• Home
  • »
  • News
  • »
  • explained
  • »
  • Explained: ಎಲ್ಲೆಡೆ ಭಾರತದ ರಾಷ್ಟ್ರ ಲಾಂಛನದ್ದೇ ಸುದ್ದಿ! ಇಲ್ಲಿದೆ ನೋಡಿ ಇದರ ವಿಶೇಷತೆ

Explained: ಎಲ್ಲೆಡೆ ಭಾರತದ ರಾಷ್ಟ್ರ ಲಾಂಛನದ್ದೇ ಸುದ್ದಿ! ಇಲ್ಲಿದೆ ನೋಡಿ ಇದರ ವಿಶೇಷತೆ

ನೂತನ ಸಂಸತ್ ಭವನದ ಮೇಲಿನ ರಾಷ್ಟ್ರ ಲಾಂಛನ

ನೂತನ ಸಂಸತ್ ಭವನದ ಮೇಲಿನ ರಾಷ್ಟ್ರ ಲಾಂಛನ

ಕಂಚಿನಲ್ಲಿ ನಿರ್ಮಿಸಲಾಗಿರುವ ನಾಲ್ಕು ದಿಕ್ಕುಗಳನ್ನು ನೋಡುತ್ತಿರುವ ಸಿಂಹಗಳ ಮುಖಗಳಿರುವ 'ರಾಷ್ಟ್ರ ಲಾಂಛನವನ್ನು' ಸೋಮವಾರ ನರೇಂದ್ರ ಮೋದಿ ಅನಾವರಣಗೊಳಿಸಿದ್ದಾರೆ.

  • Share this:

ಜುಲೈ 11, 2022ರಂದು ನೂತನ ಸಂಸತ್ ಭವನದ (New Parliament House) ಮೇಲೆ ಸ್ಥಾಪಿಸಲಾಗಿರುವ 6.5 ಮೀಟರ್ ಎತ್ತರದ ರಾಷ್ಟ್ರ ಲಾಂಛನವನ್ನು (National Emblem) ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದರು. ಹೊಸ ಸಂಸತ್ತಿನ ಕಟ್ಟಡವು ಮುಂದಿನ ವರ್ಷದ ಚಳಿಗಾಲದ ಅಧಿವೇಶನದ ಸಮಯದಲ್ಲಿ ತೆರೆಯಲಾಗುತ್ತದೆ. ಕಂಚಿನಲ್ಲಿ (Bronze) ನಿರ್ಮಿಸಲಾಗಿರುವ ನಾಲ್ಕು ದಿಕ್ಕುಗಳನ್ನು ನೋಡುತ್ತಿರುವ ಸಿಂಹಗಳ ಮುಖಗಳಿರುವ 'ರಾಷ್ಟ್ರ ಲಾಂಛನವನ್ನು' ಸೋಮವಾರ ನರೇಂದ್ರ ಮೋದಿ ಅನಾವರಣಗೊಳಿಸಿದ್ದಾರೆ. ಇದು ಒಟ್ಟು 9,500 ಕೆ.ಜಿ ತೂಕವಿದ್ದು, 6.5 ಮೀಟರ್ ಎತ್ತರವಿದೆ ಈ ಹೊಸ ಲಾಂಛನ. ಉದ್ಘಾಟನಾ ಸಮಾರಂಭದಲ್ಲಿ (Opening Ceremony) ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭೆ ಉಪ ಸಭಾಪತಿ ಹರಿವಂಶ್ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಅವರು ಸಹ ಉಪಸ್ಥಿತರಿದ್ದರು.


ಮುಂದಿನ ವರ್ಷ ಸಂಸತ್ತಿನ ಚಳಿಗಾಲದ ಅಧಿವೇಶನದ ಸಮಯದಲ್ಲಿ ತೆರೆಯಲು ತಯಾರಾಗಿರುವ ಹೊಸಕಟ್ಟಡದ ಮೇಲೆ ಅನಾವರಣಗೊಳಿಸಿರುವ ಕಂಚಿನ ರಾಷ್ಟ್ರೀಯ ಲಾಂಛನ ಹೊಸದೊಂದು ಮೈಲಿಗಲ್ಲನ್ನು ಸೃಷ್ಟಿಸಿದೆ.


ಇಲ್ಲಿದೆ ನೋಡಿ ಹೊಸ ಸಂಸತ್ತಿನ ಮೇಲಿರುವ ರಾಷ್ಟ್ರೀಯ ಲಾಂಛನದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು.


1) ಸಾರಾನಾಥ್ ಸಿಂಹದಿಂದ ರೂಪಗೊಂಡ ಲಾಂಛನ
6.5 ಮೀಟರ್ ಉದ್ದದ 1600 ಕೆಜಿ ಇರುವ ಈ ರಾಷ್ಟ್ರೀಯ ಲಾಂಛನ ಶುದ್ಧ ಕಂಚಿನಿಂದ ಕೂಡಿದ್ದು ಇದನ್ನು ಸಂಪೂರ್ಣವಾಗಿ ಭಾರತೀಯ ಶಿಲ್ಪಿಗಳು ಇದನ್ನು ಸಿದ್ಧಪಡಿಸಿದ್ದಾರೆ. ಭಾರತೀಯ ರಾಷ್ಟ್ರ ಲಾಂಛನವು ಸಾರಾನಾಥ್ ಮ್ಯೂಸಿಯಂನಲ್ಲಿ ಸಂರಕ್ಷಿಸಲ್ಪಟ್ಟಿರುವ ಅಶೋಕನ ಲಾಂಛನವಾದ ಸಾರಾನಥ್ ಸಿಂಹದಿಂದ ರೂಪಗೊಂಡಿದೆ. ಈ ಸಿಂಹ ಲಾಂಛನವು ಹಿಂದೆ ಹಾಗೂ ಮುಂದಕ್ಕೆ ಸುತ್ತುವರಿದ ನಾಲ್ಕು ಸಿಂಹಗಳಿಂದ ಕೂಡಿದೆ. ಈ ಲಾಂಛನದಲ್ಲಿ ಧರ್ಮ ಚಕ್ರದಿಂದ ಬೇರ್ಪಡಿಸಿದ ಆನೆ, ನಾಗಾಲೋಟದ ಕುದುರೆ ಹಾಗೂ ಗೂಳಿಯ ಕೆತ್ತನೆಗಳನ್ನು ಒಳಗೊಂಡಿವೆ. ಹೊಸ ಸಂಸತ್ತಿನ ಮೇಲಿರುವ ರಾಷ್ಟ್ರೀಯ ಲಾಂಛನವನ್ನು ಚಿತ್ರಿಸುವಂತಹ ಕಾರ್ಯವು ಎಂಟು ವಿಭಿನ್ನ ಹಂತದಲ್ಲಿ ತಯಾರಾಗಿದೆ.


ಲಾಂಛನವನ್ನು ತಯಾರಿಸಿದ ರೀತಿ ಹೀಗಿತ್ತು
ಮೊದಲು ಕಂಪ್ಯೂಟರ್ ಗ್ರಾಫಿಕ್ಸ್ ಇಂದ ಚಿತ್ರಿಸಲಾಯಿತು. ನಂತರ ಅದರ ಆಧಾರದ ಅನುಸಾರವಾಗಿ ಮಣ್ಣಿನಿಂದ ಅದರ ಮಾದರಿಯನ್ನು ಮಾಡಲಾಯಿತು. ಸಮರ್ಥ ಅಧಿಕಾರಿಗಳ ತಂಡವು ಒಪ್ಪಿಗೆ ಸೂಚಿಸಿದ ಸಂತರ FPR ಮಾದರಿಯನ್ನು ತಯಾರಿಸಲಾಯಿತು. ಈ ಮಾದರಿಯ ಸಹಾಯದಿಂದ ಒಂದು ಅಚ್ಚನ್ನು ಮಾಡಲಾಯಿತು.


ಇದನ್ನೂ ಓದಿ:  Eidgah Maidan: ಈದ್ಗಾ ಮೈದಾನ ಎಂದರೇನು ಗೊತ್ತಾ? ಚಾಮರಾಜಪೇಟೆಯಲ್ಲಿ ವಿವಾದ ಉಂಟಾಗಿದ್ದೇಕೆ?


ಸರಿಯಾದ ಕಂಚಿನ ಅಳತೆಯನ್ನು ಪಡೆಯಲು ಅಚ್ಚಿನ ಒಳಗೆ ಕರಗಿದ ಮೇಣವನ್ನು ಹಚ್ಚಲಾಯಿತು. ಆ ಅಚ್ಚನ್ನು ತೆಗೆದ ನಂತರ ಮೇಣದ ಚಿಪ್ಪಿನ ಒಳಗೆ ಶಾಖ ನಿರೋಧಕಗಳ ಮಿಶ್ರಣವನ್ನು ತುಂಬಿಸಲಾಯಿತು. ಮೇಣದ ಟ್ಯೂಬ್ಗಳನ್ನು ಬಳಸಿ ಕಂಚನ್ನು ಆ ಚಿಪ್ಪಿನ ಒಳಗೆ ತುಂಬಿಸಲಾಯಿತು ಹಾಗೂ ಅದರ ಸಹಾಯದಿಂದ ಈ ಪ್ರಕ್ರಿಯೆಯಲ್ಲಿ ಉಂಟಾಗುವ ಅನಿಲಗಳಿಗೆ ದ್ವಾರಗಳನ್ನು ನಿರ್ಮಿಸಲಾಯಿತು. ಮೇಣದ ಚಿಪ್ಪನ್ನು ಹೊರಗಿನಿಂದ ಭದ್ರಪಡಿಸಲು ಮೆಟಲ್ ಪಿನ್ ಅನ್ನು ಹಾಕಲಾಯಿತು. ನಂತರ ತಯಾರಾದ ಮೇಣದ ಚಿಪ್ಪನ್ನು ಸಂಪೂರ್ಣವಾಗಿ ಶಾಖನಿರೋಧಕ ಪ್ಲಾಸ್ಟಿಕ್ ಇಂದ ಮುಚ್ಚಲಾಯಿತು. ಅದಾದ ನಂತರ ಅದನ್ನು ತಲೆಕೆಳಗಾಗದಂತೆ ಓವೆನ್ ಅಲ್ಲಿ ಇರಿಸಲಾಯಿತು.


ತಾಪಮಾನದ ಸಮಯದಲ್ಲಿ ಪ್ಲಾಸ್ಟರ್ ಒಣಗುತ್ತದೆ. ಮೊದಲೇ ನಿರ್ಮಿಸಲಾಗಿರುವ ಟ್ಯೂಬ್ಗಳಿಂದ ಮೇಣವು ಕರಗಿ ಹೊರಬರುತ್ತದೆ ನಂತರ ಆ ಪ್ಲಾಸ್ಟರ್ ಅಚ್ಚನ್ನು ಮರಳಿನಿಂದ ಮುಚ್ಚಲಾಗುತ್ತದೆ. ನಂತರ ಆ ಪ್ಲಾಸ್ಟರ್ ಅಚ್ಚಿನ ಒಳಗೆ ಕರಗಿದ ಕಂಚನ್ನು ತುಂಬಿಸಲಾಗುತ್ತದೆ. ತಾಪಮಾನ ತಣ್ಣಗಾದ ನಂತರ ಆ ಪ್ಲಾಸ್ಟರ್ ಅನ್ನು ತೆರೆಯಲಾಗುತ್ತದೆ ಮತ್ತು ತಯಾರಗಿರುವ ಕಂಚಿನಲ್ಲಿ ಸಣ್ಣ -ಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಲಾಯಿತು.


6 ತಿಂಗಳ ಕಾಲ ಲಾಂಛನದ ಚಿತ್ರಣ ಹಾಗೂ ಪ್ರಯೋಗ
ಕಡೆಯದಾಗಿ ಪ್ರತಿಮೆಯನ್ನು ಬಿಸಿಲು ಹಾಗೂ ಧೂಳಿನಿಂದ ರಕ್ಷಿಸಲು ಪಾಲಿಶ್ ಮಾಡಲಾಯಿತು, ಕಂಚು ಅದ್ಭುತವಾಗಿ ಹೊಳೆಯುವುದರಿಂದ ಅದಕ್ಕೆ ಯಾವ ಬಣ್ಣವನ್ನು ಹಚ್ಚಲಾಗಿಲ್ಲ. ಉಪಯೋಗಿಸಿರುವ ವಸ್ತುಗಳು ಹಾಗು ತಯಾರಿಸಿರುವ ರೀತಿಯ ದೃಷ್ಟಿಕೋನದಿಂದ ನೋಡಿದರೆ ಭಾರತದಲ್ಲಿ ಬೇರೆಲ್ಲೂ ಈ ರೀತಿಯ ಲಾಂಛನವಿಲ್ಲ.


ಇದನ್ನೂ ಓದಿ: Train Diverted: ಟ್ರೈನ್ ಹೈಜಾಕ್ ಆಯ್ತಾ? ಟ್ವಿಟರ್​​ನಲ್ಲಿ ಪ್ರಯಾಣಿಕನ ಗೋಳು! ನಿಜಕ್ಕೂ ಆಗಿದ್ದೇನು?


ಭಾರತದಾದ್ಯಂತ ಸರಿ ಸುಮಾರು 100ಕ್ಕೂ ಹೆಚ್ಚು ಕೆಲಸಗಾರರು 6 ತಿಂಗಳ ಕಾಲ ಈ ಲಾಂಛನದ ಚಿತ್ರಣ ಹಾಗೂ ಪ್ರಯೋಗಿಸಿದ ಲೋಹದ ಮೇಲೆ ಕೆಲಸ ಮಾಡಿದ್ದಾರೆ. ನೆಲದ ಮೇಲಿಂದ 32 ಮೀಟರ್ ಎತ್ತರವಿರುವ ಕಾರಣ ಈ ಲಾಂಛನವನ್ನು ಅಲ್ಲಿ ಇರಿಸುವುದು ದೊಡ್ಡ ಸವಾಲಾಗಿತ್ತು.

Published by:Ashwini Prabhu
First published: