• ಹೋಂ
 • »
 • ನ್ಯೂಸ್
 • »
 • Explained
 • »
 • CoronaVirus| ಜೀವನ ಹೈರಾಣಾಗಿಸಿದ ಕೊರೋನಾ: ವೈದ್ಯಕೀಯ ಸಾಲದಿಂದ ದಿವಾಳಿಯಾದ ಅನೇಕ ಭಾರತೀಯರು

CoronaVirus| ಜೀವನ ಹೈರಾಣಾಗಿಸಿದ ಕೊರೋನಾ: ವೈದ್ಯಕೀಯ ಸಾಲದಿಂದ ದಿವಾಳಿಯಾದ ಅನೇಕ ಭಾರತೀಯರು

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಜಾರ್ಖಂಡ್‌ನ ಬಡ ಸಮುದಾಯದವರಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ ಶೇ. 58 ರಷ್ಟು ಜನರು ಈಗಾಗಲೇ ಹಣವನ್ನು ಎರವಲು ಪಡೆದಿದ್ದಾರೆ ಮತ್ತು ಶೇ. 11 ರಷ್ಟು ಜನರು ಸಾಂಕ್ರಾಮಿಕ ಸಮಯದಲ್ಲಿ ಆಸ್ತಿಯನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.

 • Share this:

  ಕೊರೋನಾ ಸಾಂಕ್ರಾಮಿಕ ದೇಶದಲ್ಲಿ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಅಲ್ಲದೆ, ಅನೇಕ ಮಕ್ಕಳು, ಜನರನ್ನು ಅನಾಥರನ್ನಾಗಿ ಮಾಡಿದೆ. ಆರ್ಥಿಕ ಸಂಕಷ್ಟಗಳಂತೂ ಕೇಳೋದೇ ಬೇಡ. ಲಕ್ಷಾಂತರ ಜನರು ಕೆಲಸ ಕಳೆದುಕೊಂ ಡಿದ್ದರೆ, ಇನ್ನು ಅನೇಕರ ಸಂಬಳ, ಆದಾಯ ಕಡಿತವಾಗಿದೆ. ಇದರಿಂದ ಸಾಲ ಸಹಜವಾಗೇ ಹೆಚ್ಚಿದೆ. ಕೊರೊನಾ, ಸಹ ಅಸ್ವಸ್ಥತೆ ಇದ್ದು, ಆಸ್ಪತ್ರೆಗೆ ಸೇರಿದರಂತೂ ಅವರ ಗತಿ ಅಧೋಗತಿ. ಅನೇಕ ಭಾರತೀಯರ ವೈದ್ಯಕೀಯ ಸಾಲ ಹೆಚ್ಚಾಗಿದ್ದು, ಅನೇಕರನ್ನು ದಿವಾಳಿಯನ್ನಾಗಿಸಿದೆ. ಈ ಬಗ್ಗೆ ವಿವರ, ಉದಾಹರಣೆಗಳು ಇಲ್ಲಿದೆ ನೋಡಿ... 


  ತಾಜ್‌ಮಹಲ್‌ನ ನೆರಳಿನಲ್ಲಿ, ಶೂ ತಯಾರು ಮಾಡುವ ಶ್ಯಾಂ ಬಾಬು ನಿಗಮ್ ತನ್ನ ಅನೇಕ ವರ್ಷಗಳ ದುಡಿಮೆಯಿಂದ ತನ್ನ ಪತ್ನಿ ಜತೆಗೆ ವಾಸಿಸಲು ಸಣ್ಣ ಮನೆ ಕಟ್ಟುವಷ್ಟು ಹಣ ಉಳಿಸಿದ್ದರು. ಅದರಂತೆ ಎರಡು ಬೆಡ್‌ರೂಂ ಮನೆಯನ್ನೂ ಕಟ್ಟಿದರು. ಆದರೆ, ಪತ್ನಿ ಅಂಜುಗೆ ಕೋವಿಡ್ - 19 ಬಂದು ಚಿಕಿತ್ಸೆ, ಎರಡು ತೆರೆದ ಹೃದಯ ಶಸ್ತ್ರಚಿಕಿತ್ಸೆಗಳಿಗೆ 6 ಲಕ್ಷ ವೆಚ್ಚ ಮಾಡಬೇಕಾಯಿತು. ಇದರಿಂದ ಕಟ್ಟಿದ ಹೊಸ ಮನೆಯನ್ನು ಮಾರಬೇಕಾಯ್ತು. ಅದರ ಜತೆಗೆ ಒಂದು ಹೊಲಿಗೆ ಯಂತ್ರವನ್ನೂ ಮಾರಿ, ಹೆಚ್ಚುವರಿ ಸಾಲವನ್ನೂ ಮಾಡುವಂತಾಯ್ತು.


  ಅಲ್ಲದೆ, ಸದ್ಯ ಕೆಲಸವೂ ಇಲ್ಲದ ಕಾರಣ ನನಗೆ ಹಾಗೂ ನನ್ನ ಇಬ್ಬರು ಮಕ್ಕಳಿಗೂ ಕೆಲಸ ಕೊಡಿ. ಸಾಲ ತೀರಿಸುತ್ತೇವೆ ಅನ್ನುತ್ತಿದ್ದಾರೆ. ಆರೋಗ್ಯ ವಿಮೆ ಹೊಂದಿಲ್ಲದ ಸರಿಸುಮಾರು ಮೂರನೇ ಎರಡರಷ್ಟು ಭಾರತೀಯರಲ್ಲಿ ನಿಗಮ್ ಕೂಡ ಸೇರಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಜಾಗ ಇಲ್ಲದೆ, ಜಾಗ ಇದ್ದರೂ ಸರಿಯಾದ ಚಿಕಿತ್ಸೆ ಇಲ್ಲದೆ ಖಾಸಗಿ ಆಸ್ಪತ್ರೆಗೆ ಲಕ್ಷಗಟ್ಟಲೆ ಹಣ ನೀಡುವಂತಾಗಿದೆ. ಆದರೂ, ಜೀವ ಗ್ಯಾರಂಟಿ ಇಲ್ಲ. ವೈರಸ್ ಪ್ರಪಂಚದಾದ್ಯಂತದ ಬಡವರ ಮೇಲೆ ಪರಿಣಾಮ ಬೀರಿದೆ ನಿಜ. ಆದರೆ ಭಾರತದಂತಹ ದೇಶಗಳಲ್ಲಿ ಇದರ ಪರಿಣಾಮವು ಘಾತೀಯವಾಗಿ ಹೆಚ್ಚಾಗಿದೆ.


  ಉಳಿತಾಯ, ವಾಹನ ಮಾರಾಟ, ಕಂಪನಿಯ ಲಾಭ ಹಾಗೂ ಸರ್ಕಾರದ ಆದಾಯ ಕುಸಿಯುತ್ತಿರುವಾಗ ಚಿನ್ನ ಮತ್ತು ಇತರೆ ಸಾಲ ತೆಗೆದುಕೊಳ್ಳುವುದು, ಬಾಕಿ ಹೆಚ್ಚಾಗುತ್ತಿದೆ. ಮೋಟರ್ ಬೈಕ್‌, ಚಿನ್ನ, ಜಾನುವಾರುಗಳನ್ನು ಮಾರಾಟ ಮಾಡಿ ಔಷಧಿ, ಚಿಕಿತ್ಸೆ ಪಡೆಯುವಂತಾಗಿದೆ. ಆಸ್ಪತ್ರೆಯ ಬೆಡ್‌, ಆಮ್ಲಜನಕ ಸಿಲಿಂಡರ್‌ಗಳಿಗಾಗಿ ಹುಡುಕಾಟ, ಸಿಕ್ಕ ಮೇಲೆ ಹೆಚ್ಚು ಹಣ ನೀಡುವುದು, ಇದರ ಜತೆಗೆ ರೆಮ್ಡೆಸಿವಿರ್‌ ಔಷಧಿ, ಆ್ಯಂಬುಲೆನ್ಸ್‌ಗಾಗಿ ಸಿಕ್ಕಾಪಟ್ಟೆ ಹಣ ಖರ್ಚು ಮಾಡುತ್ತಿರುವುದು ಕುಟುಂಬದವರನ್ನು ಹತಾಶರನ್ನಾಗಿಸಿದೆ.

  ಇತ್ತೀಚಿನವರೆಗೂ ಸರ್ಕಾರದಿಂದ ಅನುಮೋದಿತ ಚಿಕಿತ್ಸಾ ಮಾರ್ಗಸೂಚಿಗಳು ವಿಶ್ವ ಆರೋಗ್ಯ ಸಂಸ್ಥೆಯಿಂದ ಶಿಫಾರಸು ಮಾಡದ ಕೆಲವು ಔಷಧಿಗಳನ್ನು ಒಳಗೊಂಡಿದೆ. ಜೂನ್ ಅಂತ್ಯದವರೆಗೆ, ಭಾರತ ಆರೋಗ್ಯ ಸಚಿವಾಲಯದ ಅನುಮೋದಿತ ಚಿಕಿತ್ಸಾ ಪ್ರೋಟೋಕಾಲ್‌ನಡಿ ರೆಮ್ಡೆಸಿವಿರ್‌ ಬಳಕೆಯಾಗುತ್ತಿದೆ. ಆದರೆ, 2020 ರ ಉತ್ತರಾರ್ಧದಲ್ಲೇ ಕೋವಿಡ್ -19 ಗಾಗಿ ಈ ಔಷಧಿಯನ್ನು ಬಳಸುವುದನ್ನು ಅನೇಕ ದೇಶಗಳು ಕೈಬಿಟ್ಟಿವೆ. ಯಾಕೆಂದರೆ, ಈ ಔಷಧ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಲ್ಲಿ ಸಾವಿನ ವಿರುದ್ಧ ನಗಣ್ಯ ರಕ್ಷಣೆ ನೀಡುತ್ತದೆ ಎಂಬುದನ್ನು ತೋರಿಸಿದೆ.


  ಮಲೇರಿಯಾ ವಿರೋಧಿ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪರಾವಲಂಬಿ ವಿರೋಧಿ ಚಿಕಿತ್ಸೆಯಾದ ಐವರ್‌ಮೆಕ್ಟಿನ್‌ ಅನ್ನು ಸಹ ಸರ್ಕಾರ ಶಿಫಾರಸು ಮಾಡಿತ್ತು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಸ್ವಂತ ಅಧ್ಯಯನಗಳು ಕಡಿಮೆ ಪ್ರಯೋಜನ ಕಂಡುಕೊಂಡಿದ್ದರೂ ಸಹ, ಪ್ಲಾಸ್ಮಾ ಚಿಕಿತ್ಸೆಯು ಪಟ್ಟಿಯಲ್ಲಿತ್ತು.


  2018 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆ ಎಂದು ಕರೆಯಲ್ಪಡುವ ಆಯುಷ್ಮಾನ್‌ ಭಾರತ್‌ ಯೋಜನೆ ಎಂಬ ಪ್ರಮುಖ ಆರೋಗ್ಯ ಕಾರ್ಯಕ್ರಮ ಅನಾವರಣಗೊಳಿಸಿದ್ದರು. ಸುಮಾರು 107 ಮಿಲಿಯನ್ ಬಡ ಮತ್ತು ದುರ್ಬಲ ಕುಟುಂಬಗಳಿಗೆ ಅಥವಾ ಸುಮಾರು 40 ರಷ್ಟು ಜನಸಂಖ್ಯೆಯ ಆರೋಗ್ಯ ವೆಚ್ಚದ ವಿರುದ್ಧ ಆರ್ಥಿಕ ಅಪಾಯದ ರಕ್ಷಣೆಯನ್ನು ನೀಡುತ್ತದೆ. ಆದರೆ, ಡ್ಯೂಕ್ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನದ ಪ್ರಕಾರ, ಹೊಸ ನೀತಿಯು ಆರೋಗ್ಯ ರಕ್ಷಣೆಗೆ ಪ್ರವೇಶವನ್ನು “ಪರಿಣಾಮಕಾರಿಯಾಗಿ ಸುಧಾರಿಸಿಲ್ಲ” ಎಂದು ಹೇಳಿದೆ.


  ಹೆಚ್ಚುತ್ತಿರುವ ವೈದ್ಯಕೀಯ ಸಾಲವು ಮುಂದಿನ ವರ್ಷ ನಡೆಯಲಿರುವ ಪ್ರಮುಖ ರಾಜ್ಯ ಚುನಾವಣೆಗಳಿಗೆ ಮುಂಚಿತವಾಗಿ ಮೋದಿಗೆ ಅಪಾಯವನ್ನುಂಟುಮಾಡುತ್ತದೆ. ಇದರಲ್ಲಿ ಉತ್ತರ ಪ್ರದೇಶದಲ್ಲಿ ನಿಗಮ್ರಂತಹ ಅನೇಕರು ವಾಸಿಸುತ್ತಿದ್ದು, ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಸಾಂಕ್ರಾಮಿಕ ರೋಗವು ಸಂಭವಿಸುವ ಮೊದಲೇ, ಆರೋಗ್ಯ ರಕ್ಷಣೆಗಾಗಿ ಭಾರತದ ಹಣವಿಲ್ಲದ ಖರ್ಚುಗಳು ವಿಶ್ವದಲ್ಲೇ ಅತಿ ಹೆಚ್ಚಾಗಿದ್ದು, ಇದು ಒಟ್ಟು ಆರೋಗ್ಯ ವೆಚ್ಚದ ಸುಮಾರು 60% ನಷ್ಟಿದೆ.


  ಇದನ್ನೂ ಓದಿ: Explainer: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಏರುತ್ತಲೇ ಇದೆ ಇದಕ್ಕೆ ಕಾರಣವೇನು ಗೊತ್ತೇ..?


  ವೈದ್ಯಕೀಯ ಸಾಲದಿಂದ ಎಷ್ಟು ಭಾರತೀಯರನ್ನು ಆರ್ಥಿಕ ನಾಶಕ್ಕೆ ತಳ್ಳಲಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿಯಿಲ್ಲವಾದರೂ, ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಂಶೋಧಕರು ಕಳೆದ ವರ್ಷ ಪಾಕಿಸ್ತಾನದ ಇಡೀ ಜನಸಂಖ್ಯೆಗಿಂತ ಹೆಚ್ಚಿನ ಅಂದರೆ 230 ದಶಲಕ್ಷ ಜನರನ್ನು ಬಡತನಕ್ಕೆ ತಳ್ಳುವ ಮೂಲಕ ವೈರಸ್ ದಶಕಗಳ ಲಾಭವನ್ನು ಅಳಿಸಿಹಾಕಿದೆ ಎಂದು ಕಂಡುಕೊಂಡಿದೆ. ಸಾಂಕ್ರಾಮಿಕ ಸಮಯದಲ್ಲಿ 90%ಕ್ಕಿಂತ ಹೆಚ್ಚು ಜನರು ಸರಾಸರಿ 15,000 ರೂಪಾಯಿಗಳನ್ನು ಎರವಲು ಪಡೆದರು, ಇದರ ಪರಿಣಾಮವು ಮುಂದುವರಿಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.


  ಆರೋಗ್ಯದ ಮೇಲಿನ ಖರ್ಚನ್ನು ಪೂರೈಸಲು ತೆಗೆದುಕೊಂಡ ಸಾಲಗಳು ಇತರ ಗೃಹ ಸಾಲಕ್ಕಿಂತ ಹೆಚ್ಚು ಹಾನಿಕಾರಕವಾಗಬಹುದು. ಏಕೆಂದರೆ ಅನಾರೋಗ್ಯವು “ಒಬ್ಬರ ಕೆಲಸದ ಸಾಮರ್ಥ್ಯವನ್ನು ಮಿತಿಗೊಳಿಸುತ್ತದೆ, ಇದು ಮನೆಯ ಉಳಿತಾಯ ಮತ್ತು ಅನಪೇಕ್ಷಿತ ಆರ್ಥಿಕ ಆಘಾತಗಳಿಗೆ ಕಾರಣವಾಗುತ್ತದೆ” ಎಂದು ಅರ್ಥಶಾಸ್ತ್ರಜ್ಞ ಸುನೀಲ್ ಕುಮಾರ್ ಸಿನ್ಹಾ ಹೇಳಿದ್ದಾರೆ.


  ಇದನ್ನೂ ಓದಿ: ಕೇಂದ್ರದಿಂದ ಲಕ್ಷದ್ವೀಪದ ಮೇಲೆ ಜೈವಿಕ ಅಸ್ತ್ರ ಬಳಕೆ ಎಂದು ಆರೋಪಿಸಿದ್ದ ನಿರ್ಮಾಪಕಿ ವಿರುದ್ಧ ದೇಶದ್ರೋಹ ಪ್ರಕರಣ

  top videos


   ಜಾರ್ಖಂಡ್‌ನ ಬಡ ಸಮುದಾಯದವರಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ ಶೇ. 58 ರಷ್ಟು ಜನರು ಈಗಾಗಲೇ ಹಣವನ್ನು ಎರವಲು ಪಡೆದಿದ್ದಾರೆ ಮತ್ತು ಶೇ. 11 ರಷ್ಟು ಜನರು ಸಾಂಕ್ರಾಮಿಕ ಸಮಯದಲ್ಲಿ ಆಸ್ತಿಯನ್ನು ಮಾರಾಟ ಮಾಡಿದ್ದಾರೆ ಎಂದು ಪ್ರತಿಷ್ಠಾನವೊಂದರ ಗ್ರಾಮೀಣಾಭಿವೃದ್ಧಿ ಕೇಂದ್ರದ ನಿರ್ದೇಶಕ ಜಾನ್ ಪಾಲ್ ಹೇಳಿದ್ದಾರೆ.


   ಭಾರತದ ಒಳನಾಡಿನಲ್ಲಿ ಆಳವಾದ ಬಿಕ್ಕಟ್ಟು ಇನ್ನಷ್ಟು ಭೀಕರವಾಗಿದೆ. ಹಳ್ಳಿಗರು ಚಿಕಿತ್ಸೆಗೆ ಪಾವತಿಸಲು ತಮ್ಮ ಆಹಾರ ಸೇವನೆಯನ್ನು ಕಡಿಮೆ ಮಾಡುವಂತಾಗಿದೆ. ಮನೆಯಲ್ಲಿ ಹೆಚ್ಚು ಆಹಾರವಿಲ್ಲ. ಕೆಲಸ ಇಲ್ಲದಿದ್ದರೆ ನಾವು ಸಾಯುವಂತಾಗಿದೆ ಎಂಬ ಅನೇಕ ಉದಾಹರಣೆಗಳು ದೇಶದಲ್ಲಿ ಸಿಗುತ್ತವೆ.


   First published: