• Home
  • »
  • News
  • »
  • explained
  • »
  • Explained: ಹೆಣ್ಣುಮಕ್ಕಳಿಗೆ ಕಲಿಯಲು ಕಂಟಕವಾಗುವ ಋತುಚಕ್ರ! ಮುಟ್ಟಿನ ಸಮಸ್ಯೆಗೆ ಕೊನೆ ಎಂದು?

Explained: ಹೆಣ್ಣುಮಕ್ಕಳಿಗೆ ಕಲಿಯಲು ಕಂಟಕವಾಗುವ ಋತುಚಕ್ರ! ಮುಟ್ಟಿನ ಸಮಸ್ಯೆಗೆ ಕೊನೆ ಎಂದು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನಮ್ಮ ದೇಶದ ಅನೇಕ ಕಡೆಗಳಲ್ಲಿ ಇಂದಿಗೂ ಮುಟ್ಟಿನ ನಿಷೇಧಗಳು ಹುಡುಗಿಯರನ್ನು ಶಾಲೆ ಬಿಡುವಂತೆ ಒತ್ತಾಯಿಸುತ್ತಿವೆ. ಈ ಸಮಯದಲ್ಲಿ ನೈರ್ಮಲ್ಯ, ಸೌಲಭ್ಯಗಳ ಕೊರತೆಯಿಂದಾಗಿ ಭಾರತದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳು ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ.

  • News18 Kannada
  • Last Updated :
  • New Delhi, India
  • Share this:

ಋತುಚಕ್ರ (Menstrual Cycle) ಎನ್ನುವುದು ನಮ್ಮಲ್ಲಿನ್ನೂ ಗುಟ್ಟಿನ ವಿಷಯ. ಮುಟ್ಟಿನ ವಿಷಯ ಬಂದರೆ ಸಾಕು ಧ್ವನಿ ಗೊತ್ತಿಲ್ಲದೆಯೇ ಸಣ್ಣದಾಗುತ್ತದೆ. ಇದು ದೇಹದಲ್ಲಾಗುವ ಸಹಜ ನೈಸರ್ಗಿಕ ಪ್ರಕ್ರಿಯೆಯಾದರೂ (Natural Process) ಅದೊಂದು ಗುಟ್ಟಿನ ವಿಷಯವೆಂದೇ ಪರಿಗಣಿತವಾಗಿದೆ. ಇಷ್ಟೇ ಅಲ್ಲದೇ ಇದು ಅನೇಕ ಹೆಣ್ಣುಮಕ್ಕಳ ಕಲಿಕೆಗೂ (Education) ತೊಡಕಾಗಿದೆ ಎಂಬುದು ಗಂಭೀರ ವಿಚಾರ. ಹೌದು.. ನಮ್ಮ ದೇಶದ ಅನೇಕ ಕಡೆಗಳಲ್ಲಿ ಇಂದಿಗೂ ಮುಟ್ಟಿನ ನಿಷೇಧಗಳು ಹುಡುಗಿಯರನ್ನು ಶಾಲೆ (School) ಬಿಡುವಂತೆ ಒತ್ತಾಯಿಸುತ್ತಿವೆ. ಈ ಸಮಯದಲ್ಲಿ ನೈರ್ಮಲ್ಯ (Hygiene), ಸೌಲಭ್ಯಗಳ ಕೊರತೆಯಿಂದಾಗಿ ಭಾರತದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳು ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ.


ಸಾಮಾಜಿಕ ನಂಬಿಕೆ ಹಾಗೂ ಮುಟ್ಟಿನ ನೈರ್ಮಲ್ಯದ ಬಗೆಗಿನ ಶಿಕ್ಷಣದ ಕೊರತೆಯು ಭಾರತದಲ್ಲಿನ ಅನೇಕ ಹೆಣ್ಣುಮಕ್ಕಳು ಶಾಲೆಯನ್ನು ಬೇಗನೆ ಬಿಡಲು ಅಥವಾ ಪ್ರತಿ ತಿಂಗಳು ಅವರ ಋತುಚಕ್ರದ ಅವಧಿಯಲ್ಲಿ ಶಾಲೆಗೆ ಹೋಗದಂತೆ ಒತ್ತಾಯಿಸುತ್ತಿದೆ.


ನೈರ್ಮಲ್ಯ ಕೊರತೆಯೇ ಬಹುಮುಖ್ಯ ಸಮಸ್ಯೆ
ವಿಶ್ವಸಂಸ್ಥೆಯ ಮಕ್ಕಳ ಸಂರಕ್ಷಣಾ ಸಂಸ್ಥೆ UNICEF ನ ಇತ್ತೀಚಿನ ಅಧ್ಯಯನವು ಭಾರತದಲ್ಲಿ 71% ರಷ್ಟು ಹದಿಹರೆಯದ ಹುಡುಗಿಯರಿಗೆ ಮುಟ್ಟಿನ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಅವರಲ್ಲಿ ಋತುಚಕ್ರ ಆರಂಭವಾದಾಗಲೇ ಅವರಿಗೆ ಈ ಬಗ್ಗೆ ತಿಳಿಯುತ್ತದೆ. ಹಾಗಾದಾಗ ಬಹುತೇಕರು ಶಾಲೆಯನ್ನೇ ಬಿಟ್ಟು ಬಿಡುತ್ತಾರೆ ಎಂದಿದೆ.


2019 ರಲ್ಲಿ ಪ್ರಕಟವಾದ ಎನ್‌ಜಿಒ ದಸ್ರಾದ ಮತ್ತೊಂದು ವರದಿಯ ಪ್ರಕಾರ, ಸ್ಯಾನಿಟರಿ ಪ್ಯಾಡ್‌ಗಳ ಅಲಭ್ಯತೆ ಮತ್ತು ಮುಟ್ಟಿನ ಬಗ್ಗೆ ಮಾಹಿತಿಯ ಕೊರತೆ ಬಹಳಷ್ಟು ವಿದ್ಯಾರ್ಥಿನಿಯರನ್ನು ಕಾಡುವ ವಿಷಯಗಳು. ಅಲ್ಲದೇ ಸರಿಯಾದ ಮುಟ್ಟಿನ ನೈರ್ಮಲ್ಯ ನಿರ್ವಹಣಾ ಸೌಲಭ್ಯಗಳ ಕೊರತೆಯಿಂದಾಗಿ ವಾರ್ಷಿಕವಾಗಿ 23 ಮಿಲಿಯನ್ ಹುಡುಗಿಯರು ಶಾಲೆಯಿಂದ ಹೊರಗುಳಿಯುತ್ತಾರೆ ಎಂದು ತೋರಿಸಿದೆ.


ಈ ಪ್ರದೇಶದಲ್ಲಿ ಕೆಲಸ ಮಾಡುವ ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ಎನ್‌ಜಿಒಗಳು ಕೂಡ ಶೌಚಾಲಯಗಳು ಮತ್ತು ಶುದ್ಧ ನೀರಿನಂಥ ಸೌಲಭ್ಯಗಳ ಕೊರೆತೇಯೇ ಕಾರಣ, ಅಲ್ಲದೇ ಸಾಮಾಜಿಕ ಕಳಂಕ, ಕಿರುಕುಳ ಹಾಗೂ ನಿಷೇಧಗಳು ಇದಕ್ಕೆ ಕಾರಣ ಎಂಬುದಾಗಿ ಹೇಳುತ್ತಾರೆ.


ಮೊದಲ ಮುಟ್ಟಿನ ತನಕವೂ ಮಾಹಿತಿಯೇ ಇರೋದಿಲ್ಲ!
ಇನ್ನು ಋತುಚಕ್ರಕ್ಕಿಂತ ಮೊದಲು ಹೆಣ್ಣುಮಕ್ಕಳಿಗೆ ಇದರ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂಬುದಾಗಿ ಸಮುದಾಯದ ಶಿಶುವೈದ್ಯ ಮತ್ತು ಸಾರ್ವಜನಿಕ ಆರೋಗ್ಯ ವೃತ್ತಿಪರರಾದ ವಂದನಾ ಪ್ರಸಾದ್ ಹೇಳ್ತಾರೆ.


ಇದನ್ನೂ ಓದಿ: Explained: ದೇವರ ನಾಡಿನ ನರಭಕ್ಷಕರು! ಇದು ರಿಯಲ್ ‘ನೀಲಾಂಬರಿ’ ಕಥೆ!


ಅಲ್ಲದೇ "ಯುವತಿಯರು ಮತ್ತು ಮಹಿಳೆಯರು ಅವರು ಮೊದಲ ಬಾರಿಗೆ ಮುಟ್ಟಿನ ಸಮಯದಲ್ಲಿ ಕೆಲವು ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದರು. ಅವರು ಎಷ್ಟು ಚಿಂತಿತರಾಗಿದ್ದರು ಎಂಬುದರ ಬಗ್ಗೆ ನಾವು ಕೇಳಿದ್ದೇವೆ. ಅವರು ಸಾಮಾನ್ಯವಾಗಿ ಸ್ನೇಹಿತರಿಂದ ಪಡೆಯುವಂಥ ಮಾಹಿತಿಯು ಅಪೂರ್ಣವಾಗಿರುತ್ತದೆ ಮತ್ತು ತಪ್ಪಾಗಿರುತ್ತದೆ" ಎನ್ನುತ್ತಾರೆ ವಂದನಾ ಪ್ರಸಾದ್.‌


ಎರಡು ದಶಕಗಳಿಂದ ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳೊಂದಿಗೆ ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳ ಬಗ್ಗೆ ಕೆಲಸ ಮಾಡಿರುವ ವಂದನಾ ಪ್ರಸಾದ್, ಮುಟ್ಟು ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಅನೇಕ ಹಂತಗಳಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ ಎನ್ನುತ್ತಾರೆ.


ಇನ್ನೂ ಹೇರಳವಾಗಿವೆ ಸಾಮಾಜಿಕ ನಿಷೇಧಗಳು !
"ಸಾಮಾಜಿಕ ನಿಷೇಧಗಳು ಇನ್ನೂ ಹೇರಳವಾಗಿವೆ ಮತ್ತು ಹುಡುಗಿಯರು ತಮ್ಮ ಅವಧಿಯಲ್ಲಿ ವಿವಿಧ ರೀತಿಯ ತಾರತಮ್ಯವನ್ನು ಎದುರಿಸುತ್ತಾರೆ. ಉದಾಹರಣೆಗೆ ಕೆಲವು ಆಹಾರಗಳ ನಿರಾಕರಣೆ, ಅಡುಗೆಮನೆಗಳು ಮತ್ತು ದೇವಾಲಯಗಳಂತಹ ಸ್ಥಳಗಳಿಗೆ ಭೌತಿಕ ಪ್ರವೇಶವನ್ನು ನಿರಾಕರಿಸುವುದು ಇನ್ನೂ ಇದೆ. ಅಪರೂಪದ ಸಂದರ್ಭಗಳಲ್ಲಿ ಕೆಲವು ಔಟ್‌ಹೌಸ್‌ನಲ್ಲಿ ಕೆಲವು ದಿನಗಳವರೆಗೆ ಇರಬೇಕಾಗುತ್ತದೆ" ಎಂದು ವಂದನಾ ಪ್ರಸಾದ್ ಹೇಳ್ತಾರೆ.


ಮುಟ್ಟಿನ ಉತ್ಪನ್ನಗಳೇ ಒಂದು ಸವಾಲು!
ಋತು ಚಕ್ರದ ಸಮಯದಲ್ಲಿ ಮಾನಸಿಕ ಹಾಗೂ ದೈಹಿಕ ಒತ್ತಡ ಇರುತ್ತದೆ. ಆದ್ರೆ ಅನೇಕ ಕಡೆಗಳಲ್ಲಿ ಮುಟ್ಟಿನ ಉತ್ಪನ್ನಗಳನ್ನು ಬಳಸುವುದೇ ಒಂದು ದೊಡ್ಡ ಸವಾಲಾಗಿದೆ. ಸ್ಯಾನಿಟರಿ ಪ್ಯಾಡ್‌ ಗಳನ್ನು ತೆಗೆದುಕೊಳ್ಳುವುದು, ಅವುಗಳನ್ನು ವಿಲೇವಾರಿ ಮಾಡುವುದು, ಅವುಗಳನ್ನು ಶುಷ್ಕ ಮತ್ತು ಸ್ವಚ್ಛವಾಗಿಟ್ಟುಕೊಳ್ಳುವುದು ದೊಡ್ಡ ಸವಾಲಿನ ಸಂಗತಿಗಳಾಗಿವೆ.


ಇದನ್ನೂ ಓದಿ: Surrogate Mother: ಬಾಡಿಗೆ ತಾಯ್ತನ ವಿಧಾನದ ಬಗ್ಗೆ ನಿಮಗೆಷ್ಟು ಗೊತ್ತು? ಇಂಚಿಂಚು ಮಾಹಿತಿ ಇಲ್ಲಿದೆ ನೋಡಿ


ಇದು ವಿಶೇಷವಾಗಿ ಶಾಲೆಗೆ ಹೋಗುವ ಹೆಣ್ಣುಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಇದು ಬಡ ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗೆ ಕಷ್ಟದ ದಿನಗಳು. ಮೊದಲೇ ಅಪೌಷ್ಠಿಕತೆ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹಾಗೂ ಸಾಮಾಜಿಕ ಸ್ಥಾನಮಾನದ ಕೊರತೆ ಅನುಭವಿಸುತ್ತಿರುವವರಿಗೆ ಇದು ಹೆಚ್ಚುವರಿ ಹೊರೆಯಾಗಿದೆ ಎನ್ನುತ್ತಾರೆ ವಂದನಾ ಪ್ರಸಾದ್.


ಲೈಂಗಿಕ ದೌರ್ಜನ್ಯ ಭಯವೇ ಹೆಚ್ಚು!
ಇನ್ನು, ಮಹಿಳಾ ಸಮಸ್ಯೆಗಳ ಮೇಲೆ ಕೆಲಸ ಮಾಡುವ ಎನ್‌ಜಿಒ ಜಗೋರಿಯ ನಿರ್ದೇಶಕಿ ಜಯ ವೆಲಂಕರ್, ಹದಿಹರೆಯದ ಹುಡುಗಿಯರು ಸಾಂಸ್ಕೃತಿಕ ಮತ್ತು ಭೌತಿಕ ಕಾರಣಗಳಿಗಾಗಿ ತಮ್ಮ ಅವಧಿಗಳಲ್ಲಿ ಶಾಲೆಗೆ ಹೋಗದಿರುವುದು ತುಂಬಾ ಸಾಮಾನ್ಯವಾಗಿದೆ ಎಂದಿದ್ದಾರೆ.


ಅಲ್ಲದೇ, ಹೆಣ್ಣುಮಕ್ಕಳು ಋತುಮತಿಯಾದ ನಂತರ ಕುಟುಂಬಗಳಲ್ಲಿ ಉಂಟಾಗುವ ಸಾಮಾಜಿಕ ಕಾಳಜಿಗಳನ್ನು ವಿವರಿಸುವ ಅವರು, "ಅನೇಕ ಹೆಣ್ಣುಮಕ್ಕಳಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಮುಟ್ಟಿನ ಪ್ರಾರಂಭವು ಅವರ ಶಾಲಾ ಶಿಕ್ಷಣದ ಅಂತ್ಯವಾಗುತ್ತದೆ, ಏಕೆಂದರೆ ಪೋಷಕರು ಅವರ ಮನಸ್ಸಿನಲ್ಲಿ ದ್ವಂದ್ವ ಭಯವನ್ನು ಹೊಂದಿರುತ್ತಾರೆ" ಎನ್ನುತ್ತಾರೆ.


ಹೆಣ್ಣುಮಕ್ಕಳು ಹೆಚ್ಚು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಾರೆ ಎಂದು ಅವರು ಹೆದರುತ್ತಾರೆ. ಹುಡುಗಿಯರು ಲೈಂಗಿಕವಾಗಿ ಸಕ್ರಿಯರಾಗುತ್ತಾರೆ ಮತ್ತು ಸಂಬಂಧಗಳಲ್ಲಿ ತೊಡಗುತ್ತಾರೆ ಎಂಬ ಭಯವೂ ಇದೆ ಎನ್ನುತ್ತಾರೆ.


ಸೂಕ್ತ ಲೈಂಗಿಕ ಶಿಕ್ಷಣದ ಅಗತ್ಯ!
ಈ ಬಗ್ಗೆ ಸಮಸ್ಯೆಯನ್ನು ನಿಕಟವಾಗಿ ಅಧ್ಯಯನ ಮಾಡಿದ ಕೆಲವು ತಜ್ಞರು ವಯಸ್ಸಿಗೆ ಸೂಕ್ತವಾದ, ಲೈಂಗಿಕ ಶಿಕ್ಷಣವು ಅಗತ್ಯ ಪರಿಹಾರವಾಗಿದೆ ಎನ್ನುತ್ತಾರೆ. ಲೈಂಗಿಕ ಶಿಕ್ಷಣವು ಮುಟ್ಟಿನಂತಹ ದೈಹಿಕ ಪ್ರಕ್ರಿಯೆಗಳ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ನೀಡುತ್ತದೆ. ಅಲ್ಲದೇ ನಿಕಟ ಸಂಬಂಧಗಳು, ಲಿಂಗ ಗುರುತಿಸುವಿಕೆ, ಲೈಂಗಿಕ ದೃಷ್ಟಿಕೋನ ಮತ್ತು ಮುಖ್ಯವಾಗಿ ಒಪ್ಪಿಗೆಯ ಪ್ರಾಮುಖ್ಯತೆ ಮತ್ತು ಗರ್ಭನಿರೋಧಕ ಸೇರಿದಂತೆ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡುತ್ತೆ. ಆದಾಗ್ಯೂ ಈ ವಿಷಯದ ಬಗ್ಗೆ ನಮಗೆ ಹೆಚ್ಚಿನ ಸಾರ್ವಜನಿಕ ಚರ್ಚೆಯ ಅಗತ್ಯವಿದೆ ಎಂದು ವೆಲಂಕರ್ ಹೇಳುತ್ತಾರೆ.


ಇನ್ನು, ಮೇ ತಿಂಗಳಲ್ಲಿ ಪ್ರಕಟವಾದ ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ವರದಿಯು ಭಾರತದಲ್ಲಿ 15-24 ವರ್ಷ ವಯಸ್ಸಿನ ಅರ್ಧದಷ್ಟು ಮಹಿಳೆಯರು ಇನ್ನೂ ಮುಟ್ಟಿನ ಸಮಯದಲ್ಲಿ ಬಟ್ಟೆಯನ್ನು ಬಳಸುತ್ತಾರೆ ಎಂದು ಬಹಿರಂಗಪಡಿಸಿದೆ. ಇದನ್ನು ಮರುಬಳಕೆ ಮಾಡಿದರೆ ಅನೇಕ ಸೋಂಕುಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಅರಿವಿನ ಕೊರತೆ ಮತ್ತು ಮುಟ್ಟಿನ ಸುತ್ತ ಇರುವ ನಿಷೇಧ ಇದಕ್ಕೆ ಕಾರಣವೆಂದು ಅವರು ಹೇಳುತ್ತಾರೆ.


ಇದನ್ನೂ ಓದಿ: Explained: ಮಕ್ಕಳಿಗೆ ಪಾಠದೊಂದಿಗೆ ಆಟವೂ ಇರಬೇಕಾ? ಆರು ವರ್ಷದೊಳಗಿನ ಮಕ್ಕಳ ಶಿಕ್ಷಣ ಹೇಗಿರಬೇಕು?


ಚಲನಚಿತ್ರ ನಿರ್ಮಾಪಕ ಗುನೀತ್ ಮೊಂಗಾ ಅವರು 2019 ರಲ್ಲಿ ತಮ್ಮ ಡಾಕ್ಯುಮೆಂಟರಿ “ಪಿರಿಯೆಡ್.‌ ಎಂಡ್‌ ಆಫ್‌ ಸೆಂಟೆನ್ಸ್‌ “ ಗಾಗಿ ಆಸ್ಕರ್‌ ಪ್ರಶಸ್ತಿ ಗೆದ್ದರು. ಇದು ಮುಟ್ಟಿನ ಬಗ್ಗೆ ಆಳವಾಗಿ ಬೇರೂರಿರುವ ಕಳಂಕವನ್ನು ಹೊಂದಿರುವುದರ ಬಗೆಗಿನ ಡಾಕ್ಯುಮೆಂಟರಿ. ಇನ್ನು "ಬದಲಾವಣೆಯು ಸಾಮಾಜಿಕ-ರಾಜಕೀಯ-ಆರ್ಥಿಕ ಪ್ರಕ್ರಿಯೆಯಾಗಿದೆ. ಕನಿಷ್ಠ ಹೆಚ್ಚಿನ ಜನರು ಶಾಲೆಯಿಂದ ಹೊರಗುಳಿಯುವ ಹುಡುಗಿಯರ ಬಗ್ಗೆ ಮಾತನಾಡುತ್ತಿದ್ದಾರೆಂಬುದೇ ನನಗೆ ಸಂತೋಷವಾಗಿದೆ. ಇದು ಇನ್ನೂ ಸಾಕಷ್ಟು ಮುಂದುವರಿಯಬೇಕಿದೆ" ಎಂದು ಮೊಂಗಾ ಹೇಳಿದರು.

Published by:Ashwini Prabhu
First published: