• ಹೋಂ
  • »
  • ನ್ಯೂಸ್
  • »
  • Explained
  • »
  • Maternity Leave: ಮಗು ದತ್ತು ಪಡೆದವರಿಗೆ ಸಿಗುತ್ತಾ ಮೆಟರ್ನಿಟಿ ಲೀವ್! ಈ ಬಗ್ಗೆ ಕಾನೂನುಗಳಲ್ಲಿ ಏನಿದೆ ನಿಯಮ?

Maternity Leave: ಮಗು ದತ್ತು ಪಡೆದವರಿಗೆ ಸಿಗುತ್ತಾ ಮೆಟರ್ನಿಟಿ ಲೀವ್! ಈ ಬಗ್ಗೆ ಕಾನೂನುಗಳಲ್ಲಿ ಏನಿದೆ ನಿಯಮ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದತ್ತು ಪಡೆದ ತಾಯಂದಿರು ಹೆರಿಗೆ ರಜೆ ಪಡೆಯುತ್ತಾರೆಯೇ? ಮಾತೃತ್ವ ಪ್ರಯೋಜನ ಕಾಯ್ದೆಯ ಸವಾಲನ್ನು ಸುಪ್ರೀಂ ಕೋರ್ಟ್ ಏಕೆ ವಿಚಾರಣೆ ನಡೆಸುತ್ತಿದೆ? ದತ್ತು ಪಡೆದ ತಾಯಂದಿರ ಜೀವನ ಅನುಭವಗಳೇನು? ಈ ಪ್ರಕರಣದ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿದೆ ಓದಿ.

  • Share this:

ಉದ್ಯೋಗಸ್ಥ ಗರ್ಭಿಣಿಗೆ (Pregnant) ವೇತನ ಸಹಿತ ರಜೆ ನೀಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಉದ್ಯೋಗಸ್ಥ ಮಹಿಳೆಯರಿಗೆ ಮೆಟರ್ನಿಟಿ ಬೆನಿಫಿಟ್‌ ಕಾಯ್ದೆ (Maternity Benefit Act) ಅಥವಾ ಹೆರಿಗೆ ಪ್ರಯೋಜನ ಕಾಯ್ದೆಗಳ ಅಡಿಯಲ್ಲಿ ವೇತನ ಸಹಿತ ರಜೆ ಸೇರಿ ಕೆಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಹೆರಿಗೆ ಪ್ರಯೋಜನ ಕಾಯ್ದೆ, 1961ರ ಅಡಿಯಲ್ಲಿ ಸೆಕ್ಷನ್ 6 ರ ಪ್ರಕಾರ ಮಹಿಳೆಯರಿಗೆ ಕೆಲ ವಾರಗಳ ಪ್ರಯೋಜನಗಳಿಗೆ ಅರ್ಹತೆ ಇದೆ. ಆದರೆ ದತ್ತು ಪಡೆದ ತಾಯಂದಿರ ಕಥೆ ಏನು? ಹೌದು ಹಲವು ವರ್ಷಗಳಿಂದ ಚರ್ಚೆಯಲ್ಲಿರುವ ವಿಚಾರ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.


ಹಾಗಾದರೆ ಈ ಕಾಯ್ದೆ ಮತ್ತು ಅದರ ಪ್ರಯೋಜನ ಮಕ್ಕಳನ್ನು ಹೊತ್ತು, ಹೆತ್ತ ಮಹಿಳೆಯರಿಗೆ ಮಾತ್ರವೇ? ಇದು ಮಕ್ಕಳನ್ನು ದತ್ತು ಪಡೆದವರಿಗೆ ಇಲ್ಲವೇ? ದತ್ತು ಪಡೆದ ತಾಯಂದಿರಿಗೆ ಈ ಮಾತೃತ್ವ ರಜೆ ಏಕೆ ಸವಾಲಾಗುತ್ತಿದೆ? ಪ್ರಕರಣ ಏನು ಇಲ್ಲಿ ಎಂಬುದನ್ನು ತಿಳಿಯೋಣ.


3 ತಿಂಗಳೊಳಗಿನ ಮಗು ದತ್ತುಪಡೆದವರಿಗೆ ಮಾತ್ರ ಮಾತೃತ್ವ ರಜೆ: ಏಪ್ರಿಲ್ 28ಕ್ಕೆ ಸುಪ್ರೀಂನಲ್ಲಿ ವಿಚಾರಣೆ


ದತ್ತು ಪಡೆಯುವ ಮತ್ತು ಬಾಡಿಗೆ ತಾಯಂದಿರಿಗೆ ಕೇವಲ 12 ವಾರಗಳ ಹೆರಿಗೆ ರಜೆಗೆ ಅರ್ಹತೆ ನೀಡುವ 1961ರ ಹೆರಿಗೆ ಪ್ರಯೋಜನ ಕಾಯಿದೆಯ ಸೆಕ್ಷನ್ 5(4) ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಯ ವಿಚಾರಣೆಯನ್ನು ಭಾರತದ ಸುಪ್ರೀಂ ಕೋರ್ಟ್ ಕಳೆದ ವಾರ ಏಪ್ರಿಲ್ 28ಕ್ಕೆ ವಿಚಾರಣೆ ಮಾಡುವುದಾಗಿ ಘೋಷಿಸಿದೆ.


ಇದನ್ನೂ ಓದಿ: ಅತೀಕ್ ಅಹ್ಮದ್ ಹತ್ಯೆ ಒಂದು ಮುನ್ಸೂಚನೆಯಿಂದ ಕೂಡಿದ್ದ ಕೃತ್ಯಕ್ಕೆ ಸಾಕ್ಷಿಯಾಗಿದೆಯೇ?


3 ತಿಂಗಳೊಳಗಿನ ಮಗು ದತ್ತುಪಡೆದವರಿಗೆ ಮಾತ್ರ ಮಾತೃತ್ವ ರಜೆ ಎಂಬ ನಿಯಮ ಹಲವರ ವಿರೋಧ ಕೂಡ ಪಡೆದುಕೊಳ್ಳುತ್ತಿದೆ. ಈ ಬಗ್ಗೆ ಸಂಬಂಧಿಸಿದಂತೆ ಈಗಾಗ್ಲೇ ವಕೀಲೆ ಹಂಸಾನಂದಿನಿ ನಂದೂರಿ ಅರ್ಜಿ ಕೂಡ ಸಲಿಸಿದ್ದು, ಅದರ ಸುತ್ತ ಪ್ರಕರಣ ಸುತ್ತುತ್ತಿದೆ.


ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದ ಈ ಪ್ರಕರಣದ ಬಗ್ಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ.ಪರ್ದಿವಾಲಾ ಅವರು ಕರ್ನಾಟಕ ಮೂಲದ ವಕೀಲ ಹಂಸಾನಂದಿನಿ ನಂದೂರಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಏಪ್ರಿಲ್ 28 ರಂದು ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ.


2021 ರ ವಿಚಾರಣೆ ಏನಾಗಿತ್ತು?


ದತ್ತು ಪಡೆದ ತಾಯಂದಿಗೆ ಮಾತೃತ್ವ ರಜೆ ಬಗ್ಗೆ ಹಲವು ವರ್ಷಗಳಿಂದ ಚರ್ಚೆ ಆಗುತ್ತಲೇ ಇದೆ. ಸುಪ್ರೀಂ ಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗ್ಲೇ ವಿಚಾರಣೆ ನಡೆಸುತ್ತಲೇ ಬಂದಿದೆ.


ಸಾಂದರ್ಭಿಕ ಚಿತ್ರ


ಅಕ್ಟೋಬರ್ 21, 2021 ರಂದು, ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠವು ಈ ಮನವಿಯ ಕುರಿತು ಕಾನೂನು ಮತ್ತು ನ್ಯಾಯ ಸಚಿವಾಲಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಪ್ರತಿಕ್ರಿಯೆಯನ್ನು ಕೋರಿತ್ತು.


2021 ರಲ್ಲಿ ಮಾತೃತ್ವ ಪ್ರಯೋಜನ ಕಾಯ್ದೆಯ ಅಡಿಯಲ್ಲಿ ದತ್ತು ಪಡೆದ ಮಕ್ಕಳು ಮೂರು ತಿಂಗಳಿಗಿಂತ ಚಿಕ್ಕ ವಯಸ್ಸಿನವರಾಗಿದ್ದರೆ ಮಾತ್ರ ಮಾತೃತ್ವ ರಜೆ ನೀಡುವ ಕೇಂದ್ರ ಸರ್ಕಾರದ ನಿಯಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಕಳುಹಿಸಿತ್ತು.


ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಹಾಗೂ ಕೃಷ್ಣ ಮುರಾರಿ ನೇತೃತ್ವದ ನ್ಯಾಯಪೀಠವು ದತ್ತು ಪಡೆದ ತಾಯಂದಿರಿಗೆ ಈ ಕಾಯ್ದೆಯು ತಾರತಮ್ಯ ಮಾಡುತ್ತಿದೆ ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿ ಕೇಂದ್ರದಿಂದ ಪ್ರತಿಕ್ರಿಯೆ ಕೇಳಿತ್ತು.


ವಕೀಲೆ ಹಂಸನಂದಿನಿ ನಂದೂರಿಯಿಂದ ಪಿಐಎಲ್


ಹಂಸನಂದಿನಿ ನಂದೂರಿ ಎಂಬವರು ಮಾತೃತ್ವ ಪ್ರಯೋಜನ ಕಾಯ್ದೆ, 1961ರ ಸೆಕ್ಷನ್ 5(4)ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 12 ವಾರಗಳ ಹೆರಿಗೆ ರಜೆಯ ಪ್ರಯೋಜನವನ್ನು ಪಡೆಯಲು ಮೂರು ತಿಂಗಳ ಮಗುವನ್ನೇ ದತ್ತುಪಡೆಯಬೇಕು ಎಂಬ ನಿಯಮ ಎಷ್ಟರ ಮಟ್ಟಿಗೆ ಸರಿ ಎಂದು ಅರ್ಜಿದಾರೆ ಪ್ರಶ್ನಿಸಿದ್ದರು.


ಮೂರು ತಿಂಗಳಿಗೆ ಮೇಲ್ಪಟ್ಟ ಅನಾಥ ಅಥವಾ ಇನ್ಯಾವುದೇ ಮಗುವನ್ನು ದತ್ತು ಪಡೆಯುವ ತಾಯಿಗೆ ಮಾತೃತ್ವ ರಜೆಯ ಪ್ರಯೋಜನ ಸಿಗುವುದಿಲ್ಲ. ಕೇಂದ್ರ ಸರ್ಕಾರದ ಈ ನಿಯಮವು ದತ್ತು ಪಡೆದ ಮಗುವಿನ ತಾಯಿ ಹಾಗೂ ಮಗುವಿಗೆ ಜನ್ಮ ನೀಡಿದ ತಾಯಿಯ ನಡುವೆ ತಾರತಮ್ಯ ಮಾಡುವಂತಿದೆ ಎಂದು ಹೇಳಿದ್ದರು.


ಪಿಐಎಲ್‌ ಸಲ್ಲಿಸಿದ್ದು ಏಕೆ?


ನಂದೂರಿ ಅವರು 2017 ರಲ್ಲಿ ತಮ್ಮ ನಾಲ್ಕೂವರೆ ವರ್ಷದ ಮಗಳು ಮತ್ತು ಎರಡು ವರ್ಷದ ಮಗನನ್ನು ದತ್ತು ಪಡೆದರು. ಅವರ ಕಂಪನಿಯು ಅವರಿಗೆ ಆರು ವಾರಗಳ ರಜೆಯನ್ನು ನೀಡಿತು. ಈ ರಜೆ ಸರಿ ಇಲ್ಲ ಎಂದು ಭಾವಿಸಿ ಇವರು ನ್ಯಾಯಾಲಯದ ಮೆಟ್ಟಿಲೇರಿದರು. ಅಸ್ತಿತ್ವದಲ್ಲಿರುವ ಕಾನೂನು, ದತ್ತು ಪಡೆದ ಮತ್ತು ಜೈವಿಕ ತಾಯಂದಿರ ನಡುವಿನ ವಿಭಜನೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಒಬ್ಬರು ಹೇಗೆ ಪೋಷಕರಾಗುತ್ತಾರೆ ಎಂಬುದರ ಆಧಾರದ ಮೇಲೆ ಯಾವುದೇ ತಾರತಮ್ಯ ಇರಬಾರದು.


ಮಾತೃತ್ವ ಪ್ರಯೋಜನ ಕಾಯಿದೆ ತಾಯಿ ಮತ್ತು ಮಗುವ ಇಬ್ಬರಿಗೂ ಸಂಬಂಧ ಪಟ್ಟಿದೆ. ದತ್ತು ಪಡೆದ ಮಾತ್ರಕ್ಕೆ ಕೆಲ ಜವಬ್ದಾರಿಗಳು ಬದಲಾಗುವುದಿಲ್ಲ. ಮಗುವನ್ನು ಹೊತ್ತು, ಹೆರದೇ ಇರಬಹುದು. ಆದರೆ ಅದನ್ನು ಪಾಲನೆ ಮಾಡಲೇಬೇಕು ಎಂದು ತಿಳಿಸಿದ್ದರು.


ಸಾಂದರ್ಭಿಕ ಚಿತ್ರ


ಹೀಗಾಗಿ ಜೈವಿಕ ತಾಯಂದಿರಂತೆ ದತ್ತು ಪಡೆದ ತಾಯಂದಿರಿಗೂ 26 ವಾರಗಳ ಪ್ರಯೋಜನಗಳ ಅರ್ಹತೆ ಲಭಿಸಬೇಕು. ಮತ್ತು 3 ತಿಂಗಳೊಳಗಿನ ಮಗು ದತ್ತು ಪಡೆದವರಿಗೆ ಮಾತ್ರ ಮಾತೃತ್ವ ರಜೆ ಎಂಬ ನಿಯಮ ಬದಲಾಗಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ.


ಸವಾಲಿನ ಅಡಿಯಲ್ಲಿ ನಿಬಂಧನೆ ಏನು?


1961 ರ ಮೂಲ ಶಾಸನವು ದತ್ತು ಪಡೆದ ತಾಯಂದಿರಿಗೆ ಹೆರಿಗೆ ಪ್ರಯೋಜನಗಳನ್ನು ವಿಸ್ತರಿಸುವ ನಿರ್ದಿಷ್ಟ ನಿಬಂಧನೆಗಳನ್ನು ಹೊಂದಿಲ್ಲ ಮತ್ತು ಈ ಬದಲಾವಣೆಯನ್ನು 2017 ರ ತಿದ್ದುಪಡಿಯ ಮೂಲಕ ಮಾತ್ರ ತರಲಾಯಿತು. ಹೆರಿಗೆ ಪ್ರಯೋಜನಗಳ (ತಿದ್ದುಪಡಿ) ಕಾಯಿದೆ, 2017 ಜೈವಿಕ ತಾಯಂದಿರಿಗೆ ಹೆರಿಗೆ ರಜೆಯ ಅವಧಿಯನ್ನು ವಿಸ್ತರಿಸಿದೆ ಮಾತ್ರವಲ್ಲದೆ ದತ್ತು ಪಡೆದ ತಾಯಂದಿರಿಗೆ ಮೊದಲ ಬಾರಿಗೆ ಹೆರಿಗೆ ರಜೆಯನ್ನು ವಿಸ್ತರಿಸುವ ನಿಬಂಧನೆಯನ್ನು ಸೇರಿಸಿದೆ.


ಈ ತಿದ್ದುಪಡಿಯು ಈ ಹಿಂದೆ ಕೇವಲ 12 ವಾರಗಳ ಹೆರಿಗೆ ರಜೆಗೆ ಅರ್ಹರಾಗಿದ್ದ ಜೈವಿಕ ತಾಯಂದಿರಿಗೆ ಹೆರಿಗೆಯ ನಂತರ 26 ವಾರಗಳ ವೇತನ ಸಹಿತ ರಜೆಯನ್ನು ಅನುಮತಿಸಲು ಕಾಯಿದೆಯ ಸೆಕ್ಷನ್ 5 ಅನ್ನು ಪರಿಷ್ಕರಿಸಿದೆ.


ಗಮನಾರ್ಹವಾಗಿ, ಇದು ಮೂರು ತಿಂಗಳ ಕೆಳಗಿನ ಮಗುವನ್ನು ಕಾನೂನುಬದ್ಧವಾಗಿ ದತ್ತು ತೆಗೆದುಕೊಳ್ಳುವ ಬಾಡಿಗೆ ಅಥವಾ ದತ್ತು ಪಡೆದ ತಾಯಂದಿರು ಮಗುವನ್ನು ತಾಯಿಗೆ ಹಸ್ತಾಂತರಿಸಿದ ದಿನಾಂಕದಿಂದ 12 ವಾರಗಳವರೆಗೆ ಹೆರಿಗೆ ಪ್ರಯೋಜನದ ಅವಧಿಗೆ ಅರ್ಹರಾಗಿರುತ್ತಾರೆ ಎಂದು ಸೂಚಿಸುವ ವಿಭಾಗ 5(4) ಅನ್ನು ಸಹ ಸೇರಿಸಲಾಗಿದೆ.


3 ತಿಂಗಳೊಳಗಿನ ಮಗು ದತ್ತು ಪಡೆದವರಿಗೆ ಮಾತ್ರ ಮಾತೃತ್ವ ರಜೆ ಎಂಬ ನಿಯಮ ಜಾರಿಯಾಗಿತ್ತು. ಆದರೆ ನಂದೂರಿ ಅವರು ಆರು ವಾರಗಳ ರಜೆ ಪಡೆದರು. ನಂತರ ಈ ನಿಯಮ ಸರಿ ಇಲ್ಲಾ ಎಂದು ಭಾವಿಸಿ ಪಿಐಎಲ್‌ ಸಲ್ಲಿಸಿದರು.


3 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವನ್ನು ದತ್ತು ಪಡೆಯುವ ಪ್ರಕ್ರಿಯೆ ಹೇಗಿದೆ? ಇದು ಮಾತೃತ್ವ ರಜೆಗೆ ಹೇಗೆ ಸವಾಲಾಗಿದೆ?


2015ರ ಜುವೆನೈಲ್ ಜಸ್ಟಿಸ್ ಕೇರ್ ಅಂಡ್ ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಆಕ್ಟ್, 2015 (ಜೆಜೆ ಆಕ್ಟ್) ಮತ್ತು ಅದರ ಅಡಿಯಲ್ಲಿ ರೂಪಿಸಲಾದ ನಿಯಮಾವಳಿಗಳ ಅಡಿಯಲ್ಲಿ ರೂಪಿಸಲಾದ ಸಂಕೀರ್ಣ ಕಾರ್ಯವಿಧಾನಗಳ ಕಾರಣದಿಂದಾಗಿ ಅಸ್ತಿತ್ವದಲ್ಲಿರುವ ದತ್ತು ವ್ಯವಸ್ಥೆಯು ಮೂರು ತಿಂಗಳ ವಯಸ್ಸಿನ ಮೊದಲು ಮಗುವನ್ನು ಮನೆಗೆ ಕರೆತರಲು ಅನುಮತಿಸುತ್ತದೆ.
ಆದರೆ ಈ ವಿಧಾನ ದತ್ತು ಪಡೆದ ತಾಯಂದಿರಿಗೆ ರಜೆಗೆ ಸವಾಲಾಗುತ್ತದೆ. ದತ್ತು ಪ್ರಕ್ರಿಯೆಯು ವಿಳಂಬ ಕಾರಣ ತಾಯಿಯು ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವನ್ನು ದತ್ತು ಪಡೆಯುವುದು ಅಸಾಧ್ಯವಾಗುತ್ತದೆ. ಆಗ ಈ ರಜೆ ಪಡೆಯುವುದು ಮಹಿಳೆಗೆ ಅಸಾಧ್ಯವಾಗುತ್ತದೆ. ದತ್ತು ಪಡೆಯುವ ಪ್ರಕ್ರಿಯೆ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಮೂರು ತಿಂಗಳ ನಂತರವೇ ಮಗು ತಾಯಿಯ ಕೈ ಸೇರುತ್ತದೆ. ಹೀಗಾಗಿ ಮೂರು ತಿಂಗಳ ನಂತರ ಮಗು ಬಂದರೆ ತಾಯಿಗೆ ಸರ್ಕಾರದ ವತಿಯಿಂದ ಸಿಗುವ ಮಾತೃತ್ವ ರಜೆ ಅನ್ವಯವಾಗುವುದಿಲ್ಲ.


"4% ಮಾತ್ರ ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನವರು"


ಆಗಸ್ಟ್ 25, 2022 ರಂದು, CARA ಅಡಿಯಲ್ಲಿ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠವು ದತ್ತು ಪ್ರಕ್ರಿಯೆ ಉತ್ತಮವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು ಮತ್ತು ಕಾರ್ಯವಿಧಾನವನ್ನು ಸರಳೀಕರಿಸುವ ಅಗತ್ಯವನ್ನು ನ್ಯಾಯಾಲಯವು ಒತ್ತಿಹೇಳಿತು.


2016 ಮತ್ತು 2020 ರ ನಡುವೆ ನಂದೂರಿ ಅವರು CARA ಗೆ ಸಲ್ಲಿಸಿದ RTI ಅರ್ಜಿಗೆ ಪ್ರತಿಕ್ರಿಯೆಯಾಗಿ ಹಂಚಿಕೊಂಡ ಮಾಹಿತಿಯ ಪ್ರಕಾರ, ದತ್ತು ಪಡೆದ ಒಟ್ಟು ಮಕ್ಕಳಲ್ಲಿ 4% ಮಾತ್ರ ದತ್ತು ತೆಗೆದುಕೊಳ್ಳುವ ಸಮಯದಲ್ಲಿ ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನವರಾಗಿದ್ದರು ಎಂದು ತಿಳಿಸಿದ್ದರು.

First published: