Explained: ಶಿವಾಜಿ ಮಹಾರಾಜರ ನೌಕಾಪಡೆ ಭಾರತೀಯ ನೌಕಾಪಡೆಗೆ ಹೇಗೆ ಸ್ಫೂರ್ತಿಯಾಯ್ತು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಹೊಸ ನೌಕಾ ಧ್ವಜವು ಛತ್ರಪತಿ ಶಿವಾಜಿ ಮಹಾರಾಜರ ಮುದ್ರೆಯನ್ನು ಹೊಂದಿದ್ದು, ಶಿವಾಜಿ ಮಹಾರಾಜರ ನೌಕಾಪಡೆಯು ಶತ್ರುಗಳಿಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಿತ್ತು. ಇದೇ ರೀತಿ ಭಾರತೀಯ ನೌಕಾಪಡೆಯು ಆಕಾಶ ಹಾಗೂ ಕಡಲಿನಲ್ಲಿ ಹೆಮ್ಮೆಯಿಂದ ಸಂಚಯನ ನಡೆಸಲಿದೆ ಎಂದು ಪ್ರಧಾನಿಯವರು ತಿಳಿಸಿದ್ದಾರೆ.

ಹೊಸ ನೌಕಾ ಧ್ವಜ

ಹೊಸ ನೌಕಾ ಧ್ವಜ

  • Share this:
ಶುಕ್ರವಾರ ಕೊಚ್ಚಿಯಲ್ಲಿ ನಡೆದ INS ವಿಕ್ರಾಂತ್ (INS Vikrant) ಅನ್ನು ಭಾರತೀಯ ನೌಕಾಪಡೆಗೆ (Indian Navy) ಅಧಿಕೃತವಾಗಿ ಸೇರ್ಪಡೆ ಮಾಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ನೌಕಾಪಡೆಯ ಹೊಸ ಧ್ವಜವನ್ನು (ಧ್ವಜ) ಅನಾವರಣಗೊಳಿಸಿದರು. ಹೊಸ ನೌಕಾ ಧ್ವಜವು ಛತ್ರಪತಿ ಶಿವಾಜಿ ಮಹಾರಾಜರ ಮುದ್ರೆಯನ್ನು ಹೊಂದಿದ್ದು ಶಿವಾಜಿ ಮಹಾರಾಜರ (Shivaji Maharaj) ನೌಕಾಪಡೆಯು ಶತ್ರುಗಳಿಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಿತ್ತು, ಮತ್ತು ಹೀಗೆಯೇ ಭಾರತೀಯ ನೌಕಾಪಡೆಯು ಆಕಾಶ ಹಾಗೂ ಕಡಲಿನಲ್ಲಿ ಹೆಮ್ಮೆಯಿಂದ ಸಂಚಯನ ನಡೆಸಲಿದೆ ಎಂದು ಪ್ರಧಾನಿಯವರು ತಿಳಿಸಿದ್ದಾರೆ. ಹೊಸ ಧ್ವಜವು (New Flag) ಮೇಲಿನ ಕ್ಯಾಂಟನ್‌ನಲ್ಲಿ ರಾಷ್ಟ್ರ ಧ್ವಜವನ್ನು ಹೊಂದಿದೆ. ಆ್ಯಂಕರ್‌ನ ಮೇಲೆ ನೆಲೆ ನಿಂತಿರುವ ರಾಷ್ಟ್ರೀಯ ಲಾಂಛನವನ್ನು (Emblem) ಒಳಗೊಂಡಿರುವ ನೀಲಿ ಅಷ್ಟಭುಜಾಕೃತಿಯನ್ನು ಹೊಂದಿದೆ.

ದೃಢತೆಯನ್ನು ಪ್ರತಿಬಿಂಬಿಸುವ ಆ್ಯಂಕರ್‌ ಅನ್ನು 'ಸ್ಯಾಮ್ ನೋ ವರುಣಃ' ಅಂದರೆ ಓ ವರುಣ ದೇವರೇ ನಮಗೆ ಶುಭವಾಗಲಿ ಎಂಬ ನೌಕಾಪಡೆಯ ಧ್ಯೇಯವಾಕ್ಯದೊಂದಿಗೆ ಕೆತ್ತಲಾದ ಗುರಾಣಿಯ ಮೇಲೆ ಅಳವಡಿಸಲಾಗಿದೆ.

ನೌಕಾಪಡೆಯ ವ್ಯಾಪ್ತಿ ಮತ್ತು ಕಾರ್ಯಾಚರಣೆಯ ಸಾಮರ್ಥ್ಯ:
ಅಷ್ಟಭುಜಾಕೃತಿಯ ಆಕಾರವು ಎಂಟು ದಿಕ್ಕುಗಳನ್ನು ಪ್ರತಿನಿಧಿಸುತ್ತಿದ್ದು, ಇದು ನೌಕಾಪಡೆಯ ಬಹು-ದಿಕ್ಕಿನ ವ್ಯಾಪ್ತಿ ಮತ್ತು ಕಾರ್ಯಾಚರಣೆಯ ಸಾಮರ್ಥ್ಯವನ್ನು ಸಂಕೇತಿಸುತ್ತದೆ. ಚಿನ್ನದ ಬಣ್ಣದ ದ್ವಿ ಅಂಚು ಹೊಂದಿರುವ ಅಷ್ಟಭುಜಾಕೃತಿಯು ಮರಾಠಾ ಚಕ್ರವರ್ತಿ ಶಿವಾಜಿಯ ರಾಜ ಮುದ್ರೆಯಿಂದ ಸ್ಫೂರ್ತಿ ಪಡೆದಿದೆ, ಇದನ್ನು ಅವರು ತಮ್ಮ 16 ರ ಹರೆಯದಲ್ಲಿ ಅಳವಡಿಸಿಕೊಂಡಿದ್ದರು.

ಕ್ಯಾಂಟನ್‌ನಲ್ಲಿ ತ್ರಿವರ್ಣ ಧ್ವಜದೊಂದಿಗೆ ಸೇಂಟ್ ಜಾರ್ಜ್ ಶಿಲುಬೆಯಿದ್ದ ನೌಕಾಪಡೆಯ ಧ್ವಜವನ್ನು ಇದೀಗ ಹೊಸ ನೌಕಾ ಧ್ವಜಕ್ಕೆ ಬದಲಾಯಿಸಲಾಗಿದೆ. ಧ್ವಜದ ಎಡ ಮೂಲೆಯಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಯೂನಿಯನ್ ಜ್ಯಾಕ್‌ನೊಂದಿಗೆ ಬಿಳಿ ಹಿನ್ನಲೆಯಲ್ಲಿರುವ ಕೆಂಪು ಜಾರ್ಜ್ ಕ್ರಾಸ್ ಅನ್ನು ಹೊಂದಿರುವ ಭಾರತೀಯ ನೌಕಾಪಡೆಯ ಸ್ವಾತಂತ್ರ್ಯ ಪೂರ್ವ ಧ್ವಜದ ಉತ್ತರಾಧಿಕಾರಿಯಾಗಿತ್ತು.

ಇದನ್ನೂ ಓದಿ:  Explained: ಚೀನಾದ ಆರ್ಥಿಕ ಬಿಕ್ಕಟ್ಟು ವಿಶ್ವದಾದ್ಯಂತ ಹೇಗೆ ಪರಿಣಾಮ ಬೀರಲಿದೆ? ಇದ್ರಿಂದ ಭಾರತಕ್ಕೆ ಆತಂಕವೋ, ಅನುಕೂಲವೋ?

ಸ್ವಾತಂತ್ರ್ಯದ ನಂತರ, ಆಗಸ್ಟ್ 15, 1947 ರಂದು, ಭಾರತೀಯ ರಕ್ಷಣಾ ಪಡೆಗಳು ಬ್ರಿಟಿಷ್ ವಸಾಹತುಶಾಹಿ ಧ್ವಜಗಳು ಮತ್ತು ಬ್ಯಾಡ್ಜ್‌ಗಳೊಂದಿಗೆ ಮುಂದುವರೆಯಿತು ಮತ್ತು ಜನವರಿ 26, 1950 ರಂದು ಮಾತ್ರ ಭಾರತೀಯ ಮಾದರಿಯ ಬದಲಾವಣೆಯನ್ನು ಮಾಡಲಾಯಿತು. ನೌಕಾ ಶಿಖೆ ಮತ್ತು ಧ್ವಜವನ್ನು ಬದಲಾಯಿಸಲಾಯಿತಾದರೂ ಧ್ವಜಕ್ಕೆ ಮಾಡಿದ ಏಕೈಕ ವ್ಯತ್ಯಾಸವೆಂದರೆ ಯೂನಿಯನ್ ಜ್ಯಾಕ್ ಅನ್ನು ತ್ರಿವರ್ಣದಿಂದ ಬದಲಾಯಿಸಲಾಯಿತು ಮತ್ತು ಜಾರ್ಜ್ ಕ್ರಾಸ್ ಅನ್ನು ಉಳಿಸಿಕೊಳ್ಳಲಾಯಿತು.

ನೌಕಾ ಧ್ವಜವನ್ನು ಬದಲಾಯಿಸುತ್ತಿರುವುದು ಇದೇ ಮೊದಲೇ?
2001 ರಲ್ಲಿ ನೌಕಾ ಧ್ವಜದಲ್ಲಿ ಬದಲಾವಣೆಯನ್ನು ಮಾಡಲಾಯಿತು, ಜಾರ್ಜ್ ಕ್ರಾಸ್ ಅನ್ನು ಬಿಳಿ ಧ್ವಜದ ಮಧ್ಯದಲ್ಲಿ ನೌಕಾ ಶಿಖರದೊಂದಿಗೆ ಬದಲಾಯಿಸಲಾಯಿತು ಮತ್ತು ತ್ರಿವರ್ಣವು ಮೇಲಿನ ಎಡ ಮೂಲೆಯಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿತು. ವೆಸ್ಟರ್ನ್ ನೇವಲ್ ಕಮಾಂಡ್ ನ ಕಮಾಂಡಿಂಗ್-ಇನ್-ಚೀಫ್ ಆಗಿ ನೌಕಾಪಡೆಯಿಂದ ನಿವೃತ್ತರಾದ ವೈಸ್ ಅಡ್ಮಿರಲ್ ವಿಇಸಿ ಬಾರ್ಬೋಜಾ ಅವರು ಬದಲಾಯಿಸುವ ಸಲಹೆಯನ್ನು ನೀಡಿದ್ದರು.

ಆದಾಗ್ಯೂ, 2004 ರಲ್ಲಿ, ನೌಕಾಪಡೆಯ ಶಿಖೆಯ ನೀಲಿ ಬಣ್ಣವು ಆಕಾಶ ಮತ್ತು ಸಮುದ್ರದೊಂದಿಗೆ ವಿಲೀನಗೊಂಡ ಕಾರಣ ಹೊಸ ಧ್ವಜವು ಅಸ್ಪಷ್ಟವಾಗಿದೆ ಎಂಬ ದೂರುಗಳು ಇದ್ದುದರಿಂದ ಧ್ವಜವನ್ನು ಮತ್ತೆ ರೆಡ್ ಜಾರ್ಜ್ ಕ್ರಾಸ್‌ಗೆ ಬದಲಾಯಿಸಲಾಯಿತು. ಧ್ವಜದಲ್ಲಿ ಬದಲಾವಣೆಯನ್ನು ಮಾಡಲಾಗಿದೆ ಮತ್ತು ಕೆಂಪು ಜಾರ್ಜ್ ಕ್ರಾಸ್ ಮಧ್ಯದಲ್ಲಿ ಅಶೋಕ ಸಿಂಹದ ಲಾಂಛನವನ್ನು ಪಡೆದುಕೊಂಡಿದೆ. 2014 ರಲ್ಲಿ, ದೇವನಾಗರಿ ಲಿಪಿಯಲ್ಲಿರುವ ಅಶೋಕ ಲಾಂಛನದ ಕೆಳಗೆ ಧ್ವಜದ ಮೇಲೆ 'ಸತ್ಯಮೇವ ಜಯತೆ' ಪದಗಳನ್ನು ಸೇರಿಸಿದಾಗ ಮತ್ತೊಂದು ಬದಲಾವಣೆಯನ್ನು ಮಾಡಲಾಯಿತು.

ಸೇಂಟ್ ಜಾರ್ಜ್ ಕ್ರಾಸ್ ಎಂದರೇನು?
ಬಿಳಿ ಹಿನ್ನೆಲೆಯಲ್ಲಿನ ಕೆಂಪು ಶಿಲುಬೆಯನ್ನು ಸೇಂಟ್ ಜಾರ್ಜ್ ಕ್ರಾಸ್ ಎಂದು ಕರೆಯಲಾಗುತ್ತದೆ ಮತ್ತು ಮೂರನೇ ಕ್ರುಸೇಡ್ ಸಮಯದಲ್ಲಿ ಕ್ರುಸೇಡರ್ ಎಂದು ನಂಬಲಾದ ಕ್ರಿಶ್ಚಿಯನ್ ವಾರಿಯರ್ ಸೇಂಟ್ ಹೆಸರನ್ನು ಇಡಲಾಗಿದೆ.

ಇದನ್ನೂ ಓದಿ:  Economic Crisis: ಇತ್ತ ಉಕ್ರೇನ್ ಯುದ್ಧ ಮುಂದುವರಿಕೆ, ಅತ್ತ ಯೂರೋಪ್ ಆರ್ಥಿಕತೆ ಕುಸಿತ! ಮುಂದೇನು ಗತಿ?

ಈ ಶಿಲುಬೆಯು ಯುನೈಟೆಡ್ ಕಿಂಗ್‌ಡಮ್‌ನ ಅಂಗವಾಗಿರುವ ಇಂಗ್ಲೆಂಡ್‌ನ ಧ್ವಜವಾಗಿಯೂ ಕಾರ್ಯನಿರ್ವಹಿಸುತ್ತದೆ. ಧ್ವಜವನ್ನು ಇಂಗ್ಲೆಂಡ್ ಮತ್ತು ಲಂಡನ್ ನಗರವು 1190 ರಲ್ಲಿ ಮೆಡಿಟರೇನಿಯನ್ ಪ್ರದೇಶವನ್ನು ಪ್ರವೇಶಿಸುವ ಇಂಗ್ಲಿಷ್ ಹಡಗುಗಳನ್ನು ಗುರುತಿಸಲು ಅಳವಡಿಸಿಕೊಂಡಿತು. ರಾಯಲ್ ನೌಕಾಪಡೆಯು ತಮ್ಮ ಹಡಗುಗಳಲ್ಲಿ ವಿವಿಧ ಆಕಾರಗಳು ಮತ್ತು ರೂಪಗಳಲ್ಲಿ ಹಾರಲು ಜಾರ್ಜ್ ಕ್ರಾಸ್ ಅನ್ನು ಅಳವಡಿಸಿಕೊಂಡಿತು.

ನೌಕಾ ಚಿಹ್ನೆಯಾಗಿ ಜಾರ್ಜ್ ಶಿಲುಬೆಯನ್ನು ತಿರಸ್ಕರಿಸಿದ ದೇಶಗಳು
ಹೆಚ್ಚಿನ ಕಾಮನ್‌ವೆಲ್ತ್ ದೇಶಗಳು ತಮ್ಮ ಸ್ವಾತಂತ್ರ್ಯದ ಸಮಯದಲ್ಲಿ ರೆಡ್ ಜಾರ್ಜ್ ಕ್ರಾಸ್ ಅನ್ನು ಉಳಿಸಿಕೊಂಡಿದ್ದರೂ ಹಲವು ವರ್ಷಗಳ ಅವಧಿಯಲ್ಲಿ ತಮ್ಮ ನೌಕಾ ದಳಗಳ ಮೇಲೆ ಚಿಹ್ನೆಯನ್ನು ತೆಗೆದುಹಾಕಿವೆ. ಅವುಗಳಲ್ಲಿ ಪ್ರಮುಖವಾದ ದೇಶಗಳೆಂದರೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಕೆನಡಾ.

ರಾಯಲ್ ಕೆನಡಿಯನ್ ನೌಕಾಪಡೆಯು 2013 ರಲ್ಲಿ ಧ್ವಜದಲ್ಲಿ ಹೊಸ ವಿನ್ಯಾಸವನ್ನು ಅಳವಡಿಸಿಕೊಂಡಿತು, ಇದು ಮೇಲಿನ ಎಡ ಮೂಲೆಯಲ್ಲಿ ಕೆನಡಾದ ಧ್ವಜವನ್ನು ಮತ್ತು ಬಿಳಿ ಹಿನ್ನೆಲೆಯಲ್ಲಿ ಕೆನಡಾದ ನೌಕಾ ಶಿಖರವನ್ನು ಹೊಂದಿದೆ. ಆಸ್ಟ್ರೇಲಿಯನ್ ನೌಕಾಪಡೆಯು 1967 ರಲ್ಲಿ ತನ್ನ ಧ್ವಜವನ್ನು ಬದಲಾಯಿಸಿತು ಮತ್ತು ಈಗ ಅದು ಯೂನಿಯನ್ ಜ್ಯಾಕ್ ಮತ್ತು ಆರು ನೀಲಿ ನಕ್ಷತ್ರಗಳನ್ನು ಹೊಂದಿದೆ.

ನ್ಯೂಜಿಲೆಂಡ್ ನೌಕಾಪಡೆಯು 1968 ರಲ್ಲಿ ಜಾರ್ಜ್ ಕ್ರಾಸ್ ಅನ್ನು ತೆಗೆದುಹಾಕಿತು ಮತ್ತು ಅದನ್ನು ಮೇಲಿನ ಎಡ ಮೂಲೆಯಲ್ಲಿ ಯೂನಿಯನ್ ಜ್ಯಾಕ್ ಹೊಂದಿರುವ ಬಿಳಿ ಧ್ವಜ ಮತ್ತು ನಾಲ್ಕು ಕೆಂಪು ನಕ್ಷತ್ರಗಳೊಂದಿಗೆ ಬದಲಾಯಿಸಿತು.

ಮರಾಠರು ಹಾಗೂ ಭಾರತೀಯ ನೌಕಾದಳ
ಶಿವಾಜಿ ಮಹಾರಾಜ ಹಾಗೂ ನಂತರದ ಮರಾಠಾ ಸಾಮ್ರಾಜ್ಯದ ಸಮುದ್ರಯಾನದ ಪರಾಕ್ರಮವನ್ನು ಭಾರತೀಯ ನೌಕಾಪಡೆಯು ಯಾವತ್ತಿಗೂ ಅಂಗೀಕರಿಸಿದೆ. ಲೋನಾವಲಾದಲ್ಲಿರುವ INS ತರಬೇತಿ ಸಂಸ್ಥೆಗೆ ಶಿವಾಜಿ ಎಂಬ ಹೆಸರಿದೆ ಅಂತೆಯೇ ಮುಂಬೈನ ಪಶ್ಚಿಮ ನೌಕಾ ಕಮಾಂಡ್‌ನ ತೀರ ಆಧಾರಿತ ಸೈನಿಕ ದಳ ಹಾಗೂ ಆಡಳಿತ ಕೇಂದ್ರಕ್ಕೆ INS ಆಂಗ್ರೆ - ಖ್ಯಾತ ಮರಾಠ ನೌಕಾ ಕಮಾಂಡರ್ ಕನ್ಹೋಜಿ ಆಂಗ್ರೆ (1669-1729) ಅವರ ಹೆಸರನ್ನಿಡಲಾಗಿದೆ.

ಹೊಸ ನೌಕಾ ಧ್ವಜದ ಮೇಲೆ ಶಿವಾಜಿಯ ಮುದ್ರೆಯ ಅಷ್ಟಭುಜಾಕೃತಿಯ ವಿನ್ಯಾಸದ ಬಳಕೆಯು ಮರಾಠ ಸಾಮ್ರಾಜ್ಯದ ನೌಕಾಪಡೆಯೊಂದಿಗೆ ಭಾರತೀಯ ನೌಕಾಪಡೆಯ ಕರುಳು ಬಳ್ಳಿಯ ಸಂಬಂಧಕ್ಕೆ ಸಾಕ್ಷಿಯಾಗಿರುವ ಔಪಚಾರಿಕ ಮುದ್ರೆಯಾಗಿದೆ.

ಇದನ್ನೂ ಓದಿ:  Explained: ಫುಲ್ ಕೋರ್ಟ್ ಮೀಟಿಂಗ್ ಎಂದರೇನು? ಸಭೆಯನ್ನು ಯಾವಾಗ ನಡೆಸಲಾಗುತ್ತದೆ ಹಾಗೂ ಇದರ ಮಹತ್ವವೇನು? ಇಲ್ಲಿದೆ ವಿವರ

ಶಿವಾಜಿಯ ಆಡಳಿತದಲ್ಲಿ ನೌಕಾಪಡೆಯು ಎಷ್ಟು ಬಲಿಷ್ಟವಾಗಿತ್ತೆಂದರೆ ಮರಾಠರು ಬ್ರಿಟಿಷರು, ಪೋರ್ಚುಗೀಸ್ ಮತ್ತು ಡಚ್ಚರ ವಿರುದ್ಧ ತಮ್ಮ ಹಿಡಿತ ಸಾಧಿಸಲು ಸಾಧ್ಯವಾಗಿತ್ತು ಅಂತೆಯೇ ಶಿವಾಜಿ ಸುರಕ್ಷಿತ ಕರಾವಳಿ ತೀರವನ್ನು ಹೊಂದುವುದರ ಮಹತ್ವವನ್ನು ಅರಿತುಕೊಂಡರು ಮತ್ತು ಪಶ್ಚಿಮ ಕೊಂಕಣ ಕರಾವಳಿಯನ್ನು ಸಿದ್ದಿಗಳ ನೌಕಾಪಡೆಯ ದಾಳಿಯಿಂದ ರಕ್ಷಿಸಿದರು.

ಶಿವಾಜಿಯ ನೌಕಾಪಡೆ
1656-57 ರ ನಂತರ ಶಿವಾಜಿಯ ಸಾಮ್ರಾಜ್ಯವು ಪಶ್ಚಿಮ ಕರಾವಳಿಯನ್ನು ತಲುಪಿತು, ಅವರ ಆಳ್ವಿಕೆಯು ಕಲ್ಯಾಣದವರೆಗೆ ವ್ಯಾಪಿಸಿತು. ಅದೇ ವರ್ಷದಲ್ಲಿ, ತಮ್ಮ ಪ್ರದೇಶವನ್ನು ಸಿದ್ದಿಗಳಿಂದ ರಕ್ಷಿಸುವ ಸಲುವಾಗಿ ಅವರು ನೌಕಾಪಡೆಯನ್ನು ಸ್ಥಾಪಿಸಲು ನಿರ್ಧರಿಸಿದರು ಅಂತೆಯೇ ಬಂದರುಗಳು ಮತ್ತು ವ್ಯಾಪಾರಿ ಹಡಗುಗಳ ಸುಗಮ ಕಡಲ ವ್ಯಾಪಾರವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಆದಾಯ ಮತ್ತು ಸರಕುಗಳ ಸುಂಕವನ್ನು ಜಾರಿಗೆ ತಂದರು.

ಶಿವಾಜಿಯ ಮಿಲಿಟರಿ ನೌಕಾ ವಿಭಾಗವನ್ನು ಸ್ಥಾಪಿಸುವ ಅವರ ದೃಷ್ಟಿಕೋನವು "ಜಲಮೇವ ಯಸ್ಯ, ಬಲಮೇವ ತಸ್ಯ" ಎಂಬ ನಂಬಿಕೆಯನ್ನು ಆಧರಿಸಿದ್ದು, ಇದರರ್ಥ "ಕಡಲಿನಾದ್ಯಂತ ಅಧಿಪತ್ಯ ಸ್ಥಾಪಿಸುವವನು ಸಂಪೂರ್ಣ ಶಕ್ತಿಶಾಲಿ" ಎಂದಾಗಿದೆ. 1661 ಮತ್ತು 1663 ರ ನಡುವೆ, ಮರಾಠಾ ಸಾಮ್ರಾಜ್ಯದ ನೌಕಾ ವಿಭಾಗವು ಅಸ್ತಿತ್ವಕ್ಕೆ ಬಂದಿತು ಮತ್ತು ಅದರ ಉತ್ತುಂಗದಲ್ಲಿ ಅದು ವಿವಿಧ ರೀತಿಯ ಮತ್ತು ಗಾತ್ರದ ಸರಿಸುಮಾರು 400 ಹಡಗುಗಳನ್ನು ಒಳಗೊಂಡಿತ್ತು. ಇವುಗಳಲ್ಲಿ ಯುದ್ಧನೌಕೆಗಳು ಮತ್ತು ಗುರಾಬ್, ಟರಾಂಡೆ, ಗಾಲ್ಬಟ್, ಶಿಬಾದ್ ಮತ್ತು ಪಾಲ್‌ನಂತಹ ವಿವಿಧ ಆಕಾರಗಳು ಮತ್ತು ಉದ್ದೇಶಗಳನ್ನೊಳಗೊಂಡ ಇತರ ಹಡಗುಗಳು ಸೇರಿವೆ.

ಇದನ್ನೂ ಓದಿ:  China: ಚೀನಾದಲ್ಲಿ ಉಲ್ಲಂಘನೆಯಾಗುತ್ತಿದೆಯಾ ಮಾನವ ಹಕ್ಕುಗಳು? ಯುಎನ್ ವರದಿಯಲ್ಲಿ ಸ್ಫೋಟಕ ವಿಚಾರ!

ಬಿಕೆ ಆಪ್ಟೆಯವರ ಪಯೋನಿಯರಿಂಗ್ ಎ ಹಿಸ್ಟ್ರಿ ಆಫ್ ದ ಮರಾಠಾ ನೇವಿ ಏಂಡ್ ಮರ್ಚೆಂಟ್‌ಶಿಪ್ಸ್ (pioneering A History of the Maratha Navy and Merchantships) ಪ್ರಕಾರ, ಶಿವಾಜಿಯ ನೌಕಾಪಡೆಯು ಇಂದಿನ ಕರ್ನಾಟಕದ ಕುಂದಾಪುರದ ಬಳಿಯ ಬಸ್ರೂರು ಮೇಲೆ ದಾಳಿ ಮಾಡಲು 85 ಹಡಗುಗಳನ್ನು ಬಳಸಿ ಮೊದಲ ಯಶಸ್ಸನ್ನು ದಾಖಲಿಸಿತು ಅಂತೆಯೇ ಭಾರೀ ಲೂಟಿಯೊಂದಿಗೆ ಮರಳಿತು. 1653 ರಲ್ಲಿ ನೌಕಾ ಕೋಟೆ, ವಿಜಯದುರ್ಗ, ಅವಳಿ ಸಿಂಧುದುರ್ಗ ಕೋಟೆಯನ್ನು ನಿರ್ಮಿಸಲು ಶಿವಾಜಿ ಆದೇಶಿಸಿದರು. ಅನೇಕ ಕೋಟೆಗಳು ವಶಪಡಿಸಿಕೊಳ್ಳಲಾಗದೇ ಹಾಗೆಯೇ ಉಳಿದವು ಹಾಗೂ ಮರಾಠರು ತಮ್ಮ ಕೆಲವೊಂದು ಉದ್ದೇಶಗಳಿಗಾಗಿ ಅಂದರೆ ಸಮುದ್ರಗಳ ಮೂಲಕ ಸಮಿಪಿಸುತ್ತಿರುವ ಶತ್ರುಗಳ ಮೇಲೆ ನಿಗಾವಹಿಸಲು ಕೋಟೆಗಳನ್ನು ಬಳಸುತ್ತಿದ್ದರು.

ಬಿಜಾಪುರ ಪ್ರಾಂತ್ಯದ ಭಾಗವಾಗಿದ್ದ ಉತ್ತರ ಕೊಂಕಣದ ಕಲ್ಯಾಣ್ ಮತ್ತು ಭಿವಂಡಿ 1657 ರ ಸಮಯದಲ್ಲಿ ಶಿವಾಜಿಯ ನಿಯಂತ್ರಣಕ್ಕೆ ಬಂದವು. ಮರಾಠಾ ನೌಕಾಪಡೆಯು ಶಿವಾಜಿಯ ನಂತರವೂ ಆಂಗ್ರೆಯಂತಹ ನೌಕಾ ಸೇನಾಧಿಪತಿಗಳ ನೇತೃತ್ವದಲ್ಲಿ ಅಸಾಧಾರಣ ಶಕ್ತಿಯಾಗಿ ಮುಂದುವರೆಯಿತು. ಮರಾಠ ಸಾಮ್ರಾಜ್ಯವು ಮೊಘಲರು, ಡಚ್ಚರು ಮತ್ತು ಇಂಗ್ಲಿಷರೊಂದಿಗೆ ಕಡಲ ಮೇಲೆ ಹೋರಾಟ ನಡೆಸಿತು ಮತ್ತು ಅವರೆಲ್ಲರ ವಿರುದ್ಧ ತನ್ನದೇ ಆದ ಹಿಡಿತವನ್ನು ಸಾಧಿಸಿತು.
Published by:Ashwini Prabhu
First published: