LGBTQ Pride Month: ನಟಿ ಭೂಮಿ ಪೆಡ್ನೇಕರ್ ಈ ಸಮುದಾಯದ ಬಗ್ಗೆ ಹೇಳಿದ್ದೇನು ನೋಡಿ?

ಜೂನ್ ಸಂಪೂರ್ಣ ತಿಂಗಳನ್ನು ಎಲ್ಜಿಬಿಟಿಐಕ್ಯೂ+ ಸಮುದಾಯದವರ 'ಪ್ರೈಡ್ ಮಂಥ್' ಎಂದು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತದೆ. ಇಂತಹ ಒಂದು ಸಮುದಾಯದ ಆಧಾರವಿರುವ ಕಥೆ ಹೊಂದಿರುವ ಚಿತ್ರ "ಬಧಾಯಿ ದೋ" ಆಗಿದ್ದು ಅದರಲ್ಲಿ ಪಾತ್ರ ನಿರ್ವಹಿಸಿರುವ ಭೂಮಿ ಪೆಡ್ನೇಕರ್ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಇಟಿ ಸುದ್ದಿ ಮಾಧ್ಯಮ ಅವರೊಂದಿಗೆ ನಡೆಸಿರುವ ಸಂದರ್ಶನದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಭೂಮಿ ಪೆಡ್ನೇಕರ್

ಭೂಮಿ ಪೆಡ್ನೇಕರ್

  • Share this:
ಜೂನ್ ಮಾಸವು ನಿಮಗೆಲ್ಲ ಗೊತ್ತಿರುವಂತೆ ಲಿಂಗ ವಿಶೇಷ ಸಮುದಾಯಗಳ ಪಾಲಿಗೆ ಒಂದು ವಿಶಿಷ್ಟ, ಸಂಭ್ರಮಾಚರಣೆಯ ಹಾಗೂ ಹೆಮ್ಮೆಯ ಮಾಸವಾಗಿದೆ. ಹಾಗಾಗಿಯೇ ಜೂನ್ ಸಂಪೂರ್ಣ ತಿಂಗಳನ್ನು ಎಲ್ಜಿಬಿಟಿಐಕ್ಯೂ+ (LGBTQ) ಸಮುದಾಯದವರ 'ಪ್ರೈಡ್ ಮಂಥ್' (Pride Month) ಎಂದು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತದೆ. ಇಂತಹ ಒಂದು ಸಮುದಾಯದ ಆಧಾರವಿರುವ ಕಥೆ ಹೊಂದಿರುವ ಚಿತ್ರ "ಬಧಾಯಿ ದೋ" ಆಗಿದ್ದು ಅದರಲ್ಲಿ ಪಾತ್ರ ನಿರ್ವಹಿಸಿರುವ ಭೂಮಿ ಪೆಡ್ನೇಕರ್ (Bhumi Pednekar) ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಇಟಿ ಸುದ್ದಿ ಮಾಧ್ಯಮ ಅವರೊಂದಿಗೆ ನಡೆಸಿರುವ ಸಂದರ್ಶನದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಸುದ್ದಿ ಮಾಧ್ಯಮ: ಏಕೆ ನಿಮಗೆ ಎಲ್ಜಿಬಿಟಿಐಕ್ಯೂ (LGBTIQ+) ಸಮುದಾಯವು ಈ 21ನೇ ಶತಮಾನದಲ್ಲೂ ಸಹ ಸಮಾಜವು ತಮ್ಮನ್ನು ಸ್ವೀಕರಿಸಬೇಕೆಂದು ಈಗಲೂ ಕೆಲಸ ಮಾಡುತ್ತಿದೆ ಎಂದೆನಿಸುತ್ತದೆ? ಈಗಾಗಲೇ ಈ ಸಮಸ್ಯೆಯನ್ನು ಪರಿಹರಿಸಲಾಗಿಲ್ಲವೆ?

ಭೂಮಿ ಪೆಡ್ನೇಕರ್: ಸಮಾಜದಲ್ಲಿ ಜನರು ಈ ಸಮುದಾಯವನ್ನು ಹೇಗೆ ಸ್ವೀಕರಿಸುವರು ಎಂಬುದರ ಮೇಲೆ ಅವಲಂಬಿತವಾಗಿದೆ. ಲಿಂಗ ಭೇದ ಎಂಬುದು ಇಂದಿಗೂ ಸಮಾಜದಲ್ಲಿ ಉಳಿದುಕೊಂಡಿದ್ದು ಜನರು ಸಾಮಾನ್ಯವಾಗಿ ಇಂತಹ ಸಮುದಾಯದವರನ್ನು ಬಿಚ್ಚಿದ ಕೈಗಳಿಂದ ಅಪ್ಪಿಕೊಂಡು ಸ್ವೀಕರಿಸಿಲ್ಲ. ನಾವು ಬದುಕುತ್ತಿರುವ ಈ ಸಮಾಜದಲ್ಲಿ ಹಲವು ನಿಯಮ, ನಿಬಂಧನೆಗಳಿದ್ದು ನಾವೆಲ್ಲರೂ ಅದರ ಅಡಿಯಲ್ಲೇ ಇಂದಿಗೂ ಬದುಕುತ್ತಿದ್ದೇವೆ.

ನಾನು ಬಧಾಯಿ ದೋ ಚಿತ್ರ ಮಾಡುವಾಗ ಈ ಬಗ್ಗೆ ಸಾಕಷ್ಟು ತಿಳಿದುಕೊಂಡೆ. ನನಗೆ ಇದು ಸಾಮಾನ್ಯ ಹಾಗೂ ಸಹಜ ಎಂದೆನಿಸುತ್ತದೆ, ಏಕೆಂದರೆ ನಾನು ಎಲ್ಜಿಬಿಟಿ ಸಮುದಾಯದ ಹಲವು ಸ್ನೇಹಿತರನ್ನು ಹೊಂದಿರುವೆ. ನೀವು ಯಾರನ್ನು ಪ್ರೀತಿಸಲು ಇಷ್ಟಪಡುತ್ತೀರೋ ಅದು ನಿಮ್ಮ ವೈಯಕ್ತಿಕ ಆಯ್ಕೆ. ಅದು ನಿಮ್ಮ ವ್ಯಕ್ತಿತ್ವವನ್ನು ವ್ಯಾಖ್ಯಾನಿಸುವುದಿಲ್ಲ. ಲಿಂಗಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಹಲವು ವ್ಯತ್ಯಾಸಗಳಿದ್ದು ನನ್ನ ಪ್ರಕಾರ ಸಮಸ್ಯೆ ಉಂಟಾಗುವುದು ಅಲ್ಲಿಂದಲೇ.

ಕಲೆಯ ಯಾವುದೇ ರೂಪವು ಸಮಾಜವನ್ನು ಪ್ರತಿಬಿಂಬಿಸುತ್ತದೆ, ಹಾಗಾಗಿ ನಮಗಿಂದು ಸಮಾಜದಲ್ಲಿ ಇದನ್ನು ಒತ್ತಿ ಹೇಳುವಂತಹ ಪ್ರಭಾವಿಗಳು ಬೇಕಾಗಿದ್ದಾರೆ. ನಾವು ಇಂದು ಎಲ್ಲ ರೀತಿಯ ಜನರನ್ನು ಸಮಾನತೆಯಿಂದಲೇ ಕಾಣಬೇಕಾದಂತಹ ಜಗತ್ತಿನ ನಿರ್ಮಾಣ ಮಾಡಬೇಕಾಗಿರುವುದು ಅವಶ್ಯಕವಾಗಿದೆ.

ಸುದ್ದಿ ಮಾಧ್ಯಮ: ಎಲ್ಜಿಬಿಟಿ ಸಮುದಾಯದ ಬಗ್ಗೆ ಚಿತ್ರಗಳನ್ನು ನಿರ್ಮಿಸಬೇಕೆಂಬುದರ ಬಗ್ಗೆ ಸದ್ಯ ಚಿತ್ರೋದ್ಯಮದ ಮನಸ್ಥಿತಿ ಹೇಗಿದೆ ಎಂದು ನಿಮಗನಿಸುತ್ತದೆ?
ಭೂಮಿ ಪೆಡ್ನೇಕರ್: ಈಗಾಗಲೇ ಬದಲಾವಣೆ ಪ್ರಾರಂಭವಾಗಿದೆ. ವ್ಯಾಪಾರದ ವಿಷಯವನ್ನು ಗಮನದಲ್ಲಿರಿಸಿಕೊಂಡು ಹೇಳುವುದಾದರೆ, ಚಿತ್ರ ನಿರ್ಮಾಪಕರು ಇಂತಹ ಲಿಂಗಾಧಾರಿತ ಅದರಲ್ಲೂ ವಿಶೇಷವಾಗಿ ಎಲ್ಜಿಬಿಟಿ ಸಮುದಾಯದವರ ಕುರಿತಾಗಿರುವ ಚಿತ್ರಗಳನ್ನು ಪ್ರೇಕ್ಷಕರು ನೋಡಲು ಹಿಂದೇಟು ಹಾಕುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ. ಆದರೆ, ಈ ಬಗ್ಗೆ ಪ್ರೇಕ್ಷಕರು ಏನು ಹೇಳಬಹುದು, ಅವರಿಗೇನು ಅನಿಸಬಹುದು ಎಂಬುದನ್ನು ನಾವು ಇಂತಹ ಸಾಕಷ್ಟು ಚಿತ್ರಗಳನ್ನು ಮಾಡಿ ಬಿಡುಗಡೆ ಮಾಡಿದಾಗಲೇ ತಿಳಿಯುತ್ತದೆ.

ಇದನ್ನೂ ಓದಿ:  Bedroom Life: ಬೆಡ್​​ರೂಂಗೆ ಬಂದು ಫೋಟೋ ಕ್ಲಿಕ್ಕಿಸೋ ಕಳ್ಳ ಫೋಟೋಗ್ರಫರ್ ಭಾರೀ ಫೇಮಸ್

ಈ ನಿಟ್ಟಿನಲ್ಲಿ ಬಧಾಯಿ ದೋ, ಚಂದೀಗಡ್ ಕರೆ ಆಶಿಕಿ, ಮಾಡರ್ನ್ ಲವ್ ಮುಂಬೈ ಗಳಂತಹ ಚಿತ್ರಗಳು ಇಂತಹ ಸಮುದಾಯದವರ ಬಗ್ಗೆ ಕಥೆಗಳನ್ನು ಹೇಳಿವೆ. ಹಾಗಾಗಿ ನಾವು ಈಗ ದೀಪಾ ಮೆಹ್ತಾ ಅವರ ಫೈರ್ ನಿಂದ ಹಿಡಿದು ಬಧಾಯಿ ದೋ ವರೆಗೆ ದೀರ್ಘವಾದ ಪ್ರಯಾಣವನ್ನೇ ಮಾಡಿದ್ದೇವೆ. ಜನರು ಇದನ್ನು ಒಪ್ಪಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅವರು, "ಇದು ನನ್ನ ವಾಸ್ತವ ಅಲ್ಲದೆ ಇದ್ದರೂ ಇದು ಇನ್ನೊಬ್ಬರ ವಾಸ್ತವ ಆಗಿದೆ, ಹಾಗಾಗಿ ನಾನು ಅದನ್ನು ಗೌರವಿಸಬೇಕು" ಎಂದು ಮನವರಿಕೆ ಮಾಡಿಕೊಳ್ಳಬೇಕು.

ಸುದ್ದಿ ಮಾಧ್ಯಮ: ಇಂದಿಗೂ ಮಾಧ್ಯಮದಂತಹ ಮುಖ್ಯ ವಾಹಿನಿಯಿಂದ ಹಿಡಿದು ಹಲವು ಉದ್ಯಮಗಳಲ್ಲಿರುವ ಇಂತಹ ಲಿಂಗ ವಿಶೇಷ ವ್ಯಕ್ತಿಗಳು ತಮ್ಮನ್ನು ತಾವು ಮುಕ್ತವಾಗಿ ಪ್ರಸ್ತುತಪಡಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ನಿಮಗೆ ಅನಿಸುತ್ತದೆಯೆ?
ಭೂಮಿ ಪೆಡ್ನೇಕರ್: ದುರದೃಷ್ಟವಶಾತ್, ಇದು ಸತ್ಯವಾಗಿದೆ. ಹೌದು, ಅಂತಹ ಜನರ ಬಗ್ಗೆ ಇಂದಿಗೂ ಸಮಾಜದಲ್ಲಿ ಸ್ವೀಕಾರದ ಭಾವನೆಗಳು ಮೂಡಿಲ್ಲದ ಕಾರಣ ಹಾಗೂ ಅವರ ಮೇಲೆ ದೌರ್ಜನ್ಯಗಳು ನಡೆಬಹುದಾದಂತಹ ಸಾಧ್ಯತೆಗಳಿರುವ ವಾತಾವರಣ ಈಗಲೂ ಇರುವ ಕಾರಣ ಆ ವರ್ಗದ ಜನರು ಮುಕ್ತವಾಗಿ ಹೊರಬರುತ್ತಿಲ್ಲ. ಈ ಸಂದರ್ಭದಲ್ಲಿ ಸಿನೆಮಾಗಳೇ ಸಮಾಜದಲ್ಲಿ ಬದಲಾವಣೆ ತರಲು ಪ್ರಮುಖ ಪಾತ್ರವಹಿಸಬಹುದಾಗಿದೆ ಹಾಗೂ ಈ ಮೂಲಕ ಸಮಾನತೆಯ ವಾತಾವರಣವನ್ನು ನಾವು ಮೂಡಿಸಬಹುದು.

ಸುದ್ದಿ ಮಾಧ್ಯಮ: ಇಂತಹ ಸಮುದಾಯದವರ ಬಗ್ಗೆ ಚಿತ್ರ ನಿರ್ಮಿಸುವಾಗ ಎದುರಾಗುವ ಸವಾಲುಗಳೇನು?
ಭೂಮಿ ಪೆಡ್ನೇಕರ್: ಇಂತಹ ಸೂಕ್ಷ್ಮ ಸಮುದಾಯದವರ ಬಗ್ಗೆ ಚಿತ್ರ ಮಾಡುವುದು ಸಾಕಷ್ಟು ಜವಾಬ್ದಾರಿಯುತ ಕೆಲಸವಾಗಿದೆ. ಇದರಲ್ಲಿ ಸಾಕಷ್ಟು ಸಂಶೋಧನೆಗಳನ್ನು ಮಾಡಬೇಕಾಗುತ್ತದೆ, ಏಕೆಂದರೆ ಆ ಒಂದು ಸಮುದಾಯವನ್ನು ಸಮಾಜದಲ್ಲಿ ಸೂಕ್ಷ್ಮವಾಗಿ ತೋರಿಸುವುದಲ್ಲದೆ ಅವರ ಸ್ವಾತಂತ್ರ್ಯ, ಭಾವನೆಗಳು ಸಹ ಎಷ್ಟು ಮಹತ್ವವಾಗಿದೆ ಎಂಬುದನ್ನು ಯಾವುದೇ ರೀತಿಯ ಏರಿಳಿತಗಳಿಲ್ಲದೆ ಉತ್ತಮವಾಗಿ ತೋರಿಸಬೇಕು.

ಇದನ್ನೂ ಓದಿ: Love Story: ನಯನತಾರಾ ಸಿನಿಮಾ ಥರಾನೇ ಇದೆ ಈ ಲವ್​ಸ್ಟೋರಿ! ಇಬ್ಬರ ಮೇಲೂ ಡೀಪ್ ಲವ್

ಸಾಧ್ಯವಾದಷ್ಟು ಅಂತಹ ಸಮುದಾಯದ ವ್ಯಕ್ತಿಗಳನ್ನೇ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು, ಇದರಿಂದ ಅವರ ಸಹಜ ಭಾವನೆಗಳನ್ನು ನೈಜವಾಗಿಯೇ ತೋರಿಸಲು ಸಾಧ್ಯವಾಗುತ್ತದೆ. ನಮ್ಮ ಬಧಾಯಿ ದೋ ಚಿತ್ರದಲ್ಲಿ ಎಲ್ಜಿಬಿಟಿ ಸಮುದಾಯದ ವಕೀಲರು ತೊಡಗಿಸಿಕೊಂಡಿದ್ದು ಚಿತ್ರದ ಸ್ಕ್ರಿಪ್ಟ್ ನಿಂದಲೂ ಕೆಲಸ ಮಾಡಿದ್ದಾರೆ.

ಸುದ್ದಿ ಮಾಧ್ಯಮ: ಬಧಾಯಿ ದೋ ನಂತರ ನಿಮಗೆ ಯಾವ ರೀತಿಯ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ಲಭಿಸಿದವು?
ಭೂಮಿ ಪೆಡ್ನೇಕರ್: ಅದು ತುಂಬಾನೇ ಅದ್ಭುತವಾಗಿತ್ತು. ಆ ಸಮುದಾಯದವರಿಂದ ನಮಗೆ ಸಾಕಷ್ಟು ಪ್ರೀತಿ ದೊರೆಯಿತು. ನನಗೆ ನೆನಪಿದೆ, ನಾವೆಲ್ಲ ಥಿಯೇಟರ್ ಗೆ ಹೋದಾಗ ಅಲ್ಲಿ ಆ ಸಮುದಾಯದ ಜನರಿದ್ದರು. ನನ್ನ ನಾಲ್ಕು ಜನ ಸ್ನೇಹಿತರು ನಮ್ಮ ಬಳಿ ಬಂದು ನಮ್ಮನ್ನುಅಪ್ಪಿಕೊಂಡು ಪ್ರೀತಿ ವ್ಯಕ್ತಪಡಿಸಿದರು ಹಾಗೂ ಧನ್ಯವಾದಗಳನ್ನು ಅರ್ಪಿಸಿದರು, ಏಕೆಂದರೆ ಅವರಿಗೆ ತಮ್ಮನ್ನು ತಾವು ಪ್ರಥಮ ಬಾರಿಗೆ ದೊಡ್ಡ ಪರದೆಯಲ್ಲಿ ನೋಡುತ್ತಿರುವುದಾಗಿ ಅವರಿಗೆ ಅನಿಸಿತ್ತು.

ಸುದ್ದಿ ಮಾಧ್ಯಮ: ಯಾವುದಾದರೂ ನೆನಪಿನ ಸ್ಮರಣಿಕೆ ಅಥವಾ ಸಂಭಾಷಣೆಗಳನ್ನು ಹಂಚಿಕೊಳ್ಳಲು ಬಯಸುವಿರಾ?
ಭೂಮಿ ಪೆಡ್ನೇಕರ್: ನಾನು ಲಖನೌನಲ್ಲಿ ಚಿತ್ರೀಕರಣ ಮಾಡುತ್ತಿದ್ದೆ. ಅಂದು ನಮ್ಮ ಚಿತ್ರ ಬಧಾಯಿ ದೋ ಬಿಡುಗಡೆಯಾದ ವಿಕೆಂಡ್ ಇತ್ತು. ಹಾಗಾಗಿ ಆ ಚಿತ್ರ ನೋಡಲು ನಮ್ಮೆಲ್ಲ ಚಿತ್ರತಂಡದೊಂದಿಗೆ ನಾನಲ್ಲಿರುವ ಚಿತ್ರಮಂದಿರಕ್ಕೆ ತೆರಳಿದ್ದೆ. ಚಿತ್ರ ನೋಡಿದ ನಂತರ ಒಬ್ಬ ಮಹಿಳೆ ನನ್ನ ಬಳಿ ಬಂದು, ನನ್ನನ್ನು ತಬ್ಬಿಕೊಂಡು ಹೇಳಿದಳು, "ನಾನು ನನ್ನ ಗೇ ಮಗನನ್ನು ಒಪ್ಪಿಕೊಂಡಿರುವೆ. ಆಗ ನನ್ನ ನೈಜವಾಗಿ ಅನಿಸಿತು ಅಲ್ಲಿಯವರೆಗೆ ಆತ ಏನೆಲ್ಲ ಅನುಭವಿಸಿರಬಹುದೆಂದು".

ಸುದ್ದಿ ಮಾಧ್ಯಮ: ನಿಮ್ಮ ಪ್ರಕಾರ ಇಂತಹ ಸಮುದಾಯದವರನ್ನು ಒಪ್ಪುವುದು ಯಾವಾಗ ಸಾಧ್ಯವಾಗಬಹುದು? ಚಿತ್ರ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಲಿದೆಯೆ?
ಭೂಮಿ ಪೆಡ್ನೇಕರ್: ಖಂಡಿತ ಒಪ್ಪಲಾಗುತ್ತದೆ. ಇದು ಈಗಷ್ಟೆ ನಿಧಾನವಾಗಿ ಪ್ರಾರಂಭವಾಗಿದೆ. ಪ್ರಯಾಣ ಇನ್ನು ದೀರ್ಘವಾಗಿದೆ. ಚಿತ್ರಗಳು ಸಮಾಜದ ಮೇಲ ಸಾಕಷ್ಟು ಪ್ರಭಾವ ಬೀರುವ ಮಾಧ್ಯಮಗಳು. ಹಾಗಾಗಿ ಇಂತಹ ಹೆಚ್ಚು ಹೆಚ್ಚು ಚಿತ್ರಗಳು ಬಂದಾಗ ಆ ಸಮುದಾಯದವರ ಬಗ್ಗೆ ಸಹಜ ಮನಸ್ಥಿತಿ ಬರಲು ಪ್ರಾರಂಭವಾಗಬಹುದು. ಹೌದು, ಈ ವಿಷಯದಲ್ಲಿ ಚಿತ್ರಗಳು ಪ್ರಮುಖ ಪಾತ್ರವಹಿಸಬಹುದಾಗಿದೆ.

ಇದನ್ನೂ ಓದಿ: Diganth: ಪ್ರಾಣವನ್ನೇ ತೆಗೆದು ಬಿಡುತ್ತೆ ಡೆಡ್ಲಿ ಸೋಮರ್ ಸಾಲ್ಟ್​​​! ಅಷ್ಟೆಲ್ಲಾ ಕಲಿತಿದ್ದ ನಟ ದಿಗಂತ್​​ ಎಡವಿದ್ದೆಲ್ಲಿ?

ಈ ಮುಂಚೆ ಚಿತ್ರಗಳಲ್ಲಿ ದಪ್ಪಗಾಗಿದ್ದ ವ್ಯಕ್ತಿಗಳನ್ನು ಅಥವಾ ಸಲಿಂಗಿಗಳನ್ನು ಕೇವಲ ಹಾಸ್ಯದ ಸನ್ನಿವೇಶಕ್ಕೆಂದು ಬಳಸಿಕೊಳ್ಳಲಾಗುತ್ತಿತ್ತು. ಆದರೆ, ದಮ್ ಲಗಾ ಕೆ ಹೈಸಾ ಚಿತ್ರ ಬಿಡುಗಡೆಯಾಗಿ ಈ ನಿಟ್ಟಿನಲ್ಲಿ ಸಮೀಕರಣವನ್ನೇ ಅದು ಬದಲಾಯಿಸಿತು.

ಸುದ್ದಿ ಮಾಧ್ಯಮ: ನಿಮ್ಮ ಕೋಸ್ಟಾರ್ ಆಯುಷ್ಮಾನ್ ಖುರಾನಾ ಹಾಗೂ ನೀವು ಚಿತ್ರೋದ್ಯಮಕ್ಕೆ ಬದಲಾವಣೆಗೆಂದು ಪ್ರವೇಶಿಸಿರುವಿರಿ. ನೀವು ಈ ಆಯ್ಕೆಗಳನ್ನು ಹೇಗೆ ಮಾಡುತ್ತೀರಿ?
ಭೂಮಿ ಪೆಡ್ನೇಕರ್: ದಮ್ ಲಗಾ ಕೆ ಹೈಸಾ ಹಾಗೂ ಟಾಯ್ಲೆಟ್:ಎಕ್ ಪ್ರೇಮ್ ಕಥಾ ಚಿತ್ರಗಳನ್ನು ಮಾಡಿದ ಮೇಲೆ ನನಗೆ ಸಿನೆಮಾ ಎಷ್ಟೊಂದು ಶಕ್ತಿಶಾಲಿಯಾಗಿದೆ ಎಂಬುದರ ಅರಿವಾಯಿತು. ನಾವು ಜನರಿಗೆ ಮನರಂಜನೆ ನೀಡಲು ಪ್ರಯತ್ನಿಸುತ್ತೇವೆ ಜೊತೆಗೆ ಅವರು ಜೀವನವನ್ನು ಯಾವ ರೀತಿ ನೋಡಾಹುದೆಂದೂ ಸಹ ಹೇಳಲು ಪ್ರಯತ್ನಿಸುತ್ತೇವೆ. ಇದರಿಂದ ಸಮಾಜದಲ್ಲಿ ಒಳಿತಿನ ಭಾವನೆಗಳು ಮೂಡಬೇಕು. ನಾನು ಇದನ್ನು ಸಮಾಜಕ್ಕೆ ಸಲ್ಲಿಸಬಹುದಾದ ನನ್ನ ಸೇವೆ ಎಂದುಕೊಂಡಿದ್ದೇನೆ.

ಸುದ್ದಿ ಮಾಧ್ಯಮ: ನಿಮ್ಮ ಭವಿಷ್ಯದ ಯೋಜನೆಗಳು
ಭೂಮಿ ಪೆಡ್ನೇಕರ್: ಅರ್ಜುನ್ ಕಪೂರ್ ಅವರ ಜೊತೆ ಲೇಡಿ ಕಿಲ್ಲರ್ ನಲ್ಲಿ ತೊಡಗಿಸಿಕೊಳ್ಳಲಿರುವೆ. ಈಗಾಗಲೇ ನಾನು ಭಕ್ಷಕ್ ಹಾಗೂ ಭೀಡ್ ಗಳನ್ನು ಪೂರ್ಣಗೊಳಿಸಿದ್ದೇನೆ. ರಕ್ಷಾ ಬಂಧನ್ ಹಾಗೂ ಗೋವಿಂದಾ ಆಲಾ ರೆ ಚಿತ್ರಗಳು ಶೀಘ್ರದಲ್ಲೇ ತೆರೆ ಮೇಲೆ ಬರಲು ಸಜ್ಜಾಗಿವೆ.
Published by:Ashwini Prabhu
First published: