Explained: ಉಕ್ರೇನ್‌ನಲ್ಲಿ No Fly Zone ನಿರ್ಮಾಣ ಸಾಧ್ಯವಿಲ್ಲವಾ? ಇದಕ್ಕೆ ಕಾರಣಗಳು ಏನು?

ಯುಎಸ್, ಬ್ರಿಟನ್ ಮತ್ತು ಅವರ ಯುರೋಪಿಯನ್ ಮಿತ್ರರಾಷ್ಟ್ರಗಳು ನೋ-ಫ್ಲೈ ವಲಯವನ್ನು ಹೇರುವ ಯಾವುದೇ ಅವಕಾಶವಿಲ್ಲ ಎಂದು ಮಿಲಿಟರಿ ವಿಶ್ಲೇಷಕರು ಹೇಳುತ್ತಾರೆ. ಏಕೆಂದರೆ ಅದು ಉಕ್ರೇನ್‌ನಲ್ಲಿನ ಯುದ್ಧವನ್ನು NATO ಮತ್ತು ರಷ್ಯಾ ನಡುವಿನ ಪರಮಾಣು ಮುಖಾಮುಖಿಯಾಗಿ ಬದಲಾಗಬಹುದು, ರಷ್ಯಾ - ಉಕ್ರೇನ್ ಯುದ್ಧ ಇಡೀ ಯೂರೋಪ್‌ಗೆ ವಿಸ್ತರಣೆಯಾಗಬಹುದು ಎಂದು ಹೇಳುತ್ತಾರೆ.

ವಿಮಾನ ಹಾರಾಟ ನಿರ್ಬಂಧ ವಲಯ

ವಿಮಾನ ಹಾರಾಟ ನಿರ್ಬಂಧ ವಲಯ

 • Share this:
  ಕಳೆದ ಹಲವು ದಿನಗಳಿಂದ ರಷ್ಯಾ (Russia) – ಉಕ್ರೇನ್ (Ukraine) ‌ಯುದ್ಧ (War) ಮುಂದುವರಿಯುತ್ತಿರುವುದು ನಿಮಗೆ ಗೊತ್ತೇ ಇದೆ. ಈ ಹಿನ್ನೆಲೆ ರಷ್ಯಾ ದಾಳಿಗೆ (Attack) ಉಕ್ರೇನ್‌ ತೀವ್ರ ತತ್ತರಿಸಿ ಹೋಗುತ್ತಿದೆ. ರಷ್ಯಾ ವಿರುದ್ಧ ಉಕ್ರೇನ್‌ ಪ್ರತಿದಾಳಿ ನಡೆಸುತ್ತಿದ್ದರೂ ಇದರಿಂದ ಉಕ್ರೇನ್‌ಗೆ ಹೆಚ್ಚು ಹಾನಿಯಾಗಿದೆ ಎನ್ನಬಹುದು. ಇದಕ್ಕೆ ಉದಾಹರಣೆ ಉಕ್ರೇನ್‌ನ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ (Zaporizhia nuclear power plant) ಮೇಲೆ ರಷ್ಯಾ ದಾಳಿ ನಡೆಸಿರುವುದು. ಈ ಹಿನ್ನೆಲೆ ಉಕ್ರೇನ್ ಮೇಲೆ ಹಾರಾಟ-ನಿಷೇಧ ವಲಯವನ್ನು (No Fly Zone) ಹೇರಲು NATOಗೆ ಮನವಿಗಳು ಹೆಚ್ಚಾಗುತ್ತಿದೆ. ಆದರೆ, ಇದರಿಂದ ಯುರೋಪ್‌ನಲ್ಲಿ (Europe) ವ್ಯಾಪಕವಾದ ಯುದ್ಧವನ್ನು ಪ್ರಚೋದಿಸುವ ಆತಂಕದ ಬಗ್ಗೆ ಪಾಶ್ಚಿಮಾತ್ಯ ನಾಯಕರು ಈ ಕಲ್ಪನೆಯನ್ನು ಪುನರಾವರ್ತಿತವಾಗಿ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.

   ಉಕ್ರೇನ್‌ನಲ್ಲಿನ ಪರಮಾಣು ವಿದ್ಯುತ್ ಸ್ಥಾವರದ ಶೆಲ್ ದಾಳಿಯು ಇಡೀ ಖಂಡದ ಸುರಕ್ಷತೆಯ ಮೇಲೆ ಬೆದರಿಕೆಯ ಆತಂಕ ಉಂಟು ಮಾಡಿದೆ. ಈ ಹಿನ್ನೆಲೆ ತಮ್ಮ ನಾಯಕರಿಗೆ ಮಾರ್ಗವನ್ನು ಬದಲಾಯಿಸಬೇಕೆಂದು ಒತ್ತಾಯಿಸಲು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶುಕ್ರವಾರ ಪಶ್ಚಿಮ ಯುರೋಪಿನ ಜನರನ್ನು ಕೇಳಿಕೊಂಡರು.

  ಏರ್ ಸ್ಪೇಸ್ ಮುಚ್ಚುವುದು ಅಗತ್ಯ

  "ಉಕ್ರೇನ್ ಮೇಲೆ ಏರ್‌ ಸ್ಪೇಸ್‌ ಅನ್ನು ತಕ್ಷಣವೇ ಮುಚ್ಚುವ ಅಗತ್ಯವಿದೆ. ಈ ಹಿನ್ನೆಲೆ ನೀವು ಬೀದಿಗಳಲ್ಲಿ ಪ್ರತಿಭಟನೆ ಮಾಡಿ ಮತ್ತು ವಿಕಿರಣಶೀಲ ಮಾಲಿನ್ಯವಿಲ್ಲದೆ ಭೂಮಿಯ ಮೇಲೆ ಬದುಕಲು ಬಯಸುತ್ತೀರಿ ಎಂದು ಹೇಳಿ. ಹಾಗೆ, ರಷ್ಯಾದ ಗಡಿ ಎಲ್ಲಿದೆ ಎಂಬುದು ವಿಕಿರಣಕ್ಕೆ ತಿಳಿದಿಲ್ಲ ಎಂದೂ ಅಲ್ಲಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜನರಿಗೆ ಹೇಳಿದರು. ಆದರೂ, ಆರಂಭದಲ್ಲಿ ಭಯಪಟ್ಟಂತೆ ರಷ್ಯಾದ ದಾಳಿಯು ವಿಕಿರಣ ಬಿಡುಗಡೆಗೆ ಕಾರಣವಾಗಲಿಲ್ಲ ಎಂಬುದು ಸಮಾಧಾನಕರ ಅಂಶವಾಗಿದೆ.

  ನೋ ಫ್ಲೈ ಝೋನ್ ಹೇರುವ ಅವಕಾಶ ಇಲ್ವಾ?

  ಆದರೆ, ಯುಎಸ್, ಬ್ರಿಟನ್ ಮತ್ತು ಅವರ ಯುರೋಪಿಯನ್ ಮಿತ್ರರಾಷ್ಟ್ರಗಳು ನೋ-ಫ್ಲೈ ವಲಯವನ್ನು ಹೇರುವ ಯಾವುದೇ ಅವಕಾಶವಿಲ್ಲ ಎಂದು ಮಿಲಿಟರಿ ವಿಶ್ಲೇಷಕರು ಹೇಳುತ್ತಾರೆ. ಏಕೆಂದರೆ ಅದು ಉಕ್ರೇನ್‌ನಲ್ಲಿನ ಯುದ್ಧವನ್ನು NATO ಮತ್ತು ರಷ್ಯಾ ನಡುವಿನ ಪರಮಾಣು ಮುಖಾಮುಖಿಯಾಗಿ ಬದಲಾಗಬಹುದು, ರಷ್ಯಾ - ಉಕ್ರೇನ್ ಯುದ್ಧ ಇಡೀ ಯೂರೋಪ್‌ಗೆ ವಿಸ್ತರಣೆಯಾಗಬಹುದು ಎಂದು ಹೇಳುತ್ತಾರೆ.

  ಇದನ್ನೂ ಓದಿ: Explained: ಅಣುಸ್ಥಾವರದ ಮೇಲೆ ರಷ್ಯಾದ ದಾಳಿ ಎಷ್ಟು ಅಪಾಯ ತಂದೊಡ್ಡಬಹುದಾಗಿತ್ತು ಗೊತ್ತೇ?

  ಇನ್ನು, ಈ ಪರಿಸ್ಥಿತಿಯ ಬಗ್ಗೆ ಹೆಚ್ಚು ವಿವರವಾದ ವಿವರಣೆ ಇಲ್ಲಿದೆ ನೋಡಿ..

  ನೋ-ಫ್ಲೈ ಝೋನ್ ಎಂದರೇನು..?

  ನೋ-ಫ್ಲೈ ಝೋನ್ ಎಲ್ಲಾ ಅನಧಿಕೃತ ವಿಮಾನಗಳು ಉಕ್ರೇನ್ ಮೇಲೆ ಹಾರುವುದನ್ನು ನಿರ್ಬಂಧಿಸುತ್ತದೆ. 1991ರ ಗಲ್ಫ್ ಯುದ್ಧದ ನಂತರ ಒಂದು ದಶಕಕ್ಕೂ ಹೆಚ್ಚು ಕಾಲ ಇರಾಕ್‌ನ ಕೆಲವು ಭಾಗಗಳ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ಇಂತಹ ನಿರ್ಬಂಧಗಳನ್ನು ವಿಧಿಸಿದ್ದವು. ಇದೇ ರೀತಿ 1993-95ರ ಅವಧಿಯಲ್ಲಿ ಬೋಸ್ನಿಯಾ ಮತ್ತು ಹರ್ಜೆಗೋವಿನಾದಲ್ಲಿನ ಅಂತರ್ಯುದ್ಧದ ಸಮಯದಲ್ಲಿ ಮತ್ತು 2011 ರಲ್ಲಿ ಲಿಬಿಯಾದ ಅಂತರ್ಯುದ್ಧದ ಸಮಯದಲ್ಲಿ ಸಹ ಈ ರೀತಿ ವಿಮಾನಗಳ ಹಾರಾಟ ನಿರ್ಬಂಧಿಸಲಾಗಿತ್ತು.

  ಉಕ್ರೇನ್‌ನಲ್ಲಿ NATO ಏಕೆ ಈ ಹೆಜ್ಜೆಯನ್ನು ತೆಗೆದುಕೊಳ್ಳುವುದಿಲ್ಲ..?

  ಒಂದು ವೇಳೆ ನ್ಯಾಟೋ ಉಕ್ರೇನ್‌ ನೆಲದ ಮೇಲೆ ನೋ ಫ್ಲೈ ಝೋನ್‌ ಅನ್ನು ಜಾರಿಗೆ ತಂದರೆ ಇದರಿಂದ ರಷ್ಯಾದೊಂದಿಗೆ ನೇರವಾದ ಮಿಲಿಟರಿ ಸಂಘರ್ಷಕ್ಕೆ ಅಪಾಯ ಉಂಟುಮಾಡುತ್ತದೆ ಎಂದು ಸರಳವಾಗಿ ಹೇಳಬಹುದು. ನಂತರ, ಅದು ಪರಮಾಣು-ಸಜ್ಜಿತ ಮಹಾಶಕ್ತಿಯೊಂದಿಗೆ ವ್ಯಾಪಕವಾದ ಯುರೋಪಿಯನ್ ಯುದ್ಧಕ್ಕೆ ಕಾರಣವಾಗಬಹುದು ಎಂಬ ಆತಂಕವೂ ಇದೆ.

  ಹಾರಾಟ-ನಿಷೇಧ ವಲಯ ಅಥವಾ ನೋ ಫ್ಲೈ ಝೋನ್‌ ಘೋಷಿಸುವುದರಿಂದ NATO ಪೈಲಟ್‌ಗಳು ರಷ್ಯಾದ ವಿಮಾನವನ್ನು ಹೊಡೆದುರುಳಿಸಲು ಒತ್ತಾಯಿಸಬಹುದು. ಆದರೆ ಅದು ಇಷ್ಟಕ್ಕೇ ನಿಲ್ಲುವುದಿಲ್ಲ. ಯುದ್ಧ ವಿಮಾನಗಳ ಜೊತೆಗೆ, ಮಿಷನ್ ಅನ್ನು ಬೆಂಬಲಿಸಲು NATO ಇಂಧನ ತುಂಬುವ ಟ್ಯಾಂಕರ್‌ಗಳು ಮತ್ತು ಎಲೆಕ್ಟ್ರಾನಿಕ್-ಕಣ್ಗಾವಲು ವಿಮಾನಗಳನ್ನು ಸಹ ನಿಯೋಜಿಸಬೇಕಾಗುತ್ತದೆ. ಈ ತುಲನಾತ್ಮಕವಾಗಿ ನಿಧಾನವಾದ, ಹೆಚ್ಚು ಹಾರುವ ವಿಮಾನಗಳನ್ನು ರಕ್ಷಿಸಲು, NATO ರಷ್ಯಾ ಮತ್ತು ಬೆಲಾರಸ್‌ನಲ್ಲಿ ಸರ್ಫೇಸ್‌ ಟು ಏರ್‌ ಮಿಸೈಲ್‌ ಬ್ಯಾಟರಿಗಳನ್ನು ನಾಶಪಡಿಸಬೇಕಾಗುತ್ತದೆ. ಇದು ಸಹ ಮತ್ತೊಮ್ಮೆ ವಿಶಾಲವಾದ ಸಂಘರ್ಷಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಲಾಗುತ್ತದೆ.

  ನ್ಯಾಟೋ ಕಾರ್ಯದರ್ಶಿ ಹೇಳಿದ್ದೇನು?

  "ನೋ-ಫ್ಲೈ ಜೋನ್ ಅನ್ನು ಕಾರ್ಯಗತಗೊಳಿಸಲು ಏಕೈಕ ಮಾರ್ಗವೆಂದರೆ ಉಕ್ರೇನಿಯನ್ ವಾಯುಪ್ರದೇಶಕ್ಕೆ ನ್ಯಾಟೋ ಯುದ್ಧ ವಿಮಾನಗಳನ್ನು ಕಳುಹಿಸುವುದು ಮತ್ತು ನಂತರ ರಷ್ಯಾದ ವಿಮಾನಗಳನ್ನು ಹೊಡೆದುರುಳಿಸುವ ಮೂಲಕ ಹಾರಾಟ-ನಿಷೇಧ ವಲಯವನ್ನು ಹೇರುವುದು" ಎಂದು ನ್ಯಾಟೋ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಶುಕ್ರವಾರ ಹೇಳಿದ್ದಾರೆ.

  ಅಲ್ಲದೆ, "ನಾವು ಹತಾಶೆಯನ್ನು ಅರ್ಥಮಾಡಿಕೊಂಡಿದ್ದೇವೆ. ಆದರೆ ನಾವು ಅದನ್ನು ಮಾಡಿದರೆ, ಯುರೋಪ್‌ನಲ್ಲಿ ಪೂರ್ಣ ಪ್ರಮಾಣದ ಯುದ್ಧವಾಗಿ ಕೊನೆಗೊಳ್ಳುವ ಆತಂಕವಿದೆ ಎಂದು ನಾವು ಊಹಿಸುತ್ತೇವೆ" ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

  "ಈ ಯುದ್ಧವು ಉಕ್ರೇನ್‌ನ ಆಚೆಗೆ ಉಲ್ಬಣಗೊಳ್ಳುವುದನ್ನು ತಡೆಯಲು NATO ಮಿತ್ರರಾಷ್ಟ್ರಗಳಾಗಿ ನಾವು ಜವಾಬ್ದಾರಿಯನ್ನು ಹೊಂದಿದ್ದೇವೆ" ಎಂದೂ ಅವರು ಹೇಳಿದರು.

  ನೋ-ಫ್ಲೈ ಝೋನ್ ಏನನ್ನು ಸಾಧಿಸುತ್ತದೆ..?

  ರಷ್ಯಾದ ವಾಯುದಾಳಿಗಳಿಂದ ನಾಗರಿಕರನ್ನು ಮತ್ತು ಈಗ ಪರಮಾಣು ಶಕ್ತಿ ಕೇಂದ್ರಗಳನ್ನು ರಕ್ಷಿಸುತ್ತದೆ ಎಂದು ಉಕ್ರೇನಿಯನ್ ಅಧಿಕಾರಿಗಳು ಮತ್ತು ಭಯಭೀತರಾಗಿರುವ ಸ್ಥಳೀಯ ಜನರು ಹೇಳುತ್ತಾರೆ.

  ಆದರೆ ಉಕ್ರೇನ್‌ನಲ್ಲಿ ಹೆಚ್ಚಿನ ಹಾನಿಯನ್ನು ಉಂಟುಮಾಡುತ್ತಿರುವುದು ರಷ್ಯಾದ ಸೇನೆಯ ಪಡೆಗಳು, ವಿಮಾನವಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ.

  ಇನ್ನು, ಉಕ್ರೇನಿಯನ್ನರು ನಿಜವಾಗಿಯೂ ಬಯಸುವುದು 2011 ರಲ್ಲಿ ಲಿಬಿಯಾದಲ್ಲಿ ಸಂಭವಿಸಿದಂತಹ ವಿಶಾಲವಾದ ಹಸ್ತಕ್ಷೇಪವಾಗಿದೆ ಎಂದು ಲಂಡನ್‌ನ ರಾಯಲ್ ಯುನೈಟೆಡ್ ಸರ್ವಿಸಸ್ ಇನ್‌ಸ್ಟಿಟ್ಯೂಟ್‌ನ ಸಂಶೋಧನಾ ಸಹೋದ್ಯೋಗಿ ಜಸ್ಟಿನ್ ಬ್ರಾಂಕ್ ಹೇಳಿದರು. ಆದರೆ, ಎದುರಾಳಿ ರಷ್ಯಾ ಆಗಿರುವಾಗ ಅದು ಸಂಭವಿಸುವ ಸಾಧ್ಯತೆಯಿಲ್ಲ ಎಂದೂ ಹೇಳಲಾಗುತ್ತಿದೆ.

  "ಉಕ್ರೇನಿಯನ್ ನಗರಗಳನ್ನು ದೂಡುತ್ತಿರುವ ರಾಕೆಟ್ ಫಿರಂಗಿಗಳನ್ನು ಪಾಶ್ಚಿಮಾತ್ಯರು ನುಗ್ಗಿ ಹೊರತೆಗೆಯುವುದನ್ನು ನೋಡಲು ಅವರು ಬಯಸುತ್ತಾರೆ" ಎಂದು ಬ್ರಾಂಕ್ ಹೇಳಿದರು.

  "ನಾವು ರಷ್ಯಾದ ಸೈನ್ಯದ ವಿರುದ್ಧ ಯುದ್ಧಕ್ಕೆ ಹೋಗುವುದಿಲ್ಲ. ಅವರು ಬೃಹತ್ ಪರಮಾಣು-ಶಸ್ತ್ರಸಜ್ಜಿತ ಶಕ್ತಿಯಾಗಿದ್ದಾರೆ’’ ಎಂದೂ ಅವರು ಹೇಳಿದರು.

  ಉಕ್ರೇನ್ ದೇಶದ ಆಕಾಶದಲ್ಲಿ ಏನು ನಡೆಯುತ್ತಿದೆ..?

  ರಷ್ಯಾ ಉಕ್ರೇನ್ ಮೇಲೆ ಆಕಾಶವನ್ನು ತ್ವರಿತವಾಗಿ ನಿಯಂತ್ರಿಸುತ್ತದೆ ಎಂಬ ಭವಿಷ್ಯವಾಣಿಗಳು ನಿಜವಾಗಿಲ್ಲ. ಭೂ ಆಕ್ರಮಣದ ಸಮಯದಲ್ಲಿ ರಷ್ಯಾ ತನ್ನ ಹೆಚ್ಚಿನ ಸ್ಥಿರ-ವಿಂಗ್ ಯುದ್ಧ ವಿಮಾನವನ್ನು ನೆಲದಲ್ಲಿ ಕಾರ್ಯಾಚರಣೆ ನಡೆಸಲು ಏಕೆ ಆಯ್ಕೆ ಮಾಡಿದೆ ಎಂದು ಮಿಲಿಟರಿ ತಜ್ಞರು ಆಶ್ಚರ್ಯ ಪಡುತ್ತಿದ್ದಾರೆ.

  ಇದಕ್ಕೆ ಒಂದು ವಿವರಣೆಯೆಂದರೆ ರಷ್ಯಾದ ಪೈಲಟ್‌ಗಳು ದೊಡ್ಡ ಪ್ರಮಾಣದ ಭೂ ಕಾರ್ಯಾಚರಣೆಗಳನ್ನು ಬೆಂಬಲಿಸುವಲ್ಲಿ ಚೆನ್ನಾಗಿ ತರಬೇತಿ ಪಡೆದಿಲ್ಲ. ವೇಗವಾಗಿ ಚಲಿಸುವ ಪರಿಸರದಲ್ಲಿ ಫಿರಂಗಿ, ಹೆಲಿಕಾಪ್ಟರ್‌ಗಳು ಮತ್ತು ವೇಗವಾಗಿ ಚಲಿಸುವ ವಾತಾವರಣದಲ್ಲಿ ಇತರ ಸ್ವತ್ತುಗಳೊಂದಿಗೆ ಸಮನ್ವಯತೆಯ ಅಗತ್ಯವಿರುವ ಎಂಗೇಜ್‌ಮೆಂಟ್‌ ಹೊಂದಿಲ್ಲ ಎಂದು ಹೇಳಲಾಗಿದೆ.

  ಉಕ್ರೇನ್‌ ಬಹಳ ನಿರ್ಬಂಧಿತ ಪ್ರದೇಶ..!

  ರಷ್ಯಾ ಕಾರ್ಯಾಚರಣೆ ನಡೆಸುತ್ತಿರುವ ರೀತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಯುಎಸ್ ಏರ್ ಫೋರ್ಸ್ ನಿವೃತ್ತ ಮೇಜರ್ ಜನರಲ್ ರಾಬರ್ಟ್ ಲತೀಫ್, "ಅದು (ಉಕ್ರೇನ್‌) ಬಹಳ ನಿರ್ಬಂಧಿತ ಪ್ರದೇಶವಾಗಿದೆ ಎಂದು ಅವರು ಸ್ವಲ್ಪ ಚಿಂತಿತರಾಗಿದ್ದಾರೆಂದು ನಾನು ಭಾವಿಸುತ್ತೇನೆ. ಇದು ಮಧ್ಯಪ್ರಾಚ್ಯದಂತೆ ಅಲ್ಲ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಗಾಳಿಯಲ್ಲಿ ಸುತ್ತಲು ಎಲ್ಲಾ ರೀತಿಯ ಜಾಗವಿದೆ” ಎಂದು ಹೇಳಿದರು.

  ಹಾಗೂ "ಅವರು ಗಡಿಗಳ ಮೇಲೆ ಸುಲಭವಾಗಿ ದಾರಿ ತಪ್ಪಿಸಬಹುದು" ಎಂದೂ ನೊಟ್ರೆ ಡೇಮ್ ವಿಶ್ವವಿದ್ಯಾನಿಲಯದಲ್ಲಿ ಈಗ ಪಾಠ ಮಾಡುತ್ತಿರುವ ಲತೀಫ್‌ ವಿವರಿಸಿದರು.

  ಇದನ್ನೂ ಓದಿ: Explained: ರಷ್ಯಾ-ಉಕ್ರೇನ್ ಯುದ್ಧ ಅಂತಿಮವಾಗಿ ಏನಾಗುತ್ತೆ..? 5 ಸಾಧ್ಯತೆಗಳು ಇಲ್ಲಿವೆ ನೋಡಿ..

  "ಉಕ್ರೇನಿಯನ್ ಮತ್ತು ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಉಕ್ರೇನಿಯನ್ ಹಾಗೂ ರಷ್ಯಾದ ವಿಮಾನಗಳು ಸುತ್ತಲೂ ಹಾರುತ್ತಿವೆ. ಈ ಹಿನ್ನೆಲೆ ಅದು ತುಂಬಾ ಗೊಂದಲಮಯವಾಗಿರಬಹುದು. ಬಹುಶಃ ಅವರು ಅದನ್ನು ಆರಂಭಿಸಲು ಸಾಧ್ಯವಾಗುವ ಬಗ್ಗೆ ಸ್ವಲ್ಪ ಚಿಂತಿತರಾಗಿದ್ದಾರೆಂದು ನಾನು ಭಾವಿಸುತ್ತೇನೆ’’ ಎಂದು ಯುಎಸ್ ಏರ್ ಫೋರ್ಸ್ ನಿವೃತ್ತ ಮೇಜರ್ ಜನರಲ್ ರಾಬರ್ಟ್‌ ಲತೀಫ್‌ ಹೇಳಿದ್ದಾರೆ.
  Published by:Annappa Achari
  First published: