ಶ್ವಾಸಕೋಶದ ಕ್ಯಾನ್ಸರ್(Lung Cancer) ಇತ್ತೀಚಿನ ದಿನಗಳಲ್ಲಿ ಧೂಮಪಾನ(Smoking) ಮಾಡದೇ ಇರುವವರಲ್ಲಿಯೂ ಪತ್ತೆಯಾಗುತ್ತಿದ್ದು ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲಾಗಿದೆ. ಶ್ವಾಸಕೋಶದ ಕ್ಯಾನ್ಸರ್ ಧೂಮಪಾನ ಮಾಡದೇ ಇರುವವರಲ್ಲಿ ಹೇಗೆ ಕಂಡುಬರುತ್ತದೆ ಎಂಬುದನ್ನು ಪತ್ತೆಹಚ್ಚಲು ಜಿನೋಮಿಕ್ ವಿಶ್ಲೇಷಣೆ ನಡೆಸಿದಾಗ ದೇಹದಲ್ಲಿ ನೈಸರ್ಗಿಕ ಪ್ರಕ್ರಿಯೆಗಳಿಂದ ಸಂಭವಿಸುವ ರೂಪಾಂತರಗಳ ಶೇಖರಣೆಯೇ ಶ್ವಾಸಕೋಶದ ಕ್ಯಾನ್ಸರ್ಗೆ ಕಾರಣ ಎಂಬುದನ್ನು ಪತ್ತೆಮಾಡಲಾಗಿದೆ.ಈ ಅಧ್ಯಯನವನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ (NIH) (ರಾಷ್ಟ್ರೀಯ ಆರೋಗ್ಯ ಸಂಸ್ಥೆ) ನ ಭಾಗವಾಗಿರುವ ಯುಎಸ್ ನ್ಯಾಷನಲ್ ಕ್ಯಾನ್ಸರ್ (ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ) (NCI) ಸಂಶೋಧಕರ ಅಂತಾರಾಷ್ಟ್ರೀಯ ತಂಡಗಳ ನೇತೃತ್ವದಲ್ಲಿ ಅಧ್ಯಯನ ನಡೆಸಲಾಗಿದೆ.
ನೇಚರ್ ಜೆನೆಟಿಕ್ಸ್ನಲ್ಲಿ ಈ ಪತ್ತೆಹಚ್ಚವಿಕೆಗಳನ್ನು ಪ್ರಕಟಿಸಲಾಗಿದ್ದು ಧೂಮಪಾನ ಮಾಡದೇ ಇರುವವರಲ್ಲಿ ಶ್ವಾಸಕೋಶದ ಕ್ಯಾನ್ಸರ್ನ ಮೂರು ಆಣ್ವಿಕ ಉಪಪ್ರಕಾರಗಳನ್ನು ವಿವರಿಸುತ್ತದೆ. ಪ್ರಕಟಿಸಿರುವ ಅಂಶಗಳು ಧೂಮಪಾನ ಮಾಡದೇ ಇರುವವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೇಗೆ ಕಂಡುಬರುತ್ತದೆ ಹಾಗೂ ನಿಖರ ಕ್ಲಿನಿಕಲ್ ಚಿಕಿತ್ಸೆಯನ್ನು ಇಂತಹ ರೋಗಿಗಳಿಗೆ ಹೇಗೆ ಮಾರ್ಗದರ್ಶನ ನೀಡಬಹುದೆಂಬ ಸಲಹೆ ಒದಗಿಸಿದೆ.
ತಂಡವು ಅಧ್ಯಯನಕ್ಕಾಗಿ 232 ಧೂಮಪಾನ ಮಾಡದೇ ಇರುವ ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಿಂದ ಗೆಡ್ಡೆಯ ಅಂಗಾಂಶದಲ್ಲಿನ ಜಿನೋಮಿಕ್ ಬದಲಾವಣೆಗಳನ್ನು ನಿರೂಪಿಸಲು ಹಾಗೂ ಸಾಮಾನ್ಯ ಅಂಗಾಂಶಗಳ ಹೊಂದಾಣಿಕೆ ಮಾಡಲು ಸಂಶೋಧಕರು ಸಂಪೂರ್ಣ ಜಿನೋಮ್ ಸೀಕ್ವೆನ್ಸಿಂಗ್ ಉಪಯೋಗಿಸಿದರು. ತಮ್ಮ ಕ್ಯಾನ್ಸರ್ ಕಾಯಿಲೆಗಳಿಗೆ ಈ ರೋಗಿಗಳು ಚಿಕಿತ್ಸೆ ಪಡೆದಿರಲಿಲ್ಲ.
ದೇಹದೊಳಗೆ ನೈಸರ್ಗಿಕವಾಗಿ ನಡೆಯುವ ಪ್ರಕ್ರಿಯೆಯಾಗಿರುವ ಅಂಗಗಳ ಹಾನಿಗೆ ಸಂಬಂಧಿಸಿದ ಅನುವಂಶಿಕ ಬದಲಾವಣೆಗೆ ಕಾರಣವಾಗಿರುವ ಗೆಡ್ಡೆಯ ಜೀನೊಮ್ಗಳು ಧೂಮಪಾನ ಮಾಡದೇ ಇರುವವರಲ್ಲಿ ಕಂಡುಬಂದಿದೆ ಎಂಬುದು ಈ ಅಧ್ಯಯನಗಳಿಂದ ತಿಳಿದು ಬಂದಿದೆ.
ಅಮೆರಿಕವೊಂದರಲ್ಲೇ ಧೂಮಪಾನ ಮಾಡದೇ ಇರುವವರಲ್ಲಿ 10%ನಿಂದ 20%ನಷ್ಟು ಜನರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪತ್ತೆಯಾಗಿದ್ದು, ಬೇರೆ ಧೂಮಪಾನಿಗಳು ಪರಿಸರಕ್ಕೆ ಹೊರಬಿಟ್ಟಿರುವ ಹೊಗೆಯ ಕಾರಣದಿಂದ ಇವರಿಗೆ ಕ್ಯಾನ್ಸರ್ ಪತ್ತೆಯಾಗಿರುವುದು ತಿಳಿದುಬಂದಿದೆ.
ಧೂಮಪಾನ ಮಾಡದೇ ಇರುವವರಲ್ಲಿ ಶ್ವಾಸಕೋಶದ ಲಕ್ಷಣಗಳೇನು?
ಧೂಮಪಾನ ಮಾಡುವವರು ಹಾಗೂ ಮಾಡದವರಲ್ಲಿ ಕ್ಯಾನ್ಸರ್ ಲಕ್ಷಣಗಳು ಒಂದೇ ರೀತಿ ಆಗಿರುತ್ತವೆ. ಕೆಮ್ಮುವಾಗ ರಕ್ತ, ಸುಸ್ತಾಗುವುದು, ಎದೆ ನೋವು, ಉಬ್ಬಸ ಇಲ್ಲದಿದ್ದರೆ ಉಸಿರಾಟ ತೊಂದರೆ ಸಾಮಾನ್ಯವಾಗಿರುತ್ತದೆ.
ಈ ರೋಗಲಕ್ಷಣಗಳು ಇತರ ಕಾಯಿಲೆಗಳಲ್ಲಿಯೂ ಕಂಡುಬರಬಹುದಾಗಿದ್ದು ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದು ಪ್ರಮುಖವಾಗಿದೆ.
ಶ್ವಾಸಕೋಶದ ಕ್ಯಾನ್ಸರ್ ಉಂಟಾಗದಂತೆ ತಡೆಗಟ್ಟುವ ಪರಿಹಾರಗಳೇನು?
ಧೂಮಪಾನಿಗಳಿಂದ ದೂರ ಇರುವುದು, ವಾಯು ಮಾಲಿನ್ಯದಿಂದ ದೂರ ಉಳಿಯುವುದು ಮೊದಲಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಅಪಾಯಗಳನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
ವೈಯಕ್ತಿಕ ಅಥವಾ ಕುಟುಂಬದಲ್ಲಿ ಯಾರಿಗಾದರೂ ಶ್ವಾಸಕೋಶದ ಕ್ಯಾನ್ಸರ್ ಇದ್ದಲ್ಲಿ ಅದನ್ನು ಬದಲಾಯಿಸಲಾಗುವುದಿಲ್ಲ. ಇಂತಹ ವೇಳೆ ನೀವು ಹೇಗೆ ಮುತುವರ್ಜಿ ವಹಿಸಿಕೊಳ್ಳಬಹುದು ಎಂಬುದನ್ನು ಕುರಿತು ವೈದ್ಯರೊಂದಿಗೆ ಸಂವಹನ ನಡೆಸಿ. ಧೂಮಪಾನ ಮಾಡದ ಜನರಲ್ಲಿ ಶ್ವಾಸಕೋಶದ ಕ್ಯಾನ್ಸರ್ಗೆ ಕಾರಣ ಎಪಿಡರ್ಮಲ್ ಗ್ರೋಥ್ ಫ್ಯಾಕ್ಟರ್ ರಿಸೆಪ್ಟರ್ (ಇಜಿಎಫ್ಆರ್) ಜೀನ್ ಅಥವಾ ಇತರ ವಂಶವಾಹಿಗಳಲ್ಲಿನ ಡಿಎನ್ಎ ರೂಪಾಂತರವಾಗಿರಬಹುದು. ಇಂತಹ ರೂಪಾಂತರಗಳಿಂದ ಉಂಟಾಗುವ ಕ್ಯಾನ್ಸರ್ಗೆ ಚಿಕಿತ್ಸೆ ನೀಡಬಹುದು ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.
ಧೂಮಪಾನ ಮಾಡದೇ ಇರುವವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಭಿನ್ನವಾಗಿದೆಯೇ?
ಧೂಮಪಾನ ಮಾಡದೇ ಇರುವ ಜನರಲ್ಲಿ ಕಂಡುಬರುವ 50% - 60%ನಷ್ಟು ಕ್ಯಾನ್ಸರ್ ಶ್ವಾಸಕೋಶದ ಸಣ್ಣ ಗಾಳಿ ಚೀಲದಲ್ಲಿ ಹಾಗೂ ಜೀವಕೋಶದಲ್ಲಿ ಆರಂಭವಾಗುವುದಾಗಿದೆ. ಸುಮಾರು 10% ರಿಂದ 20% ಸ್ಕ್ವಾಮಸ್ ಸೆಲ್ ಕಾರ್ಸಿನೋಮಾಗಳು (ಶ್ವಾಸಕೋಶದ ಒಳಭಾಗದಲ್ಲಿರುವ ತೆಳುವಾದ, ಸಮತಟ್ಟಾದ ಕೋಶಗಳಲ್ಲಿ ರೂಪುಗೊಳ್ಳುವ ಕ್ಯಾನ್ಸರ್). ಕೆಲವು (6% ರಿಂದ 8%) ಸಣ್ಣ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್, ಮತ್ತು ಉಳಿದವು ಇತರ ರೀತಿಯ ಶ್ವಾಸಕೋಶದ ಕ್ಯಾನ್ಸರ್ಗಳಾಗಿವೆ.
ಅಡೆನೊಕಾರ್ಸಿನೋಮಾ, ಧೂಮಪಾನಿಗಳಲ್ಲದವರಲ್ಲಿ ಪತ್ತೆಯಾಗುವ ಅತ್ಯಂತ ಸಾಮಾನ್ಯ ಶ್ವಾಸಕೋಶದ ಕ್ಯಾನ್ಸರ್, ಶ್ವಾಸಕೋಶದ ಹೊರ ಭಾಗಗಳಲ್ಲಿ, ಶ್ವಾಸಕೋಶವನ್ನು ಉತ್ಪಾದಿಸುವ ಜೀವಕೋಶಗಳಲ್ಲಿ, ಶ್ವಾಸನಾಳ ಎಂದು ಕರೆಯಲ್ಪಡುವ ಸಣ್ಣ ಶ್ವಾಸನಾಳದಲ್ಲಿ ಆರಂಭವಾಗುತ್ತದೆ. ಅಡೆನೊಕಾರ್ಸಿನೋಮಾ ಇತರ ರೀತಿಯ ಶ್ವಾಸಕೋಶದ ಕ್ಯಾನ್ಸರ್ಗಳಿಗಿಂತ ವಿಭಿನ್ನ ಆಕಾರ ಹೊಂದಿದೆ ಎಂದು ಯೇಲ್ ಮೆಡಿಸಿನ್ ಥೋರಾಸಿಕ್ ಸರ್ಜನ್ ಡೇಲ್ ಬೋಫಾ ಹೇಳುತ್ತಾರೆ.
ಧೂಮಪಾನ ಮಾಡದೇ ಇರುವವರಲ್ಲಿ ಕ್ಯಾನ್ಸರ್ ನಿಧಾನವಾಗಿ ರೂಪುಗೊಳ್ಳುತ್ತವೆ. ದೇಹದ ಇತರ ಭಾಗಗಳಿಗೆ ಅವು ಹರಡುವ ಸಾಧ್ಯತೆ ಕಡಿಮೆ ಇರುತ್ತದೆ ಒಮ್ಮೊಮ್ಮೆ ಶಸ್ತ್ರಚಿಕಿತ್ಸೆ ಮಾಡಿದ ನಂತರವೂ ಕ್ಯಾನ್ಸರ್ ಮರುಕಳಿಸುವ ಸಾಧ್ಯತೆ ಇದೆ.
ಧೂಮಪಾನ ಮಾಡದೇ ಇರುವವರಲ್ಲಿ ಕ್ಯಾನ್ಸರ್ ಉಂಟಾಗಲು ನಿರ್ದಿಷ್ಟ ಕಾರಣ ಇಲ್ಲದೇ ಇರಬಹುದು. ಆದರೆ ರೋಗಕ್ಕೆ ಕಾರಣವಾಗುವ ಅಂಶಗಳ ಸಂಯೋಜನೆ ಅಧಿಕವಾಗಿರುತ್ತದೆ. ಸೊಮ್ಯಾಟಿಕ್ ರೂಪಾಂತರ ಎಂದು ಕರೆಯಲಾದ ಟ್ಯೂಮರ್ ರೂಪಾಂತರ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗಿದೆ. ಧೂಮಪಾನ ಮಾಡದೇ ಇರುವವರಲ್ಲಿ ರೂಪಾಂತರಗಳು ಅಥವಾ ಅಸಹಜತೆಗಳು ಶ್ವಾಸಕೋಶದ ಕ್ಯಾನ್ಸರ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ಹಲವಾರು ಅಧ್ಯಯನಗಳಿಂದ ತಿಳಿದು ಬಂದಿದೆ.
ಧೂಮಪಾನಿಗಳಲ್ಲದವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕಂಡುಬರಲು ರೇಡಾನ್ ಅನಿಲಕ್ಕೆ ಒಡ್ಡಿಕೊಳ್ಳುವುದು ಕಾರಣವಾಗಿದೆ. ಈ ಅನಿಲಗಳು ಅಗೋಚರವಾಗಿದ್ದು ವಾಸನೆ ಹೊಂದಿರುವುದಿಲ್ಲ. ಯುರೇನಿಯಂ ನಿಕ್ಷೇಪಗಳನ್ನು ಹೊಂದಿರುವ ಮಣ್ಣಿನಲ್ಲಿ ನಿರ್ಮಿತವಾದ ಕೆಲವು ಮನೆಗಳಲ್ಲಿ ಕೇಂದ್ರೀಕೃತ ಪ್ರಮಾಣದಲ್ಲಿ ಕಂಡುಬಂದಿದೆ. ನಿಮ್ಮ ಮನೆಯಲ್ಲಿ ಈ ಅನಿಲದ ಪ್ರಮಾಣ ಪರೀಕ್ಷಿಸಬಹುದಾಗಿದೆ.
ಪರೋಕ್ಷ ಧೂಮಪಾನ:
ಧೂಮಪಾನ ಮಾಡಿದವರಿಂದಲೂ ಧೂಮಪಾನ ಮಾಡದೇ ಇರುವವರಲ್ಲಿ ಕ್ಯಾನ್ಸರ್ ಅಪಾಯಗಳು ಹೆಚ್ಚಿದ್ದು ಅಮೆರಿಕದಲ್ಲಿ ಇಂತಹ ಸಾವುಗಳು ಅಂದಾಜು 7,000ದಷ್ಟಿದೆ.
ಕೈಗಾರಿಕೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು:
ಕೈಗಾರಿಕೆಗಳಲ್ಲಿ ಆಸ್ಬೆಸ್ಟೋಸ್, ಭಾರ ಲೋಹಗಳು ಮತ್ತು ಡೀಸೆಲ್ ಒಡ್ಡುವಿಕೆಗಳಿಂದ ಕ್ಯಾನ್ಸರ್ ಉಂಟಾಗುವ ಅಪಾಯಗಳು ಹೆಚ್ಚಾಗಿರುತ್ತದೆ.
ವಾಯುಮಾಲಿನ್ಯ:
ಒಳಾಂಗಣ ಹಾಗೂ ಹೊರಾಂಗಣ ವಾಯುಮಾಲಿನ್ಯಗಳಿಂದಲೂ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುತ್ತವೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ.
ಧೂಮಪಾನ ಮಾಡದೇ ಇರುವವರಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆಗಳೇನು?
ಧೂಮಪಾನ ಮಾಡದೇ ಇರುವವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪತ್ತೆಹಚ್ಚಿದಾಗ ಅಪಾಯಕ್ಕೆ ಒಳಗಾಗಿರುವ ಗಡ್ಡೆ ತೆಗೆದುಹಾಕುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಧೂಮಪಾನ ಮಾಡದೇ ಇರುವವರಲ್ಲಿ ಶಸ್ತ್ರಕ್ರಿಯೆಗಳನ್ನು ಸುಲಭವಾಗಿ ನಡೆಸಬಹುದಾಗಿದ್ದು ಉತ್ತಮ ಶ್ವಾಸಕೋಶದ ಕಾರ್ಯ ಹೊಂದಿರುತ್ತಾರೆ.
ಕ್ಯಾನ್ಸರ್ ಪತ್ತೆಯಾದೊಡನೆ ಅದಕ್ಕೆ ಚಿಕಿತ್ಸೆ ನೀಡುವುದು ಉತ್ತಮ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಕ್ಯಾನ್ಸರ್ ಉಂಟಾದ ಪ್ರದೇಶ ಹಾಗೂ ಸಮೀಪದ ಅಂಗಾಂಶಗಳನ್ನು ತೆಗೆದುಹಾಕಲಾಗುತ್ತದೆ. ಕ್ಯಾನ್ಸರ್ ಅಂಶಗಳು ದುಗ್ಧರಸ ಗ್ರಂಥಿಗಳ ಮೂಲಕ ರವಾನೆಯಾಗುವುದರಿಂದ ಸುತ್ತಲಿನ ಅಂಗಾಂಶಗಳನ್ನು ತೆಗೆದುಹಾಕಲಾಗುತ್ತದೆ. ನಿರ್ದಿಷ್ಟ ಚಿಕಿತ್ಸೆ ಹಾಗೂ ಕೀಮೋಥೆರಪಿಯಂತಹ ಇನ್ನಷ್ಟು ಚಿಕಿತ್ಸೆಯಿಂದ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎನ್ನುತ್ತಾರೆ ವೈದ್ಯರು.
ಧೂಮಪಾನ ಮಾಡದೇ ಇರುವವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅಂಶಗಳು ನಿಧಾನವಾಗಿ ಪತ್ತೆಯಾಗುವುದರಿಂದ ಆರಂಭಿಕ ಹಂತದಲ್ಲಿ ಇದು ಗೋಚರವಾಗುವುದಿಲ್ಲ. ಎಕ್ಸರೇ ಸಿಟಿ ಸ್ಕ್ಯಾನಿಂಗ್ ಮೊದಲಾದ ಪರೀಕ್ಷೆಗಳಿಂದ ಶ್ವಾಸಕೋಶದ ಕ್ಯಾನ್ಸರ್ ಅಂಶಗಳನ್ನು ಪತ್ತೆಹಚ್ಚಬಹುದಾಗಿದೆ. ಕುಟುಂಬದಲ್ಲಿ ಯಾರಾದರೂ ಸದಸ್ಯರು ಕ್ಯಾನ್ಸರ್ ಹೊಂದಿದ್ದರೆ ಇದು ಮತ್ತೊಬ್ಬರಿಗೆ ಹರಡುವ ಸಾದ್ಯತೆ ಇರುತ್ತದೆ. ಹಾಗಾಗಿ ಮನೆಯ ಇತರ ಸದಸ್ಯರು ವೈದ್ಯರನ್ನು ನಿಯಮಿತವಾಗಿ ಭೇಟಿಯಾಗಬೇಕು ಹಾಗೂ ಕ್ಯಾನ್ಸರ್ ಪತ್ತೆಹಚ್ಚುವಿಕೆ ಪರೀಕ್ಷೆಗಳನ್ನು ನಡೆಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ