• ಹೋಂ
  • »
  • ನ್ಯೂಸ್
  • »
  • Explained
  • »
  • Explainer: ಪಂಜಾಬ್ ಪೊಲೀಸರು ಬಲೆ ಬೀಸಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅಮೃತ್ ಪಾಲ್ ಸಿಂಗ್ ಯಾರು? ಈತನ ಹಿನ್ನಲೆ ಇಲ್ಲಿದೆ

Explainer: ಪಂಜಾಬ್ ಪೊಲೀಸರು ಬಲೆ ಬೀಸಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅಮೃತ್ ಪಾಲ್ ಸಿಂಗ್ ಯಾರು? ಈತನ ಹಿನ್ನಲೆ ಇಲ್ಲಿದೆ

2020-2021 ರ ಪ್ರತಿಭಟನೆಯ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ದೀಪ್ ಸಿಧು ದೆಹಲಿ ಗಡಿಯ ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.

2020-2021 ರ ಪ್ರತಿಭಟನೆಯ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ದೀಪ್ ಸಿಧು ದೆಹಲಿ ಗಡಿಯ ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.

2020-2021 ರ ಪ್ರತಿಭಟನೆಯ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ದೀಪ್ ಸಿಧು ದೆಹಲಿ ಗಡಿಯ ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.

  • Share this:
  • published by :

ದಿವಂಗತ ಪಂಜಾಬಿ (Panjab) ನಟ ಹಾಗೂ ವಕೀಲ ದೀಪ್ ಸಧು ಸ್ಥಾಪಿಸಿರುವ ವಾರಿಸ್ ಪಂಜಾಬ್ ದೇ ಸಂಘಟನೆಯ ಅಧಿಕಾರ ವಹಿಸಿಕೊಂಡಿರುವುದಾಗಿ ಸ್ವಯಂ ಘೋಷಿಸಿರುವ ಅಮೃತ್‌ಪಾಲ್ (Amritpal Singh) ಸಿಂಗ್ ಭಾರತೀಯ ಖಲಿಸ್ತಾನ್ ಪ್ರತ್ಯೇಕತಾವಾದಿಯಾಗಿ ಪೊಲೀಸರಿಗೆ ಬೇಕಾಗಿರುವ ಪ್ರಮುಖ ಅಪರಾಧಿ ಎಂದೆನಿಸಿದ್ದಾನೆ. ದೀಪ್ ಸಧು (Deep Sidhu) ಸ್ಥಾಪಿಸಿರುವ ಸಂಘಟನೆಯ ಸಿದ್ಧಾಂತಗಳಿಗೆ ವಿರುದ್ಧವಾಗಿ ಅಮೃತ್‌ಪಾಲ್ ಸಂಘಟನೆಯನ್ನು ಬಳಸಿಕೊಂಡಿದ್ದು, ಯುವಕರನ್ನೇ ತನ್ನ ಮುಖ್ಯ ಆಯುಧವಾಗಿ ಬಳಸಿಕೊಂಡು ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಆಪಾದನೆ ಆತನ ಮೇಲಿದೆ.


ಗೃಹ ಸಚಿವರಿಗೆ ಬೆದರಿಕೆಯೊಡ್ಡಿರುವ ಅಮೃತ್‌ಪಾಲ್


ಇದೀಗ ಪಂಜಾಬ್‌ನ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿರುವ ಅಮೃತ್‌ಪಾಲ್‌, ಪಂಜಾಬ್ ಪೊಲೀಸರಿಂದ ತಪ್ಪಿಸಿಕೊಳ್ಳುವುದನ್ನು ಮುಂದುವರೆಸಿದರೆ, ಇವರ ಅನುಯಾಯಿಗಳನ್ನು ಪೊಲೀಸರು ಜೈಲಿಗಟ್ಟುತ್ತಿದ್ದಾರೆ.


ಅದಲ್ಲದೆ ಅಮೃತ್‌ಪಾಲ್‌ರನ್ನು ಪರಾರಿಯಾಗಿರುವ ಆರೋಪಿ ಎಂದು ಪಂಜಾಬ್ ಪೊಲೀಸರು ಘೋಷಣೆ ಮಾಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬೆದರಿಕೆ ಹಾಕಿರುವ ಆಪಾದನೆ ಕೂಡ ಈತನ ಮೇಲಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಗತಿಯೇ ಶಾ ಅವರಿಗೆ ಬರಲಿದೆ ಎಂದು ಸಿಂಗ್ ಧಮ್ಕಿ ಹಾಕಿದ್ದಾರೆ ಎಂದು ವರದಿಯಾಗಿದೆ.


ಅಮೃತ್‌ಪಾಲ್ ಸಹಾಯಕರಾದ ದಲ್ಜೀತ್ ಸಿಂಗ್ ಕಲ್ಸಿ, ಭಗವಂತ್ ಸಿಂಗ್, ಗುರ್ಮೀತ್ ಸಿಂಗ್ ಮತ್ತು ಪ್ರಧಾನ್‌ಮಂತ್ರಿ ಬಜೇಕಾ ಈ ನಾಲ್ವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಯನ್ನು ಹೇರಲಾಗಿದೆ.


ಇದನ್ನೂ ಓದಿ: CUET PG 2023 ಪರೀಕ್ಷೆಗೆ ಆದ್ಯತೆ ನೀಡಲಿದೆ ಈ 15 ಹೊಸ ವಿಶ್ವವಿದ್ಯಾಲಯಗಳು


ಪ್ರಸ್ತುತ ಅವರನ್ನು ಅಸ್ಸಾಂನ ದಿಬ್ರುಗಢ ಜೈಲಿನಲ್ಲಿ ಇರಿಸಲಾಗಿದ್ದು, ಅಮೃತಪಾಲ್ ಸಿಂಗ್ ಅವರ ಚಿಕ್ಕಪ್ಪ ಹರ್ಜಿತ್ ಸಿಂಗ್ ಅವರನ್ನು ಸೋಮವಾರ ಬಂಧಿಸಲಾಗಿದೆ.


ಅಮೃತ್‌ಪಾಲ್ ಸಿಂಗ್ ವರ್ಸಸ್ ಪಂಜಾಬ್ ಪೊಲೀಸ್


ಅಮೃತಪಾಲ್ ಸಿಂಗ್ ಅವರ ಆಪ್ತ ಸಹಾಯಕ ಲವ್‌ಪ್ರೀತ್ ಸಿಂಗ್ ತೂಫಾನ್‌ನನ್ನು ಇರಿಸಿದ್ದ ಅಜ್ನಾಲಾ ಪೊಲೀಸ್ ಠಾಣೆಯ ಅಧಿಕಾರಿಗಳೊಂದಿಗೆ ಆತನ ಅನುಯಾಯಿಗಳು ಸಂಘರ್ಷಕ್ಕೆ ಇಳಿದ ಸಮಯದಲ್ಲಿ ಇದು ಚರ್ಚೆಗೆ ಗ್ರಾಸವಾಯಿತು ಹಾಗೂ ವೈರಲ್ ಆಯಿತು.


ಈ ಸಮಯದಲ್ಲಿಯೇ ಅಮೃತ್‌ಪಾಲ್ ಸಿಂಗ್ ಸಾರ್ವಜನಿಕರ ಗಮನಕ್ಕೆ ಬಂದನು. ಅಮೃತಪಾಲ್ ಸಿಂಗ್ ಬೆಂಬಲಿಗರು ಕತ್ತಿ ಮತ್ತು ಬಂದೂಕು ಹಿಡಿದು ಬ್ಯಾರಿಕೇಡ್‌ಗಳನ್ನು ಎಳೆದಾಡಿ ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿ ಅಪಹರಣ ಪ್ರಕರಣದ ಆರೋಪಿ ಲವ್‌ಪ್ರೀತ್ ಸಿಂಗ್‌ನನ್ನು ಬಿಡುಗಡೆ ಮಾಡಬೇಕೆಂದು ಬೆದರಿಸಿದ್ದಾರೆ.


ನ್ಯಾಯಾಲಯದ ಆದೇಶದ ನಂತರ, ಫೆಬ್ರವರಿ 24 ರಂದು ಲವ್‌ಪ್ರೀತ್ ತೂಫಾನ್ ಅವರನ್ನು ಅಂತಿಮವಾಗಿ ಬಿಡುಗಡೆ ಮಾಡಲಾಯಿತು. ಈತ ಅಮೃತ್‌ಪಾಲ್ ಸಿಂಗ್ ಅವರೊಂದಿಗೆ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡುತ್ತಿರುವ ಇತರ ಸದಸ್ಯರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದೆ.


ಪಂಜಾಬ್ ಪೋಲಿಸರಿಂದ ಈಗ ದೇಶಭ್ರಷ್ಟ ಎಂದು ಘೋಷಿಸಲಾದ ಖಲಿಸ್ತಾನಿ ನಾಯಕನ ಹಠಾತ್ ಕಣ್ಮರೆ ಹಾಗೂ ಪೊಲೀಸರಿಂದ ಅಮೃತ್‌ಪಾಲ್ ಸಿಂಗ್ ಹೇಗೆ ತಪ್ಪಿಸಿಕೊಂಡನು ಎಂಬುದು ಕುತೂಹಲಕಾರಿಯಾಗಿದೆ.


ವಾರಿಸ್ ಪಂಜಾಬ್ ದೇ ಸಂಘಟನೆ


ಪಂಜಾಬ್‌ನ ಉತ್ತರಾಧಿಕಾರಿಗಳು ಎಂದೂ ಕರೆಯಲಾದ ಈ ಸಂಘಟನೆಯನ್ನು ದಿವಂಗತ ನಟ, ವಕೀಲ ಹಾಗೂ ಕಾರ್ಯಕರ್ತ ದೀಪ್ ಸಿಧು ಅವರು ಸೆಪ್ಟೆಂಬರ್ 30, 2021 ರಂದು ಸ್ಥಾಪಿಸಿದರು. ಈ ಸಂಘಟನೆ ಪಂಜಾಬ್‌ನ ಜನರ ಹಕ್ಕುಗಳನ್ನು ರಕ್ಷಿಸುವ ಹಾಗೂ ಅವರಿಗಾಗಿ ಹೋರಾಡುವ ಸಂಸ್ಥೆಯಾಗಿದೆ ಎಂದು ದೀಪ್ ಸಧು ಹೇಳಿದ್ದರು.


ಸಾಮಾಜಿಕ ವೇದಿಕೆಯಾಗಿರುವ ಈ ಸಂಘಟನೆ ಯಾವುದೇ ರಾಜಕೀಯ ಪಕ್ಷಕ್ಕೆ ಬದ್ಧರಾಗಿಲ್ಲ ಎಂದು ಹೇಳಿಕೆ ನೀಡಿದೆ. ಯಾವುದೇ ಧರ್ಮ, ಜಾತಿಯವರು ನಮ್ಮ ಸಂಘಟನೆಯಲ್ಲಿ ಪಾಲ್ಗೊಂಡು ಪಂಜಾಬ್‌ನ ಒಳಿತಿಗಾಗಿ ಶ್ರಮಿಸಬಹುದು ಎಂದು ಹೇಳಿಕೆ ನೀಡಿದೆ.


ಇದನ್ನೂ ಓದಿ: IRCTC Ambedkar Yatra: ಏಪ್ರಿಲ್​ 14 ರಂದು ಅಂಬೇಡ್ಕರ್​ ಯಾತ್ರೆ ಆರಂಭ; ಈ ಪ್ರವಾಸಕ್ಕೆ ನೀವೂ ಹೋಗಬಹುದು


1947 ರ ಮೊದಲು, ನಾವು ಸಾಮರಸ್ಯದಿಂದ ಒಟ್ಟಿಗೆ ವಾಸಿಸುತ್ತಿದ್ದೆವು, ಆದರೆ ಬ್ರಿಟಿಷರು ನಮ್ಮಿಂದ ಆ ಸಹೋದರತ್ವವನ್ನು ಕಿತ್ತುಕೊಂಡರು. ಗುರುಗಳು ಜಾತೀಯತೆಯ ವಿರುದ್ಧ ಹೋರಾಡಿದ್ದಾರೆ ಎಂದು ಸಿಧು ಸಂಘಟನೆಯ ಉದ್ಘಾಟನಾ ಸಮಯದಲ್ಲಿ ತಿಳಿಸಿದ್ದರು.


2020-2021 ರ ಪ್ರತಿಭಟನೆಯ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ದೀಪ್ ಸಿಧು ದೆಹಲಿ ಗಡಿಯ ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.


ಅಮೃತ್‌ಪಾಲ್ ಸಿಂಗ್ ಯಾರು


ಅಮೃತಸರದ ಜಲ್ಲುಪುರ್ ಖೇರಾ ಗ್ರಾಮದಲ್ಲಿ 1993 ರಲ್ಲಿ ಜನಿಸಿದ ಅಮೃತಪಾಲ್ ಸಿಂಗ್ ದುಬೈ ಯಲ್ಲಿ ನೆಲೆಸಿದವರಾಗಿದ್ದು, ವ್ಯಾಪಾರ ಕುಟುಂಬದಿಂದ ಬಂದವರು. ಆತ ತನ್ನನ್ನು ತಾನು ಖಲಿಸ್ತಾನಿ ಎಂದು ಬಣ್ಣಿಸಿದ್ದು 1984 ರಲ್ಲಿ ಭಾರತೀಯ ಸೇನೆಯ ಆಪರೇಷನ್ ಬ್ಲೂಸ್ಟಾರ್ ಸಮಯದಲ್ಲಿ ಮೃತನಾದ ಜರ್ನೈಲ್ ಸಿಂಗ್ ಭಿಂದ್ರನ್ವಾಲೆಯಿಂದ ಪ್ರಭಾವಿತರಾಗಿದ್ದರು. ಅಮೃತ್‌ಪಾಲ್ ಸಿಂಗ್ ತನ್ನ ವರ್ಚಸ್ಸನ್ನೇ ಬದಲಾಯಿಸಿದ್ದು ನೀಲಿ ಪೇಟ ಹಾಗೂ ಉದ್ದನೆಯ ಗಡ್ಡವನ್ನು ಬಿಟ್ಟುಕೊಂಡು ತನ್ನ ಸುತ್ತ ಅಂಗರಕ್ಷಕರನ್ನು ಹೊಂದಿದ್ದಾನೆ ಎಂಬ ಗುಮಾನಿ ಇದೆ.


ಭಿಂದ್ರನ್ವಾಲೆಯಂತೆಯೇ ಪೋಷಾಕು ಧರಿಸುವ ಅಮೃತ್‌ಪಾಲ್ ಸಿಂಗ್ ಆತನನ್ನೇ ಅನುಕರಿಸುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ. ಆದರೆ ಸಂದರ್ಶನವೊಂದರಲ್ಲಿ ಈ ವರದಿ ಸುಳ್ಳು ಎಂದು ಹೇಳಿರುವ ಅಮೃತ್‌ಪಾಲ್ ತಾನು ಆತನಿಂದ ಸ್ಫೂರ್ತಿ ಪಡೆದಿರುವುದು ನಿಜ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಭಿಂದ್ರನ್ವಾಲೆ ನನಗೆ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದು ಅವರು ತೋರಿದ ಹಾದಿಯಲ್ಲಿ ನಡೆಯುತ್ತೇನೆ ಹಾಗೂ ಅವರಂತೆಯೇ ಇರಲು ಬಯಸುತ್ತೇನೆ ಎಂದು ಅಮೃತ್‌ಪಾಲ್ ಸಿಂಗ್ ಹೇಳಿದ್ದಾರೆ.




ಪ್ರತಿಯೊಬ್ಬ ಸಿಖ್ ಕೂಡ ಅವರಂತೆಯೇ ಇರಲು ಬಯಸುತ್ತಾನೆ ಆದರೆ ನನ್ನನ್ನು ನಾನು ಅವರಂತೆಯೇ ಬದಲಾಯಿಸಿಕೊಂಡಿಲ್ಲ ಏಕೆಂದರೆ ಅವರ ಕಾಲಿನ ಧೂಳಿಗೂ ನಾನು ಸಮನಲ್ಲ ಎಂದು ಅಮೃತ್‌ಪಾಲ್ ಹೇಳಿಕೆ ನೀಡಿದ್ದಾರೆ.


ದೀಪ್ ಸಿಧು ಸಾವಿನ ನಂತರ ಅಮೃತ್‌ಪಾಲ್ ಸಿಂಗ್ ಸಧು ಸಂಘಟನೆಯ ಅಧಿಕಾರ ವಹಿಸಿಕೊಂಡರು. ಮೊಗಾ ಜಿಲ್ಲೆಯ ಭಿಂದ್ರನ್‌ವಾಲೆ ಅವರ ಪೂರ್ವಜರ ಗ್ರಾಮ ರೋಡ್‌ನಲ್ಲಿ 'ದಸ್ತಾರ್ ಬಂದಿ' ಸಮಾರಂಭ (ಔಪಚಾರಿಕ ಸಿಖ್ ಬ್ಯಾಪ್ಟಿಸಮ್) ಕಳೆದ ವರ್ಷ ಸೆಪ್ಟೆಂಬರ್ 29 ರಂದು ನಡೆಯಿತು.


ಈ ಸಮಯದಲ್ಲಿ ಅಮೃತಪಾಲ್ ಸಿಂಗ್ ಅವರು ವಾರಿಸ್ ಪಂಜಾಬ್ ದೇ ಅವರ ಸಿದ್ಧಾಂತವನ್ನು ಪ್ರತ್ಯೇಕ ರಾಜ್ಯಕ್ಕಾಗಿ ಮುಕ್ತ ಕರೆಯನ್ನಾಗಿ ಪರಿವರ್ತಿಸಿದರು ಅಂತೆಯೇ ದೀಪ್ ಸಿಧು ಅವರ ಸಿದ್ಧಾಂತಕ್ಕೆ ಭಿನ್ನವಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡಲು ಯುವ ಸಿಖ್ಖರು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಿದರು. ಅಮೃತ್‌ಪಾಲ್ ಸಿಂಗ್ ಹೇಳುವಂತೆ ಪಂಜಾಬ್‌ನ ಹಲವು ಸಮಸ್ಯೆಗಳಿಗೆ ಪ್ರತ್ಯೇಕ ರಾಜ್ಯವೇ ಪರಿಹಾರ ಎಂದಿದ್ದಾರೆ.


ದೀಪ್ ಸಿಧು ಸಂಘಟನೆ ಇದಲ್ಲ ಎಂದ ದೀಪ್ ಕುಟುಂಬಸ್ಥರು


ದೀಪ್ ಸಿಧು ಅವರ ಕುಟುಂಬವು ಅಮೃತಪಾಲ್ ಸಿಂಗ್ ಮತ್ತು ಅವರ ಸಂಘಟನೆಯಿಂದ ಪ್ರತ್ಯೇಕತೆಯನ್ನು ಕಾಯ್ದಿರಿಸಿಕೊಂಡಿದೆ. ಅವರು ತಿಳಿಸಿರುವಂತೆ, ಅಮೃತ್‌ಪಾಲ್ ಸಿಂಗ್ ಅಧಿಕಾರ ವಹಿಸಿಕೊಂಡಿರುವುದರ ಬಗ್ಗೆ ಮಾಹಿತಿ ಇಲ್ಲ ಎಂದು ವರದಿ ನೀಡಿದ್ದಾರೆ.


ದೀಪ್ ಸಿಧು ಹಿರಿಯ ಸಹೋದರ ಮನದೀಪ್ ಸಿಂಗ್ ಸಿಧು ದಿ ಸುದ್ದಿ ಪತ್ರಿಕೆಗೆ ಹೇಳಿಕೆ ನೀಡಿದ್ದು, ನಾವಾಗಲೀ ದೀಪ್ ಆಗಲಿ ಅಮೃತ್‌ಪಾಲ್‌ರನ್ನು ಭೇಟಿಯಾಗಿಲ್ಲ. ದೀಪ್‌ರೊಂದಿಗೆ ಕೆಲ ಕಾಲ ಸಂಪರ್ಕದಲ್ಲಿದ್ದ ಅಮೃತ್‌ಪಾಲ್ ನಂತರ ಆತನನ್ನು ಬ್ಲಾಕ್ ಮಾಡಿರುವುದಾಗಿ ತಿಳಿಸಿದ್ದಾರೆ.


ತನ್ನ ಸಹೋದರ ಸಂಘಟನೆಯ ಅಧಿಕಾರ ವಹಿಸಿಕೊಂಡಿರುವುದರ ಬಗ್ಗೆಯಾಗಲೀ ಸಂಘಟನೆಯ ಮುಖ್ಯಸ್ಥ ಎಂದು ಅಮೃತ್‌ಪಾಲ್ ಖುದ್ದ ಘೋಷಣೆ ಮಾಡಿಕೊಂಡಿರುವುದರ ಬಗ್ಗೆಯಾಗಲೀ ತನಗೆ ಏನೂ ಅರಿವಿಲ್ಲ ಎಂಬುದು ಮನ್‌ದೀಪ್ ಮಾತಾಗಿದೆ.


ಸಹೋದರನ ಹೆಸರು ಹಾಗೂ ಆತ ಸ್ಥಾಪಿಸಿದ ಸಂಘಟನೆಯನ್ನು ಬಳಸಿಕೊಂಡು ಅಮೃತ್‌ಪಾಲ್ ಸಮಾಜ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾನೆ. ತನ್ನ ಸಹೋದರನ ಸಾಮಾಜಿಕ ಖಾತೆಗಳಿಗೆ ಪ್ರವೇಶ ಪಡೆದುಕೊಂಡು ಅದರಲ್ಲಿ ವಿರೋಧಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ.


ಅಮೃತ್‌ಪಾಲ್ ಸಿಂಗ್ ಹಾಗೂ ಅನುಯಾಯಿಗಳ ಮೇಲಿರುವ ಪ್ರಕರಣವೇನು?


ಅಮೃತಪಾಲ್ ಸಿಂಗ್ ಅವರ ಸಹಾಯಕರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ನಂತರ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಇತ್ತೀಚಿನ ಪ್ರಕರಣವನ್ನು ದಾಖಲಿಸಲಾಗಿದೆ.


ಅಧಿಕೃತ ಮೂಲಗಳ ಪ್ರಕಾರ, ಅಮೃತ್‌ಪಾಲ್ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್ಐ ಮತ್ತು ವಿದೇಶದಲ್ಲಿರುವ ಕೆಲವು ಭಯೋತ್ಪಾದಕ ಗುಂಪುಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.


ಖಲಿಸ್ತಾನಿ ನಾಯಕ ಯುಕೆ ಮೂಲದ ಖಲಿಸ್ತಾನಿ ಭಯೋತ್ಪಾದಕ ಅವತಾರ್ ಸಿಂಗ್ ಖಾಂಡಾಗೆ ಹತ್ತಿರವಾಗಿದ್ದಾನೆ ಎಂದು ನಂಬಲಾಗಿದೆ ಮತ್ತು ಆತನ ಬೆಂಬಲವೇ ಅಮೃತ್‌ಪಾಲ್‌ಗೆ ಸಂಘಟನೆಯ ಮೂಲಕ ಸಾಮಾಜಿಕ ವಿರೋಧಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಮುಖ್ಯ ಕಾರಣ ಎಂದು ತಿಳಿದು ಬಂದಿದೆ.


ಅಮೃತ್‌ಪಾಲ್ ಹಿಂಸಾತ್ಮಕ ಪ್ರತಿಭಟನೆಗಳಿಗೆ ಬಳಸಿಕೊಳ್ಳಲು ಮಾದಕ ವ್ಯಸನ ಕೇಂದ್ರಗಳಿಂದ ಯುವಕರದ್ದೇ ಆದ ಖಾಸಗಿ ಸೇನಾಪಡೆ ಯನ್ನು ನಿರ್ಮಿಸುತ್ತಿದ್ದನು ಎಂಬುದಾಗಿ ವರದಿಯಾಗಿದ್ದು, ಪಾಕಿಸ್ತಾನದಿಂದ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಡೆಡ್ಡಿಕ್ಷನ್ ಸೆಂಟರ್‌ಗಳನ್ನು ಬಳಸಲಾಗಿದೆ ಎಂಬುದು ಅಮೃತ್‌ಪಾಲ್ ಮೇಲಿರುವ ಆರೋಪವಾಗಿದೆ.


ಫೆಬ್ರವರಿ 16 ರಂದು ಲವ್‌ಪ್ರೀತ್ ಸಿಂಗ್ ಬಂಧನದ ನಂತರ, ಅಮೃತಪಾಲ್ ಸಿಂಗ್ ಲವ್‌ಪ್ರೀತ್ ಸಿಂಗ್‌ನನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಎಚ್ಚರಿಕೆ ನೀಡಿದನು.


ಬಿಡುಗಡೆ ಮಾಡದಿದ್ದರೆ ಫೆಬ್ರವರಿ 23 ರಂದು ಪೊಲೀಸ್‌ ರಾಣೆಗೆ ನುಗ್ಗಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದನು. ಫೆಬ್ರವರಿ 23 ರಂದು ಠಾಣೆಗೆ ನುಗ್ಗಿದ ಅಮೃತ್‌ಪಾಲ್‌ ಸಿಂಗ್‌ ಬೆಂಬಲಿಗರು ಆಯುಧಗಳನ್ನು ಹಿಡಿದು ಠಾಣೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ.

top videos


    ಅಜ್ನಾಲಾ ಪೊಲೀಸ್ ಪೋಸ್ಟ್‌ನಲ್ಲಿ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವಾರು ಪೊಲೀಸರ ಮೇಲೆ ಅಮೃತಪಾಲ್ ಸಿಂಗ್ ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

    First published: