Explained: ಇನ್ಮುಂದೆ ಮೊಬೈಲ್ ಕಳ್ಕೊಂಡ್ರೆ ಚಿಂತೆ ಬೇಡ! ಹೀಗೆ ಮಾಡಿದ್ರೆ ಸಿಗುತ್ತೆ ನಿಮ್ಮ ಫೋನ್

ನಿಮ್ಮ ಫೋನ್ ಕಳೆದು ಹೋದಲ್ಲಿ ಇನ್ನು ಮುಂದೆ ನೀವು ಚಿಂತಿಸಬೇಕಾಗಿಲ್ಲ. ಹೌದು ಸರಕಾರದ ಹೊಸ ಯೋಜನೆಯ ಮೂಲಕ ನಿಮ್ಮ ಫೋನ್ ಅನ್ನು ನೀವು ಕಂಡುಕೊಳ್ಳಬಹುದು. ಅದೂ ಕೂಡ ನಿಮ್ಮ ಮನೆಯಲ್ಲೇ ಕುಳಿತುಕೊಂಡು ನಿಮ್ಮ ಫೋನ್‌ಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸ್ಮಾರ್ಟ್‌ಫೋನ್‌ಗಳು (Smart Phone) ನಮ್ಮ ದೈನಂದಿನ ಜೀವನದಲ್ಲಿ ಅತ್ಯಂತ ಪ್ರಮುಖ ಗ್ಯಾಜೆಟ್ ಎಂದೆನಿಸಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ಬೆಳಗ್ಗೆ ಎದ್ದು ಫೋನ್ ನೋಡುವುದರಿಂದಲೇ ನಮ್ಮ ನಿತ್ಯ ಜೀವನ ಪ್ರಾರಂಭವಾಗುತ್ತದೆ ಎಂದೇ ಹೇಳಬಹುದು. ಹೌದು ಇತ್ತೀಚಿನ ದಿನಗಳಲ್ಲಿ ನಮ್ಮ ಡಿವೈಸ್ (Device) ಎಂಬುದು ನಮ್ಮೆಲ್ಲಾ ದಾಖಲೆಗಳನ್ನು ವಿವರಗಳನ್ನು ದಾಖಲಿಸಿರುವ ಒಂದು ಮಾಯಾಪೆಟ್ಟಿಗೆಯಾಗಿದೆ. ಅದೆಷ್ಟೋ ಅತ್ಯುತ್ತಮ ಸ್ಮರಣೆಗಳು, ಪ್ರಮುಖವಾದ ಡೇಟಾಗಳು (Data) ಹೀಗೆ ನಮ್ಮ ಫೋನ್‌ನಲ್ಲಿ ನಾವು ಅದೆಷ್ಟೋ ದಾಖಲೆಗಳನ್ನು (Record) ಸಂಗ್ರಹಿಸಿರುತ್ತೇವೆ. ಇಂತಿಪ್ಪ ಡಿವೈಸ್ ಕಳೆದು ಹೋದರೆ ಇಲ್ಲವೇ ಕದ್ದುಹೋದಲ್ಲಿ ಎಂತಹ ಪರಿಸ್ಥಿತಿ ಉಂಟಾಗಬಹುದು ಒಮ್ಮೆ ಯೋಚಿಸಿ ನೋಡಿ.

ಅದಕ್ಕಾಗಿಯೇ ಸರಕಾರವು ಹೊಸ ಯೋಜನೆಯೊಂದಿಗೆ ಬಂದಿದ್ದು, ನಿಮ್ಮ ಫೋನ್ ಕಳೆದು ಹೋದಲ್ಲಿ ಇಲ್ಲವೇ ಕಳುವಾದಲ್ಲಿ ಇನ್ನು ಮುಂದೆ ನೀವು ಚಿಂತಿಸಬೇಕಾಗಿಲ್ಲ. ಹೌದು ಸರಕಾರದ ಹೊಸ ಯೋಜನೆಯ ಮೂಲಕ ನಿಮ್ಮ ಫೋನ್ ಅನ್ನು ನೀವು ಕಂಡುಕೊಳ್ಳಬಹುದು. ಅದೂ ಕೂಡ ನಿಮ್ಮ ಮನೆಯಲ್ಲೇ ಕುಳಿತುಕೊಂಡು ನಿಮ್ಮ ಫೋನ್‌ಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ.

ಮೊಬೈಲ್ ಕಳ್ಳತನವನ್ನು ತಡೆಯಲು ಪೊಲೀಸರ ಹೊಸ ಯೋಜನೆ  
ಟೆಲಿಕಾಂ ಇಲಾಖೆ (DoT), ಸೆಂಟರ್ ಫಾರ್ ಡೆವಲಪ್‌ಮೆಂಟ್ ಟೆಲಿಮ್ಯಾಟಿಕ್ಸ್ (CDOT) ಮತ್ತು ದೆಹಲಿ ಪೊಲೀಸ್ ಸಹಯೋಗದಲ್ಲಿ ಸರಕಾರವು ಹೊಸ ವೆಬ್‌ಸೈಟ್ www.ceir.gov.in ಅನ್ನು ಅಭಿವೃದ್ಧಿಪಡಿಸಿದೆ. ಈ CEIR (ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್) ಡೇಟಾಬೇಸ್‌ನಲ್ಲಿ, ಕೆಲವು ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಕಳೆದುಹೋದ ಅಥವಾ ಕಳುವಾದ ಮೊಬೈಲ್ ಅನ್ನು ನೀವು ಪತ್ತೆಹಚ್ಚಬಹುದು. ಈ ಪೋರ್ಟಲ್‌ಗೆ ಅಗತ್ಯವಾಗಿರುವುದು ಕಳೆದುಹೋದ ಡಿವೈಸ್‌ನ 15-ಅಂಕಿಯ IMEI ಸಂಖ್ಯೆ ಮಾತ್ರ. (ಇದನ್ನು ನೀವು ಪ್ಯಾಕಿಂಗ್ ಅಥವಾ ಬಿಲ್‌ನಲ್ಲಿ ಕಾಣಬಹುದು). ಅದೇ ವೆಬ್‌ಸೈಟ್ ಬಳಸಿಕೊಂಡು ನಿಮ್ಮ ಫೋನ್ ಅನ್ನು ಸಹ ನೀವು ನಿರ್ಬಂಧಿಸಬಹುದು. ಇದೀಗ ದೆಹಲಿ ಪೊಲೀಸರು ಇಂಟರ್ನೆಟ್ ಸೇವಾ ಪೂರೈಕೆದಾರರು ಹಾಗೂ ದೂರ ಸಂಪರ್ಕ ಇಲಾಖೆಯೊಂದಿಗೆ ಕೈ ಜೋಡಿಸಿಕೊಂಡು ಮೊಬೈಲ್ ಕಳ್ಳತನ ಹಾಗೂ ದರೋಡೆ ಪ್ರಕರಣಗಳಿಗೆ ಇತಿಶ್ರೀ ಹಾಡಲು ಯೋಜಿಸುತ್ತಿದ್ದಾರೆ.

ಇದನ್ನೂ ಓದಿ: China vs Taiwan: ಚೀನಾ-ತೈವಾನ್ ನಡುವಿನ ಸಂಘರ್ಷಕ್ಕೆ ಕಾರಣವೇನು? ಇದರಲ್ಲೇಕೆ ಅಮೆರಿಕಕ್ಕೆ ಆಸಕ್ತಿ?

ಮೊಬೈಲ್ ಡಿವೈಸ್‌ನ ಅಂತರಾಷ್ಟ್ರೀಯ ಮೊಬೈಲ್ ಸಲಕರಣೆ ಗುರುತು (IMEI) ಸಂಖ್ಯೆಯನ್ನು ಬಳಸಿಕೊಂಡು ಕಳ್ಳತನ ಮಾಡಿದ ಹಾಗೂ ದರೋಡೆ ಮಾಡಿದ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡಲು ನಿರ್ಧರಿಸಿದ್ದಾರೆ. ಇದರಿಂದ ನಕಲಿ ಮೊಬೈಲ್‌ಗಳ ಮಾರುಕಟ್ಟೆಗೆ ಕಡಿವಾಣ ಹಾಕಬಹುದು ಎಂಬುದು ಪೊಲೀಸರ ಯೋಜನೆಯಾಗಿದೆ. ಇನ್ನು ನಗರದಲ್ಲಿ ಅಪರಾಧಗಳ ಸಂಖ್ಯೆ ಮಿತಿಮೀರುತ್ತಿದ್ದು ಕಳೆದ ವರ್ಷಕ್ಕೆ ಹೋಲಿಸಿದಾಗ ಮೊಬೈಲ್ ದರೋಡೆ ಪ್ರಕರಣದಲ್ಲಿ 11-15% ಏರಿಕೆ ಕಂಡುಬಂದಿದ್ದು ಜನವರಿ 1 ರಿಂದ ಜೂನ್ 28 ರ ವರದಿಯನ್ನು ಗಮಿಸಿದಾಗ ಸುಮಾರು 4,600 ಪ್ರಕರಣಗಳು ವರದಿಯಾಗಿವೆ.

(IMEI) ಸಂಖ್ಯೆ ಬಳಸಿಕೊಂಡು ಕದ್ದ ಇಲ್ಲವೇ ದರೋಡೆ ಮಾಡಿದ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡುವುದು ಹೇಗೆ ಎಂಬುದನ್ನು ವಿಷದವಾಗಿ ತಿಳಿದುಕೊಳ್ಳೋಣ. ಈ ಯೋಜನೆಗೆ ಸರಕಾರ ಸರಿಸುಮಾರು 15 ಕೋಟಿ ಹಣವನ್ನು ವ್ಯಯಿಸಿದ್ದು, ಇದಕ್ಕಾಗಿ ನೀವು ಕಳೆದುಹೋದ ಸಾಧನದ ಕುರಿತು ಠಾಣೆಯಲ್ಲಿ ದೂರು ದಾಖಲಿಸಬೇಕಾಗುತ್ತದೆ. ಫೋನ್ ಅನ್ನು ಬ್ಲಾಕ್ ಮಾಡಲು ಸೇವಾ ಪೂರೈಕೆದಾರರಿಂದ ನಕಲಿ ಸಿಮ್ ಕಾರ್ಡ್‌ಗಾಗಿ ವಿನಂತಿಯನ್ನು ಸಲ್ಲಿಸಬೇಕು.

IMEI ಸಂಖ್ಯೆ ಎಂದರೇನು?
ಅಂತರಾಷ್ಟ್ರೀಯ ಮೊಬೈಲ್ ಸಲಕರಣೆ ಗುರುತು ಅಥವಾ IMEI ಎಂಬುದು ಮೊಬೈಲ್ ನೆಟ್‌ವರ್ಕ್‌ನಲ್ಲಿ ಸಾಧನವನ್ನು (ಡಿವೈಸ್) ಗುರುತಿಸಲು ಬಳಸಲಾಗುವ ವಿಶಿಷ್ಟ ಸಂಖ್ಯೆಯಾಗಿದೆ. ಇದು 15 ಅಂಕೆಗಳನ್ನು ಹೊಂದಿದ್ದು ಮತ್ತು ನಿಮ್ಮ ಫೋನ್‌ನ ವಿಶಿಷ್ಟ ಗುರುತಿನಂತಿರುತ್ತದೆ. ನೀವು ಇಂಟರ್ನೆಟ್ ಅನ್ನು ಬಳಸುವಾಗ ಅಥವಾ ನಿಮ್ಮ ಸೆಲ್ಯುಲಾರ್ ಸೇವಾ ಪೂರೈಕೆದಾರರ ಮೂಲಕ ಕರೆ ಮಾಡಿದಾಗ, ನಿಮ್ಮ ಸಾಧನದ ಗುರುತನ್ನು ಪರಿಶೀಲಿಸಲು ಈ ಸಂಖ್ಯೆಯನ್ನು ಬಳಸಲಾಗುತ್ತದೆ. ನೀವು ಡ್ಯುಯಲ್ ಸಿಮ್ ಫೋನ್ ಹೊಂದಿದ್ದರೆ, ನೀವು ಪ್ರತಿ ಸ್ಲಾಟ್‌ಗೆ ಒಂದರಂತೆ ಎರಡು IMEI ಸಂಖ್ಯೆಗಳನ್ನು ಹೊಂದಿರುತ್ತೀರಿ.

IMEI ಸಂಖ್ಯೆಯನ್ನು ನೀವು ಪರಿಶೀಲಿಸುವುದು ಹೇಗೆ?
ಈ ಸಂಖ್ಯೆಯನ್ನು ನಾವೇ ಪರಿಶೀಲಿಸಿಕೊಳ್ಳಬಹುದಾಗಿದ್ದು ಸಾಧನ ತಯಾರಕರು ಸಾಧನ ಇಲ್ಲವೇ ಅದರ ಬಾಕ್ಸ್‌ನಲ್ಲಿ ಸ್ಟಿಕ್ಕರ್‌ಗಳ ಮೇಲೆ ಸಂಖ್ಯೆಯನ್ನು ಮುದ್ರಿಸಿರುತ್ತಾರೆ. ಇದು ಸಾಮಾನ್ಯವಾಗಿ ನಿಮ್ಮ ಫೋನ್‌ನ ಹಿಂಭಾಗದಲ್ಲಿ ಇಲ್ಲವೇ ಬ್ಯಾಟರಿ ಪ್ಯಾಕ್‌ನ ಅಡಿಭಾಗದಲ್ಲಿ ಕಂಡುಬರುತ್ತದೆ.

ಇದನ್ನೂ ಓದಿ:  Ban Chinese Phones: ಚೀನಾ ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ಬ್ಯಾನ್​ ಆಗುವ ಸಾಧ್ಯತೆ! ನಿಮ್ಮ ಫೋನ್​ ಬ್ರ್ಯಾಂಡ್​ ಯಾವುದು?

ಇನ್ನೂ ಸುಲಭ ವಿಧಾನದಲ್ಲಿ ಈ ಸಂಖ್ಯೆಯನ್ನು ಕಂಡುಕೊಳ್ಳಬೇಕು ಎಂದಾದಲ್ಲಿ ನಿಮ್ಮ ಫೋನ್ ಮೂಲಕ *#06# ಈ ಸಂಖ್ಯೆಗೆ ಕರೆ ಮಾಡಿ ಆ ಕೂಡಲೇ ನಿಮ್ಮ ಫೋನ್ ಪರದೆಯು ನಿಮ್ಮ ಪ್ರಸ್ತುತ ಡಿವೈಸ್‌ನ IMEI ಸಂಖ್ಯೆಯನ್ನು ಪ್ರದರ್ಶಿಸುತ್ತದೆ.

ಇದು ಹೇಗೆ ಉಪಯುಕ್ತ?
ಇನ್ನು ಇದರ ಕಾರ್ಯಾಚರಣೆಯನ್ನು ಬದಿಗಿಟ್ಟು ಇದರ ಇನ್ನಷ್ಟು ಬಳಕೆಯನ್ನು ಅರಿತುಕೊಳ್ಳಬೇಕು ಎಂದಾದಲ್ಲಿ IMEI ಸಂಖ್ಯೆಯು ನೆಟ್‌ವರ್ಕ್ ಪೂರೈಕೆದಾರರಿಗೆ ಸಾಧನವು ಕಳವಾದರೆ ಅಥವಾ ಕಳೆದುಹೋದರೆ ಅದನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಒಮ್ಮೆ ಇಂತಹ ಮೊಬೈಲ್ ನಷ್ಟ ಅಥವಾ ಕಳ್ಳತನ ವರದಿಯಾದರೆ, ಹೊಸ ಸಿಮ್ ಕಾರ್ಡ್‌ನೊಂದಿಗೆ ಸೆಲ್ಯುಲಾರ್ ನೆಟ್‌ವರ್ಕ್‌ಗೆ ಸಾಧನ ಪ್ರವೇಶವನ್ನು ವಾಹಕ/ರು ನಿರಾಕರಿಸಬಹುದು. ಇದು ಪ್ರಾಯೋಗಿಕವಾಗಿ ಸಾಧನವನ್ನು ನಿಷ್ಪ್ರಯೋಜಕಗೊಳಿಸುವುದರಿಂದ ಕರೆ ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಾಗುವುದಿಲ್ಲ.

ನನ್ನ IMEI ಸಂಖ್ಯೆಯನ್ನು ಬೇರೆ ಯಾರಾದರೂ ಬದಲಾಯಿಸಬಹುದೇ?
ದುರದೃಷ್ಟವಶಾತ್, ನಿಮ್ಮ ಫೋನ್‌ನ IMEI ಸಂಖ್ಯೆಯನ್ನು ಬದಲಾಯಿಸಬಹುದು. IMEI ಸಂಖ್ಯೆಯನ್ನು ಮಾರ್ಪಡಿಸಲು ನಿಮ್ಮ ಫೋನ್ ಅನ್ನು ಕಂಪ್ಯೂಟರ್‌ಗೆ ಸಂಪರ್ಕಿಸುವ ಫ್ಲ್ಯಾಶರ್ (Flasher) ಎಂಬ ಸಾಧನವನ್ನು ಕಳ್ಳರು ಬಳಸುತ್ತಾರೆ. ಇದನ್ನು ಕಾರ್ಯರೂಪಕ್ಕೆ ತರುವುದು ತುಂಬಾ ಕಷ್ಟವಾಗಿದ್ದರೂ, ಇದು ಅಸಾಧ್ಯವಾದ ಕೆಲಸವೇನಲ್ಲ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ Flasher ಸಾಧನವು ಸಾಕಷ್ಟು ತಾಂತ್ರಿಕವಾಗಿ ಮುಂದುವರಿದಿರುವುದರಿಂದ ಇದರ ಮೂಲಕ IMEI ಸಂಖ್ಯೆಯನ್ನು ಮಾರ್ಪಡಿಸಬಹುದಾಗಿದೆ ಇದರಿಂದ ಸ್ಮಾರ್ಟ್‌ಫೋನ್ ಅನ್ನು ಮತ್ತೆ ಪತ್ತೆಹಚ್ಚಲು ಅಸಾಧ್ಯವಾಗುತ್ತದೆ.

ಪೊಲೀಸರು ಕಳ್ಳತನ ತಡೆಯಲು ಹೇಗೆ ಬಳಸುತ್ತಿದ್ದಾರೆ?
ಕಳುವಾದ ಎಲ್ಲಾ ಫೋನ್‌ಗಳ ಡೇಟಾವನ್ನು ಕೂಡಲೇ ನೋಂದಾಯಿಸಲಾಗುತ್ತದೆ ನಂತರ ಇಲಾಖೆಯ ಸರ್ವರ್‌ಗಳು ಮತ್ತು ಅಪರಾಧ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಮತ್ತು ಸಿಸ್ಟಮ್ಸ್ (CCTNS)" ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತದೆ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿವಾಹಿನಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Security Feature: ಇನ್ಮುಂದೆ ಯಾರೂ ನಿಮ್ಮ WhatsApp ಖಾತೆಯನ್ನು ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ

ಒಂದು ತಿಂಗಳ ಕಾಲ ಟೆಸ್ಟಿಂಗ್ ಪ್ರಕ್ರಿಯೆಯನ್ನು ನಡೆಸಿದ್ದು ಈ ಸಮಯದಲ್ಲಿ 950 ಕ್ಕಿಂತಲೂ ಹೆಚ್ಚಿನ IMEI ಸಂಖ್ಯೆಗಳು/ಫೋನ್‌ಗಳನ್ನು ಬ್ಲಾಕ್ ಮಾಡಲು ನಮಗೆ ಸಾಧ್ಯವಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಮೊಬೈಲ್ ಕಳೆದುಕೊಂಡವರಿಗೆ ತಮ್ಮ ಕಳುವಾದ ಫೋನ್‌ಗಳನ್ನು ಬ್ಲಾಕ್ ಮಾಡಲು ಕೇಂದ್ರೀಯ ಸಲಕರಣೆ ಗುರುತು ನೋಂದಣಿ (CEIR) ನಲ್ಲಿ ನೋಂದಾಯಿಸಲು ಪೊಲೀಸರು ಸಹಾಯ ಮಾಡುತ್ತಿದ್ದಾರೆ.

ಮುಂದಿರುವ ಸವಾಲುಗಳೇನು?
ಕೆಲವೊಂದು ಗ್ಯಾಂಗ್‌ಗಳು ಕಳುವು ಮಾಡಿದ ಫೋನ್‌ಗಳನ್ನು ಫಾರ್ಮ್ಯಾಟ್ ಮಾಡುತ್ತಿದ್ದು ಇದರಿಂದ IMEI ಸಂಖ್ಯೆ ಗುರುತಿಸಲು ಕೊಂಚ ಕಷ್ಟವಾಗುತ್ತಿದೆ. ಇದೇ ಮುಂದಿರುವ ಸವಾಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಫ್ಲೆಕ್ಸಿಬಲ್ ಆಗಿರುವ ಆಪರೇಟಿಂಗ್ ಸಿಸ್ಟಮ್‌ಗಳನ್ನು ಹೊಂದಿರದ ಮೊಬೈಲ್ ಫೋನ್‌ಗಳನ್ನು ಒಡೆಯಬಹುದು. ಅದೇ ರೀತಿ ಫೋನ್‌ಗಳ IMEI ಸಂಖ್ಯೆಗಳನ್ನು ಬದಲಾಯಿಸುವ ಸಾಫ್ಟ್‌ವೇರ್ ಕೂಡ ಇದ್ದು ಕಳುವಾದ ಡಿವೈಸ್‌ಗಳನ್ನು ಬ್ಲಾಕ್ ಮಾಡುವಲ್ಲಿ ಕಾನೂನು ಜಾರಿ ಸಂಸ್ಥೆಗಳಿಗೆ ತೊಂದರೆಯನ್ನುಂಟು ಮಾಡಬಹುದು ಎಂಬುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Published by:Ashwini Prabhu
First published: