• ಹೋಂ
 • »
 • ನ್ಯೂಸ್
 • »
 • Explained
 • »
 • Karnataka Politics: ಕಮಲ ಬಿಟ್ಟು ಕಾಂಗ್ರೆಸ್​ ಕೈ ಹಿಡಿದ ಲಿಂಗಾಯತರು! ಹೇಗೆ ಡ್ಯಾಮೇಜ್ ಕಂಟ್ರೋಲ್ ಮಾಡುತ್ತೆ ಬಿಜೆಪಿ?

Karnataka Politics: ಕಮಲ ಬಿಟ್ಟು ಕಾಂಗ್ರೆಸ್​ ಕೈ ಹಿಡಿದ ಲಿಂಗಾಯತರು! ಹೇಗೆ ಡ್ಯಾಮೇಜ್ ಕಂಟ್ರೋಲ್ ಮಾಡುತ್ತೆ ಬಿಜೆಪಿ?

ಪುತ್ತೂರಿನಲ್ಲಿ ಬಿಜೆಪಿಗೆ ಬಂಡಾಯ (ಸಾಂದರ್ಭಿಕ ಚಿತ್ರ)

ಪುತ್ತೂರಿನಲ್ಲಿ ಬಿಜೆಪಿಗೆ ಬಂಡಾಯ (ಸಾಂದರ್ಭಿಕ ಚಿತ್ರ)

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಲಿಂಗಾಯತರು ದೊಡ್ಡ ಹೊಡೆತ ನೀಡಿದ್ದಾರೆ. ಭಾರತೀಯ ಜನತಾ ಪಕ್ಷ ಸೋಲಿಗೆ ಕಾರಣಗಳ ಕುರಿತು ವಿಮರ್ಷೆ ನಡೆಯುತ್ತಿದೆ.

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಕರ್ನಾಟಕ ವಿಧಾನಸಭಾ ಚುನಾವಣೆಯ ಹೀನಾಯ ಸೋಲು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಹೊಡೆತ ನೀಡಿದೆ. 2018ರಲ್ಲಿ ಸಿಕ್ಕ 104 ಸ್ಥಾನಗಳಿಗೆ ಹೋಲಿಸಿದರೆ ಈ ಬಾರಿ ಬಿಜೆಪಿ ಕೇವಲ 65 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು, ಅತ್ತ ಕಾಂಗ್ರೆಸ್ 136 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ತನ್ನ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಪ್ರಚಾರದಲ್ಲಿ ತೊಡಗಿರುವ ಬಿಜೆಪಿಗೆ, ಕರ್ನಾಟಕದ ಚುನಾವಣಾ ಫಲಿತಾಂಶದಿಂದ ಭಾರೀ ಹಿನ್ನಡೆಯಗಿದೆ. ಪಕ್ಷದ ಮೂಲಗಳ ಪ್ರಕಾರ, ಕರ್ನಾಟಕದಲ್ಲಿನ ಹೀನಾಯ ಸೋಲಿನ ಪರಾಮರ್ಶೆ ಸಂಬಂಧ ಬಿಜೆಪಿ ಶೀಘ್ರದಲ್ಲೇ ಸಭೆ ನಡೆಸಬಹುದೆನ್ನಲಾಗಿದೆ.


ಕರ್ನಾಟಕದ ಸೋಲಿನ ಕಾರಣಗಳ ಬಗ್ಗೆ ಚಿಂತನೆ ನಡೆಸಲಿದೆ ಬಿಜೆಪಿ


ಕರ್ನಾಟಕ ಬಿಜೆಪಿಯ ಹಿರಿಯ ನಾಯಕರೊಬ್ಬರು ವಿಧಾನಸಭೆ, ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಾದ ಸೋಲಿಗೆ ಪಕ್ಷವು ಕಾರಣಗಳನ್ನು ಪರಿಶೀಲಿಸುತ್ತದೆ ಮತ್ತು ಇದರೊಂದಿಗೆ ಸಾರ್ವಜನಿಕರೊಂದಿಗೆ ಏಕೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ ಎಂಬುದನ್ನೂ ವಿಶ್ಲೇಷಿಸಲಿದೆ ಎಂದು ಹೇಳಲಾಗಿದೆ.


ಹೈದರಾಬಾದ್-ಕರ್ನಾಟಕದಲ್ಲಿ ಲಿಂಗಾಯತರಿಂದ ಬಿಜೆಪಿಗೆ ಹೊಡೆತ


ಜೆಡಿಎಸ್‌ನ ಮತಗಳು ಕಾಂಗ್ರೆಸ್‌ಗೆ ಬಂದಿರುವುದು ಅಂತಹ ಅದ್ಭುತ ಗೆಲುವಿಗೆ ಪ್ರಮುಖ ಅಂಶವಾಗಿದೆ ಎಂಬುವುದು ಬಿಜರಪಿಯ ಆರಂಭಿಕ ಲೆಕ್ಕಾಚಾರವಾಗಿತ್ತು. ಆದರೆ ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಫಲಿತಾಂಶ ಪಕ್ಷಕ್ಕೆ ಅತ್ಯಂತ ಆತಂಕಕಾರಿಯಾಗಿದೆ. ಈ ಎರಡೂ ಪ್ರದೇಶಗಳು ಲಿಂಗಾಯತ ಪ್ರಾಬಲ್ಯದ ಪ್ರದೇಶವೆಂದು ಪರಿಗಣಿಸಲಾಗಿದೆ.


ಇದನ್ನೂ ಓದಿ: Karnataka DCM: ಡಿಸಿಎಂ ಹುದ್ದೆಗೆ ಸಾಂವಿಧಾನಿಕ ಮಾನ್ಯತೆ ಇಲ್ಲ, ಎಕ್ಸ್‌ಟ್ರಾ ಪವರ್ ಏನೂ ಇಲ್ಲ: ಹೀಗಂದಿದ್ಯಾರು ಗೊತ್ತಾ?


ಯಡಿಯೂರಪ್ಪ-ಬೊಮ್ಮಾಯಿಯಂತಹ ನಾಯಕರಿದ್ದರೂ ಬಿಜೆಪಿಯಿಂದ ದೂರ ಉಳಿದ ಲಿಂಗಾಯತರು


ರಾಜ್ಯದಲ್ಲಿ ಲಿಂಗಾಯತ ಪ್ರಮುಖ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಪರವಾಗಿ ನಿರಂತರವಾಗಿ ಪ್ರಚಾರ ನಡೆಸುತ್ತಿದ್ದರು. ಇದೇ ವೇಳೆ ಪಕ್ಷ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿತ್ತು. ಅಲ್ಲದೇ ಚುನಾವಣೆಯಲ್ಲಿ ಗೆಲ್ಲಿಸಿದರೆ ಅವರನ್ನೇ ಮತ್ತೆ ಮುಖ್ಯಮಂತ್ರಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೀ ಲಿಂಗಾಯತ ಮತದಾರರ ಮತ ಸಿಕ್ಕಿಲ್ಲ. ಇದು ಬಿಜೆಪಿಗೆ ಸಿಕ್ಕ ದೊಡ್ಡ ಹೊಡೆತ ಎಂದರೆ ತಪ್ಪಾಗದು.
ಬಿಜರಪಿಯಿಂದ ದೂರ ಸರಿದ ಲಿಂಗಾಯತರು ತೊರೆದಿದ್ದಾರೆ? ಡ್ಯಾಮೇಜ್ ಕಂಟ್ರೋಲ್ ಹೇಗೆ ಮಾಡುತ್ತೆ ಬಿಜೆಪಿ?

top videos


  ಬಿಜೆಪಿಗೆ ಅತ್ಯಂತ ಆತಂಕಕಾರಿ ವಿಷಯವೆಂದರೆ ಈ ಬಾರಿ ಕಾಂಗ್ರೆಸ್ ಹೆಚ್ಚಿನ ಸಂಖ್ಯೆಯ ಲಿಂಗಾಯತ ಶಾಸಕರನ್ನು ಗೆಲ್ಲಿಸಿಕೊಂಡಿದೆ. ಇದೇ ರೀತಿ ಮುಂದ್ಉವರೆದರೆ ರಾಜ್ಯದಲ್ಲಿ ಪಕ್ಷವು ಪುನಶ್ಚೇತನಗೊಳ್ಳುವುದು ತುಂಬಾ ಕಷ್ಟ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿಅದರ ಪ್ರಮುಖ ವೋಟ್ ಬ್ಯಾಂಕ್ ದೂರವಾಗುತ್ತಿದೆ. ಹೀಗರುವಾಗ ಬಿಜೆಪಿ ಈ ಹಾನಿಯನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

  First published: