• Home
  • »
  • News
  • »
  • explained
  • »
  • Explained: ಎಂ ಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ ಲೆಜೆಂಡ್ಸ್ ಟೂರ್ನಿ ಏಕೆ ಆಡುತ್ತಿಲ್ಲ? ಇಲ್ಲಿದೆ ಫುಲ್ ಡೀಟೇಲ್ಸ್

Explained: ಎಂ ಎಸ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ ಲೆಜೆಂಡ್ಸ್ ಟೂರ್ನಿ ಏಕೆ ಆಡುತ್ತಿಲ್ಲ? ಇಲ್ಲಿದೆ ಫುಲ್ ಡೀಟೇಲ್ಸ್

ಎಂ ಎಸ್ ಧೋನಿ

ಎಂ ಎಸ್ ಧೋನಿ

ಎಂ.ಎಸ್ ಧೋನಿಯವರು ಭಾರತದ 74 ನೇ ಸ್ವಾತಂತ್ರ್ಯ ದಿನಾಚರಣೆಯ ರಾತ್ರಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಮಾಹಿ ಕ್ರಿಕೆಟ್ ಅಂಗಣದಿಂದ ಹೊರನಡೆದಿದ್ದು, ಐಪಿಎಲ್ ಹೊರತುಪಡಿಸಿ ಬೇರೆ ಯಾವುದೇ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡಿಲ್ಲ.

ಮುಂದೆ ಓದಿ ...
  • Share this:

ಇಂದಿನ ದಿನಗಳಲ್ಲಿ T20 ಕ್ರಿಕೆಟ್ ಪಂದ್ಯಾವಳಿಯು (T20 Cricket Tournament) ಜನಪ್ರಿಯತೆಯು ಉತ್ತುಂಗಕ್ಕೇರಿದ್ದು ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ತನ್ನ ತೆಕ್ಕೆಯಲ್ಲಿರಿಸಿಕೊಂಡಿದೆ ಎಂದೇ ಹೇಳಬಹುದು. ಅಂತೆಯೇ ಕ್ರಿಕೆಟ್ (Cricket) ಮೈದಾನದಲ್ಲಿ ಜನರನ್ನು ಹುಚ್ಚಾಗಿಸಿದ್ದ ಕ್ರಿಕೆಟ್ ದಂತಕಥೆಗಳು ಮರಳಿ ಕ್ರೀಡಾಂಗಣದತ್ತ ಮುಖ ಮಾಡಿದ್ದು ಅಭಿಮಾನಿಗಳನ್ನು ಮರಳಿ ರಂಜಿಸುತ್ತಿದ್ದಾರೆ. ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಗೌತಮ್ ಗಂಭೀರ್, ವೀರೇಂದ್ರ ಸೆಹವಾಗ್ ಮತ್ತು ಇತರ ಆಟಗಾರರು ಕೂಡ ಮೈದಾನಕ್ಕೆ ಮರಳಿದ್ದು ಮತ್ತು ವಿವಿಧ ಲೀಗ್‌ಗಳಲ್ಲಿ (Leagues) ತಮ್ಮ ಕ್ರೀಡಾ ನೈಪುಣ್ಯತೆಯನ್ನು ಪ್ರದರ್ಶಿಸುತ್ತಿದ್ದಾರೆ. ಕ್ರಿಕೆಟ್ ಇತಿಹಾಸದ ದಂತಕಥೆಗಳೆಂದೇ ಹೆಸರುವಾಸಿಯಾಗಿರುವ ಈ ಕ್ರೀಡಾ ಪಟುಗಳು ಅಸಂಖ್ಯ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ ಅಂತೆಯೇ ಇವರುಗಳ ಆಟವನ್ನು ಸವಿಯುವುದು ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಎಂದೆನಿಸಿದೆ.


ಆದರೆ ಇಲ್ಲೊಬ್ಬರು ಅತ್ಯುತ್ತಮ ಕ್ರಿಕೆಟ್ ದಿಗ್ಗಜ ಮಾತ್ರವೇ ಗೈರುಹಾಜರಾಗಿರುವುದು ಆಶ್ಚರ್ಯಕಾರಿಯಾಗಿದೆ. ಅವರು ಬೇರೆ ಯಾರೂ ಅಲ್ಲ ಮಹೇಂದ್ರ ಸಿಂಗ್ ಧೋನಿ.


ಮಾಹಿ ಕುರಿತು ಮಾಹಿತಿ
ದಾಖಲೆಮಾಡುವ ಆಟಗಾರರ ಕೊರತೆಯನ್ನು ಕ್ರಿಕೆಟ್ ಎಂದಿಗೂ ಕಂಡಿಲ್ಲ. ದಾಖಲೆಯ ಆಟಗಾರರು ಪಂದ್ಯದುದ್ದಕ್ಕೂ ಪ್ರೇಕ್ಷಕರನ್ನು ರಂಜಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದರು ಅದಾಗ್ಯೂ ಕ್ರಿಕೆಟ್ ತಂಡದಲ್ಲಿ ಲೆಜೆಂಡ್‌ಗಳು ಎಂದು ಕರೆಯಿಸಿಕೊಳ್ಳುವ ಆಟಗಾರರು ಬಹಳ ಕಡಿಮೆ. ಆದರೆ ಈ ಲೆಜೆಂಡ್‌ಗಳನ್ನು ಮೀರಿಸಿ ಕ್ರಿಕೆಟ್ ಆಟದ ಕಾರ್ಯವೈಖರಿಯನ್ನು ಬದಲಿಸಿದವರಲ್ಲಿ ಜಾರ್ಖಂಡ್ ಜಾಗ್ವಾರ್ ಧೋನಿ ಒಬ್ಬರಾಗಿದ್ದಾರೆ.


ಲಾಸ್ಟ್ ಬಾಲ್ ಫಿನಿಶರ್ ಎಂಬ ಖ್ಯಾತಿಗೆ ಭಾಜನರಾಗಿದ್ದ ಧೋನಿ, ಭಾರತದ 74 ನೇ ಸ್ವಾತಂತ್ರ್ಯ ದಿನಾಚರಣೆಯ ರಾತ್ರಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಸಂಪೂರ್ಣ ರಾಷ್ಟ್ರವೇ ಅವರ ವಿದಾಯಕ್ಕೆ ಕಂಬನಿದುಂಬಿ ಹಾರೈಸಿತು ಇದರಿಂದ ಅವರು ಸಂಪಾದಿಸಿರುವ ಅಪಾರ ಅಭಿಮಾನಿ ವರ್ಗವೆಷ್ಟು ಎಂಬುದನ್ನು ಕಂಡುಕೊಳ್ಳಬಹುದು. 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಮಾಹಿ ಕ್ರಿಕೆಟ್ ಅಂಗಣದಿಂದ ಹೊರನಡೆದಿದ್ದು, ಐಪಿಎಲ್ ಹೊರತುಪಡಿಸಿ ಬೇರೆ ಯಾವುದೇ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡಿಲ್ಲ.


ಕ್ಯಾಪ್ಟನ್ ಕೂಲ್ ಧೋನಿ
2004 ರಲ್ಲಿ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಆರಂಭಿಸಿದ ಮಾಹಿ ಸೌರವ್ ಗಂಗೂಲಿ ನಾಯಕತ್ವದ ತಂಡದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆಟವಾಡಿದರು. ದ್ರಾವಿಡ್ ನಿವೃತ್ತಿಯ ನಂತರ ತಂಡವನ್ನು ಯಾರು ಮುನ್ನಡೆಸಬೇಕೆಂಬ ಗೊಂದಲಕ್ಕೆ ಎಡೆಮಾಡದೆಯೇ ಕ್ಯಾಪ್ಟನ್ ಕೂಲ್ ಧೋನಿಯ ಹೆಗಲಿಗೆ ನಾಯಕನ ಜವಬ್ದಾರಿಯನ್ನು ಹೊರಿಸಿತು.


ಇದನ್ನೂ ಓದಿ: MS Dhoni: ಮಹತ್ವದ ಘೋಷಣೆ ಮಾಡಿದ ಧೋನಿ, ವಿಶ್ವಕಪ್​ ಕುರಿತು ಭವಿಷ್ಯ ನುಡಿದ ಕ್ಯಾಪ್ಟನ್​ ಕೂಲ್


2007 ರ T-20 ವಿಶ್ವಕಪ್, 2011 ರ ODI ವಿಶ್ವಕಪ್, ಮತ್ತು 2013 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಿ ನಾಯಕನ ಸ್ಥಾನವನ್ನು ತುಂಬಿದರು. ಶಾಂತ ಚಿತ್ತರಾಗಿ ಆಟಗಾರರನ್ನು ಹುರಿದುಂಬಿಸುವ ಧೋನಿಯವರು ಯಾವುದೇ ಸಮಯದಲ್ಲಿ ಕೂಡ ಧೃತಿಗೆಡುವುದಿಲ್ಲ ಹಾಗೂ ಸಹ ಆಟಗಾರರನ್ನು ಬೇಸರಪಡಿಸುವುದಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲೂ ಭಾರತ ತಂಡವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ದ ಧೋನಿ ಒಬ್ಬ ಸಮರ್ಥ ಹಾಗೂ ನಿಪುಣ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.


ಆಕರ್ಷಕ ವ್ಯಕ್ತಿತ್ವದ ರುವಾರಿ
ಧೋನಿಯವರ ಸ್ವಭಾವವೇ ಅಂತಹದ್ದು ಪ್ರತಿಯೊಬ್ಬರೊಂದಿಗೆ ಅಹಂ ಹಾಗೂ ಮುಜುಗರವಿಲ್ಲದೆ ಬೆರೆಯುವ ಧೋನಿ, ಆಕರ್ಷಕ ವ್ಯಕ್ತಿತ್ವದ ರುವಾರಿ ಎಂದೆನಿಸಿದ್ದಾರೆ. ಕ್ರಿಕೆಟ್ ಕಲಿಗಳಿಂದ ಹಿಡಿದು ಇದೀಗ ತಾನೇ ಕ್ರಿಕೆಟ್ ಲೋಕಕ್ಕೆ ಅಂಬೆಗಾಲಿಡುವ ಯು ಕ್ರೀಡಾಳುಗಳು ಕೂಡ ಧೋನಿಯವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿರುತ್ತಾರೆ.


ಭಾರತದ ಮಾಜಿ ನಾಯಕ ಉಳಿದ ಆಟಗಾರರಿಗಿಂತ ಹೆಸರುವಾಸಿಯಾಗಿದ್ದು ಪ್ರಬಲ ಫ್ಯಾನ್ ಬೇಸ್ ಅನ್ನು ಪಡೆದುಕೊಂಡವರು. ಆಟದಲ್ಲಿ ಮಾಹಿ ಇದ್ದರೆ ಮುಗಿಯಿತು ಯಾವುದೇ ಪಂದ್ಯ ಸೋಲುವ ಮಾತೇ ಇಲ್ಲ ಹಾಗೂ ಅವರ ಜನಪ್ರಿಯತೆ ಹಾಗೂ ಕ್ರೀಡಾ ಸಾಮರ್ಥ್ಯ ಅಂತಹುದ್ದು. ಆದರೆ ಲೆಜೆಂಡ್ಸ್ ಟೂರ್ನಿಗಳಲ್ಲಿ ಧೋನಿಯ ಕೊರತೆ ಮಾತ್ರ ಎಲ್ಲರಿಗೂ ಸೋಜಿಗವನ್ನುಂಟು ಮಾಡಿದ ಸಂಗತಿಯಾಗಿದೆ.


ಲೆಜೆಂಡ್ಸ್ ಟೂರ್ನಿಯಲ್ಲಿ ಮಾಹಿ ಏಕಿಲ್ಲ?
ಇದಕ್ಕೆ ಏನು ಕಾರಣ ಎಂದು ನೋಡುವುದಾದರೆ ಐಪಿಎಲ್ ಆಗಿದೆ. ಹೌದು ಧೋನಿಯವರು ಲೆಜೆಂಡ್ಸ್ ಲೀಗ್‌ನಲ್ಲಿ ಭಾಗವಹಿಸದಿರಲು ಕಾರಣ ಐಪಿಎಲ್ ಆಗಿದೆ. ನಿಯಮಗಳ ಪ್ರಕಾರ ಬಿಸಿಸಿಐ ವ್ಯಾಪ್ತಿಯ ಹೊರಗಿನ ಯಾವುದೇ ತಂಡದೊಂದಿಗೆ ಆಡಲು ಇಲ್ಲವೇ ತರಬೇತುದಾರನಾಗಿ ಕಾರ್ಯನಿರ್ವಹಿಸಲು ಕ್ರೀಡಾಳು ಭಾರತೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರಬೇಕು.


ಧೋನಿ ಯಾವುದೇ ಲೀಗ್ ಪಂದ್ಯಾವಳಿಯಲ್ಲಿ ಆಡಬೇಕು ಎಂದಾದಲ್ಲಿ ಅವರು ಐಪಿಎಲ್‌ನಿಂದ ಕೂಡ ನಿರ್ಗಮಿಸಬೇಕಾಗುತ್ತದೆ. ಟಿ20 ಲೀಗ್‌ನಿಂದ ಅವರು ನಿವೃತ್ತಿ ಹೊಂದಿದ ದಿನ, ಸಿಎಸ್‌ಕೆಯ ಸೋದರ ಸಂಸ್ಥೆಯಾದ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್‌ಗೆ ತರಬೇತುದಾರನಾಗಿ ಕಾರ್ಯನಿರ್ವಹಿಸಬಹುದು ಹಾಗೂ ಅದೇ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಾರ್ಗದರ್ಶಕನಾಗಿ ಮೆಂಟರ್ ಟೋಪಿಯನ್ನು ಧರಿಸಬಹುದು.


ಇದನ್ನೂ ಓದಿ:  Sourav Ganguly: ನನ್ನ ಮಗಳು ಕ್ರಿಕೆಟ್​ ಆಡಿದ್ರೆ ಆ ಆಟಗಾರ್ತಿಯಂತೆ ಆಗು ಅಂತಿದ್ದೆ, ಬಿಗ್​ ಸೀಕ್ರೆಟ್​ ಬಿಚ್ಚಿಟ್ಟ ದಾದಾ!


ಇತ್ತೀಚೆಗಷ್ಟೇ ಸುರೇಶ್ ರೈನಾ ಹಾಗೂ ರಾಬಿನ್ ಉತ್ತಪ್ಪ ಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ರೈನಾ ಲೆಜೆಂಡ್ಸ್ ಟೂರ್ನಿಮೆಂಟ್‌ನಲ್ಲಿ ಆಟವಾಡುತ್ತಿದ್ದರೆ, ಉತ್ತಪ್ಪ ಯಾವುದೇ ಲೀಗ್‌ನಲ್ಲಿ ಆಟವಾಡಲು ಅರ್ಹತೆ ಪಡೆದುಕೊಂಡಿದ್ದಾರೆ. ಬಿಗ್ ಬ್ಯಾಷ್ ಲೀಗ್, ದಿ ಹಂಡ್ರೆಡ್, ವಿಟಾಲಿಟಿ T20 ಬ್ಲಾಸ್ಟ್ ಅಥವಾ ಯಾವುದೇ ಇತರ ಪಂದ್ಯಾವಳಿಗಳಿಗಳಲ್ಲಿ ಕೂಡ ಭಾಗವಹಿಸಬಹುದು.


ಐಪಿಎಲ್ 2023 ರಲ್ಲಿ ಕೂಡ ಮಾಹಿ ಆಡುವುದಾಗಿ ಈಗಾಗಲೇ ಘೋಷಿಸಿರುವುದರಿಂದ ಧೋನಿಯನ್ನು 2023 ರ ಮಧ್ಯಭಾಗದವರೆಗೆ ಯಾವುದೇ ಲೀಗ್ ಟೂರ್ನಿಮೆಂಟ್‌ಗಳಲ್ಲಿ ನೋಡಲಾಗುವುದಿಲ್ಲ. ಐಪಿಎಲ್‌ನಿಂದ ನಿವೃತ್ತಿ ಹೊಂದಿದ ನಂತರ ಮಾಹಿಯವರು ಯಾವುದೇ ಲೀಗ್‌ನಲ್ಲಿ ಆಡುವುದಕ್ಕೆ ಅವಕಾಶ ಪಡೆದುಕೊಳ್ಳುತ್ತಾರೆ.


ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2022:
2022 ರ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಪ್ರಾಯೋಜಕತ್ವದ ಕಾರಣಗಳಿಗಾಗಿ ಇದನ್ನು Skyexch.net ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಎಂದೂ ಕರೆಯಲಾಗುತ್ತದೆ ಮತ್ತು ಸ್ಯಾಟ್ಸ್‌ಪೋರ್ಟ್ ನ್ಯೂಸ್ ಪ್ರಾಯೋಜಕರಿಂದ ನಡೆಸಲ್ಪಡುವ ಈ ಸೀರೀಸ್ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಲೀಗ್‌ನ ಎರಡನೇ ಸೀಸನ್ ಎಂದೆನಿಸಿದೆ.


ನ್ಯೂಜಿಲೆಂಡ್ ಲೆಜೆಂಡ್ಸ್ ಈ ಆವೃತ್ತಿಗೆ ಹೊಸದಾಗಿ ಸೇರ್ಪಡೆಗೊಂಡ ತಂಡವಾಗಿದೆ. ಈ ಆಟಗಾರರು ಭಾರತ, ಇಂಗ್ಲೆಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶದ ಪ್ರಸಿದ್ಧ ಆಟಗಾರರೊಂದಿಗೆ ಜೊತೆಯಾಗಿ ಕ್ರಿಕೆಟ್ ಅಖಾಡಾದಲ್ಲಿ ತಮ್ಮ ಸಾಮರ್ಥ್ಯ ಮೆರೆಯಲಿದ್ದಾರೆ. ಈವೆಂಟ್ ಪ್ರಮುಖವಾದ ಉದ್ದೇಶವನ್ನು ಹೊಂದಿದ್ದು, ದೇಶ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿನ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನಿಟ್ಟುಕೊಂಡು ಪಂದ್ಯಗಳನ್ನು ಆಯೋಜಿಸುತ್ತಿದೆ. ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ಅನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಬೆಂಬಲಿಸುತ್ತದೆ.


ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ 2022 ಗಾಗಿ ಭಾರತ ತಂಡ
ಭಾರತದ ಲೆಜೆಂಡರಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಟೂರ್ನಿಯಲ್ಲಿ ಇಂಡಿಯಾ ಲೆಜೆಂಡ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ನಿವೃತ್ತಿ ಘೋಷಿಸಿದ್ದ ಭಾರತದ ಮಾಜಿ ಬ್ಯಾಟರ್ ಸುರೇಶ್ ರೈನಾ, ಈಗ 16 ಸದಸ್ಯರ ಇಂಡಿಯಾ ಲೆಜೆಂಡ್ಸ್ ತಂಡವನ್ನು ಟೂರ್ನಿಯಲ್ಲಿ ಭಾಗವಹಿಸಲು ಸೇರಿಕೊಂಡಿದ್ದಾರೆ. ಈಗಾಗಲೇ ಉತ್ತರ ಪ್ರದೇಶದ ಕ್ರಿಕೆಟ್ ಅಸೋಸಿಯೇಷನ್ ​​(UPCA) ನಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (NOC) ಪಡೆದುಕೊಂಡಿರುವ ರೈನಾ ತಂಡವನ್ನು ಸೇರಿಕೊಳ್ಳುವ ನಿರ್ಧಾರದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.


ಭಾರತದ ಲೆಜೆಂಡ್ಸ್ ತಂಡದಲ್ಲಿ ಸಚಿನ್ ತೆಂಡೂಲ್ಕರ್ (ಕ್ಯಾಪ್ಟನ್), ಯುವರಾಜ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ಮುನಾಫ್ ಪಟೇಲ್, ಸುಬ್ರಮಣ್ಯಂ ಬದ್ರಿನಾಥ್, ಸ್ಟುವರ್ಟ್ ಬಿನ್ನಿ, ನಮನ್ ಓಜಾ, ಮನ್‌ಪ್ರೀತ್ ಗೋನಿ, ಪ್ರಗ್ಯಾನ್ ಓಜಾ, ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಪವಾರ್ ಮತ್ತು ರಾಹುಲ್ ಶರ್ಮಾರ ಉಪಸ್ಥಿತಿ ಇದೆ.


ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2022 ಪಂದ್ಯಗಳು ಹಾಗೂ ಸಮಯ
ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2022 18 ಪಂದ್ಯಗಳನ್ನು ಒಳಗೊಂಡಿದ್ದು ಅದರಲ್ಲಿ ಐದು ಮಾತ್ರ ಸಂಜೆ 3:30 ಕ್ಕೆ ಪ್ರಾರಂಭವಾಗುತ್ತದೆ. ಉಳಿದ ಆಟಗಳನ್ನು ಸಂಜೆ 7.30 ಕ್ಕೆ ಆಡಲಾಗುತ್ತದೆ.


ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2022 ಆಟಗಳ ಪ್ರಸಾರ
ಈ ಪಂದ್ಯಗಳ ನೇರ ಪ್ರಸಾರವು ಸ್ಪೋರ್ಟ್ಸ್ 18, ಕಲರ್ಸ್ ಸಿನಿಪ್ಲೆಕ್ಸ್ ಮತ್ತು ಕಲರ್ಸ್ ಸಿನಿಪ್ಲೆಕ್ಸ್ ಸೂಪರ್‌ಹಿಟ್‌ಗಳಲ್ಲಿ ಚಾನಲ್‌ಗಳಲ್ಲಿ ಪ್ರಸಾರಗೊಳ್ಳುತ್ತದೆ. ವೂಟ್ ಮತ್ತು ಜಿಯೋ ಟಿವಿ ಆ್ಯಪ್‌ಗಳ ಮೂಲಕ ಕೂಡ ಆಟಗಳನ್ನು ಲೈವ್-ಸ್ಟ್ರೀಮ್ ಮಾಡಲಾಗುತ್ತಿದ್ದು ಕ್ರಿಕೆಟ್ ಪ್ರೇಮಿಗಳು ಆ್ಯಪ್‌ಗಳಲ್ಲಿ ಕೂಡ ಟೂರ್ನಿಮೆಂಟ್‌ಗಳನ್ನು ಆಸ್ವಾದಿಸಬಹುದು.


ಇದನ್ನೂ ಓದಿ: Mohammad Amir: ಜೈಲಿನಲ್ಲಿ ಪ್ರೀತಿ, ವಕೀಲೆ ಜೊತೆ ಮದುವೆ; ಮೂರನೇ ಬಾರಿಗೆ ತಂದೆಯಾದ ಕ್ರಿಕೆಟಿಗ!


ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2022 ಪಂದ್ಯಗಳು ಎಲ್ಲೆಲ್ಲಿ ನಡೆಯಲಿವೆ?
ಕಾನ್ಪುರ, ಇಂದೋರ್, ಡೆಹ್ರಾಡೂನ್ ಮತ್ತು ರಾಯ್‌ಪುರದ ನಾಲ್ಕು ನಗರಗಳು ಪಂದ್ಯಗಳ ಸ್ಥಳಗಳಾಗಿವೆ. ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳು ರಾಯ್‌ಪುರದಲ್ಲಿ ನಡೆಯಲಿವೆ.

Published by:Ashwini Prabhu
First published: