Bone Density: ದೀರ್ಘಾವಧಿಯ ಹಾರಾಟಗಳು ಗಗನಯಾತ್ರಿಗಳಿಗೆ ಹಾನಿಕಾರಕವಂತೆ! ಈ ಬಗ್ಗೆ ಅಧ್ಯಯನ ಏನು ಹೇಳಿದ್ದೇನು?

ಕೆಲವು ಕೆಲಸಗಳು, ಜೀವನ ಶೈಲಿಗಳು ನಮ್ಮ ಮೂಳೆ ಸಾಂದ್ರತೆಯನ್ನು ಶಾಶ್ವತವಾಗಿ ಕಳೆದುಕೊಳ್ಳುವಂತೆ ಮಾಡಿ ಬಿಡುತ್ತವೆ ಎಂಬುದರ ಬಗ್ಗೆ ಅಧ್ಯಯನವೊಂದು ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದೆ. ಹೀಗೆ ವಯಸ್ಸಿನಲ್ಲಿಯೇ ಮೂಳೆಗಳ ಸಾಂದ್ರತೆಯನ್ನು ಶಾಶ್ವತವಾಗಿ ಕಳೆದುಕೊಳ್ಳುವುದು ಗಗನಯಾತ್ರಿಗಳಂತೆ. ದೀರ್ಘಾವಧಿಯ ವಿಮಾನ ಪ್ರಯಾಣದಲ್ಲಿ ಗಗನಯಾತ್ರಿಗಳು ಮೂಳೆ ಸಾಂದ್ರತೆಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ ಎಂದು ಅಧ್ಯಯನವು ಎಚ್ಚರಿಕೆ ನೀಡಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ವಯಸ್ಸಾದಂತೆ ದೇಹದ ಮೂಳೆಯು (Bone) ಬಲ ಕಳೆದುಕೊಳ್ಳುವುದು ನೈಸರ್ಗಿಕ ವಿದ್ಯಮಾನವಾಗಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೆಲವು ಕೆಲಸಗಳು, ಜೀವನ ಶೈಲಿಗಳು (Life Style) ನಮ್ಮ ಮೂಳೆ ಸಾಂದ್ರತೆಯನ್ನು (Bone Density) ಶಾಶ್ವತವಾಗಿ ಕಳೆದುಕೊಳ್ಳುವಂತೆ ಮಾಡಿ ಬಿಡುತ್ತವೆ ಎಂಬುದರ ಬಗ್ಗೆ ಅಧ್ಯಯನವೊಂದು ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದೆ. ಹೀಗೆ ವಯಸ್ಸಿನಲ್ಲಿಯೇ ಮೂಳೆಗಳ ಸಾಂದ್ರತೆಯನ್ನು ಶಾಶ್ವತವಾಗಿ ಕಳೆದುಕೊಳ್ಳುವುದು ಗಗನಯಾತ್ರಿಗಳಂತೆ. ದೀರ್ಘಾವಧಿಯ ವಿಮಾನ ಪ್ರಯಾಣದಲ್ಲಿ ಗಗನಯಾತ್ರಿಗಳು (Astronaut) ಮೂಳೆ ಸಾಂದ್ರತೆಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ ಎಂದು ಅಧ್ಯಯನವು ಎಚ್ಚರಿಕೆ ನೀಡಿದೆ.

ಕಡಿಮೆ ದೇಹದ ಮೂಳೆಯ ಬಲ ಮತ್ತು ಸಾಂದ್ರತೆ
ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಗಳು, ಆರು ತಿಂಗಳೊಳಗೆ ಕಡಿಮೆ ಕಾರ್ಯಾಚರಣೆಗಳಲ್ಲಿ ಹಾರಾಟ ನಡೆಸಿದ ಕೆಲವು ಗಗನಯಾತ್ರಿಗಳಿಗೆ ಹೋಲಿಸಿದರೆ ದೀರ್ಘಾವಧಿಯವರೆಗೆ ಹಾರಾಟ ನಡೆಸಿದ ಗಗನಯಾತ್ರಿಗಳು ಕಡಿಮೆ ದೇಹದ ಮೂಳೆಯ ಬಲ ಮತ್ತು ಸಾಂದ್ರತೆಯನ್ನು ಹೊಂದಿದ್ದಾರೆ ಎಂದು ತೋರಿಸಿದೆ.

ಈ ಬಗ್ಗೆ ಸಂಶೋಧನೆ ಏನು ಹೇಳಿದೆ
ಅಧ್ಯಯನದ ಸಂಶೋಧನೆಗಳ ಪ್ರಕಾರ ಸಾಮಾನ್ಯವಾಗಿ ಭೂಮಿಯ ಮೇಲೆ ತೂಕವನ್ನು ಹೊಂದಿರುವ ಮೂಳೆಗಳು ಬಾಹ್ಯಾಕಾಶದಲ್ಲಿ ತೂಕವನ್ನು ಹೊಂದಿರುವುದಿಲ್ಲ. ಅಲ್ಲಿ ಗಗನಯಾತ್ರಿಗಳು ತೇಲುತ್ತಿರುತ್ತಾರೆ ಎಂದು ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾಲಯದ ತಂಡ ಹೇಳಿದೆ.

ಅಧ್ಯಯನ ನಡೆಸಿದ್ದು ಹೇಗೆ
ದೀರ್ಘಾವಧಿಯ ಬಾಹ್ಯಾಕಾಶ ಯಾನದ ನಂತರ ಮೂಳೆ ಚೇತರಿಸಿಕೊಳ್ಳುತ್ತದೆಯೇ ಎಂಬುದನ್ನು ಅರ್ಥಮಾಡಿಕೊಳ್ಳಲು ತಂಡವು 2015ರಿಂದ ಬಾಹ್ಯಾಕಾಶ ಹಾರಾಟದ ಮೊದಲು ಮತ್ತು ನಂತರ 17 ಗಗನಯಾತ್ರಿಗಳನ್ನು ಪರೀಕ್ಷೆಗೆ ಒಳಪಡಿಸಿದರು. ಇದರಲ್ಲಿ 14 ಪುರುಷ ಮತ್ತು ಮೂವರು ಮಹಿಳಾ ಗಗನಯಾತ್ರಿಳು ಇದ್ದರು. ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳುವ ಮೊದಲು, ಭೂಮಿಗೆ ಹಿಂದಿರುಗಿದ ನಂತರ ಮತ್ತು ಆರು ಮತ್ತು 12 ತಿಂಗಳ ಬಳಿಕ ಹಿಂದಿರುಗಿದ ನಂತರ ಸಂಶೋಧಕರು ಅವರ ಮಣಿಕಟ್ಟು ಮತ್ತು ಕಣಕಾಲುಗಳನ್ನು ಸ್ಕ್ಯಾನ್ ಮಾಡುವ ಮೂಲಕ ಪರೀಕ್ಷೆ ನಡೆಸಿದರು.

"ಬಾಹ್ಯಾಕಾಶ ಯಾನದ ಒಂದು ವರ್ಷದ ನಂತರ ಹೆಚ್ಚಿನ ಗಗನಯಾತ್ರಿಗಳಲ್ಲಿ ಮೂಳೆ ಸಾಂದ್ರತೆ ನಷ್ಟ ಕಾಣಿಸಿದೆ. ಶಾಶ್ವತವಾದ ಮೂಳೆ ನಷ್ಟವು ಭೂಮಿಯ ಮೇಲಿನ ಒಂದು ದಶಕದ ಮೌಲ್ಯದ ವಯಸ್ಸಿಗೆ ಸಂಬಂಧಿಸಿದ ಮೂಳೆ ನಷ್ಟದಂತೆಯೇ ಕಾಣುತ್ತಿದೆ” ಎಂದು ಅಧ್ಯಯನದ ಪ್ರಮುಖ ಲೇಖಕ, ವಾರ್ಸಿಟಿಯಲ್ಲಿ ಕಿನಿಸಿಯಾಲಜಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಲೀ ಗೇಬೆಲ್ ಹೇಳಿದ್ದಾರೆ.

ಇದನ್ನೂ ಓದಿ:  Woman Astronaut: ಗುಂಟೂರಿನಿಂದ ಗಗನದವರೆಗೆ; ಭಾರತೀಯ ಮಹಿಳೆಯ ಕಥೆಯಿದು

“ದೀರ್ಘ ಅವಧಿಯ ಬಾಹ್ಯಾಕಾಶ ಯಾನದಲ್ಲಿ ಗಗನಯಾತ್ರಿಗಳು ಮೂಳೆಯನ್ನು ಕಳೆದುಕೊಳ್ಳುತ್ತಾರೆ ಎಂದು ನಮಗೆ ತಿಳಿದಿದೆ. ಈ ಅಧ್ಯಯನದ ಹೊಸ ವಿಷಯವೆಂದರೆ, ನಾವು ಗಗನಯಾತ್ರಿಗಳ ಬಾಹ್ಯಾಕಾಶ ಪ್ರಯಾಣದ ನಂತರ ಒಂದು ವರ್ಷದವರೆಗೆ ಮೂಳೆ ಚೇತರಿಸಿಕೊಳ್ಳುತ್ತದೆಯೇ ಮತ್ತು ಹೇಗೆ ಚೇತರಿಸಿಕೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಅವರನ್ನು ಪರೀಕ್ಷೆಗೆ ಒಳಪಡಿಸಿದ್ದೆವು” ಎಂದು ಲೀ ಗೇಬೆಲ್ ಹೇಳುತ್ತಾರೆ.

"ಬಾಹ್ಯಾಕಾಶ ಹಾರಾಟದ ಸಮಯದಲ್ಲಿ, ಸೂಕ್ಷ್ಮ ಮೂಳೆ ರಚನೆಗಳು ತೆಳುವಾಗುತ್ತವೆ ಮತ್ತು ಅಂತಿಮವಾಗಿ ಕೆಲವು ಮೂಳೆ ರಾಡ್‌ಗಳು ಒಂದಕ್ಕೊಂದು ಸಂಪರ್ಕ ಕಡಿತಗೊಳ್ಳುತ್ತವೆ. ಗಗನಯಾತ್ರಿ ಭೂಮಿಗೆ ಮರಳಿದ ನಂತರ, ಉಳಿದ ಮೂಳೆ ಸಂಪರ್ಕಗಳು ದಪ್ಪವಾಗುತ್ತವೆ ಮತ್ತು ಬಲಗೊಳ್ಳಬಹುದು, ಆದರೆ ಬಾಹ್ಯಾಕಾಶದಲ್ಲಿ ಸಂಪರ್ಕ ಕಡಿತಗೊಂಡವುಗಳನ್ನು ಮರುನಿರ್ಮಾಣ ಮಾಡಲು ಸಾಧ್ಯವಿಲ್ಲ, ಆದ್ದರಿಂದ ಗಗನಯಾತ್ರಿಗಳ ಒಟ್ಟಾರೆ ಮೂಳೆ ರಚನೆಯು ಶಾಶ್ವತವಾಗಿ ಬದಲಾಗುತ್ತದೆ, " ಎಂದು ಗಾಬೆಲ್ ಹೇಳಿದರು.

ಈ ಕುರಿತು ಡಾ. ಸ್ಟೀವನ್ ಬಾಯ್ಡ್ ಹೇಳಿದ್ದೇನು 
"ಬಾಹ್ಯಾಕಾಶ ಯಾನದಿಂದ ಹಿಂತಿರುಗಿದ ನಂತರ ದೌರ್ಬಲ್ಯ ಮತ್ತು ಸಮತೋಲನದ ಕೊರತೆಯಿಂದಾಗಿ ನಡೆಯಲು ತೊಂದರೆ ಅನುಭವಿಸಿದ ಗಗನಯಾತ್ರಿಗಳನ್ನು ನಾವು ನೋಡಿದ್ದೇವೆ, ಅಧ್ಯಯನ ಭೇಟಿ ಸಂದರ್ಭದಲ್ಲಿ ಅವರು ನಮ್ಮನ್ನು ಭೇಟಿ ಮಾಡಲು ಬಂದಿದ್ದರು” ಎಂದು ವಾರ್ಸಿಟಿಯ ಮೆಕ್‌ಕೈಗ್ ಇನ್‌ಸ್ಟಿಟ್ಯೂಟ್ ಫಾರ್ ಬೋನ್ ಅಂಡ್ ಜಾಯಿಂಟ್ ಹೆಲ್ತ್ ನ ನಿರ್ದೇಶಕ ಡಾ. ಸ್ಟೀವನ್ ಬಾಯ್ಡ್ ಹೇಳಿದ್ದಾರೆ.

ಇದನ್ನೂ ಓದಿ:  GSAT-24 ಸಂವಹನ ಉಪಗ್ರಹ ಉಡಾವಣೆ ಮಾಡಿದ ಭಾರತ- ಇದರಿಂದಾಗುವ ಪರಿಣಾಮಗಳೇನು? ಇಲ್ಲಿದೆ ವಿವರ

ಕ್ಯಾಲ್ಗರಿ ವಿಶ್ವವಿದ್ಯಾನಿಲಯದ ಮಾಜಿ ಚಾನ್ಸೆಲರ್ ಮತ್ತು ಗಗನಯಾತ್ರಿ ಡಾ. ರಾಬರ್ಟ್ ಥಿರ್ಸ್ಕ್ ಹೇಳುವ ಪ್ರಕಾರ, "ನಾನು ನನ್ನ ಪ್ರಯಾಣ ಮುಗಿಸಿ ಹಿಂದಿರುಗಿದ ನಂತರ ಆಯಾಸ, ಸಣ್ಣ ತಲೆತಿರುಗುವಿಕೆ ಮತ್ತು ಅಸಮತೋಲನವು ನನಗೆ ಕಾಡಲು ಆರಂಭಿಸಿದವು. ಬಾಹ್ಯಾಕಾಶ ಹಾರಾಟದ ನಂತರ ಮೂಳೆಗಳು ಮತ್ತು ಸ್ನಾಯುಗಳು ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಆದರೆ ಲ್ಯಾಂಡಿಂಗ್ ಆದ ಒಂದು ದಿನದ ನಂತರ, ನಾನು ಮತ್ತೆ ಭೂಜೀವಿಯಾಗಿ ಹಾಯಾಗಿರುತ್ತೇನೆ." ಎಂದು ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.
Published by:Ashwini Prabhu
First published: