• Home
 • »
 • News
 • »
 • explained
 • »
 • Explained: ವಾಯುಪಡೆಗೆ ಲಘು ಯುದ್ಧ ವಿಮಾನ ಸೇರ್ಪಡೆ: 'ಪ್ರಚಂಡ್' ವಿಶೇಷತೆ ಏನು? ಸೇನೆಗೆ ಆಗೋ ಲಾಭವೇನು?

Explained: ವಾಯುಪಡೆಗೆ ಲಘು ಯುದ್ಧ ವಿಮಾನ ಸೇರ್ಪಡೆ: 'ಪ್ರಚಂಡ್' ವಿಶೇಷತೆ ಏನು? ಸೇನೆಗೆ ಆಗೋ ಲಾಭವೇನು?

IAF LC Helicopter

IAF LC Helicopter

Light Combat Helicopter : LCH ವಿಶ್ವದ ಏಕೈಕ ದಾಳಿ ಹೆಲಿಕಾಪ್ಟರ್ ಆಗಿದ್ದು, ಭಾರತೀಯ ಸಶಸ್ತ್ರ ಪಡೆಗಳು ನಿಗದಿಪಡಿಸಿದ ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸುವ, ಶಸ್ತ್ರಾಸ್ತ್ರಗಳು ಮತ್ತು ಇಂಧನದ ಗಣನೀಯ ಹೊರೆಯೊಂದಿಗೆ 5,000 ಮೀಟರ್ ಎತ್ತರದಲ್ಲಿ ಇಳಿಯಬಹುದು ಮತ್ತು ಟೇಕ್ ಆಫ್ ಮಾಡಬಹುದು ಎಂದು ತಿಳಿಸಿದ್ದಾರೆ.

ಮುಂದೆ ಓದಿ ...
 • Share this:

  ಶತ್ರುಪಡೆಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿರುವ ಸ್ವದೇಶಿ ಲಘು ಯುದ್ಧ ಹೆಲಿಕಾಪ್ಟರ್ (ಎಲ್‌ಸಿಎಚ್) ಭಾರತೀಯ ವಾಯುಪಡೆಗೆ (Indian Air Force) ಔಪಚಾರಿಕವಾಗಿ ಸೇರ್ಪಡೆಗೊಂಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಏರ್ ಸ್ಟಾಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಮತ್ತು ಇತರ ಹಿರಿಯ ಮಿಲಿಟರಿ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ನಾಲ್ಕು ಹೆಲಿಕಾಪ್ಟರ್‌ಗಳ (Helicopter) ಪಡೆಯನ್ನು ಸೇರ್ಪಡೆಗೊಳಿಸಲಾಯಿತು. ಈ ಹೆಲಿಕಾಪ್ಟರ್‌ಗಳಿಗೆ ಪ್ರಚಂಡ್ (Prachand) ಎಂದು ಹೆಸರನ್ನಿಡಲಾಗಿದ್ದು 'ಉಗ್ರ' ಎಂಬ ಅರ್ಥವನ್ನು ಇದು ಹೊಂದಿದೆ.


  ಅದರ ತಯಾರಕರು ತಿಳಿಸಿರುವಂತೆ, LCH ವಿಶ್ವದ ಏಕೈಕ ದಾಳಿ ಹೆಲಿಕಾಪ್ಟರ್ ಆಗಿದ್ದು, ಭಾರತೀಯ ಸಶಸ್ತ್ರ ಪಡೆಗಳು ನಿಗದಿಪಡಿಸಿದ ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸುವ, ಶಸ್ತ್ರಾಸ್ತ್ರಗಳು ಮತ್ತು ಇಂಧನದ ಗಣನೀಯ ಹೊರೆಯೊಂದಿಗೆ 5,000 ಮೀಟರ್ ಎತ್ತರದಲ್ಲಿ ಇಳಿಯಬಹುದು ಮತ್ತು ಟೇಕ್ ಆಫ್ ಮಾಡಬಹುದು ಎಂದು ತಿಳಿಸಿದ್ದಾರೆ.


  ಇದನ್ನೂಓದಿ: IAF LC Helicopter:ಭಾರತೀಯ ವಾಯುಪಡೆಯ ಸ್ವದೇಶಿ ಬಲ: 'ಮೇಡ್ ಇನ್ ಇಂಡಿಯಾ' ಹೆಲಿಕಾಪ್ಟರ್‌ಗಳ ಸೇರ್ಪಡೆ!


  ಸರಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ (ಎಚ್‌ಎಎಲ್) ಅಭಿವೃದ್ಧಿ ಪಡಿಸಿರುವ ಲಘು ಯುದ್ಧ ವಿಮಾನದ ವಿಶಿಷ್ಟ ಲಕ್ಷಣಗಳು, ಕಾರ್ಯತಂತ್ರದ ಸ್ವತ್ತಾಗಿ ಅದರ ಪ್ರಾಮುಖ್ಯತೆ ಮತ್ತು ಲಘು ಯುದ್ಧ ವಿಮಾನಗಳ ಉತ್ಪಾದನೆಯ ವಿವರಗಳು ಇಲ್ಲಿದೆ.


  ಹೆಲಿಕಾಪ್ಟರ್ ಉಗಮ


  * 1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ, ಎಲ್ಲಾ ಸ್ವದೇಶಿ ಯುದ್ಧಭೂಮಿ ಸಂದರ್ಭಗಳಲ್ಲಿ ನಿಖರವಾದ ದಾಳಿಗಳನ್ನು ನಡೆಸಬಲ್ಲ ಸ್ವದೇಶಿ ಹಗುರವಾದ ಆಕ್ರಮಣಕಾರಿ ಹೆಲಿಕಾಪ್ಟರ್‌ನ ಅಗತ್ಯವನ್ನು ಮೊದಲ ಬಾರಿಗೆ ಮನಗಾಣಲಾಯಿತು.


  * ಅಂದರೆ ಯುದ್ಧದ ಎಲ್ಲಾ ಸನ್ನಿವೇಶಗಳಲ್ಲಿ ಅತ್ಯಂತ ಶಾಖಯುಕ್ತ ಮರುಭೂಮಿಗಳಲ್ಲಿ ಮತ್ತು ಅತ್ಯಂತ ತಣ್ಣನೆಯ ಎತ್ತರದ ಪ್ರದೇಶಗಳಲ್ಲಿ, ಪ್ರತಿ-ಯುದ್ಧದ ಸನ್ನಿವೇಶಗಳಲ್ಲಿ ಪೂರ್ಣ-ಪ್ರಮಾಣದ ಯುದ್ಧದ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸಬಹುದಾದ ಒಂದು ಯುದ್ಧ ವಿಮಾನದ ಅಗತ್ಯವಿತ್ತು.


  * ಭಾರತವು 3 ಟನ್‌ಗಳಷ್ಟು ತೂಕದ ಫ್ರೆಂಚ್ ಮೂಲದ ಹೆಲಿಕಾಪ್ಟರ್‌ ಹಾಗೂ ಭಾರತದಲ್ಲಿ ಎಚ್‌ಎಎಲ್ (HAL) ಮೂಲಕ ತಯಾರಿಸಲಾದ ಚೇತಕ್ ಮತ್ತು ಚೀತಾಗಳನ್ನು ಹೊಂದಿದೆ.


  * ಈ ಸಿಂಗಲ್ ಇಂಜಿನ್ ಯಂತ್ರಗಳು ಪ್ರಾಥಮಿಕವಾಗಿ ಉಪಯುಕ್ತತೆ ಹೆಲಿಕಾಪ್ಟರ್‌ಗಳಾಗಿದ್ದವು. ಭಾರತೀಯ ಪಡೆಗಳು ಚೀತಾದ ಸಶಸ್ತ್ರ ಆವೃತ್ತಿಯಾದ ಲ್ಯಾನ್ಸರ್ ಅನ್ನು ಸಹ ಬಳಸುತ್ತವೆ. ಹೆಚ್ಚುವರಿಯಾಗಿ, ಭಾರತೀಯ ವಾಯುಪಡೆಯು ಪ್ರಸ್ತುತ ರಷ್ಯಾ ಮೂಲದ Mi-17 ಮತ್ತು ಅದರ ರೂಪಾಂತರಗಳಾದ Mi-17 IV ಮತ್ತು Mi-17 V5 ನ್ನು ಬಳಸುತ್ತಿದ್ದು, ಇವುಗಳ ಗರಿಷ್ಠ ಟೇಕ್ ಆಫ್ ತೂಕ 13 ಟನ್‌ಗಳಾಗಿದ್ದು ಇವುಗಳನ್ನು 2028 ರಿಂದ ಹಂತಹಂತವಾಗಿ ತೆಗೆದುಹಾಕಲಾಗುತ್ತದೆ.


  * ಇದಕ್ಕಿಂತಲೂ ಹೆಚ್ಚು ಸುಧಾರಿತ ಹಾಗೂ ಚುರುಕಿನ ಏರ್‌ಕ್ರಾಫ್ಟ್ ಅಗತ್ಯತೆ ಸೇನೆಗೆ ಇತ್ತು. ಹಲವಾರು ಆರಂಭಿಕ ಚರ್ಚೆಗಳ ನಂತರ ಸರಕಾರವು ಅಕ್ಟೋಬರ್ 2006 ರಲ್ಲಿ LCH ಯೋಜನೆಯನ್ನು ಮಂಜೂರು ಮಾಡಿತು ಮತ್ತು ಅದನ್ನು ಅಭಿವೃದ್ಧಿಪಡಿಸಲು HAL ಗೆ ಹೊಣೆಗಾರಿಕೆ ನೀಡಲಾಯಿತು.


  * ಎಚ್‌ಎಎಲ್‌ನ ರೋಟರಿ ವಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವು ಈಗಾಗಲೇ ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್‌ಎಚ್) ಧ್ರುವ ಮತ್ತು ಅದರ ಶಸ್ತ್ರಾಸ್ತ್ರ ಆವೃತ್ತಿ ALH ರುದ್ರದಲ್ಲಿ ಕೆಲಸ ಮಾಡಿದ್ದು ಈ ಯೋಜನೆಯನ್ನು ಪ್ರಾರಂಭಿಸಿತು.


  ಇದನ್ನೂಓದಿ:  Explained: MiG-21 ಸ್ಕ್ವಾಡ್ರನ್ ಸ್ಥಗಿತ, ಭಾರತೀಯ ವಾಯುಪಡೆಯ ಈ ನಿರ್ಧಾರಕ್ಕೇನು ಕಾರಣ?


  ಲೈಟ್ ಕೊಂಬ್ಯಾಟ್ ಹೆಲಿಕಾಪ್ಟರ್ ಅಭಿವೃದ್ಧಿ


  * ಲಘು ಯುದ್ಧ ಹೆಲಿಕಾಪ್ಟರ್ ಅನ್ನು ಅವಳಿ ಎಂಜಿನ್‌ನಂತೆ ವಿನ್ಯಾಸಗೊಳಿಸಲಾಗಿದೆ. 5.8-ಟನ್ ವರ್ಗದ ಯುದ್ಧಕ್ಕಾಗಿ ಮೀಸಲಾದ ಹೆಲಿಕಾಪ್ಟರ್ ಎಂಬುದಾಗಿ ವರ್ಗೀಕರಿಸಲಾಗಿದೆ.


  * ಇದು ಪೈಲಟ್ ಮತ್ತು ಸಹ-ಪೈಲಟ್‌ಗಾಗಿ ಕಿರಿದಾದ ವಿಮಾನ ಮತ್ತು ಒಂದರ ಹಿಂದೆ ಒಂದರ ಕಾನ್ಫಿಗರೇಶನ್ ಎಂದೆನಿಸಿರುವ ಟಂಡೆಮ್ (ಏಕ ಸಾಲಿನ) ಅನ್ನು ಒಳಗೊಂಡಿದೆ.


  * ಸಹಪೈಲಟ್ ವೆಪನ್ ಸಿಸ್ಟಮ್ಸ್ ಆಪರೇಟರ್ (WSO)ಆಗಿರುತ್ತಾರೆ. LCH, ALH ನ ಹಲವು ವೈಶಿಷ್ಟ್ಯಗಳನ್ನು ಮೂಲತಃ ಪಡೆದಿದ್ದರೂ, ಇದು ಮುಖ್ಯವಾಗಿ ಏಕಸಾಲಿನ ಕಾಕ್‌ಪಿಟ್ ಕಾನ್ಫಿಗರೇಶನ್‌ನಲ್ಲಿ ಭಿನ್ನವಾಗಿದೆ. ಇದು ಇನ್ನೂ ಹಲವು ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿದ್ದು, ಇದನ್ನು ಮೀಸಲಾಗಿರುವ ದಾಳಿ ನಡೆಸುವ ಹೆಲಿಕಾಪ್ಟರ್‌ನಂತೆ ಬಳಸಬಹುದು.


  * IAF ಮತ್ತು ಸೇನೆಯಿಂದ ನಿರ್ವಹಣೆ ಮತ್ತು ಇಂಡಕ್ಷನ್ ವರೆಗೆ LCH ನ ಪ್ರಯಾಣದಲ್ಲಿ, ನಾಲ್ಕು ಮೂಲಮಾದರಿಗಳ ಮೇಲೆ ವ್ಯಾಪಕವಾದ ವೈಮಾನಿಕ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ, ಇದನ್ನು ತಂತ್ರಜ್ಞಾನ ಪ್ರದರ್ಶಕರು (TDs) ಎಂದೂ ಕರೆಯುತ್ತಾರೆ.


  * ಮೊದಲ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್ ಫೆಬ್ರವರಿ 2010 ರಲ್ಲಿ ಪೂರ್ಣಗೊಂಡಿತು ಮತ್ತು ಅದೇ ವರ್ಷ ಮಾರ್ಚ್ 29 ರಂದು ತನ್ನ ಮೊದಲ ಹಾರಾಟವನ್ನು ತೆಗೆದುಕೊಂಡಿತು.


  * TD-2 ಮೂಲಮಾದರಿಯು 2012 ರ ಸುಮಾರಿಗೆ ಪೂರ್ಣಗೊಂಡಿತು, ಹೆಚ್ಚಿನ ಎತ್ತರದಲ್ಲಿ ಶೀತ ಹವಾಮಾನ ಪ್ರಯೋಗಗಳನ್ನು ಯಶಸ್ವಿಯಾಗಿ ವಿಮಾನ ಅಂಗೀಕರಿಸಿಕೊಂಡಿತು.


  * TD-3 ಮತ್ತು TD-4 ಮೂಲಮಾದರಿಗಳು, 2014 ಮತ್ತು 2015 ರ ಸುಮಾರಿಗೆ ಪೂರ್ಣಗೊಂಡಿತು ಹಾಗೂ ಇತರ ಹಾರಾಟ ಪರೀಕ್ಷೆಯ ಅವಶ್ಯಕತೆಗಳನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು.


  * ಸಮುದ್ರ ಮಟ್ಟದಿಂದ ಸಿಯಾಚಿನ್ ಶ್ರೇಣಿಯವರೆಗಿನ ವಿವಿಧ ಎತ್ತರಗಳಲ್ಲಿ, ತೀವ್ರ ಶೀತ ಮತ್ತು ಬಿಸಿ ವಾತಾವರಣದಲ್ಲಿ ಮತ್ತು ಮರುಭೂಮಿ ಪ್ರದೇಶಗಳಲ್ಲಿ ವೈಮಾನಿಕ ಪರೀಕ್ಷೆಯನ್ನು ನಡೆಸಲಾಯಿತು ಎಂದು ಎಚ್‌ಎಎಲ್ ಅಧಿಕಾರಿಗಳು ತಿಳಿಸಿದ್ದಾರೆ.


  * ಈ ಪರೀಕ್ಷೆಗಳ ಸಮಯದಲ್ಲಿ, ಎಲೆಕ್ಟ್ರೋ-ಆಪ್ಟಿಕಲ್ ಸಿಸ್ಟಮ್, ಹೆಲ್ಮೆಟ್-ಮೌಂಟೆಡ್ ಡಿಸ್ಪ್ಲೇ ಸಿಸ್ಟಮ್, ಘನ ಸ್ಥಿತಿಯ ಡೇಟಾ ಮತ್ತು ವಿಡಿಯೋ ರೆಕಾರ್ಡರ್ ಮತ್ತು ಟಾರೆಟ್ ಗನ್, ರಾಕೆಟ್‌ಗಳು ಮತ್ತು ಏರ್-ಟು-ಏರ್ ಕ್ಷಿಪಣಿ ವ್ಯವಸ್ಥೆಗಳಂತಹ ಶಸ್ತ್ರಾಸ್ತ್ರ ವ್ಯವಸ್ಥೆಗಳ ಮಿಷನ್ ಸೆನ್ಸರ್‌ಗಳ ಏಕೀಕರಣವನ್ನು ಕೈಗೊಳ್ಳಲಾಯಿತು.


  * ಆಯಧ ದಾಳಿ ಪ್ರಯೋಗಗಳೂ ಪೂರ್ಣಗೊಂಡಿವೆ. ನಾಲ್ಕು ಮೂಲಮಾದರಿಗಳು ಒಟ್ಟಿಗೆ 1600 ಹಾರಾಟದ ಗಂಟೆಗಳ ಜೊತೆಗೆ 2,000 ಕ್ಕೂ ಹೆಚ್ಚು ಉಡ್ಡಯನಗಳನ್ನು ನಡೆಸಿವೆ.


  * ಆರಂಭಿಕ ಕಾರ್ಯಾಚರಣೆಯ ಅನುಮತಿಯು 2017 ರಲ್ಲಿ IAF (ಭಾರತೀಯ ವಾಯುಸೇನೆ) ಆವೃತ್ತಿ ಮತ್ತು 2019 ರಲ್ಲಿ ಸೇನೆ ಆವೃತ್ತಿಗೆ ಬಂದಿತು. ಆಗಸ್ಟ್ 2020 ರಲ್ಲಿ, MoD (ರಕ್ಷಣಾ ಸಚಿವಾಲಯ) ಆಮದು ನಿರ್ಬಂಧದ ಅಡಿಯಲ್ಲಿ LCH (ಲಘು ಯುದ್ಧವಿಮಾನ) ವನ್ನು ಸೇರಿಸಿತು.


  * ನವೆಂಬರ್ 2021 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು LCH ಅನ್ನು ಸಾಂಕೇತಿಕವಾಗಿ ಭಾರತೀಯ ವಾಯುಪಡೆಗೆ ಹಸ್ತಾಂತರಿಸಿ ಅದರ ಅಂತಿಮ ಸೇರ್ಪಡೆಯ ದಾರಿಯನ್ನು ಸುಗಮಗೊಳಿಸಿದರು.


  * ಈ ವರ್ಷದ ಮಾರ್ಚ್‌ನಲ್ಲಿ ಸೆಕ್ಯುರಿಟಿ ಕ್ಯಾಬಿನೆಟ್ ಕಮಿಟಿ (CCS) 15 LCH ಲಿಮಿಟೆಡ್ ಸರಣಿ ಉತ್ಪಾದನೆಯಲ್ಲಿ (LSP) ಹತ್ತು LCH ಅನ್ನು IAF ಮತ್ತು ಐದು ಸೈನ್ಯಕ್ಕೆ ಹೀಗೆ ರೂ 3,887 ಕೋಟಿ ವೆಚ್ಚದಲ್ಲಿ ರೂ 377 ಕೋಟಿ ಮೌಲ್ಯದ ಮೂಲಸೌಕರ್ಯ ಮಂಜೂರಾತಿಗಳ ಖರೀದಿಗೆ ಅನುಮೋದನೆ ನೀಡಿದೆ.


  LCH ವೈಶಿಷ್ಟ್ಯಗಳು, ಮಹತ್ವ


  1. LCH ಗರಿಷ್ಠ ಟೇಕ್ ಆಫ್ ತೂಕವು 5.8 ಟನ್‌ಗಳಾಗಿದ್ದು ಗರಿಷ್ಟ ವೇಗ ಪ್ರತಿ ಗಂಟೆಗೆ 268 ಕಿಲೋಮೀಟರ್‌ಗಳಾಗಿದೆ ಹಾಗೂ ಮೂರು ಗಂಟೆಗಳ ತಾಳಿಕೆಯ ಶಕ್ತಿ ಹಾಗೂ ಎಂಜಿನ್ ಪ್ರಕಾರವನ್ನು ಅವಲಂಬಿಸಿ ವಿಮಾನವು ನಿರ್ದಿಷ್ಟ ಆರೋಹಣದ ದರವನ್ನು ಉಳಿಸಿಕೊಳ್ಳುವ ಗರಿಷ್ಠ ಎತ್ತರವನ್ನು ಹೊಂದಿದೆ. ವಿಮಾನವು ಹಾರಬಲ್ಲ ಗರಿಷ್ಠ ಸಾಂದ್ರತೆಯ ಎತ್ತರ 6.5 ಕಿಲೋಮೀಟರ್ ಆಗಿದೆ.


  2. ಹೆಲಿಕಾಪ್ಟರ್ ರಾಡಾರ್ ಸಿಗ್ನೇಚರ್ (ರಾಡಾರ್‌ನಿಂದ ವಸ್ತುವನ್ನು ಹೇಗೆ ಕಂಡುಹಿಡಿಯಬಹುದು ಎಂಬುದರ ಅಳತೆ) ಕಡಿಮೆ ಮಾಡಲು ರಾಡಾರ್ ಹೀರಿಕೊಳ್ಳುವ ವಸ್ತುಗಳನ್ನು ಬಳಸುತ್ತದೆ. ಕ್ಯಾಬಿನ್, ಪರಮಾಣು, ಜೈವಿಕ ಮತ್ತು ರಾಸಾಯನಿಕ (NBC) ಅಪಘಾತಗಳಿಂದ ರಕ್ಷಣೆ ನೀಡುತ್ತದೆ.


  3. ಶತ್ರು ರಾಡಾರ್‌ಗಳು ಅಥವಾ ಶತ್ರು ಕ್ಷಿಪಣಿಗಳ ಅನ್ವೇಷಕಗಳಿಂದ ರಕ್ಷಿಸುವ ಪ್ರತಿಮಾಪನ ವಿತರಣಾ ವ್ಯವಸ್ಥೆಯನ್ನು ಹೆಲಿಕಾಪ್ಟರ್ ಹೊಂದಿದೆ. ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಪರಿಗಣಿಸಿದಾಗ 20 ಎಮ್‌ಎಮ್ ಟರೆಟ್ ಗನ್, 70 ಎಮ್‌ಎಮ್ ರಾಕೆಟ್‌ಗಳು ಹಾಗೂ ಏರ್-ಟು-ಏರ್ ಮಿಸೇಲ್ ಸಿಸ್ಟಮ್‌ಗಳನ್ನು (ಕ್ಷಿಪಣಿ ವ್ಯವಸ್ಥೆಗಳು) ಹೆಲಿಕಾಪ್ಟರ್‌ನಲ್ಲಿವೆ.


  4. ಎರಡು ಫ್ರೆಂಚ್ ಮೂಲದ ಶಕ್ತಿ ಎಂಜಿನ್‌ಗಳಿಂದ ಹಗುರ ಯುದ್ಧ ವಿಮಾನಗಳು ಚಾಲಿತಗೊಂಡಿದ್ದು ಇದನ್ನು ಎಚ್‌ಎಎಲ್ ತಯಾರಿಸಿದೆ. ವಿಶೇಷತೆಗಳನ್ನೊಳಗೊಂಡಿರುವ ವಿಮಾನಗಳು ಶತ್ರುಪಡೆಗಳ ಯುದ್ಧವಿಮಾನಗಳ ನಾಶ, ದಂಗೆಯನ್ನು ಎದುರಿಸುವ ಶಕ್ತಿ, ಯುದ್ಧವಿಮಾನದ ಹುಡುಕಾಟ ಹಾಗೂ ಪಾರುಗಾಣಿಕೆ, ಆ್ಯಂಟಿ – ಟ್ರ್ಯಾಕ್, ಕೌಂಟರ್ ಸರ್ಫೇಸ್ ಯುದ್ಧ ಕಾರ್ಯಾಚರಣೆಗಳನ್ನು ಹೊಂದಿದೆ.


  ಲಘು ಯುದ್ಧ ವಿಮಾನಗಳ ಅಗತ್ಯತೆ


  * ಎಚ್‌ಎಎಲ್ ಹೇಳಿರುವಂತೆ ಸೇನೆಗೆ 160 ಯುದ್ಧವಿಮಾನಗಳ ಅಗತ್ಯವಿದೆ. ಭಾರತೀಯ ವಾಯುಪಡೆಗೆ 65 ಹಾಗೂ ಭಾರತೀಯ ಸೇನೆಗೆ 95 ಯುದ್ಧವಿಮಾನಗಳು ಬೇಕಾಗಿವೆ.


  * ಮಾರ್ಚ್‌ನಲ್ಲಿ ಲಘು ಯುದ್ಧ ವಿಮಾನಗಳ ತಯಾರಿಕೆಗಾಗಿ ಒಪ್ಪಂದವನ್ನು ಮಾಡಿಕೊಂಡ ನಂತರ ಕೆಲವು ಯುದ್ಧವಿಮಾನಗಳನ್ನು ಈಗಾಗಲೇ ವಿತರಿಸಲಾಗಿದೆ ಹಾಗೂ ಉಳಿದವು ಸ್ವೀಕಾರದ ವಿವಿಧ ಹಂತಗಳಲ್ಲಿವೆ.


  * ವಿಮಾನಗಳ ಉತ್ಪಾದನಾ ಆರ್ಡರ್‌ಗೆ ಸಹಿ ಹಾಕಿದ ಎಂಟು ವರ್ಷಗಳಲ್ಲಿ ಉಳಿದ 145 ಎಲ್‌ಸಿಎಚ್‌ಗಳನ್ನು ಉತ್ಪಾದಿಸುವ ಸಲುವಾಗಿ ಎಚ್‌ಎಎಲ್ ವರ್ಷಕ್ಕೆ 30 ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಯೋಜನೆಯನ್ನು ಹಾಕಿಕೊಂಡಿದೆ.


  ವಿಮಾನಗಳ ಗರಿಷ್ಠ ದರ ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸಲು ವಿವರವಾದ ಮಾಸ್ಟರ್‌ಪ್ಲಾನ್ ಅನ್ನು ರಚಿಸಲಾಗಿದೆ ಎಂದು ಎಚ್‌ಎಎಲ್ ಹೇಳಿದೆ.


  * ರಫ್ತಿಗಾಗಿ, ಮಲೇಷ್ಯಾ, ಥೈಲ್ಯಾಂಡ್, ವಿಯೆಟ್ನಾಂ, ಅಂಗೋಲಾ, ಈಜಿಪ್ಟ್, ಇಂಡೋನೇಷ್ಯಾ, ಈಕ್ವೆಡಾರ್ ಮತ್ತು ನೈಜೀರಿಯಾದಂತಹ ದೇಶಗಳು ರಕ್ಷಣಾ ಸಚಿವಾಲಯದಿಂದ ಎಚ್‌ಎಎಲ್ (HAL) ಈಗಾಗಲೇ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

  Published by:Precilla Olivia Dias
  First published: