Explained: ಈ ದೇಶದಲ್ಲಿ ಜನಗಳಿಗಿಂತ ದನ- ಕರುಗಳೇ ಜಾಸ್ತಿ: ಜಾನುವಾರು ಸಾಕುವುದು ಬೇಡ ಎಂದ ನೆದರ್‌ಲ್ಯಾಂಡ್

ಸರ್ಕಾರ ರೈತರ ಮೇಲೆ ಒತ್ತಡ ಹೇರುತ್ತಿದೆ. ಅತಿದೊಡ್ಡ ಮಾಂಸ ರಫ್ತುದಾರ ದೇಶವಾಗಿರುವ ನೆದರ್‌ಲ್ಯಾಂಡ್ ಮಾಂಸಕ್ಕಾಗಿ ಸುಮಾರು 100 ದಶಲಕ್ಷಕ್ಕೂ ಹೆಚ್ಚಿನ ಪ್ರಾಣಿಗಳನ್ನು ಹೊಂದಿದೆ.

Photo:Google

Photo:Google

 • Share this:
  ಐರೋಪ್ಯ ರಾಷ್ಟ್ರಗಳ ಅತಿದೊಡ್ಡ ಮಾಂಸ ರಫ್ತುದಾರ ಎಂದೆನಿಸಿರುವ ನೆದರ್‌ಲ್ಯಾಂಡ್ಸ್ ಯುರೋಪ್‌ನ ಅತಿದೊಡ್ಡ ಜಾನುವಾರ ಉದ್ಯಮಗಳಲ್ಲೊಂದು ಎಂಬ ಖ್ಯಾತಿಯನ್ನು ಗಳಿಸಿದೆ. 100 ಮಿಲಿಯನ್‌ಗಿಂತಲೂ ಹೆಚ್ಚಿನ ದನಕರುಗಳು, ಕೋಳಿಗಳು ಹಾಗೂ ಹಂದಿಗಳನ್ನು ಹೊಂದಿದೆ. ಆದರೆ ಈಗ ಅದೇ ದೇಶ ಜಾನುವಾರುಗಳ ಸಂಖ್ಯೆಯಲ್ಲಿ 30% ಕಡಿತಗೊಳಿಸುವ ಮೂಲಕ ಕೆಲವೊಂದು ಅಮೂಲಾಗ್ರ ಪ್ರಸ್ತಾಪಗಳನ್ನು ಪರಿಗಣಿಸಿದ್ದು ರೈತರು ತಮ್ಮ ಕೃಷಿ ಭೂಮಿಯನ್ನು ಹಾಗೂ ವ್ಯಾಪಾರಗಳ ಹಕ್ಕನ್ನು ದೇಶಕ್ಕೆ ಮಾರಾಟ ಮಾಡುವಂತೆ ಒತ್ತಡ ಹೇರುತ್ತಿದೆ.

  ಪ್ರಸ್ತಾವನೆ ಏನಾಗಿದೆ?

  ನೆದರ್‌ಲ್ಯಾಂಡ್‌ನ ಹಣಕಾಸು ಹಾಗೂ ಕೃಷಿ ಸಚಿವಾಲಯದ ಕಾರ್ಮಿಕರು ಜಾನುವಾರುಗಳ ಸಂಖ್ಯೆಯಲ್ಲಿ ಮೂರನೇ ಒಂದು ಭಾಗದಷ್ಟು ಇಳಿಕೆ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿದ್ದು ಇದರಿಂದಾಗಿ ಸರ್ಕಾರ ರೈತರ ಮೇಲೆ ಒತ್ತಡ ಹೇರುತ್ತಿದೆ. ಅತಿದೊಡ್ಡ ಮಾಂಸ ರಫ್ತುದಾರ ದೇಶವಾಗಿರುವ ನೆದರ್‌ಲ್ಯಾಂಡ್ ಮಾಂಸಕ್ಕಾಗಿ ಸುಮಾರು 100 ದಶಲಕ್ಷಕ್ಕೂ ಹೆಚ್ಚಿನ ಪ್ರಾಣಿಗಳನ್ನು ಹೊಂದಿದೆ.

  ಜಾನುವಾರುಗಳ ಸಂಖ್ಯೆಯಲ್ಲಿ ಇಳಿಕೆ ಮಾಡುವುದರಿಂದ ಉಂಟಾಗುವ ನಷ್ಟವನ್ನು ಸರಿದೂಗಿಸುವುದಕ್ಕಾಗಿ ರೈತರ ವ್ಯಾಪಾರ ಹಕ್ಕು ಹಾಗೂ ಭೂಮಿಯನ್ನು ರಾಜ್ಯಕ್ಕೆ ಮಾರಾಟಮಾಡುವಂತೆ ಒತ್ತಡ ಹೇರಲಾಗಿದೆ ಎಂದು ಗಾರ್ಡಿಯನ್ ವರದಿ ಮಾಡಿದೆ.

  ಹೆಚ್ಚು ಪ್ರಮಾಣದ ಪ್ರಾಣಿಗಳು ದೇಶದಲ್ಲಿ ಇರುವುದರಿಂದ ಮಾನವನ ಆರೋಗ್ಯ ಹಾಗೂ ಪರಿಸರದ ಮೇಲೆ ಉಂಟಾಗುವ ಹಾನಿಯ ಕುರಿತು ಚರ್ಚೆಗಳು ನಡೆಯುತ್ತಿದೆ ಇದರೊಂದಿಗೆ 2007-10ರಲ್ಲಿ ಹೆಚ್ಚು ಸಂಖ್ಯೆಯಲ್ಲಿದ್ದ ಪ್ರಾಣಿಗಳಿಗೆ ಬಂದ ಕ್ಯೂ ಸಾಂಕ್ರಾಮಿಕ ಜ್ವರದ ನಂತರ ಹೆಚ್ಚು ಪ್ರಾಣಿಗಳನ್ನು ಸಾಕಬಾರದು ಎಂಬ ಒಮ್ಮತಕ್ಕೆ ಬರಲಾಗಿದೆ ಎನ್ನಲಾಗಿದೆ.

  ಈ ಯೋಜನೆಯ ಹಿಂದಿರುವ ಉದ್ದೇಶವೇನು?

  ಹೆಚ್ಚುವರಿ ನೈಟ್ರೋಜನ್ ಹೊರಸೂಸುವಿಕೆ ಪರಿಣಾಮಗಳಿಂದ ನೆದರ್‌ಲ್ಯಾಂಡ್ ಬಳಲುತ್ತಿದ್ದು ಇದರಿಂದ ತೀವ್ರ ಹವಾಮಾನ ಬಿಕ್ಕಟ್ಟನ್ನು ದೇಶವು ಎದುರಿಸುತ್ತಿದೆ. ಜಾನುವಾರಿನ ಸಗಣಿಯು ಮೂತ್ರದೊಂದಿಗೆ ಸೇರಿಕೊಂಡಾಗ ಸಾರಜನಕ ಸಂಯುಕ್ತವಾಗಿರುವ ಅಮೋನಿಯಾದ ಬಿಡುಗಡೆ ಆಗುತ್ತದೆ. ಈ ಅಮೋನಿಯಾವು ಪರಿಸರಕ್ಕೆ ವಿನಾಶಕಾರಿಯಾಗಿದ್ದು ಕೃಷಿಯ ಮೂಲಕ ಜಲಸಂಪನ್ಮೂಲಗಳನ್ನು ಪ್ರವೇಶಿಸುವ ಅಪಾಯವಿದೆ. ಹಾಗೂ ನೀರಿನಲ್ಲಿರುವ ಆಮ್ಲಜನಕದ ಕ್ಷೀಣತೆಗೆ ಕಾರಣವಾಗಿರುವ ಪಾಚಿಗೆ ಇದೇ ಅಮೋನಿಯಾ ಕಾರಣ ಎಂಬುದು ಅಲ್ಲಿನ ಪರಿಸರವಾದಿಗಳ ಅಭಿಪ್ರಾಯವಾಗಿದೆ.

  ಇದೇ ಸಂಬಂಧವಾಗಿ ಎಲ್ಸೆವಿಯರ್‌ನಲ್ಲಿ ಪ್ರಕಟಗೊಂಡ ಅಧ್ಯಯನದ ಪ್ರಕಾರ ಜಾನುವಾರಿನಿಂದ ಉತ್ಪಾದನೆಯಾದ ಗೊಬ್ಬರವು ಅಂತರ್ಜಲದಲ್ಲಿ ನೈಟ್ರೇಟ್ ಮಾಲಿನ್ಯಕ್ಕೆ ಕಾರಣವಾಗಿದೆ ಎಂಬ ಅಂಶವನ್ನು ಹೊರಹಾಕಿದೆ. ಈ ಪತ್ರಿಕೆಯಲ್ಲಿ ತಿಳಿಸಿರುವ ಮಾಹಿತಿಗಳ ಪ್ರಕಾರ ಜಾನುವಾರಿನ ಉತ್ಪಾದನೆಯು ಮಣ್ಣಿನ ಸಾರಜನಕದ ಮೇಲೆ ಪರಿಣಾಮ ಉಂಟಾಗಿ ನೈಟ್ರೇಟ್ ರೂಪದಲ್ಲಿ ಇದು ಅಂತರ್ಜಲವನ್ನು ಪ್ರವೇಶಿಸುತ್ತದೆ. ಈ ಮಿತಿಮೀರಿದ ಪರಿಮಾಣವು ಕುಡಿಯುವ ನೀರಿನ ಉತ್ಪಾದನೆ ಹಾಗೂ ನೀರಿನ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ.

  ಮಣ್ಣು ಮತ್ತು ಅಂತರ್ಜಲದಿಂದ ಪೋಷಕಾಂಶಗಳ ಹರಿವು ಮತ್ತು ಸೋರಿಕೆ ಯುಟ್ರೊಫಿಕೇಶನ್‌ಗೆ ಕಾರಣವಾಗುತ್ತದೆ ಎಂದು ಅಧ್ಯಯನವು ತಿಳಿಸಿದ್ದು ಮರಳು ಪ್ರದೇಶಗಳಲ್ಲಿ ನೈಟ್ರೋಜನ್ ಸಾಂದ್ರತೆಯು 50-65% ರಷ್ಟಿದ್ದು ಮಣ್ಣಿನ ಪ್ರದೇಶಗಳಲ್ಲಿ 40-60% ರಷ್ಟಿದೆ.

  ಇದಲ್ಲದೆ, ಆಮ್ಲಜನಕ ಮತ್ತು ಯುಟ್ರೋಫಿಕೇಶನ್ ಮೂಲಕ ಸಾರಜನಕ ಸಂಯುಕ್ತಗಳ ಶೇಖರಣೆಯು ಭೂಮಿಯ ಪರಿಸರ ವ್ಯವಸ್ಥೆಗಳ ಮೇಲೂ ಪರಿಣಾಮ ಬೀರಬಹುದು. ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ನೆದರ್‌ಲ್ಯಾಂಡ್‌ನಲ್ಲಿ ಜಾನುವಾರು ಉತ್ಪಾದನೆಯು ಸಾರಜನಕ ಶೇಖರಣೆಗೆ 40% ದಷ್ಟು ಕೊಡುಗೆ ನೀಡುತ್ತಿದ್ದು ಅಮೋನಿಯಾ ಹೊರಸೂಸಿವಿಕೆ ಇದರಲ್ಲಿ ಅಪಾರ ಪ್ರಮಾಣದಲ್ಲಿದೆ. ಹಾಗಾಗಿ ಪಶುಸಂಗೋಪನೆಯನ್ನು ಇಳಿಸುವುದರಿಂದ ಈ ಮಟ್ಟವನ್ನು 15% ಕ್ಕೆಇಳಿಸಬಹುದು ಎಂಬುದು ಇಲ್ಲಿನ ಅಧ್ಯಯನಕಾರರ ಲೆಕ್ಕಾಚಾರವಾಗಿದೆ.

  ನೆದರ್‌ಲ್ಯಾಂಡ್‌ನಲ್ಲಿ ಬಿಕ್ಕಟ್ಟು ಎಷ್ಟು ಗಂಭೀರವಾಗಿದೆ?

  ನೈಟ್ರೋಜನ್ ಬಿಕ್ಕಟ್ಟು ಎಂಬ ಗಂಭೀರ ಸಮಸ್ಯೆಯನ್ನು ಜಾನುವಾರು ಸಾಕಣೆಯು ಹೊಂದಿದ್ದು ಇದೊಂದು ಯುದ್ಧವಾಗಿ ಮಾರ್ಪಾಡಾಗಿತ್ತು. ಮೇ 2019 ರಲ್ಲಿ, ನೆದರ್‌ಲ್ಯಾಂಡ್ಸ್‌ನ ಅತ್ಯುನ್ನತ ಆಡಳಿತ ಸಂಸ್ಥೆಯಾಗಿರುವ ಕೌನ್ಸಿಲ್ ಆಫ್ ಸ್ಟೇಟ್‌ನ ಡಚ್ ಆಡಳಿತಾತ್ಮಕ ನ್ಯಾಯಾಲಯವು, ದುರ್ಬಲ ನೈಸರ್ಗಿಕ ಪ್ರದೇಶಗಳಲ್ಲಿ ಹೆಚ್ಚುವರಿ ಸಾರಜನಕವನ್ನು ಕಡಿಮೆ ಮಾಡಲು ಸರಕಾರವು EU ಕಾನೂನನ್ನು ಮುರಿಯುತ್ತಿದೆ ಎಂದು ತೀರ್ಪು ನೀಡಿತು. ಇದರ ನಂತರ, ಕೃಷಿ, ಪ್ರಕೃತಿ ಮತ್ತು ಆಹಾರ ಗುಣಮಟ್ಟ ಸಚಿವಾಲಯವು ಬಿಕ್ಕಟ್ಟಿಗೆ ಪರಿಹಾರಗಳನ್ನು ಪ್ರಸ್ತಾಪಿಸಲು ಬಾಹ್ಯ ಸಂಸ್ಥೆಯನ್ನು ನೇಮಿಸಿತು. ಇದರ ಪರಿಣಾಮವಾಗಿ, ಡಿಸೆಂಬರ್ 17, 2020 ರಂದು, ನೈಟ್ರೋಜನ್ ಹೊರಸೂಸುವಿಕೆಯನ್ನು ತಡೆಯುವ ಉದ್ದೇಶ ಹೊಂದಿರುವ ಹೊಸ ಕಾನೂನನ್ನು ಡಚ್ ಸಂಸತ್ತು ಅನುಮೋದಿಸಿತು.

  ಹೊಸ ಕಾನೂನು ಮೂರು ಗುರಿಗಳನ್ನು ಹೊಂದಿದ್ದು ಸಾರಜನಕ ಸೂಕ್ಷ್ಮ ಪ್ರದೇಶಗಳು 2000 ದಲ್ಲಿ 40% 2025 ರಲ್ಲಿ 50% ಹಾಗೂ 2030 ರಲ್ಲಿ 74% ಹೀಗೆ 2035 ರಲ್ಲಿ ನೈಟ್ರೋಜನ್ ಮಟ್ಟವು ನಿರ್ಣಾಯಕ ನಿಕ್ಷೇಪ ಮೌಲ್ಯಕ್ಕಿಂತ ಕೆಳಗಿರಬೇಕೆಂಬ ಯೋಜನೆಯನ್ನು ಹಮ್ಮಿಕೊಂಡಿದೆ. 2035 ರಲ್ಲಿ ಸಾರಜನಕ ಬಿಡುಗಡೆಗೆ ಕಡಿವಾಣ ಹಾಕಬೇಕೆಂಬ ಗುರಿಯನ್ನು ಹಾಕಿಕೊಂಡಿದ್ದು ನೈಟ್ರೋಜನ್ ಬಿಕ್ಕಟ್ಟನ್ನು ನಿಭಾಯಿಸುವ ಯೋಜನೆಯಾಗಿ ನೆದರ್‌ಲ್ಯಾಂಡ್ ಈ ಕಾನೂನನ್ನು ಜಾರಿಗೆ ತಂದಿತು. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ವರದಿಯ ಪ್ರಕಾರ, ಜಾನುವಾರು ವಲಯವು ಹಸಿರುಮನೆ ಅನಿಲಗಳ ಜಾಗತಿಕ ಹೊರಸೂಸುವಿಕೆಯ 18% ಕೊಡುಗೆ ನೀಡುತ್ತದೆ. ಇದು ಮಾನವ ಸಂಬಂಧಿತ ನೈಟ್ರಸ್ ಡೈಆಕ್ಸೈಡ್‌ನ 65% ಅನ್ನು ಉತ್ಪಾದಿಸುತ್ತದೆ, ಇದರ ಜಾಗತಿಕ ತಾಪಮಾನ ಏರಿಕೆಯು CO2 ಗಿಂತ 310 ಪಟ್ಟು ಹೆಚ್ಚಾಗಿದೆ.

  ಜಾನುವಾರುಗಳ ಸಂಖ್ಯೆಯನ್ನು ಕಡಿತಗೊಳಿಸುವ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ಏನು?

  ಪರಿಸರವಾದಿಗಳು ಈ ಯೋಜನೆಯನ್ನು ಹೆಚ್ಚಾಗಿ ಸ್ವಾಗತಿಸಿದ್ದಾರೆ ಮತ್ತು ಇದು ದೇಶದಲ್ಲಿ ಸಾರಜನಕ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಒಂದು ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

  ಆದರೆ ರೈತ ಗುಂಪುಗಳು ಈ ಪ್ರಸ್ತಾವನೆಗೆ ವಿರೋಧವನ್ನು ವ್ಯಕ್ತಪಡಿಸಿದ್ದು ಪ್ರಾಣಿಗಳ ತ್ಯಾಜ್ಯದಿಂದ ಅಮೋನಿಯಾವನ್ನು ಕಡಿಮೆ ಮಾಡುವ  ಪ್ರಸ್ತಾಪಗಳನ್ನು ವಿರೋಧಿಸಿ ಟ್ರಾಕ್ಟರ್‌ಗಳ ಮೂಲಕ ರಸ್ತೆಗಳನ್ನು ನಿರ್ಬಂಧಿಸಿವೆ.

  ಇನ್ನು ನೆದರ್‌ಲ್ಯಾಂಡ್‌ನ ಅಗ್ರಿಕಲ್ಚರಲ್ ಅಂಡ್ ಹಾರ್ಟಿಕಲ್ಚರಲ್ ಆರ್ಗನೈಸೇಶನ್ (ಎಲ್‌ಟಿಒ) ನ ಸಾರ್ವಜನಿಕ ವ್ಯವಹಾರಗಳ ಮುಖ್ಯಸ್ಥ ವೈಟ್ಸೆ ಸೊನ್ನೆಮಾ ಪ್ರಕಾರ ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ದೇಶದ ಕೆಟ್ಟ ಆಲೋಚನೆಯಾಗಿದೆ ಎಂದು ತಿಳಿಸಿದ್ದಾರೆ.

  ಸರಕಾರ ನಡೆಸುವ ಭೂಸ್ವಾಧೀನವಾಗಿದ್ದು ಕೆಟ್ಟ ನಿರ್ಧಾರವಾಗಿದೆ. ಉತ್ತಮ ಆಡಳಿತಕ್ಕೆ ಸರಕಾರದ ಈ ನಡೆ ಹೊಂದಿಕೆಯಾಗುವುದಿಲ್ಲ ಎಂದು ಜರೆದಿದ್ದಾರೆ. ಭೂಸ್ವಾಧೀನವು ಬಹು ದೀರ್ಘ ಪ್ರಕ್ರಿಯೆಯಾಗಿರುವುದರಿಂದ ಫಲಿತಾಂಶ ಪಡೆಯಲು ವಿಳಂಬವಾಗುತ್ತದೆ. ಇನ್ನು ಅನೇಕ ಸಂದರ್ಭಗಳಲ್ಲಿ ಇದು ಹೆಚ್ಚು ದುಬಾರಿಯಾಗಿರುತ್ತದೆ ಎಂದು ಸೊನ್ನೆಮಾ ತಿಳಿಸಿದ್ದಾರೆ.

  ಕ್ರಿಶ್ಚಿಯನ್ ಡೆಮಾಕ್ರಾಟಿಕ್ ಕೃಷಿ ವಕ್ತಾರರಾದ ಡೆರ್ಕ್ ಹೇಳುವಂತೆ ಭೂಸ್ವಾಧೀನವು ಸರಕಾರಕ್ಕೆ ಹಾನಿಯನ್ನುಂಟು ಮಾಡಲಿದೆ ಎಂದು ತಿಳಿಸಿದ್ದಾರೆ. ಸರಕಾರದ ಬಲವಂತದ ಸ್ವಾಧೀನಗಳು ಸರಕಾರದ ಬೆಂಬಲ ಹಾಗೂ ನಂಬಿಕೆಗೆ ಹಾನಿಕರವಾಗಿದೆ ಎಂದು ಡೆರ್ಕ್ ತಿಳಿಸಿದ್ದಾರೆ.

  ಇದನ್ನೂ ಓದಿ: Explainer: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಲೆಬನಾನ್...​? ಬಿಕ್ಕಟ್ಟು ಉಂಟಾಗಲು ಪ್ರಮುಖ ಕಾರಣಗಳೇನು..?

  ಕಳೆದ ವರ್ಷ ಡಚ್ ಸಂಸತ್ತಿನಿಂದ ಸಾರಜನಕ (ನೈಟ್ರೋಜನ್) ಹೊರಸೂಸುವಿಕೆಯನ್ನು ಕಡಿತಗೊಳಿಸುವ ಕಾನೂನಿನ ಅನುಮೋದನೆ ನಡೆಸಿದಾಗಲೂ ಸಾಕಷ್ಟು ವಿರೋಧವನ್ನು ವ್ಯಕ್ತಪಡಿಸಲಾಗಿತ್ತು. PVV (ಫ್ರೀಡಂ ಪಾರ್ಟಿ), ಗ್ರೀನ್ ಲೆಫ್ಟ್, ಪಾರ್ಟಿ ಫಾರ್ ದಿ ಅನಿಮಲ್ಸ್, ಮತ್ತು ಲೇಬರ್ ಪಾರ್ಟಿ (PvdA) ನಂತಹ ಹಲವಾರು ಪಕ್ಷಗಳು ಸಾರಜನಕದ ಹೊರಸೂಸುವಿಕೆಯನ್ನು ತಗ್ಗಿಸುವಲ್ಲಿ ಕಾನೂನು ಮಹತ್ವಾಕಾಂಕ್ಷೆಯಲ್ಲ ಎಂದು ವಾದಿಸಿತ್ತು. ಹಲವಾರು ಸಂಸ್ಥೆಗಳು ಕಾನೂನು ಕೃಷಿ ಕ್ಷೇತ್ರವನ್ನು ನಾಶಮಾಡುವ ಉದ್ದೇಶ ಹೊಂದಿದೆ ಎಂದು ತಿಳಿಸಿತ್ತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: