• Home
 • »
 • News
 • »
 • explained
 • »
 • Mass Killings: ಸಾಮೂಹಿಕ ಶಾಲಾ ಹತ್ಯೆ ಪ್ರಕರಣಗಳಿಗೆ ಮಾನಸಿಕ ಅಸ್ವಸ್ಥೆಯೇ ಕಾರಣವಲ್ಲ!

Mass Killings: ಸಾಮೂಹಿಕ ಶಾಲಾ ಹತ್ಯೆ ಪ್ರಕರಣಗಳಿಗೆ ಮಾನಸಿಕ ಅಸ್ವಸ್ಥೆಯೇ ಕಾರಣವಲ್ಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Research On Mass Killings: ಜಗತ್ತಿನಾದ್ಯಂತದ ಸುಮಾರು 82 ಸಾಮೂಹಿಕ ಹತ್ಯೆಗಳ ಕುರಿತು ಅಧ್ಯಯನ ನಡೆಸುತ್ತಿದ್ದು ಅದರಲ್ಲಿ ಅವರು ಪ್ರಾಥಮಿಕವಾಗಿ ಹೀಗೆ ನಡೆದ ಹತ್ಯೆಗಳ ಅಪರಾಧಿ ಅಥವಾ ಕೊಲೆಗಾರರು ಹೇಳಿಕೊಳ್ಳುವಂತಹ ಯಾವುದೇ ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿರಲಿಲ್ಲ ಎಂಬ ವಿಚಾರವನ್ನು ಕಂಡುಕೊಂಡಿದ್ದಾರೆ.

ಮುಂದೆ ಓದಿ ...
 • Share this:

  ಕೊಲಂಬಿಯಾ ವಿವಿಯ (Columbia University) ಐರ್ವಿಂಗ್ ಮೆಡಿಕಲ್ ಸೆಂಟರ್ ಹಾಗೂ ನ್ಯೂಯಾರ್ಕ್ ಸ್ಟೇಟ್ ಸೈಕಿಯಾಟ್ರಿಕ್ ಇನ್ಸ್ಟಿಟ್ಯೂಟ್ ಈ ಎರಡೂ ಸಂಸ್ಥೆಗಳ ಸಂಶೋಧಕರ ತಂಡವೊಂದು (Research Team)ಜಗತ್ತಿನಾದ್ಯಂತ ಶೈಕ್ಷಣಿಕ ವಿದ್ಯಾ ಸಂಸ್ಥೆಗಳಲ್ಲಿ ಕನಿಷ್ಠವಾಗಿಯಾದರೂ ನಡೆದಿರುವ ಜಗತ್ತಿನಾದ್ಯಂತದ ಸುಮಾರು 82 ಸಾಮೂಹಿಕ ಹತ್ಯೆಗಳ (Mass Killings) ಕುರಿತು ಅಧ್ಯಯನ ನಡೆಸುತ್ತಿದ್ದು ಅದರಲ್ಲಿ ಅವರು ಪ್ರಾಥಮಿಕವಾಗಿ ಹೀಗೆ ನಡೆದ ಹತ್ಯೆಗಳ ಅಪರಾಧಿ ಅಥವಾ ಕೊಲೆಗಾರರು ಹೇಳಿಕೊಳ್ಳುವಂತಹ ಯಾವುದೇ ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿರಲಿಲ್ಲ ಎಂಬ ವಿಚಾರವನ್ನು ಕಂಡುಕೊಂಡಿದ್ದಾರೆ.


  ಈ ಸಂಶೋಧನಾ ತಂಡದಲ್ಲಿ ಎಂ.ಡಿ ಪದವಿ ಪುರಸ್ಕೃತರಾದ ರೇಗಿ ಆರ್. ಗಿರ್ಗಿಸ್, ಹಾಗೂ ಪಿಹೆಚ್ಡಿ ವಿಜ್ಞಾನಿಯಾದ ಗೇರಿ ಬ್ರುಕಾಟೊ ಅವರು ಭಾಗವಹಿಸಿದ್ದು ಅವರು ಹೇಳುವಂತೆ ಬಹುತೇಕ ಸಾಮೂಹಿಕ ಹತ್ಯೆ ಪ್ರಕರಣಗಳಲ್ಲಿ ಫೈರ್ ಆರ್ಮ್ ಅಥವಾ ಸ್ವಯಂಚಾಲಿತ ಫೈರ್ ಆರ್ಮ್ ಗಳನ್ನು ಹೆಚ್ಚಾಗಿ ಬಳಸಲ್ಪಟ್ಟಿರುವ ಬಗ್ಗೆ ಗಮನಿಸುತ್ತಾರೆ. ಇನ್ನು, ಶಾಲಾ ಆವರಣದಾಚೆ ನಡೆದಿರುವ ಹತ್ಯೆಗಳಲ್ಲಿ ಸಾಮಾನ್ಯವಾಗಿ ಫೈರ್ ಆರ್ಮ್ ಬಳಸದೆ ಹರಿತ್ತವಾದ ಚಾಕುವಿನಿಂದ ಕೊಲೆ ಮಾಡಿರುವುದು ಸಾಕಷ್ಟು ಸಾಮಾನ್ಯವಾಗಿರುವ ಅಂಶವನ್ನು ಅವರು ಕಂಡುಕೊಂಡಿದ್ದಾರೆ.


  Deadly Murder: ಪ್ರಿಯತಮೆಯನ್ನು ಕೊಂದು 35 ಪೀಸ್ ಮಾಡಿ ಫ್ರಿಡ್ಜ್​ನಲ್ಲಿಟ್ಟ, ಆಮೇಲೆ ಮಾಡಿದ್ದು ಕೇಳಿದ್ರೆ ಮೈ  ಜುಂ ಎನ್ನುತ್ತೆ!


  ಶಾಲಾ ಆವರಣಗಳಲ್ಲಿ ನಡೆದ ಹತ್ಯಾಕಾಂಡಗಳ ಬಗ್ಗೆ ಬಹು ವಿಸ್ತೃತ ಅಧ್ಯಯನ


  ಪ್ರಸ್ತುತ ಅವರ ಸಂಶೋಧನಾ ಅಧ್ಯಯನವನ್ನು ಅಕ್ಟೋಬರ್ 27 ರ ಜರ್ನಲ್ ಆಫ್ ಫಾರೆನ್ಸಿಕ್ ಸೈನ್ಸಸ್ ನಲ್ಲಿ ಪ್ರಕಟಿಸಲಾಗಿದ್ದು ಇದು ಶಾಲಾ ಆವರಣಗಳಲ್ಲಿ ನಡೆದ ಹತ್ಯಾಕಾಂಡಗಳ ಬಗ್ಗೆ ಇಲ್ಲಿಯವರೆಗೂ ಮಾಡಲಾಗಿರುವ ಬಹು ವಿಸ್ತೃತ ಅಧ್ಯಯನ ವರದಿಯಾಗಿದೆ ಎಂದು ತಿಳಿದುಬಂದಿದೆ. ಸಂಶೋಧನಾ ತಂಡದ ಡಾ. ರೇಗಿ ಗಿರ್ಗಿಸ್ ಹೇಳುವಂತೆ ಅವರ ಗಮನಿಸುವಿಕೆಯಲ್ಲಿ ತಿಳಿದು ಬಂದ ಮಹತ್ವದ ವಿಷಯವೆಂದರೆ ಶಾಲಾ ಶೂಟಿಂಗ್ ಗಳು ಇತರೆ ಸಾಮೂಹಿಕ ಶೂಟಿಂಗ್ ಗಳಿಗಿಂತ ಭಿನ್ನವಾಗಿವೆ. ಇವರು ಸ್ಕಿಜೋಫ್ರೆನಿಯಾದಂತಹ ಮಾನಸಿಕ ಅಸ್ವಸ್ಥತೆಯ ಅಧ್ಯಯನ ಹಾಗೂ ಚಿಕಿತ್ಸಾ ವಿಭಾಗದಲ್ಲಿ ಪರಿಣಿತರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.


  ಸಾಮೂಹಿಕ ಹತ್ಯೆ ತಲೆದೋರದಂತೆ ಏನು ಮಾಡಬೇಕು


  ಪ್ರಸ್ತುತ ಸಮಯದಲ್ಲಿ ಎಲ್ಲೆಡೆ ಡಿಜಿಟಲ್ ಗ್ಯಾಡ್ಜೆಟ್ ಗಳು ಸುಲಭವಾಗಿ ಲಭ್ಯವಿರುವುದರಿಂದ ಹಾಗೂ ತಂತ್ರಜ್ಞಾನವು ಸಾಕಷ್ಟು ಪ್ರಗತಿ ಹೊಂದಿರುವುದರಿಂದ ಯುವ ಸಮುದಾಯವು ಯುದ್ಧ, ಹತ್ಯೆ, ಬಂದೂಕು ಚಲಾಯಿಸುವಿಕೆಯಂತಹ ಅನುಭವಗಳನ್ನು ವಾಸ್ತವಿಕ ರೂಪದಂತೆಯೇ ಪಡೆಯುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿ ಅವರಲ್ಲಿ ಆ ಪಿಸ್ತೂಲು, ಬಂದೂಕು ಹಾರಿಸುವಂತಹ ಚಟುವಟಿಕೆಗಳ ಮೇಲೆ ಅಪಾರವಾದ ಆಸಕ್ತಿ ಬೆಳೆಯುತ್ತದೆ. ಇದನ್ನೇ ರೇಗಿ ಅವರು ಮೊದಲು ತೊಡೆದು ಹಾಕುವಂತಹ ಬಗ್ಗೆ ಸಮಗ್ರ ತಂತ್ರವನ್ನು ರೂಪಿಸಬೇಕೆಂದು ಹೇಳುತ್ತಾರೆ.


  ಸಂಶೋಧನಾ ಅಧ್ಯಯನ


  ಈ ಸಂಶೋಧನೆಯಲ್ಲಿ ರೇಗಿನ್ ಅವರ ತಂಡವು ಹಲವು ಆಯಾಮಗಳಲ್ಲಿ ವಿಸ್ತೃತವಾಗಿ ದತ್ತಾಂಶಗಳ ಅಧ್ಯಯನವನ್ನು ಮಾಡಿದೆ. ಈಗಾಗಲೇ ದಾಖಲಾಗಿರುವ ಮಾನಸಿಕ ಅಸ್ಥಿರತೆಯಿಂದ ಮಾಡಲಾದ ಹತ್ಯೆಗಳು ಹಾಗೂ ಸಾಮೂಹಿಕ ಹತ್ಯೆಗಳ ಕುರಿತಾದ ಡೇಟಾ ಸಂಗ್ರಹಿಸಿ ತಂಡವು ಅಧ್ಯಯನ ಮಾಡಿದೆ. ಅಲ್ಲದೆ ಇವೆರಡೂ ರೀತಿಯ ಹತ್ಯೆಗಳ ಮಧ್ಯೆ ಇರಬಹುದಾದ ಸಂಬಂಧದ ಬಗ್ಗೆಯೂ ವಿಶ್ಲೇಷಿಸಲಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕವಾಗಿ ದಾಖಲಾಗಿರುವ 1900 ರಿಂದ 2019ರ ವರೆಗಿನ ಜಗತ್ತಿನ ವಿವಿಧ ಭಾಗಗಳಲ್ಲಾದ ಸುಮಾರು 14,785 ಹತ್ಯೆಗಳ ವಿಶ್ಲೇಷಣೆಯನ್ನು ನಡೆಸಲಾಗಿದೆ.


  63.2% ರಷ್ಟು ಪ್ರಕರಣಗಳು ಅಮೆರಿಕದಲ್ಲಿ ನಡೆದಿವೆ


  ಇನ್ನು, ಮಾಸ್ ಸ್ಕೂಲ್ ಶೂಟಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನಾಕಾರರು ಕನಿಷ್ಠ ಶಾಲಾ ಆವರಣದಲ್ಲಿ, ಕಾಲೇಜುಗಳಲ್ಲಿ ಹಾಗೂ ವಿವಿ ಕ್ಯಾಂಪಸ್ ಗಳಲ್ಲಿ ನಡೆದಿರುವಂತಹ ಮಾಸ್ ಹತ್ಯೆಗಳನ್ನು ಬೇರಪಡಿಸಿ ಸಮಗ್ರ ಅಧ್ಯಯನ ಕೈಗೊಂಡಿದ್ದಾರೆ. ಇದರಲ್ಲಿ ನಡೆದ ಹತ್ಯೆಗಳ ಸ್ಥಳಗಳನ್ನು ಅಂದರೆ ಅಮೆರಿಕದಲ್ಲಿ ಹಾಗೂ ಅಮೆರಿಕದ ಹೊರಗೆ ಎಂಬ ವಿಧದಲ್ಲಿ ವಿಂಗಡಿಸಿ ಅಧ್ಯಯನ ಮಾಡಿದ್ದು ಅವುಗಳಲ್ಲಿ ಶಾಲಾ ವಾತವರಣದಲ್ಲಿ ನಡೆದಿದೆ ಎನ್ನಲಾದ 82 ಪ್ರಕರಣಗಳಲ್ಲಿ 47.6% ರಷ್ಟು ಫೈರ್ ಆರ್ಮ್ ಗಳನ್ನು ಒಳಗೊಂಡಿದ್ದರೆ 63.2% ರಷ್ಟು ಪ್ರಕರಣಗಳು ಅಮೆರಿಕ ಒಂದರಲ್ಲೇ ನಡೆದಿರುವುದನ್ನು ಗಮನಿಸಿದ್ದಾರೆ.
  ಕೊಲೆಗೈದ ಅಪರಾಧಿಗಳಲ್ಲಿ 66.7% ರಷ್ಟು ಶ್ವೇತವರ್ಣದವರು


  ಇದರಲ್ಲಿ ಮತ್ತೊಂದು ಆಸಕ್ತಿಕರ ವಿಷಯ ಗಮನಿಸಿದ್ದೇನೆಂದರೆ, ಹೀಗೆ ಶಾಲಾ ಆವರಣದಲ್ಲಿ ನಡೆದಂತಹ ಹತ್ಯೆ ಪ್ರಕರಣಗಳಲ್ಲಿ ಕೊಲೆಗೈದ ಅಪರಾಧಿಗಳಲ್ಲಿ 66.7% ರಷ್ಟು ಶ್ವೇತವರ್ಣದವರಾಗಿದ್ದು ಎಲ್ಲರೂ ಅಂದರೆ 100% ರಷ್ಟು ಅಪರಾಧಿಗಳು ಪುರುಷರೇ ಆಗಿದ್ದಾರೆ, ಅಲ್ಲದೆ ಬಹುತೇಕ ಪ್ರಕರಣಗಳಲ್ಲಿ ಕೊಲೆ ಮಾಡಿದ ಅಪರಾಧಿಗಳಲ್ಲಿ ಯಾವುದೇ ಮಾನಸಿಕ ಅಸ್ವಸ್ಥತೆ ಇರಲಿಲ್ಲ ಹಾಗೂ ಮಾನಸಿಕ ಅಸ್ವಸ್ಥತೆ ಉಪಸ್ಥಿತವಿದ್ದ ಕೆಲವೇ ಪ್ರಕರಣಗಳು ಶಾಲಾ ಆವರಣದಲ್ಲಿ ನಡೆದಿದ್ದು ಅವುಗಳಲ್ಲಿ ಫೈರ್ ಆರ್ಮ್ ಗಳನ್ನು ಬಳಸಲಾಗಿದೆ ಎಂಬುದು.


  ಇನ್ನು, ಮಾಸ್ ಸ್ಕೂಲ್ ಶೂಟಿಂಗ್ ಪ್ರಕರಣಗಳ ಪೈಕಿ ಸುಮಾರು ಅರ್ಧದಷ್ಟು ಪ್ರಕರಣದಲ್ಲಿ ಅಂದರೆ 45.6% ರಷ್ಟು ಪ್ರಕರಣಗಳಲ್ಲಿ ಅಂತಿಮವಾಗಿ ಕೊಲೆಗೈದವರು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.


  ತಜ್ಞರ ಅಭಿಪ್ರಾಯ


  ಇನ್ನು, ಈ ಸಂಶೋಧನೆಯ ಭಾಗವಾಗಿರುವ ಕೊಲುಂಬಿಯಾ ವಿವಿಯ ಸಿಕ್ಯಾಟ್ರಿ ವಿಭಾಗದ ಪ್ರೊಫೆಸರ್ ಆಗಿರುವ ಎಲಿಜಬೆತ್ ಡೊಲ್ಲಾರ್ಡ್ ಅವರು ಹೇಳುವಂತೆ ಈ ಒಟ್ಟಾರೆ ಪ್ರಸಂಗದಲ್ಲಿ ಮಾನಸಿಕ ಅಸ್ತಿರತೆಯೇ ಹತ್ಯೆಗೈಯಲು ಪ್ರಮುಖ ಕಾರಣ ಎಂಬುದು ದಾರಿತಪ್ಪಿಸುವಂತಹ ವಿಷಯವಾಗಿದೆ ಎಂದು ಗುರುತಿಸುತ್ತಾರೆ. ಅಲ್ಲದೆ, ಬಹುತೇಕ ಮಾಸ್ ಸ್ಕೂಲ್ ಶೂಟಿಂಗ್ ಪ್ರಕರಣಗಳಲ್ಲಿ ಕೊಲೆಗೈದವರು ತಮ್ಮನ್ನು ತಾವು ಅಂತಿಮ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆಂಬುದನ್ನು ಅರ್ತಿತುಕೊಂಡಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.


  ಸುಧಾರಿತ ಹಾಗೂ ಸಮರ್ಪಕ ರೀತಿಯಲ್ಲಿ ಕಾನೂನು ರೂಪಿಸುವುದಕ್ಕೆ ಹೆಚ್ಚಿನ ಮಾರ್ಗದರ್ಶನ


  ತಜ್ಞರು ಹೇಳುವಂತೆ ಈ ಅಧ್ಯಯನವು ಕಾನೂನು ಜಾರಿ ಮಾಡುವಂತಹ ಎಲ್ಲ ಪ್ರಾಧಿಕಾರಗಳಿಗೆ ಇನ್ನಷ್ಟು ಸುಧಾರಿತ ಹಾಗೂ ಸಮರ್ಪಕ ರೀತಿಯಲ್ಲಿ ಕಾನೂನು ರೂಪಿಸುವುದಕ್ಕೆ ಹೆಚ್ಚಿನ ಮಾರ್ಗದರ್ಶನ ನೀಡಲು ಸೂಕ್ತವಾಗಿದ್ದು ಇದರಲ್ಲಿನ ದತ್ತಾಂಶಗಳನ್ನು ಪ್ರತ್ಯೇಕ ವ್ಯಕ್ತಿಯ ಮಾನಸಿಕತೆಯನ್ನು ಅಳೆಯುವ ಅಳತೆಗೋಲನ್ನಾಗಿ ಬಳಸಲಾಗದು ಎಂದೂ ಸಹ ಹೇಳಿದ್ದಾರೆ.


  ಇದನ್ನೂ ಓದಿ: Explainer: ಅನುಪಮಾ ಗುಲಾಟಿ ಪ್ರಕರಣದ ಕರಾಳತೆ ನೆನಪಿಸಿದ ಶ್ರದ್ಧಾ ಕೊಲೆ ಕೇಸ್​​: ಪತ್ನಿಯನ್ನು 72 ತುಂಡು ಮಾಡಿದ್ದ ಪತಿ!


  ಅಂತಿಮವಾಗಿ ಇಂತಹ ಮಾಸ್ ಸ್ಕೂಲ್ ಶೂಟಿಂಗ್ ಪ್ರಕರಣಗಳಿಗೆ ಕಾರಣಗಳು ಹಲವು ಅಂಶಗಳಾಗಿದ್ದು ಅದರಲ್ಲಿ ಪುರುಷ ಲೈಂಗಿಕತೆಯೂ ಒಂದಾಗಿದೆ. ಹಾಗಾಗಿ ಈ ರೀತಿಯ ಪ್ರಕರಣಗಳಲ್ಲಿ ಮಾನಸಿಕ ಅಸ್ವಸ್ಥತೆಯೇ ಪ್ರಮುಖ ಕಾರಣ ಎನ್ನಲಾಗದು ಎಂಬ ವಿಷಯವನ್ನು ತಜ್ಞರು ಕಂಡುಕೊಂಡಿದ್ದು ಈ ವಿಷಯದಲ್ಲಿ ಇನ್ನಷ್ಟು ಸಂಶೋಧನೆಯ ಅಗತ್ಯವಿದೆ ಎಂಬ ಮಾತು ತಪ್ಪಾಗಲಿಕ್ಕಿಲ್ಲ.

  Published by:Precilla Olivia Dias
  First published: