National Nutrition Week 2022: ನಮ್ಮ ಜೀವಿತಾವಧಿಯ ಪ್ರತಿ ಹಂತದಲ್ಲಿಯೂ ಪೌಷ್ಟಿಕಾಂಶದ ಬೇಡಿಕೆ ಹೇಗಿರುತ್ತೆ?

ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್‌ ಮಾಸವನ್ನು ಪೋಷಣಾ ಮಾಸವಾಗಿ ಆಚರಿಸಲು ಕರೆ ನೀಡಿದ್ದಾರೆ. ಹೀಗಾಗಿ, ಈ ತಿಂಗಳು ಪೋಷಣಾ ಮಾಸವಾಗಿ ಪೌಷ್ಟಿಕಾಂಶದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ರಾಷ್ಟ್ರೀಯ ಪೋಷಣಾ ಸಪ್ತಾಹ

ರಾಷ್ಟ್ರೀಯ ಪೋಷಣಾ ಸಪ್ತಾಹ

  • Share this:
ಪ್ರತಿವರ್ಷ ಸೆಪ್ಟೆಂಬರ್‌ 1ರಿಂದ ಸೆಪ್ಟೆಂಬರ್‌ 7ರವರೆಗೆ ಭಾರತದಲ್ಲಿ ರಾಷ್ಟ್ರೀಯ ಪೋಷಕಾಂಶ ಸಪ್ತಾಹ (National Nutrition Week) ಆಚರಿಸಲಾಗುತ್ತದೆ. ಇದೇ ಕಾರಣಕ್ಕೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಸೆಪ್ಟೆಂಬರ್‌ ತಿಂಗಳಲ್ಲಿ ರಾಷ್ಟ್ರೀಯ ಪೋಷಣಾ ಮಾಸ(ತಿಂಗಳಿಡಿ ಆಚರಣೆ) ಆಚರಿಸಲು ಕರೆ ನೀಡಿದ್ದರು. ಆರೋಗ್ಯಕರ ಜೀವನಶೈಲಿ ಪ್ರತಿಯೊಬ್ಬರ ಕನಸಾಗಿರುತ್ತದೆ. ಮೊದಲ ಬಾರಿಗೆ ಈ ಸಪ್ತಾಹವನ್ನು ಅಮೆರಿಕದ ಡಯೆಟಿಕ್‌ ಅಸೋಸಿಯೇಷನ್‌ (ಎಡಿಎ) ಉತ್ತಮ ಪೋಷಣೆಯ (Good nutrition) ಬಗ್ಗೆ ಸಾರ್ವಜನಿಕ ಅರಿವು ಮೂಡಿಸುವ ಉದ್ದೇಶದಿಂದ 1975ರ ಮಾರ್ಚ್ ನಲ್ಲಿ ರಾಷ್ಟ್ರೀಯ ಪೋಷಣಾ ವಾರವನ್ನು ಮೊದಲ ಬಾರಿಗೆ ಆಚರಿಸಿತು. 1980ರಲ್ಲಿ ಇದನ್ನು ಒಂದು ತಿಂಗಳ ಕಾಲ ನಡೆಸಲಾಯಿತು.

ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್‌ ಮಾಸವನ್ನು ಪೋಷಣಾ ಮಾಸವಾಗಿ ಆಚರಿಸಲು ಕರೆ ನೀಡಿದ್ದಾರೆ. ಹೀಗಾಗಿ, ಈ ತಿಂಗಳು ಪೋಷಣಾ ಮಾಸವಾಗಿ ಪೌಷ್ಟಿಕಾಂಶದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಪೌಷ್ಠಿಕಾಂಶದ ಪ್ರಾಮುಖ್ಯತೆ ಏನು?
ಬೊಜ್ಜು, ಮಧುಮೇಹ, ಮಲಬದ್ಧತೆ, ಪಿಸಿಒಡಿ ಮುಂತಾದ ಕೆಲವು ದೀರ್ಘಕಾಲದ ಕಾಯಿಲೆಗಳ ನಿರ್ವಹಣೆಯಲ್ಲಿ ಪೌಷ್ಟಿಕಾಂಶವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಹಸಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಇತರ ಆರೋಗ್ಯ ಸಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಕೆಲವು ವರ್ಷಗಳ ಹಿಂದೆ ಭಾರತ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳು ಸರಿಯಾದ ಪೋಷಣೆ, ಆಹಾರ, ಫಿಟ್ನೆಸ್, ಪೌಷ್ಟಿಕಾಂಶ ಶಿಕ್ಷಣ ಮತ್ತು ಅದರ ಪ್ರಾಮುಖ್ಯತೆಯ ವಿಷಯದಲ್ಲಿ ಹಿಂದುಳಿದಿದ್ದವು.

2017 ರಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, 73% ಕ್ಕಿಂತ ಹೆಚ್ಚು ಭಾರತೀಯರು ಪ್ರೋಟೀನ್ ಕೊರತೆಯನ್ನು ಹೊಂದಿದ್ದರೆ, 90% ರಷ್ಟು ಜನರಿಗೆ ಪ್ರೋಟೀನ್‌ ನಮ್ಮ ದೈನಂದಿನ ಜೀವನದ ಅವಶ್ಯಕತೆಯಲ್ಲಿ ಎಷ್ಟು ಮುಖ್ಯ ಎಂಬುದೇ ತಿಳಿದಿಲ್ಲ. ಇದು ಪೌಷ್ಟಿಕಾಂಶದ ಬಗ್ಗೆ ಭಾರತೀಯರಲ್ಲಿ ಇರುವ ಜ್ಞಾನವನ್ನು ತೋರಿಸುವ ಉದಾಹರಣೆಗಳಲ್ಲಿ ಒಂದಾಗಿದೆ. ನಮ್ಮ ದೇಹಕ್ಕೆ ಬೇಕಾಗುವ ಪೋಷಕಾಂಶಗಳು ಮತ್ತು ವ್ಯಕ್ತಿಯ ಶಕ್ತಿಯ ಅನುಸಾರವಾಗಿ ಅವರ ಒಟ್ಟಾರೆ ಜೀವಿತಾವಧಿಯಲ್ಲಿ ಬದಲಾಗುತ್ತಲೇ ಇರುತ್ತವೆ. ಇವುಗಳು ಬಾಲ್ಯದಲ್ಲಿ, ಹದಿಹರೆಯದಲ್ಲಿ, ಗರ್ಭಾವಸ್ಥೆಯಲ್ಲಿ, ಸಣ್ಣ ವಯಸ್ಸು ಮತ್ತು ವಯಸ್ಸಾದ ವಯಸ್ಸಿನಲ್ಲಿ ಒಟ್ಟಾರೆ ಜೀವನದ ವಿವಿಧ ಹಂತಗಳಲ್ಲಿ ಪೋಷಕಾಂಶಗಳ ಅಗತ್ಯತೆಗಳು ಬದಲಾಗುತ್ತಲೇ ಇರುತ್ತವೆ.

ಇದನ್ನೂ ಓದಿ:  Father and Baby: ತಂದೆಯ ವಯಸ್ಸು ಮಕ್ಕಳ ದೇಹದ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಾ?

ಈ ರಾಷ್ಟ್ರೀಯ ಪೋಷಣಾ ಸಪ್ತಾಹದ ಸವಾಲನ್ನು ಸ್ವೀಕರಿಸಲು ಮತ್ತು ಅದರ ಕುರಿತು ವಿವಿಧ ರೀತಿಯಲ್ಲಿ ಜಾಗೃತಿಯನ್ನು ಹೆಚ್ಚಿಸಲು ಎಲ್ಲಾ ವೈದ್ಯರು, ಪೌಷ್ಟಿಕತಜ್ಞರು ಮತ್ತು ಫಿಟ್ನೆಸ್ ತಜ್ಞರು ಹೆಚ್ಚಿನ ಶ್ರಮವಹಿಸುತ್ತಿದ್ದಾರೆ. ನಾವು ವಯಸ್ಸಾದಂತೆ ನಮ್ಮ ಜೀವನದ ಗುಣಮಟ್ಟದಲ್ಲಿ ಪೌಷ್ಠಿಕಾಂಶವು ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದರ ಕುರಿತು ತಿಳಿಯಲು ಆಹಾರ ಮತ್ತು ಪೋಷಣೆ ಕ್ಲಿನಿಕ್‌ನ ಸಂಸ್ಥಾಪಕಿ ಮತ್ತು ಪರಿಣಿತ ಪೌಷ್ಟಿಕತಜ್ಞರಾದ ಡಯೆಟಿಷಿಯನ್ ಸಿಲ್ಕಿ ಮಹಾಜನ್ ಅವರ ಸಂದರ್ಶನದ ತುಣುಕು ನಿಮಗಾಗಿ ನಾವು ಈ ಲೇಖನದಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ.

ಪೋಷಕಾಂಶಗಳು ಎಷ್ಟು ಮುಖ್ಯ? ತಜ್ಞರು ಹೇಳುವುದೇನು?
“ದೇಶದಲ್ಲಿ ಪ್ರತಿದಿನ ಐದು ವರ್ಷಕ್ಕಿಂತ ಕಡಿಮೆ ವಯುಸ್ಸಿನ 6 ಸಾವಿರಕ್ಕೂ ಹೆಚ್ಚು ಮಕ್ಕಳು ಮೃತರಾಗುತ್ತಾರೆ. ಇವುಗಳಲ್ಲಿ ಅರ್ಧದಷ್ಟು ಮಕ್ಕಳ ಸಾವಿಗೆ ಅಪೌಷ್ಟಿಕತೆ ಪ್ರಮುಖ ಕಾರಣ. ಅಂದರೆ, ವಿಟಮಿನ್‌ ಎ, ಕಬ್ಬಿಣ, ಸತು ಮತ್ತು ಫೋಲಿಕ್‌ ಆಮ್ಲದ ಕೊರತೆ ಇತ್ಯಾದಿ ಪೋಷಕಾಂಶಗಳ ಕೊರತೆಯಿಂದ ಮಕ್ಕಳು ಸಾಯುತ್ತಾರೆ” ಎಂದು ತಜ್ಞರು ಹೇಳಿದ್ದಾರೆ.

“ಜೀವನದ ಆರಂಭಿಕ ಹಂತದಲ್ಲಿ ಸರಿಯಾದ ಪೋಷಣೆಯನ್ನು ಅಳವಡಿಸಿಕೊಳ್ಳಬೇಕು. “ತಾಯಿ ಹಾಲು ಮಗುವಿಗೆ ವರದಾನವಾಗಿದೆ ಆದ್ದರಿಂದ ಮಗುವಿಗೆ ಹುಟ್ಟಿದಾಗಿನಿಂದ 6 ತಿಂಗಳು ಅಥವಾ 2 ವರ್ಷದವರೆಗೆ ಎದೆಹಾಲು ನೀಡುವುದು ಬಹಳ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬಹಳ ಮುಖ್ಯ. ಇದು ಮಗುವಿನ ಒಟ್ಟಾರೆ ಬೆಳವಣಿಗೆಗೆ ಪೌಷ್ಟಿಕಾಂಶವಾಗಿ ಬಹಳಷ್ಟು ಸಹಾಯ ಮಾಡುತ್ತದೆ. ತಾಯಿಯ ಎದೆಹಾಲಿನಲ್ಲಿ ಡಿಎಚ್‌ಎ , ಒಮೆಗಾ-3-ಫ್ಯಾಟಿ ಆಸಿಡ್‌ ಪೋಷಕಾಂಶಗಳು ಸಮೃದ್ಧವಾಗಿವೆ. ಇದು ಮೆದುಳಿನ ಅಂಗಾಂಶ ರಚನೆಗೆ ಮತ್ತು ಹೆಚ್ಚಿನ ಐಕ್ಯೂ ಮಟ್ಟವನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ” ಎಂದು ಡಯೆಟಿಷಿಯನ್ ಸಿಲ್ಕಿ ಮಹಾಜನ್ ಹೇಳುತ್ತಾರೆ.

ಮಗುವಿಗೆ ಕೊಡುವ ಆಹಾರ ಹೇಗಿರಬೇಕು?
“ಮಗು ಬೆಳೆದಂತೆ ಅದಕ್ಕೆ ಹೆಚ್ಚಿನ ಪೋಷಕಾಂಶಗಳ ಅಗತ್ಯ ಹೆಚ್ಚಾಗತೊಡಗುತ್ತದೆ. ಹಾಲುಣಿಸುವಿಕೆಯು ಅವರಿಗೆ ಉತ್ತಮ ಆಹಾರ ಪದ್ಧತಿಯನ್ನು ಬಲಪಡಿಸಲು ಮತ್ತು ಮೃದುವಾದ ಆಹಾರವನ್ನು ಪರಿಚಯಿಸಲು ಒಂದು ಉತ್ತಮ ಅವಕಾಶ ಎಂದೇ ಹೇಳಬಹುದು. 6 ತಿಂಗಳ ನಂತರ ಚೆನ್ನಾಗಿ ಕತ್ತರಿಸಿದ ಮತ್ತು ಬೇಯಿಸಿದ ಆಹಾರ ನೀಡಲು ಪ್ರಾರಂಭಿಸಬೇಕು. ಅವುಗಳಲ್ಲಿ ಆಪಲ್ ಸ್ಟ್ಯೂ, ಬೇಯಿಸಿದ ಆಲೂಗಡ್ಡೆ, ಕ್ಯಾರೆಟ್ ಸೂಪ್ ಮತ್ತು ದಾಲ್ ನೀರು ಹೀಗೆ ಇತ್ಯಾದಿ ಮೃದು ಆಹಾರ ನೀಡಲು ಪ್ರಾರಂಭಿಸಬೇಕು. ಮಕ್ಕಳಿಗೆ ಬೀಜಗಳು ಅಥವಾ ಹಸಿ ತರಕಾರಿಗಳಂತಹ ಗಟ್ಟಿ ಆಹಾರ ನೀಡಲೇಬಾರದು. ಇದು ತಪ್ಪು“ ಎಂದು ಅವರು ಹೇಳಿದರು.

ಇದನ್ನೂ ಓದಿ:  Heart Disease: ಮಹಿಳೆಯರಲ್ಲಿ ಹೃದಯಾಘಾತ ಸಂಖ್ಯೆ ಹೆಚ್ಚಳ; ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸಬೇಡಿ

“ಚಿಕ್ಕ ಮಕ್ಕಳ ಶಕ್ತಿಗೆ ಅನುಗುಣವಾಗಿ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಎ ಮತ್ತು ಸಿ ಎಂಬ ವಿಟಮಿನ್‌ಗಳ ಅಗತ್ಯವು ಅವರಿಗೆ ಹೆಚ್ಚಾಗುತ್ತದೆ. ಅವರು ಹೆಚ್ಚು ಸಕ್ರಿಯರಾಗುತ್ತಾರೆ ಮತ್ತು ಶಾಲೆಗೆ ಹೋಗಲು ಪ್ರಾರಂಭಿಸುತ್ತಾರೆ. ಆದರೆ ಮಕ್ಕಳು ಸಣ್ಣ ಹೊಟ್ಟೆಯನ್ನು ಹೊಂದಿದ್ದಾರೆ ಮತ್ತು ಒಂದೇ ಬಾರಿಗೆ ಬಹಳಷ್ಟು ಆಹಾರ ಸೇವಿಸುವುದು ಅವರಿಂದ ಸಾಧ್ಯವಾಗುವುದಿಲ್ಲ. ಏಕೆಂದರೆ ಅವರ ಹೊಟ್ಟೆಗೆ ಹೆಚ್ಚು ಆಹಾರ ತಡೆದುಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಕಚ್ಚಾ ಹಣ್ಣುಗಳು ಮತ್ತು ತರಕಾರಿಗಳ ಸಣ್ಣ ಗಾತ್ರದ ತುಂಡುಗಳನ್ನು  ನೀಡಬಹುದು.

ಹದಿಹರೆಯ ಮಕ್ಕಳ ಆಹಾರ ಪದ್ಧತಿ ಹೀಗಿರಲಿ
“ಮಕ್ಕಳಲ್ಲಿ ಹದಿಹರೆಯದ ಬೆಳವಣಿಗೆಯ ಸಮಯದಲ್ಲಿ ಹುಡುಗಿಯರಲ್ಲಿ ಸುಮಾರು 10 ವರ್ಷಗಳು ಮತ್ತು ಹುಡುಗರಲ್ಲಿ 12 ವರ್ಷಗಳ ವಯಸ್ಸಿನಲ್ಲಿ ಅವರ ದೇಹವು ಹಲವು ರೀತಿಯ ಬದಲಾವಣೆಗೆ ಒಳಪಡುತ್ತಿರುತ್ತದೆ. ಅಂತಹ ಸಮಯದಲ್ಲಿ ಮಕ್ಕಳಿಗೆ ಹೆಚ್ಚಿನ ಪೋಷಕಾಂಶಗಳ ಅಗತ್ಯ ಖಂಡಿತ ಇರುತ್ತದೆ. ಮೂಳೆಯ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಕ್ಯಾಲ್ಸಿಯಂ ಪೋಷಕಾಂಶಗಳು ವಿಶೇಷವಾಗಿ ಮುಖ್ಯವಾಗಿದೆ. ಏಕೆಂದರೆ 45% ರಷ್ಟು ಮೂಳೆಗಳು ಹದಿಹರೆಯವಯಸ್ಸಿನಲ್ಲಿ ಹೆಚ್ಚು ರೂಪಗೊಳ್ಳುತ್ತವೆ. ಹದಿಹರೆಯದ ಸಮಯದಲ್ಲಿ ಹುಡುಗಿಯರಲ್ಲಿ ಋತುಚಕ್ರವು ಆರಂಭವಾಗುವುದರಿಂದ ರಕ್ತಹೀನತೆಯನ್ನು ತಡೆಯಲು ಕಬ್ಬಿಣ ಅಂಶವು ಮುಖ್ಯವಾಗಿದೆ ”ಎಂದು ಅವರು ಹೇಳುತ್ತಾರೆ.

ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆಯರು ಆರೋಗ್ಯಕರ ಆಹಾರಸೇವಿಸುವುದು ರೂಡಿಸಿಕೊಳ್ಳಬೇಕು
ಇನ್ನು ಮಹಿಳೆಯರಲ್ಲಿ ಗರ್ಭಾವಸ್ಥೆಯು ಪ್ರಮುಖ ಮತ್ತು ವಿಶೇಷ ಘಟ್ಟವೆಂದೇ ಹೇಳಲಾಗುತ್ತದೆ. ಅವರು ಈ ಸಮಯದಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಆರೋಗ್ಯಕರ ಮಗುವನ್ನು ಪಡೆಯಲು ಅನುಕೂಲ ಆಗುತ್ತದೆ. ಈ ಸಮಯದಲ್ಲಿ ಮಹಿಳೆಯರಲ್ಲಿ ಅಧಿಕ ತೂಕ ಉಂಟಾಗುವುದು, ಗರ್ಭಾವಸ್ಥೆಯ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳಿಗೆ ಕಾರಣವಾಗುವುದರಿಂದ ಈ ಅವಧಿಯಲ್ಲಿ ತೂಕ ಹೆಚ್ಚಾಗುವುದನ್ನು ಮೇಲ್ವಿಚಾರಣೆ ಮಾಡುವುದು ಬಹಳ ಮುಖ್ಯ.

“ಫೋಲಿಕ್ ಆಮ್ಲವು ಮಗುವಿನ ನರಗಳು ಮತ್ತು ಮೆದುಳನ್ನು ರೂಪಿಸಲು ಸಹಾಯ ಮಾಡುತ್ತದೆ. ಕಬ್ಬಿಣ, ವಿಟಮಿನ್ ಸಿ, ಎ, ಕ್ಯಾಲ್ಸಿಯಂ, ಡಿಎಚ್‌ಎ ಪೋಷಕಾಂಶಗಳ ಅಗತ್ಯವು ಈ ಸಮಯದಲ್ಲಿ ತಾಯಿ ಮತ್ತು ಮಗುವಿಗೆ ಹೆಚ್ಚೆ ಬೇಕಾಗುತ್ತದೆ. ಇವರಿಬ್ಬರ ಒಟ್ಟಾರೆ ಯೋಗಕ್ಷೇಮಕ್ಕಾಗಿ ಪೋಷಕಾಂಶಗಳ ಸೇವನೆ ಹೆಚ್ಚಲೇ ಬೇಕು” ಎಂದು ಅವರು ಹೇಳುತ್ತಾರೆ.

ವಯಸ್ಕರು ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಭರಿತ ಆಹಾರ ಸೇವನೆ ಮಾಡುವುದು ಉತ್ತಮ
“ಹಾಲು, ಮೊಸರು, ಮೊಟ್ಟೆ, ಬೇಳೆಕಾಳುಗಳು, ಕೋಳಿ, ಮೀನು, ಹಣ್ಣುಗಳಂತಹ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಸೇವಿಸಲು ವಯಸ್ಕರಾದವರಿಗೆ ಪ್ರೋತ್ಸಾಹಿಸಬೇಕು. ಇದು ಅವರ ದೇಹಗಳಿಗೆ ಅಗತ್ಯ ಶಾರೀರಿಕ ಕಾರ್ಯಗಳನ್ನು ನಿರ್ವಹಿಸಲು ಹೆಚ್ಚು ಅಗತ್ಯವಿವೆ” ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: Artificial Embryos: ಮಾನವ DNA ಬಳಸಿ ಕೃತಕ ಭ್ರೂಣ ಅಭಿವೃದ್ಧಿಗೆ ಮುಂದಾದ ಬಯೋಟೆಕ್, ಅಂಗಾಂಗ ಕಸಿಗೆ ಬಳಕೆ!

ಆದ್ದರಿಂದ, ಜೀವಿತಾವಧಿಯಲ್ಲಿ ವಿವಿಧ ಪೌಷ್ಟಿಕಾಂಶದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಆಹಾರದಲ್ಲಿ ಹೆಚ್ಚಿನ ಕೊಬ್ಬಿನಾಂಶ, ಉಪ್ಪು ಮತ್ತು ಸಕ್ಕರೆಯ ಪ್ರಮಾಣವನ್ನು ಮಿತಿಗೊಳಿಸುವುದು ಮತ್ತು ನಿಯಮಿತ ವ್ಯಾಯಾಮವು ಜೀವನದ ವಿವಿಧ ಹಂತಗಳಲ್ಲಿ ಫಿಟ್ ಮತ್ತು ಆರೋಗ್ಯಕರವಾಗಿರಲು ಪ್ರಮುಖವಾಗಿದೆ.
Published by:Ashwini Prabhu
First published: