LPG ಸಿಲಿಂಡರ್ ಒಟ್ಟು ತೂಕ, ಕಮರ್ಷಿಯಲ್ ಗ್ಯಾಸ್, ಅಡುಗೆ ಅನಿಲ, CNG ವ್ಯತ್ಯಾಸ: ಎಲ್ಲಾ ಡೀಟೈಲ್ಸ್

LPG Gas Details: ಕಮರ್ಷಿಯಲ್ ಗ್ಯಾಸ್, ಅಡುಗೆ ಅನಿಲ ಬೆಲೆಯಲ್ಲಿ ವ್ಯತ್ಯಾಸ ಎಷ್ಟು? ಸಿಎನ್​ಜಿಗೂ ಎಲ್​ಪಿಜಿಗೂ ವ್ಯತ್ಯಾಸ ಏನು? LPG ಸಿಲಿಂಡರ್ ಒಟ್ಟು ತೂಕ ಎಷ್ಟು? ಕಮರ್ಷಿಯಲ್ ಗ್ಯಾಸ್ ಬೆಲೆ ಯಾಕೆ ದುಬಾರಿ ಇತ್ಯಾದಿ ವಿವರ ಇಲ್ಲಿದೆ…

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ಹೋಟೆಲ್ ಉದ್ದಿಮೆದಾರರಿಗೆ ಖುಷಿಯ ವಿಷಯವಾಗಿ ದೇಶಾದ್ಯಂತ ಕಮರ್ಷಿಯಲ್ ಗ್ಯಾಸ್ ಬೆಲೆ (Commercial LPG Gas Price) ಇಳಿಕೆ ಆಗಿದೆ. ಪ್ರತೀ 19 ಕಿಲೋ ಎಲ್​ಪಿಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ 100 ರೂ ಆಸುಪಾಸು ದರದಷ್ಟು ಕಡಿಮೆ ಆಗಿದೆ. ಬೆಂಗಳೂರಿನಲ್ಲಿ 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಗ್ಯಾಸ್ ಬೆಲೆ ಬೆಂಗಳೂರಿನಲ್ಲಿ 2164.5 ರೂ ಇದ್ದದ್ದು 2064ಕ್ಕೆ ಇಳಿದಿದೆ. ಗೃಹ ಬಳಕೆಯ ಎಲ್​ಪಿಜಿ ಬೆಲೆಯಲ್ಲಿ ವ್ಯತ್ಯಾಸ ಆಗಿಲ್ಲ. ಡೊಮೆಸ್ಟಿಕ್ ಎಲ್​ಪಿಜಿ ಸಿಲಿಂಡರ್ (Domestic LPG Gas Cylinder) ತೂಕ 14.5 ಕಿಲೋ ಇರುತ್ತದೆ. ಇದರ ಬೆಲೆ ಬೆಂಗಳೂರಿನಲ್ಲಿ 902 ರೂ ಇದೆ.

ಕಮರ್ಷಿಯಲ್ ಮತ್ತು ಅಡುಗೆ ಅನಿಲ ಮಧ್ಯೆ ದರದಲ್ಲಿ ಎಷ್ಟಿದೆ ವ್ಯತ್ಯಾಸ (Rate Difference between Commercial and Domestic Gas) ?

19 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 2064 ರೂ ಇದೆ ಎಂದರೆ ಪ್ರತೀ ಕಿಲೋಗೆ 108.6 ರೂ ಆಗುತ್ತದೆ. ಇನ್ನು, 14.5 ಕಿಲೋ ತೂಕದ ಅಡುಗೆ ಅನಿಲ (Domestic LPG) ದರ 902 ರೂ ಎಂದರೆ ಪ್ರತೀ ಕಿಲೋಗೆ 63.56 ರೂ ಆಗುತ್ತದೆ. ಅಂದರೆ ಅಡುಗೆ ಅನಿಲಕ್ಕಿಂತ ಕಮರ್ಷಿಯಲ್ ಗ್ಯಾಸ್ ಬೆಲೆ ಶೇ. 70ರಷ್ಟು ಹೆಚ್ಚಿದೆ. ಇದು ಬಿಟ್ಟರೆ ಕಮರ್ಷಿಯಲ್ ಗ್ಯಾಸ್ ಮತ್ತು ಡೊಮೆಸ್ಟಿಕ್ ಗ್ಯಾಸ್ ಮಧ್ಯೆ ಬೇರೇನೂ ವ್ಯತ್ಯಾಸ ಇಲ್ಲ.

ಕಮರ್ಷಿಯಲ್ ಗ್ಯಾಸ್ ಬೆಲೆ ಯಾಕೆ ಹೆಚ್ಚು (Why commercial gas rate high) ?:

ಅಡುಗೆ ಅನಿಲದ ಸಿಲಿಂಡರ್​ಗಳಿಗೆ ಯಾವುದೇ ತೆರಿಗೆ ಅನ್ವಯ ಆಗುವುದಿಲ್ಲ. ಆದರೆ, ಕಮರ್ಷಿಯಲ್ ಗ್ಯಾಸ್ ಬಳಕೆದಾರರು ಮೂರು ತೆರಿಗೆಗಳನ್ನ ಪಾವತಿಸಬೇಕು. ಶೇ. 5ರಷ್ಟು ಬೇಸಿಕ್ ಕಸ್ಟಮ್ಸ್ ಡ್ಯೂಟಿ, ಶೇ. 8ರಷ್ಟು ಹೆಚ್ಚುವರಿ ಕಸ್ಟಮ್ಸ್ ಡ್ಯೂಟಿ ಮತ್ತು ಶೇ. 8ರಷ್ಟು ಕೇಂದ್ರೀಯ ಅಬಕಾರಿ ಸುಂಕ (Central Excise Duty) ಹಾಕಲಾಗುತ್ತದೆ. ಹೀಗಾಗಿ, ಸಬ್ಸಿಡಿರಹಿತ ಅಡುಗೆ ಅನಿಲಕ್ಕಿಂತ ಕಮರ್ಷಿಯಲ್ ಗ್ಯಾಸ್ ಬೆಲೆ ಶೇ. 70ರಷ್ಟು ಹೆಚ್ಚು ಇದೆ.

ಇದನ್ನೂ ಓದಿ: Aadhaar-Voter ID linking: ಆಧಾರ್ ಮತ್ತು ವೋಟರ್ ಐಡಿ ಲಿಂಕ್ ಮಾಡುವ ಪ್ರಕ್ರಿಯೆ ಇದು

ಸಿಎನ್​ಜಿಗೂ ಎಲ್​ಪಿಜಿಗೂ ಏನು ವ್ಯತ್ಯಾಸ (Difference between CNG and LPG)?:

ಆಟೊರಿಕ್ಷಾ ಮೊದಲಾದ ವಾಹನಗಳಿಗೆ ಗ್ಯಾಸ್ ಹಾಕಿ ಓಡಿಸುತ್ತಾರಲ್ಲ ಅದೂ ಹಾಗು ನಾವು ಮನೆಯಲ್ಲಿ ಬಳಸುವ ಗ್ಯಾಸ್​ಗೂ ವ್ಯತ್ಯಾಸ ಇದೆ. ವಾಹನಗಳಿಗೆ ಬಳಸುವ ಗ್ಯಾಸ್ ಸಿಎನ್​ಜಿ. ಅಂದರೆ ಅದು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG- Compressed Natural Gas). ಅಡುಗೆಗೆ ಬಳಸುವ ಗ್ಯಾಸ್ ಎಲ್​​ಪಿಜಿ (LPG – Liquified Petroleum Gas).

ಸಿಎನ್​ಜಿಯಲ್ಲಿ ಮುಖ್ಯ ಅನಿಲವಾಗಿ ಮೀಥೇನ್ ಇರುತ್ತದೆ. ಎಲ್​ಪಿಜಿಯಲ್ಲಿ ಪ್ರೊಪೇನ್ ಮತ್ತು ಬುಟೇನ್ ಗ್ಯಾಸ್​ಗಳು ಪ್ರಧಾನವಾಗಿರುತ್ತವೆ.

ಇದನ್ನೂ ಓದಿ: Explainer: ಭಾರತದ ಕ್ಷಿಪಣಿ ಸಾಮರ್ಥ್ಯವೇನು..? ಚೀನಾ ಹಾಗೂ ಪಾಕಿಸ್ತಾನ ಯಾವ ಸ್ಥಾನಗಳಲ್ಲಿವೆ ಗೊತ್ತಾ..?

ಎಲ್​ಪಿಜಿ ಸಿಲಿಂಡರ್ ತೂಕ ಹೇಗೆ (Total weight of LPG cylinder)?

ಮನೆಯಲ್ಲಿ ಬಳಸುವ ಗೃಹೋಪಯೋಗಿ ಎಲ್​ಪಿಜಿ ಗ್ಯಾಸ್ ಸಿಲಿಂಡರ್ 14.2 ಕಿಲೋ ಇರುತ್ತದೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ 19 ಕಿಲೋ ಇರುತ್ತದೆ ಎಂಬುದು ಗೊತ್ತಿರುವ ಸಂಗತಿ. ಆದರೆ, 14.2 ಕಿಲೋ ತೂಕದ ಎಲ್​ಪಿಜಿಯ ಸಿಲಿಂಡರ್ ಒಟ್ಟು ತೂಕ ಎಷ್ಟು ಇರುತ್ತದೆ ಎಂಬುದು ಪ್ರಶ್ನೆ. ಅಂದರೆ ಖಾಲಿ ಸಿಲಿಂಡರ್ ತೂಕ ಎಷ್ಟು? ಅದನ್ನ ಸಿಲಿಂಡರ್ ಮೇಲೆ ಬರೆದಿರಲಾಗಿರುತ್ತದೆ.

ಬೆಂಗಳೂರಿನಲ್ಲಿ ಲಭ್ಯ ಇರುವ ಇಂಡೇನ್ ಗ್ಯಾಸ್ ಸಿಲಿಂಡರ್​ಗಳು 16 ಕಿಲೋ ಇರುತ್ತವೆ. ಇದಕ್ಕೆ 14.2 ಕಿಕೋ ಎಲ್​ಪಿಜಿ ಭರ್ತಿಯಾಗಿದ್ದರೆ ಆ ಸಿಲಿಂಡರ್ ಒಟ್ಟಾರೆ ತೂಕ 30.2 ಕಿಲೋ ಇರುತ್ತದೆ. 19 ಕಿಲೋ ಎಲ್​ಪಿಜಿ ಕಮರ್ಷಿಯಲ್ ಸಿಲಿಂಡರ್ ಆದರೆ ಒಟ್ಟು ತೂಕ 35 ಕಿಲೋ ಇರುತ್ತದೆ. ನಿಮ್ಮಲ್ಲಿ ಅಷ್ಟು ತೂಕದ ಮೆಷೀನ್ ಇದ್ದರೆ ತುಂಬಿದ ಸಿಲಿಂಡರ್​ನ ತೂಕದ ಮೂಲಕ ವಂಚನೆಯನ್ನ ಪತ್ತೆಹಚ್ಚಬಹುದು.
Published by:Vijayasarthy SN
First published: