Explained: ವಿದೇಶಗಳನ್ನು ಕಂಗೆಡಿಸುತ್ತಿರುವ ಮಂಕಿಪಾಕ್ಸ್! ಏನಿದು ಕಾಯಿಲೆ? ಇದರ ಲಕ್ಷಣಗಳೇನು?

ಯೂರೋಪಿಯನ್ ಮತ್ತು ಅಮೆರಿಕನ್ ದೇಶಗಳಲ್ಲಿ ಇತ್ತೀಚೆಗೆ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ.  ಇದುವರೆಗೆ ಆಫ್ರಿಕಾದಿಂದ ಹೊರಗೆ ವಿರಳವಾಗಿ ಕಾಣಿಸಿಕೊಳ್ಳುತ್ತಿದ್ದ ಈ ರೋಗ, ಈಗ ತಮ್ಮ ದೇಶಗಳಲ್ಲಿ ಕಾಣಿಸಿಕೊಂಡಿರುವುದು ಆರೋಗ್ಯ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ. ಹಾಗಿದ್ರೆ ಈ ಮಂಕಿಪಾಕ್ಸ್ ಎಂದರೇನು? ಇದರ ಲಕ್ಷಣಗಳೇನು? ಇದಕ್ಕೆ ಔಷಧಿ  ಇಲ್ಲವೇ? ಇದರ ಪರಿಣಾಮಗಳು ಏನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...

ಮಂಕಿಪಾಕ್ಸ್

ಮಂಕಿಪಾಕ್ಸ್

  • Share this:
ಯೂರೋಪಿಯನ್ (European) ಮತ್ತು ಅಮೆರಿಕನ್ (American) ದೇಶಗಳಲ್ಲಿ, ಕೋವಿಡ್ -19 (Covide-19) ಸಾಂಕ್ರಾಮಿಕ ಮೂರನೇ ವರ್ಷವೂ ಮುಂದುವರೆದಿದ್ದು, ಅದರ ನಿರ್ವಹಣೆಯಲ್ಲಿ ವ್ಯಸ್ಥರಾಗಿರುವ ಅಲ್ಲಿನ ಆರೋಗ್ಯ ಅಧಿಕಾರಿಗಳಿಗೆ (Health Officer) ಮತ್ತೊಂದು ತಲೆನೋವಿನ ಸಂಗತಿಯೊಂದು ಎದುರಾಗಿದೆ. ಅದುವೇ, ಮಂಕಿಪಾಕ್ಸ್ ಕಾಯಿಲೆ (Monkeypox disease). ಯೂರೋಪಿಯನ್ ಮತ್ತು ಅಮೆರಿಕನ್ ದೇಶಗಳಲ್ಲಿ ಇತ್ತೀಚೆಗೆ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ.  ಆ ದೇಶಗಳ ಆರೋಗ್ಯ ಅಧಿಕಾರಿಗಳು, ಮಂಕಿಪಾಕ್ಸ್ ಪ್ರಕರಣಗಳ ಬಗ್ಗೆ ನಿಗಾ ಇಡುತ್ತಿದ್ದಾರೆ. ಇದು ವರೆಗೆ ಆಫ್ರಿಕಾದಿಂದ ಹೊರಗೆ ವಿರಳವಾಗಿ ಕಾಣಿಸಿಕೊಳ್ಳುತ್ತಿದ್ದ ಈ ರೋಗ, ಈಗ ತಮ್ಮ ದೇಶಗಳಲ್ಲಿ ಕಾಣಿಸಿಕೊಂಡಿರುವುದು ಆರೋಗ್ಯ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ. ಹಾಗಿದ್ರೆ ಈ ಮಂಕಿಪಾಕ್ಸ್ ಎಂದರೇನು? ಇದರ ಲಕ್ಷಣಗಳೇನು? ಇದಕ್ಕೆ ಔಷಧಿ  ಇಲ್ಲವೇ? ಇದರ ಪರಿಣಾಮಗಳು ಏನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...

ಪ್ರಸ್ತುತ ಮಂಕಿಪಾಕ್ಸ್ ಆಫ್ರಿಕಾಗೆ ಪ್ರಯಾಣಿಸದ ಜನರಲ್ಲಿ ಕೂಡ ಹರಡುತ್ತಿದೆ, ಅದರಲ್ಲೂ ಮುಖ್ಯವಾಗಿ ಯುವಕರಲ್ಲಿ ಇದು ಹೆಚ್ಚಾಗಿ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಆದರೂ, ಸಾಮಾನ್ಯ ಜನರಿಗೆ ಈ ರೋಗದ ಅಪಾಯ ಕಡಿಮೆ ಇದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಮಂಕಿಪಾಕ್ಸ್?
ಮಂಕಿಪಾಕ್ಸ್ ಒಂದು ವೈರಸ್ ಆಗಿದ್ದು, ಅದು ರೋಡಂಟ್ಸ್ ಮತ್ತು ಪ್ರೈಮೆಟ್‍ಗಳಂತಹ ಕಾಡು ಪ್ರಾಣಿಗಳಲ್ಲಿ ಹುಟ್ಟುತ್ತದೆ ಮತ್ತು ಸಾಂದರ್ಭಿಕವಾಗಿ ಮನುಷ್ಯರಿಗೆ ಹರಡುತ್ತದೆ. ಈ ರೋಗ ಮನುಷ್ಯರಿಗೆ ಹರಡಿರುವ ಪ್ರಕರಣಗಳು, ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡು ಬಂದಿದ್ದು, ಅಲ್ಲಿ ಮಂಕಿಪಾಕ್ಸ್ ಸ್ಥಳೀಯವಾಗಿದೆ.

ಈ ದಿನಗಳಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿರುವ ಅಮೇರಿಕನ್ ಮತ್ತು ಯೂರೋಪಿನ ದೇಶಗಳ ಪಟ್ಟಿ
• ಸ್ಪೇನ್‍ನಲ್ಲಿ 7 ಮಂಕಿಪಾಕ್ಸ್ ಪ್ರಕರಣಗಳನ್ನು ಆರೋಗ್ಯ ಅಧಿಕಾರಿಗಳು ವರದಿ ಮಾಡಿದ್ದಾರೆ. ಯೂರೋಪ್‍ನಲ್ಲಿ ಈ ರೋಗದ ಪ್ರಕರಣಗಳು ಏಕಾಏಕಿ ಹೆಚ್ಚಾಗುತ್ತಿದ್ದಂತೆ, ಪೋರ್ಚುಗಲ್‍ನಲ್ಲಿ ಕೂಡ ಗುರುವಾರ 14 ಪ್ರಕರಣಗಳು ದೃಢಪಟ್ಟಿವೆ.
•  ಸ್ಪೇನ್‍ನಲ್ಲಿ ಇದುವರೆಗೆ ಮಂಕಿಪಾಕ್ಸಿಗೆ ತುತ್ತಾದವರಲ್ಲಿ ಎಲ್ಲರೂ ಮ್ಯಾಡ್ರಿಡ್ ಪುರುಷರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾದೇಶಿಕ ಆರೋಗ್ಯ ಇಲಾಖೆಯ ಆಂಟೋನಿಯೋ ಜಪಾಟೆರೋ ಎಂಬವರು ಹೇಳಿರುವ ಪ್ರಕಾರ, ಸದ್ಯಕ್ಕೆ ಇನ್ನೂ 22 ಶಂಕಿತ ಪ್ರಕರಣಗಳನ್ನು ಆರೋಗ್ಯ ಅಧಿಕಾರಿಗಳು ಪರೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ:  Explained: ಫ್ಯಾಟ್ ಸರ್ಜರಿ ಎಂದರೇನು? ಇದು ಕೊಬ್ಬು ಕರಗಿಸುತ್ತಾ ಅಥವಾ ಪ್ರಾಣವನ್ನೇ ತೆಗೆಯುತ್ತಾ?

• ಇಟಲಿಯಲ್ಲಿ ಗುರುವಾರ ಪ್ರಪ್ರಥಮ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದ್ದು, ಅದು ಕೂಡ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿರುವ ಇತರ ದೇಶಗಳ ಪಟ್ಟಿಗೆ ಸೇರಿಕೊಂಡಂತಾಗಿದೆ.
• ಸ್ವೀಡನ್ ದೇಶದಲ್ಲಿ ಒಬ್ಬ ವ್ಯಕ್ತಿಗೆ ಮಂಕಿಪಾಕ್ಸ್ ರೋಗ ದೃಢಪಟ್ಟಿದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
• ಯುನೈಟೆಡ್ ಕಿಂಗ್‍ಡಮ್‍ನಲ್ಲಿ ಇದುವರೆಗೆ ಒಟ್ಟು ಒಂಬತ್ತು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ.
• ಕೆನಡಾದ ಆರೋಗ್ಯ ಅಧಿಕಾರಿಗಳು, ಮಾಂಟ್ರಿಯಲ್‍ನಲ್ಲಿ 13 ಮಂಕಿಪಾಕ್ಸ್ ಪ್ರಕರಣಗಳ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
• ಅಮೆರಿಕದ ಮ್ಯಾಸಚೂಸೆಟ್ಸ್‍ನಲ್ಲಿ, ಇತ್ತೀಚೆಗೆ ಕೆನಡಾಗೆ ಪ್ರಯಾಣಿಸಿದ್ದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ರೋಗ ಪತ್ತೆಯಾಗಿರುವ ಬಗ್ಗೆ ವರದಿಯಾಗಿದ್ದು, ಯೂರೋಪಿನಲ್ಲಿ ಇದು ರೋಗದ ಹರಡುವಿಕೆಗೆ ಸಂಪರ್ಕ ಹೊಂದಿದೆಯೇ ಎಂದು ಆರೋಗ್ಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಮಂಕಿಪಾಕ್ಸ್ ಹೆಸರಿಡಲು ಕಾರಣವೇನು?
ಈ ಆರೋಗ್ಯ ಸಮಸ್ಯೆಯನ್ನು, ವಿಜ್ಞಾನಿಗಳು ಮೊದಲ ಬಾರಿಗೆ ಪತ್ತೆ ಹಚ್ಚಿದ್ದು 1958 ರಲ್ಲಿ. ಆ ವರ್ಷ, ಸಂಶೋಧನಾ ಮಂಗಗಳಲ್ಲಿ “ಪಾಕ್ಸ್ ತರಹ” ಕಾಯಿಲೆಯ ಎರಡು ಪ್ರಕರಣಗಳು ಕಾಣಿಸಿಕೊಂಡಾಗ ವಿಜ್ಞಾನಿಗಳು ಇದನ್ನು ಗುರುತಿಸಿದರು. ಹಾಗಾಗಿ ಇದಕ್ಕೆ ಮಂಕಿಪಾಕ್ಸ್ ಎಂದು ಹೆಸರನ್ನು ಇಡಲಾಯಿತು. ಮಂಕಿಪಾಕ್ಸ್ ಕಾಯಿಲೆ ಮೊದಲ ಬಾರಿಗೆ ಮನುಷ್ಯರಿಗೆ ಹರಡಿದ ಪ್ರಕರಣ ಪತ್ತೆಯಾಗಿದ್ದು 1970 ರಲ್ಲಿ.

ಇದನ್ನೂ ಓದಿ:  Explained: ಅಮೆರಿಕದಲ್ಲಿ ಮಕ್ಕಳ ಪೌಷ್ಠಿಕ ಆಹಾರದ ಕೊರತೆ! ಬೇಬಿ ಫಾರ್ಮುಲಾ ತಯಾರಿಕೆಗೆ 'ದೊಡ್ಡಣ್ಣ' ಏನು ಮಾಡ್ತಾನೆ?

ಕಾಂಗೋದ ದೂರ ಪ್ರದೇಶವೊಂದರಲ್ಲಿ ಒಂಬತ್ತು ವರ್ಷದ ಬಾಲಕನಲ್ಲಿ ಈ ಕಾಯಿಲೆ ಕಾಣಿಸಿಕೊಂಡಿತ್ತು. ಈ ಅಪರೂಪದ ಕಾಯಿಲೆಯು, ಸಾಮಾನ್ಯವಾಗಿ ಜ್ವರ, ಸ್ನಾಯು ನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಶೀತ, ಬಳಲಿಕೆ ಮತ್ತು ಮುಖದ ಮೇಲೆ ದದ್ದುಗಳು ಉಂಟಾಗುವುದು ಮುಂತಾದ ಲಕ್ಷಣಗಳನ್ನು ಒಳಗೊಂಡಿರುತ್ತದೆ. ಸದ್ಯಕ್ಕೆ ಭಾರತದಲ್ಲಿ ಮಂಕಿಪಾಕ್ಸ್‌‌‌‌‌‌‌‍ನ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ.
Published by:Ashwini Prabhu
First published: