ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಿಯಾಸಿ ಜಿಲ್ಲೆಯ ಸಲಾಲ್-ಹೈಮಾನದಲ್ಲಿ 5.9 ಮಿಲಿಯನ್ ಟನ್ ಲಿಥಿಯಮ್ (Lithium) ನಿಕ್ಷೇಪಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಪ್ರಕಟಣೆಗಳು ವರದಿ ಮಾಡಿವೆ. ಆದರೆ ಈ ಪ್ರದೇಶದಲ್ಲಿ ಕಳೆದ ವರ್ಷದ ಆಗಸ್ಟ್‌ನಲ್ಲಿ 13 ಭೂಕಂಪಗಳು (Earthquakes) ಸಂಭವಿಸಿದ್ದು ಕಳೆದ ಜೂನ್ 6, 2021 ರಂದು, ರಿಯಾಸಿ 2.5 ತೀವ್ರತೆಯ ಕಡಿಮೆ-ತೀವ್ರತೆಯ ಭೂಕಂಪಕ್ಕೆ ಸಾಕ್ಷಿಯಾಯಿತು ಎಂಬುದು ಇಲ್ಲಿ ಗಮನಾರ್ಹವಾದ ಅಂಶವಾಗಿದೆ.
ಆವಿಷ್ಕಾರದಿಂದ ಭಾರತಕ್ಕೆ ದೊರೆಯಲಿದೆ ಆರ್ಥಿಕ ಉತ್ತೇಜನ
ಲಿಥಿಯಮ್ (ಗ್ರೀಕ್ ಲಿಥೋಸ್ ಅಥವಾ ಕಲ್ಲಿನ) ಒಂದು ಬೆಳ್ಳಿಯ-ಬಿಳಿ ಕ್ಷಾರ ಲೋಹವಾಗಿದ್ದು, ಇದು ಹಗುರವಾದ ಘನ ಅಂಶವಾಗಿದೆ ಅಂತೆಯೇ ಫೋನ್, ಲ್ಯಾಪ್‌ಟಾಪ್, ಪೇಸ್‌ಮೇಕರ್‌ಗಳು, ಸೋಲಾರ್ ಗ್ರಿಡ್ಸ್ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಶಕ್ತಿತುಂಬುವ ಬ್ಯಾಟರಿಗಳ ಮೂಲಾಧಾರ ಎಂದೆನಿಸಿದೆ.
ಇದನ್ನೂ ಓದಿ: Explained: ಕಣಿವೆ ನಾಡಿನಲ್ಲಿ ‘ಖಜಾನೆ’! ಬದಲಾಗುತ್ತಾ ಭಾರತದ ಅದೃಷ್ಟ? ಏನಿದು ಲಿಥಿಯಂ?
ಭಾರತವು ಪ್ರಸ್ತುತ ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾದಿಂದ ಲಿಥಿಯಂ ಅನ್ನು ಆಮದು ಮಾಡಿಕೊಳ್ಳುತ್ತಿದ್ದು ಈ ಆವಿಷ್ಕಾರದಿಂದ ಭಾರತಕ್ಕೆ ದೊಡ್ಡ ಉತ್ತೇಜನ ದೊರೆಯಲಿದೆ ಎಂಬುದಂತೂ ನಿಜವಾಗಿದೆ. 2030 ರ ವೇಳೆಗೆ ಎಲೆಕ್ಟ್ರಿಕ್ ವಾಹನಗಳ ವ್ಯಾಪಕ ಬಳಕೆಯನ್ನು 30% ರಷ್ಟು ವಿಸ್ತರಿಸುವ ಉದ್ದೇಶಕ್ಕೆ ಇದು ಹೆಚ್ಚಿನ ಬಲ ಒದಗಿಸಬಹುದಾಗಿದೆ.
ಆಗಾಗ್ಗೆ ಸಂಭವಿಸುತ್ತಿರುವ ಭೂಕಂಪಗಳು
ಆದರೆ ಹಿಮಾಲಯದ ಪ್ರದೇಶ ದುರ್ಬಲ ಹಾಗೂ ವಿಪತ್ತು ಪೀಡಿತ ಎಂದೆನಿಸಿದ್ದು ಇಲ್ಲಿ ನಡೆಸುವ ಗಣಿಗಾರಿಕೆ ಹಾಗೂ ಯಾವುದೇ ಅಭಿವೃದ್ಧಿ ಚಟುವಟಿಕೆ ಪರಿಸರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಪರಿಸರ ತಜ್ಞರು ಹಾಗೂ ಪರಿಸರವಾದಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಜೋಶಿಮಠದ ಕುಸಿತ, 2021 ರ ಚಮೋಲಿ ದುರಂತ ಅದೇ ರೀತಿ 2015 ರ ಜಮ್ಮು ಕಾಶ್ಮೀರ ಪ್ರವಾಹಗಳು ಇಲ್ಲಿನ ನಿವಾಸಿಗಳ ಮನದಲ್ಲಿ ಇನ್ನೂ ಹಸಿರಾಗಿದೆ.
ಪ್ರಕೃತಿಯಲ್ಲಿ ಅನ್ವೇಷಣೆ ತುಸು ಕಷ್ಟ
ತಜ್ಞರು ಲಿಥಿಯಮ್ ಭೌಗೋಳಿಕವಾಗಿ ಪತ್ತೆಯಾಗುವುದು ಅಪರೂಪ ಎಂದು ಸೂಚಿಸುತ್ತಾರೆ, ಏಕೆಂದರೆ ಇದು ಯಾವುದೇ ಸ್ಥಿರ ನ್ಯೂಕ್ಲೈಡ್‌ಗಿಂತ ಪ್ರತಿ ನ್ಯೂಕ್ಲಿಯೊನ್‌ಗೆ ಕಡಿಮೆ ಬಂಧಿಸುವ ಶಕ್ತಿಗಳಿಂದ ಪರಮಾಣುವಾಗಿ ಅಸ್ಥಿರವಾಗಿರುತ್ತದೆ.
ಇದು ಪರಮಾಣು ಪ್ರತಿಕ್ರಿಯೆಗಳಿಗೆ ಒಳ್ಳೆಯದು (1932 ರಲ್ಲಿ ಆರಂಭಿಕ ಪರಮಾಣು ಪ್ರತಿಕ್ರಿಯೆಗಳಲ್ಲಿ ಲಿಥಿಯಂ ಅನ್ನು ಇಂಧನವಾಗಿ ಬಳಸಲಾಯಿತು) ಆದರೆ ಪ್ರಕೃತಿಯಲ್ಲಿ ಇದನ್ನು ಕಂಡುಹಿಡಿಯುವುದು ತುಸು ಕಷ್ಟ ಎಂಬುದು ತಜ್ಞರ ವಾದವಾಗಿದೆ.
ಲಿಥಿಯಮ್ ಕ್ಷಾರವಾಗಿದೆ ಮತ್ತು ಗಾಳಿಯಲ್ಲಿ ಕಂಡುಬರುವಂತಹ ಅಂಶಗಳೊಂದಿಗೆ ಅದು ಪ್ರತಿಕ್ರಿಯಿಸುವ ಅಂಶಗಳೊಂದಿಗೆ ಸಂಪರ್ಕಕ್ಕೆ ಬಂದಾಗ ದಹಿಸುತ್ತದೆ. ಪ್ರಾಸಂಗಿಕವಾಗಿ, ಶುದ್ಧ ಲಿಥಿಯಮ್ ಅನ್ನು ಸುರಕ್ಷಿತವಾಗಿ ಸಾಗಿಸಲು ಅದನ್ನು ತೈಲದಲ್ಲಿ ಶೇಖರಿಸಿಡಬೇಕಾಗುತ್ತದೆ.
ಪರಿಸರಕ್ಕೆ ಹಾನಿಮಾಡುತ್ತಿರುವ ಗಣಿಗಾರಿಕೆ
ಗಣಿಗಾರಿಕೆ ಕಂಪನಿಗಳು ಪ್ರಕೃತಿಗೆ ಉತ್ತಮವಾಗಿರುವ ರೀತಿಯಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸುವುದಿಲ್ಲ ಎಂಬುದು ಪರಿಸರ ಪ್ರೇಮಿಗಳ ವಾದವಾಗಿದ್ದು ಭಾರತದಲ್ಲಿ ಅಷ್ಟೊಂದು ಕಟ್ಟುನಿಟ್ಟಾಗಿರದ ಪರಿಸರ ನಿಯಮಗಳಿಂದ ಗಣಿಗಾರಿಕೆ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ನಡೆಯುತ್ತಿದೆ.
ಜಮ್ಮು ಹಾಗೂ ಕಾಶ್ಮೀರದ ನಡುವಿನ ಹಿಮಾಲಯ ಪ್ರದೇಶವು ಪರಿಸರ-ಸೂಕ್ಷ್ಮ ಪ್ರದೇಶವಾಗಿದೆ ಮತ್ತು ಗಣಿಗಾರಿಕೆಯು ಜೀವವೈವಿಧ್ಯದ ಗಮನಾರ್ಹ ನಷ್ಟಕ್ಕೆ ಕಾರಣವಾಗಬಹುದು.
ಇನ್ನು ಹಿಮಾಲಯವು ಹಲವಾರು ನದಿಗಳ ಮೂಲ ಎಂದೆನಿಸಿದ್ದು, ಇಲ್ಲಿ ನಡೆಸುವ ಯಾವುದೇ ಗಣಿಗಾರಿಕೆ ಚಟುವಟಿಕೆ ಇಡೀ ನದಿಯ ಪರಿಸರ ವ್ಯವಸ್ಥೆಯನ್ನು ಕಲುಷಿತಗೊಳಿಸುತ್ತದೆ ಎಂಬ ಆತಂಕವೂ ವ್ಯಕ್ತವಾಗಿದೆ.
ಇದನ್ನೂ ಓದಿ: Explained: ಕೊಡೈಕೆನಾಲ್‌ನಲ್ಲಿ ಇನ್ನೂ ಇದೆ ಪಾದರಸದ ವಿಷಕಾರಿ ಎಫೆಕ್ಟ್!
ಗಣಿಗಾರಿಕೆ ಸಮಯದಲ್ಲಿ ಆದ್ಯತೆ ನೀಡಬೇಕಾದ ಅಂಶಗಳು
ಪ್ರಪಂಚದ ಹೆಚ್ಚಿನ ಲಿಥಿಯಮ್ ಬ್ರೈನ್‌ಗಳು ಚಿಲಿ, ಬೊಲಿವಿಯಾ ಮತ್ತು ಅರ್ಜೆಂಟೀನಾದ ಛೇದಕವಾದ 'ದಿ ಲಿಥಿಯಂ ಟ್ರಯಾಂಗಲ್' ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಕೇಂದ್ರೀಕೃತವಾಗಿವೆ. ಅಸ್ತಿತ್ವದಲ್ಲಿರುವ ಲಿಥಿಯಂನ 75% ಈ ಪ್ರದೇಶದಲ್ಲಿಯೇ ಇದೆ ಎಂದು ನಂಬಲಾಗಿದೆ.
ಲಿಥಿಯಮ್ ಗಣಿಗಾರಿಕೆ ಸಮಯದಲ್ಲಿ ಕೃಷಿ ಉತ್ಪಾದನೆಯ ಮೇಲೆ ಅದರ ಪರಿಣಾಮವನ್ನು ಅರಿತುಕೊಂಡು ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಜೊತೆಗೆ ನ್ಯಾಯಯುತ ಮತ್ತು ಸಂಪೂರ್ಣ ಮೌಲ್ಯಮಾಪನಗಳು ಇರಬೇಕೆಂಬುದು ಪರಿಣಿತರ ಅಭಿಮತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ