Explainer: ವಿಲ್ ಮಾಡಿಸುವಾಗ ಈ ತಪ್ಪುಗಳನ್ನು ಮಾಡಬೇಡಿ: ಯಶಸ್ವಿ ಉಯಿಲು ಮಾಡಿಸಲು ಸರಳ ಸೂತ್ರಗಳು

ವಿಲ್ ಮಾಡಿಸುವಾಗ ಕನಿಷ್ಠ ಪಕ್ಷ ಇಬ್ಬರು ಸಾಕ್ಷಿದಾರರು ಹಾಜರಿರಬೇಕು. ವಿಲ್ ಮಾಡಿಸುವವರು ವಿಲ್‌ಗೆ ಸಹಿ ಹಾಕಿರುವುದನ್ನು ಈ ಸಾಕ್ಷಿದಾರರು ನೋಡಿರಬೇಕು. ವಿಲ್ ಮಾಡಿಸುವವರ ಸಮ್ಮುಖದಲ್ಲಿ ಸಾಕ್ಷಿಗಳು ತಮ್ಮ ಸಹಿಯನ್ನು ಹಾಕಬೇಕು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

    ಆಸ್ತಿ ವರ್ಗಾವಣೆಯಲ್ಲಿ ಅತಿಮುಖ್ಯ ಪಾತ್ರ ವಹಿಸುವ ವಿಲ್ ಒಬ್ಬ ಕಾನೂನು ಬದ್ಧ ಉತ್ತರಾಧಿಕಾರಿಗೆ ಪಿತ್ರಾರ್ಜಿತ ಆಸ್ತಿ ಕೈ ಸೇರುವಂತೆ ಮಾಡುತ್ತದೆ. ಒಬ್ಬ ವ್ಯಕ್ತಿಯ ಕಾನೂನು ಆಧಾರಿತ ಉತ್ತರಾಧಿಕಾರಿ ಯಾರು? ಅವರಿಗೆ ಆಸ್ತಿಯಲ್ಲಿ ಎಷ್ಟು ಪಾಲಿದೆ? ಹೀಗೆ ಮುಖ್ಯ ವಿವರಗಳನ್ನು ವಿಲ್ ಮಾಡುವ ಮೂಲಕ ತಿಳಿದುಕೊಳ್ಳಬಹುದಾಗಿದೆ. ಹಣಕಾಸು ಸಂಸ್ಥೆಗಳ ಎದುರು ಇಲ್ಲವೇ ಕಂದಾಯ ಅಧಿಕಾರಿಗಳ ಜೊತೆ ಉಂಟಾಗುವ ಗೊಂದಲಗಳನ್ನು ವಿಲ್ ನಿವಾರಿಸುತ್ತದೆ ಹಾಗೂ ನೈಜ ಹಕ್ಕುದಾರರು ಯಾರು ಎಂಬುದನ್ನು ಖಾತ್ರಿಪಡಿಸಲು ಸಹಕಾರಿಯಾಗಿದೆ.


    ವಿಲ್‌ನ ಪ್ರಮುಖ ಲಕ್ಷಣಗಳೇನು?


    ಪಿತಾರ್ಜಿತ ಸ್ವತ್ತುಗಳಲ್ಲಿ ವಿಲ್ ಕಾನೂನು ಪ್ರತಿರೋಧವನ್ನು ಒಡ್ಡುತ್ತದೆ. ವಿಲ್ ರಚಿಸುವ ಮೂಲಕ ಫಲಾನುಭವಿಯನ್ನು ಆರಿಸಬೇಕಾಗುತ್ತದೆ. ಉತ್ತರಾಧಿಕಾರಿಯನ್ನು ಸಮರ್ಥವಾಗಿ ಖಾತ್ರಿಪಡಿಸಬೇಕಾಗುತ್ತದೆ. ವೃತ್ತಿಪರ ಮಾರ್ಗದರ್ಶನದಲ್ಲಿ ವಿಲ್ ಅಥವಾ ಉಯಿಲು ಸಿದ್ಧಪಡಿಸುವುದು ಸರಳ ವಿಧಾನವಾಗಿದ್ದರೂ ಕೆಲವೊಂದು ಮಹತ್ವದ ಅಂಶಗಳಿಗೆ ಪ್ರಾಶಸ್ತ್ಯ ನೀಡಬೇಕು.


    ನಿರ್ವಾಹಕ


    ವಿಲ್ ಮಾಡಿಸುವ ವ್ಯಕ್ತಿ ವಿಲ್‌ನಲ್ಲಿ ನಿರ್ವಾಹಕರನ್ನು ನೇಮಿಸಿಕೊಳ್ಳಬಹುದಾಗಿದೆ. ಈ ನಿರ್ವಾಹಕರು ವಿಲ್‌ನ ನಿರ್ದೇಶನಗಳನ್ನು ಕೈಗೊಳ್ಳಲು ಬದ್ಧರಾಗಿರುತ್ತಾರೆ. ಫಲಾನುಭವಿಗಳಿಗೆ ಸ್ವತ್ತನ್ನು ವಿತರಿಸುವ ಅಧಿಕಾರ ನಿರ್ವಾಹಕರಿಗಿದೆ. ಮೃತರ ಸ್ವತ್ತನ್ನು ಸಂಗ್ರಹಿಸುವ ಹಾಗೂ ಆಸ್ತಿಯ ಕುರಿತ ಮಾಹಿತಿಗಳನ್ನು ಅರಿತುಕೊಳ್ಳುವ ಸಾಲಗಳನ್ನು ಪಾವತಿಸುವ ಅಧಿಕಾರವನ್ನು ನಿರ್ವಾಹಕರು ಹೊಂದಿರುತ್ತಾರೆ. ವಿಲ್ ಪರೀಕ್ಷಿಸಲು ನ್ಯಾಯಾಲಯದಿಂದ ಅರ್ಜಿ ಪಡೆಯುವ ಹಕ್ಕನ್ನು ಕೂಡ ನಿರ್ವಾಹಕರು ಹೊಂದಿರುತ್ತಾರೆ.


    ನಿರ್ವಾಹಕರನ್ನು ನೇಮಿಸುವ ಸಮಯದಲ್ಲಿ ವಕೀಲರನ್ನು ಹಾಗೂ ವಕೀಲರ ಸಂಸ್ಥೆಗಳು ಅಥವಾ ಕಂಪನಿಯನ್ನು ಕೂಡ ನಿರ್ವಾಹಕರಾಗಿ ಗೊತ್ತುಪಡಿಸಬಹುದಾಗಿದೆ.


    ಬೆನಿಫಿಶಿಯರಿ (ಫಲಾನುಭವಿ)


    ಬೆನಿಫಿಶಿಯರಿ ಎಂದರೆ ಆಸ್ತಿಯನ್ನು ಅನುಭವಿಸಲು ಅಥವಾ ಸ್ವತ್ತಿನ ಪ್ರಯೋಜನವನ್ನು ಪಡೆಯಲು ವಿಲ್ ಮಾಡಿಸಿದ ವ್ಯಕ್ತಿಯಿಂದ ಹೆಸರಿಸಿದವರು. ವಿಲ್ ಮಾಡಿಸಿದ ವ್ಯಕ್ತಿಯು ತನ್ನ ಆಸ್ತಿಪಾಸ್ತಿಯನ್ನು ಸಮರ್ಥ್ಯ ವ್ಯಕ್ತಿಗೆ ನೀಡುವ ಅಧಿಕಾರ ಹೊಂದಿರುತ್ತಾರೆ.


    ಸಾಕ್ಷಿಗಳು


    ವಿಲ್ ಮಾಡಿಸುವಾಗ ಕನಿಷ್ಠ ಪಕ್ಷ ಇಬ್ಬರು ಸಾಕ್ಷಿದಾರರು ಹಾಜರಿರಬೇಕು. ವಿಲ್ ಮಾಡಿಸುವವರು ವಿಲ್‌ಗೆ ಸಹಿ ಹಾಕಿರುವುದನ್ನು ಈ ಸಾಕ್ಷಿದಾರರು ನೋಡಿರಬೇಕು. ವಿಲ್ ಮಾಡಿಸುವವರ ಸಮ್ಮುಖದಲ್ಲಿ ಸಾಕ್ಷಿಗಳು ತಮ್ಮ ಸಹಿಯನ್ನು ಹಾಕಬೇಕು.


    ಇದನ್ನೂ ಓದಿ: LPG Cylinder Price Hike: ಈ ವರ್ಷ ಇಲ್ಲಿಯವರೆಗೆ ಗ್ಯಾಸ್ ದರದಲ್ಲಿ 165 ರೂ. ಏರಿಕೆ.. ಬೆಲೆ ಹೆಚ್ಚಳಕ್ಕೆ ಇದೇ ಕಾರಣ!

    ನೋಂದಣಿ


    ಭಾರತೀಯ ಕಾನೂನು ತಿಳಿಸಿರುವ ಪ್ರಕಾರ ವಿಲ್‌ನ ನೋಂದಣಿ ಕಡ್ಡಾಯವಲ್ಲ. ವಿಲ್ ಅನ್ನು ನೋಂದಾಯಿಸುವುದು ವಿಲ್ ಮಾಡಿಸುವವರ ಇಚ್ಛೆಯನ್ನು ಆಧರಿಸಿದೆ. ಆದರೂ ವಿಲ್ ಅನ್ನು ನೋಂದಾಯಿಸುವುದರಿಂದ ಹಲವಾರು ಅನುಕೂಲಗಳಿವೆ ಹಾಗಾಗಿ ವಿಲ್ ನೋಂದಣಿ ಅತ್ಯಗತ್ಯವಾದುದು. ವಿಲ್ ಅನ್ನು ನೋಂದಾಯಿಸದಿದ್ದರೆ ಇದು ವಿವಾದಗಳಿಗೆ ಕಾರಣವಾಗಬಹುದು. ವಿಲ್ ಮಾಡಿಸುವ ವ್ಯಕ್ತಿ ವಿಲ್ ನೋಂದಾಯಿಸಲು ಹೋದಾಗ ಸಾಕ್ಷಿಗಳು ಅವರ ಜೊತೆ ಇರಬೇಕಾಗುತ್ತದೆ.


    ಮರಣದ ನಂತರ ವಿಲ್ ನೋಂದಣಿ


    1908 ರ ನೋಂದಣಿ ಕಾಯ್ದೆ ಅಡಿಯಲ್ಲಿ ಈ ಅವಕಾಶವಿದ್ದು ವಿಲ್ ಮಾಡಿಸಿದವರ ಮರಣಾ ನಂತರ ಕೂಡ ವಿಲ್ ಅನ್ನು ನೋಂದಾಯಿಸಬಹುದಾಗಿದೆ. ವಿಲ್ ಮಾಡಿಸುವವರು ಇಂತಹ ವಿಲ್ ಅನ್ನು ಕಾರ್ಯಗತಗೊಳಿಸಿದಲ್ಲಿ ನಿರ್ವಾಹಕರು ಅಥವಾ ಫಲಾನುಭವಿಗಳು ರಿಜಿಸ್ಟ್ರಾರ್‌ಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಈ ಸಮಯದಲ್ಲಿ ಸಾಕ್ಷಿಗಳ ಹೇಳಿಕೆಯನ್ನು ರಿಜಿಸ್ಟ್ರಾರ್ ದಾಖಲಿಸುತ್ತಾರೆ. ಈ ದೃಢೀಕರಣದ ಕುರಿತು ತೃಪ್ತಿ ಹೊಂದಿದ ನಂತರವಷ್ಟೇ ಅಧಿಕಾರಿ ಅದನ್ನು ನೋಂದಾಯಿಸಿಕೊಳ್ಳಬಹುದಾಗಿದೆ.


    ವಿಲ್ ಮಾಡಿಸಿದ ನಂತರ ಅದನ್ನು ಸುರಕ್ಷಿತವಾದ ಸ್ಥಳದಲ್ಲಿ ಇರಿಸುವುದು ಕೂಡ ಬಹುಮುಖ್ಯವಾಗಿದೆ. ನೀವು ವಿಲ್ ಅನ್ನು ಎಲ್ಲಿ ಇರಿಸಿದ್ದೀರಿ ಎಂಬುದು ನಿರ್ವಾಹಕರಿಗೆ ತಿಳಿದಿರಲಿ. ಆಸ್ತಿ ಮೌಲ್ಯದಲ್ಲಿ ಬದಲಾವಣೆಯಾದಾಗ ವಿಲ್ ಕೂಡ ಬದಲಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ವಿಲ್ ಅನ್ನು ಕಾಲಕ್ಕೆ ತಕ್ಕ ಹಾಗೆ ಪರಿಷ್ಕರಿಸಬೇಕಾಗುತ್ತದೆ. ವಿಲ್ ಅನ್ನು ಕಾಲಕ್ಕೆ ತಕ್ಕ ಹಾಗೆ ಪರಿಷ್ಕರಿಸಬೇಕಾಗುತ್ತದೆ.

    First published: