ತಾಲಿಬಾನ್ 2.0 ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ನಂತರ ಕಠಿಣ ಇಸ್ಲಾಮಿಸ್ಟ್ ಗುಂಪಿನ ಹೆಚ್ಚು ಸ್ನೇಹಪರ ಚಿತ್ರವನ್ನು ಪ್ರಸ್ತುತಪಡಿಸಲು ಪ್ರಯತ್ನಿಸಿದೆ. ಇದು ಅಫ್ಘಾನಿಸ್ತಾನದಲ್ಲಿ ಅಭಿವೃದ್ಧಿ ಮತ್ತು ಇತರ ದೇಶಗಳೊಂದಿಗೆ ಉತ್ತಮ ಸಂಬಂಧದ ಭರವಸೆ ನೀಡಿದೆ. ಅಫ್ಘಾನಿಸ್ತಾನದ ಶಾಂತಿ ಪ್ರಕ್ರಿಯೆಯಲ್ಲಿ ತಾಲಿಬಾನ್ಗಳಿಗೆ ವಿಶಾಲವಾದ ಪಾತ್ರವನ್ನು ಹಲವಾರು ರಾಷ್ಟ್ರಗಳು ಸೂಚಿಸಿವೆ. ಈ ನಡುವೆ ತಾಲಿಬಾನ್ ಅನ್ನು ಭಯೋತ್ಪಾದಕ ಸಂಘಟನೆ ಎಂಬ ಪಟ್ಟಿಯಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (United Nations Security Council) ತೆಗೆದುಹಾಕಿದೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ. ಈ ಸುದ್ದಿ ಎಷ್ಟು ಸತ್ಯ ಎಂಬುದರ ಬಗ್ಗೆ ಇಲ್ಲಿದೆ ವಿವರ..
ಆದರೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್ಸಿ) ತನ್ನ ಭಯೋತ್ಪಾದಕ ಸಂಘಟನೆಗಳ ಪಟ್ಟಿಯಿಂದ ತಾಲಿಬಾನ್ ಅನ್ನು ತೆಗೆದುಹಾಕಿದೆಯೇ..?
ಇದನ್ನೇ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಯುಎನ್ ಸಂಸ್ಥೆಯು ಈಗ ತಾಲಿಬಾನ್ (Taliban) ಅನ್ನು ರಾಜಕೀಯ ಪ್ರಕ್ರಿಯೆಯನ್ನು ಮುನ್ನಡೆಸುವ ಘಟಕವೆಂದು ಗುರುತಿಸಿದೆ ಎಂದು ವೈರಲ್ ಪೋಸ್ಟ್ ಹೇಳಿದೆ.
ತಾಲಿಬಾನ್ ಅನ್ನು ಅನುಮೋದಿಸುವ ವಿಶ್ವಸಂಸ್ಥೆಯ ನಿರ್ಣಯಗಳು:
UNSC ನಿರ್ಣಯದ ಪ್ರಕಾರ ತಾಲಿಬಾನ್ ಅನ್ನು ಇನ್ನೂ ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಲಾಗಿದೆ. 1999ರಲ್ಲಿ, UNSCR 1267 ತಾಲಿಬಾನ್ ಮೇಲೆ ನಿರ್ಬಂಧಗಳನ್ನು ಹೇರಿತು ಮತ್ತು ಅವರ ನಿಧಿಗಳು ಮತ್ತು ಇತರ ಆರ್ಥಿಕ ಸಂಪನ್ಮೂಲಗಳನ್ನು ಸ್ಥಗಿತಗೊಳಿಸಿತು. ಏಕೆಂದರೆ ತಾಲಿಬಾನ್, 1998ರಲ್ಲಿ ಕೀನ್ಯಾ ಹಾಗೂ ಟಾಂಜೇನಿಯಾದ ಯುಎಸ್ ರಾಯಭಾರ ಕಚೇರಿಗಳ ಮೇಲೆ ಬಾಂಬ್ ಸ್ಫೋಟ ನಡೆಸಿದ್ದ ಒಸಾಮಾ ಬಿನ್ ಲಾಡೆನ್ಗೆ ಆಶ್ರಯ ನೀಡಿದ್ದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಇನ್ನು, 2015 UNSCR 2255 "ಅಫ್ಘಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿಯ ಬಗ್ಗೆ ಅದರ ತೀವ್ರ ಆತಂಕವನ್ನು ಒತ್ತಿಹೇಳಿದೆ, ನಿರ್ದಿಷ್ಟವಾಗಿ ತಾಲಿಬಾನ್ ಮತ್ತು ಸಂಬಂಧಿತ ಗುಂಪುಗಳಾದ ಹಕ್ಕಾನಿ ನೆಟ್ವರ್ಕ್, ಮತ್ತು ಅಲ್-ಕೈದಾ, ಮತ್ತು ಇತರ ಹಿಂಸಾತ್ಮಕ ಹಾಗೂ ಉಗ್ರಗಾಮಿ ಗುಂಪುಗಳಿಂದ ನಡೆಯುತ್ತಿರುವ ಹಿಂಸಾತ್ಮಕ ಮತ್ತು ಭಯೋತ್ಪಾದಕ ಚಟುವಟಿಕೆಗಳು" ಕುರಿತು ಚರ್ಚೆ ನಡೆದಿತ್ತು.
ಅಲ್ಲದೆ, ನವೀಕರಿಸಿದ UNSC ಮಂಜೂರಾತಿ ಪಟ್ಟಿಯಲ್ಲಿ ಇನ್ನೂ ಅನೇಕ ತಾಲಿಬಾನ್ ನಾಯಕರ ಹೆಸರುಗಳಿವೆ.
T-ಪದವನ್ನು ಕೈಬಿಟ್ಟ ಯುಎನ್ಎಸ್ಸಿ..!
ಇತ್ತೀಚೆಗೆ, ಆಗಸ್ಟ್ 27 ರಂದು, ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ನಡೆದ ಬಾಂಬ್ ಸ್ಫೋಟದ ನಂತರ, ಯುಎನ್ಎಸ್ಸಿ ಅಧ್ಯಕ್ಷ ಭಾರತೀಯ ಮೂಲದ ಟಿ.ಎಸ್. ತಿರುಮೂರ್ತಿ ಪತ್ರಿಕಾ ಹೇಳಿಕೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಗಮನಿಸಲಾಯಿತು.
ಈ ಪತ್ರಿಕಾ ಹೇಳಿಕೆಯಲ್ಲಿ, ಆಗಸ್ಟ್ 16 ರಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ನೀಡಿದ್ದ ತನ್ನ ಹಿಂದಿನ ಹೇಳಿಕೆಯ ಪ್ಯಾರಾಗ್ರಾಫ್ ಅನ್ನು ಬಿಡುಗಡೆ ಮಾಡಿತ್ತಾದರೂ ತಾಲಿಬಾನ್ ಪದವನ್ನು ಕೈಬಿಟ್ಟಿತ್ತು.
ವಿಶ್ವಸಂಸ್ಥೆಯ ಭಾರತದ ಮಾಜಿ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಈ ಎರಡು ಹೇಳಿಕೆಗಳನ್ನು ಟ್ವೀಟ್ ಮಾಡಿದ್ದರು.
ಭಾರತದ ಪಾತ್ರ:
T-ಪದವಿಲ್ಲದ ಇತ್ತೀಚಿನ ಹೇಳಿಕೆಯನ್ನು ಕೌನ್ಸಿಲ್ ನೀಡಿದಾಗ ಭಾರತವು ಆಗಸ್ಟ್ ತಿಂಗಳಿಗೆ ಯುಎನ್ಎಸ್ಸಿ ಅಧ್ಯಕ್ಷತೆ ವಹಿಸಿದ್ದು ನಿಜ. ಆದರೆ ಹಿಂದಿನ ಡೊನಾಲ್ಡ್ ಟ್ರಂಪ್ ಆಡಳಿತದ ಅವಧಿಯಲ್ಲಿ ತಾಲಿಬಾನ್ ಮತ್ತು ಯುಎಸ್ ನಡುವೆ ಶಾಂತಿ ಮಾತುಕತೆ ಆರಂಭವಾಗಿತ್ತು.
UNSC ಈ ಹಿಂದೆ 14 ತಾಲಿಬಾನ್ ನಾಯಕರಿಗೆ ವಿವಿಧ ದೇಶಗಳಲ್ಲಿ ಶಾಂತಿ ಮತ್ತು ಸಮನ್ವಯ ಮಾತುಕತೆಯಲ್ಲಿ ಭಾಗವಹಿಸಲು ಪ್ರಯಾಣ ವಿನಾಯಿತಿ ನೀಡಿತ್ತು.
ಈ 90 ದಿನಗಳ ಪ್ರಯಾಣ ವಿನಾಯಿತಿ ಸೆಪ್ಟೆಂಬರ್ 22, 2021 ರವರೆಗೆ ಮಾನ್ಯವಾಗಿರುತ್ತದೆ.
ತಾಲಿಬಾನ್ ನಾಯಕ ಶೇರ್ ಮೊಹಮ್ಮದ್ ಸ್ಟಾನಿಕ್ಜೈ, ಇತ್ತೀಚೆಗೆ ಭಾರತದೊಂದಿಗೆ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಮುಂದುವರಿಸುವ ಭರವಸೆ ವ್ಯಕ್ತಪಡಿಸಿದ್ದಾರೆ. ಇದು ಈ ಪ್ರದೇಶಕ್ಕೆ ಬಹಳ ಮುಖ್ಯ ಎಂದು ಹೇಳಿದರು.
ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಟಿ. ಎಸ್. ತಿರುಮೂರ್ತಿ, ಡಿಸೆಂಬರ್ 31, 2021 ರವರೆಗೆ ತಾಲಿಬಾನ್ ನಿರ್ಬಂಧಗಳ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ಆದ್ದರಿಂದ, ತಾಲಿಬಾನ್ ನಾಯಕರನ್ನು ಮಂಜೂರಾತಿ ಪಟ್ಟಿಯಿಂದ ಕೈಬಿಡುವ ಮತ್ತು 14 ತಾಲಿಬಾನ್ ನಾಯಕರಿಗೆ ಪ್ರಯಾಣ ವಿನಾಯಿತಿ ನಿರ್ಧರಿಸುವಲ್ಲಿ ಭಾರತ ನಿರ್ಣಾಯಕ ಪಾತ್ರ ವಹಿಸುತ್ತದೆ.
ಆದ್ದರಿಂದ, ಯುಎನ್ಎಸ್ಸಿ ತನ್ನ ಇತ್ತೀಚಿನ ಪತ್ರಿಕಾ ಹೇಳಿಕೆಯಲ್ಲಿ ತಾಲಿಬಾನ್ ಪದವನ್ನು ಮಾತ್ರ ಕೈಬಿಟ್ಟಿದೆ ಎಂದು ತೀರ್ಮಾನಿಸಬಹುದು. ಆದರೆ ತಾಲಿಬಾನ್ ಗುಂಪು ಇನ್ನೂ ಭಯೋತ್ಪಾದಕ ಗುಂಪಾಗಿ ಮಂಜೂರಾತಿ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ