• ಹೋಂ
 • »
 • ನ್ಯೂಸ್
 • »
 • Explained
 • »
 • Explained: ದೇಶದ 131 ನಗರಗಳ 'ಉಸಿರಿನಲ್ಲಿದೆ' ವಿಷ, ಅತ್ಯಂತ ಕಲುಷಿತ ನಗರಗಳ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ!

Explained: ದೇಶದ 131 ನಗರಗಳ 'ಉಸಿರಿನಲ್ಲಿದೆ' ವಿಷ, ಅತ್ಯಂತ ಕಲುಷಿತ ನಗರಗಳ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ!

ಬೆಂಗಳೂರಿನಲ್ಲಿ ವಾಹನಗಳಿಂದ ಹೊರಸೂಸುವ ಹೊಗೆ

ಬೆಂಗಳೂರಿನಲ್ಲಿ ವಾಹನಗಳಿಂದ ಹೊರಸೂಸುವ ಹೊಗೆ

 • News18 Kannada
 • 3-MIN READ
 • Last Updated :
 • New Delhi, India
 • Share this:

ದೇಶದಲ್ಲಿ (Delhi) ಮಾಲಿನ್ಯದ ವಿಷಯ ಬಂದಾಗ ಅಥವಾ ಗಾಳಿ ವಿಷಪೂರಿತವಾದ ಸುದ್ದಿ ಸದ್ದು ಮಾಡಿದಾಗ ಬಹುತೇಕರಿಗೆ ದೆಹಲಿ-ಎನ್‌ಸಿಆರ್ ನೆನಪಾಗುತ್ತದೆ. ಇದೀಗ ಕೇಂದ್ರ ಸರ್ಕಾರವೇ (Central Govt) ದೇಶದಲ್ಲಿ ಯಾವ ನಗರಗಳಲ್ಲಿ ಗರಿಷ್ಠ ಮಾಲಿನ್ಯ ಹೊಂದಿದೆ ಎಂದು ಹೇಳಿದೆ. ದೇಶದಲ್ಲಿ 131 ನಗರಗಳಲ್ಲಿ ಉಸಿರಾಡುವುದು ವಿಷವನ್ನು (Pollution) ನುಂಗುವುದಕ್ಕೆ ಸಮಾನವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ನಿಜಕ್ಕೂ ಆತಂಕಕಾರಿ ವಿಚಾರವೇ ಸರಿ. ಈ ನಗರಗಳಲ್ಲಿ ಹೆಚ್ಚಿನವು ಮಹಾರಾಷ್ಟ್ರದ (Maharashtra) ನಗರಗಳಾಗಿದ್ದು, ಉತ್ತರ ಪ್ರದೇಶ ಮತ್ತು ಬಳಿಕದ ಸ್ಥಾನದಲ್ಲಿ ಆಂಧ್ರಪ್ರದೇಶದ ಇದೆ. ಅತಿ ಹೆಚ್ಚು ಕಲುಷಿತವಾಗಿರುವ 19 ನಗರಗಳು ಯಾವುವು? ಈ ಕುರಿತಾದ ಮಾಹಿತಿ.


ಲೋಕಸಭೆಯಲ್ಲಿ ಮಾಹಿತಿ ನೀಡಿದ ಸರ್ಕಾರ


ವಾಸ್ತವವಾಗಿ, ಕೇಂದ್ರ ಸರ್ಕಾರದ ಸಂಸದರೊಬ್ಬರು ಲೋಕಸಭೆಯಲ್ಲಿ ಮಾಲಿನ್ಯ ಪರಿಸ್ಥಿತಿಯ ಬಗ್ಗೆ ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಫೆಬ್ರವರಿ 13 ರಂದು ಉತ್ತರ ನೀಡಿದ್ದಾರೆ. ದೇಶದ 24 ರಾಜ್ಯಗಳ 131 ನಗರಗಳಲ್ಲಿ ಮಾಲಿನ್ಯದ ಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Bengaluru Pollution: ಬೆಂಗಳೂರಲ್ಲಿ ಇನ್ನು ಉಸಿರಾಡುವುದೂ ಕಷ್ಟ, ಒಂದೇ ವರ್ಷದಲ್ಲಿ ಏರಿಕೆಯಾಯ್ತು ವಾಯುಮಾಲಿನ್ಯ!


ಈ ಪೈಕಿ 19 ನಗರಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಯಾದವ್ ಪ್ರಕಾರ, ಈ ನಗರಗಳನ್ನು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದಡಿಯಲ್ಲಿ ಇರಿಸುವ ಮೂಲಕ AQI ಅನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. 2025-26 ರ ವೇಳೆಗೆ ಈ ನಗರಗಳ ಮಾಲಿನ್ಯವನ್ನು ಶೇಕಡಾ 40 ರಷ್ಟು ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಗುರಿಯನ್ನು ರಾಷ್ಟ್ರೀಯ ಆಂಬಿಯೆಂಟ್ ಏರ್ ಕ್ವಾಲಿಟಿ ಸ್ಟ್ಯಾಂಡರ್ಡ್ಸ್ (NAAQS) ಅಡಿಯಲ್ಲಿ ನಿಗದಿಪಡಿಸಲಾಗಿದೆ ಎನ್ನಲಾಗಿದೆ.


ಹೆಚ್ಚಿನ ನಗರಗಳಲ್ಲಿ 8 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆ


ಬಹುತೇಕ ಕಲುಷಿತ ನಗರಗಳಲ್ಲಿn ಜನಸಂಖ್ಯೆ 80 ಲಕ್ಷಕ್ಕೂ ಅಧಿಕವಿದೆ ಎಂದು ಸರ್ಕಾರ ಹೇಳಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ 19 ಕಲುಷಿತ ನಗರಗಳಿದ್ದರೆ, ಉತ್ತರ ಪ್ರದೇಶದ 17 ನಗರಗಳ ಸ್ಥಿತಿ ಕಳಪೆಯಾಗಿದೆ. ಆಂಧ್ರಪ್ರದೇಶದ 13 ಮತ್ತು ಪಂಜಾಬ್‌ನ 9 ನಗರಗಳು, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಒಡಿಶಾದ ತಲಾ 7-7 ನಗರಗಳು ಹೆಚ್ಚು ಕಲುಷಿತವಾಗಿವೆ.


ಕಾರ್ಖಾನೆಗಳು ಹೊರಸೂಸುವ ಹೊಗೆ


ಮುಂಬೈ ವಾಯು ಗುಣಮಟ್ಟ:


CPCB ದತ್ತಾಂಶದ ಪ್ರಕಾರ, ಈ ವರ್ಷದ ನವೆಂಬರ್ ಮತ್ತು ಜನವರಿ ನಡುವೆ ಮುಂಬೈನಲ್ಲಿ 'ಕಳಪೆ' ಮತ್ತು 'ಬಹಳ ಕಳಪೆ' ದಿನಗಳು ಹಿಂದಿನ ಮೂರು ಚಳಿಗಾಲಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ನ್ಯಾಷನಲ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (NEERI) ಮತ್ತು IIT-ಬಾಂಬೆಯ 2020 ರ ಸಂಶೋಧನೆಯ ಪ್ರಕಾರ, ಮುಂಬೈನ ಗಾಳಿಯಲ್ಲಿ 71% ಕ್ಕಿಂತ ಹೆಚ್ಚು ಕಣಗಳ ಹೊರೆಗೆ ರಸ್ತೆ ಅಥವಾ ನಿರ್ಮಾಣ ಧೂಳು ಕಾರಣವಾಗಿದೆ. ಕಾರ್ಖಾನೆಗಳು, ವಿದ್ಯುತ್ ಸ್ಥಾವರಗಳು, ವಿಮಾನ ನಿಲ್ದಾಣಗಳು ಮತ್ತು ತ್ಯಾಜ್ಯದ ಡಂಪ್‌ಗಳು ಮುಂಬೈನ ಗಾಳಿಯನ್ನು ಉಸಿರಾಡಲು ಅತ್ಯಂತ ಕೊಳಕು ಮಾಡುವಲ್ಲಿ ಕೊಡುಗೆ ನೀಡಿವೆ.


ಇದನ್ನೂ ಓದಿ: Delhi Pollution: ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾದರೆ ಏನಾಗುತ್ತೆ? ಕಲಾವಿದನ ಕಲ್ಫನೆಯಲ್ಲಿ ಮೂಡಿದ ಭಯಾನಕ ಚಿತ್ರ!


IQAir ಎಂದರೇನು?


IQAir, ಸ್ವಿಸ್ ಏರ್ ಟ್ರ್ಯಾಕಿಂಗ್ ಸೂಚ್ಯಂಕ ಮತ್ತು ನೈಜ-ಸಮಯದ ವಿಶ್ವಾದ್ಯಂತ ಗಾಳಿಯ ಗುಣಮಟ್ಟ ಮಾನಿಟರ್, UNEP ಮತ್ತು ಗ್ರೀನ್‌ಪೀಸ್‌ನೊಂದಿಗೆ ಸಹಕರಿಸುತ್ತದೆ ಮತ್ತು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಯ ಡೇಟಾವನ್ನು ಬಳಸಿಕೊಂಡು ಭಾರತದಲ್ಲಿ ಗಾಳಿಯ ಗುಣಮಟ್ಟವನ್ನು ಅಳೆಯುತ್ತದೆ. US ವಾಯು ಗುಣಮಟ್ಟ ಸೂಚ್ಯಂಕ (AQI) ಮಾನದಂಡಗಳ ಪ್ರಕಾರ ನಗರಗಳನ್ನು 'ಆರೋಗ್ಯಕರ', ಅನಾರೋಗ್ಯಕರ' ಮತ್ತು 'ಅಪಾಯಕಾರಿ' ಎಂದು ವರ್ಗೀಕರಿಸಲಾಗಿದೆ, ಇದು ಭಾರತಕ್ಕಿಂತ ಹೆಚ್ಚು ಕಠಿಣವಾಗಿದೆ.
ಇವು ಅತ್ಯಂತ ಕಲುಷಿತ ನಗರಗಳಾವುವು?


ಅಕೋಲಾ, ಅಮರಾವತಿ, ಔರಂಗಾಬಾದ್, ಬದ್ಲಾಪುರ್, ಚಂದ್ರಾಪುರ, ಜಲಗಾಂವ್, ಜಲ್ನಾ, ಕೊಲ್ಹಾಪುರ, ಲಾತೂರ್, ಮುಂಬೈ, ನಾಗ್ಪುರ, ನಾಸಿಕ್, ನವಿ ಮುಂಬೈ, ಪುಣೆ, ಸಾಂಗ್ಲಿ, ಸೋಲಾಪುರ್, ಥಾಣೆ, ವಸೈ ವಿರಾರ್ ಮತ್ತು ಉಲ್ಲಾಸನಗರ (ಮಹಾರಾಷ್ಟ್ರ), ಆಗ್ರಾ, ಅಲಹಾಬಾದ್, ಅನ್ಪಾರಾ, ಬರೇಲಿ , ಫಿರೋಜಾಬಾದ್, ಗಜ್ರೌಲಾ, ಗಾಜಿಯಾಬಾದ್, ಗೋರಖ್‌ಪುರ, ಝಾನ್ಸಿ, ಕಾನ್ಪುರ್, ಖುರ್ಜಾ, ಲಕ್ನೋ, ಮೊರಾದಾಬಾದ್, ನೋಯ್ಡಾ, ರಾಯ್ ಬರೇಲಿ, ವಾರಣಾಸಿ, ಮತ್ತು ಮೀರತ್ (ಉತ್ತರ ಪ್ರದೇಶ). ಅನಂತಪುರ, ಚಿತ್ತೂರು, ಏಲೂರು, ಗುಂಟೂರು, ಕಡಪ, ಕರ್ನೂಲ್, ನೆಲ್ಲೂರು, ಓಂಗೋಲ್, ರಾಜಮಂಡ್ರಿ, ಶ್ರೀಕಾಕುಳಂ, ವಿಜಯವಾಡ, ವಿಶಾಖಪಟ್ಟಣಂ ಮತ್ತು ವಿಜಯನಗರಂ (ಆಂಧ್ರಪ್ರದೇಶ). ಅಮೃತಸರ, ಡೇರಾ ಬಾಬಾ ನಾನಕ್, ಡೇರಾ ಬಸ್ಸಿ, ಗೋಬಿಂದಗಢ, ಜಲಂಧರ್, ಖನ್ನಾ, ಲುಧಿಯಾನ, ನಯನಂಗಲ್ ಮತ್ತು ಪಟಿಯಾಲ (ಪಂಜಾಬ್). ಅಂಗುಲ್, ಬಾಲಸೋರ್, ಭುವನೇಶ್ವರ್, ಕಟಕ್, ಕಳಿಂಗ ನಗರ, ರೂರ್ಕೆಲಾ (ಒಡಿಶಾ). ಭೋಪಾಲ್, ದೇವಾಸ್, ಗ್ವಾಲಿಯರ್, ಇಂದೋರ್, ಜಬಲ್ಪುರ್, ಸಾಗರ್ ಮತ್ತು ಉಜ್ಜಯಿನಿ (ಮಧ್ಯಪ್ರದೇಶ). ಬಡ್ಡಿ, ದಮ್ತಾಲ್, ಕಲಾ ಅಂಬ್, ನಲಗಢ್, ಪೌಂಟಾ ಸಾಹಿಬ್, ಪರ್ವಾನೂ ಮತ್ತು ಸುಂದರ್ ನಗರ (ಹಿಮಾಚಲ ಪ್ರದೇಶ).

Published by:Precilla Olivia Dias
First published: