Fact Check: ಕೋವಿಡ್ ಲಸಿಕೆಯಿಂದ ಗಂಡಸುತನಕ್ಕೆ ಕುತ್ತು; ರ‍್ಯಾಪರ್ ನಿಕಿ ಮಿನಾಜ್: ತಜ್ಞರ ಅಭಿಪ್ರಾಯವೇನು?

Coronavirus and impotency - Fact Check: ಸರಕಾರ ಹಾಗೂ ಅನೇಕ ಸಂಘಸಂಸ್ಥೆಗಳು ಲಸಿಕೆಗೆ ಸಂಬಂಧಿಸಿದ ಜನರ ಭಯವನ್ನು ದೂರಮಾಡಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದರೂ ಒಬ್ಬಿಬ್ಬರ ತಪ್ಪು ಕಲ್ಪನೆ ಹಾಗೂ ಭಯದಿಂದ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ

ರ್ಯಾಪರ್​ ನಿಕ್ಕಿ ಮಿನಾಜ್​ ಫೈಲ್​ ಫೋಟೊ

ರ್ಯಾಪರ್​ ನಿಕ್ಕಿ ಮಿನಾಜ್​ ಫೈಲ್​ ಫೋಟೊ

  • Share this:
    COVID-19 ಲಸಿಕೆಗಳ ಕುರಿತು ಅನೇಕ ತಪ್ಪುಸುದ್ದಿಗಳು ಹರಿದಾಡುತ್ತಿದ್ದು ಇದರಿಂದ ಜನರು coronavirus vaccine ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಹಾಕಿಸುವುದರಿಂದ ಸಾವು ಸಂಭವಿಸುತ್ತದೆ ಇಲ್ಲದಿದ್ದರೆ ಬೇರೆ ಬೇರೆ ರೋಗಗಳು ಬರುತ್ತವೆ ಎಂಬ ಮಿಥ್ಯ ಸುದ್ದಿಗಳು ಸಾಮಾಜಿಕ ತಾಣದಲ್ಲಿ ಇಂದಿಗೂ ಹರಿದಾಡುತ್ತಲೇ ಇವೆ. ಲಸಿಕೆ ಕುರಿತು ಕಟ್ಟುಕತೆಗಳಿಗೆ ಪ್ರಭಾವಿತರಾಗಿಯೇ ಜನರು ಕೋವಿಡ್ ಲಸಿಕೆಯ ಸಹವಾಸವೇ ಬೇಡವೆಂದು ದೂರ ಉಳಿದಿದ್ದಾರೆ. ಸರಕಾರ ಹಾಗೂ ಅನೇಕ ಸಂಘಸಂಸ್ಥೆಗಳು COVID-19 Vaccineಗೆ ಸಂಬಂಧಿಸಿದ ಜನರ ಭಯವನ್ನು ದೂರಮಾಡಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದರೂ ಒಬ್ಬಿಬ್ಬರ ತಪ್ಪು ಕಲ್ಪನೆ ಹಾಗೂ ಭಯದಿಂದ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

    ಇಂದಿನ ಲೇಖನದಲ್ಲಿ Rapper Nicki Minaj ಲಸಿಕೆಯ ಕುರತಾಗಿ ಮಾಡಿರುವ ಟ್ವೀಟ್ ಒಂದು ಷರವೇಗದಲ್ಲಿ ವೈರಲ್ ಆಗಿದ್ದು ಈ ಸುದ್ದಿ ಎಷ್ಟು ನಿಜ ಎಂಬುದು ಪರಿಶೀಲನೆಯಾಗಬೇಕಾಗಿದೆ. ಆಕೆ ಟ್ವೀಟ್ ಮಾಡಿರುವ ಸುದ್ದಿ ಆಕೆಯ ಸೋದರ ಸಂಬಂಧಿಯ ಸ್ನೇಹಿತನೊಬ್ಬ ಲಸಿಕೆಗಳನ್ನು ಪಡೆದ ನಂತರ ದುರ್ಬಲನಾದನು ಹಾಗೂ ಆತನ ವೃಷಣಗಳು ಊದಿಕೊಂಡವು ಎಂದಾಗಿದೆ. ಟ್ವಿಟ್ಟರ್ ಖಾತೆಯಲ್ಲಿ 22.6 ದಶಲಕ್ಷಕ್ಕೂ ಹೆಚ್ಚಿನ instagram followers ಹೊಂದಿರುವ ನಿಕಿಯ tweet ಸಿಕ್ಕಾಪಟ್ಟೆ viral ಆಗಿದೆ. ಈ ಕುರಿತು ತಜ್ಞರು ತಮ್ಮ ಅಧ್ಯಯನ ವಿಶ್ಲೇಷಣೆಗಳನ್ನು ಪ್ರಸ್ತುತಪಡಿಸಿದ್ದು ಲಸಿಕೆಗಳು ಅಡ್ಡಪರಿಣಾಮಗಳಿಗೆ ನ್ಯೂನತೆಗಳಿಗೆ ಕಾರಣವಾಗುತ್ತವೆ ಎಂಬುದರ ಕುರಿತು ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಪ್ರತಿಪಾದಿಸಿದ್ದಾರೆ.

    ನಿಕಿ ಮಾಡಿರುವ ಈ ಟ್ವೀಟ್ ಕುರಿತು ಆಕೆಯ ಪ್ರತಿನಿಧಿಯನ್ನು ಸಂಪರ್ಕಿಸಿದಾಗ ಇನ್ನಷ್ಟು ಮಾಹಿತಿ ದೊರೆಯಲಿಲ್ಲ ಎಂಬುದು ತಿಳಿದುಬಂದಿದೆ. ಆದರೆ ಲಸಿಕೆಗಳಿಂದ ವೃಷಣಗಳ ಊತ ಸಂಭವಿಸುತ್ತವೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದೇ ವೈದ್ಯರು ತಿಳಿಸಿದ್ದಾರೆ. ಈ ಕುರಿತು ಮಿಯಾಮಿಯ ಪುರುಷ ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸೆಯ ನಿರ್ದೇಶಕ ಡಾ. ರಂಜಿತ್ ರಾಮಸಾಮಿ ಅನಿಸಿಕೆ ವ್ಯಕ್ತಪಡಿಸಿದ್ದು ಲಸಿಕೆಗಳಿಂದ ಹೀಗೆ ಸಂಭವಿಸುತ್ತದೆ ಎಂಬುದನ್ನು ನಾವು ಮೊದಲ ಬಾರಿ ಕೇಳುತ್ತಿದ್ದೇವೆ ಹಾಗೂ ಈ ಹಿಂದೆ ಇಂತಹ ಘಟನೆಗಳು ಸಂಭವಿಸಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾದ ಕೊರೋನಾ ಭೀತಿ; ಮತ್ತಷ್ಟು ಟಫ್ ರೂಲ್ಸ್ ಜಾರಿ? ಬಿಬಿಎಂಪಿ ಚಿಂತನೆ

    ಊದಿಕೊಂಡ ವೃಷಣಗಳಿಗೆ ಕಾರಣವಾಗಿರುವುದು ಲೈಂಗಿಕವಾಗಿ ಹರಡುವ ಬ್ಯಾಕ್ಟೀರಿಯಾ ಕಾಯಿಲೆ ಆರ್ಕಿಟಿಸ್ ಆಗಿರಬಹುದು. ಆರ್ಕಿಟಿಸಿ ಹಾಗೂ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯು ಕೊರೋನಾ ವೈರಸ್‌ ಲಸಿಕೆಗಳಿಗೆ ಸಂಬಂಧಪಡದೇ ಇದ್ದರೂ ಕೋವಿಡ್-19 ನೊಂದಿಗೆ ಸಂಬಂಧ ಹೊಂದಿವೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ ಎಂದು ರಾಮಸ್ವಾಮಿ ತಿಳಿಸಿದ್ದಾರೆ.

    ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚಾಗುತ್ತಿವೆ ಕೋವಿಡ್‌ ಪ್ರಕರಣಗಳು; ಆತಂಕ ಬೇಡ, ಎಚ್ಚರಿಕೆ ಇರಲಿ ಎಂದ ತಜ್ಞರು..!

    ಲೈಂಗಿಕ ಅಪಸಾಮಾನ್ಯ ಕ್ರಿಯೆಯಲ್ಲಿ ಪರಿಣತಿ ಹೊಂದಿರುವ ಮೂತ್ರಶಾಸ್ತ್ರಜ್ಞ, ಡಾ. ಆಶ್ಲೇ ವಿಂಟರ್ ಹೇಳಿರುವಂತೆ ಲಸಿಕೆಗಳು ಪುರುಷರ ಲೈಂಗಿಕ ಕ್ರಿಯೆ ಅಥವಾ ವೃಷಣಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂಬುದಕ್ಕೆ ಆಧಾರಗಳಿಲ್ಲ ಎಂದು ತಿಳಿಸಿದ್ದಾರೆ. ನೂರಾರು ಮಿಲಿಯನ್ ಪುರುಷರು ಲಸಿಕೆಯನ್ನು ಪಡೆದುಕೊಂಡಿದ್ದು ಅವರು ಯಾರೂ ಈ ಕುರಿತು ವರದಿ ಮಾಡಿಲ್ಲ ಎಂದು ತಿಳಿಸಿದ್ದಾರೆ. ಇದಲ್ಲದೆ, ತಜ್ಞರು COVID-19 ಲಸಿಕೆಗಳು ಮತ್ತು ಪುರುಷ ಬಂಜೆತನ ಅಥವಾ ಕಡಿಮೆ ವೀರ್ಯ ಎಣಿಕೆಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
    Published by:Sharath Sharma Kalagaru
    First published: