು ಕ್ಷೇತ್ರವಾದ ಸಂಗ್ರೂರ್ ಜಿಲ್ಲೆಯನ್ನು ಸಮೀಪಿಸುವ ಮೊದಲು ರಸ್ತೆಯ ಎರಡೂ ಬದಿಗಳಲ್ಲಿನ ದೃಶ್ಯವು ಗ್ರಾಮದ ವಿನಾಶದಂತೆ ತೋರುತ್ತಿದೆ. ಕಪ್ಪಾಗಿ ಪರಿವರ್ತನೆಯಾದ ಹೊಲಗಳು, ಬೆಂಕಿಯ ಕೆನ್ನಾಲೆಗಳು, ಹೊಗೆಯಾಡುತ್ತಿರುವ ಆಕಾಶದ ಚಿತ್ರಣ ದೊರೆಯುತ್ತದೆ.


  ಭತ್ತದ ಅವಶೇಷಗಳನ್ನು ಸುಡುತ್ತಿರುವ ರೈತರು


  ICAR-ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಉಪಗ್ರಹ ಮಾಹಿತಿಯ ಪ್ರಕಾರ, 15 ಸೆಪ್ಟೆಂಬರ್ ಮತ್ತು 1 ನವೆಂಬರ್ ನಡುವೆ, ಪಂಜಾಬ್ 17,846 ಪೈರಿನ ಅವಶೇಷಗಳನ್ನು ಸುಡುವ ಘಟನೆಗಳನ್ನು ದಾಖಲಿಸಿದೆ. ಅದೇ ಅವಧಿಯಲ್ಲಿ ಕಳೆದ ವರ್ಷಕ್ಕಿಂತ 18.5 ರಷ್ಟು ಹೆಚ್ಚು ಎಂಬುದು ದಾಖಲಾಗಿದೆ.


  ಇದನ್ನೂ ಓದಿ: Air Pollution: ಹೆಚ್ಚುತ್ತಿದೆ ವಾಯುಮಾಲಿನ್ಯ ಪ್ರಮಾಣ; ಉಸಿರಾಟದ ಸೋಂಕು, ಶ್ವಾಸಕೋಶದ ಕ್ಯಾನ್ಸರ್ ಅಪಾಯವೂ ಹೆಚ್ಚಳ!


  ಪಂಜಾಬ್‌ಗೆ ಹೋಲಿಸಿದರೆ, ಈ ಋತುವಿನಲ್ಲಿ ಪೈರಿನ ಕಳೆಯನ್ನು ಸುಡುವ ಘಟನೆಗಳು ದಾಖಲಾಗಿರುವ ಇತರ ರಾಜ್ಯಗಳತ್ತ ನೋಡಿದಾಗ ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ 2,083 ಘಟನೆಗಳು ಕ್ರಮವಾಗಿ 777, 345 ಮತ್ತು 972 ದಾಖಲಾಗಿವೆ.


  ಸಂಗ್ರೂರ್ ಹಾಗೂ ಪಟಿಯಾಲ ಜಿಲ್ಲೆಗಳಲ್ಲಿ ಅತ್ಯಂತ ಕೆಟ್ಟ ಸ್ಥಿತಿ


  ಪಂಜಾಬ್ ದಿನವೊಂದರಲ್ಲೇ ಒಟ್ಟು 1,842 ಪೈರಿನ ಅವಶೇಷಗಳನ್ನು ಸುಡುವ ಘಟನೆಗಳು ವರದಿಯಾಗಿವೆ ಹಾಗೂ ಹಿಂದಿನ ಐದು ದಿನಗಳಲ್ಲಿ ಎರಡರಲ್ಲಿ 2,000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ರಾಜ್ಯದಲ್ಲಿ ಸಂಗ್ರೂರ್ ಹಾಗೂ ಪಟಿಯಾಲ ಜಿಲ್ಲೆಗಳು ಅತ್ಯಂತ ಕೆಟ್ಟ ಸ್ಥಿತಿಯನ್ನು ಕಂಡಿವೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ, ಸಂಗ್ರೂರ್‌ನಲ್ಲಿ ಪೈರಿನ ಅವಶೇಷಗಳ ಸುಡುವಿಕೆಯು 137% ದಷ್ಟು ಏರಿಕೆಯಾಗಿದ್ದು, ಪಟಿಯಾಲದಲ್ಲಿ 70% ದಷ್ಟು ಏರಿಕೆಯಾಗಿದೆ.


  ಎರಡು ಜಿಲ್ಲೆಗಳಿಗೆ ಭೇಟಿ ನೀಡಿದಾಗ, ವಿವಿಧ ಜಾಗೃತಿ ಅಭಿಯಾನಗಳ ಮೂಲಕ, ಸುಡುವಿಕೆಯಿಂದ ಮಾಲಿನ್ಯ ಉಂಟಾಗುವುದು ಹಾಗೂ ಯಾವ ಬಗೆಯ ದುಷ್ಪರಿಣಾಮ ಉಂಟಾಗುತ್ತದೆ ಎಂಬುದನ್ನು ರೈತರು ಅರಿತುಕೊಂಡಿದ್ದಾರೆ.


  ಆದರೆ ರೈತರು ತಮಗೆ ಗೊತ್ತಿದ್ದೂ ಕೊಳೆಯನ್ನು ನಾಶಮಾಡಲು ಸುಡುವ ಕ್ರಮವನ್ನು ಅನುಸರಿಸುತ್ತಿದ್ದು, ಬೇರೆ ಪರ್ಯಾಯ ವಿಧಾನವನ್ನು ಅನುಸರಿಸಲು ವೆಚ್ಚದಾಯಕವಾಗಿವೆ ಎಂದು ತಿಳಿಸಿದ್ದಾರೆ. ಇದರ ನಡುವೆಯೇ ಕೃಷಿ ಇಲಾಖೆ ಅಧಿಕಾರಿಗಳು ನಿಯಮಗಳನ್ನು ಜಾರಿಗೆ ತರುವುದು ಬಹುತೇಕ ಅಸಾಧ್ಯವಾಗಿದೆ ಮತ್ತು ರಾಜಕೀಯ ಬೆಂಬಲದ ಕೊರತೆ ಮತ್ತು ಉನ್ನತ ಅಧಿಕಾರಿಗಳ ನಿಷ್ಕ್ರಿಯತೆಯಿಂದಾಗಿ ಕೃಷಿ ಅಧಿಕಾರಿಗಳು ಬಲಿಪಶುಗಳಾಗಿ ಮಾರ್ಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.


  ರೈತರು ಎದುರಿಸುತ್ತಿದ್ದಾರೆ ವೆಚ್ಚದ ಸಮಸ್ಯೆ


  ಸಂಗ್ರೂರಿನ ರೈತ ಗುರ್ಮೀತ್ ಸಿಂಗ್ ಕೆನಡಾಕ್ಕೆ ತೆರಳುವ ಕನಸನ್ನು ಹೊಂದಿದ್ದಾರೆ. ಸ್ನಾತಕೋತ್ತರ ಪದವೀಧರರಾಗಿರುವ ಗುರ್ಮೀತ್ ಉತ್ತಮ ಭವಿಷ್ಯವನ್ನು ಹೊಂದುವ ಇಚ್ಛೆ ಹೊಂದಿದ್ದಾರೆ. ಭತ್ತದ ಅವಶೇಷಗಳನ್ನು ಹೊಲಗಳಿಂದ ನಿವಾರಿಸಲು ಹಾಗೂ ಮುಂದಿನ ಬಿತ್ತನೆ ಹೊಲಗಳನ್ನು ಸಿದ್ಧಪಡಿಸುವ ವಿಷಯದಲ್ಲಿ ಆಧುನಿಕ ವಿಧಾನಗಳು ಕಾರ್ಯನಿರ್ವಹಿಸುವುದಿಲ್ಲ ಎಂಬುದು ಗುರ್ಮೀತ್ ಮಾತಾಗಿದೆ ಇದಕ್ಕೆ ಕಾರಣ ವೆಚ್ಚದ ಸಮಸ್ಯೆಯಾಗಿದೆ.


  ಭತ್ತದ ಅವಶೇಷಗಳನ್ನು ಸುಡುವುದಲ್ಲದೆ ಯಂತ್ರೋಪಕರಣಗಳನ್ನು ಬಳಸಿದಲ್ಲಿ ಎಲ್ಲಾ ಹೂಡಿಕೆ ಇದಕ್ಕೆ ವ್ಯಯವಾಗುತ್ತದೆ ಎಂಬುದು ಗುರ್ಮೀತ್ ಅಳಲಾಗಿದೆ. ನಮಗೆ ಯಾವುದೇ ಲಾಭವಿಲ್ಲ ಹಾಗೂ ಸರಕಾರದಿಂದ ನಮಗೆ ಪರಿಹಾರ ದೊರೆಯಬೇಕು ಎಂದಾದಲ್ಲಿ ನಾವು ಪ್ರತಿಭಟನೆ ನಡೆಸಬೇಕು ಎಂಬುದು ಗುರ್ಮೀತ್ ಹೇಳಿಕೆಯಾಗಿದೆ.


  ಪಟಿಯಾಲದ ರೈತ ಗುರ್ಮಿಂದರ್ ಹೇಳುವಂತೆ ಪ್ರತಿಯೊಬ್ಬ ರೈತರಿಗೆ ಸೀಡರ್ (ಬೀಜ ಬಿತ್ತುವ ಸಾಧನ) ವನ್ನು ನೀಡಿದರೆ ಹುಲ್ಲು ಸುಡುವುದನ್ನು ನಿಲ್ಲಿಸಬಹುದು ಎಂದು ಹೇಳುತ್ತಾರೆ, ಇದರಿಂದ ಯಂತ್ರಗಳಿಂದ ಕಳೆಕಿತ್ತ ಮೇಲೆ ಹಾಗೂ ತೆರವುಗೊಳಿಸಿದ ಕೃಷಿಭೂಮಿಯಲ್ಲಿ ಬೀಜಗಳನ್ನು ಬಿತ್ತಬಹುದು ಎಂದು ಹೇಳಿದ್ದಾರೆ.


  ಸೀಡರ್ ದೊರೆತರೆ ನಾವು ಪೈರಿನ ಅವಶೇಷಗಳನ್ನು ಸುಡುವುದಿಲ್ಲ


  ಭತ್ತದ ಪೈರಿನ ಕಳೆಗಳನ್ನು ಸುಡುವುದರಿಂದ ಉಂಟಾಗುವ ಮಾಲಿನ್ಯದಿಂದ ಹಾನಿಗೊಳಗಾಗಿರುವುದು ರೈತರಾಗಿದ್ದು ಈಗಾಗಲೇ ನಷ್ಟದಲ್ಲಿರುವೆವು. ಸೀಡರ್ ಒದಗಿಸುವುದು ನಮಗೆ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ. ಸೀಡರ್ ದೊರೆತರೆ ನಾವು ಪೈರಿನ ಅವಶೇಷಗಳನ್ನು ಸುಡುವುದಿಲ್ಲ ಎಂದು ತಿಳಿಸಿದ್ದಾರೆ.


  ಕೆಲ ಕೃಷಿ ಇಲಾಖೆ ಅಧಿಕಾರಿಗಳು, ರೈತರಿಗೆ ಸಬ್ಸಿಡಿ ನೀಡಲಾಗಿದ್ದು, ಸ್ವಲ್ಪ ಮಟ್ಟಿನ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ. ಸರಕಾರವು ವಿವಿಧ ಜಿಲ್ಲೆಗಳಲ್ಲಿ ಸರದಿ ಆಧಾರದ ಮೇಲೆ ರೈತರಿಗೆ ಸೂಪರ್ ಸೀಡರ್‌ಗಳನ್ನು ಸಹ ಒದಗಿಸಿದೆ.


  ಕೃಷಿ ಅಧಿಕಾರಿಗಳು ಹೇಳುವುದೇನು?


  ಈ ಋತುವಿನಲ್ಲಿ ರೈತರಿಗೆ ಸಬ್ಸಿಡಿಯೊಂದಿಗೆ 15-20 ಕೋಟಿ ರೂ.ಗಳ ಯಂತ್ರೋಪಕರಣಗಳನ್ನು ನೀಡಿದ್ದೇವೆ. ಇದರಲ್ಲಿ ಸೂಪರ್ ಸೀಡರ್‌ಗಳು, ಹ್ಯಾಪಿ ಸೀಡರ್‌ಗಳು ಸೇರಿವೆ ಎಂದು ಸಂಗ್ರೂರಿನ ಕೃಷಿ ಇಲಾಖೆ ಅಧಿಕಾರಿ ಡಾ.ಅಮರ್‌ಜೀತ್ ಸಿಂಗ್ ತಿಳಿಸಿದ್ದಾರೆ.


  ಜಿಲ್ಲೆಯಲ್ಲಿ ಪರಿಸ್ಥಿತಿ ಕೊಂಚ ನಿಯಂತ್ರಣದಲ್ಲಿದ್ದು ಹೇಳಿಕೊಳ್ಳುವಷ್ಟು ಕೆಟ್ಟಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ. ಸಾಕಷ್ಟು ಸಾಗುವಳಿ ಭೂಮಿಯನ್ನು ಗಮನಿಸಿದರೆ, ಸಂಗ್ರೂರ್‌ನಲ್ಲಿ ಹೆಚ್ಚಿನ ಸಂಖ್ಯೆಯ ಹುಲ್ಲುಗಾವಲು ಸುಡುವ ಘಟನೆಗಳಿಲ್ಲ. ಸಂಗ್ರೂರಿನಲ್ಲಿ 2,91,000 ಹೆಕ್ಟೇರ್ ಸಾಗುವಳಿ ಭೂಮಿ ಇದೆ ಎಂಬುದು ಅಧಿಕಾರಿಯ ಮಾತಾಗಿದೆ.
  ಪಟಿಯಾಲದ ಮುಖ್ಯ ಕೃಷಿ ಅಧಿಕಾರಿ ಡಾ ಹರಿಂದರ್ ಸಿಂಗ್ ಹೇಳುವಂತೆ, ವೆಚ್ಚವು ಎಲ್ಲಾ ಸಮಸ್ಯೆಗೂ ಪ್ರಮುಖ ಕಾರಣವಾಗಿದೆ ಎಂಬುದನ್ನು ಅಂಗೀಕರಿಸಿದ್ದಾರೆ. ಒಂದು ವೇಳೆ ಪರ್ಯಾಯ ವಿಧಾನಗಳನ್ನು ಬಳಸಿದರೆ, ರೈತರಿಗೆ ಪ್ರತಿ ಎಕರೆಗೆ ತಗಲುವ ವೆಚ್ಚ ಸುಮಾರು 3,000 ರೂ.ಗಳಷ್ಟು ಹೆಚ್ಚಾಗುತ್ತದೆ ಎಂಬುದು ಅವರ ಹೇಳಿಕೆಯಾಗಿದೆ.


  ಭತ್ತದ ಅವಶೇಷಗಳನ್ನು ಸುಡುವ ಘಟನೆಗಳಲ್ಲಿ 50% ದಷ್ಟು ಕಡಿತ


  ಹರಿಂದರ್ ಸಿಂಗ್ ಹೇಳುವಂತೆ, ಋತುವಿನ ಅಂತ್ಯದ ವೇಳೆಗೆ, ಪಟಿಯಾಲ ಕಳೆದ ವರ್ಷಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಪಟಿಯಾಲದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಭತ್ತದ ಅವಶೇಷಗಳನ್ನು ಸುಡುವ ಘಟನೆಗಳಲ್ಲಿ 50% ದಷ್ಟು ಕಡಿತವನ್ನು ನಾವು ಇನ್ನೂ ನಿರೀಕ್ಷಿಸುತ್ತೇವೆ. 80 ರಷ್ಟು ಕಟಾವು ಮುಗಿದಿದೆ ಎಂದಿದ್ದಾರೆ.


  ಅವಶೇಷಗಳನ್ನು ಸುಡುವ ಬದಲು ರೈತರು ಅನುಸರಿಸಬಹುದಾದ ಇನ್ನೊಂದು ವಿಧಾನವೆಂದರೆ ಜೈವಿಕ ಕೊಳೆಯುವಿಕೆ ಪ್ರಕ್ರಿಯೆ ಎಂಬುದು ಹರಿಂದರ್ ಸಿಂಗ್ ಮಾತಾಗಿದೆ. ಈ ಪ್ರಕ್ರಿಯೆಯು ಎರಡು ಮೂರು ವಾರಗಳಲ್ಲಿ ಬೆಳೆ ಶೇಷವನ್ನು ಗೊಬ್ಬರವಾಗಿ ಪರಿವರ್ತಿಸುತ್ತದೆ ಎಂಬುದು ಅವರ ಹೇಳಿಕೆಯಾಗಿದೆ. ಆದರೆ ಇಲ್ಲಿರುವ ಸಮಸ್ಯೆ ಎಂದರೆ ಅನೇಕ ರೈತರಿಗೆ ಮುಂದಿನ ಬೆಳೆ ಬಿತ್ತನೆ ಮಾಡುವ ಮೊದಲು ಸಾಕಷ್ಟು ಅಂತರವನ್ನು ಸೃಷ್ಟಿಸುತ್ತದೆ ಎಂಬುದಾಗಿದೆ.


  ಅವಶೇಷಗಳನ್ನು ಕತ್ತರಿಸಿ ಅವುಗಳನ್ನು ಚೆಂಡುಗಳಂತೆ ನಿರ್ಮಿಸಬಹುದು. ಆದರೆ ಈ ವಿಧಾನವು ಸಾರಿಗೆಯನ್ನು ಹೊರತುಪಡಿಸಿ ಕೆಲವು ವೆಚ್ಚಗಳನ್ನು ಹೊಂದಿದ್ದರೂ, ಜೈವಿಕ ಉಷ್ಣ ವಿದ್ಯುತ್ ಸ್ಥಾವರಗಳು ಅಥವಾ ಜೈವಿಕ ತೈಲ ಉತ್ಪಾದಕಗಳಂತಹ ಈ ಬೇಲ್‌ಗಳನ್ನು ಬಳಸುವ ಕೈಗಾರಿಕೆಗಳು ಎಲ್ಲೆಡೆ ಕಂಡುಬರುವುದಿಲ್ಲ ಎಂದು ಹರಿಂದರ್ ತಿಳಿಸುತ್ತಾರೆ.


  ಸರ್ಕಾರ ಬದಲಾವಣೆ ಬಯಸಿದೆ, ಆದರೆ ರೈತರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ


  ಪಂಜಾಬ್ ಸರಕಾರ ಮತ್ತು ಕೇಂದ್ರ ಸರಕಾರದ ನಡುವಿನ ಆರೋಪ-ಪ್ರತ್ಯಾರೋಪದ ನಡುವೆ, ಕೃಷಿ ಇಲಾಖೆ ಅಧಿಕಾರಿಗಳು ರೈತರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಬಯಸದ ಕಾರಣ ಅವರನ್ನು ದೋಷಿತ ವ್ಯಕ್ತಿಗಳಾಗಿ ಕಾಣಲಾಗುತ್ತಿದೆ ಎಂಬುದು ಅಧಿಕಾರಿಗಳ ಹೇಳಿಕೆಯಾಗಿದೆ. ಪಂಜಾಬ್ ಸರಕಾರವು ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಪೈರಿನ ಅವಶೇಷದ ಹುಲ್ಲು ಸುಟ್ಟ ಘಟನೆಗಳ ಹಿನ್ನೆಲೆಯಲ್ಲಿ ಸಂಗ್ರೂರ್‌ನ ಮುಖ್ಯ ಕೃಷಿ ಅಧಿಕಾರಿ ಹರ್ಬನ್ಸ್ ಸಿಂಗ್ ಸೇರಿದಂತೆ ಕರ್ತವ್ಯ ಲೋಪದ ಆರೋಪದ ಮೇಲೆ ಹಲವು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.


  ಇದನ್ನೂ ಓದಿ: Diabetes Problem: ಮಧುಮೇಹ ನಿಯಂತ್ರಣಕ್ಕೆ ಈ ಒಂದು ಮೂಲಿಕೆ ಪರಿಣಾಮಕಾರಿ!


  ಇದು ಅಧಿಕಾರಿಗಳ ವಿರುದ್ಧ ಸರಕಾರ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದು, ರಾಜಕೀಯ ಹಾಗೂ ರೈತ ಸಂಘಗಳ ಮೊಂಡುತನದಿಂದ ಈ ಸ್ಥಿತಿ ಉಂಟಾಗಿದೆ ಎಂದು ಆಪಾದಿಸಿದ್ದಾರೆ. ನಮ್ಮ ಕೆಲಸ ಜಾಗೃತಿ ಮೂಡಿಸುವುದು. ಹೀಗಾಗಿ ನಾವು ಶಿಬಿರಗಳನ್ನು ಆಯೋಜಿಸಿದ್ದೇವೆ, ಕಾಲಕಾಲಕ್ಕೆ ಜನರನ್ನು ಭೇಟಿ ಮಾಡಲು ಕೃಷಿ ಭೂಮಿಗೆ ಭೇಟಿ ನೀಡಿದ್ದೇವೆ. ಆದರೆ ಕ್ರಮ ಕೈಗೊಳ್ಳಬೇಕಾದುದು ಮಾಲಿನ್ಯ ಮಂಡಳಿಯಾಗಿದೆ ಎಂಬುದು ಅಧಿಕಾರಿ ಅಮರಜೀತ್ ಸಿಂಗ್ ಹೇಳಿದ್ದಾರೆ.


  ನಿಧಾನಗತಿಯ ಬದಲಾವಣೆ


  ಯುವ ರೈತರು ಆಧುನಿಕ ಕೃಷಿ ಪದ್ಧತಿಯಲ್ಲಿ ಭರವಸೆಯನ್ನು ಹೊಂದಿದ್ದಾರೆ ಎಂದು ರಾಷ್ಟ್ರೀಯ ಕೃಷಿ ಸಂಶೋಧನಾ ವ್ಯವಸ್ಥೆಯ (NARS) ಭಾಗವಾದ ಪಟಿಯಾಲದ ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಹರ್ದೀಪ್ ಸಿಂಗ್ ತಿಳಿಸಿದ್ದಾರೆ.


  ಅವಶೇಷಗಳನ್ನು ಸುಡದಿರುವಂತೆ ರೈತರನ್ನು ಮನವೊಲಿಸುವಲ್ಲಿ ಹಲವಾರು ತೊಂದರೆಗಳಿವೆ. ಆದರೆ ಯುವ ಪೀಳಿಗೆಯು ಆಧುನಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿದೆ ಎಂಬುದು ಹರ್ದೀಪ್ ಮಾತಾಗಿದೆ. ಯಂತ್ರೋಪಕರಣಗಳನ್ನು ಖರೀದಿಸಲು ಸ್ವ-ಸಹಾಯ ಗುಂಪುಗಳನ್ನು ಉತ್ತೇಜಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಇದರಿಂದ ಯುವ ರೈತರು ಕೊಂಚ ವಿಶ್ವಾಸವನ್ನು ಹೊಂದಿದ್ದಾರೆ ಎಂಬುದು ಹರ್ದೀಪ್ ಹೇಳಿಕೆಯಾಗಿದೆ.

  Published by:Precilla Olivia Dias
  First published: