HOME » NEWS » Explained » MODERN HUMAN BRAIN ORIGINATED IN AFRICA AROUND 1 POINT 7 MILLION YEARS AGO STG HG

1.7 ಮಿಲಿಯನ್ ವರ್ಷಗಳ ಹಿಂದೆ ಆಫ್ರಿಕಾದಲ್ಲಿ ವಿಕಸನಗೊಂಡ ಆಧುನಿಕ ಮಾನವ ಮಿದುಳು: ಹೊಸ ಅಧ್ಯಯನ

ಆಧುನಿಕ ಮಾನವ ಮಿದುಳು ಆಫ್ರಿಕಾದಲ್ಲಿ ಸುಮಾರು 1.7 ಮಿಲಿಯನ್ ವರ್ಷಗಳ ಹಿಂದೆ ವಿಕಸನಗೊಂಡಿತು. ಆ ಸಮಯದಲ್ಲಿ ಅಳಿವಿನಂಚಿನಲ್ಲಿದ್ದ ಮಾನವ ಹೋಮೋ ಎರೆಕ್ಟಸ್‌ ಮೊದಲು ಕಾಣಿಸಿಕೊಂಡ ಸಮಯ ಮತ್ತು ಆಫ್ರಿಕಾದಲ್ಲಿ ಕಲ್ಲಿನ ಉಪಕರಣಗಳ ಸಂಸ್ಕೃತಿ ಹೆಚ್ಚು ಸಂಕೀರ್ಣವಾಯಿತು ಎಂದು ಈ ಸಂಶೋಧಕರ ತಂಡ ತೀರ್ಮಾನಿಸಿದರು.

news18-kannada
Updated:April 13, 2021, 10:39 PM IST
1.7 ಮಿಲಿಯನ್ ವರ್ಷಗಳ ಹಿಂದೆ ಆಫ್ರಿಕಾದಲ್ಲಿ ವಿಕಸನಗೊಂಡ ಆಧುನಿಕ ಮಾನವ ಮಿದುಳು: ಹೊಸ ಅಧ್ಯಯನ
Photo: Google
  • Share this:
ಆಧುನಿಕ ಮಾನವನ ಮಿದುಳು ಯಾವಾಗ ಮತ್ತು ಎಲ್ಲಿ ವಿಕಸನಗೊಂಡಿತು ಎಂಬುದು ಜನರು ಎದುರಿಸುತ್ತಿರುವ ಅತ್ಯಂತ ಕುತೂಹಲಕಾರಿ ಪ್ರಶ್ನೆ. ಸುಮಾರು 2.5 ಮಿಲಿಯನ್‌ ವರ್ಷಗಳ ಹಿಂದೆ ಆಫ್ರಿಕಾದಲ್ಲಿ ಹೊರಹೊಮ್ಮಿದ ಹೋಮೋ ಜೀನಸ್‌ ಮನುಷ್ಯರ ಮೊದಲ ಜನಸಂಖ್ಯೆ. ಆದರೆ, ಅವರ ಮಿದುಳಿನ ಗಾತ್ರ ನಮ್ಮ ಅರ್ಧದಷ್ಟು ಗಾತ್ರ ಹೊಂದಿತ್ತು. ಪ್ರಾಚೀನ ಕೋತಿಯಂತೆಯೇ ಮಿದುಳುಗಳನ್ನು ಹೊಂದಿದ್ದರು. ಈ ಹಿನ್ನೆಲೆ ಆಧುನಿಕ ಮಾನವನ ಮಿದುಳು ಯಾವಾಗ ಹಾಗೂ ಎಲ್ಲಿ ವಿಕಸನಗೊಂಡಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಸ್ವಿಟ್ಜರ್‌ಲ್ಯಾಂಡ್‌ನ ಜುರಿಚ್ ವಿಶ್ವವಿದ್ಯಾಲಯದ (UZH) ಸಂಶೋಧಕರ ಅಂತಾರಾಷ್ಟ್ರೀಯ ತಂಡವು ಉತ್ತರಗಳನ್ನು ಹುಡುಕಲು ಸಾಕಷ್ಟು ಸಮಯ ಮತ್ತು ಶಕ್ತಿಯನ್ನು ವ್ಯಯಿಸಿದೆ.

ಅಲ್ಲದೆ, ಆಧುನಿಕ ಮಾನವ ಮಿದುಳು ಆಫ್ರಿಕಾದಲ್ಲಿ ಸುಮಾರು 1.7 ಮಿಲಿಯನ್ ವರ್ಷಗಳ ಹಿಂದೆ ವಿಕಸನಗೊಂಡಿತು. ಆ ಸಮಯದಲ್ಲಿ ಅಳಿವಿನಂಚಿನಲ್ಲಿದ್ದ ಮಾನವ ಹೋಮೋ ಎರೆಕ್ಟಸ್‌ ಮೊದಲು ಕಾಣಿಸಿಕೊಂಡ ಸಮಯ ಮತ್ತು ಆಫ್ರಿಕಾದಲ್ಲಿ ಕಲ್ಲಿನ ಉಪಕರಣಗಳ ಸಂಸ್ಕೃತಿ ಹೆಚ್ಚು ಸಂಕೀರ್ಣವಾಯಿತು ಎಂದು ಈ ಸಂಶೋಧಕರ ತಂಡ ತೀರ್ಮಾನಿಸಿದರು.

ಹೋಮೋ ಎರೆಕ್ಟಸ್‌ ಪ್ರಭೇದವು ಆಫ್ರಿಕಾದಿಂದ ವಲಸೆ ಬಂದ ಮೊದಲ ಹೋಮಿನಿನ್ ಆಗಿದ್ದು, ಸಂವಹನ ಮತ್ತು ಬೇಟೆ ಅಥವಾ ಆಹಾರ ಸಂಗ್ರಹಣೆಯಂತಹ ಅರಿವಿನ ಕಾರ್ಯಗಳಲ್ಲಿ ಪ್ರವೀಣರಾಗಿದ್ದರು. ವಿಶಿಷ್ಟವಾದ ಮಾನವ ಮಿದುಳು ಆಫ್ರಿಕಾದಿಂದ ಏಷ್ಯಾಕ್ಕೆ ವೇಗವಾಗಿ ಹರಡುತ್ತದೆ ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ.

ಕ್ರಿಸ್ಟೋಫ್ ಜೊಲ್ಲಿಕೋಫರ್ ಮತ್ತು ಮಾರ್ಸಿಯಾ ಪೊನ್ಸ್ ಡಿ ಲಿಯಾನ್ ನೇತೃತ್ವದ UZH ತಂಡವು 1 ರಿಂದ 2 ದಶಲಕ್ಷ ವರ್ಷಗಳ ಹಿಂದೆ ಆಫ್ರಿಕಾ ಮತ್ತು ಏಷ್ಯಾದಲ್ಲಿ ವಾಸಿಸುತ್ತಿದ್ದ ಹೋಮೋ ಪಳೆಯುಳಿಕೆಗಳ ತಲೆಬುರುಡೆಗಳನ್ನು ಪರೀಕ್ಷಿಸಿತು ಎಂದು ಜರ್ನಲ್ ಸೈನ್ಸ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಲಾಗಿದೆ.

"ಆಧುನಿಕ ಮಾನವ ಮಿದುಳಿನ ರಚನೆಗಳು ಆಫ್ರಿಕನ್ ಹೋಮೋ ಜನಸಂಖ್ಯೆಯಲ್ಲಿ ಕೇವಲ 1.5 ರಿಂದ 1.7 ದಶಲಕ್ಷ ವರ್ಷಗಳ ಹಿಂದೆ ಹೊರಹೊಮ್ಮಿವೆ ಎಂದು ನಮ್ಮ ವಿಶ್ಲೇಷಣೆಗಳು ಸೂಚಿಸುತ್ತವೆ" ಎಂದು ಜೊಲ್ಲಿಕೋಫರ್ ಹೇಳಿದರು.

ಅಲ್ಲದೆ, "ಮಾನವರಿಗೆ ವಿಶಿಷ್ಟವಾದ ಲಕ್ಷಣಗಳು ಮುಖ್ಯವಾಗಿ ಮುಂಭಾಗದ ಲೋಬ್‌ನಲ್ಲಿರುವ ಪ್ರದೇಶಗಳು, ಅವು ಸಂಕೀರ್ಣವಾದ ಆಲೋಚನೆ ಮತ್ತು ಕ್ರಿಯೆಯ ಮಾದರಿಗಳನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಮತ್ತು ಅಂತಿಮವಾಗಿ ಭಾಷೆಗೆ ಸಹ ಕಾರಣವಾಗಿವೆ" ಎಂದು ಮಾನವಶಾಸ್ತ್ರಜ್ಞ ಪೊನ್ಸ್ ಡಿ ಲಿಯಾನ್ ಹೇಳಿದರು.

ಜೈವಿಕ ಮತ್ತು ಸಾಂಸ್ಕೃತಿಕ ವಿಕಾಸದ ನಡುವೆ ಬಹುಶಃ ಸಂಬಂಧ ಹೊಂದಿದೆ ಎಂದು ಸಂಶೋಧಕರು ನಂಬಿದ್ದಾರೆ. ಈ ಅವಧಿಯಲ್ಲಿ ಮಾನವ ಭಾಷೆಯ ಆರಂಭಿಕ ರೂಪಗಳು ಸಹ ಅಭಿವೃದ್ಧಿ ಹೊಂದಿದವು ಎಂದು ಪೊನ್ಸ್ ಡಿ ಲಿಯಾನ್ ಹೇಳಿದ್ದಾರೆ.

1 ರಿಂದ 2 ದಶಲಕ್ಷ ವರ್ಷಗಳ ಹಿಂದೆ ಆಫ್ರಿಕಾ ಮತ್ತು ಏಷ್ಯಾದಲ್ಲಿ ವಾಸಿಸುತ್ತಿದ್ದ ಹೋಮೋ ಪಳೆಯುಳಿಕೆಗಳ ತಲೆಬುರುಡೆಗಳನ್ನು ಪರೀಕ್ಷಿಸಲು UZH ತಂಡವು ಕಂಪ್ಯೂಟೆಡ್ ಟೋಮೋಗ್ರಫಿಯನ್ನು ಬಳಸಿತು ಮತ್ತು ಪಳೆಯುಳಿಕೆಯ ಡೇಟಾವನ್ನು ದೊಡ್ಡ ಮಂಗಗಳು ಅಥವಾ ಗ್ರೇಟ್‌ ಏಪ್‌ಗಳು ಮತ್ತು ಮನುಷ್ಯರಿಂದ ಉಲ್ಲೇಖ ದತ್ತಾಂಶದೊಂದಿಗೆ ಹೋಲಿಸಿದೆ.
First published: April 13, 2021, 10:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories